Posts

Showing posts from January, 2023

ಕಾಡ್ಲೂರು: ರೈಲ್ವೇ ಕೆಳ ಸೇತುವೆಯಲ್ಲಿ ನೀರು ನಿಲುಗಡೆಯಿಂದ ನಿತ್ಯ ಯಾತನೆ : ಸಂಬಂಧಿಸಿದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಆರೋಪ.

Image
  ಕಾಡ್ಲೂರು: ರೈಲ್ವೇ ಕೆಳ ಸೇತುವೆಯಲ್ಲಿ  ನೀರು ನಿಲುಗಡೆಯಿಂದ ನಿತ್ಯ ಯಾತನೆ : ಸಂಬಂಧಿಸಿದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ  ಆರೋಪ.                        ರಾಯಚೂರು,ಜ.31- ತಾಲೂಕಿನ ಕಾಡ್ಲೂರು  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡ್ಲೂರಿನಿಂದ ಶಕ್ತಿ ನಗರ  ಹೋಗುವ ಮಾರ್ಗ ಮಧ್ಯದಲ್ಲಿ   ರೈಲ್ವೆ ಬ್ರಿಡ್ಜ್ ಕೆಳಗೆ ಯಾವಾಗಲೂ ನೀರು ನಿಂತು ಸಂಚಾರ ಮಾಡುವುದಕ್ಕೆ ಬಹಳ ತೊಂದರೆಯಾಗಿದ್ದು ಇದರಿಂದ ಶಾಲಾ ಮಕ್ಕಳಿಗೆ, ರೈತರಿಗೆ, ಗ್ರಾಮಸ್ಥರಿಗೆ ಸುಗಮ ಸಂಚಾರಕ್ಕೆ ತೀರ್ವ ಅಡಚಣೆಯಾಗುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಈದುವರೆಗೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲವೆಂಬುದು ಗ್ರಾಮಸ್ಥರ ಅಳಲಾಗಿದೆ . ಶಾಲೆಯ ವಿದ್ಯಾರ್ಥಿಗಳಿಗೆ, ಆಸ್ಪತ್ರೆಗೆ ಹೋಗುವ  ಗರ್ಭಿಣಿ ಮಹಿಳೆಯರಿಗೆ, ಅನಾರೋಗ್ಯ ಪೀಡಿತರಿಗೆ, ವೃದ್ಧರಿಗೆ ಈ  ದಾರಿಯಲ್ಲಿ ಸಾಗಬೇಕಾದರೆ ಬಹಳಷ್ಟು ಕಷ್ಟ ಪಡಬೇಕಾಗಿದೆ ಹಾರುಬೂದಿ ಲಾರಿಗಳಿಂದ ಟ್ರಾಫಿಕ್ ಜಾಮ್, ಸರಿಯಾದ ಸಮಯಕ್ಕೆ ಶಾಲೆಗೆ ಮತ್ತು ಆಸ್ಪತ್ರೆಗೆ   ಹೋಗುವುದಕ್ಕೆ ತೊಂದರೆಯಾಗುತ್ತಿದೆ ಇದಕ್ಕೆಲ್ಲ  ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಸಂಬಂಧಪಟ್ಟ ಅಧಿಕಾರಿಗಳು ನೇರ ಹೊಣೆ ಹೊರಬೇಕಾಗುತ್ತದೆ ಎಂದು ಕಾಡ್ಲೂರಿನ  ಬಿಜೆಪಿ ಯುವ ಮುಖಂಡ...

371(ಜೆ) ಮೀಸಲಾತಿ ವ್ಯತಿರಿಕ್ತ ನೇಮಕಾತಿ: ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನಿಯಮ ಉಲಂಘನೆ- ರಜಾಕ ಉಸ್ತಾದ.

Image
371(ಜೆ) ಮೀಸಲಾತಿ ವ್ಯತಿರಿಕ್ತ ನೇಮಕಾತಿ:                        ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನಿಯಮ ಉಲಂಘನೆ- ರಜಾಕ ಉಸ್ತಾದ.            ರಾಯಚೂರು,ಜ.31- ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು, ಸದರಿ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ರಾಜ್ಯ ಮಟ್ಟದಲ್ಲಿ ಉನ್ನತ ಮೆರಿಟ್ ಹೊಂದಿದ್ದರೂ ಮಿಕ್ಕುಳಿದ ವೃಂದದಲ್ಲಿ ಆಯ್ಕೆ ಮಾಡುವ ಅವಕಾಶವಿದ್ದರೂ ಸ್ಥಳೀಯ ವೃಂದದ ಪಟ್ಟಿಯಲ್ಲಿ ಆಯ್ಕೆ ಮಾಡುವದರ ಮೂಲಕ ಈ ಭಾಗದ ಇನ್ನುಳಿದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿರುವದನ್ನು ತೀರ್ವವಾಗಿ ಖಂಡಿಸಲಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರಾದ ರಜಾಕ ಉಸ್ತಾದ ಹೇಳಿದರು.                                ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ    ನಿಯಮದಂತೆ, ಯಾವುದೇ ಅಭ್ಯರ್ಥಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿದ್ದು, ಅಭ್ಯರ್ಥಿಯ ಮೆರಿಟ್ ಹೊಂದಿದ್ದರೆ ಸಾಮಾನ್ಯ ಅಭ್ಯರ್ಥಿ ಕೋಟಾದಡಿಯಲ್ಲಿ ಆಯ್ಕೆ ಮಾಡುವದು ನ್ಯಾಯಯುತವಾಗಿರುತ್ತದೆ, ಆದರೆ ೩೭೧ಜೆ ಮೀಸಲಾತಿಯಲ...

