Posts

Showing posts from November, 2025
Image
  ಮದುವೆ ಸಮಾರಂಭಗಳಿಗೆ ಮಂಗಳಮುಖಿಯರ ಉಪಟಳ.                                                    ಜಯ ಧ್ವಜ ನ್ಯೂಸ್, ರಾಯಚೂರು, ನ.30- ಮದುವೆ ಸಮಾರಂಭಗಳಲ್ಲಿ ಮಂಗಳಮುಖಿಯರ ಉಪಟಳಕ್ಕೆ ಮದುವೆ ಮನೆಯವರು ರೋಸಿ ಹೋಗಿದ್ದಾರೆ.                     ಮದುವೆ ಸಮಾರಂಭದ ಅಕ್ಷತಾರೋಪಣ ಅಥವಾ ಆರತಕ್ಷತೆ ವೇಳೆ ತಂಡೋಪತಂಡವಾಗಿ ವೇದಿಕೆಗೆ ನುಗ್ಗುವ ಇವರು ಕೆಲ ಹೊತ್ತು ಆತಂಕ ಸೃಷ್ಟಿಸುತ್ತಾರೆ. ನವ ವಧು ವರರಿಗೆ ಆಶೀರ್ವದಿಸುವ ನೆಪದಲ್ಲಿ  ಇಂತಿಷ್ಟೆ ಹಣ ನೀಡಬೇಕೆಂದು ಒತ್ತಾಯ ಮಾಡಿ ಸ್ಥಳದಲ್ಲಿ ಆತಂಕ ಮೂಡಿಸುತ್ತಾರೆ ಇದನ್ನು ಪ್ರಶ್ನಿಸುವವರು ಮೇಲೆ ಏರು ಧ್ವನಿ ಮಾತನಾಡುತ್ತ ಚಪ್ಪಾಳೆ ತಟ್ಟುತ್ತಾ ಶಿಳ್ಳೆ ಹಾಕುತ್ತಾ ಅಸಭ್ಯವಾಗಿ ವರ್ತಿಸುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರು ಒತ್ತಾಯವಾಗಿದೆ .
Image
 ಶ್ರೀ ಸುಬುಧೇಂದ್ರತೀರ್ಥರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ                                                                ಜಯ ಧ್ವಜ ನ್ಯೂಸ್ , ರಾಯಚೂರು, ನ.29 - ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರಿಗೆ ಮೈಲೀಸ್ ಲೀಡರ್ ಶಿಪ್  ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ರವಿ ಆಚಾರ್, ಡೀನ್ ಡಾ.ಕೆ.ಟಿ.ರಾಜೇಂದ್ರಕುಮಾರ್ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರಿಗೆ ಇದು ಮೂರನೇ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ. ಈ ಸಂದರ್ಭದಲ್ಲಿ ರಾಜಾ ಎಸ್ .ಗಿರಿಯಾಚಾರ್ಯ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ .ಕೆ.ಶ್ರೀಧರ ರಾವ್, ವಿ.ಆರ್.ಪಂಚಮುಖಿ, ಹರಿದಾಸ ಭಟ್ ಇನ್ನಿತರರು ಇದ್ದರು. 
Image
  ರಘುನಾಥ ಮತ್ತು ಜಯಸಿಂಹ ರವರನ್ನು ಭೇಟಿಯಾದ            ರಮೇಶ್ ಕುಲಕರ್ಣಿ.                                             ಜಯ ಧ್ವಜ ನ್ಯೂಸ್ ರಾಯಚೂರು, ನ.29- ಇಂದು ಬೆಂಗಳೂರಿನ ಗಾಯತ್ರಿ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಅಧ್ಯಕ್ಷರಾದ  ಎಸ್. ರಘುನಾಥ್ ರವರನ್ನು ಎಕೆ ಬಿಎಂಎಸ್ ರಾಜ್ಯ ಜಂಟಿ ಕಾರ್ಯದರ್ಶಿ  ಹಾಗೂ ಜಿಲ್ಲಾ ಪ್ರತಿನಿಧಿ ರಮೇಶ್ ಕುಲಕರ್ಣಿ ಭೇಟಿಯಾಗಿ ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ಕಾರ್ಯಕ್ರಮಗಳ ಬಗ್ಗೆ, ಜಿಲ್ಲಾ ಬ್ರಾಹ್ಮಣ ಯುವ ಸಮಾವೇಶದ ಬಗ್ಗೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನದ ಬಗ್ಗೆ, ಜೊತೆಯಲ್ಲಿ ರಾಜ್ಯ ಕಾರ್ಯಕಾರಣಿಯಲ್ಲಿ ರಾಯಚೂರು ಜಿಲ್ಲೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವ ಬಗ್ಗೆ ಸಮಾಲೋಚನೆ ನಡೆಸಿದರು . ನಂತರ ರಾಜ್ಯ ಅಧ್ಯಕ್ಷರಿಗೆ ಇತ್ತೀಚೆಗೆ ರಾಯಚೂರಿನಲ್ಲಿ ಬಿಡುಗಡೆಯಾದ ನಮ್ಮ ಸಮಾಜದ ಹೆಮ್ಮೆಯ ಶ್ರೀಮತಿ ಜಯಲಕ್ಷ್ಮಿ ಮಂಗಳಮೂರ್ತಿ ರವರ ಅಭಿನಂದನಾ ಗ್ರಂಥ "ಜಯ ದೀಪ್ತಿ "  ನೀಡಿ ಅಭಿನಂದಿಸಲಾಯಿತು.  ಅದೇ ರೀತಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ  ಆಸುಗೋಡು ಜಯಸಿಂಹ ರವರನ್ನು ಭೇಟಿಯಾಗಿ, ರಾಯಚೂರು ಜಿಲ್ಲೆಯಿಂದ ನೇರ ಸಾಲಕ್ಕೆ ಅರ್ಜಿ ಸಲ್ಲ...
