Posts

Image
  ಮತಗಳ್ಳತನ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಹಿ ಸಂಗ್ರಹ ಹಾಗೂ ಪ್ರತಿಭಟನೆ.                                                                                                  ಜಯ ಧ್ವಜ ನ್ಯೂಸ್ , ರಾಯಚೂರು, ಅ.13- ಇಂದು  ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹ  ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ‌ಕುಮಾರ ಅವರು ಮತಗಳ್ಳತನ ಎನ್ನುವದು ಬಿಜೆಪಿಯ ನಿಜಬಣ್ಣವಾಗಿದೆ  ಎಂದು ಆರೋಪಿಸಿದರು. ನ್ಯಾಯಯುತ ಚುನಾವಣೆ ನಡೆದರೆ ಬಿಜೆಪಿ‌ ಪಕ್ಷ ಒಂದೂ ಚುನಾವಣೆ ಗೆಲ್ಲಲು ಸಾಧ್ಯವಾಗುವುದಿಲ್ಲ, ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತದಾರರನ್ನು ಹುಡುಕಿ ಹುಡುಕಿ ತೆಗೆದುಹಾಕುವದು ಮತ್ತು ತಮಗೆ ಬೇಕಾದ ಮತದಾರರನ್ನು ಅಕ್ರಮ ವಾಗಿ ಸೇರಿಸುವ ಮೂಲಕ ಚುನಾವಣೆ ಗೆಲ್ಲುವ ತಂತ್ರಗಾರಿಕೆ ಮಾಡುತ್ತಿರುವದು ದೇಶದ ಸಂವಿಧಾನಕ್ಕೆ ಮಾಡುವ ಅವಮ...
Image
  ಪತ್ರಕರ್ತರು ಮತ್ತು  ಪತ್ರಕರ್ತರ  ಮಕ್ಕಳಿಗಾಗಿ  ಚದುರಂಗ ತರಬೇತಿ ಕಾರ್ಯಾಗಾರ ಉದ್ಘಾಟನೆ:                          ಮಕ್ಕಳ ಬೌದ್ಧಿಕ ಶಕ್ತಿ ವೃದ್ದಿಗೆ ಚದುರಂಗ ಕಲಿಯುವುದು  ಅತ್ಯಗತ್ಯ-   ರವಿಕುಮಾರ                                                                            ಜಯ‌ ಧ್ವಜ ನ್ಯೂಸ್ , ರಾಯಚೂರು, ಅ.12 - ಮಕ್ಕಳ ಬೌದ್ಧಿಕ ಶಕ್ತಿ ವೃದ್ದಿಗೆ ಚದುರಂಗ ಕಲಿಯುವುದು ಅತ್ಯಂತ ಅಗತ್ಯವಾಗಿದೆ ಎಂದು ರೋಟರಿ ಕ್ಲಬ್ ರಾಯಚೂರಿನ ಮಾಜಿ ಅಧ್ಯಕ್ಷರಾದ ರವಿಕುಮಾರ ಗಣೇಕಲ್ ಹೇಳಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್, ರೋಟರಿ ಕ್ಲಬ್ ರಾಯಚೂರು ಹಾಗೂ ವೇದಾಂತ ಕಾಲೇಜ್ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರು ಮತ್ತು ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಚದುರಂಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ಸಮಾಜದಲ್ಲಿ ಬುದ್ದಿವಂತರೆಂಬ ಮಾತಿದ್ದು ಅವರ ಮಕ್ಕಳಿಗೆ ಬುದ್ದಿವಂತಿಕೆಗೆ ಚೆಸ್ ತರಬೇತಿ ನೀಡುತ್ತಿರು ವುದು...
