Posts

ವಡವಾಟಿಯವರ ಜನುಮ ದಿನ ಕಲಾವಿದರ ದಿನವಾಗಿ ಆಚರಣೆ ಶ್ಲಾಘನೀಯ-ಮಹದೇವಪ್ಪ ಗಂಗಪ್ಪ

Image
  ವಡವಾಟಿಯವರ ಜನುಮ ದಿನ  ಕಲಾವಿದರ ದಿನವಾಗಿ ಆಚರಣೆ ಶ್ಲಾಘನೀಯ- ಮಹದೇವಪ್ಪ ಗಂಗಪ್ಪ  ರಾಯಚೂರು,ಜ.24-  ವಿಶ್ವಮಟ್ಟದ ಕ್ಲಾರಿಯೋನೆಟ್ ವಾದಕ ಡಾ. ಪಂ. ನರಸಿಂಹಲು ವಡವಾಟಿಯವರ ಜನುಮ ದಿನವನ್ನು ಕಲಾವಿದರಿಗೆ ಅರ್ಪಿಸಿ ಕಲಾವಿದರ ದಿನವನ್ನಾಗಿ ಆಚರಿಸುತ್ತಿರುವುದು ಭಾರತದ ಕಲಾವಿದರಿಗಷ್ಟೇ ಅಲ್ಲದೆ ಪ್ರಪಂಚದ ಕಲಾವಿದರೆಲ್ಲರಿಗೂ ಸಮರ್ಪಿಸಿರುವುದು ಶ್ರೇಷ್ಟತಮ ಧ್ಯೇಯವನ್ನು ತೋರಿಸಿಕೊಡುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಮಾನ್ಯ ಮಹದೇವಪ್ಪ ಗಂಗಪ್ಪ ಕುಡ ಒಕ್ಕಲಿಗರ್ ಉದ್ಘಾಟಿಸಿ ಪ್ರಶಂಸೆ ವ್ಯಕ್ತಪಡಿಸಿದರು.                     ರಾಯಚೂರಿನ ಉದಯನಗರದ ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯ ಆವರಣದಲ್ಲಿ ಬೆಂಗಳೂರಿನ ಭಾರತ್ ಸಾಂಸ್ಕöÈತಿಕ ಕಲಾ ಕೇಂದ್ರ ಡಾ. ಪಂ. ನರಸಿಂಹಲು ವಡವಾಟಿಯವರ ಜನುಮ ದಿನ ಜನವರಿ ೨೧ರಂದು ಆಯೋಜಿಸಿದ್ದ ‘ಕಲಾವಿದರ ದಿನ’ ಹಾಗೂ ‘ಸುಗ್ಗಿಯ ಸೊಬಗಲ್ಲಿ ಸಂಗೀತ ಸಂಜೆ’ ಕಾರ್ಯಕ್ರಮವನ್ನು ಪ್ರಶಂಸೆ ವ್ಯಕ್ತಪಡಿಸಿದರು. ವಡವಾಟಿಯವರ ಜನುಮ ದಿನವನ್ನು ಕಲಾವಿದರ ದಿನವಾಗಿ ಹನ್ನೊಂದು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ನೂರ್ಕಾಲ ಇವರ ಕಲಾ ಸೇವೆ ಜಗತ್ತಿಗೆ ದಕ್ಕುತ್ತಿರಲಿ ಎಂದು ಆಶಯ ವ್ಯಕ್ತಪಡಿಸಿದರು. ನಮ್ಮ ಜೊತೆಯಲ್ಲಿ ಅನೇಕ ಕಲಾವಿದರಿದ್ದಾರೆ. ಅವರಿಗೆ ಸರಿಯಾದ ಅವಕಾಶ...