ಕಿರು ಗ್ರಂಥಾಲಯದಿಂದ ಮಕ್ಕಳಿಗೆ ಜ್ಞಾನ ದೊರೆಯುತ್ತದೆ: ಧರ್ಮೋ ರಕ್ಷತಿ ರಕ್ಷಿತಾ- ಶ್ರೀ ವಿದ್ಯಾ ಸಿಂಧು ಮಾಧವ ತೀರ್ಥರು.

Image
ಕಿರು ಗ್ರಂಥಾಲಯದಿಂದ ಮಕ್ಕಳಿಗೆ ಜ್ಞಾನ ದೊರೆಯುತ್ತದೆ:            ಧರ್ಮೋ ರಕ್ಷತಿ ರಕ್ಷಿತಾ- ಶ್ರೀ ವಿದ್ಯಾ ಸಿಂಧು ಮಾಧವ ತೀರ್ಥರು.                ರಾಯಚೂರು,ಜ.31- ಧರ್ಮೋ ರಕ್ಷತಿ ರಕ್ಷಿತಾ ಎಂಬ ಉಕ್ತಿಯಂತೆ ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂದು ಶ್ರೀ ವಿದ್ಯಾ ಸಿಂಧು ಮಾಧವ ತೀರ್ಥ ಶ್ರೀ ಪಾದಂಗಳವರು ನುಡಿದರು.                                 ಅವರಿಂದು ನಗರದಲ್ಲಿ ಕಾಡ್ಲೂರು ದೇಸಾಯರ ಮನೆಯಲ್ಲಿ ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿ  ನಾವೆಲ್ಲರೂ ನಮ್ಮ  ಧರ್ಮ ಪಾಲನೆ ಪೋಷಣೆ ಮಾಡಬೇಕೆಂದ ಅವರು ಕುಟುಂಬದಲ್ಲಿ ಹಿರಿಯರ ಮಾರ್ಗದರ್ಶನದಂತೆ ಕಿರಿಯರು ಸಾಗಬೇಕು, ಗುರು ಹಿರಿಯರನ್ನು ಗೌರವಿಸುವ ಪರಿಪಾಟ ಇಂದಿನ ಯುವ ಪೀಳಿಗೆ ಬೆಳೆಸಿಕೊಳ್ಳಬೇಕೆಂದರು.                     ಮನೆಯಲ್ಲಿ ಸಾತ್ವಿಕ ನಡೆ ನುಡಿಗಳನ್ನು ರೂಡಿಸಿಕೊಳ್ಳಬೇಕೆಂದ ಅವರು ಸನ್ಮಾರ್ಗದತ್ತ ಸಾಗಬೇಕು ದೇವರ ಚಿಂತನೆ ನಮ್ಮ ಆದ್ಯತೆಯಾಗಬೇಕೆಂದರು.                      ...

ಬೂರ್ದಿಪಾಡ : ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

Image
  ಬೂರ್ದಿಪಾಡ : ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ. ರಾಯಚೂರು,ಜ.31- ತಾಲೂಕಿನ ಬೂರ್ದಿಪಾಡ ಗ್ರಾಮದಲ್ಲಿ  ಶಾಸಕ ಬಸನಗೌಡ ದದ್ದಲ್ ರವರು ಕೆ.ಕೆ.ಆರ್.ಡಿ.ಬಿ ಮೈಕ್ರೋ ಯೋಜನೆಯಡಿಯಲ್ಲಿ ಸ ಹಿ ಪ್ರಾ ಶಾಲೆಯ ಎರಡು ಕೊಠಡಿ  ನಿರ್ಮಾಣದ ಭೂಮಿ ಪೂಜೆ ಮತ್ತು ಜುರಾಲಾ ಯೋಜನೆಯಡಿ ವಿವಿದೊದ್ದೇಶ ಸಮುದಾಯ ಭವನ ಕಟ್ಟಡ ಉದ್ಘಾಟನೆ  ಭೂಮಿ ಪೂಜೆ  ನೆರವೇರಿಸಿ ಮಾತನಾಡಿರು . ನನ್ನ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಶಿಕ್ಷಣ ವಂತರ ಸಂಖ್ಯೆ ಹೆಚ್ಚಾಗಬೇಕು ನೂರಕ್ಕೆ ನೂರಷ್ಟು ಶಿಕ್ಷಣ ಪಡೆಯಬೇಕು  ಆಗ ಮಾತ್ರ ನಮ್ಮ ಕ್ಷೇತ್ರ ಮತ್ತು ಜಿಲ್ಲೆ ಅಭಿವೃದ್ಧಿಯಾಗಲು ಸಾಧ್ಯ ಎಂದರು. ಬೂರ್ದಿಪಾಡ ಗ್ರಾಮ ನೆರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಗ್ರಾಮ ಈ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಶಿಕ್ಷಣ ಪಡೆಯಬೇಕು, ಕನ್ನಡದ ಉಳುವಿಗಾಗಿ, ಶಾಲೆಯ ಅಭಿವೃದ್ಧಿಗಾಗಿ, ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಹುದ್ದೆ ಪಡೆಯಬೇಕು, ಶಿಕ್ಷಕರು ಕೂಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿ ಈ ಶಾಲೆಯನ್ನು ದತ್ತು ಪಡೆಯಲಾಗಿದೆ.  ಈ ಶಾಲೆಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶಾಲೆಗೆ 28 ಲಕ್ಷ ರೂ ಮೊತ್ತದ ಎರಡು ಶಾಲಾ ಕೊಠಡಿಗಳು, ಹೈಟೇಕ್ ಶೌಚಾಲಯ ಕಾಂಪೌಂಡ್ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಶಾಲೆಗೆ  ಹ...

ಜವಾಹರ ನಗರ ಪ್ರೌಢಶಾಲೆಯಲ್ಲಿ ಕಲಿಕಾ ಹಬ್ಬ ಎಲ್ಲರೂ ಭಾಗವಹಿಸಲು ಮನವಿ

Image
  ಜವಾಹರ ನಗರ ಪ್ರೌಢಶಾಲೆಯಲ್ಲಿ ಕಲಿಕಾ ಹಬ್ಬ ಎಲ್ಲರೂ ಭಾಗವಹಿಸಲು ಮನವಿ ರಾಯಚೂರು,ಜ.31-  ಶಿಕ್ಷಣ ಇಲಾಖೆಯಿಂದ ಫೆ 3 ಮತ್ತು 4 ರಂದು  ಜವಾಹರ ನಗರ ಪ್ರೌಢಶಾಲೆಯಲ್ಲಿ ಕಲಿಕಾ ಹಬ್ಬವನ್ನು ಏರ್ಪಡಿಸಲಾಗಿದೆ ದಿನಾಂಕ 3 ರಂದು ಬೆಳಗ್ಗೆ 8: 30 ನಿಮಿಷಕ್ಕೆ ಹನುಮಾನ್ ಟಾಕೀಸ್ ವೃತ್ತದಿಂದ ಈ ಭಾಗದ ಶಾಲೆಯ ವಿದ್ಯಾರ್ಥಿಗಳಿಂದ ನಮ್ಮ ಶಾಲೆಯವರೆಗೆ ಭವ್ಯ ಮೆರವಣಿಗೆ ಇರುತ್ತದೆ.   ಇದರಲ್ಲಿ ವಿದ್ಯಾರ್ಥಿಗಳು ವೇಷ ಭೂಷಣಗಳೊಂದಿಗೆ ಭಾಗವಹಿಸುತ್ತಾರೆ.   10:30ಕ್ಕೆ ನಮ್ಮ ಶಾಲೆಯ ಆವರಣದಲ್ಲಿ ಉದ್ಘಾಟನಾ ಸಮಾರಂಭ ಇರುತ್ತದೆ.   ಇದರಲ್ಲಿ ಮಾನ್ಯ ಶಾಸಕರು ಜನಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.   ಜವಾಹರ್ ನಗರ ಪ್ರೌಢಶಾಲೆಯಲ್ಲಿ ಓದಿದ ಪ್ರತಿಯೊಬ್ಬ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬೇಕೆಂದು ಜವಾಹರ ನಗರ ಪ್ರೌಢಶಾಲೆ ಮುಖ್ಯ ಗುರುಗಳಾದ  ಮುರಳಿಧರ ಕುಲಕರ್ಣಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತಾರೆ.

ನಗರದಲ್ಲಿ ಒತ್ತುವರಿಯಾದ ರುದ್ರಭೂಮಿಗಳ ಸರ್ವೆ ಮಾಡುತ್ತೇವೆ - ರಾಜಶೇಖರ್ .

Image
  ನಗರದಲ್ಲಿ ಒತ್ತುವರಿಯಾದ ರುದ್ರಭೂಮಿಗಳ ಸರ್ವೆ ಮಾಡುತ್ತೇವೆ - ರಾಜಶೇಖರ್ .                ರಾಯಚೂರು,ಜ.30 - ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಸರ್ವೇ ನಂ. 929/2 ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿರಿಸಿದ  ಜಾಗ ಒತ್ತುವರಿ ಮಾಡಲಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿಅದಕ್ಕೆ ಸ್ಪಂದಿಸಿದ  ತಾಲೂಕು ದಂಡಾಧಿಕಾರಿ ಮತ್ತು ತಹಸಿಲ್ದಾರರಾದ  ರಾಜಶೇಖರ್ ರವರು ಇಂದು ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಭೂಮಿ  ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಅಲ್ಲದೆ ನಗರದಲ್ಲಿ ಒತ್ತುವರಿಯಾದ  ರುದ್ರಭೂಮಿಗಳ ಸರ್ವೆ  ಮಾಡಲಾಗುತ್ತದೆ ಎಂದು ತಿಳಿಸಿದರು.                ನಗರದ ಬೋಳಮಾನ್ ದೊಡ್ಡಿ ರಸ್ತೆಯಲ್ಲಿರುವ ರುದ್ರಭೂಮಿ ಅತಿಕ್ರಮಣ ಕುರಿತು  ಅತಿ ಶೀಘ್ರದಲ್ಲಿಯೇ ಸರ್ವೆ ಮಾಡುವುದಾಗಿ ರುದ್ರಭೂಮಿ ಸಂರಕ್ಷಣಾ ಸಮಿತಿಗೆ ತಿಳಿಸಿದರು.               ಈ ಸಂದರ್ಭದಲ್ಲಿ ರುದ್ರಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ  ಕೆ.ಟಿ ಆನಂದ್ ,ಕಾರ್ಯದರ್ಶಿ ವಿಜಯ ಭಾಸ್ಕರ್ ಇಟಿಗಿ, ಸಲಹೆಗಾರ  ನಾರಾಯಣ ಗುರೂಜಿ , ನರಸಪ್ಪ ಕುರುಡಿ, ಸೆಂಟ್ರಿಂಗ್ ಮಾರೆಪ್ಪ ನಾಯಕ್,ಶ್ರೀನಿವಾಸ್ ನಾಯಕ್,ಹನುಮಂತು ಮೇಸ್ತ್ರಿ, ಪೊಲೀಸ್ ನರಸಿಂ...

ಮಂತ್ರಾಲಯ: ಶ್ರೀ ಮಧ್ವ ನವಮಿ ಆಚರಣೆ.

