Posts

Image
  ವಾರ್ಡ್ ನಂ.17ರಲ್ಲಿ ಮಿತಿ ಮೀರಿದ ಪುಂಡರ ಹಾವಳಿ ಪೊಲೀಸ್ ಇಲಾಖೆ ನಿಷ್ಕ್ರೀಯ ಆರೋಪ.                                                         ಜಯ ಧ್ವಜ ನ್ಯೂಸ್, ರಾಯಚೂರು,ಡಿ.24- ನಗರದ ವಾರ್ಡ್ ನಂ.17 ರ ಚೌಡಮ್ಮಕಟ್ಟೆ ಬಳಿಯ ಓಣಿಗಳಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು ಹಗಲು ರಾತ್ರಿಯನ್ನದೆ ದಳವಾಯಿ ಮನೆ ಕಟ್ಟೆ ಮೇಲೆ  ಪುಂಡರು ಗುಂಪು ಕುಳಿತುಕೊಂಡು ಪಕ್ಕದ ಓಣಿಯಲ್ಲಿ ಹಾವಳಿ ಹಾಕುತ್ತಿದ್ದು ಬಹುತೇಕ ಅಪ್ರಾಪ್ತ ಬಾಲಕರು ಪುಂಡತನಕ್ಕಿಳಿಯುತ್ತಿದ್ದು ಓಣಿಯಲ್ಲಿ ಪ್ರಶ್ನಿಸುವವರ ಮೇಲೆಯೆ ದಬ್ಬಾಳಿಕೆ ಮಾಡುತ್ತಾ ರಸ್ತೆಯ ಮಧ್ಯದಲ್ಲೆ ಜನ್ಮದಿನ ಪಾರ್ಟಿ ಮಾಡಿ ಕೇಕ್ ಕತ್ತರಿಸಿ ದಾರಿಯಲ್ಲಿ ಹೋಗುವ ಯುವತಿಯರಿಗೆ ,ಮಹಿಳೆಯರಿಗೆ ಚುಡಾಯಿಸುತ್ತ  ,ಕೂಗಾಡುತ್ತಾ ಅಸಭ್ಯ ವರ್ತನೆ ತೋರುತ್ತಿದ್ದಾರೆ. ಅಲ್ಲದೆ ಮನೆಯೊಂದರ ಕಿಟಕಿ ಗಾಜು ಪುಡಿಗಟ್ಟಿದ್ದಾರೆ ಈ ಹಿಂದೆಯೂ ಇದೇ ರೀತಿ ಮನೆಯ ಗಾಜು ಒಡೆದಿದ್ದರು ಅದು ಈಗ ಮರುಕಳಿಸಿದ್ದು ಪೊಲೀಸ್ ಇಲಾಖೆಯ ನಿಷ್ಕ್ರೀಯತಯೇ ಇದಕ್ಕೆಲ್ಲ ಕಾರಣವೆಂಬುದು ನಿವಾಸಿಗಳ ಆರೋಪವಾಗಿದೆ ಮಧ್ಯಾಹ್ನ, ಸಾಯಿಂಕಾಲ ಮತ್ತು ರಾತ್ರಿ ಪೊಲೀಸರು ಗಸ್ತು ತಿರುಗಿದರೆ ಇದಕ್ಕೆ ಕಡಿವಾಣ ಹಾಕಬಹುದಾಗಿದೆ ಇತ್ತೀಚೆಗೆ ಅನೇಕ ಪ...
Image
ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮಂತ್ರಾಲಯಕ್ಕೆ ಭೇಟಿ .                                                                                                              ಜಯ ಧ್ವಜ ನ್ಯೂಸ್ ರಾಯಚೂರು, ಡಿ.24- ಕಾಂತಾರ ಖ್ಯಾತಿಯ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಮಂತ್ರಾಲಯಕ್ಕಾಗಮಿಸಿ ರಾಯರ ಮೂಲ ಬೃಂದಾವನ ದರ್ಶನ ಪಡೆದುಕೊಂಡು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ಫಲ ಮಂತ್ರಾಕ್ಷತೆ, ರಾಯರ ಸ್ಮರಣಿಕೆ ,ಶೇಷವಸ್ತ್ರ ಆಶೀರ್ವಾದ ಪಡೆದುಕೊಂಡರು.