Image
ಚಿಕಲಪರ್ವಿ,  ಚಿಕ್ಕಮಂಚಾಲೆ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆ: ಆಂಧ್ರಪ್ರದೇಶ ಸಚಿವರೊಂದಿಗೆ ಎನ್‌ ಎಸ್‌ ಭೋಸರಾಜು ಸಭೆ -ಸಕಾರಾತ್ಮಕ ಸ್ಪಂದನೆ ಜಯ ಧ್ವಜ ನ್ಯೂಸ್ , ರಾಯಚೂರು. ನ 28- ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ  ಎನ್‌ ಎಸ್‌ ಭೋಸರಾಜು ಅವರು ಇಂದು  ಆಂಧ್ರಪ್ರದೇಶದ ನೀರಾವರಿ ಇಲಾಖೆ ಸಚಿವರಾದ  ನಿಮಲ ರಾಮನಾಯ್ಡು ಹಾಗೂ ಕರ್ನೂಲು ಜಿಲ್ಲೆಯ ಹಾಗೂ ಕೈಗಾರಿಕಾ ಸಚಿವರಾದ  ಟಿ.ಜಿ ಭರತ್‌ ಅವರೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಪ್ರದೇಶದ ರೈತರ ಹಿತದೃಷ್ಟಿಯಿಂದ ತುಂಗಾಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಯೋಜಿಸಲಾಗಿರುವ ಬ್ರಿಡ್ಜ್‌ ಕಂ ಬ್ಯಾರೇಜ್‌ ಯೋಜನೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಚಿಕಲಪರ್ವಿ ಮತ್ತು ಚಿಕ್ಕಮಂಚಾಲೆ (ಮಂತ್ರಾಲಯದ ಸಮೀಪ) ಹತ್ತಿರ ತುಂಗಾಭದ್ರಾ ನದಿಯ ಹರಿವಿನಲ್ಲಿ ಈ ಬ್ಯಾರೇಜ್‌ಗಳನ್ನು ನಿರ್ಮಿಸುವ ಯೋಜನೆಯ ಬಗ್ಗೆ ಪ್ರಸ್ತಾಪಿಸಲಾಯಿತು. ಈ ಯೋಜನೆಗಳು ಅನುಷ್ಠಾನಗೊಂಡರೆ ಉಭಯ ರಾಜ್ಯಗಳ ಸಾವಿರಾರು ಜನ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ಹೆಚ್ಚುವರಿ ನೀರು ದೊರೆಯಲಿದ್ದು, ಇದರಿಂದ ರೈತರಿಗೆ ಅಪಾರ ಅನುಕೂಲವಾಗಲಿದೆ. ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಅಗತ್ಯ ಸಹಕಾರ ನೀಡುವಂತೆ ಸಚಿವರಾದ ಭೋಸರಾಜು ಅವರು ಆಂಧ್ರಪ್ರದೇಶದ ಸಚಿವರಲ್ಲಿ ಮನವಿ ಸಲ್ಲಿಸಿದರು. ಈ ಮನವಿಗೆ ಆಂಧ್ರಪ್ರದ...
Image
  ನಾಳೆ ಶ್ರೀ ಸುಭುದೇಂದ್ರತೀರ್ಥ ಶ್ರೀಪಾದಂಗಳವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ                                                    ಜಯ ಧ್ವಜ ನ್ಯೂಸ್, ರಾಯಚೂರು, ನ.28- ಮೈಲೆಸ್ ಲೀಡರ್ ಶಿಪ್ ವಿಶ್ವವಿದ್ಯಾಲಯದಿಂದ ನ.29ರಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ನಡೆಯಲಿದೆ.                                     ನಾಳೆ ಸಂಜೆ 6 ಗಂಟೆಗೆ ಯೋಗೀಂದ್ರ ಸಭಾ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರತಿಷ್ಟಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ ಆಯೋಜಿಸಲಾಗಿದ್ದು ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ .             
