Posts

Showing posts from February, 2026
Image
    ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರಗಳ ಸಂಘದ ರಾಜ್ಯ ಅಧ್ಯಕ್ಷರಾದ  ಸಿ. ಬಸವಣ್ಣನವರಿಗೆ ಅಭಿನಂದನಾ ಸಮಾರಂಭ : ನೌಕರರ ಬೇಡಿಕೆ ಈಡೇರಿಸಲು ಕೋರಿಕೆ                                                         ಜಯಧ್ವಜ ನ್ಯೂಸ್  , ರಾಯಚೂರು , ಫೆ.28-  ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರಗಳ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಸಿ. ಬಸವಣ್ಣನವರು ಪ್ರಾದೇಶಿಕ ಕೇಂದ್ರರಾಯಚೂರು ವತಿಯಿಂದ ಫೆ.26 ರಂದು ಹಮ್ಮಿಕೊಂಡ ಅಭಿನಂದನಾ ಸಮಾರಂಭಕ್ಕೆ ರಾಯಚೂರು ವೃತ್ತಕ್ಕೆ ಆಗಮಿಸಿದಾಗ,ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ 659 ರಾಯಚೂರು ವತಿಯಿಂದ ಸ್ವಾಗತಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಶ್ರೀ ಸಿ. ಬಸವಣ್ಣ ಅಧ್ಯಕ್ಷರು ಇವರು ಕವಿಪ್ರನಿ ನೌಕರ ಸಂಘಗಳ ಒಕ್ಕೂಟದ ಕಾರ್ಯದರ್ಶಿಗಳಾಗಿದ್ದರಿಂದ ನೌಕರರ ಬೇಡಿಕೆಗಳಾದ, 7528 ನೌಕರರನ್ನು ಒಳಗೊಂಡಂತೆ ನಿಗಮದ ಎಲ್ಲಾ ನೌಕರರಿಗೆ ಹಳೆಯ ಪಿಂಚಣಿ (ಓಪಿಎಸ್) ಜಾರಿಗೆ ಮಾಡುವುದು, ಇಂದಿನ ವರ್ಕ್ ಲೋಡ್ ನಾರ್ಮ್ಸ ಪ್ರಕಾರ ಸಿ ಮತ್ತು ಡಿ ಗುಂಪಿನ ನೌಕರರ ಹುದ್ದೆಗಳನ್ನು ಮಂಜೂರು ಮಾಡಿಸುವುದು, ಮತ್ತು ಜೆಸ್ಕಾಂ ಕಂಪನಿಯ ಎಲ್ಲಾ ನೌಕರ ಮತ್ತು ಕುಟುಂಬದವರಿಗೆ ಕ್ಯಾಶ್ ಲೆಸ್ ಹೆಲ್ತ್ ಕಾರ...
Image
ನಗರದಲ್ಲಿ ಭಾರಿ ವಾಹನ ಸಂಚಾರದಿಂದ ಅಪಘಾತಗಳು ದಿನನಿತ್ಯ:                                              ರಿಂಗ್ ರೋಡ್ ನಿರ್ಮಾಣ ಅತ್ಯಗತ್ಯ                                                                                                                                      ಜಯ ಧ್ವಜ ನ್ಯೂಸ್, ರಾಯಚೂರು ,ಫೆ.28- ನಗರದಲ್ಲಿ ಭಾರಿ ವಾಹನಗಳ ಸಂಚಾರದಿಂದ ದಿನನಿತ್ಯ ಅಪಘಾತಗಳು ಸಂಭವಿಸಿ ಸಾವು ನೋವು ಆಗುತ್ತಿದ್ದು ಇದಕ್ಕೆ ಹೊಣೆ ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ನಗರದ ಬಸವೇಶ್ವರ ವೃತ್ತದಲ್ಲಿ ಇಂದು ಮಧ್ಯರಾತ್ರಿ ಲಾರಿ ಡಿಕ್ಕಿಯಾಗಿ ಮೂವರು ಮತ್ತು ಸ್ಟೇಶನ್ ರಸ್ತೆಯಲ್ಲಿ ಬಸ್ ಹರಿದು ಮತ್ತೋರ್ವ ಸಾವನ್ನಪ್ಪಿರುವ ದಾರುಣ ಘಟನೆ ಸಂಭವ...
