Posts

Showing posts from October, 2025
Image
  ನ. 30ರಂದು ರಾಷ್ಟ್ರಮಟ್ಟದ ಬೆಳಕು ಸಂಭ್ರಮ-ಮೇಟಿಗೌಡ ಜಯ ಧ್ವಜ, ನ್ಯೂಸ್ , ರಾಯಚೂರು ,ಅ.19- ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕಾವ್ಯ ಕ್ಷೇತ್ರದಲ್ಲಿ ಅಗ್ರಗಣ್ಯ ಸೇವೆ ಸಲ್ಲಿಸುತ್ತಿರುವ ಬೆಳಕು ಸಂಸ್ಥೆ ತನ್ನ 121ನೇ ಮಹತ್ವದ ಕಾರ್ಯಕ್ರಮವನ್ನು ನವೆಂಬರ್ 30ರಂದು ಬೆಂಗಳೂರು ನಗರದ ಚಾಮರಾಜಪೇಟೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಭವ್ಯವಾಗಿ ಆಯೋಜಿಸಲಾಗಿದೆ ಎಂದು ಬೆಳಕು ಸಂಸ್ಥೆಯ ಸಂಸ್ಥಾಪರಾದ ಅಣ್ಣಪ್ಪ ಮೇಟಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಉಚಿತವಾಗಿ ಭಾಗವಹಿಸಬಹುದಾಗಿದ್ದು ರಾಷ್ಟ್ರಮಟ್ಟದ ಸಂಭ್ರಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿ, ಗಾಯನ–ನೃತ್ಯ ಪ್ರದರ್ಶನಗಳು ಸೇರಿದಂತೆ ಸಾಧಕರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಕವಿಗೋಷ್ಠಿ, ಗಾಯನ, ನೃತ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಸಕ್ತಿ ಹೊಂದಿರುವವರು ತಮ್ಮ ಪರಿಚಯ ವಿವರಗಳನ್ನು ಕೆಳಗಿನ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ನೋಂದಣಿ ಮಾಡಿಕೊಳ್ಳುವಂತೆ ಸಂಸ್ಥೆ ತಿಳಿಸಿದೆ. ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಲಿದದು ಆಸಕ್ತರು ಸಂಪರ್ಕಿಸಲು,ಅಣ್ಣಪ್ಪ ಮೇಟಿಗೌಡ,ಸಂಸ್ಥಾಪಕ ಅಧ್ಯಕ್ಷರು, ಬೆಳಕು ಸಂಸ್ಥೆ ಮೋ.ನಂ. 9035996070ಗೆ ಸಂಪರ್ಕಿಸಲು ತಿಳಿಸಿದ್ದಾರೆ.
Image
  ದೀಪಾವಳಿ ಪಟಾಕಿ ಖರೀದಿ ಜೋರು:                  ಗ್ರಾಹಕರಿಗೆ   ಬೆಲೆ ಹೆಚ್ಚಳ ಬಿಸಿ; ಮಾರಾಟಗಾರರಿಗೆ ಕಠಿಣ ನಿಯಮಾವಳಿ                                                     ಜಯ ಧ್ವಜ ನ್ಯೂಸ್ , ರಾಯಚೂರು , ಅ.19-               ನಗರದ ಬಸವೇಶ್ವರ ವೃತ್ತದ ಬಳಿಯ ವಾಲ್ಕಟ್ ಮೈದಾನದಲ್ಲಿ ದೀಪಾವಳಿ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದ್ದು ಖರೀದಿ ಜೋರಾಗಿ ನಡೆದಿದೆ. ಅತ್ತ ಪಟಾಕಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬು ಸುಡುತ್ತಿದ್ದರೆ ಇತ್ತ  ಕಠಿಣ ನಿಯಮಾವಳಿ ಗಳಿಂದ ಮಾರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ವಾರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು ಅದನ್ನು ಹೆಚ್ಚಳ ಮಾಡಿದ್ದರೆ ವ್ಯಾಪಾರಕ್ಕೆ ಅನುಕೂಲವಾಗುತ್ತಿತ್ತು ಎಂದು ಮಾರಾಟಗಾರರ ಅನಿಸಿಕೆಯಾಗಿದೆ.       ತರಹೇವಾರಿ ಪಟಾಕಿ : ಸುಮಾರು ಮೂವತ್ತಕ್ಕೂ ಅಧಿಕ ಅಂಗಡಿಗಳು ಇದ್ದು ವಿವಿಧ ಬಗೆಯ ಪಟಾಕಿ ಮಾರಾಟಕ್ಕಿವೆ ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಪಟಾಕಿ ಜೊತೆಗೆ ಕಿವಿಗಡಚಿಕ್ಕುವ ಆಟಂ ಬಾಂಬ್, ಡಬಲ್ ಸೌಂಡ್, ಮಾರುದ್ದದ ಪಟಾಕಿ ಸರಗಳು, ನವಿಲು ಗರಿ...
Image
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನು ಭೇಟಿಯಾದ ರಮೇಶ್ ಕುಲಕರ್ಣಿ                                                                                 ಜಯಧ್ವಜ  ನ್ಯೂಸ್ ,  ರಾಯಚೂರು, ಅ.19-   ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ  ಆಸುಗೋಡ ಜಯಸಿಂಹ ರವರನ್ನು ಬೆಂಗಳೂರಿನಲ್ಲಿ ರಾಯಚೂರು   ಜಿಲ್ಲಾ ಪ್ರತಿನಿಧಿ ರಮೇಶ್ ಕುಲಕರ್ಣಿ ಭೇಟಿ ಮಾಡಿದರು. ರಾಯಚೂರು ಜಿಲ್ಲೆಯ ವಿಪ್ರ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ವಿಪ್ರ ಸಮಾಜದ ಬಡವರಿಗೆ ಅಭಿವೃದ್ಧಿ ಮಂಡಳಿಯಿಂದ ದೊರೆಯುವ ಸೌಲಭ್ಯಗಳನ್ನು ಶೀಘ್ರದಲ್ಲೇ ದೊರೆಯುವಂತೆ ಮಾಡಬೇಕು, ಜೊತೆಯಲ್ಲಿ ಅಕ್ಟೋಬರ್ 31ಕ್ಕೆ ಸಾಲ ಸೌಲಭ್ಯಗಳ ದಿನಾಂಕ ಕೊನೆಗೊಳ್ಳುತ್ತಿದ್ದು ಇನ್ನು ಬಹಳಷ್ಟು ವಿಪ್ರ ಸಮಾಜದ ಬಂಧುಗಳು, ವಿದ್ಯಾರ್ಥಿಗಳು  ಇಡ್ಬ್ಲೂಎಸ್ ಸರ್ಟಿಫಿಕೇಟ್ ಪಡೆದುಕೊಂಡಿರುವುದಿಲ್ಲ, ಹಾಗಾಗಿ ನವಂಬರ್ 30ರವರೆಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿಗಳಾದ...