Image
ಮಂತ್ರಾಲಯ: ಶ್ರೀ ಮಧ್ವ ನವಮಿ ಆಚರಣೆ.                    ರಾಯಚೂರು,ಜ.30- ಶ್ರೀ ಮಧ್ವ ನವಮಿ ಅಂಗವಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಮುಖ್ಯ ಪ್ರಾಣದೇವರಿಗೆ ಪಂಚಾಮೃತ ಅಭಿಷೇಕವನ್ನು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನೆರವೇರಿಸಿದರು.                                     ನಂತರ ಮಧ್ವಾಚಾರ್ಯರ  ರಥೋತ್ಸವಕ್ಕೆ ಪುಷ್ಪವೃಷ್ಟಿ ಹಾಗೂ ಮಂಗಳಾರತಿ ನೆರವೇರಿಸಿ ಚಾಲನೆ ನೀಡಿದರು.                                                  ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ  ವಿದ್ಯಾರ್ಥಿಗಳಿಂದ ಶ್ರೀ  ಸುಮಧ್ವ ವಿಜಯ ಪಾರಾಯಣ, ಪಂಡಿತರಿಂದ ಉಪನ್ಯಾಸ ನೆರವೇರಿತು.     ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.          

ಮನುಕುಲದ ಮಹಾನ ದಾರ್ಶನಿಕರು ಶ್ರೀಮನ್ಮಧ್ವಾಚಾರ್ಯರು

Image
  ಮನುಕುಲದ ಮಹಾನ ದಾರ್ಶನಿಕರು ಶ್ರೀಮನ್ಮಧ್ವಾಚಾರ್ಯರು ಪಾ ಜಕ ಎಂಬ ಕ್ಷೇತ್ರದಲ್ಲಿ 1238 ರಲ್ಲಿ ಮದ್ಯಗೇಹ ಭಟ್ಟರು ಮತ್ತು ವೇದಾವತಿ ಎಂಬ ಗುಣೋಪೇತ ದಂಪತಿಗಳಿಗೆ ಮೊದಲನೆಯ ಎರೆಡು ಮಕ್ಕಳ ಅಕಾಲ ಮೃತುವಿನ ಬಳಿಕ ಹನ್ನೆರಡು ವರ್ಷಗಳ ಸುದೀರ್ಘ ಪ್ರಾರ್ಥನೆಯ ಫಲವಾಗಿ ಅನಂತೇಶ್ವರನ ಅನುಗ್ರಹದಿಂದ ಜನಿಸಿದ ಪುತ್ರರತ್ನರೆ ವಾಸುದೇವಾಚಾರ್ಯ (ಶ್ರೀಮನ್ಮಧ್ವಾಚಾರ್ಯ) ಪೂರ್ವಾಶ್ರಮದ ಹೆಸರು. ಬಾಲ್ಯದಲ್ಲಿ ಅಸಾಧಾರಣ ತೇಜಸ್ಸುಳ್ಳವರಾಗಿದ್ದರು ಭಾಗವತ ಸಂಪ್ರದಾಯ ಆಚರಣೆಯಲ್ಲಿ ಅಮಿತೋತ್ಸಾಹ, ಜ್ಞಾನಾರ್ಜನಾ ತವಕ, ವಿಚಾರ ಸ್ವಾತಂತ್ರ, ಪ್ರಬಲ ಜ್ಞಪಕಶಕ್ತಿ, ಆಕರ್ಷಣೀಯ ಹಾಗೂ ವಿಶ್ವಾಸದಾಯಕವಾದ ವ್ಯಕ್ತಿತ್ವ , ದರ್ಶನ ಮಾತ್ರದಿಂದಲೆ ಗೌರವಾಂಕುರಗೊಳಿಸುವ ಕಾಯ, ದಿವ್ಯ ಸುಂದರಕಾಂತಿವುಳ್ಳ ನೇತ್ರಗಳು ಇವೆಲ್ಲಾ ಗುಣಗಳು ನವ ಮತ ಸಂಸ್ಥಾಪಕರಿಗಿದ್ದ ಅಂಶಗಳು. ರಾಜಕಾರಣದಲ್ಲಾಗಲಿ, ದೈವಿಕ ವಿಚಾರದಲ್ಲಾಗಲಿ ಕಾಲಬಾರದೆ ಧೀರರಾಗಲು ಸಾದ್ಯವಿಲ್ಲ ಎಂಬ ಸತ್ಯದ ನುಡಿಯಂತೆ ವಾಸುದೇವಾಚಾರ್ಯರು ತಮ್ಮ ಐದನೆ ವರ್ಷದಲ್ಲಿ ಉಪನಯನ ಸಂಸ್ಕಾರವನ್ನು ಹೊಂದಿ ಬಹುಬೇಗನೆ ಸಕಲ ಶಾಸ್ತçಗಳನ್ನು ತಿಳಿದು ಮನಗೊಂಡು ಅಗ ತುಳುನಾಡಿನಲ್ಲಿ ಪ್ರಖ್ಯಾತರಾಗಿದ್ದ ಯತಿವರ್ಯ ಅಚ್ಯುತ ಪ್ರೇಕ್ಷಾಚಾರ್ಯರ ಶಿಷ್ಯರಾಗಿ ಸನ್ಯಾಸದೀಕ್ಷೆಯನ್ನು ಕೈಗೊಳ್ಳಲು ಸಿದ್ದರಾದರು. ಆದರೆ ಮದ್ಯಗೇಹ ದಂಪತಿಗಳಿಗೆ ಮೊದಲನೆಯ ಎರೆಡು ಮಕ್ಕಳು ತೀರಿಕೊಂಡಿದ್ದರಿಂದ ಏಕಮಾತ್ರ ಪುತ್ರನನ್ನು ಸನ್ಯಾಸ ದೀಕ್ಷೆ ಪಡೆಯಲು...

ಮಂತ್ರಾಲಯ: ಹೆಚ್ ಡಿ ಕುಮಾರಸ್ವಾಮಿ ದಂಪತಿ ಭೇಟಿ.