Image
  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ  ಜಯ ಧ್ವಜ ನ್ಯೂಸ್ ,ರಾಯಚೂರು,ಫೆ .27- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೬-೨೭ನೇ ಸಾಲಿನ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯತ್ವ ಪಡೆಯಲು ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ ರಾಯಚೂರು ಜಿಲ್ಲಾ ಸಮಿತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಜಿಲ್ಲಾಧ್ಯಕ್ಷ ಆರ್.ಗುರುನಾಥ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾ.೧ರಿಂದ ಆಯಾ ತಾಲೂಕಿನ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಬೇಕು. ರಾಯಚೂರು ನಗರ ವ್ಯಾಪ್ತಿಯ ಪತ್ರಕರ್ತರು ನಗರದ ಪತ್ರಿಕಾ ಭವನದಲ್ಲಿ ಅರ್ಜಿಗಳನ್ನು ಪಡೆಯಬಹುದು. ಅರ್ಜಿ ನವೀಕರಣ ಅಥವ ನೂತನ ಸದಸ್ಯತ್ವ ಪಡೆಯಲು ಹಿಂದಿನ ವರ್ಷದ ಸಂಘದ ಕಾರ್ಡ್, ಸಂಪಾದಕರು ಅಥವ ಮಾಧ್ಯಮ ಸಂಸ್ಥೆಗಳು ನೀಡಿದ ಆದೇಶ ಪ್ರತಿ, ಆಧಾರ್ ಕಾರ್ಡ್, ಎರಡು ಭಾವಚಿತ್ರ ಮತ್ತು ೫೧೦ ರೂ. ಶುಲ್ಕದೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಲು ಮಾ.೮ ಕೊನೆ ದಿನವಾಗಿದೆ ಎಂದು ತಿಳಿಸಿದ್ದಾರೆ. ತಾಲೂಕು ಮಟ್ಟದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಆಯಾ ತಾಲೂಕು ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪದಾಧಿಕಾರಿಗಳು ಪರಾಮರ್ಶೆ ನಡೆಸಿ ಮಾ.೧೦ರೊಳಗೆ ಅರ್ಜಿ ಮತ್ತು ಶುಲ್ಕದ ಮೊತ್ತವನ್ನು ಜಿಲ್ಲಾ ಸಮಿತಿಗೆ ರವಾನಿಸಬೇಕು. ಹೊಸದಾಗಿ ಅರ್ಜಿ ಸಲ್ಲಿಸುವವರು ...
Image
  ವಾಲ್ಮೀಕಿ ವಿವಿಯಲ್ಲಿ ಸೂಕ್ಷ್ಮ  ಜೀವಶಾಸ್ತ್ರ, ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ವಿಭಾಗಗಳ ವತಿಯಿಂದ ವಿಶೇಷ ಉಪನ್ಯಾಸ:                                                      ಸುಸ್ಥಿರ ಭವಿಷ್ಯಕ್ಕಾಗಿ ಜೀವವೈವಿಧ್ಯತೆ ಸಂರಕ್ಷಣೆ ಅತ್ಯಗತ್ಯ : ಮಂಜುನಾಥ ಎಸ್ ನಾಯಕ ಜಯಧ್ವಜ ನ್ಯೂಸ್ ,ರಾಯಚೂರು,ಫೆ.೨೬- ಸುಸ್ಥಿರ ಭವಿಷ್ಯಕ್ಕಾಗಿ ಅರಣ್ಯ ಜೀವವೈವಿಧ್ಯತೆ ಸಂಶೋಧನೆ ಮತ್ತು ಸಂರಕ್ಷಣೆಯು ಪರಿಸರ ಸಮತೋಲನ, ಮತ್ತು ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಸ್ಥಳೀಯ ಸಮುದಾಯಗಳ ಸೂಕ್ಷö್ಮಜೀವಿಗಳು, ಕೀಟಗಳು, ಔಷಧೀಯ ಸಸ್ಯಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜೀವವೈವಿಧ್ಯತೆಯ ಸಂಶೋಧನೆಕಾರರಾದ ಮಂಜುನಾಥ ಎಸ್ ನಾಯಕ ಅವರು ಹೇಳಿದರು.  ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೂಕ್ಷö್ಮಜೀವಶಾಸ್ತç, ಸಸ್ಯಶಾಸ್ತç ಹಾಗೂ ಪ್ರಾಣಿಶಾಸ್ತç ವಿಭಾಗಗಳು ಇಂದು ಆಯೋಜಿಸಿದ್ದ “ಫಾರೆಸ್ಟ್ ಬಯೋಡೈವರ್‌ಸಿಟಿ : ರಿಸರ್ಚ್ ಆ್ಯಂಡ್ ಕನಜರ್‌ವೇಷನ್  ಫಾರ್ ಎ ಸಸ್ಟೆನೇಬಲ್ ಫ್ಯುಚರ್” ವಿಷಯ ಕುರಿತು ಮಾತನಾಡಿದ ಅವರು, ಅವರ ಸಂಶೋಧನೆಯ ಪ್ರಮುಖ ಸಾಧನೆ ಮತ್ತು ಸಂಶೋಧನೆಯಲ್ಲಿ ಅನುಭವಿಸಿದ ವಿಚಾರವನ್ನು ವ್ಯಕ್...