Image
ಸಚಿವ ದಿನೇಶ್ ಗುಂಡೂರಾವ್  ಭೇಟಿಯಾದ ಜಿಲ್ಲಾ ಪ್ರತಿನಿಧಿ ರಮೇಶ್ ಕುಲಕರ್ಣಿ                                        ಜಯ ಧ್ವಜ ನ್ಯೂಸ್ ರಾಯಚೂರು , ಅ.18-  ಇಂದು ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ  ದಿನೇಶ್ ಗುಂಡೂರಾವ್ ರವರನ್ನು ರಾಯಚೂರು ಜಿಲ್ಲೆಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ  ರಮೇಶ್ ಕುಲಕರಣಿ ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿ ಜಯಕುಮಾರ್ ಗಬ್ಬೂರ್ ಹಾಗೂ ರಾಜ್ಯ ಕಾರ್ಯ ಕಾರಣಿ ಸದಸ್ಯ  ಪ್ರವೀಣ್ ಕುಮಾರ್ ಜಾಗೀರ್ದಾರ್ ರವರು ಭೇಟಿಯಾಗಿ ಚರ್ಚಿಸಿದರು. ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾಕ್ಕೆ ಹಾಗೂ ನಗರದ ಗಾಯತ್ರಿ ಭವನ ಕಟ್ಟಡಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ವಿಪ್ರ ಬಾಂಧವರಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.  ಮುಂದಿನ ದಿನದಲ್ಲಿ ನಡೆಯುವ ರಾಯಚೂರು ಜಿಲ್ಲಾ ವಿಪ್ರ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
Image
ಕುರ್ಡಿ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಅನುಕೂಲ ಕಲ್ಪಿಸಲು ವಸಂತಕುಮಾರ್ ಗೆ ಫಲಾನುಭವಿಗಳು ಮನವಿ.                     ಜಯ ಧ್ವಜ ನ್ಯೂಸ್ , ರಾಯಚೂರು, ಅ.18 - ಇಂದು ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ ಅವರನ್ನು ಮಾನವಿ ತಾಲ್ಲೂಕಿನ‌ ಕುರ್ಡಿ ಗ್ರಾಮದ ನಿವಾಸಿಗಳು ಭೇಟಿಯಾಗಿ  ಸಾಗುವಳಿ ಜಮೀನಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಕುರ್ಡಿ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ಸರಕಾರಿ‌ ಜಮೀನು ಸಾಗುವಳಿ ಮಾಡುತ್ತ ಬಂದಂತಹ ಹತ್ತಾರು ಕುಟುಂಬಗಳನ್ನು ಇತ್ತೀಚಿಗೆ ಕೆಲವು ಪಟ್ಟಭದ್ರ ಹಿತಾಸಕ್ತ‌ ವ್ಯಕ್ತಿಗಳು ತಡೆದಿರುವದರಿಂದ ಬಡ ಗ್ರಾಮಸ್ಥರಿಗೆ ತೊಂದರೆಯಾಗಿರುವ  ಬಗ್ಗೆ ಗ್ರಾಮಸ್ಥರು ಎ.ವಸಂತಕುಮಾರ ಅವರಿಗೆ ಭೇಟಿಯಾಗಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿದ ಎ.ವಸಂತಕುಮಾರ ಅವರು ಗ್ರಾಮಸ್ಥರ ಸಮಕ್ಷಮದಲ್ಲಿ ಪಂಚನಾಮೆ ಮಾಡಿ ನೈಜ ಫಲಾನುಭವಿಗಳಿಗೆ ಸಾಗುವಳಿ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು, ಕುಟುಂಭಸ್ಥರು, ಫಲಾನುಭವಿಗಳು ಹಾಜರಿದ್ದರು.