Image
  ನಾಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೂತನ ಜಿಲ್ಲಾ ಮಟ್ಟದ ಪತ್ರಕರ್ತರ ಸಂಘದ ಪದಗ್ರಹಣ ಸಮಾರಂಭ :      ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಪ್ರ.ಕಾರ್ಯದರ್ಶಿ ಲೋಕೇಶ ಭಾಗಿ. ಜಯ ಧ್ವಜ ನ್ಯೂಸ್ , ರಾಯಚೂರು ,ಡಿ.24- ಕರ್ನಾಟಕ ಕಾರ್ಯನಿರತ ಪರ್ತ್ರಕರ್ತರ ಸಂಘದ ೨೦೨೫-೨೦೨೮ನೇ ಸಾಲಿನ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನಗರದ ಕನ್ನಡ ಭವನದಲ್ಲಿ ಡಿ.25ರ ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ ಜಿಲ್ಲಾ ಮತ್ತು ತಾಲೂಕು ಘಟಕಗಳ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧನೆ ಮಾಡುವರು. ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿ, ನಿಕಟಪೂರ್ವ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ ಸೇರಿದಂತೆ ಇತರರು ಪಾಲ್ಗೊಳ್ಳುವರು. ಜಿಲ್ಲಾಧ್ಯಕ್ಷ ಆರ್.ಗುರುನಾಥ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದ ಬಳಿಕ ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ರಾಯಚೂರಿನಲ್ಲಿ ಜರುಗಲಿರುವ ಪತ್ರಕರ್ತರ ರಾಜ್ಯ ಸಮ್ಮೇಳನದ ಕುರಿತು ಪೂರ್ವಭಾವಿ ಸಭೆ ಜರುಗಲಿದೆ. ಸಂಘದ ಎಲ್ಲ ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ಜಿಲ್ಲಾ ಪ್ರಧಾನ ಕ...
Image
  ಡಿ.28 ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ :      ರಘುನಾಥ ರೆಡ್ಡಿ ಮನ್ಸಲಾಪೂರುರವರಿಗೆ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿ - ವಿಜಯ್.                                                                                                                                      ಜಯ ಧ್ವಜ ನ್ಯೂಸ್ , ರಾಯಚೂರು , ಡಿ.24- ರಾಯಚೂರು ರಿಪೋರ್ಟರ್ಸ್‌ ಗಿಲ್ಡ್  , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಯಚೂರು  ಕರ್ನಾಟಕ ಸರಕಾರ ಹಾಗೂ ಜಿಲ್ಲಾ ಮತ್ತು ಪ್ರಾಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ರಾಯಚೂರು ಜಿಲ್ಲಾಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಡಿ.28 ರಂದು ಬೆಳಿಗ್ಗೆ 11ಕ್ಕೆ ಪತ್ರಿಕಾ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಿಕೊಳ್ಳಲಾಗಿದೆ ಎಂದು ರಾ...
Image