Image
  ಮಂತ್ರಾಲಯದಲ್ಲಿ ಶ್ರೀ ಗುರುವೈಭವೋತ್ಸವ ಸಂಪನ್ನ:                          ಕಾಂತಾರ  ಖ್ಯಾತಿಯ  ನಟ ರಿಷಬ್ ಶೆಟ್ಟಿ, ರಾಜ್ಯಸಭಾ ಸದಸ್ಯ ಜಗ್ಗೇಶ್ ಸೇರಿದಂತೆ ಹಲವರಿಗೆ ಸನ್ಮಾನ.                                                                                                                                         ಜಯ ಧ್ವಜ ನ್ಯೂಸ್, ರಾಯಚೂರು, ಫೆ.24 - ಮಂತ್ರಾಲಯದಲ್ಲಿ ಒಂದು ವಾರದಿಂದ ನಡೆದ ಶ್ರೀ ಗುರುವೈಭವೋತ್ಸವ ಸಂಪನ್ನಗೊಂಡಿದೆ. ಇಂದು ಸಂಜೆ ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ, ರಾಜ್ಯ ಸಭಾ ಸದಸ್ಯ ಹಾಗೂ ನಟ ಜಗ್ಗೇಶ್, ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಸೇರಿದಂತೆ ಅನೇಕ ಗಣ್ಯರಿಗೆ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಅನುಗ್ರಹ ಸನ್ಮಾನ ಗೈ...
Image
  ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 431ನೇ ವರ್ಧಂತಿ ಉತ್ಸವ :                                        ಮಹಾಭಿಷೇಕ, ನವರತ್ನ ರಥೋತ್ಸವ, ನಾದಹಾರ ಸಮರ್ಪಣೆ.                                                                                                                                                           ಜಯ ಧ್ವಜ ನ್ಯೂಸ್, ರಾಯಚೂರು,ಫೆ.24-             ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 431ನೇ ವರ್ಧಂತಿ ಉತ್ಸವ ಅಂಗವಾಗಿ ಬೆಳಿಗ್ಗೆ  ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ ರಾಯರ...
Image
  ಒಳ ಮೀಸಲಾತಿ ಜಾರಿಯಾಗುವವರೆಗೂ ಹುದ್ದೆಗಳ ನೇಮಕಾತಿ ಮಾಡದಂತೆ ಮಾದಿಗ ದಂಡೋರಾ ಮನವಿ.                                               ಜಯ ಧ್ವಜ ನ್ಯೂಸ್, ರಾಯಚೂರು,ಫೆ.24-                                                                                                                  ಒಳ ಮೀಸಲಾತಿ ಜಾರಿಯಾಗುವವರೆಗೂ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಹುದ್ದೆಗಳ ನೇಮಕಾತಿ ಮಾಡದಂತೆ ಮಾದಿಗ ದಂಡೋರಾ ಮನವಿ ಮಾಡಿದೆ. ರಾಜ್ಯ ಸರ್ಕಾರ ಒಳ ಮೀಸಲಾತಿ ಅನ್ವಯ ಈಗಾಗಲೆ ಮೀಸಲಾತಿ ಪ್ರಕಟಿಸಿದೆ ಆದರೆ ಅಲೆಮಾರಿ ಮತ್ತು ಆದಿ ದ್ರಾವಿಡ, ಆದಿ ಕರ್ನಾಟಕ ಮುಂತಾದ ಜಾತಿಗಳ ಮತ್ತು 101 ಜಾತಿಗಳಿಗೆ ಬಹುದೊಡ್ಡ ಆನ್ಯಾಯವಾಗಿದ್ದು ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು ಆದ್ದರಿಂದ ಒಳ ಮೀಸಲಾತಿ ಗೊಂದಲ ...
Image
  ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲಿ- ಡಾ.ಬಾಬುರಾವ್ ಜಯ ಧ್ವಜ ನ್ಯೂಸ್ , ರಾಯಚೂರು,ಫೆ.24- ಪ್ರಸಕ್ತ  2026-27ನೇ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಮಾಜ ಸೇವಕ ಡಾ‌.ಬಾಬುರಾವ್ ಮನವಿ ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಕೆಕೆಆರ್ ಡಿಬಿಗೆ 5000 ಕೋಟಿ ರೂ.ಅನುದಾನ ಕೊಡುವುದರ ಜೊತೆಗೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ವಿನಂತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದುಳಿದಿರುವ ರಾಯಚೂರು ಜಿಲ್ಲೆಯ ರಾಯಚೂರು ನಗರಕ್ಕೆ ತೀರಾ ಅಗತ್ಯವಾಗಿ ಬೇಕಾಗಿರುವ ರಿಂಗ್ ರೋಡ್ ಗೆ ಅನುದಾನ ಒದಗಿಸಬೇಕು. ವಿಮಾನ ನಿಲ್ದಾಣ ಪೂರ್ಣಗೊಳಿಸಲು ಅಗತ್ಯ ಅನುದಾನ ಒದಗಿಸಬೇಕು. ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ಕೊಡಬೇಕು ಎಂದು ಅವರು ಕೋರಿದ್ದಾರೆ.