Image
  ಮಾವಿನಕೆರೆ ಉದ್ಯಾನವನದಲ್ಲಿ ಕಾಮಗಾರಿ: ತಾತ್ಕಾಲಿಕವಾಗಿ ಮೂರು ತಿಂಗಳು ಸಾರ್ವಜನಿಕ ಪ್ರವೇಶ ನಿರ್ಬಂಧ ಜಯ ಧ್ವಜ ನ್ಯೂಸ್ , ರಾಯಚೂರು ನ. 28 - ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ಮಾವಿನಕೆರೆ ಉದ್ಯಾನವನದಲ್ಲಿ ವಿವಿಧ ಅಭಿವೃದ್ಧಿ ಹಾಗೂ ಸೌಂದರ್ಯವರ್ಧಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆ, ಉದ್ಯಾನವನ್ನು ತಾತ್ಕಾಲಿಕವಾಗಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲು ತೀರ್ಮಾನಿಸಿದೆ. ಸದರಿ ಉದ್ಯಾನವನದಲ್ಲಿ ರಸ್ತೆ ನಿರ್ಮಾಣ, ಕಾಲುದಾರಿ ಇಂಟರ್‌ಲಾಕಿಂಗ್, ಬೇಲಿ ಕಾಮಗಾರಿಗಳು, ಅಲಂಕಾರಿಕ ವಿದ್ಯುತ್ ಕಂಬಗಳ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಮುಂದಿನ ದಿನಗಳಲ್ಲಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ನವೆಂಬರ್ 29 ರಿಂದ ಮುಂದಿನ ಮೂರು ತಿಂಗಳುಗಳ ಕಾಲ ಮಾವಿನಕೆರೆಯ ಕಾಮಗಾರಿಗಳನ್ನು ಸುರಕ್ಷಿತವಾಗಿ ಮತ್ತು ತಾಂತ್ರಿಕವಾಗಿ ನೆರವೇರಿಸಲು ಸಾರ್ವಜನಿಕರ ಪ್ರವೇಶವನ್ನು ನಿಯಂತ್ರಿಸುವುದು ಅಗತ್ಯವಿದ್ದು, ಮಾವಿನಕೆರೆ ಪಬ್ಲಿಕ್ ಗಾರ್ಡನ್ ಉದ್ಯಾನವನಕ್ಕೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕಾಮಗಾರಿಗಳ ಅವಧಿಯಲ್ಲಿ ನಾಗರಿಕರು ಸಹಕಾರ ನೀಡುವಂತೆ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪಾತ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Image
  ಶ್ರೀ ಸೂಗುರೇಶ್ವರ ಜಾತ್ರಾ ಮಹೋತ್ಸವ, ಜೋಡು ರಥೋತ್ಸವ:            ಶಾಸಕರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿ ಜಯ ಧ್ವಜ ನ್ಯೂಸ್ , ರಾಯಚೂರು ನ. 26-   ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ದೇವಸ್ಗೂರು ಗ್ರಾಮದ ಆರಾಧ್ಯ ದೈವ ಕ್ಷೇತ್ರಾಧಿಪತಿ ಶ್ರೀ ಸೂಗುರೇಶ್ವರ ದೇವರ ಜಾತ್ರಾ ಮಹೋತ್ಸವ ಹಾಗೂ ಜೋಡು ರಥೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ದದ್ದಲ್ ಅವರು ಭಾಗಿಯಾಗಿ ದೇವರ ಆಶೀರ್ವಾದ ಪಡೆದರು.   ಜಾತ್ರೋತ್ಸವ ಅಂಗವಾಗಿ ನಡೆದ ರಥೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು  ಶ್ರೀ ಸೂಗೂರೇಶ್ವರ ದೇವರ ಜೋಡು ರಥೋತ್ಸವವು ಅದ್ದೂರಿಯಾಗಿ ಶಾಂತಿಯುತವಾಗಿ ವಿಜೃಂಭಣೆಯಿಂದ ಜರುಗಲು ಸಹಕರಿಸಿದ ದೇವಸುಗೂರು ಸೇರಿದಂತೆ ಸುತ್ತಲಿನ ಎಲ್ಲ ಗ್ರಾಮಗಳ ಗ್ರಾಮಸ್ಥರಿಗೆ ವಂದನೆಗಳು ತಿಳಿಸಿದರು. ಶ್ರೀ ಸೂಗೂರೇಶ್ವರರ ಆಶೀರ್ವಾದವು ನಮ್ಮೆಲ್ಲರ ಮೇಲೆ ಸದಾಕಾಲ ಇರಲಿ. ಗ್ರಾಮದ, ಜಿಲ್ಲೆಯ, ರಾಜ್ಯದ, ದೇಶದ ಎಲ್ಲ ಜನತೆಗೆ ಸದಾಕಾಲ ಒಳಿತು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು, ಸುತ್ತಲಿನ ಗ್ರಾಮಗಳ ಮುಖಂಡರು, ಪೊಲೀಸ್ ಸೇರಿದಂತೆ, ಕಂದಾಯ, ಆರೋಗ್ಯ ಇಲಾಖೆ ಮತ್ತು ಇನ್ನೀತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಇದ್ದರ...
Image
  ಜಿಲ್ಲಾಡಳಿತದಿಂದ ಸಂವಿಧಾನ ದಿನಾಚರಣೆ, ಜಾಥಾ:                                                                                   ಶಾಸಕರು, ಗಣ್ಯರಿಂದ ಪ್ರತಿಜ್ಞಾವಿಧಿ ಸ್ವೀಕಾರ ; ಸಂವಿಧಾನದಿಂದ ಸಮಾನತೆ, ಸಾಮಾಜಿಕ ನ್ಯಾಯ-ನಿತೀಶ್ ಕೆ ಜಯ ಧ್ವಜ ನ್ಯೂಸ್ , ರಾಯಚೂರು ನ. 26-  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ  ಇಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸಂವಿಧಾನ ಜಾಗೃತಿ ಜಾಥಾ ಆರಂಭವಾಯಿತು. ಇದೆ ಸಂದರ್ಭದಲ್ಲಿ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್, ರಾಯಚೂರು ನಗರ ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷರಾದ ಪವನ ಕಿಶೋರ್ ಪಾಟೀಲ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಈಶ್ವರ ಕಾಂದೂ, ಜಿಲ್ಲಾ ಹೆಚ್ಚುವರಿ ...