Image
     ಎ ಆರ್ ವಿ ಸಿಮೆಂಟ್ ಸೊಸೈಟಿ ಮತ್ತು ವೈಟಿಪಿಎಸ್ ಅಧಿಕಾರಿಗಳು ಹಾರು ಬೂದಿ ಸಾಗಾಟ ಮಾಡುವ ಒಪ್ಪಂದ ಮತ್ತು ಷರತ್ತು ನಿಯಮ ಪಾಲನೆ ವಿಫಲತೆ ವಿರೋಧಿಸಿ  ಅ.27 ರಂದು ರೈತ ಸಂಘ ಪ್ರತಿಭಟನೆ . ಜಯ ಧ್ವಜ ನ್ಯೂಸ್ , ರಾಯಚೂರು ,ಅ.17- ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ಮನವಿ ಪತ್ರದಲ್ಲಿ ತಿಳಿಯಪಡಿಸುವುದೇನೆಂದರೆ ದಿನಾಂಕ 10.12.2021 ರಂದು ಎ ಆರ್ ವಿ ಸಿಮೆಂಟ್ ಸೊಸೈಟಿ ಇವರು ವೈ ಟಿ ಪಿ ಎಸ್, ಆರ್ ಪಿ ಸಿ ಎಲ್ ಚಿಕ್ಕಸೂಗೂರು ತಾಲೂಕು ಜಿಲ್ಲಾ ರಾಯಚೂರು ಈ ಕಂಪನಿಯಲ್ಲಿ ಹಾರುಭೂದಿಯನ್ನು ತೆಗೆದುಕೊಂಡು ಹೋಗಲು ಕೆಲವು ಶರತ್ತು / ನಿಯಮ ಮಾಡಿಕೊಂಡಿದ್ದು ಇರುತ್ತದೆ ಒಪ್ಪಂದ ಏನೆಂದರೆ ಸದರಿ ಹಾರು ಬೂದಿಯನ್ನು ರೈಲ್ವೆ  ವ್ಯಾಗನ್ ಗಳ ಮುಖಾಂತರ ಸಾಗಾಟ ಮಾಡಬೇಕು ಎಂದು ಇರುತ್ತದೆ, ಆದರೆ ದುರಾದೃಷ್ಟದ ಸಂಗತಿ ಏನಂದರೆ  ಕಾನೂನು ಕಟ್ಟಳೆಗಳನ್ನು ಮುರಿದು ರಸ್ತೆಯ ಮುಖಾಂತರ ಭಾರಿ ಬಲ್ಕರ್ ವಾಹನಗಳಿಂದ ಅಕ್ರಮ ಸಾಗಾಟ ಮುಂದುವರೆದಿದೆ, ಈ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಎ ಆರ್ ವಿ ಸಿಮೆಂಟ್ ಸೊಸೈಟಿ ಮತ್ತು ವೈ ಟಿ ಪಿ ಎಸ್ ಪ್ರಮುಖ ಅಧಿಕಾರಿಗಳು ಭಾಗಿಯಾಗುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ರೈತ ಸಂಘ ಆರೋಪಿಸಿದ್ದುಈ ಕುರಿತಂತೆ ದಿನಾಂಕ 19.07.2025  ರಂದು ಕೆಪಿಸಿಎಲ್ ಮುಖ್ಯ ಕಚೇರಿ ಬೆಂಗಳೂರು ಟೆಕ್ನಿಕಲ್ ಡೈರೆಕ್ಟರ್ ಅವರಿಗೆ ನ...
Image
ಅನಂತಪುರ ಬಳಿ ಖಾಸಗಿ ಬಸ್‌ಗೆ ಬೆಂಕಿ:                ಮಹಿಳೆಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ ಜಯ ಧ್ವಜ ನ್ಯೂಸ್ ರಾಯಚೂರು, ಅ.17- ಬೆಂಗಳೂರನಿಂದ ರಾಯಚೂರಿಗೆ ಬರುತ್ತಿದ್ದ ಖಾಸಗಿ ಬಸ್ ನಡುರಸ್ತೆಯಲ್ಲೇ ಬೆಂಕಿಗೆ ಆಹುತಿಯಾದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗರದಿನ್ನೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ನಡೆದಿದೆ. ಅದೃಷ್ಟವಶಾತ  ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆಂದು ಹೇಳಲಾಗುತ್ತಿದೆ. ಗ್ರೀನ್ ಲೈನ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಬಸ್‌ನ ಹಿಂಬದಿ ಟಯರ್ ಬ್ಲಾಸ್ಟ್ ಆಗಿ ಕ್ಷಣಾರ್ಧದಲ್ಲಿ ಬೆಂಕಿಯ ಕಿಡಿ ಚಿಮ್ಮಿದ ಪರಿಣಾಮ ಸಂಪೂರ್ಣ ಬಸ್ ಬೆಂಕಿಗೆ ಆಹುತಿಯಾಗಿದೆ. ಆದರೆ, ಬಸ್‌ನಲ್ಲಿದ್ದ 36 ಮಂದಿ ಪ್ರಯಾಣಿಕರು ಸಕಾಲದಲ್ಲಿ ಹೊರಬಂದ ಪರಿಣಾಮ ದೊಡ್ಡ ದುರಂತ ತಪ್ಪಿದೆ.         ಬಸ್‌ನ ಹಿಂಭಾಗದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ರಾಯಚೂರು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಬೆಣ್ಣೆ ಅವರು ತಕ್ಷಣ ಚಾಲಕನಿಗೆ ತಿಳಿಸಿದರೂ, ಚಾಲಕ ಅದನ್ನು ತಕ್ಷಣವಾಗಿ ಗಮನಿಸದೇ ಕೆಲವು ಅಂತರದವರೆಗೆ ಚಾಲನೆ ಮುಂದುವರಿಸಿದ್ದಾನೆ. ಬಳಿಕ ಬೆಂಕಿ ತೀವ್ರಗೊಳ್ಳುತ್ತಿದ್ದಂತೆಯೇ ನಿರ್ಮಲಾ ಬೆಣ್ಣೆ ಅವರ ಒತ್ತಾಯದ ಮೇರೆಗೆ ಬಸ್ ನಿಲ್ಲಿಸಲಾಯಿತು. ಪ್ರಯಾಣಿಕರು ತಕ್ಷಣ ಬಸ್‌ನಿಂದ ಇಳಿದುಕೊಂಡು ಪ್ರಾಣ ಉಳಿಸಿಕೊಂಡಿದ್ದಾರ...
