Posts

ಅಯೋಧ್ಯ ಶ್ರೀ ರಾಮಮಂದಿರಕ್ಕೆ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು.

Image
ಅಯೋಧ್ಯ ಶ್ರೀ ರಾಮಮಂದಿರಕ್ಕೆ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಭೇಟಿ .                            ರಾಯಚೂರು,ಡಿ.22-ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಉತ್ತರ ಪ್ರದೇಶದ ಅಯೋಧ್ಯ ಶ್ರೀ ರಾಮ ದೇಗುಲಕ್ಕೆ ಭೇಟಿ ನೀಡಿ ರಾಮದೇವರ ದರ್ಶನ ಪಡೆದರು.                     ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನದ ಮೇರೆಗೆ ಅವರು ಭೇಟಿ ನೀಡಿ ಮಂದಿರವನ್ನು ಸಂದರ್ಶಿಸಿದರು.                       ಈ ಸಂದರ್ಭದಲ್ಲಿ ಗೋಪಾಲ ಜೀ ಇನ್ನಿತರರು ಇದ್ದರು.

ಜೋಡು ವೀರಾಂಜನೇಯ 31ನೇ ವಾರ್ಷಿಕೋತ್ಸವ ಅದ್ದೂರಿ ರಥೋತ್ಸವ: ಕಣ್ಮನ ಸೆಳೆದ ರಜತ ಕವಚ ಮತ್ತು ಪುಷ್ಪಾಲಂಕಾರ.

Image
  ಜೋಡು ವೀರಾಂಜನೇಯ ದೇವಸ್ಥಾನದ 31ನೇ ವಾರ್ಷಿಕೋತ್ಸವ ಅದ್ದೂರಿ ರಥೋತ್ಸವ:                                    ಕಣ್ಮನ ಸೆಳೆದ ರಜತ ಕವಚ ಮತ್ತು  ಪುಷ್ಪಾಲಂಕಾರ.                    ರಾಯಚೂರು,ಡಿ.22- ನಗರದ ಸಾವಿತ್ರಿ ಕಾಲೋನಿಯ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ 31ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ನೆರವೇರಿತು. ಬೆಳಿಗ್ಗೆ ಜೋಡು ಮುಖ್ಯಪ್ರಾಣ ದೇವರಿಗೆ ಪಂಚಾಮೃತ ಅಭಿಷೇಕ, ರಜತ ಕವಚ, ಪುಷ್ಪಾಲಂಕಾರ, ರಜತ ರಥೋತ್ಸವ ನೈವೇದ್ಯ, ಸ್ವಸ್ತಿ ವಾಚನ,ಮಹಾ ಮಂಗಳಾರತಿ ,ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಾಯಂಕಾಲ ಕುರ್ಡಿ ಪವನಾಚಾರ್ ರಿಂದ ಪ್ರವಚನ ಮಂಗಳ ಮಹೋತ್ಸವ ನೆರವೇರಿತು.      ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.       ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ  ಸುಶೀಲೇಂದ್ರ ಆಚಾರ್ಯ ಇನಾಂದಾರ್ , ಮಾಜಿ ಎಂಎಲ್ಸಿ  ಎನ್.ಶಂಕ್ರಪ್ಪ,  ಎ.ಮಾರೆಪ್ಪ, ಕಡುಗೋಲು ಆಂಜನೇಯ ,ದೇವಸ್ಥಾನ ಸಮಿತಿ ಅಧ್ಯಕ್ಷ ದಾನಪ್ಪ ಯಾದವ, ಸಾವಿತ್ರಿ ಪುರುಷೋತ್ತಮ , ಪ್ರಮೋದ್ ರಾಯಕೆಮ್, ಅರವಿಂದ ಕುಲಕರ್ಣಿ ,ವೇಣುಗೋಪಾಲ್ ಆಚಾರ್ಯ ಇನಾಂದಾರ್, ವಿಷ್ಣುತೀರ್ಥ ಸಿರವಾರ್...