Image
  ಫ್ಲೋರಿಡಾ ಯೋಗ ಸಂಸ್ಕೃತ ವಿವಿಯಿಂದ ಶ್ರೀ ಸುಬುಧೇಂದ್ರತೀರ್ಥರಿಗೆ ಪ್ರಶಸ್ತಿ:                          ರಾಜಾ.ಎಸ್  ಗಿರಿಯಾಚಾರ್ , ರಾಘವೇಂದ್ರ ರಾಜಕುಮಾರ್, ಶ್ರೀ ಷಾನಂದರವರಿಗೆ ಡಾಕ್ಟರೇಟ್ ಪದವಿ ಪ್ರದಾನ.                                                                                                                      ಜಯ ಧ್ವಜ ನ್ಯೂಸ್, ರಾಯಚೂರು, ಫೆ.24- ಮಂತ್ರಾಲಯದಲ್ಲಿ ಶ್ರೀ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ಅಮೇರಿಕಾದ ಫ್ಲೋರಿಡಾ ಯೋಗ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪ್ರಶಸ್ತಿ ಹಾಗೂ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ ನೆರವೇರಿತು. ಸಾಯಿಂಕಾಲ ಯೋಗೀಂದ್ರ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ವ್ಯಾಸ ದಾಸ ಯೋಗಿ ಪ್ರಶಸ್ತಿ ಪ್ರದಾನ ಹಾಗೂ ರಾಜಾ.ಎಸ್.ಗಿರಿಯ...
Image
  ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ   ಜಯ ಧ್ವಜ ನ್ಯೂಸ್, ರಾಯಚೂರು ,ಫೆ.23-  ಭಾರತೀಯ ವೈದ್ಯಕೀಯ ಮಹಿಳಾ ಸಂಘ, ಐಎಮ್ ಎ ರಾಯಚೂರು ಹಾಗೂ ಬ್ರಹ್ಮಕುಮಾರೀಸ್ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ   ಗಿಡಕ್ಕೆ ನೀರು ಎರೆಯುವುದರ ಮೂಲಕ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.  ವೇದಿಕೆ ಮೇಲೆ ಸರ್ಕಾರಿ ಮಹಿಳಾ ನೌಕರರ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಯಶೋಧ, ಜಮಾತೆ ಇಸ್ಲಾಂ ಮಹಿಳಾ ಘಟಕದ ಪದಾಧಿಕಾರಿಗಳಾದ ಶ್ರೀಮತಿ ಶಹನಾಜ್, ಭಾರತೀಯ ವೈದ್ಯಕೀಯ ಸಂಘ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ಶ್ರೀಲತಾ ಕಾಮತ್, ಉಪಾಧ್ಯಕ್ಷರಾದ ಡಾ. ಪ್ರಿಯ ಬಾಲ್ಕಿ ಜಂಟಿ ಕಾರ್ಯದರ್ಶಿಗಳಾದ ಡಾ. ಶಿಲ್ಪ ನಾಗಲಾಪುರ್ ಇವರುಗಳು ಭಾಗವಹಿಸಿದ್ದರು. ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಯೋಗಿನಿ ಬಿ. ಕೆ. ಸ್ಮಿತಾ ಅಕ್ಕನವರು ವಹಿಸಿದ್ದರು.               ಶ್ರೀಮತಿ ವಿಜಯಲಕ್ಷ್ಮಿ, ಸರಕಾರಿ ಮಹಿಳಾ ನೌಕರರ ಒಕ್ಕೂಟದ ಜಿಲ್ಲಾ ಅಧ್ಯಕ್ಷರು ಅವರು ಮಾತನಾಡುತ್ತಾ ಸರ್ಕಾರಿ ಮಹಿಳಾ ನೌಕರರಿಗೆ ಅನೇಕ ಒತ್ತಡಗಳು ಇವುಗಳಿಂದ ಅನೇಕ ಕಾಯಿಲೆಗಳು ಬರುತ್ತವೆ ಇ...