Image
  ಕೃಷಿ ಸಂಸ್ಕರಣ ಘಟಕಗಳ ಬಳಕೆಯಿಂದ ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ಜಯ ಧ್ವಜ ನ್ಯೂಸ್ , ರಾಯಚೂರು , ಅ. 16 - ಕೃಷಿ ಸಂಸ್ಕರಣಾ ಘಟಕಗಳನ್ನು (ಅಗ್ರೋ ಪ್ರೊಸೆಸಿಂಗ್ ಸೆಂಟರ್) ಬಳಸಿಕೊಂಡಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಲಿದೆ. ರೈತರಿಗೆ ಮಾರುಕಟ್ಟೆ ಮತ್ತು ಸಂಪರ್ಕ ಸರಳವಾಗಲಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ರೈತರಿಗೆ ಸಲಹೆ ಮಾಡಿದರು. ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಅಕ್ಟೋಬರ್ 16ರಂದು ಭಾರತ ಸರ್ಕಾರ ಮತ್ತು ನಬಾರ್ಡ್ ಇವರ ಸಹಯೋಗದಲ್ಲಿ ನಡೆದ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಇಡೀ ರಾಯಚೂರು ಜಿಲ್ಲೆಯಾದ್ಯಂತ ಅಂದಾಜು 40 ಕೃಷಿ ಸಂಸ್ಕರಣ ಘಟಕಗಳ ಸ್ಥಾಪನೆ ಮಾಡಿ ಸಂಸ್ಕರಣೆಗೊಳಪಡಿಸುವಷ್ಟು ರಾಯಚೂರು ಜಿಲ್ಲೆಯೊಂದರಲ್ಲಿಯೇ ಪ್ರತಿ ವರ್ಷ ಅಂದಾಜು ಸಾವಿರಾರು ಮೆಟ್ರಿಕ್ ಟನ್ ರಷ್ಟು ತೊಗರಿ ಉತ್ಪನ್ನ ಬರುತ್ತದೆ ಎನ್ನುವ ಮಾಹಿತಿ ಇದೆ. ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ಮಧ್ಯೆದ ಈ ಭೂಮಿಯು ಅತ್ಯಂತ ಸಂಪದ್ಭರಿತವಾಗಿದೆ. ಈ ಪ್ರದೇಶದಲ್ಲಿ ಪ್ರತಿ ವರ್ಷ ಅಂದಾಜು 80,000 ಮೆಟ್ರಿಕ್ ಟನ್ ತೊಗರಿ ಉತ್ಪನ್ನ ಹಾಗೂ ಅಂದಾಜು 34,000 ಮೆಟ್ರಿಕ್ ಟನ್ ಕಡಲೆ ಉತ್ಪನ್ನ ಬರುತ್ತಿದ್ದು, ಯಾವುದೇ ಉತ್ಪನ್ನ ಇರಲಿ ರೈ...
Image
  ಕಾರ್ಮಿಕ ಇಲಾಖೆಯಿಂದ ರಾಜ್ಯದಲ್ಲಿ ವಿನೂತನ ಯೋಜನೆಗಳು ಜಾರಿ- ಸಚಿವ ಸಂತೋಷ ಲಾಡ್.   ಜಯ ಧ್ವಜ ನ್ಯೂಸ್ ,ರಾಯಚೂರು ,ಅಕ್ಟೋಬರ್ 15 - ಇ- ಕಾಮರ್ಸ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ಕೊಡುವ ಖಾಸಗಿ ಉದ್ಯೋಗದಾತರಿಗೆ ಮರುಪಾವತಿಯ ಆಶಾದೀಪ ಹಾಗೂ ಕರ್ನಾಟಕ ಸಿನೆಮಾ ಮತ್ತು ಸಾಂಸ್ಮೃತಿಕ‌ ಚಟುವಟಿಕೆಯಲ್ಲಿ ತೊಡಗಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸಲು ಹೊಸದಾಗಿ ಸಿನೇಮಾ ಕಾರ್ಮಿಕರ ಸುಂಕ ಅಧಿನಿಯಮ ಜಾರಿಯಂತಹ ವಿನೂತನ ಯೋಜನೆಗಳನ್ನು ರಾಜ್ಯ ಕಾರ್ಮಿಕ ಇಲಾಖೆಯು ರೂಪಿಸಿ ಇಡೀ ದೇಶವೇ ಕರ್ನಾಟಕ ರಾಜ್ಯದತ್ತ ನೋಡುವಂತಾಗಿದೆ ಎಂದು ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು. ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಅ.15ರಂದು ನಡೆದ ಜಿಲ್ಲೆಯ ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಣ್ಣ ಸಣ್ಣ ಕಸುಬು ಮಾಡುವ 101 ವರ್ಗದ ಕಾರ್ಮಿಕರು ದೇಶದ ದುಡಿಯುವ ವರ್ಗದಲ್ಲಿ ಶೇ.83ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರು ಅಸಂಘಟಿತ ವಲಯದಲ್ಲಿ ಇರುವುದಾಗಿ ಅಂದಾಜಿಸಿದ್ದು, ಶಾಸನಬದ್ದ ಸೌಲಭ್ಯಗಳಿಂದ ವಂಚಿತರಾಗಿರುವ ಸಂಭವ ಹೆಚ್ಚಾಗಿದೆ. ಇವರ ಜೀವನಮಟ್ಟ ಉತ್ತಮಪಡಿಸಿ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭ...
Image
  ಶ್ರೀ ಮಹರ್ಷೀ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ವಿಪ್ರ   ವಿದ್ಯಾರ್ಥಿಗಳ ಸಾಧನೆ: ಕೆಕೆಬಿಎಂಎಸ್  ನಿಂದ ಸನ್ಮಾನ                                                                                                                  ಜಯ ಧ್ವಜ ನ್ಯೂಸ್ ರಾಯಚೂರು,ಅ.15- ಶ್ರೀ ಮಹರ್ಷೀ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ವಿಪ್ರ  ವಿದ್ಯಾರ್ಥಿಗಳು ಸಾಧನೆ ಮೆರೆದ ಹಿನ್ನಲೆಯಲ್ಲಿ  ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ  ಜಿಲ್ಲಾ ಘಟಕದಿಂದ  ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.                                                      ವಿಪ್ರ ಸಮಾಜದ ವಿದ್ಯಾರ್ಥಿಗಳಾದ  ಅನುಷಾ ಕೀಲಿ ತಂದೆ ಪ್ರಸನ್ನ ಕೀಲಿ ಅವರು  ವಿಶ್...