Image
ಮಾಣಿಕ್ ಪ್ರಭು ಅಂಧ ಮಕ್ಕಳ ಶಾಲೆ  ವಿದ್ಯಾರ್ಥಿಗಳಿಗೆ ನಿತ್ಯ ಅವಶ್ಯಕ ವಸ್ತು ವಿತರಣೆ.                             ಜಯ ಧ್ವಜ ನ್ಯೂಸ್ , ರಾಯಚೂರು,ನ.24-                        ಆಲಂಪಲ್ಲಿ ಪ್ರತಿಷ್ಟಾನ, ಕುಲಕರ್ಣಿ ಪರಿವಾರ ,ಗುಡಿಹಾಳ ಪರಿವಾರ ಸದಸ್ಯರು ಸೇವಾ ಮನೋಭಾವ ದಿಂದ ನ.24 ರಂದು ಶ್ರೀ ಮಾಣಿಕ ಸಂಸ್ಥಾನ ದಿಂದ ಸಂಚಾಲಿತ   ಶ್ರೀ ಮಾಣಿಕಪ್ರಭು ಅಂಧ ಮಕ್ಕಳ ಶಾಲೆಯ ವಿಧ್ಯಾರ್ಥಿಗಳಿಗೆ ಹಾಗೂ ಸಕಲ ಸಿಬ್ಬಂದಿ ವರ್ಗ  ದವರಿಗೆ ರಾತ್ರಿಯ ಪ್ರೀತಿಯ ಭೋಜನ ನೀಡಿ ಹಾಗೂ ನಿತ್ಯದ ಅವಶ್ಯಕತೆಯ ವಸ್ತುಗಳನ್ನು ಸಹಾಯರ್ಥ ವಿತರಿಸಿ ವಿಧ್ಯಾರ್ಥಿಗಳೊಂದಿಗೆ ಪ್ರಾರ್ಥನೆಯಲ್ಲಿ ಆಲಂಪಲ್ಲಿ ಕುಟುಂಬ ಸದಸ್ಯರು,ಗುಡಿಹಾಳ ಕುಟುಂಬದ ಸದಸ್ಯರು,ಕುಲಕರ್ಣಿ ಪರಿವಾರದ ಸರ್ವಸದಸ್ಯರು ಪಾಲ್ಗೊಂಡು ಯಶಸ್ವಿ ಗೊಳಿಸಿದರು.
Image
  ಗಾಲಿಬ್ ಮೆಮೋರಿಯಲ್‌ ಟ್ರಸ್ಟ್ ವತಿಯಿಂದ ಜಿಲ್ಲೆಯ    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ.                                  ಜಯ ಧ್ವಜ ನ್ಯೂಸ್, ರಾಯಚೂರು, ನ.25 -  ನಗರದ ಗಾ಼ಲಿಬ್ ಮೆಮೋರಿಯಲ್‌ ಟ್ರಸ್ಟ್ ವತಿಯಿಂದ 2025ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ರಾಯಚೂರು ಜಿಲ್ಲೆಯವರಾದ   ಜ಼ಫರ್ ಮೋಹಿಯುದ್ದೀನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅನಾರೋಗ್ಯದ‌ ಕಾರಣ  ರತ್ನಮ್ಮ‌ ದೇಸಾಯಿಯವರು ಗೈರಾಗಿದ್ದರು, ಜ಼ಫರ್ ಮೋಹಿಯುದ್ದೀನ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾದೀಶರಾದ ಮಾರುತಿ‌ ಬಾಗಡೆ ಯವರು‌ ಮಾತನಾಡಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಸರಕಾರ ಪ್ರಶಸ್ತಿ ನೀಡುತ್ತ ಬಂದಿದೆ, ನಮ್ಮ ರಾಯಚೂರು ಜಿಲ್ಲೆಯ ಒಬ್ಬರು ಮಹನಿಯರಿಗೆ ಈ ಪ್ರಶಸ್ತಿ ದೊರೆತಿರುವದು ಅತ್ಯಂತ ಖುಷಿಯ ಸಂದರ್ಭ‌ ಎಂದು ಹೇಳಿದರು. ಕನ್ನಡ ಭಾಷೆ, ಸಂಸ್ಕೃತಿ, ನಾಟಕ, ಕಲೆ ಲ, ಸಾಮಾಜಿಕ‌ ಹೋರಾಟ ಇತ್ಯಾದಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವದ ಸಾಧಕರಿಗೆ ಮಾತ್ರ ಇಂತಹ ಪ್ರಶಸ್ತಿ ದೊರೆಯುತ್ತದೆ, ಇಂತಹ ಸಮಯದಲ್ಲಿ ಜ಼ಫರ್ ಮೋಹಿಯುದ್ದೀನ ಅವರು ರಂಗಭೂಮಿ ಕಲೆಯಲ್ಲಿ‌ ಸಾಕಷ್ಟು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎನ್ನುವದ...