Image
  ಗೊಂದಲ ನಿವಾರಿಸದಿದ್ದರೆ  ರಾಜ್ಯೋತ್ಸವದಂದು ಕಸಾಪ ಜಿಲ್ಲಾಧ್ಯಕ್ಷರ ವಿರುದ್ಧ ಪ್ರತಿಭಟನೆ - ಮೇಟಿಗೌಡ  ಜಯಧ್ವಜ ನ್ಯೂಸ್  ,ರಾಯಚೂರು,ಅ.11-  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ  ನಡೆಯುತ್ತಿರುವ ಗೊಂದಲ ಸರಿಪಡಿಸದಿದ್ದರೆ ಕನ್ನಡ ಭವನದ ಮುಂದೆ ಕನ್ನಡ ರಾಜ್ಯೋತ್ಸವದ ದಿನವಾದ ನ. 1 ರಂದು ವಿನೂತನವಾಗಿ ಜಿಲ್ಲಾಧ್ಯಕ್ಷರ ನಡೆ ವಿರುದ್ದ ಪ್ರತಿಭಟನೆ ಮಾಡಲಾಗುವುದು ಎಂದು ಬೆಳಕು ಟ್ರಸ್ಟ್ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ ಎಚ್ಚರಿಕೆ ನೀಡಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಯಚೂರು ಜಿಲ್ಲೆಯ ಕಸಾಪದಲ್ಲಿ ಗೊಂದಲ ನಡೆಯುತ್ತಿರುವ ವಿಚಾರವಾಗಿ ರಾಜ್ಯಾಧ್ಯಕ್ಷರಾದ ನಾಡೋಜ ಮಹೇಶ್ ಜೋಶಿ ಅವರ ಹತ್ತಿರ ಹೋಗಿ ಇಲ್ಲಿನ ಬೆಳವಣಿಗೆಗಳನ್ನು ತಿಳಿಸಿ ಗೊಂದಲ ನಿವಾರಣೆಗಾಗಿ ದೂರು ಸಲ್ಲಿಸಿ ಬಂದಿದ್ದು ರಾಜ್ಯಾಧ್ಯಕ್ಷರು ತಿಳಿಸಿದ ವಿಚಾರ ಕಳೆದ ಮುರುವರೇ ವರ್ಷದಿಂದ ಇದ್ದಾ ತಾಲೂಕು ಅಧ್ಯಕ್ಷರೇ ಈಗಲೂ ಅವರೇ ಅಧ್ಯಕ್ಷರು ಕಾರಣ ಅವರಿಗೆ ಆದೇಶ ನೀಡುವಾಗ ಕ ಸಾ ಪ ಬೈಲಾ ಪ್ರಕಾರ ರಾಜ್ಯಾಧ್ಯಕ್ಷರಾದ ನನ್ನ ಅನುಮೋದನೆ ಇದೆ....ಈಗ ನೂತನವಾಗಿ ಜಿಲ್ಲಾಧ್ಯಕ್ಷರ ಆದೇಶದ ಪ್ರಕಾರ,ಕಸಾಪ ಬೈಲಾ ಉಲ್ಲಂಘನೆ ಮಾಡಿ ರಾಜ್ಯಾಧ್ಯಕ್ಷರ ಅನುಮೋದನೆ ಇಲ್ಲದೆ ಜಿಲ್ಲೆಯಲ್ಲಿ ಕಸಾಪ ತಾಲೂಕು ಘಟಕಗಳನ್ನು ರಚನೆ ಮಾಡಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಇರಲಿಲ್ಲ ಎರಡು ಮೂರು ತಾಲೂಕಿನ ಅಧ್ಯಕ...
Image
  ಪತ್ರಕರ್ತರ  ಸಂಘದ ಚುನಾವಣೆಯ ಜಿಲ್ಲಾ ಚುನಾವಣಾಧಿಕಾರಿಯಾಗಿ ಮಲ್ಲಣ್ಣ ನೇಮಕ ಜಯ ಧ್ವಜ ನ್ಯೂಸ್,   ರಾಯಚೂರು ,ಅ.10- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-2028 ನೇ ಸಾಲಿನ ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ಜಿಲ್ಲಾ ಚುನಾವಣಾಧಿಕಾರಿಯಾಗಿ  ನಿವೃತ್ತ ಉಪ ತಹಸೀಲ್ದಾರ್ ಮಲ್ಲಣ್ಣ ಅವರನ್ನು ನೇಮಕ ಮಾಡಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎನ್ ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಚುನಾವಣೆ ನಿಯಮನಗಳನ್ವಯ ಮತ್ತು ಸಂಘದ ಬೈಲಾ ಪ್ರಕಾರ ಚುನಾವಣೆ ನಡೆಸಿಕೊಡಲು ಸೂಚಿಸಲಾಗಿದೆ. ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಬೈಲಾ ನಿಯಮಗಳ ಸಂಬoಧ ಹೆಚ್ಚಿನ ಮಾಹಿತಿ ಅಗತ್ಯ ಬಿದ್ದರೆ ರಾಜ್ಯ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಿ ಎಂದು ಆದೇಶ ಪತ್ರದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎನ್ ರವಿಕುಮಾರ್ ತಿಳಿಸಿದ್ದಾರೆ. ಮಲ್ಲಣ್ಣ ಅವರು ಜಿಲ್ಲಾ ಚುನಾವಣಾಧಿಕಾರಿಯಾಗಿ ಸತತ ಎರಡನೇ ಭಾರಿಗೆ ನೇಮಕವಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Image
  ರಾಯಚೂರು, ಬಳ್ಳಾರಿ, ಶಿವಮೊಗ್ಗ, ಬೀದರ್, ಬೆಳಗಾವಿಯಲ್ಲಿ ಬಾಹ್ಯ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆಗೆ ಚಿಂತನೆ- ಡಾ.ಶರಣಪ್ರಕಾಶ ಪಾಟೀಲ ಜಯ ಧ್ವಜ ನ್ಯೂಸ್  , ರಾಯಚೂರು ಅ.9 - ಕರ್ನಾಟಕದಾದ್ಯಂತ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಳ್ಳಾರಿ, ಶಿವಮೊಗ್ಗ, ರಾಯಚೂರು, ಬೀದರ್ ಮತ್ತು ಬೆಳಗಾವಿಯಲ್ಲಿ ಹೆಚ್ಚುವರಿ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರು ತಿಳಿಸಿದರು. ವಿಕಾಸ ಸೌಧದಲ್ಲಿ ಅ.09ರಂದು ನಡೆದ ಕಿದ್ವಾಯಿ ಆಸ್ಪತ್ರೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮುಂಬರುವ ತಿಂಗಳುಗಳಲ್ಲಿ ತುಮಕೂರು, ಮೈಸೂರು, ಮಂಡ್ಯ ಮತ್ತು ಕಾರವಾರದಲ್ಲಿ ಬಾಹ್ಯ ಕ್ಯಾನ್ಸರ್ ಕೇಂದ್ರಗಳನ್ನು (PCC ಗಳು) ಆರಂಭಿಸಲಾಗುತ್ತದೆ‌. ಪ್ರಸ್ತುತ 80 ಹಾಸಿಗೆಗಳನ್ನು ಹೊಂದಿರುವ ಕಲಬುರಗಿಯ ಪಿಸಿಸಿಯಲ್ಲಿ ಹೆಚ್ಚುವರಿಯಾಗಿ 210 ಹಾಸಿಗೆಗಳನ್ನು ಅಳವಡಿಸಲು ತೀರ್ಮಾನಿಸಲಾಗಿದ್ದು ಇದಕ್ಕಾಗಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. *ಹೆರಿಗೆ ರಜೆಯಲ್ಲಿರುವ ದಾದಿಯರಿಗೆ ಪರಿಹಾರ* 2021ರಿಂದಲೂ ಗುತ್ತಿಗೆ ಮತ್ತು ಹೊರ ಗುತ್ತಿಗೆ ದಾದಿಯರಿಗೆ ಪೂರ್ಣ ವೇತನ ನಿರಾಕರಿಸಲಾಗಿತ್ತು ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೂಡಲೇ ಕ್ರಮ ಕೈ...
