35 ವರ್ಷಗಳಿಂದ ಸತತವಾಗಿ ಗುರುಗಳ ಸಂಗೀತ ಸಮ್ಮೇಳನ ಮಾಡುತ್ತಿರುವುದು ಗುರು ಭಕ್ತಿಯನ್ನು ತೋರಿಸುತ್ತದೆ- ಸಂಸದ ರಾಜಾಅಮರೇಶ್ವರ ನಾಯಕ
35 ವರ್ಷಗಳಿಂದ ಸತತವಾಗಿ ಗುರುಗಳ ಸಂಗೀತ ಸಮ್ಮೇಳನ ಮಾಡುತ್ತಿರುವುದು ಗುರು ಭಕ್ತಿಯನ್ನು ತೋರಿಸುತ್ತದೆ- ಸಂಸದ ರಾಜಾಅಮರೇಶ್ವರ ನಾಯಕ ರಾಯಚೂರು,ಡಿ.31-ಸಿದ್ದರಾಮ ಜಂಬಲದಿನ್ನಿಯವರ ಶಿಷ್ಯರಾಗಿ ಸಂಗೀತ ಸಾಧನೆಯ ಮೂಲಕ ಡಾ. ಪಂಡಿತ್ ನರಸಿಂಹಲು ವಡವಾಟಿಯವರು ಪ್ರಪಂಚಕ್ಕೆ ಮುಟ್ಟಿದ್ದಾರೆ ಎಂದು ಲೋಕಸಭೆಯ ಸಂಸದರಾದ ರಾಜ ಅಮರೇಶ್ವರ ನಾಯಕ ಅಭಿಪ್ರಾಯ ಪಟ್ಟರು. ಉದಯನಗರದ ಸ್ವರ ಸಂಗಮ ಸಂಗೀತ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪಂಡಿತ್ ಸಿದ್ದರಾಮ ಜಂಬಲದಿನ್ನಿಯವರ ಸ್ಮರಣಾರ್ಥ ಏರ್ಪಡಿಸಿದ್ದ 35ನೇ ಸಂಗೀತ ಸಮ್ಮೇಳನದಲ್ಲಿ ಸಾಧನೆಯನ್ನು ಏಕಾಗ್ರ ಚಿತ್ತದಿಂದ ಮಾಡಬೇಕಾಗುತ್ತದೆ. ನಮ್ಮ ಮಕ್ಕಳು, ಯುವಕರು ಪಾಶ್ಚ್ಯಾತ್ಯ ಸಂಗೀತಕ್ಕೆ ಆಕರ್ಷಿತರಾಗತಿದ್ದರೆ, ಪಾಶ್ಚ್ಯಾತ್ಯರು ನಮ್ಮ ಸಂಗೀತಕ್ಕೆ ಮಾರುಹೋಗುತ್ತಿದ್ದಾರೆ. ನಮ್ಮ ಸಂಸ್ಕೃತಿ ಅಭಿವೃದ್ಧಿಯಾಗಬೇಕು. ವಿದೇಶದಿಂದ ಬಂದು ವಡವಾಟಿಯವರ ಬಳಿ ಕಲಿಯುತ್ತಿದ್ದಾರೆ ನಾವು ಅವರನ್ನು ಬಳಸಿಕೊಳ್ಳಬೇಕು. 35 ವರ್ಷಗಳಿಂದ ಸತತವಾಗಿ ಗುರುಗಳ ಸಂಗೀತ ಸಮ್ಮೇಳನ ಮಾಡುತ್ತಿರುವುದು ಗುರು ಭಕ್ತಿಯನ್ನು ತೋರಿಸುತ್ತದೆ, ಎಂದು ಅಭಿನಂದಿಸಿದರು. ವಡವಾಟಿಯವರು ಸಿದ್ದರಾಮ ಜಂಬಲದಿನ್ನಿಯವರ ಹೆಸರನ್ನು ರಂಗಮಂದಿರಕ್ಕೆ ನಾಮಕರಣ ಮಾಡಿಸುವುದರ ಮೂಲಕ ಗುರುಗಳ ಹೆಸರನ್ನು ಚಿರಸ್ತಾಯಿಯಾಗಿಸಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್...