ಶ್ರೀ ಕಣ್ವಮಠ ನೂತನ ಪಂಚಾಂಗ ಬಿಡುಗಡೆ ಸಮಾರಂಭ

Image
  ಶ್ರೀ ಕಣ್ವಮಠ ನೂತನ  ಪಂಚಾಂಗ ಬಿಡುಗಡೆ ಸಮಾರಂಭ   ರಾಯಚೂರು,ಜ.24-  ಸಾಧ್ವಿ ಶಿರೋಮಣಿ ತುರುಡಗಿ ತಿಮ್ಮಮ್ಮ ನವರ 210 ನೇ ಆರಾಧನಾ ಪ್ರಯುಕ್ತ ಅಮ್ಮನ ಕಟ್ಟೆ ಯಲ್ಲಿ ಶ್ರೀ ಶ್ರೀ ೧೦೦೮ ವಿದ್ಯಾ ಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತ  ದಿಂದ ಕಣ್ವ ಮಠೀಯ ಪಂಚಾಂಗ ಶ್ರೀಮತ್  ಕಣ್ವ ಮಠಸ್ಯ ಪಂಚಾಂಗಮ್ 2023-24  ಭಕ್ತರಿಗೆ ಬಿಡುಗಡೆ ಗೊಳಿಸಲಾಯಿತು. ಟ್ರಸ್ಟ ಕಾರ್ಯಧ್ಯಕ್ಷರಾದ  ಮನೋಹರ ಮಾಡಗಿರಿ, ಪ್ರಚಾರ ಸಮಿತಿ ಮುಖ್ಯಸ್ಥರಾದ  ಪ್ರಸನ್ನ ಆಲಂಪಲ್ಲಿ , ಹನುಮೇಶ ರಾವ್ ಮಸ್ಕಿ, ಕಮಲಾಕರ ದೇಶಪಾಂಡೆ ಇಲಕಲ,ಸುರೇಶ ಕುಲಕರ್ಣಿ ಇತರ ಟ್ರಸ್ಟ ಸದಸ್ಯರು, ಪದಾಧಿಕಾರಿಗಳು ,ಭಕ್ತಾದಿಗಳು ಉಪಸ್ಥಿತರಿದ್ದರು.

ವೃತ್ತಿ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತು ಎರಡನೇ ದಿನದ ಮಾಹಿತಿ ಕಾರ್ಯಗಾರ : ಉತ್ತಮ ಆಯ್ಕೆಯಿಂದ ಯಶಸ್ಸು ಕಾಣಲು ಸಾಧ್ಯ- ಸಿ.ಇ.ಒ ಶಶಿಧರ ಕುರೇರ

Image
  ವೃತ್ತಿ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತು ಎರಡನೇ ದಿನದ ಮಾಹಿತಿ ಕಾರ್ಯಗಾರ:   ಆಯ್ಕೆಯಿಂದ ಯಶಸ್ಸು ಕಾಣಲು ಸಾಧ್ಯ- ಸಿ.ಇ.ಒ ಶಶಿಧರ ಕುರೇರ ರಾಯಚೂರು,ಜ.೨೪- ವಿದ್ಯಾರ್ಥಿಗಳ ಜೀವನದಲ್ಲಿ ಆಯ್ಕೆಯೆಂಬುವುದು ಅತ್ಯಂತ ಮುಖ್ಯವಾದ ಘಟ್ಟವಾಗಿದ್ದು, ಪ್ರತಿಯೊಬ್ಬರು ತಮ್ಮ ಮುಂದಿನ ಜೀವನವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಹಂತದ ತೀರ್ಮಾನವನ್ನು ಉತ್ತಮವಾಗಿ ಆಯ್ಕೆ ಮಾಡಿಕೊಳ್ಳಬೇಕು ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಹೇಳಿದರು. ಅವರು  ಇಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸೆಂಟರ್ ಫಾರ್ ಎಂಪ್ಲಾಯಿಮೆಂಟ್, ಅಪರ‍್ಚುನಿಟೀಸ್ & ರ‍್ನಿಂಗ್ (ಸಿಯೋಲ್) ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪದವಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತು ಎರಡನೇ ದಿನದ ಮಾಹಿತಿ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದ ಯಶಸ್ಸಿಗೆ ಉತ್ತಮವಾಗಿ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಹಾಗೂ ಮಾಹಿತಿ ಕಾರ್ಯಗಾರವನ್ನು ಚೆನ್ನಾಗಿ ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಪದವಿ ನಂತರ ಮುಂದಿನ ಓದು ಹಾಗೂ ಜೀವನ ಏನು ಎಂಬ ಪ್ರಶ್ನಗೆ ಉತ್ತರ ಏನು ಎಂಬು...

