ಮಾ.30 ನಗರ ಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಚುನಾವಣಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿ ರಾಯಚೂರು ಮಾ.29:- ಇಲ್ಲಿಯ ರಾಯಚೂರು ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನಲೆಯಲ್ಲಿ ಮಾ.30ರ ಬೆಳಿಗ್ಗೆ 6ಗಂಟೆಯಿAದ ಸಂಜೆ 6ಗಂಟೆಯವರೆಗೆ ಚುನಾವಣಾ ಕೇಂದ್ರಗಳ ಸುತ್ತಲೂ 1973 ದಂಡ ಪ್ರಕ್ರಿಯೆ ಸಂಹಿತೆ ಕಲಂ 133,144(3)ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ರಾಯಚೂರು ಉಪ ವಿಭಾಗಾಧಿಕಾರಿಗಳು ಹಾಗೂ ಉಪ ವಿಭಾಗ ದಂಡಾಧಿಕಾರಿಗಳಾದ ರಜನಿಕಾಂತ ಅವರು ಆದೇಶ ಹೊರಡಿಸಿದ್ದಾರೆ. ನಗರಸಬೆಯಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ಇರದ ಕಾರಣ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪಕ್ಷಗಳಲ್ಲಿ ಮತ್ತು ಪಕ್ಷೇತರ ಸದಸ್ಯರುಗಳ ಮಧ್ಯೆ ಅಧ್ಯಕ್ಷ ಆಯ್ಕೆಗಾಗಿ ತೀವ್ರ ಪೈಪೋಟಿ ಇದ್ದು, ಅಧ್ಯಕ್ಷರ ಆಯ್ಕೆಗಾಗಿ ನಡೆಯುವ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುತ್ತದೆ. ಅಧ್ಯಕ್ಷ ಆಯ್ಕೆ ನಂತರ ಮೆರವಣಿಗೆಯನ್ನು ನಿಷೇಧಿಸಲಾಗಿದೆ, ನಿಷೇಧಿತ ವಲಯದಲ್ಲಿ 4ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಕೇವಲ ಆಯ್ಕೆಯಾದ ಸದಸ್ಯರು ಗುರುತಿನ ಚೀಟಿ ಹೊಂದಿರುವ ಅಥವಾ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು, ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳಿಗೆ ಮಾತ್ರ ನಿಷೇಧಿತ ವಲಯದಲ್ಲಿ ಅವಕಾಶವಿದ್ದು, ಯಾರ...