Image
  ಜಯ ಧ್ವಜ ನ್ಯೂಸ್ , ರಾಯಚೂರು, ನ.25-  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ವತಿಯಿಂದ ಮಕ್ಕಳನ್ನು ಪ್ರೋತ್ಸಾಹಿಸುವ ಚಿಗುರು ಕಾರ್ಯಕ್ರಮವನ್ನು ಸರ್ಕಾರಿ ಪ್ರೌಢಶಾಲೆ ಗಿಲ್ಲೆಸೂಗೂರು ಜಿಲ್ಲೆ ರಾಯಚೂರು ನಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.  ವೈಷ್ಣವಿ ದೇಶಪಾಂಡೆ ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮ ಉದ್ಘಾಟನೆಯನ್ನು  ಬಸನಗೌಡ ದದ್ದಲ್ , ಅಧ್ಯಕ್ಷರು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಶಾಸಕರು ರಾಯಚೂರು ಗ್ರಾಮಾಂತರರವರು ನಡೆಸಿಕೊಟ್ಟರು. ಉತ್ತರಾದೇವಿ ಮಠಪತಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Image
  ಅಲ್ಲಮಪ್ರಭು ಗೃಹ ನಿರ್ಮಾಣ ಸಹಕಾರ ಸಂಘ ಚುನಾವಣೆ :      ಕೃಷ್ಣಮೂರ್ತಿ ಬಣ ಜಯಭೇರಿ ಜಯ ಧ್ವಜ ನ್ಯೂಸ್ , ರಾಯಚೂರು, ನ.24- ನಗರದ ಅಲ್ಲಮಪ್ರಭು ಗೃಹ ನಿರ್ಮಾಣ ಸಹಕಾರ ಸಂಘದ  ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಮೋದಿ ಕೃಷ್ಣಮೂರ್ತಿ ಬಣ ಜಯ ಬೇರಿ ಬಾರಿಸಿದೆ. ಸಂಘದ 13  ನಿರ್ದೇಶಕರ ಸ್ಥಾನಗಳ ಪೈಕಿ  ಲಕ್ಷ್ಮಣ ಹುಲಿಗಾರ, ರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ  11 ಸ್ಥಾನಗಳಿಗೆ 25 ಜನರು ಸ್ಪರ್ಧೆ ಮಾಡಿದ್ದರು. ಅವರಲ್ಲಿ  ಮೋದಿ ಕೃಷ್ಣಮೂರ್ತಿ , ಬಾಷುಮಿಯ,           ಡಿ.ಶರಣಮ್ಮ , ವಿ. ಲಕ್ಷ್ಮೀದೇವಿ, ರಾಯಪ್ಪ ಮಾಸ್ಟರ್, ಚಂದ್ರಶೇಖರ್, ವೀರೇಶ್, ತಿಮ್ಮಣ್ಣ ಯಾದವ್, ಸುರೇಶ್ ಸಾಹುಕಾರ, ಶರಣಗೌಡ , ರಾಮಪ್ಪ ಅವರು  ಆಯ್ಕೆಯಾಗಿದ್ದಾರೆ ಎಂದು ಘೋಷಿಸಿ, ಚುನಾವಣಾ ಅಧಿಕಾರಿಗಳು ಪ್ರಮಾಣ ಪತ್ರ ನೀಡಿದ್ದಾರೆ. ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿಕೊಂಡು, ಗುಲಾಲು ಎರಚಿಕೊಂಡು ಸಂಭ್ರಮಿಸಿದರು .
Image
  ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ವರ್ಧೆಗಳ ಉದ್ಘಾಟನೆ : ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲು ಪಠ್ಯೇತರ ಚಟುವಟಿಕೆಗಳು ಸಹಕಾರಿ - ಸೋಮಶೇಖರಪ್ಪ ಹೊಕ್ರಾಣಿ   ಜಯ ಧ್ವಜ ನ್ಯೂಸ್ ,ರಾಯಚೂರು,ನ.  23- ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಜೊತೆಗೆ ಒತ್ತಡದಿಂದ ಹೊರಬರಲು ಸಾಂಸ್ಕೃತಿ ಸ್ಪರ್ಧೆಗಳು ಸಹಕಾರಿಯಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾದ ಸೋಮಶೇಖರಪ್ಪ  ಹೊಕ್ರಾಣಿ ತಿಳಿಸಿದರು. ಅವರಿಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಪೂರ್ಣಿಮಾ ಪದವಿ ಪೂರ್ವ ಕಾಲೇಜುಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳು ಸಾಂಸ್ಕೃತಿಕ  ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ಮಗು ಯಾವುದೇ ಅವಕಾಶದಿಂದ ವಂಚಿತಗೊಳ್ಳದಂತೆ ಗಮನಹರಿಸಬೇಕಿದೆ. ಅಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ತೊಡಗಸಿಬೇಕಿದ್ದರಿಂದ ಮೊದಲ ಹಂತದಲ್ಲಿ ಕಾಲೇಜಿನಲ್ಲಿ ನಂತರ ಜಿಲ್ಲಾಮಟ್ಟದಲ್ಲಿ ನಂತರ ವಲಯ ಮಟ್ಟ ಹಾಗೂ ರಾಜ್ಯಮಟ್ಟದಲ್ಲಿ  ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿಭೆಗಳಿಗೆ ವೇದಿಕೆ ದೊರಕಿದಾಗ ಹೊಸ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಿದೆ ಎಂದರು. ಮಾನವಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕುಂಟೆಪ್ಪ ಗೌರಿಪುರ ಮಾತನಾಡಿ ಶಿಕ್ಷಣವೆಂದರೆ ಕೇವಲ ಕಲಿಕೆ ಮಾತ್ರವಲ್ಲ. ಎಲ್ಲ ಹಂತದಲ್ಲಿಯೂ ಶಿಕ್ಷಣ ಒದಗಿ ಸಬ...