ಆಮ್ ಆದ್ಮಿ ಪಕ್ಷ : ನೂತನ ಜಿಲ್ಲಾ ಪದಾಧಿಕಾರಿಗಳ ನೇಮಕ .

Image
ಆಮ್ ಆದ್ಮಿ ಪಕ್ಷ : ನೂತನ ಜಿಲ್ಲಾ ಪದಾಧಿಕಾರಿಗಳ ನೇಮಕ .                      ರಾಯಚೂರು,ಜ.24- ಆಮ್ ಆದ್ಮಿ ಪಕ್ಷದ ನೂತನ ಜಿಲ್ಲಾ ಪದಾಧಿಕಾರಿಗಳ ನೇಮಕವಾಗಿದ್ದು ಜಿಲ್ಲಾ ಅಧ್ಯಕ್ಷರಾಗಿ ಕೆ.ಬಸವರಾಜ ಗುತ್ತೇದಾರ ,ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ವೀರೇಶ್. ಆರ್ ಮತ್ತು ಜಿಲ್ಲಾ ಕಾರ್ಯದರ್ಶಿಯಾಗಿ ಸೈಯದ ನುಸರತ್ ಅಲಿ ನೇಮಕವಾಗಿದ್ದಾರೆ.   ಈ ನೇಮಕಾತಿಗೆ ಕಾರಣಿಭೂತರದ  ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ  ದಿಲೀಪ್ ಪಾಂಡೆ , ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ರಾಜ್ಯ ಉಪಾಧ್ಯಕ್ಷ  ವಿಜಯ ಶರ್ಮಾ  ಮತ್ತು ನಮ್ಮ ಎಲ್ಲಾ ರಾಜ್ಯ ಮತ್ತು ಜಿಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ  ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.                   

ಅಹಮದನಗರದಲ್ಲಿ ಶ್ರೀ ರಾಯರ ಪ್ರತಿಮೆ ಆನಾವರಣ.

Image
ಅಹಮದನಗರದಲ್ಲಿ ಶ್ರೀ ರಾಯರ ಪ್ರತಿಮೆ ಆನಾವರಣ .                      ರಾಯಚೂರು,ಜ.23- ಮಹಾರಾಷ್ಟ್ರ ಸಂಚಾರದಲ್ಲಿರುವ ಮಂತ್ರಾಲಯ  ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಇಂದ ಅಹಮದನಗರ ಮತ್ತು ವಲ್ಕಿ ಗ್ರಾಮಕ್ಕೆ ಭೇಟಿ ನೀಡಿದರು.                                          ಶ್ರೀ ಪಾದಂಗಳವರನ್ನು ಭವ್ಯ ಶೋಭಾಯಾತ್ರೆ ನೆರವೇರಿಸಿ ಅದ್ದೂರಿಯಾಗಿ ಸ್ವಾಗತಿಸಿ ಗುರು ವಂದನಾ ಕಾರ್ಯಕ್ರಮ ನೆರವೇರಿಸಿದರು.                      ಇದೆ ಸಂದರ್ಭದಲ್ಲಿ ರಾಯರ ಪ್ರತಿಮೆಯನ್ನು ಪೀಠಾಧಿಪತಿಗಳು ಅನಾವರಣಗೊಳಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದರು.

ಪಂಢರಾಪುರಕ್ಕೆ ಶ್ರೀ ಸುಬುಧೇಂದ್ರತೀರ್ಥರ ಭೇಟಿ.

Image
  ಪಂಢರಾಪುರಕ್ಕೆ ಶ್ರೀ ಸುಬುಧೇಂದ್ರತೀರ್ಥರ ಭೇಟಿ.      ರಾಯಚೂರು,ಜ.23- ಪಂಢರಾಪುರಕ್ಕೆ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಭೇಟಿ ನೀಡಿದರು.                                                                       ಶ್ರೀ ಪಾಂಡುರಂಗನ ದರ್ಶನ ಪಡೆದರು ನಂತರ ದೇವಸ್ಥಾನ ಸಮಿತಿಯಿಂದ  ಶ್ರೀ ಪಾದಂಗಳವರಿಗೆ ಗೌರವಿಸಿ  ಭಕ್ತಿ ಸಮರ್ಪಿಸಲಾಯಿತು.