Image
  ತಳವಾರರಿಗೆ ಪರಿಶಿಷ್ಟ ಪಂಗಡದ ಸೌಲಭ್ಯದ ಕುರಿತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಹೇಳಿಕೆಗೆ ರಘುವೀರ ನಾಯಕ ತೀವ್ರ ಖಂಡನೆ.   ಜಯ ಧ್ವಜ ನ್ಯೂಸ್  , ರಾಯಚೂರು ,ಫೆ.23-  ವಿಧಾನ ಪರಿಷತ್ ಸದಸ್ಯರು ಮತ್ತು ವಿಧಾನ ಪರಿಷತ್ ಮುಖ್ಯ ಸಚೇತಕರಾದ ಎನ್.ರವಿಕುಮಾರರವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮೂಲಕ ತಳವಾರರಿಗೆ ಪರಿಶಿಷ್ಠ ಪಂಗಡದ ಸೌಲಭ್ಯವನ್ನು ಮುಂದುವರೆಸಬೇಕು ಮತ್ತು ವಾಲ್ಮೀಕಿ ನಾಯಕ ಸಮುದಾಯದ ಹೋರಾಟಕ್ಕೆ ಸರಕಾರ ಮಣಿಯಬಾರದು ಎಂದು ಹೇಳಿಕೆ ನೀಡಿರುವುದನ್ನು  ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘದ ವಿಭಾಗೀಯ ಕಾರ್ಯದರ್ಶಿಗಳಾದ ಎನ್. ರಘುವೀರ ನಾಯಕ ಖಂಡಿಸಿದ್ದಾರೆ.  ತಳವಾರರಿಗೆ ಎಸ್.ಟಿ ಪ್ರಮಾಣ ಪತ್ರಗಳನ್ನು ನೀಡಬೇಕು ಎಂದು ಹೇಳುತ್ತಿದ್ದಾರೆ ಆದರೆ ಯಾವ ಸಮುದಾಯದ ತಳವಾರರು ಎಂದು ಸ್ಪಷ್ಟಪಡಿಸಬೇಕು. ಎಲ್ಲಾ ಜಾತಿಗಳಲ್ಲೂ ತಳವಾರ ಸಮುದಾಯದವರು ಇದ್ದಾರೆ. ಕೇಂದ್ರ ಸರಕಾರದ ಗೆಜೆಟನ್ನು ಒಮ್ಮೆ ಸರಿಯಾಗಿ ಓದಿ ಅರ್ಥೈಸಿಕೊಳ್ಳಬೇಕು. ನಾಯಕ ಸಮುದಾಯದ ತಳವಾರರಿಗೆ ಮಾತ್ರ ಎಸ್,ಟಿ ಪಟ್ಟಿಗೆ ಸೇರಿದ್ದಾರೆ ಇತರ ಸಮುದಾಯದ ತಳವಾರರು ಅಲ್ಲ ಎಂಬುದು ಮೊದಲು ಮನನ ಮಾಡಿಕೋಳ್ಳಬೇಕು. ತಾವು ಹೇಳುತ್ತಿರುವ ತಳವಾರರು ಯಾರು ಎಂದು ಮೊದಲು ಸ್ಪಷ್ಟಪಡಿಸಬೇಕು.  ಇಂತಹ ತಪ್ಪು ಹೇಳಿಕೆಗಳನ್ನು ನೀಡುವ ಮೂಲಕ ಸಮುದಾಯಗಳ ನಡುವೆ ಸಂಘರ್ಷಕ್ಕೆ ಕಾರಣರಾಗುತ್ತಿದ್ದಾರೆ. ಪ್ರತಿ ಸಮುದಾಯಗಳಲ್ಲ...
