Posts

ಕಲ್ಯಾಣ ಕರ್ನಾಟಕದ ಉದಯೋನ್ಮುಖ ನಟರಿಂದ ಮೂಡಿಬಂದಿರುವ ಚಿತ್ರ: ಜು.೧೭ ರಂದು ನಗರದಲ್ಲಿ ಹುಲಿಬೇಟೆ ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ-ರಾಜಬಹದ್ದೂರು

Image
  ಕಲ್ಯಾಣ ಕರ್ನಾಟಕದ ಉದಯೋನ್ಮುಖ ನಟರಿಂದ ಮೂಡಿಬಂದಿರುವ ಚಿತ್ರ: ಜು.೧೭ ರಂದು ನಗರದಲ್ಲಿ ಹುಲಿಬೇಟೆ ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ-ರಾಜಬಹದ್ದೂರು   ರಾಯಚೂರು,ಜು.೧೬-ಬಹುತೇಕ ಕಲ್ಯಾಣ ಕರ್ನಾಟಕ ಭಾಗದ ಉದಯೋನ್ಮುಖ ನಟರಿಂದ ಮೂಡಿಬಂದಿರುವ ಹುಲಿಬೇಟೆ ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ ಜು.೧೭ ರಂದು ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ರಾಜಬಹದ್ದೂರು ಹೇಳಿದರು.   ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಗರದ ರಂಗಮOದಿರದಲ್ಲಿ ಧ್ವನಿ ಸುರಳಿ ಬಿಡುಗಡೆ ಸಮಾರಂಭ ಅಂದು ಸಂಜೆ ೪ ಗಂಟೆಗೆ ನಡೆಯಲಿದ್ದು ಕಿಲ್ಲೆ ಶ್ರೀಗಳು ಸಾನಿಧ್ಯ ವಹಿಸಲಿದ್ದು ಶಾಸಕರಾದ ಡಾ.ಶಿವರಾಜ ಪಾಟೀಲ, ಬಸನಗೌಡ ದದ್ದಲ ಸೇರಿದಂತೆ ಮಾಜಿ ಶಾಸಕರು,  ಗಣ್ಯರು ಭಾಗವಹಿಸಲಿದ್ದಾರೆಂದರು. ಧಾನುಬಾಯಿ ಫಿಲ್ಮಂಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿದ್ದು ಆ.೧೯ ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದ ಅವರು  ಚಿತ್ರದಲ್ಲಿ ಕೌರ್ಯದ ಜೊತೆ ನವಿರಾದ ಪ್ರೇಮಕಥೆ ಸಹಯಿದ್ದು ತಾರಾಗಣದಲ್ಲಿ ವಿಶ್ವ ಎಂಬ ಹೊಸ ಮುಖ ಪರಿಚಯ ಮಾಡಲಾಗುತ್ತಿದ್ದು ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ, ನಾಯಕ ನಟಿಯಾಗಿ ರೋಹಿಣಿ ಕುಲಕರ್ಣೀ , ಸೇರಿದಂತೆ ತಾರಗಣದಲ್ಲಿ ಅನೇಕರಿದ್ದು ಪತ್ರಕರ್ತ ವಿಶಾಲ ದೋರಣಹಳ್ಳಿ ಸಹಯಿದ್ದು ತಮ್ಮಣ್ಣ ಇನ್ನಿತರರು ಇದ್ದಾರೆ ಎಂದರು. ಚಿತ್ರದ ಚಿತ್ರೀಕರಣ ಮುಹೂರ್ತ  ಮಂತ್ರಾಲಯ ಶ್ರೀ ರಾಯರ ಸನ್ನಿದಾನದಲ್ಲಿ ನೆರವೇರಿದ್ದು ನ...