Image
  ಪತ್ರಕರ್ತರಿಗೆ ಮಾಹಿತಿ ಹಕ್ಕು ಕಾಯ್ದೆ  ಬಹಳ ಉಪಯುಕ್ತ  -   ಬಿ.ವೆಂಕಟಸಿಂಗ್   ಜಯ ಧ್ವಜ ನ್ಯೂಸ್, ರಾಯಚೂರು, ನ.22- ಮಾಹಿತಿ ಹಕ್ಕು ಕಾಯ್ದೆ ಪತ್ರಕರ್ತರಿಗೆ ಬಹಳ ಉಪಯುಕ್ತವಾಗಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪತ್ರಕರ್ತರು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಜನರಿಗೆ ತಿಳಿಸಲು ಈ ಕಾಯ್ದೆ ಸಹಾಕರಿಯಾಗಲಿದೆ ಎಂದು ಮಾಹಿತಿ ಹಕ್ಕು ಆಯೋಗದ ಕಲಬುರಗಿ ವಿಭಾಗದ ಆಯುಕ್ತರಾದ ಬಿ.ವೆಂಕಟಸಿಂಗ್ ಅವರು ತಿಳಿಸಿದರು.  ಅವರಿಂದು ನಗರದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಿಪೋರ್ಟರ್ಸ್ ಗಿಲ್ಡ್ ನಿಂದ ಆಯೋಜಿಸಿದ್ದ ಪತ್ರಕರ್ತರೊಂದಿಗೆ ಆಯುಕ್ತರ ಸೌಹಾರ್ದ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.    ಸರ್ಕಾರದ ಹಣದ ಖರ್ಚು ವೆಚ್ಚಗಳನ್ನು ನಾವು ‌ಮಾಹಿತಿ ಆಯೋಗದ ಮೂಲಕ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 2005 ರಲ್ಲಿ ಈ ಕಾಯ್ದೆಯನ್ನು ಜಾರಿ ಮಾಡಲಾಯಿತು. ಕಳೆದ 20  ವರ್ಷದಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ೬೧ ಸಾವಿರ ಅರ್ಜಿಗಳು ಬಾಕಿ ಉಳಿದು ಮೊದಲನೇ ಸ್ಥಾನದಲ್ಲಿದ್ದರೆ; ರಾಜ್ಯದಲ್ಲಿ ೪೧ ಸಾವಿರ ಅರ್ಜಿಗಳು ಬಾಕಿ ಉಳಿದು ಮೂರನೇ ಸ್ಥಾನದಲ್ಲಿದೆ. ಕಲಬುರಗಿ ವಿಭಾಗದಲ್ಲಿ ಏಳು ಸಾವಿರ ಅರ್ಜಿಗಳು ಬಾಕಿ ಉಳಿದಿವೆ ಎಂದು ವಿವರಿಸಿದರು. ಅಧಿಕಾರಿಗಳು ನಿರ್ಲಕ್ಷ್ಯದಿಂದ ಮಾಹಿತಿ ಕೊಡಲು ಹಿಂಜರಿದರೆ, ಇನ್ನೂ ಕೆಲವರು ...
Image
  ಬೆಂಗಳೂರಿನಿಂದ ಸಿಕಂದರ್ ಬಾದ್ ಗೆ ವಿಶೇಷ ಎಕ್ಸ್ ಪ್ರೆಸ್ ರೈಲು  ಜಯ ಧ್ವಜ ನ್ಯೂಸ್ ,ರಾಯಚೂರು, ನ.21- ಭಗವಾನ್ ಶ್ರೀ ಸತ್ಯ ಸಾಯಿಬಾಬಾ ಅವರ ಶತಮಾನೋತ್ಸವದಂಗವಾಗಿ ದಕ್ಷಿಣ ಮಧ್ಯ ರೈಲ್ವೆಯ ಬೆಂಗಳೂರು ವಲಯದಿಂದ ವಿಶೇಷ ಎಕ್ಸ್ ಪ್ರೆಸ್ ಓಡಿಸಲಾಗುತ್ತಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ಅವರು ತಿಳಿಸಿದ್ದಾರೆ.  ಸಿಕಂದರ್ ಬಾದ್ ರೈಲ್ವೆ ನಿಲ್ದಾಣದಿಂದ ನ.22 ರಂದು ಶನಿವಾರ ಸಂಜೆ 6.05 ನಿಮಿಷಕ್ಕೆ ಹೊರಡುವ 07413 ನಂಬರಿನ ರೈಲು ಭಾನುವಾರ ಬೆಳಿಗ್ಗೆ 10.45 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಅದೇ ರೀತಿಯಾಗಿ ಬೆಂಗಳೂರು ಕಂಟೋನ್ಮೆಂಟ್ ನಿಂದ ನ.24 ರಂದು ಸೋಮವಾರ ಸಂಜೆ 5ಗಂಟೆಗೆ ಹೊರಡುವ 07414 ಬೆಂಗಳೂರು ಕಂಟೋನ್ಮೆಂಟ್ ನಿಂದ ಹೊರಟು ಮಂಗಳವಾರ 7.45 ಕ್ಕೆ ಸಿಕಂದರ್ ಬಾದ್ ತಲುಪಲಿದೆ. ಈ ರೈಲು ಲಿಂಗಂಪಲ್ಲಿ, ವಿಕರಾಬಾದ್ ಜಂಕ್ಷನ್, ತಾಂಡೂರು, ಸೇಡಂ, ಯಾದಗಿರಿ, ಕೃಷ್ಣ, ರಾಯಚೂರು ಜಂಕ್ಷನ್, ಮಂತ್ರಾಲಯಂ ರೋಡ್, ಆದೋನಿ, ಗುಂತಕಲ್ ಜಂಕ್ಷನ್, ಅನಂತಪುರ, ಧರ್ಮಾವರಂ ಜಂಕ್ಷನ್, ಮತ್ತು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ನಲ್ಲಿ ಎರಡು ಮಾರ್ಗಗಳ ರೈಲುಗಳು ನಿಲುಗಡೆಯಾಗಲಿವೆ. ಈ ರೈಲು 24 ಕೋಚ್ ಗಳನ್ನು ಹೊಂದಿರುತ್ತದೆ. ಸ ತ್ಯ ಸಾಯಿಬಾಬಾ ಅವರ ಜನ್ಮ ಶತಾಬ್ದಿ ಅಂಗವಾಗಿ ಉಂಟಾಗುವ ಜನದಟ್ಟಣೆ ನಿಬಾಯಿಸುವ ಹಿನ್ನಲೆಯಲ್ಲಿ ಈ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲಾಗುತ್ತದೆ ಎಂದು ರೈಲ್ವೆ ಇ...
