ಡಿ.ದೇವರಾಜ ಅರಸು ಅವರ ಯೋಜನೆಗಳು ಇಂದಿಗೂ ಜನಪರ ಹಾಗೂ ಪ್ರಸ್ತುತ -ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ರಾಯಚೂರು ಆ.೨೦:- ಡಿ.ದೇವರಾಜು ಅರಸು ಅವರು ಮುತ್ಸದ್ದಿಯಾಗಿ, ಸರಳ ಸಜ್ಜನಿಕೆ ವ್ಯಕ್ತಿ ಯಾಗಿದ್ದರು, ಅವರ ಆಡಳಿತ ಸಂದರ್ಭದಲ್ಲಿ ಸರ್ವ ಜನಾಂಗದವರ ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸ, ಜನಪರ ಯೋಜನೆಗಳು ಜಾರಿಗೆ ತಂದಿದ್ದು, ಇಂದಿಗೂ ಅವರ ಯೋಜನೆಗಳನ್ನು ನೆನೆಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರು ಹೇಳಿದರು. ಅವರು ಆ.೨೦ರ ಶನಿವಾರ ದಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿ.ದೇವರಾಜ ಅರಸು ಅವರ ೧೦೭ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಡಿ.ದೇವರಾಜು ಅರಸು ಅವರು ಯೋಜನೆಗಳು, ಕೊಡುಗೆಗಳನ್ನು ಕಳೆದ ೪೦ವರ್ಷಗಳಿಂದ ನೆನೆಯುತ್ತಿದ್ದೇವೆ, ಅಂತಹ ಕೊಡುಗೆ ನೀಡಿದ್ದರು, ಇವರು ಭೂ ಸುಧಾರಣೆ ಹಾಗೂ ಉಳುವವನೇ ಭೂಮಿಯ ಒಡೆಯ ಎನ್ನುವ ಕಾನೂನುಗಳನ್ನು ಜಾರಿಗೆ ತಂದರು, ರಾಜ್ಯದ ಎಲ್ಲ ವರ್ಗದವರಿಗೆ ಅನುಕೂಲವಾಗುವಂತೆ ಮಾಡಿದ್ದು, ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ ಮಾಡಲು ಶಿಲಾನ್ಯಾಸ ಮಾಡಿ, ಎಲೆಕ್ಟ್ರಾನಿಕ್ ಸಿಟಿ ಪರಿಕಲ್ಪನೆಯನ್ನು ಎತ್ತಿ ಹಿಡಿದು ಹೆಚ್ಚು ಉದ್ಯೋಗ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು. ಉಪನ್ಯಾಸಕರಾಗಿ ಮಹಾದ...