ನ್ಯಾಯಾಲಯ ಆದೇಶದಂತೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೆ ಕಾರ್ಯ: ಆಧ್ಯಾತ್ಮದಿಂದ ಮನುಷ್ಯನಿಗೆ ನೆಮ್ಮದಿ, ಶಾಂತಿ ಪ್ರಾಪ್ತಿ- ಕಾಶಿ ಜಗದ್ಗುರುಗಳು

Image
    ನ್ಯಾಯಾಲಯ ಆದೇಶದಂತೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೆ ಕಾರ್ಯ: ಆಧ್ಯಾತ್ಮದಿಂದ ಮನುಷ್ಯನಿಗೆ ನೆಮ್ಮದಿ, ಶಾಂತಿ ಪ್ರಾಪ್ತಿ- ಕಾಶಿ ಜಗದ್ಗುರುಗಳು ರಾಯಚೂರು,ಜು.೧೬-ಆಧ್ಯಾತ್ಮದಿಂದ ಮನುಷ್ಯನಿಗೆ ನೆಮ್ಮದಿ ಶಾಂತಿ ಲಭಿಸುತ್ತದೆ ಎಂದು ಕಾಶಿ ಜಗದ್ಗುರುಗಳಾದ ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಸಿದ್ದಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮನುಷ್ಯನಿಗೆ ಆಧ್ಯತ್ಮಿಕ ಆಚಾರ ವಿಚಾರ ಬಹುಮುಖ್ಯವೆಂದ ಅವರು ನಮಗೆ ಅಷ್ಟ ಐಶ್ವರ್ಯವಿದ್ದರೂ ನೆಮ್ಮದಿ ನೀಡುವುದು ಮಾತ್ರ ಭಗವಂತನ ನಾಮಸ್ಮರಣೆ ಜಪ ತಪವೆಂದರು. ಸಾಮ್ರಾಟ ಅಶೋಕ ಚಕ್ರವರ್ತಿ ಕಳಿಂಗ ಯುದ್ಧದ ನಂತರ ಭಗವಾನ ಗೌತಮ ಬುಧ್ದನ ಬಳಿ ಆಗಮಿಸಿ ತನ್ನ ಅರಸೊತ್ತಿಗೆ ತ್ಯಜಿಸಿ ಬುದ್ದನಿಂದ ಜ್ಞಾನಾರ್ಜನೆ ಪಡೆಯುವ ಬಗ್ಗೆ ನಾವೆಲ್ಲ ಓದಿದ್ದೇವೆ ಅದರಂತೆ ನಮಗೆ ಹಣದಿಂದಲೇ ಸುಖ ದೊರಯುವುಯದಿಲ್ಲವೆಂದ ಅವರು ಕಾಶಿಯಲ್ಲಿ ೧೨ ವರ್ಷಕ್ಕೊಮ್ಮೆ ಕುಂಭ ಮೇಳ ಪವಿತ್ರ ಗಂಗಾನದಿಯಲ್ಲಿ ನಡೆಯುತ್ತದೆ ಅಲ್ಲಿಗೆ ಲಕ್ಷಾಂತರ ಸಾಧು ಸಂತರು ಆಗಮಿಸಿ ತನ್ನ ಸುಖಮಯಿ ಜೀವನ ತ್ಯಜಿಸಿ ಭಗವಂತನ ಧ್ಯಾನದಲ್ಲಿ ತಲ್ಲೀನರಾಗುತ್ತಾರೆ ಎಂದರು. ಈಗ ನಾಲ್ಕು ತಿಂಗಳು ಕಾಲ ಚಾತುರ್ಮಾಸ್ಯ ದೀಕ್ಷೆಯನ್ನು ಪ್ರತಿಯೊಬ್ಬ ಸ್ವಾಮಿಗಳು ಕೈಗೊಳ್ಳುತ್ತಾರೆ ತಾವು ಸಹ ಈ ನಾಲ್ಕು...

ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ-ಈಶ್ವರ ಖಂಡ್ರೆ

Image
  ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ- ಈಶ್ವರ ಖಂಡ್ರೆ   ರಾಯಚೂರು ,ಜು.೧೫- ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷರಾದ ಈಶ್ವರ ಖಂಡ್ರೆ ಹೇಳಿದರು . ಅವರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಗ್ರೀನ್ ಪ್ಯಾಲೇಸ್ ನಲ್ಲಿ ಹಮ್ಮಿಕೊಂಡಿದ್ದ ನವ ಸಂಕಲ್ಪ ಚಿಂತನಾ ಶಿಬಿರವನ್ನು  ಉದ್ಘಾಟಿಸಿ ಮಾತನಾಡಿದರು.. ಸ್ವಾತಂತ್ರ ನಂತರ ದೇಶದಲ್ಲಿ ಅನೇಕ ಸಮಸ್ಯೆಗಳು ಇದ್ದವು ಅವುಗಳನ್ನು ಸಮರ್ಥವಾಗಿ ಕಾಂಗ್ರೆಸ್ ಪಕ್ಷ ನಿಭಾಯಿಸಿ ದೇಶವನ್ನು ಸುಸ್ಥಿರವಾಗಿಸುವಲ್ಲಿ ಶ್ರಮಿಸಿದೆ ಎಂದ ಅವರು ಬಿಜೆಪಿ ಪಕ್ಷದವರು  ಕಾಂಗ್ರೆಸ್ ಪಕ್ರವು ದೇಶಕ್ಕೆ ಏನು ಮಾಡಿದೆ ಎಂದು ಕೇಳುತ್ತಾರೆ, ಜನರಿಗೆ ನಮ್ಮ ಪಕ್ಷದ ಕೋಡುಗೆ ಏನು ಎಂಬುದು ಕಾರ್ಯಕರ್ತರು ಮನವರಿಕೆ ಮಾಡಬೇಕೆಂದು ಹೇಳಿದರು. ಈ ಸಂದರ‍್ಭದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ, ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು, ಜಿಲ್ಲಾ  ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ ನಾಯಕ್,ಕೆಪಿಸಿಸಿ ಕಾರ್ಯದರ್ಶಿ ಎ.ವಸಂತಕುಮಾರ್, ಶಾಸಕರಾದ ಬಸನಗೌಡ ದದ್ದಲ,ಡಿ ಎಸ್ ಹುಲಗೇರಿ,ಬಸನಗೌಡ ತುರವಿಹಾಳ , ಮಾಜಿ ಶಾಸಕರಾದ .ಹಂಪನಗೌಡ ಬಾರ‍್ಲಿ ,ಸೈಯದ್ ಯಾಸೀನ್, ಹಂಪಯ್ಯ ನಾಯಕ,  ವಿಧಾನ ಪರಿಷತ್ ಮಾಜಿ ಸದಸ್ಯರಾದ ಶರಣಪ್ಪ ಮಟ್ಟೂರು, ಬಸವರಾಜ ಪಾಟೀಲ ಇಟಗಿ, ಮುಖಂಡರಾದ  ರಾಜಶೇಖರ ನಾಯಕ, ರಾಮಣ್ಣ ಇರಬಗೇರಾ, ಬಸನಗೌಡ ಬಾದರ್ಲಿ, ಬಷೀರ...

ಮಿರ್ಜಾಪೂರು ಕ್ಯಾಂಪ್ ನಿಂದ ಮೀರಾಪೂರು ಗ್ರಾಮದವರೆಗೆ ಡಾಂಬರು ರಸ್ತೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ

Image
  ಮಿರ್ಜಾಪೂರು ಕ್ಯಾಂಪ್ ನಿಂದ ಮೀರಾಪೂರು ಗ್ರಾಮದವರೆಗೆ ಡಾಂಬರು ರಸ್ತೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ                                             ರಾಯಚೂರು,ಜು.15- ಗಡಿ ಪ್ರದೇಶಗಳಾದ ಮಿರ್ಜಾಪೂರು ಕ್ಯಾಂಪ್ ಮತ್ತು ಮೀರಾಪೂರು ಗ್ರಾಮ ಮದ್ಯದಲ್ಲಿ  ಡಾಂಬರು ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರ ಆಗ್ರಹವಾಗಿದೆ. ಮಿರ್ಜಾಪೂರು ಕ್ಯಾಂಪಿನ ಗ್ರಾಮವು ತಲಮಾರಿ ಗ್ರಾ.ಪಂ. ಬರುತ್ತಿದ್ದು ಮತ್ತು ಮೀರಾಪೂರು ಗ್ರಾಮವು ಇಡಪನೂರು ಗ್ರಾ.ಪಂ. ಬರುತ್ತಿದ್ದು ಮಿರ್ಜಾಪೂರು ಕ್ಯಾಂಪಿನ ಜನರು ಬೆಳಿಗ್ಗೆ  ತಮ್ಮ ಹೊಲಗಳಿಗೆ ಹೋಗುವ ದಾರಿ ಹಾಗೂ ಪ್ರತಿದಿನ  ಜನರು ಓಡಾಡುವ ದಾರಿ ಹದಗೆಟ್ಟ ರಸ್ತೆ. ಮೀರಾಪೂರು ಗ್ರಾಮೀಣ ಜನ ಮಿರ್ಜಾಪೂರು, ಮಿರ್ಜಾಪೂರು ಕ್ಯಾಂಪಿನ ತರಕಾರಿ ಮಾರಲು (ಮಾರಾಟ) ಬರುತ್ತಿದ್ದಾರೆ. ಈ ದಾರಿಯಲ್ಲಿ ಎತ್ತಿನ ಬಂಡಿ, ಸೈಕಲ್, ಮೋಟಾರ್ ವಾಹನಗಳು ದ್ವಿಚಕ್ರ, ಚತುರ್ಥಿಚಕ್ರ ದಿನಾಲು ಈ ದಾರಿಯಲ್ಲಿ ಓಡಾಡುತ್ತಿವೆ. ರಸ್ತೆ ಸಂಪೂರ್ಣ ಗುಂಡಿ ಮಾಯವಾಗಿದ್ದು. ಈ ರಸ್ತೆಯಲ್ಲಿ ಹೋಗುವವರು ನಿತ್ಯ ಹರಸಾಹಸ ಮಾಡುವಂತಾಗಿದೆ.ಕೆಲವು ದಿನಗಳಿಂದ ಮೇಲಿಂದ ಮೇಲೆ ಮಳೆ ಬೀಳುತ್ತದೆ. ಗುಂಡಿಗಳಲ್ಲಿ ನೀರು ನಿಂತು ರಸ್ತೆ ಯಾವುದು ಎಂಬುದೇ ತಿಳಿಯದಂತಾಗಿದೆ. ಈ ರಸ್ತೆಯ ಮಾರ್ಗದಲ್ಲಿ ಜನರು ಚ...

ಮಂತ್ರಾಲಯದಲ್ಲಿ ಜು.17,18, 19 ಶ್ರೀ ಜಯತೀರ್ಥರ (ಟೀಕಾರಾಯರ) ಆರಾಧನೆ- ಆರ್ ಕೆ ವಾದೀಂದ್ರಾಚಾರ್ಯ

Image
    ಮಂತ್ರಾಲಯದಲ್ಲಿ ಜು.17,18, 19 ಶ್ರೀ ಜಯತೀರ್ಥರ (ಟೀಕಾರಾಯರ) ಆರಾಧನೆ- ಆರ್ ಕೆ ವಾದೀಂದ್ರಾಚಾರ್ಯ .   ರಾಯಚೂರು,ಜು.15- ಮಾನ್ಯ  ಉಚ್ಚ ನ್ಯಾಯಾಲಯ ಧಾರವಾಡ ಪೀಠವು ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆ ನೀಡದೆ ಸೂಕ್ತಪ್ರಾಧಿಕಾರದಲ್ಲಿ ಪರಿಹಾರವನ್ನು ಪಡೆಯುವಂತೆ ಸೂಚಿಸಿದ್ದರಿಂದ ಹಾಗೂ ಕೊಪ್ಪಳ ಜಿಲ್ಲಾಡಳಿತ  ತೀರ್ಮಾನದಂತೆ ಮತ್ತು ಸತತ ಮಳೆ ನೆರೆ ಪ್ರವಾಹ ಕಾರಣದಿಂಂದ ದಿನಾಂಕ 17,18,19, ಜೂಲೈ 2022 ಈ ಮೂರು ದಿನಗಳಲ್ಲಿ  ನವಬೃಂದಾವನದಲ್ಲಿ ನಡೆಯಬೇಕಿದ್ದ ಶ್ರೀಜಯತೀರ್ಥರ ಆರಾಧನೆಯನ್ನು ಪರಮಪೂಜ್ಯ ಶ್ರೀ 1008 ಶ್ರೀಸುಬುಧೇಂದ್ರತೀರ್ಥಶ್ರೀಪಾದಂಗಳವರ ದಿವ್ಯ ನೇತೃತ್ವದಲ್ಲಿ ಶ್ರೀಕ್ಷೇತ್ರ ಮಂತ್ರಾಲಯದ ಶ್ರೀಮಠದಲ್ಲಿ ನೆರವೇರಿಸಲು ನಿಶ್ಚಯಿಸಿದ್ದು ಶ್ರೀಮಠದ ಶಿಷ್ಯರು ಭಕ್ತರು ಆರಾಧನೆಯಲ್ಲಿ ಪಾಲ್ಗೊಳ್ಳಲು ಶ್ರೀರಾಘವೇಂದ್ರಸ್ವಾಮಿಗಳವರ ಮಠ ಮಂತ್ರಾಲಯದ ಪವರ್ ಆಫ್ ಅಟಾರ್ನಿ ಆರ್ ಕೆ ವಾದೀಂದ್ರಾಚಾರ್ಯ ತಿಳಿಸಿದ್ದಾರೆ.