ಆರ್.ಇ.ಟಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ: ಅಥ್ಲೆಟಿಕ್ ಕ್ರೀಡಾಕೂಟ ಉದ್ಘಾಟನಾ

Image
ಆರ್.ಇ.ಟಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ:              ಅಥ್ಲೆಟಿಕ್ ಕ್ರೀಡಾಕೂಟ ಉದ್ಘಾಟನೆ  ರಾಯಚೂರು,ಡಿ.22- ವಿಶ್ವವಿದ್ಯಾಲಯ ರಾಯಚೂರು ಹಾಗೂ ವಿ.ಆರ್.ಇ.ಟಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ ರಾಯಚೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೧೮ ಡಿಸೆಂಬರ್ ೨೦೨೩ ರಿಂದ ೨೦ ಡಿಸೆಂಬರ್ ೨೦೨೩ ರ ವರೆಗೆ ೨೦೨೩-೨೪ ನೆ ಶೈಕ್ಷಣಿಕ ಸಾಲಿನ ಪ್ರಥಮ ಅಂತರ ಮಹಾವಿದ್ಯಾಲಯಗಳ (ಪುರುಷ ಮತ್ತು ಮಹಿಳಾ) ಅಥ್ಲೆಟಿಕ್ ಕ್ರೀಡಾಕೂಟ ಉದ್ಘಾಟನಾ ಸಂಭ್ರಮವನ್ನು ವಿ.ಆರ್.ಇ.ಟಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.  ಈ ಸಮಾರಂಭಕ್ಕೆ ಉದ್ಘಾಟಕರಾಗಿ ಆಗಮಿಸಿರುವಂತಹ ಪ್ರೊ. ಹರೀಶ್ ರಾಮಸ್ವಾಮಿ ಗೌರವಾನ್ವಿತ ಕುಲಪತಿಗಳು ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಇವರು ಜ್ಯೋತಿ ಬೆಳಗಿಸಿ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಇಂದು ನಮ್ಮ ರಾಯಚೂರು ವಿಶ್ವವಿದ್ಯಾಲಯದ ಇತಿಹಾಸದ ಪುಟಗಳಲ್ಲಿ ಅಜರಾಮರ ದಿನ.  ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸನ್ನು ಕೇಂದ್ರಕರಿಸುವುದೇ ಕ್ರೀಡೆಯಾಗಿದೆ. ಕ್ರೀಡೆ ಎಂದರೆ ಕೇವಲ ಮನರಂಜನೆಯಲ್ಲ ಇದು ಶಿಸ್ತು, ಸಂಯಮ, ಆರೋಗ್ಯ, ಉಲ್ಲಾಸ, ಮುಂತಾದ ಹಲವಾರು ಅಂಶಗಳನ್ನು ವ್ಯಕ್ತಿಗಳಲ್ಲಿ ತುಂಬಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸುತ್ತದೆ. ಕ್ರೀಡೆಗೆ ಜಾತಿ, ಮತ, ಧರ್ಮ, ಭೇದ ಭಾವಗಳನ್ನು ಬಿಟ್ಟು ಎಲ್...

500 ವಿದ್ಯಾರ್ಥಿಗಳಿಂದ ಭಗವದ್ಗೀತೆ ಪಠಣ: ಡಿ.23 ರಂದು ಗೀತಾ ಜಯಂತಿ ಅಂಗವಾಗಿ ಮಹಾ ಸಮರ್ಪಣಾ ಕಾರ್ಯಕ್ರಮ - ಫಡ್ನೀಸ್.