Image
  ಭಕ್ತಿ ಮಾರ್ಗ ತೋರಿಸಿದ  ಮಹಾಮಹಿಮರು ಮಹಿಪತಿ ದಾಸರು-ಮುರಳಿಧರ ಕುಲಕರ್ಣಿ   ಜಯ ಧ್ವಜ ನ್ಯೂಸ್ , ರಾಯಚೂರು, ನ.21-  ದಾಸ ಶ್ರೇಷ್ಠರಾದ  ಕಾಖಂಡಕಿಯ  ಮಹಿಪತಿ ದಾಸರು ಜ್ಞಾನ ಯೋಗ,ಕರ್ಮದ ಜೊತೆಗೆ  ಭಕ್ತಿ ಮಾರ್ಗದ ಮೂಲಕ ಜನಸಾಮಾನ್ಯರಿಗೆ ಭಗವಂತನನ್ನು ತೋರಿಸಿದ  ಮಹಾ ಮಹಿಮ ದಾಸ ಶ್ರೇಷ್ಠ ರಾಗಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು.   ಅವರು ಶುಕ್ರವಾರ ಸಂಜೆ ರಾಯಚೂರು ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ನಡೆದ ಹರಿದಾಸ ಶ್ರೇಷ್ಠರಾದ ಶ್ರೀ ಮಹಿಪತಿ ದಾಸರ ಮಧ್ಯರಾಧನೆಯ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡಿದರು.   ಪುರಂದರ ದಾಸರ ಕಾಲದ ನಂತರ ಶ್ರೀ ವಿಜಯದಾಸರ ಕಾಲಘಟ್ಟದವರೆಗೆ ನಿಂತು ಹೋಗಿದ್ದ ಹರಿದಾಸ ಸಾಹಿತ್ಯ ವನ್ನು ಇವರು ಪುನರ್ಜೀವನಗೊಳಿಸಿದರು ಎಂದರು.      ಬಿಜಾಪುರ ಸುಲ್ತಾನದ ಆದಿಲ್ ಶಾ ನ ಆಡಳಿತದಲ್ಲಿದ್ದ  ಅರೆ ಹುಚ್ಚರಂತೆ ಅವಧೂತರಂತೆ ಕಾಣಿಸುತ್ತಿರುವ ಶಹನುಂಗಿ ಶಹನುಂಗ ಇವರ ಪ್ರಭಾವಕ್ಕೆ ಒಳಗಾಗಿ ವೈರಾಗ್ಯ ಜೀವನ ತಾಳಿದರು ಇವರು ಉರ್ದು, ತೆಲುಗು, ಹಿಂದಿ, ಮರಾಠಿ, ಕನ್ನಡ ದಲ್ಲಿ ಸಂಕೀರ್ತನೆಗಳನ್ನು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯು ಮಹಿಪತಿ ದಾಸರ ಕೃತಿಗಳನ್ನು ಪ್ರಕಟಿಸಿದ್ದಾರೆ ಇವರ ಒಟ್ಟು ಸಂಗ್ರಹದಲ್ಲಿ ಕನ್ನಡದ ಕೃತಿಗಳು 700ಕ್ಕೂ ಅಧಿಕ, ಮರಾಠಿ...
Image
  ನ.22 ರಂದು ರಾಯಚೂರು ಸಂಗೀತ ಉತ್ಸವ ಹಾಗೂ "ನುಲಿ ಸಿರಿ" ಪ್ರಶಸ್ತಿ ಪ್ರದಾನ ಸಮಾರಂಭ - ಪಂಡಿತ ಅಂಬಯ್ಯ ನುಲಿ.                                                                                                  ಜಯ ಧ್ವಜ ನ್ಯೂಸ್, ರಾಯಚೂರು, ನ.20- ವಚನಸಿರಿ  ಪಂ.ಅಂಬಯ್ಯ ನುಲಿ ಸಂಗೀತ ಸಾಂಸ್ಕೃತಿಕ ಸಂಸ್ಥೆ ವತಿಯಿಂದ 3ನೇ ವಾರ್ಷಿಕೋತ್ಸವ ಅಂಗವಾಗಿ ನ.22 ರಂದು ರಾಯಚೂರು ಸಂಗೀತ ಉತ್ಸವ ಹಾಗೂ "ನುಲಿ ಸಿರಿ" ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಪಂ.ಅಂಬಯ್ಯ ನುಲಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 9.30ಕ್ಕೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಿಮಲ್ಲ ಶಿವಾಚಾರ್ಯ ಶ್ರೀ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ಶ್ರೀ, ಗದಗ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜ್ಜನವರು ವಹಿಸಲಿದ್ದು ಉದ್ಘಾಟನೆಯನ್ನು ಓಂ ಸಾಯಿ ಧ್ಯಾನ ಮಂದಿರ ಸಂಸ್...