Image
  ಯರಗೇರ ಶಾದಿ ಮಹಲ್ ಗಾಗಿ ಒಂದು ಕೋಟಿ ರೂ. ಮಂಜೂರು: ಅಲ್ಪಸಂಖ್ಯಾತರ ಮುಖಂಡರಿಂದ ಶಾಸಕರಿಗೆ ಸನ್ಮಾನ ಜಯ ಧ್ವಜ ನ್ಯೂಸ್ ,ರಾಯಚೂರು,ಫೆ.21- ಜಿಲ್ಲೆಯ ರಾಯಚೂರು ತಾಲೂಕಿನ ಯರಗೇರಾ ಗ್ರಾಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ಸುಮಾರು ಒಂದು ಕೋಟಿ ರೂಪಾಯಿ ಹಣವನ್ನು ಶಾದಿ ಮಹಲ್ ಸಲುವಾಗಿ ಮಂಜೂರು ಮಾಡಲು ಗ್ರಾಮೀಣ ಜನಪ್ರಿಯ ಶಾಸಕರು ಮತ್ತು ಅಧ್ಯಕ್ಷರು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಬಸನಗೌಡ ದದಲ್  ಯಶಸ್ವಿಯಾಗಿರುತ್ತಾರೆ  . ಈ ವಿಷಯವನ್ನು ತಿಳಿದು ಯರಗೇರಾ ಮತ್ತು ಸುತ್ತಮುತ್ತಲಿನ ಭಾಗದ ಅಲ್ಪಸಂಖ್ಯಾತರ ಮುಖಂಡರಿಗೆ ಸಂತಸದ ವಿಷಯವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಭೂಮಿ ಪೂಜೆ ಮಾಡುವ ಬಗ್ಗೆ ಈಗಾಗಲೇ ಆಶ್ವಾಸನೆ ನೀಡಿರುತ್ತಾರೆ. ಡಿಸೆಂಬರ್ ತಿಂಗಳಲ್ಲಿ ಯರಗೇರ ಗ್ರಾಮಕ್ಕೆ ಹಜರತ್ ಬಡೇಸಾಹೇಬ್ ಉರುಸಿಗೆ ಆಗಮಿಸಿದ ವೇಳೆ  ಕೊಟ್ಟ ಮಾತಿಗೆ ತಕ್ಕಂತೆ ಕೇವಲ ಒಂದು ತಿಂಗಳಲ್ಲಿ ಹಣ ಮಂಜೂರು ಮಾಡಿಸಿದ  ಶಾಸಕರು ಎಂದು ಮುಖಂಡರು ಶ್ಲಾಘಿಸಿದರು . ಈ ಹಿನ್ನೆಲೆಯಲ್ಲಿ ಯರಗೇರಾ ಗ್ರಾಮದ ಅಲ್ಪಸಂಖ್ಯಾತ ಮುಖಂಡರು ಗ್ರಾಮೀಣ ಶಾಸಕರ ಕಚೇರಿಯಲ್ಲಿ ಶಾಸಕರಿಗೆ ಸನ್ಮಾನಿಸಿ ಸಿಹಿ ತಿನ್ನಿಸುವ ಮೂಲಕ ಅಭಿನಂದಿಸಿ ಗೌರವಿಸಿದರು.  ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರು ಗ್ರಾಮಸ್ಥರು ಯುವ ನಾಯಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Image
  ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಿಂದ  ನಗರ ಸಂಚಾರ:          ಕಾಮಗಾರಿಗಳ ಪರಿಶೀಲನೆ ಜಯ ಧ್ವಜ ನ್ಯೂಸ್ ,ರಾಯಚೂರು ಫೆ. 21 - ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮಹೋಪಾತ್ರ ಅವರು ಇಂದು  ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಪ್ರಗತಿಯಲ್ಲಿರುವ ಮತ್ತು ಪ್ರಸ್ತಾವಿತ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಅವರು ಚಾಲ್ತಿಯಲ್ಲಿರುವ ಯೋಜನೆಗಳನ್ನು ವೇಗಗೊಳಿಸುವುದು ಹಾಗೂ ಭವಿಷ್ಯದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಕುರಿತು ಅಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಿ ಅಗತ್ಯ ಮಾರ್ಗದರ್ಶನ ನೀಡಿದರು. ಆಯುಕ್ತರು ಮೊದಲು ಮಾವಿನಕೆರೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಸಾರ್ವಜನಿಕ ಸ್ಥಳಗಳಲ್ಲಿನ ಅತಿಕ್ರಮಣಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದರ ಜೊತೆಗೆ ಮಾವಿನಕೆರೆಯ ಉದ್ಯಾನವನ ಅಭಿವೃದ್ಧಿ ಕಾಮಗಾರಿಯನ್ನು ನಿಗದಿತ ಗುಣಮಟ್ಟದೊಂದಿಗೆ ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬಳಿಕ ಇಂದಿರಾ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಹೈಟೆಕ್ ಸಾರ್ವಜನಿಕ ಶೌಚಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಈ ಸೌಲಭ್ಯವನ್ನು ತ್ವರಿತವಾಗಿ ಪ್ರಾರಂಭಿಸುವ ಮೂಲಕ ಸ್ಥಳೀಯ ನಿವಾಸಿಗಳಿಗ...