Image
  500 ವಿದ್ಯಾರ್ಥಿಗಳಿಂದ ಭಗವದ್ಗೀತೆ ಪಠಣ:                                          ಡಿ.23 ರಂದು ಗೀತಾ ಜಯಂತಿ ಅಂಗವಾಗಿ ಮಹಾ ಸಮರ್ಪಣಾ ಕಾರ್ಯಕ್ರಮ - ಫಡ್ನೀಸ್.                            ರಾಯಚೂರು,ಡಿ.21-ಗೀತಾ ಜಯಂತಿ ಅಂಗವಾಗಿ ಡಿ.23 ರಂದು ಭಗವದ್ಗೀತಾ ಮಹಾ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಭಗವದ್ಗೀತಾ ಅಭಿಯಾನ ಸಮಿತಿ ಅಧ್ಯಕ್ಷರಾದ ಡಾ.ಆನಂದತೀರ್ಥ ಫಡ್ನೀಸ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸ್ವರ್ಣವಲ್ಲಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳ ಮಾರ್ಗದರ್ಶನದಲ್ಲಿ ಅಂದು ನಗರದ ಗಾಜಗಾರಪೇಟೆಯ ಶ್ರೀ ಶಂಕರ ಮಠದಲ್ಲಿ ಸಂಜೆ 5ಕ್ಕೆ ಮಹಾ ಸಮರ್ಪಣಾ ಕಾರ್ಯಕ್ರಮ ನಡೆಯಲಿದ್ದು ಸಾನಿಧ್ಯವನ್ನು ಮಿಟ್ಟಿಮಲ್ಕಾಪೂರು ಶಾಂತಾಶ್ರಮದ ಪರಮ ಪೂಜ್ಯ ಶ್ರೀ ನಿಜಾನಂದ ಸ್ವಾಮಿಗಳು ವಹಿಸಲಿದ್ದು , ಅತಿಥಿಗಳಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು , ನಗರ ಶಾಸಕ ಡಾ.ಶಿವರಾಜ ಪಾಟೀಲ್, ಹೋಟೆಲ್ ಉದ್ಯಮಿ ಸದಾನಂದ ಪ್ರಭು, ನಗರಸಭೆ ಸದಸ್ಯ ಈ.ಶಶಿರಾಜ, ಆರ್ ಡಿ ಎ ಮಾಜಿ ಅಧ್ಯಕ್ಷ ಗೋವಿಂದ ಆಗಮಿಸಲಿದ್ದಾರೆಂದರು...

ಕಂದಕ ಒತ್ತುವರಿ ಆರೋಪ: ಎಸ್.ಎನ್.ಟಿ ಚಿತ್ರಮಂದಿರ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಾಣ ಸ್ಥಗಿತ.

Image
  ಕಂದಕ ಒತ್ತುವರಿ ಆರೋಪ: ಎಸ್.ಎನ್.ಟಿ ಚಿತ್ರಮಂದಿರ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಾಣ ಸ್ಥಗಿತ.                                          ರಾಯಚೂರು,ಡಿ.21-ನಗರದ ಎಸ್ ಎನ್ ಟಿ ಚಿತ್ರಮಂದಿರ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ನಗರಸಭೆ ತಡೆ ನೀಡಲಾಗಿದೆ . ಇಂದು ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.                                          ಕಳೆದ ಕೆಲವು ದಿನಗಳ ಹಿಂದೆ ಸ್ಥಳದಲ್ಲಿ ನಗರಸಭೆ ಸಿಬ್ಬಂದಿ ನವರಂಗ್ ದರ್ವಾಜಾ ವಸ್ತು ಸಂಗ್ರಹಾಲಯ ಕ್ಯೂರೆಟರ್ ಪತ್ರದನ್ವಯ ನೋಟೀಸ್ ಜಾರಿ ಮಾಡಿದ್ದರು ಇದೀಗ ಸ್ಥಳದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ

ದೇವಸೂಗೂರಿನಲ್ಲಿ ಬ್ಲೆಸೇಡ್ ಅಲಫೋನ್ಸ್ ಶಾಲೆಯ ವಾರ್ಷಿಕೋತ್ಸವ : ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕು - ದದ್ದಲ್