  ಡಿ.28 ರಂದು ಯರಗೇರಾ ಹಜರತ್ ಬಡೇಸಾಹೇಬ್ 127ನೇ ವರ್ಷದ ಉರುಸ್.                                                                          ಜಯಧ್ವಜ ನ್ಯೂಸ್, ರಾಯಚೂರು, ಡಿ.23- ತಾಲೂಕಿನ ಯರಗೇರಾದಲ್ಲಿ ಡಿ.28 ಹಜರತ್ ಬಡೆಸಾಹೇಬ್ ಉರುಸ್  ಹಮ್ಮಿಕೊಳ್ಳಲಾಗಿದೆ ಎಂದು ದರ್ಗಾ ಕಮಿಟಿ ಪ್ರಧಾನ ಕಾರ್ಯದರ್ಶಿ ಡಾ.ನಿಜಾಮುದ್ದೀನ್ ಪಟೇಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಸರ್ವ ಧರ್ಮಗಳ ಸಮನ್ವಯದ ಸಂಕೇತವಾದ ಉರುಸ್ ಅಂಗವಾಗಿ ಡಿ.27 ರಂದು ಸಂದಲ್ ಷರೀಫ್, ಡಿ.28 ರಂದು ಉರುಸ್ ಷರೀಫ್ ಹಾಗೂ 29ರಂದು ಜಿಯಾರತ್ ನಡೆಯಲಿದ್ದು ರಾಜ್ಯ ಮತ್ತು ನೆರೆಯ ರಾಜ್ಯಗಳಿಂದಲೂ ಸಹಸ್ರಾರು ಸಂಖ್ಯೆಯ ಜನರು ಭಾಗವಹಿಸಲಿದ್ದಾರೆ ಗ್ರಾ.ಪಂ, ಪೊಲೀಸ್ ಇಲಾಖೆ ಹಾಗೂ ಜೆಸ್ಕಾಂ ಸಕಲ ಸಿದ್ಧತೆ ಮಾಡಿಕೊಂಡಿದ್ದು ವಿದ್ಯುತ್ ವ್ಯತ್ಯಯವಾಗದಂತೆ  ಕ್ರಮ ವಹಿಸಲಿದೆ ಎಂದರು. ಕಳೆದ ಬಾರಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು ಸುಮಾರು 31 ಜನರು ರಕ್ತದಾನಗೈದಿದ್ದರು ಎಂದು ಹೇಳಿದ ಅವರು ಯರಗೇರಿ ಪ್ರೌಡಶಾಲೆಯ ಅತಿಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ ದರ್ಗಾ ಕಮಿಟಿ 11 ಸಾವಿರ ರೂ. ಬಹುಮಾ...
Image
  ಜಿಲ್ಲಾ ಮಟ್ಟದ  ಪೆಂಕಾಕ್ ಪಂದ್ಯಾವಳಿಗೆ ಚಾಲನೆ:  ಜಿಲ್ಲಾ ಪೆಂಕಾಕ್ ಸಂಸ್ಥೆಯ ಅಧ್ಯಕ್ಷೆ ಮಾಸ್ಟರ್ ಲಕ್ಷ್ಮೀ ನೇತೃತ್ವ  ಜಯ ಧ್ವಜ ನ್ಯೂಸ್ , ರಾಯಚೂರು,ಡಿ.23-  ಪೆನ್‌ಕಾಕ್ ಸಿಲಾಟ್  ಆಗ್ನೇಯ ಏಷ್ಯಾದ ಸಾಂಪ್ರದಾಯಿಕ ಸಮರ ಕಲೆ, ಇದು ಕೇವಲ ಆತ್ಮರಕ್ಷಣೆಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ದೈಹಿಕ ಸಾಮರ್ಥ್ಯ, ಮಾನಸಿಕ ಶಿಸ್ತು, ಆಧ್ಯಾತ್ಮಿಕ ಸಮತೋಲನ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿದೆ ಎಂದು ಕೆಪಿಸಿಎಲ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಾದ ಮಹೇಶ್ ಪೊಲೀಸ್ ಪಾಟೀಲ್ ಹೇಳಿದರು. ಅವರಿಂದು ರಾಯಚೂರು ಜಿಲ್ಲಾ ಶಕ್ತಿನಗರ ಬಸವ ಕಲ್ಯಾಣ ಮಂಟಪದಲ್ಲಿ ಪೆಂಕಾಕ್ ಸಿಲತ್ ಸ್ಪೋರ್ಟ್ ಅಸೋಸಿಯೇಷನ ಸಂಸ್ಥೆ  ಅಧ್ಯಕ್ಷರಾದ ಮಾಸ್ಟರ್ ಲಕ್ಷ್ಮೀ ಅವರ ನೇತೃತ್ವದಲ್ಲಿ ರಾಯಚೂರು ಜಿಲ್ಲಾ ಮಟ್ಟದ  ಪೆಂಕಾಕ್ ಪಂದ್ಯಾವಳಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿ ಪೆನ್‌ಕಾಕ್ ಸಿಲಾಟ್‌ನ ಮುಖ್ಯವಾಗಿ ಇದು  ನೈಸರ್ಗಿಕ ದೇಹದ ಚಲನೆಗಳನ್ನು ಬಳಸುತ್ತದೆ, ಸಮತೋಲನ ಮತ್ತು ಚಲನೆಯನ್ನು ಸುಧಾರಿಸುತ್ತದೆ  ಇದು ಇಂಡೋನೇಷ್ಯಾ ಮತ್ತು ಮಲೇಷಿಯಾದಿಂದ ಬಂದಿದ್ದು, ಸಂಸ್ಕೃತಿ ಮತ್ತು ಜೀವನ ತತ್ವಗಳನ್ನು ಒಳಗೊಂಡಿದೆ. ಇದು ಶಿಸ್ತು, ಗೌರವ ಮತ್ತು ಜವಾಬ್ದಾರಿ ಕಲಿಸುತ್ತದೆ ಇದನ್ನು ಕ್ರೀಡೆಯಾಗಿ ಏಷ್ಯನ್ ಗೇಮ್ಸ್‌ಗಳಂತಹ ದೊಡ್ಡ ಪಂದ್ಯಾವಳಿಗಳಲ್ಲಿ ಸೇರಿಸಲಾಗಿದೆ ಮತ್ತು ರಾಷ್ಟ್ರೀಯ ಹಾಗೂ ಅಂತರರಾಷ...