Image
  ಜಿಲ್ಲಾ ಕಾಂಗ್ರೆಸ್ ಸಮಿತಿ ಹೆಚ್ಚುವರಿ ಪದಾಧಿಕಾರಿಗಳ ನೇಮಕ:                                                         ಜಯ ಧ್ವಜ ನ್ಯೂಸ್ ರಾಯಚೂರು, ಅ.15 - ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಮನವಿಯ ಮೇರೆಗೆ ರಾಯಚೂರು ಜಿಲ್ಲಾ ಕಾಂಗ್ರೆ ಸ್ ಸಮಿತಿಗೆ ಈ ಕೆಳಕಾಣಿಸಿದಂತೆ ಹೆಚ್ಚುವರಿ ಪದಾಧಿಕಾರಿಗಳ ಪಟ್ಟಿಯನ್ನು  ಕೆಪಿಸಿಸಿ ಅಧ್ಯಕ್ಷರಾದ  ಡಿ.ಕೆ. ಶಿವಕುಮಾರ್ ರವರು ಅನುಮೋದನೆ ನೀಡಿದ್ದಾರೆ.  ಉಪಾಧ್ಯ ಕ್ಷರಾಗಿ ಅಬ್ದುಲ್ ಕರೀಂ, ಜಿ.ಶಿವಮೂರ್ತಿ, ಅಂದಾನಪ್ಪ ಗುಂಡಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ದರೂರು ಬಸವರಾಜ ಪಾಟೀಲ, ರುದ್ರಪ್ಪ ಅಂಗಡಿ, ಈಶಪ್ಪ, ರಾಜಶೇಖರ ರಾಮಸ್ವಾಮಿ, ಶ್ರೀನಿವಾಸ ಶಿಂದೇ, ಕಾರ್ಯದರ್ಶಿಯಾಗಿ ಕೆ.ಇ.ಕುಮಾರ್, ರಾಮಕೃಷ್ಣ ನಾಯಕ್, ಸೈಯದ್ ದಸ್ತಗೀರ್,  ರಿಯಾಜ್ ಆಜಾದ್ ನಗರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಂಜಿನೇಯ್ಯ ಕೊಂಬಿನ್ ನೇಮಕ ವಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Image
  ಆರೆಸ್ಸೆಸ್ ಚಟುವಟಿಕೆ ನಿರ್ಬಂಧಕ್ಕೆ  ಪ್ರಿಯಾಂಕ ಖರ್ಗೆಯವರು ಸಿಎಂಗೆ  ಪತ್ರ ಬರೆದಿರುವುದು ಸಮಯೋಚಿತ, ಸಮಂಜಸ ನಡೆಯಾಗಿದೆ- ವಸಂತ ಕುಮಾರ್    ಜಯಧ್ವಜ ನ್ಯೂಸ್ , ರಾಯಚೂರು, ಅ.14- ಆರೆಸ್ಸೆಸ್ ಚಟುವಟಿಕೆ ನಿರ್ಬಂಧಕ್ಕೆ   ಪ್ರಿಯಾಂಕ ಖರ್ಗೆಯವರು ಸಿಎಂಗೆ  ಪತ್ರ ಬರೆದಿರುವದು ಸಮಯೋಚಿತ, ಸಮಂಜಸ ನಡೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಎ. ವಸಂತ ಕುಮಾರ್   ಹೇಳಿದರು. ಅವರಿಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆಯವರು ಮಾತನಾಡಿದ್ದು ಸರಿಯಿದೆ ಎಂದ ಅವರು  ಕಾಂಗ್ರೆಸ್ ಪಕ್ಷಕ್ಕೆ ಧಮ್ಮು ತಾಕತ್ತು ಇರುವುದರಿಂದಲೇ ದೇಶದಲ್ಲಿ ಮೂರು ಬಾರಿ ಆರೆಸ್ಸೆಸ್ ನಿಷೇಧಿಸಲಾಗಿತ್ತು. ಮೂರು ಬಾರಿಯೂ ಮುಚ್ಚಳಿಕೆ ಬರದು ಕೊಟ್ಟ ಆರೆಸ್ಸೆಸ್ ನಡೆಯಿಂದಲೇ ನಿಷೇಧ ನಿರ್ಬಂಧ ಸಡಿಸಲಾಗಿತ್ತು. ಬಿಜೆಪಿ ನಾಯಕರು ಸತ್ಯವನ್ನು ಅರಿತು ಮಾತನಾಡಬೇಕೆಂದ ಅವರು  ಹೇಳಿದರು. ಸಮಾಜ ಸ್ವಾಸ್ಥ ಹಾಳು ಮಾಡುತ್ತಿರುವದರಿಂದ ಸರ್ಕಾರ ಶಾಲೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಬಿಜೆಪಿ ನಾಯಕರುಗಳ ಆರೆಸ್ಸೆಸ್ ಸಮಾಜಿಕ ಸೇವಾ ಸಂಘಟನೆಯೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಬ್ರಿಟಿಷರ ಪರವಾಗ...
Image
    ನಗರದ ವಾರ್ಡ್ ನಂಬರ್ 17ರ ಗಾಜಗಾರ ಪೇಟೆಯ ಬಾಪನಯ್ಯ ದೊಡ್ಡಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಬ್ರಾಹ್ಮಣ ಸಮಾಜ ತೀರ್ವ ವಿರೋಧ ಜಯ ಧ್ವಜ ನ್ಯೂಸ್ ರಾಯಚೂರು, ಅ.13- ನಗರದ ವಾರ್ಡ್ ನಂಬರ್ 17ರ ಗಾಜಗಾರಪೇಟೆಯ ಬಾಪನಯ್ಯ ದೊಡ್ಡಿ ಎನ್ನುವ ಸ್ಥಳದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡು ಮಹಾನಗರ ಪಾಲಿಕೆ ವತಿಯಿಂದ ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನಿರ್ಮಾಣ ಮಾಡಲು ತಯಾರಿ ನಡೆಸಿದ್ದು ಅದನ್ನು ತಡೆಯಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಮಹಾಪೌರರಿಗೆ, ಆಯುಕ್ತರಿಗೆ, ಭೂ ಪಾಪನ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.  ಬೆಳಿಗ್ಗೆ ಬ್ರಾಹ್ಮಣ ಸಮಾಜ ಬಾಂಧವರು ಮನವಿ ಪತ್ರ ಸಲ್ಲಿಸಿ, ಅತ್ಯಂತ ಅವೈಜ್ಞಾನಿಕವಾಗಿ ಶೌಚಾಲಯ ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು ಕೂಡಲೆ ಕಾಮಗಾರಿಗೆ ಒಪ್ಪಿಗೆ ನೀಡದಂತೆ ಆಗ್ರಹಿಸಲಾಯಿತು.  ಸಾರ್ವಜನಿಕರಿಗೆ ತೊಂದರೆ ಆಗುತ್ತದೆ, ಸದರಿ ಶೌಚಾಲಯ ನಿರ್ಮಾಣ ಮಾಡುತ್ತಿರುವ ಸ್ಥಳದ ಸುತ್ತಮುತ್ತಲು ಪುರಾತನವಾದ ದೇವಸ್ಥಾನ ಹಾಗೂ ಉತ್ತರಾದಿ ಮಠ, ಪಂಚ ಯತಿಗಳ ಬೃಂದಾವನ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುತ್ತಿರುವಂತಹ ನೀರಿನ ಬಾವಿ ಜೊತೆಗೆ ಶೃಂಗೇರಿ ಶಾರದಾ ದೇವಿ ದೇವಸ್ಥಾನ, ಹಾಗೂ ಆನಂದೇಶ್ವರ ದೇವಸ್ಥಾನ ಪಕ್ಕದಲ್ಲಿ ಬಯಲು ಆಂಜನೇಯ ದೇವರ ದೇ...