ಚಾಟ್ ಕಾರ್ನರ್...ರಾಯಚೂರಿನ ತಿನಸುಗಳ ಬಗ್ಗೆ ಮಾಹಿತಿ

Image
  ಚಾಟ್ ಕಾರ್ನರ್...ರಾಯಚೂರಿನ ತಿನಸುಗಳ ಬಗ್ಗೆ ಮಾಹಿತಿ .                                           ರಾಯಚೂರು,ಜು.15- ರಾಜ್ಯದ ವಿವಿಧೆಡೆ ವಿವಿಧ ಶೈಲಿಯ ತಿನಸುಗಳು ನಿಮಗೆ ನೋಡಲು ಸಿಗುತ್ತವೆ ಒಂದು ಊರಿನಲ್ಲಿ ಆ ಊರಿನ ಕೆಲವು ತಿನಸುಗಳು ಬಹಳ ಫೇಮಸ್ ಆಗಿರುತ್ತವೆ ಅಂತಹ ಫೇಮಸ್ ತಿನಸುಗಳ ಬಗ್ಗೆ ತಿಳಿಸುವ ಪ್ರಯತ್ನ "  ಜಯಧ್ವಜ  " ಮಾಡಲಿದ್ದು ಈ ಲೇಖನ ತಿನಸುಗಳನ್ನು ತಿನ್ನುವಂತೆ ನಿಮ್ಮ ನಾಲಿಗೆಯನ್ನು ಪ್ರಚೋದಿಸಲುಬಹುದು ಎಚ್ಚರ...  ನಾನಿಂದು ನಿಮಗೆ ರಾಯಚೂರಿನ ಪ್ರಖ್ಯಾತ ಸ್ಥಳವಾದ ಶೆಟ್ಟಿಭಾವಿ ವೃತ್ತದ ಬಳಿ ಸಂದಿಯಲ್ಲಿ  ಶೆಟ್ಟಿ ಚಾಟ್ ನಲ್ಲಿ  ಸಿಗುವ   ತಿನಸುಗಳ  ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ .                                                        1986 ರಲ್ಲಿ ಪ್ರಾರಂಭವಾದ ಈ ಒಂದು ಸಣ್ಣ ಅಂಗಡಿ 36 ವರ್ಷದಿಂದ ಜನರಿಗೆ ರುಚಿಕರವಾದ ಚಾಟ್ ಗಳನ್ನು ತಿನ್ನಿಸುತ್ತಿದೆ. ಇಲ್ಲಿ ಈರುಳ್ಳಿ ಬಳಕೆ ಮಾಡುವುದಿಲ್ಲ ಇಲ್ಲಿ ನಿಮಗೆ ಪಾನಿಪೂರಿ,ಪಾಪಡ್, ಕ...