Image
ದೇವಸೂಗೂರಿನಲ್ಲಿ ಬ್ಲೆಸೇಡ್ ಅಲಫೋನ್ಸ್ ಶಾಲೆಯ ವಾರ್ಷಿಕೋತ್ಸವ  :                            ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕು - ದದ್ದಲ್            ರಾಯಚೂರು,ಡಿ.21- ಇಂದು ದೇವಸೂಗೂರ ಗ್ರಾಮದಲ್ಲಿ ಬ್ಲೆಸೇಡ್ ಅಲಪೋನ್ಸ್ ಶಾಲೆಯ ವಾರ್ಷಿಕೋತ್ಸವ ರಾಯಚೂರು ಗ್ರಾಮೀಣ ಕ್ಷೇತ್ರದ  ಶಾಸಕರಾದ  ಬಸನಗೌಡ ದದ್ದಲ್ ರವರು ಉದ್ಘಾಟನೆ ನೆರವೇರಿಸಿದರು.   ಶಾಸಕರು ಮಾತನಾಡಿ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕು ಶಿಸ್ತು ಬದ್ದವಾಗಿ ಶಿಕ್ಷಣದ ಜೊತೆಗೆ ಮಕ್ಕಳ ಪ್ರತಿಭೆಯನ್ನು  ಗುರುತಿಸುವುದು, ಆಡಳಿತ ಮಂಡಳಿ  ಗಮನಹರಿಸುವುದು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸುವುದು ಉನ್ನತ ಸ್ಥಾನದಲ್ಲಿ ನೋಡಬೇಕೆಂದು ಪ್ರತಿಯೊಬ್ಬರ  ಪೋಷಕರ ಕನಸಾಗಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಡಾ ಹೆನ್ರಿ  ಡಿಸೋಜಾ ಧರ್ಮಪ್ರಾಂತ್ಯದ ಬಿಷಪ್ ಬಳ್ಳಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ರೇ ಲಿಯೋ ಮಿಚೆಲ್ ಹೆಚ್.ಎಂ ಅನಿಲ್, ರಾಜಕುಮಾರ, ಹಾಗೂ ಊರಿನ ಹಿರಿಯ ಮುಖಂಡರುಗಳು ,ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ,ಗ್ರಾ.ಪಂ ಅಧ್ಯಕ್ಷರು ಸದಸ್ಯರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ಮಂತ್ರಾಲಯಕ್ಕೆ ಭಾವಿ ಪರ್ಯಾಯಸ್ಥ ಉಡುಪಿ ಪುತ್ತಿಗೆ ಮಠದ ಉಭಯ ಶ್ರೀಪಾದಂಗಳವರು ಭೇಟಿ: ಪರ್ಯಾಯ ಮಹೋತ್ಸವಕ್ಕೆ ಶ್ರೀ ಸುಬುಧೇಂದ್ರತೀರ್ಥರಿಂದ ಎರೆಡು ಲಕ್ಷ ರೂ.ದೇಣಿಗೆ

Image
  ಮಂತ್ರಾಲಯಕ್ಕೆ ಭಾವಿ ಪರ್ಯಾಯಸ್ಥ ಉಡುಪಿ ಪುತ್ತಿಗೆ ಮಠದ ಉಭಯ ಶ್ರೀಪಾದಂಗಳವರು ಭೇಟಿ:                                                  ಪರ್ಯಾಯ ಮಹೋತ್ಸವಕ್ಕೆ ಶ್ರೀ ಸುಬುಧೇಂದ್ರತೀರ್ಥರಿಂದ ಎರೆಡು ಲಕ್ಷ  ರೂ.ದೇಣಿಗೆ                      ರಾಯಚೂರು,ಡಿ.20- ಉಡುಪಿ ಶ್ರೀ ಕೃಷ್ಣ ಮಠದ ಭಾವಿ ಪರ್ಯಾಯಸ್ಥ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ಹಾಗೂ ಕಿರಿಯ ಪೀಠಾಧಿಪತಿಗಳಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರು ಮಂತ್ರಾಲಯಕ್ಕೆ  ಭೇಟಿ ನೀಡಿದರು.                   ಶ್ರೀ ಮಠದ ಪಂಡಿತರು ಹಾಗೂ ಸಿಬ್ಬಂದಿಗಳು ಉಭಯ ಶ್ರೀಪಾದಂಗಳವರನ್ನು ದೀಪಾಲಂಕೃತ ಮಧ್ವ ಮಾರ್ಗ ಮುಖಾಂತರ ಶ್ರೀಮಠದ ಸಂಪ್ರದಾಯದಂತೆ ರಜತ ಮುಖ್ಯ ದ್ವಾರ ಬಳಿ ಸ್ವಾಗತಿಸಿದರು , ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಬರಮಾಡಿಕೊಂಡರು ನಂತರ ರಾಯರ ಮತ್ತು ವಾದೀಂದ್ರತೀರ್ಥರ ಬೃಂದಾವನ ದರ್ಶನ ಪಡೆದರು.                      ...