Image
  ಮಂತ್ರಾಲಯ: ಹೆಚ್ ಡಿ ಕುಮಾರಸ್ವಾಮಿ ದಂಪತಿ    ಭೇಟಿ.                                      ರಾಯಚೂರು,ಜ.29- ಮಾಜಿ ಸಿಎಂ ಹೆಚ್ .ಡಿ.  ಕುಮಾರ ಸ್ವಾಮಿ ದಂಪತಿ ಸಹಿತ ಮಂತ್ರಾಲಯ ಶ್ರೀ  ರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ ನೀಡಿದರು.       ಮಂಚಾಲಮ್ಮ ದೇವಿ ದರ್ಶನ ಪಡೆದ ಹೆಚ್ ಡಿ ಕುಮಾರ ಸ್ವಾಮಿ ಮತ್ತು ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ನಂತರ ರಾಯರ ಮೂಲ ಬೃಂದಾವನ ದರ್ಶನ ಪಡೆದರು.      ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.        ತದ ನಂತರ ಗೋಶಾಲೆ, ಶ್ರೀ ಅಭಯ ಆಂಜನೇಯ, ಅಭಯ ಶ್ರೀ ರಾಮ ವಿಗ್ರಹ ನಿರ್ಮಾಣ ಸ್ಥಳ, ವಿಧ್ಯಾಪೀಠ ಮುಂತಾದೆಡೆ   ಪೀಠಾಧಿಪತಿಗಳೊಂದಿಗೆ  ಭೇಟಿ ನೀಡಿ  ವೀಕ್ಷಿಸಿ ಶ್ರೀಮಠದ ಅಭಿವೃದ್ದಿ ಕಾರ್ಯಗಳ ಬಗ್ಗೆ  ಮೆಚ್ಚುಗೆ ವ್ಯಕ್ತಪಡಿಸಿ ದರು.          

ಮಂತ್ರಾಲಯ: ರಥ ಸಪ್ತಮಿ ಅಂಗವಾಗಿ ಪಂಚ ರಥೋತ್ಸವ.

Image
ಮಂತ್ರಾಲಯ: ರಥ ಸಪ್ತಮಿ ಅಂಗವಾಗಿ ಪಂಚ ರಥೋತ್ಸವ.            ರಾಯಚೂರು,ಜ.28- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಥ ಸಪ್ತಮಿ ಅಂಗವಾಗಿ ಪಂಚ ರಥೋತ್ಸವ ಜರುಗಿತು. ಪ್ರಾತಕಾಲದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ರಜತ ಗಜವಾಹನ, ರಜತ, ಸುವರ್ಣ, ನವರತ್ನ ,ಕಾಷ್ಟ ರಥೋತ್ಸವಕ್ಕೆ ಚಾಲನೆ ನೀಡಿದರು.ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು .

ನಗರದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಅದ್ದೂರಿ ಸ್ವಾಗತ: ಜಾತಿ ಮತ್ತು ಹಣದ ಆಮೀಷಕ್ಕೆ ಒಳಗಾಗದೆ ಜೆಡಿಎಸ್ ಬೆಂಬಲಿಸಿ-ಹೆಚ್‌ಡಿಕೆ

Image
  ನಗರದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಅದ್ದೂರಿ ಸ್ವಾಗತ: ಜಾತಿ ಮತ್ತು ಹಣದ ಆಮೀಷಕ್ಕೆ ಒಳಗಾಗದೆ ಜೆಡಿಎಸ್ ಬೆಂಬಲಿಸಿ-ಹೆಚ್‌ಡಿಕೆ ರಾಯಚೂರು,ಜ.೨೭-ಜಾತಿ ಮತ್ತು ಹಣದ ಆಮೀಷಕ್ಕೆ ಒಳಗಾಗದೆ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಅವರಿಂದು ನಗರದ ರಾಮಲಿಂಗೇಶ್ವರ ಮೈದಾನದಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ ಸಮಾವೇಶ  ಉದ್ಘಾಟಿಸಿ ಮಾತನಾಡಿ ಈ ಬಾರಿ ನನ್ನ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದರೆ ನಿಮ್ಮೆಲ್ಲ ಸಂಕಷ್ಟಗಳನ್ನು ದೂರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ನಾನು ಕಳೆದ ೫೪ ದಿನಗಳಿಂದ ಪಂಚರತ್ನ ರಥಯಾತ್ರೆಯಲ್ಲಿ ಸಂಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಅನೇಕ ಭಾಗಗಳಲ್ಲಿ ಪಂಚರತ್ನ ಸಾಗಬೇಕಾದ ಹಿನ್ನಲೆಯಲ್ಲಿ ಎರಡೆ ದಿನದಲ್ಲಿ ರಾಯಚೂರು ಜಿಲ್ಲೆಯ ರಥಯಾತ್ರೆ ಕಾರ್ಯಕ್ರಮ ಅಯೋಜನೆ ಮಾಡಲಾಗಿದ್ದು ಕಾರ್ಯಕರ್ತರ ಬಲದಿಂದ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ದೊರಕಿದೆ ಎಂದ ಅವರು ನಾನು ೧೮ ತಾಸುಗಳ ಕಾಲ ಕೆಲಸ ಮಾಡುವ ವ್ಯಕ್ತಿಯಾಗಿದ್ದು ನಮ್ಮ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ನೀಡಬೇಕೆಂದು ಕೋರಿದರು. ನಗರ ಕ್ಷೇತ್ರಕ್ಕೆ ಈ.ವಿನಯ್‌ಕುಮಾರ್ ರವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದ್ದು ಇಲ್ಲಿನ ಜನರು ನನ್ನನ್ನೆ ನಿಮ್ಮ ಅಭ್ಯರ್ಥಿಯಂದು ಭಾವಿಸಿ ಮತ ನೀಡಬೇಕೆಂದು ಕೋರಿದ ಅವರು ೨೦೧೩ರಲ್ಲಿ ನಮ...