Image
   ಜನಸಾಮಾನ್ಯರಿಗೂ ದಾಸ ದೀಕ್ಷೆ ನೀಡಿ ಭಕ್ತಿ ಬಿತ್ತಿದ ಶ್ರೀ ಗುರು ಜಗನ್ನಾಥ ದಾಸರು -ಮುರಳಿಧರ ಕುಲಕರ್ಣಿ    ಜಯ ಧ್ವಜ ನ್ಯೂಸ್ , ರಾಯಚೂರು,ಅ.9-   ಶ್ರೀ ಗುರು ಜಗನ್ನಾಥದಾಸರು ಜಾತಿ, ಮತ ,ಪಂಥ ಎನ್ನದೆ ಜನಸಾಮಾನ್ಯರಿಗೂ ಹಾಗೂ ದೀನ ದಲಿತರಿಗೆ  ಹರಿದಾಸ ದೀಕ್ಷೆ ನೀಡಿ  ಹರಿದಾಸ ಸಾಹಿತ್ಯದ ಪರಂಪರೆಯನ್ನು ಹಾಗೂ ಭಕ್ತಿ ಪಂಥವನ್ನು ಬೆಳೆಸಿದ ಶ್ರೇಷ್ಠ ಹರಿದಾಸ ರಾಗಿದ್ದಾರೆಂದು ಶೃತಿ ಸಾಹಿತ್ಯ ಮೇಳದ ಅಧ್ಯಕ್ಷರಾದ ಶ್ರೀ ಮುರಳಿಧರ ಕುಲಕರ್ಣಿ ಅವರು  ಹೇಳಿದರು.    ಅವರು  ಬುಧವಾರ ಸಂಜೆ  ರಾಯಚೂರಿನ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಜರುಗಿದ  ಶ್ರೀ ಗುರು ಜಗನ್ನಾಥ ದಾಸರ 107 ನೇ ಮಧ್ಯಾರಾದನೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ವನ್ನು ನೀಡಿದರು.       ಶ್ರೀ ಗುರು ಜಗನ್ನಾಥದಾಸರ ಆದವಾನಿಯಾ ಕೌತಾಳಮಂ  ಪ್ರದೇಶವು ದಾಸರ ಕಾರ್ಯಕ್ಷೇತ್ರವಾಗಿದ್ದು, ಇವರು ಹಲವಾರು ಸಂಕೀರ್ತನೆಗಳನ್ನು, ಉಗಾಭೋಗಗಳನ್ನು ಸುಳಾದಿಗಳನ್ನು ವಿಶೇಷವಾಗಿ  ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪರಮ ಭಕ್ತರಾದ ಇವರು ರಾಯರ ಮೇಲೆ  200ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಶ್ರೀ ವೆಂಕಟೇಶ ಸ್ತವನರಾಜ, ಲಕ್ಷ್ಮಿ ಹೃದಯ, ಪ್ರಹ್ಲಾದ ಚರಿತೆ, ಬ್ರಹ್ಮ ಸೂತ್ರ ಭಾಷ್ಯ ತತ್ವ ಪ್ರದೀಪೀಕಾ, ಶ್ರೀ ರಾಘವೇಂದ್ರ ವಿಜಯ ಮ...
Image
  ಖ್ಯಾತ ಹಿರಿಯ ವೈದ್ಯರಾದ ಡಾ.ರಾಘವೇಂದ್ರ ಕುಲಕರ್ಣಿ ರವರಿಗೆ ಸನ್ಮಾನ                                                  ಜಯಧ್ವಜ ನ್ಯೂಸ್,  ರಾಯಚೂರು, ಆ.8 -                                                                      ಖ್ಯಾತ ವೈದ್ಯರಾದ ಕುಲಕರಣಿ ಡಾಕ್ಟರ್ ಎಂದೇ ಪ್ರಸಿದ್ಧರಾದ ಶ್ರೀ ಡಾ. ರಾಘವೇಂದ್ರ ಕುಲಕರ್ಣಿ ರವರು  ರಾಯಚೂರಿಗೆ  ಬಹಳ ವರ್ಷಗಳ ನಂತರ ಆಗಮಿಸಿ   ಶ್ರೀ ಸತ್ಯನಾಥ ಕಾಲೋನಿಯ ಸತ್ಯನಾಥ ಸಭಾಭವನದಲ್ಲಿ ಸಮಸ್ತ ಬ್ರಾಹ್ಮಣ ಸಮಾಜದ ಹಿರಿಯರನ್ನು, ಮುಖಂಡರನ್ನು, ಯುವಕರನ್ನು ಭೇಟಿ ಮಾಡಿ ತಮ್ಮ ಹಿಂದಿನ ವೈದ್ಯ ವೃತ್ತಿ ಜೀವನ , ಸಮಾಜ ಸೇವೆಯನ್ನು  ತಮ್ಮ ವಿಚಾರಗಳನ್ನು ಹಂಚಿಕೊಂಡರು. ಡಾ. ರಾಘವೇಂದ್ರ ಕುಲಕರ್ಣಿ ರವರನ್ನುಇದೇ ವೇಳೆ ಹೃತ್ಪೂರ್ವಕವಾಗಿ  ಸನ್ಮಾನಿಸಲಾಯಿತು  .                  ...