ಕಲಿಯುಗದಲ್ಲಿ ನಾಮಜಪವೇ ಶ್ರೇಷ್ಠ ಎಲ್ಲರೂ ನಿರಂತರ ನಾಮಜಪ ಮಾಡಬೇಕು - ಪ್ರಕಾಶ ಖೇಣೆದ

Image
  ಕಲಿಯುಗದಲ್ಲಿ ನಾಮಜಪವೇ ಶ್ರೇಷ್ಠ, ಎಲ್ಲರೂ ನಿರಂತರ ನಾಮಜಪ ಮಾಡಬೇಕು - ಪ್ರಕಾಶ ಖೇಣೆದ ರಾಯಚೂರು,14- ಕಲಿಯುಗದಲ್ಲಿ ನಾಮಜಪವೇ ಶ್ರೇಷ್ಠ ಎಲ್ಲರೂ ನಿರಂತರ ನಾಮಜಪ ಮಾಡಬೇಕು ಎಂದು ಮುಖ್ಯ ವಕ್ತಾರರಾದ ಪ್ರಕಾಶ ಖೇಣೆದ ಹೇಳಿದರು. ಅವರು ಬೆಸ್ತವಾರ ಪೇಟೆಯ ಗೀತಾ ಮಂದಿರದಲ್ಲಿ ಗುರುಪೂರ್ಣಿಮಾ ಮಹೋತ್ಸವದಲ್ಲಿ ಹೇಳಿದರು. ಸನಾತನ ಸಂಸ್ಥೆಯ ಮಾರ್ಗದರ್ಶನದಂತೆ ನಾಮಸ್ಮರಣೆ ಮಾಡುವುದರಿಂದ ಸ್ಥೂಲ ಮತ್ತು ಸೂಕ್ಷ್ಮದೇಹ ಶುದ್ಧಿಕರಣವಾಗುತ್ತದೆ. ಸುಮಾರು ೨೦ ವರ್ಷಗಳಿಂದ ಪೂಜಾ-ಪುನಸ್ಕಾರದಿಂದ ಸಿಗದಂತ ಅನುಭೂತಿ ನಾಮಸ್ಮರಣೆ ಮಾಡುವುದರಿಂದ ಸಿಕ್ಕಿದೆ. ಇತ್ತೀಚಿಗೆ ಗೋವಾದಲ್ಲಿ ನಡೆದ ೧೦ನೇ ಅಖೀಲ ಭಾರತೀಯ ಹಿಂದೂರಾಷ್ಟ್ರ ಅಧಿವೇಶನದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಹಿಂದೂ ರಾಷ್ಟ್ರ ಬರಲಿಕ್ಕೆ ನಾವು ಏನ್ ಮಾಡಬೇಕು ಎಂದು ಕೇಳಿದ್ದಕ್ಕೆ, ಸಾಧನೆ ಮಾಡಿದರೆ ಹಿಂದೂ ರಾಷ್ಟ್ರ ತಾನಾಗಿಯೇ ಬರುತ್ತದೆಂದು ಹೇಳಿದ್ದನ್ನು ಕೇಳಿ ನನಗೆ ತುಂಬಾ ಒಳ್ಳೆಯದು ಅನ್ನಿಸಿತು. ಅದೇ ಸಂದರ್ಭದಲ್ಲಿ ರಾಮನಾಥಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿಯ ದೈವೀ ಚೈತನ್ಯದ ಅನುಭೂತಿ ಪಡೆದೆನು. ಗುರುಗಳು ಸಾಕ್ಷಾತ್ ಈಶ್ವರ ಸ್ವರೂಪರಾಗಿದ್ದಾರೆ. ಇವರ ಮಾಧ್ಯಮದಿಂದಲೇ ಹಿಂದೂ ರಾಷ್ಟ್ರ ಬರುತ್ತದೆ ಎಂಬುದು ನನಗೆ ಅರಿವಾಯಿತೆಂದು ತಮ್ಮ ಅನುಭೂತಿ ವ್ಯಕ್ತಪಡಿಸಿದರು. ಸುವರ್ಣ ತಮ್ಮ ಅನುಭೂತಿ ವ್ಯಕ್ತಪಡಿಸಿ ‘ಸುಖಸ್ಯ ಮೂಲಂ ಧರ್ಮಃ |’, ಅಂದರೆ ಸುಖದ ಮೂಲವು ಧರ್ಮಾಚರಣೆಯಲ್ಲಿದೆ....