ಜೆಡಿಎಸ್ ಪಕ್ಷದಿಂದ ನಗರ ಕ್ಷೇತ್ರಕ್ಕೆ ಸ್ಪರ್ದೆ: ನಗರಸಭೆ ಸದಸ್ಯ ಸ್ಥಾನಕ್ಕೆ ಈ.ವಿನಯಕುಮಾರ್ ರಾಜೀನಾಮೆ

Image
ಜೆಡಿಎಸ್ ಪಕ್ಷದಿಂದ ನಗರ ಕ್ಷೇತ್ರಕ್ಕೆ ಸ್ಪರ್ದೆ:  ನಗರಸಭೆ ಸದಸ್ಯ ಸ್ಥಾನಕ್ಕೆ ಈ.ವಿನಯಕುಮಾರ್ ರಾಜೀನಾಮೆ     ರಾಯಚೂರು,ಜ.27-ಜೆಡಿಎಸ್ ಪಕ್ಷದಿಂದ ನಗರ ಕ್ಷೇತ್ರಕ್ಕೆ ಸ್ಪರ್ದಿಸುವ ಹಿನ್ನಲೆಯಲ್ಲಿ ಈ.ವಿನಯ್ ಕುಮಾರ್ ತಮ್ಮ ನಗರ ಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.                 ಅವರಿಂದು ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಸಲ್ಲಿಸಿದ್ದು ತಾವು ಪ್ರತಿನಿಧಿಸುವ ವಾರ್ಡ್ ನಂ.12 ಮಂಗಳವಾರ ಪೇಟೆ ನಗರಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ತಾವು ನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ದಿಸುವ ನಿಟ್ಟಿನಲ್ಲಿ ರಾಜೀನಾಮೆ ಸಲ್ಲಿಸುವುದಾಗಿ ಉಲ್ಲೇಖಿಸಿದ್ದಾರೆ.                      ಈಗಾಗಲೆ ಈ.ವಿನಯ ಕುಮಾರ್ ಜೆಡಿಎಸ್ ಪಕ್ಷದಿಂದ ನಗರ ಕ್ಷೇತ್ರದ ಅಭ್ಯರ್ಥಿ ಎಂದು ಪಕ್ಷದ ಅಧಿಕೃತ ಘೋಷಣೆ ಹಿನ್ನಲೆ ವಿನಯ ಕುಮಾರ್ ನಗರಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮುಖಾಂತರ ವಿಧಾನ ಸಭಾ ಚುನಾವಣೆಗೆ ಅಣಿಯಾಗಿದ್ದಾರೆ.                               ಜಿಲ್ಲೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಸಾಗುತ್ತಿದ್ದು ಇಂದ ನಗರದಲ್ಲಿ ಅ...

ದೇವನಪಲ್ಲಿ ಗ್ರಾಮದಲ್ಲಿರುವ ಶ್ರೀ ಸಿದ್ದಗಂಗಾ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ .

Image
ದೇವನಪಲ್ಲಿ ಗ್ರಾಮದಲ್ಲಿರುವ ಶ್ರೀ ಸಿದ್ದಗಂಗಾ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ  ರಾಯಚೂರು,ಜ.26-  ದೇವನಪಲ್ಲಿ ಗ್ರಾಮದಲ್ಲಿರುವ ಶ್ರೀ ಸಿದ್ದಗಂಗಾ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ  ಧ್ವಜಾರೋಹಣವನ್ನು ಶಾಲೆಯ ಕಾರ್ಯದರ್ಶಿಗಳಾದ ಈರೇಶ, ಖಜಾಂಚಿಗಳಾದ ಉರುಕುಂದಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್, ಊರಿನ ಮುಖಂಡರಾದ ಎಕ್ಬಾಲ್ ಸಾಬ್ ಮತ್ತು ನಾಗೇಶ ರವರು ನೆರವೇರಿಸಿದರು. ಪ್ರಾಥ೯ನೆಯೋಂದಿಗೆ ಪ್ರಾರಂಭವಾದ ಕಾರ್ಯಕ್ರಮ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗ ಬಹುಮಾನ ವಿತರಿಸಲಾಯಿತು.               ಮಕ್ಕಳು ದೇಶಭಕ್ತಿ ಗೀತೆಗಳಿಗೆ ನೃತ್ಯವನ್ನು ಮಾಡಿದರು. ಈ ಸಂದರ್ಭದಲ್ಲಿ ಊರಿನ ಯುವ ಮುಖಂಡರಾದ ಶಿವಾನಂದ , ರಂಗನಾಥ್ , ಗೋಪಾಲ, ವೀರುಪಾಕ್ಷ, ಶಿವು, ಎಂ.ಅನಿಲ್ . ಬಸವರಾಜ್, ವೀರೇಂದ್ರ , ಪ್ರಕಾಶ್ , ರಮೇಶ, ಮಹೇಶ,ಗೋಪಾಲ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರು & ಸಿಬ್ಬಂದಿ ವಗ೯ದವರು ಉಪಸ್ಥಿತರಿದ್ದರು .