Image
  ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆ:                                                                    ರೈಲ್ವೇ , ರಿಂಗ್ ರೋಡ್, ಜೆಜೆಮ್, ಶೌಚಾಲಯ ನಿರ್ಮಾಣ ಮುಂತಾದವುಗಳ ಅನುಷ್ಟಾನ ವಿಳಂಬ ಸಭೆಯಲ್ಲಿ ಅಸಮಾಧಾನ.                                                                     ಜಯ ಧ್ವಜ ನ್ಯೂಸ್ , ರಾಯಚೂರು , ಫೆ.21- ಜಿಲ್ಲೆಯಲ್ಲಿ ರೈಲ್ವೆ, ರಿಂಗ್ ರೋಡ್ , ಜೆಜೆಎಂ , ಶೌಚಾಲಯ ನಿರ್ಮಾಣ ಮುಂತಾದ ಕಾಮಗಾರಿಗಳ ಭೌತಿಕ ಪ್ರಗತಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಸಂಬಂಧಿಸಿದ ಅಧಿಕಾರಿಗಳ ಬಗ್ಗೆ ಸಭೆಯಲ್ಲಿ ಸಚಿವರು, ಸಂಸದರು, ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.    ಬೆಳಿಗ್ಗೆ ನಗರದ ಜಿ.ಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯಲ್ಲಿ ಕೇಂದ್ರ ಸರ್ಕಾರ ಪು...
Image
  ಬಿಜೆಪಿ ಯುವ ಮೋರ್ಚಾದಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ:                                                ರಾಹುಲ್ ಗಾಂಧಿ ಪ್ರತಿಕೃತಿ ದಹಿಸಿ ಬಿಜೆಪಿ ಪ್ರತಿಭಟನೆ: ಜಯ ಧ್ವಜ ನ್ಯೂಸ್ , ರಾಯಚೂರು, ಫೆ.21- ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ನಗರದ ಶಾಸಕರಾದ ಡಾ. ಶಿವರಾಜ ಪಾಟೀಲ ಮತ್ತು  ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ  ವಿನಾಯಕ ರಾವ್ ನೇತೃತ್ವದಲ್ಲಿ ರಾಹುಲ್ ಗಾಂಧಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ ನಡೆಯಿತು. ವಿಶ್ವ  ಎಐ ಸಮಿಟ್ ನಲ್ಲಿ ಯುವ ಕಾಂಗ್ರೆಸ್ ನಡೆಸಿದ ಧಾoಧಲೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯ ಮುತ್ತಿಗೆ ನಡೆಸುವುದರ ಮೂಲಕ   ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲಾಯಿತು.   ವಿಶ್ವ  ಎಐ ಸಮಿಟ್ ನಲ್ಲಿ ನಡೆಸಿದ ಧಾoಧಲೇ ವಿರುದ್ಧ ಘೋಷಣೆ ಕೂಗಿ ಜಗತ್ತಿನ ಮುಂದೆ ಭಾರತದ ಮಾನ ಕಳೆದ ಹೀನ ಕೃತ್ಯವನ್ನು ಖಂಡಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಸಂತೋಷ ರಾಜಗುರು, ರವೀಂದ್ರ ಜಲ್ದಾರ , ಜಿಲ್ಲಾ ವಕ್ತಾರರಾದ ಸಿದ್ದನಗೌಡ ನೆಲಹಾಳ ರಾಘವೇಂದ್ರ ಉಟ್ಕೂರು, ಬಿಜೆಪಿ ನಗರ ಅಧ್ಯಕ್ಷರು ಎಸ್.ಸಿ ಮೊರ್ಚಾ ಜಿಲ...
Image
  ಸಾರ್ವಜನಿಕ ಸ್ಥಳಗಳಲ್ಲಿ ಬಂದೂಕು ಪ್ರದರ್ಶನ ಪ್ರಕರಣಗಳು ವೈರಲ್   :      ಜಿಲ್ಲೆಯಲ್ಲಿ ಅಧಿಕೃತ ಬಂದೂಕು ಲೈಸೆನ್ಸ್ ದಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ ಪೊಲೀಸ್ ಇಲಾಖೆ.                                                                                                   ಜಯ ಧ್ವಜ ನ್ಯೂಸ್, ರಾಯಚೂರು, ಫೆ.20- ಸಾರ್ವಜನಿಕ ಸ್ಥಳಗಳಲ್ಲಿ ಬಂದೂಕು ಪ್ರದರ್ಶನ ಪ್ರಕರಣಗಳು ವೈರಲ್ ಆಗುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತು ಕೊಂಡಿದ್ದು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಧಿಕೃತ ಬಂದೂಕು ಲೈಸೆನ್ಸ್ ದಾರರ ಸಭೆ ನಡೆಸಿ ಕಟ್ಟು ನಿಟ್ಟಿನ ಸೂಚನೆ ನೀಡಿದೆ.       ಆಯಾ ಠಾಣಾ ವ್ಯಾಪ್ತಿಯಲ್ಲಿರುವ   ಗನ್  ಲೈಸೆನ್ಸ್ ದಾರರ ಸಭೆ ನಡೆಸಿ ತಿಳಿವಳಿಕೆ ನೀಡಿ ಅನಧಿಕೃತ ವ್ಯಕ್ತಿಗಳ ಕೈಯಲ್ಲಿ ಗನ್ ನೀಡುವುದು, ಪ್ರದರ್ಶನ ಮಾಡುವುದು ,ಉಪಯೋಗಿಸುವುದು ಶಸ್ತ್ರಾಸ್ತ್ರ ಕಾಯ್ದೆ  ಉಲ್ಲಂಘನೆಯಾಗಿದ್ದು ಗನ್ ಲೈಸೆನ್ಸ್ ದಾರರ...