Image
  ನ.21 ಮತ್ತು 22 ಜೆಡಿಎಸ್ ಪಕ್ಷದ ಬೆಳ್ಳಿಹಬ್ಬ ಕಾರ್ಯಕ್ರಮ - ವಿರುಪಾಕ್ಷಿ.                                                                                ಜಯ ಧ್ವಜ ನ್ಯೂಸ್, ರಾಯಚೂರು, ನ.19- ಜಾತ್ಯಾತೀತ ಜನತಾದಳ ಪಕ್ಷ 25 ವರ್ಷ ತುಂಬಿದ ಪ್ರಯುಕ್ತ ನ.21 ಮತ್ತು 22 ರಂದು ಬೆಳ್ಳಿ ಹಬ್ಬ ಆಚರಿಸಲಾಗುತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹೆಚ್.ಡಿ.ದೇವೆಗೌಡರು ಪ್ರಧಾನಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ಈ ದೇಶಕ್ಕೆ, ನಾಡಿಗೆ ಅನೇಕ ಕೊಡುಗೆ ನೀಡಿದ್ದಾರೆ ಅದೆ ರೀತಿ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಸಹ ಅನೇಕ ಜನಪರ ಕಾರ್ಯ ಕೈಗೊಂಡಿದ್ದಾರೆ. ಜೆಡಿಎಸ್ ಪಕ್ಷವನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಪಕ್ಷ ಬೆಳೆದು ಬಂದ ಹಾದಿ ಕುರಿತು ನ.21ರಂದು  ಬೆಂಗಳೂರಿನ ಪಕ್ಷದ ಕೇಂದ್ರ ಕಛೇರಿಯಲ್ಲಿ ಬೆಳಿಗ್ಗೆ ಪಕ್ಷ ನಡೆದು ಬಂದ   ಇಪ್ಪತೈದು ವರ್ಷದ ಹಾದಿಯ ಕುರಿತು ಪಕ್ಷಿನೋಟ, ಭಾವಚಿತ್ರ, ಭಿತ್ತಿಚಿತ್ರ ಪ್ರದರ್ಶನ ನಡೆಯಲಿದ್ದು ,ಸಂಜೆ 4.30ಕ್ಕೆ ಪಕ್ಷದ...
Image
  ಮಾಣಿಕ್ ಪ್ರಭು ಅಂಧ ಮಕ್ಕಳ ಶಾಲೆಯಲ್ಲಿ ಫೆಡರಲ್ ಶಿಕ್ಷಣ ಸಂಸ್ಥೆಯಿಂದ ಮಕ್ಕಳ ದಿನಾಚರಣೆ                                    ಜಯ ಧ್ವಜ ನ್ಯೂಸ್, ರಾಯಚೂರು, ನ.19-  ಶ್ರೀ ಮಾಣಿಕ ಪ್ರಭು ಅಂಧ ಮಕ್ಕಳ ಶಾಲೆ ಗೆ ಯರಮರಸ್ ಕ್ಯಾಂಪ್ ನ ಫೆಡರಲ್ ಪಬ್ಲಿಕ್ ಸ್ಕೂಲ್  ಸಂಸ್ಥೆ ಯ ಚೇರ್ ಮನ್  ಮಹಮ್ಮದ  ಅಬ್ದುಲ್ ಹೈ ಫಿರೋಜ್ ಅವರು ತಮ್ಮ ಶಾಲೆಯ 200 ಕ್ಕಿಂತ ಹೆಚ್ಚು ಮಕ್ಕಳು, ಶಾಲಾ ಸಿಬ್ಬಂದಿಯೊಂದಿಗೆ ಆಗಮಿಸಿ ಮಕ್ಕಳ ದಿನಾಚರಣೆಯನ್ನು  ಅಂಧತ್ವ ಹೊಂದಿದ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ   ಆಚರಿಸಿ  ಅವರಿಗೆ ನಿತ್ಯೋಪಯೋಗಿ ವಸ್ತುಗಳ ಕಿಟ್ ನ್ನು ನೀಡಿ ಅವರು ಸಮಾಜದ ಮುಖ್ಯವಾಹಿನಿಗೆ ಸೇರಲು ತಮ್ಮ ಅಲ್ಪ ಕಾಣಿಕೆಯನ್ನು ಉದಾರತೆಯಿಂದ ನೀಡಿ ಉತ್ತಮವಾದ ಸಂದೇಶ ರವಾನಿಸಿದರು. ಸಮಾರಂಭದಲ್ಲಿ ಮಾಣಿಕ ಪ್ರಭು ಅಂಧಮಕ್ಕಳ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀ ಯತ್ನಳ್ಳಿ ,ಶೋಭಾ, ಬ್ರಾಹ್ಮಣ ಸಮಾಜ ಯುವ ಮುಖಂಡ ಪ್ರಸನ್ನ ಆಲಂಪಲ್ಲಿ,ಫೆಡರಲ್ ಪಬ್ಲಿಕ್ ಶಾಲೆಯ ಶ್ರೀಲೇಖಾ ,ಮುಖ್ಯೋಪಾದ್ಯಾಯರು,ಶಾಲಾಯ ಸಿಬ್ಬಂದಿ ಭಾಗವಹಿಸಿದ್ದರು.
Image
  ಶಿವಸೇನಾ ನಗರಾಧ್ಯಕ್ಷರಾಗಿ ವಿನಯ್ ಸಿಂಗ್ ಠಾಕೂರ್ ನೇಮಕ .                                                                              ಜಯ ಧ್ವಜ ನ್ಯೂಸ್, ರಾಯಚೂರು, ನ.19- ಶಿವಸೇನಾ ನಗರಾಧ್ಯಕ್ಷರಾಗಿ ವಿನಯ ಸಿಂಗ್ ಠಾಕೂರ್ ರವರನ್ನು  ಶಿವಸೇನಾ ಕರ್ನಾಟಕ ಜಿಲ್ಲಾಧ್ಯಕ್ಷ ರಾಜಾ ಚಂದ್ರ ರಾಮನಗೌಡ ನೇಮಕಗೊಳಿಸಿದ್ದಾರೆ. ಪಕ್ಷದ ಧ್ಯೇಯ, ನಿಷ್ಠೆ, ಶಿಸ್ತಿಗೆ ಬದ್ಧರಾಗಿ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದ್ದಾರೆ.