ತುಂಗಭದ್ರಾ ಕಾಮಿ೯ಕರ ನಿಯೋಗಕ್ಕೆ ಮಾತುಕತೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮುನೇನಕೊಪ್ಪ ಆಹ್ವಾನ

Image
  ತುಂಗಭದ್ರಾ ಕಾಮಿ೯ಕರ ನಿಯೋಗಕ್ಕೆ  ಮಾತುಕತೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮುನೇನಕೊಪ್ಪ ಆಹ್ವಾನ ರಾಯಚೂರು,ಜ.26-  ಹದಿನಾಲ್ಕು ತಿಂಗಳ ಬಾಕಿ ವೇತನ ಪಾವತಿ ಮಾಡಬೇಕೆಂದು ಇಂದು ರಾಯಚೂರು ಸ್ಟೇಡಿಯಂ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ ಮುನಿನಕೊಪ್ಪ ಅವರನ್ನು ಘೇರಾಯಿಸಲು ಮುಂದಾದ ತುಂಗಭದ್ರ ಕಾಮಿ೯ಕರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ  ಮುನಿನಕೊಪ್ಪ ಮಾತನಾಡಿದರು.   ಫೆಬ್ರವರಿ 10 ರಂದು ಸಂಘದ ನಿಯೋಗವನ್ನು ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಿದರು.ಹಿಂದಿನ ಸರಕಾರ ನೀಡಿದ ವಷ೯ ಪೂತಿ೯ ಕೆಲಸವನ್ನು ನಿಮ್ಮ ಸರಕಾರ ರದ್ದು ಮಾಡಿದೆ;ವಷ೯ ಪೂತಿ೯ ಕೆಲಸಕ್ಕೆ ಹಣಕಾಸಿನ ನೆಪ ಹೇಳ ಬೇಡಿ;ದಕ್ಷಿಣ ಕನಾ೯ಟಕದ ನೀರಾವರಿ ನಿಗಮಗಳು ಪ್ರತಿ ಹೆಕ್ಟೆರ್ಗೆ ನಿವ೯ಹಣಾ ವೆಚ್ಚ 900 ರೂ.ನೀಡುತ್ತಿದ್ದರೆ ತುಂಗಭದ್ರಕ್ಕೆ ಕೇವಲ 600 ನೀಡಲಾಗುತ್ತದೆ,ಇದು ಸರಕಾರದ ತಾರತಮ್ಯ ಎಂದು ಕಾಮಿ೯ಕ ಮುಖಂಡರು ಮಂತ್ರಿಯೊಂದಿಗೆ ವಾದಿಸಿದರು.     ಕೂಡಲೆ ಸಚಿವ ಕಾರಜೋಳ ಅವರನ್ನು ಬೇಟಿ ಮಾಡಿ ಅನುದಾನ ತಾರತಮ್ಯ ಸರಿಪಡಿಸಿ, ವಷ೯ ಪೂತಿ೯ ಕೆಲಸ ಹಾಗೂ 14 ತಿಂಗಳುಗಳ ಬಾಕಿ ವೇತನ ಕೊಡಿಸಲು ಕ್ರಮ ಕೈಗೊಳ್ಲಲಾಗುವುದು ಎಂದು ಭರವಸೆ ನೀಡಿದರು.    ಜಿಲ್ಲೆಯ 12 ಉಪ ವಿಭಾಗದಿಂದ ಬಂದಿದ್ದ ತುಂಗಭದ್ರ ಕಾಮಿ೯ಕರು ಹಾಗೂ ಮುಖಂಡರ ಜತೆ ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಜಿಲ್ಲಾಧ್ಯಕ್ಷ ಜಿ.ಅಮರೇಶ,ರ...

ಕೇಂದ್ರ ಸರ್ಕಾರ ರಾಜ್ಯಕ್ಕೆ ಏಮ್ಸ್ ನೀಡಿದ್ದಲ್ಲಿ ಜಿಲ್ಲೆಗೆ ಪ್ರಥಮ ಆದ್ಯತೆ- ಮುನೇನಕೊಪ್ಪ

Image
  ರಾಜ್ಯಕ್ಕೆ ಏಮ್ಸ್ ನೀಡಿದ್ದಲ್ಲಿ ಜಿಲ್ಲೆಗೆ ಪ್ರಥಮ ಆದ್ಯತೆ - ಮುನೇನಕೊಪ್ಪ ರಾಯಚೂರು,ಜ.೨೬-ಈಗಾಗಲೆ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದ ವೇಳೆ ಹೇಳಿದಂತೆ  ಕೇಂದ್ರ ಸರ್ಕಾರ ರಾಜ್ಯಕ್ಕೆ ಏಮ್ಸ್ ನೀಡುವುದಾದರೆ ಜಿಲ್ಲೆಗೆ ಪ್ರಥಮ ಆದ್ಯತೆ ಎಂದು ಜವಳಿ , ಕೈಮಗ,್ಗ ಸಕ್ಕೆರೆ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು. ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ಏಮ್ಸ್ ಹೋರಾಟ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿದ್ದ ಈ ಹಿಂದೆ ಸಿಎಂ ಜಿಲ್ಲೆಗೆ ಭೇಟಿ ನೀಡಿದಾಗ ಹೇಳಿದಂತೆ ರಾಜ್ಯಕ್ಕೆ ಏಮ್ಸ್ ನೀಡಿದ್ದಲ್ಲಿ ಜಿಲ್ಲೆಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದರು. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿ ಮಾಡಲಾಗಿದ್ದು ಕೋವಿಡ್ ವ್ಯಾಕ್ಸಿನೇಷನ ಗರಿಷ್ಟ ಪ್ರಮಾಣದಲ್ಲಿ ಎಲ್ಲಿರಿಗೂ ತಲುಪಿದೆ ಅದೆ ರೀತಿ ರೈತರಿಗೆ ನೇರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಹಣ ಖಾತೆಗೆ ಬಂದಿದೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಧ್ಯಸ್ತಿಕೆ ಇಲ್ಲದೆ ಹಣ ಬ್ಯಾಂಕ್ ಖಾತೆಗಳೀಗೆ ಜಮಾವಾಣೆಯಾಗಿದ್ದು ಕೃಷಿ ಸಮ್ಮಾನ ಯೋಜನೆ, ವಿದ್ಯಾನಿಧಿ ಮುಂತಾದ ಯೋಜನೆಯನ್ನು ಯಶಸ್ವಿಯಾಗಿ ಜಾರಿ ಮಾಡಿದ್ದು ನಮ್ಮ ಸರ್ಕಾರ ಪಾರದರ್ಶಕವಾಗಿ ಆಡಳಿತ ಮಾಡಿದೆ ಎಂದರು. ನಗರದ ಹೊರವಲಯದ ಯರಮರಸ್ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ ಎಂದ ಅವರು ಕೊನೆ ಭಾಗದ ರೈತರಿಗೆ ನೀರು ತಲುಪದ ಬಗ್ಗೆ ದೂರುಗಳ ಹಿನ್ನಲೆ ...

ಮಹತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ೭೪ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳ ಜಾರಿ -ಸಚಿವ ಶಂಕರಪಾಟೀಲ್ ಮುನೇನಕೊಪ್ಪ

Image
  ಮಹತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ೭೪ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟç ಧ್ವಜಾರೋಹಣ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳ ಜಾರಿ -ಸಚಿವ ಶಂಕರಪಾಟೀಲ್ ಮುನೇನಕೊಪ್ಪ ರಾಯಚೂರು,ಜ.೨೬- ನಗರದ ಮಹತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ೭೪ನೇ ಗಣರಾಜ್ಯೋತ್ಸವ ದಿನಾಚರಣೆಯಂಗವಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬ. ಪಾಟೀಲ್ ಮುನೇನಕೊಪ್ಪ ಅವರು ಧ್ವಜಾರೋಹಣ ನೆರವೇರಿಸಿ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಸಂದೇಶ ನೀಡಿದರು.  ೧೯೪೭ರ ಆಗಸ್ಟ್ ೧೫ ರಂದು ದೇಶವು ಸ್ವಾತಂತ್ರö್ಯ ಪಡೆದು ೩೦೦ ವರ್ಷಗಳಿಂದ ಅನುಭವಿಸುತ್ತಿದ್ದ ದಾಸ್ಯದ ಸಂಕೋಲೆಯನ್ನು ಕಳಚಿಕೊಂಡಿತು. ಆ ನಂತರ ೧೯೫೦ ಜನವರಿ ೨೬ ರಂದು ಸಂವಿಧಾನವನ್ನು ಅಧಿಕೃತವಾಗಿ ಜಾರಿಗೊಳಿಸಲಾಯಿತು. ಇಡೀ ವಿಶ್ವದಲ್ಲಿ ಭಾರತ ಕೂಡಾ ಒಂದು ಸಾರ್ವಭೌಮ ರಾಷ್ಟçವಾಯಿತು. ಇದರ ನೆನಪಿಗೆ ಗಣರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ ಎಂದರು. ರಾಷ್ಟçಪಿತ ಮಹಾತ್ಮಗಾಂಧಿ, ಜವಹಾರ್ ಲಾಲ್ ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತಿç ಹಾಗೂ ನೇತಾಜಿ ಸುಭಾಶ್‌ಚಂದ್ರ ಭೋಸ್ ಅವರಂತಹ ಮಹಾನ್ ನಾಯಕರ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಪಡೆದಿರುವ ಸ್ವಾತಂತ್ರö್ಯವು ಶಾಂತಿ ಹಾಗೂ ಅಹಿಂಸೆಯಿAದ ಪ್ರೇರಿತಗೊಂಡಿದೆ. ಸAವಿಧಾನ ಕರಡು ಸ...

ಜನವರಿ 26 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮುನೇನಕೊಪ್ಪರಿಂದ ಗಣರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣ

Image
ಜನವರಿ 26 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮುನೇನಕೊಪ್ಪರಿಂದ  ಗಣರಾಜ್ಯೋತ್ಸವದ ಧ್ವಜಾರೋಹಣ ರಾಯಚೂರು,ಜ.25- ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಬ. ಪಾಟೀಲ ಮುನೇನಕೊಪ್ಪ ಅವರು ರಾಯಚೂರು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 26 ರಂದು ಗುರುವಾರ ಬೆಳಿಗ್ಗೆ 09:00 ಗಂಟೆಗೆ ಭಾರತದ 74ನೇ ಗಣರಾಜ್ಯೋತ್ಸವ ದಿನಾಚರಣೆಯ ರಾಷ್ಟç ಧ್ವಜಾರೋಹಣವನ್ನು ನೆರವೇರಿಸುವರು.

ಮಂತ್ರಾಲಯ: ಶ್ರೀ ಸುಜಯೀಂದ್ರತೀರ್ಥರ ಆರಾಧನಾ ಮಹೋತ್ಸವ.

Image
ಮಂತ್ರಾಲಯ: ಶ್ರೀ ಸುಜಯೀಂದ್ರತೀರ್ಥರ ಆರಾಧನಾ ಮಹೋತ್ಸವ.                              ರಾಯಚೂರು,ಜ.25- ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ಸುಜಯೀಂದ್ರತೀರ್ಥರ ಆರಾಧನೆ ಮಹೋತ್ಸವ ಅಂಗವಾಗಿ ಪ್ರಾತಕಾಲ ರಥೋತ್ಸವಕ್ಕೆ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಚಾಲನೆ ನೀಡಿ ರಥ ಪೂಜೆ, ಪುಷ್ಪವೃಷ್ಟಿ ಮತ್ತು ಮಂಗಳಾರತಿ ನೆರವೇರಿಸಿದರು.    ಶ್ರೀ ಸುಜಯೀಂದ್ರತೀರ್ಥರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿದರು.    ಪಂಡಿತರಿಂದ ಪ್ರವಚನ ಕಾರ್ಯಕ್ರಮ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.