ಶ್ರೀ ಮಾರ್ಕಂಡೇಶ್ವರ ಜಯಂತಿ : ದೇವಸ್ಥಾನ ಅಭಿವೃದ್ದಿಗೆ ಅನುದಾನ, ಸಮಾಜಕ್ಕೆ ಸಿಎ ಸೈಟ್ - ಡಾ. ಶಿವರಾಜ ಪಾಟೀಲ್ ಭರವಸೆ

Image
  ಶ್ರೀ ಮಾರ್ಕಂಡೇಶ್ವರ ಜಯಂತಿ : ದೇವಸ್ಥಾನ ಅಭಿವೃದ್ದಿಗೆ ಅನುದಾನ,  ಸಮಾಜಕ್ಕೆ ಸಿಎ ಸೈಟ್ -ಡಾ. ಶಿವರಾಜ ಪಾಟೀಲ್ ಭರವಸೆ  ರಾಯಚೂರು,ಜ.೨೩- ಪದ್ಮಶಾಲಿ ಸಮಾಜದ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದ ಸಭಾಂಗಣದ ಮೊದಲನೇ ಮಹಡಿಯಲ್ಲಿ ಅನ್ನ ದಾಸೋಹ ಕಟ್ಟಡ ಕಾಮಗಾರಿಗೆ ಅನುದಾನ ನೀಡಿ, ಮುಂದಿನ ವರ್ಷದ ಜಯಂತಿಯೊಳಗೆ ಉದ್ಘಾಟಿಸುವುದಾಗಿ ಶಾಸಕ ಡಾ.ಶಿವರಾಜ ಪಾಟೀಲ್ ಭರವಸೆ ನೀಡಿದರು.    ಅವರಿಂದು ಮಾಣಿಕ್ ನಗರದ ಶ್ರೀ ಮಾರ್ಕಂಡೇಶ್ವರ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ  ಮಾತನಾಡಿ, ಈಗಾಗÀಲೇ ೧೯ ಕ್ಕೂ ಹೆಚ್ಚು ಸಮಾಜಗಳಿಗೆ ಸಿಎ ಸೈಟ್ ನೀಡಲಾಗಿದೆ. ಅತಿ ಚಿಕ್ಕ ಸಮಾಜವಾದರೂ ಪ್ರತಿ ವರ್ಷ ಶ್ರೀ ಮಾರ್ಕಂಡೇಶ್ವರ ಜಯಂತಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿರುವ ಪದ್ಮಶಾಲಿ ಸಮಾಜಕ್ಕೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ಸೈಟ್ ದೊರಕಿಸಿಕೊಡುವುದಾಗಿ ತಿಳಿಸಿದರು.  ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರು ಕಾಂಗ್ರೆಸ್ ಮುಖಂಡರಾದ ಕೆ. ಶಾಂತಪ್ಪ ಅವರು ಮಾತನಾಡಿ, ಹಿಂದುಳಿದ ಸಮಾಜಗಳು ಮೀಸಲಾತಿ ವಂಚಿತರಾಗಿ ಹಿಂದುಳಿದಿದ್ದೇವೆ. ಸಮಾಜಿಕವಾಗಿ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಪ್ರಾಭಲ್ಯ ಪಡೆಯುವಲ್ಲಿ ಶಿಕ್ಷಣದ ಜೊತೆಗೆ ಸಂಘಟನೆಯೂ ಅತಿ ಮುಖ್ಯವಾಗಿದೆ. ಸಮಾಜದ ಸಂಘಟನೆಯಿ0ದ ಸರ್ಕಾರದ ಸೌಲಭ್ಯಗಳು ಮನೆ ಬಾಗಿಲೆಗೆ ಬರಲಿವೆ ಎಂಬುದನ್ನು ಪದ್ಮಶಾಲಿ ಸಮಾಜ ಅಭಿವೃದ್ಧಿಯೇ ನಿದರ...