Image
  ಎಲ್.ಬಿ.ಎಸ್. ನಗರದಲ್ಲಿ  399ನೇ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅದ್ದೂರಿ ಆಚರಣೆ ಜಯ ಧ್ವಜ ನ್ಯೂಸ್ , ರಾಯಚೂರು, ಫೆ.20- ನಗರದ ಎಲ್.ಬಿ.ಎಸ್. ನಗರದಲ್ಲಿ ಗುರುವಾರದಂದು 399ನೇ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅತ್ಯಂತ ವಿಜೃಂಭಣೆಯಿಂದ, ಭಕ್ತಿ ಮತ್ತು ದೇಶಭಕ್ತಿಯ ಉತ್ಸಾಹದೊಂದಿಗೆ ಆಚರಿಸಲಾಯಿತು. ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿ, ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಭವ್ಯ ಶೋಭಾಯಾತ್ರೆ ಆಯೋಜಿಸಲಾಗಿತ್ತು ಜಯಘೋಷಗಳ ಮಧ್ಯೆ ಹಾಗೂ “ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ” ಎಂಬ ಘೋಷಣೆಗಳೊಂದಿಗೆ ಖಾಸ್ ಬಾವಿ ಹತ್ತಿರ ಇರುವ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದವರೆಗೆ ಸಾಗಿತು. ಅಲ್ಲಿ ಮಹಾರಾಜರ ಪ್ರತಿಮೆಗೆ ಗೌರವಪೂರ್ವಕವಾಗಿ ಮಾಲಾರ್ಪಣೆ ಮಾಡಲಾಗಿತು. ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು ಮತ್ತು ಸಮಾಜದ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿವಾಜಿ ಮಹಾರಾಜರ ಆದರ್ಶಗಳು, ಧೈರ್ಯ, ಸ್ವಾಭಿಮಾನ ಮತ್ತು ರಾಷ್ಟ್ರಪ್ರೇಮವನ್ನು ಸ್ಮರಿಸಿದರು. ಮಹಾರಾಜರ ಆಡಳಿತ ತತ್ವಗಳು, ಶೌರ್ಯ ಮತ್ತು ಸಮಾನತೆ ಸಂದೇಶಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ವಕ್ತಾರರು ಅಭಿಪ್ರಾಯಪಟ್ಟರು. ಒಟ್ಟಾರೆ, ಈ ಜಯಂತಿ ಆಚರಣೆ ಸಮಾಜದ ಒಗ್ಗಟ್ಟಿನ ಸಂಕೇತವಾಗಿ, ದೇಶಭಕ್ತಿ ಮತ್ತು ಸಂಸ್ಕೃತಿ ಪ್ರೇಮದ ಪ್ರೇರಣೆಯಾಗಿ ಎಲ್ಲರ ಮನಗಳಲ್ಲಿ ಸ್ಪಂದನೆ ಮೂಡಿಸಿತು. ಶಿವಾಜಿ ...
Image
  ಮಂತ್ರಾಲಯದಲ್ಲಿ ಬೇಸಿಗೆಯಲ್ಲಿ ಭಕ್ತರಿಗೆ ನೀರಿನ ಅಭಾವ ತಡೆಗೆ ಬೋರವೆಲ್ ಮೊರೆ:                                                                                         ವಿವಿ ಸ್ಥಾಪನೆ, ಏರ್ ಪೋರ್ಟ್ ನಿರ್ಮಾಣ ಗುರಿ - ಶ್ರೀ ಸುಬುಧೇಂದ್ರತೀರ್ಥರು.                                                                                                                      ಜಯ ಧ್ವಜ ನ್ಯೂಸ್, ರಾಯಚೂರು, ಫೆ.19- ಬೇಸಿಗೆಯಲ್ಲಿ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ನೀರಿನ ಅಭಾವ ಕಾಡದಂತೆ ಬೋರವೆಲ್ ಮುಖಾಂತರ ನೀರನ್ನು ಒದಗಿಸುವ ಪ್ರಯತ್ನ ಮಾಡಲಾಗು...