Image
  ಮತಗಳ್ಳತನ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಹಿ ಸಂಗ್ರಹ ಹಾಗೂ ಪ್ರತಿಭಟನೆ.                                                                                                  ಜಯ ಧ್ವಜ ನ್ಯೂಸ್ , ರಾಯಚೂರು, ಅ.13- ಇಂದು  ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹ  ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ‌ಕುಮಾರ ಅವರು ಮತಗಳ್ಳತನ ಎನ್ನುವದು ಬಿಜೆಪಿಯ ನಿಜಬಣ್ಣವಾಗಿದೆ  ಎಂದು ಆರೋಪಿಸಿದರು. ನ್ಯಾಯಯುತ ಚುನಾವಣೆ ನಡೆದರೆ ಬಿಜೆಪಿ‌ ಪಕ್ಷ ಒಂದೂ ಚುನಾವಣೆ ಗೆಲ್ಲಲು ಸಾಧ್ಯವಾಗುವುದಿಲ್ಲ, ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತದಾರರನ್ನು ಹುಡುಕಿ ಹುಡುಕಿ ತೆಗೆದುಹಾಕುವದು ಮತ್ತು ತಮಗೆ ಬೇಕಾದ ಮತದಾರರನ್ನು ಅಕ್ರಮ ವಾಗಿ ಸೇರಿಸುವ ಮೂಲಕ ಚುನಾವಣೆ ಗೆಲ್ಲುವ ತಂತ್ರಗಾರಿಕೆ ಮಾಡುತ್ತಿರುವದು ದೇಶದ ಸಂವಿಧಾನಕ್ಕೆ ಮಾಡುವ ಅವಮ...
Image
  ಪತ್ರಕರ್ತರು ಮತ್ತು  ಪತ್ರಕರ್ತರ  ಮಕ್ಕಳಿಗಾಗಿ  ಚದುರಂಗ ತರಬೇತಿ ಕಾರ್ಯಾಗಾರ ಉದ್ಘಾಟನೆ:                          ಮಕ್ಕಳ ಬೌದ್ಧಿಕ ಶಕ್ತಿ ವೃದ್ದಿಗೆ ಚದುರಂಗ ಕಲಿಯುವುದು  ಅತ್ಯಗತ್ಯ-   ರವಿಕುಮಾರ                                                                            ಜಯ‌ ಧ್ವಜ ನ್ಯೂಸ್ , ರಾಯಚೂರು, ಅ.12 - ಮಕ್ಕಳ ಬೌದ್ಧಿಕ ಶಕ್ತಿ ವೃದ್ದಿಗೆ ಚದುರಂಗ ಕಲಿಯುವುದು ಅತ್ಯಂತ ಅಗತ್ಯವಾಗಿದೆ ಎಂದು ರೋಟರಿ ಕ್ಲಬ್ ರಾಯಚೂರಿನ ಮಾಜಿ ಅಧ್ಯಕ್ಷರಾದ ರವಿಕುಮಾರ ಗಣೇಕಲ್ ಹೇಳಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್, ರೋಟರಿ ಕ್ಲಬ್ ರಾಯಚೂರು ಹಾಗೂ ವೇದಾಂತ ಕಾಲೇಜ್ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರು ಮತ್ತು ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಚದುರಂಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ಸಮಾಜದಲ್ಲಿ ಬುದ್ದಿವಂತರೆಂಬ ಮಾತಿದ್ದು ಅವರ ಮಕ್ಕಳಿಗೆ ಬುದ್ದಿವಂತಿಕೆಗೆ ಚೆಸ್ ತರಬೇತಿ ನೀಡುತ್ತಿರು ವುದು...