Image
  ರಾಯಚೂರಿನಲ್ಲಿ ಜಿಲ್ಲಾ ಉತ್ಸವ ಆಯೋಜನೆ: ಶೃತಿ ಸಾಹಿತ್ಯ ಮೇಳ ಸ್ವಾಗತ ಜಯ ಧ್ವಜ ನ್ಯೂಸ್ , ರಾಯಚೂರು ,ಡಿ.23 - ಜನವರಿ 29,30, 31ಕ್ಕೆ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾ ಆಡಳಿತದಿಂದ ರಾಯಚೂರು ಜಿಲ್ಲಾ ಉತ್ಸವ- 2026 ಹಮ್ಮಿಕೊಂಡಿರುವುದು ಹರ್ಷದಾಯಕ ಮತ್ತು ಸ್ವಾಗತಾರ್ಹ ವಾಗಿದೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು ತಿಳಿಸಿದ್ದಾರೆ.    ರಾಯಚೂರು ಉತ್ಸವ ಜರುಗಬೇಕೆಂಬುದು, ಸಾಹಿತ್ಯಾಸಕ್ತರ ಮತ್ತು ಕಲಾವಿದರ ಬಹು ದಿನಗಳ ಕನಸಾಗಿತ್ತು. ಈ ಉತ್ಸವವನ್ನು ಆಯೋಜಿಸುವಂತೆ ಶ್ರುತಿ ಸಾಹಿತ್ಯ  ಮೇಳ ಮತ್ತು ಹಲವಾರು ಸಂಘಟನೆಗಳು ಸೇರಿ ರಾಯಚೂರು ಉತ್ಸವ ಆಚರಿಸಬೇಕೆಂದು ಹಲವಾರು ಬಾರಿ ಬೇಡಿಕೆಯನ್ನು ಸಲ್ಲಿಸಲಾಗಿತ್ತು.   ಬಹು ವರ್ಷಗಳ ನಂತರ ಜಿಲ್ಲೆಯಲ್ಲಿ ಮೂರು ದಿನಗಳ ವರೆಗೆ ರಾಯಚೂರು ಉತ್ಸವ ನಿಗದಿಯಾಗಿ  ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ಜಿಲ್ಲಾಡಳಿತವು  ಪ್ರಥಮ ಸಭೆ ನಡೆಸಿರುವುದು  ಸಂತೋಷದ ವಿಷಯವಾಗಿದೆ.     ರಾಯಚೂರು ಜಿಲ್ಲೆ ಸಾಹಿತ್ಯ ಸಂಸ್ಕೃತಿ ,ಕಲೆ, ಇತಿಹಾಸ, ಇವುಗಳಿಗೆ ಅತ್ಯಂತ ಶ್ರೀಮಂತವಾಗಿರುವ ಪ್ರದೇಶವಾಗಿದೆ.  ರಾಜ್ಯ ಸರ್ಕಾರದಿಂದ ಹಂಪಿ ಉತ್ಸವ, ಕದಂಬ ಉತ್ಸವ, ಮೈಸೂರು ಉತ್ಸವ, ಕರಾವಳಿ ಉತ್ಸವ, ಪಟ್ಟದಕಲ್ಲು ಉತ್ಸವ, ಮುಂತಾದ ಜಿಲ್ಲೆಗಳಲ್ಲಿ ಉತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ರಾಯಚೂರು...