Image
  ಗೊಂದಲ ನಿವಾರಿಸದಿದ್ದರೆ  ರಾಜ್ಯೋತ್ಸವದಂದು ಕಸಾಪ ಜಿಲ್ಲಾಧ್ಯಕ್ಷರ ವಿರುದ್ಧ ಪ್ರತಿಭಟನೆ - ಮೇಟಿಗೌಡ  ಜಯಧ್ವಜ ನ್ಯೂಸ್  ,ರಾಯಚೂರು,ಅ.11-  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ  ನಡೆಯುತ್ತಿರುವ ಗೊಂದಲ ಸರಿಪಡಿಸದಿದ್ದರೆ ಕನ್ನಡ ಭವನದ ಮುಂದೆ ಕನ್ನಡ ರಾಜ್ಯೋತ್ಸವದ ದಿನವಾದ ನ. 1 ರಂದು ವಿನೂತನವಾಗಿ ಜಿಲ್ಲಾಧ್ಯಕ್ಷರ ನಡೆ ವಿರುದ್ದ ಪ್ರತಿಭಟನೆ ಮಾಡಲಾಗುವುದು ಎಂದು ಬೆಳಕು ಟ್ರಸ್ಟ್ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ ಎಚ್ಚರಿಕೆ ನೀಡಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಯಚೂರು ಜಿಲ್ಲೆಯ ಕಸಾಪದಲ್ಲಿ ಗೊಂದಲ ನಡೆಯುತ್ತಿರುವ ವಿಚಾರವಾಗಿ ರಾಜ್ಯಾಧ್ಯಕ್ಷರಾದ ನಾಡೋಜ ಮಹೇಶ್ ಜೋಶಿ ಅವರ ಹತ್ತಿರ ಹೋಗಿ ಇಲ್ಲಿನ ಬೆಳವಣಿಗೆಗಳನ್ನು ತಿಳಿಸಿ ಗೊಂದಲ ನಿವಾರಣೆಗಾಗಿ ದೂರು ಸಲ್ಲಿಸಿ ಬಂದಿದ್ದು ರಾಜ್ಯಾಧ್ಯಕ್ಷರು ತಿಳಿಸಿದ ವಿಚಾರ ಕಳೆದ ಮುರುವರೇ ವರ್ಷದಿಂದ ಇದ್ದಾ ತಾಲೂಕು ಅಧ್ಯಕ್ಷರೇ ಈಗಲೂ ಅವರೇ ಅಧ್ಯಕ್ಷರು ಕಾರಣ ಅವರಿಗೆ ಆದೇಶ ನೀಡುವಾಗ ಕ ಸಾ ಪ ಬೈಲಾ ಪ್ರಕಾರ ರಾಜ್ಯಾಧ್ಯಕ್ಷರಾದ ನನ್ನ ಅನುಮೋದನೆ ಇದೆ....ಈಗ ನೂತನವಾಗಿ ಜಿಲ್ಲಾಧ್ಯಕ್ಷರ ಆದೇಶದ ಪ್ರಕಾರ,ಕಸಾಪ ಬೈಲಾ ಉಲ್ಲಂಘನೆ ಮಾಡಿ ರಾಜ್ಯಾಧ್ಯಕ್ಷರ ಅನುಮೋದನೆ ಇಲ್ಲದೆ ಜಿಲ್ಲೆಯಲ್ಲಿ ಕಸಾಪ ತಾಲೂಕು ಘಟಕಗಳನ್ನು ರಚನೆ ಮಾಡಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಇರಲಿಲ್ಲ ಎರಡು ಮೂರು ತಾಲೂಕಿನ ಅಧ್ಯಕ...
Image
  ಪತ್ರಕರ್ತರ  ಸಂಘದ ಚುನಾವಣೆಯ ಜಿಲ್ಲಾ ಚುನಾವಣಾಧಿಕಾರಿಯಾಗಿ ಮಲ್ಲಣ್ಣ ನೇಮಕ ಜಯ ಧ್ವಜ ನ್ಯೂಸ್,   ರಾಯಚೂರು ,ಅ.10- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-2028 ನೇ ಸಾಲಿನ ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ಜಿಲ್ಲಾ ಚುನಾವಣಾಧಿಕಾರಿಯಾಗಿ  ನಿವೃತ್ತ ಉಪ ತಹಸೀಲ್ದಾರ್ ಮಲ್ಲಣ್ಣ ಅವರನ್ನು ನೇಮಕ ಮಾಡಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎನ್ ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಚುನಾವಣೆ ನಿಯಮನಗಳನ್ವಯ ಮತ್ತು ಸಂಘದ ಬೈಲಾ ಪ್ರಕಾರ ಚುನಾವಣೆ ನಡೆಸಿಕೊಡಲು ಸೂಚಿಸಲಾಗಿದೆ. ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಬೈಲಾ ನಿಯಮಗಳ ಸಂಬoಧ ಹೆಚ್ಚಿನ ಮಾಹಿತಿ ಅಗತ್ಯ ಬಿದ್ದರೆ ರಾಜ್ಯ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಿ ಎಂದು ಆದೇಶ ಪತ್ರದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎನ್ ರವಿಕುಮಾರ್ ತಿಳಿಸಿದ್ದಾರೆ. ಮಲ್ಲಣ್ಣ ಅವರು ಜಿಲ್ಲಾ ಚುನಾವಣಾಧಿಕಾರಿಯಾಗಿ ಸತತ ಎರಡನೇ ಭಾರಿಗೆ ನೇಮಕವಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Image
  ರಾಯಚೂರು, ಬಳ್ಳಾರಿ, ಶಿವಮೊಗ್ಗ, ಬೀದರ್, ಬೆಳಗಾವಿಯಲ್ಲಿ ಬಾಹ್ಯ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆಗೆ ಚಿಂತನೆ- ಡಾ.ಶರಣಪ್ರಕಾಶ ಪಾಟೀಲ ಜಯ ಧ್ವಜ ನ್ಯೂಸ್  , ರಾಯಚೂರು ಅ.9 - ಕರ್ನಾಟಕದಾದ್ಯಂತ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಳ್ಳಾರಿ, ಶಿವಮೊಗ್ಗ, ರಾಯಚೂರು, ಬೀದರ್ ಮತ್ತು ಬೆಳಗಾವಿಯಲ್ಲಿ ಹೆಚ್ಚುವರಿ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರು ತಿಳಿಸಿದರು. ವಿಕಾಸ ಸೌಧದಲ್ಲಿ ಅ.09ರಂದು ನಡೆದ ಕಿದ್ವಾಯಿ ಆಸ್ಪತ್ರೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮುಂಬರುವ ತಿಂಗಳುಗಳಲ್ಲಿ ತುಮಕೂರು, ಮೈಸೂರು, ಮಂಡ್ಯ ಮತ್ತು ಕಾರವಾರದಲ್ಲಿ ಬಾಹ್ಯ ಕ್ಯಾನ್ಸರ್ ಕೇಂದ್ರಗಳನ್ನು (PCC ಗಳು) ಆರಂಭಿಸಲಾಗುತ್ತದೆ‌. ಪ್ರಸ್ತುತ 80 ಹಾಸಿಗೆಗಳನ್ನು ಹೊಂದಿರುವ ಕಲಬುರಗಿಯ ಪಿಸಿಸಿಯಲ್ಲಿ ಹೆಚ್ಚುವರಿಯಾಗಿ 210 ಹಾಸಿಗೆಗಳನ್ನು ಅಳವಡಿಸಲು ತೀರ್ಮಾನಿಸಲಾಗಿದ್ದು ಇದಕ್ಕಾಗಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. *ಹೆರಿಗೆ ರಜೆಯಲ್ಲಿರುವ ದಾದಿಯರಿಗೆ ಪರಿಹಾರ* 2021ರಿಂದಲೂ ಗುತ್ತಿಗೆ ಮತ್ತು ಹೊರ ಗುತ್ತಿಗೆ ದಾದಿಯರಿಗೆ ಪೂರ್ಣ ವೇತನ ನಿರಾಕರಿಸಲಾಗಿತ್ತು ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೂಡಲೇ ಕ್ರಮ ಕೈ...
Image
   ಜನಸಾಮಾನ್ಯರಿಗೂ ದಾಸ ದೀಕ್ಷೆ ನೀಡಿ ಭಕ್ತಿ ಬಿತ್ತಿದ ಶ್ರೀ ಗುರು ಜಗನ್ನಾಥ ದಾಸರು -ಮುರಳಿಧರ ಕುಲಕರ್ಣಿ    ಜಯ ಧ್ವಜ ನ್ಯೂಸ್ , ರಾಯಚೂರು,ಅ.9-   ಶ್ರೀ ಗುರು ಜಗನ್ನಾಥದಾಸರು ಜಾತಿ, ಮತ ,ಪಂಥ ಎನ್ನದೆ ಜನಸಾಮಾನ್ಯರಿಗೂ ಹಾಗೂ ದೀನ ದಲಿತರಿಗೆ  ಹರಿದಾಸ ದೀಕ್ಷೆ ನೀಡಿ  ಹರಿದಾಸ ಸಾಹಿತ್ಯದ ಪರಂಪರೆಯನ್ನು ಹಾಗೂ ಭಕ್ತಿ ಪಂಥವನ್ನು ಬೆಳೆಸಿದ ಶ್ರೇಷ್ಠ ಹರಿದಾಸ ರಾಗಿದ್ದಾರೆಂದು ಶೃತಿ ಸಾಹಿತ್ಯ ಮೇಳದ ಅಧ್ಯಕ್ಷರಾದ ಶ್ರೀ ಮುರಳಿಧರ ಕುಲಕರ್ಣಿ ಅವರು  ಹೇಳಿದರು.    ಅವರು  ಬುಧವಾರ ಸಂಜೆ  ರಾಯಚೂರಿನ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಜರುಗಿದ  ಶ್ರೀ ಗುರು ಜಗನ್ನಾಥ ದಾಸರ 107 ನೇ ಮಧ್ಯಾರಾದನೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ವನ್ನು ನೀಡಿದರು.       ಶ್ರೀ ಗುರು ಜಗನ್ನಾಥದಾಸರ ಆದವಾನಿಯಾ ಕೌತಾಳಮಂ  ಪ್ರದೇಶವು ದಾಸರ ಕಾರ್ಯಕ್ಷೇತ್ರವಾಗಿದ್ದು, ಇವರು ಹಲವಾರು ಸಂಕೀರ್ತನೆಗಳನ್ನು, ಉಗಾಭೋಗಗಳನ್ನು ಸುಳಾದಿಗಳನ್ನು ವಿಶೇಷವಾಗಿ  ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪರಮ ಭಕ್ತರಾದ ಇವರು ರಾಯರ ಮೇಲೆ  200ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಶ್ರೀ ವೆಂಕಟೇಶ ಸ್ತವನರಾಜ, ಲಕ್ಷ್ಮಿ ಹೃದಯ, ಪ್ರಹ್ಲಾದ ಚರಿತೆ, ಬ್ರಹ್ಮ ಸೂತ್ರ ಭಾಷ್ಯ ತತ್ವ ಪ್ರದೀಪೀಕಾ, ಶ್ರೀ ರಾಘವೇಂದ್ರ ವಿಜಯ ಮ...
Image
  ಖ್ಯಾತ ಹಿರಿಯ ವೈದ್ಯರಾದ ಡಾ.ರಾಘವೇಂದ್ರ ಕುಲಕರ್ಣಿ ರವರಿಗೆ ಸನ್ಮಾನ                                                  ಜಯಧ್ವಜ ನ್ಯೂಸ್,  ರಾಯಚೂರು, ಆ.8 -                                                                      ಖ್ಯಾತ ವೈದ್ಯರಾದ ಕುಲಕರಣಿ ಡಾಕ್ಟರ್ ಎಂದೇ ಪ್ರಸಿದ್ಧರಾದ ಶ್ರೀ ಡಾ. ರಾಘವೇಂದ್ರ ಕುಲಕರ್ಣಿ ರವರು  ರಾಯಚೂರಿಗೆ  ಬಹಳ ವರ್ಷಗಳ ನಂತರ ಆಗಮಿಸಿ   ಶ್ರೀ ಸತ್ಯನಾಥ ಕಾಲೋನಿಯ ಸತ್ಯನಾಥ ಸಭಾಭವನದಲ್ಲಿ ಸಮಸ್ತ ಬ್ರಾಹ್ಮಣ ಸಮಾಜದ ಹಿರಿಯರನ್ನು, ಮುಖಂಡರನ್ನು, ಯುವಕರನ್ನು ಭೇಟಿ ಮಾಡಿ ತಮ್ಮ ಹಿಂದಿನ ವೈದ್ಯ ವೃತ್ತಿ ಜೀವನ , ಸಮಾಜ ಸೇವೆಯನ್ನು  ತಮ್ಮ ವಿಚಾರಗಳನ್ನು ಹಂಚಿಕೊಂಡರು. ಡಾ. ರಾಘವೇಂದ್ರ ಕುಲಕರ್ಣಿ ರವರನ್ನುಇದೇ ವೇಳೆ ಹೃತ್ಪೂರ್ವಕವಾಗಿ  ಸನ್ಮಾನಿಸಲಾಯಿತು  .                  ...
Image
ಹೈದರಾಬಾದ್ ರಸ್ತೆಯಲ್ಲಿ ಗಂಟೆಗಟ್ಟಲೆ ವಾಹದಟ್ಟಣೆ  ಸವಾರರು ಪರದಾಟ                                                                                                                                                                                                                 ಜಯ ಧ್ವಜ ನ್ಯೂಸ್, ರಾಯಚೂರು, ಅ.8-                                                  ...