ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 13ನೇ ಘಟಿಕೋತ್ಸವ: ಕೃಷಿ ಕ್ಷೇತ್ರ ದೇಶದ ಆಧಾರ ಸ್ತಂಭ -ರಾಜ್ಯಪಾಲರು.
ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 13ನೇ ಘಟಿಕೋತ್ಸವ: ಕೃಷಿ ಕ್ಷೇತ್ರ ದೇಶದ ಆಧಾರ ಸ್ತಂಭ -ರಾಜ್ಯಪಾಲರು. ರಾಯಚೂರು,ಫೆ.29- ಕೃಷಿ ಕ್ಷೇತ್ರ ಭಾರತದ ಆಧಾರ ಸ್ತಂಭವಾಗಿದೆ ಎಂದು ಘನತವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಅವರಿಂದು ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು. ಜಿಡಿಪಿ ಬೆಳವಣಿಯಲ್ಲಿ ಕೃಷಿ ಕ್ಷೇತ್ರ ಮಹತ್ತರ ಪಾತ್ರ ವಹಿಸುತ್ತದೆ ಎಂದ ಅವರು ಕೃಷಿ ಕ್ಷೇತ್ರದಲ್ಲಿ ಹೊಸ ವಿಕಾಸ್ ತರಲು ವಿಶ್ವವಿದ್ಯಾಲಯ ಪಾತ್ರ ಹಿರಿದಾಗಿದೆ ಎಂದರು. ಸಿರಿಧಾನ್ಯಕ್ಕೆ ಉತ್ತೇಜನ ನೀಡಲು ಸುಮಾರು 25 ಕೋಟಿ ರೂ ವೆಚ್ಚದಲ್ಲಿ ಸಿರಿಧಾನ್ಯ ಪಾರ್ಕ್ ಸ್ಥಾಪನೆಗೆ ಮುಂದಾಗಿದೆ ಎಂದರು. ಪದವಿ ಸ್ನಾತಕೋತ್ತರ ಪದವಿ, ಪಿಹೆಚ್ ಡಿ ಪಡೆದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲಿ ಎಂದರು .ಆತ್ಮ ನಿರ್ಭರ ಭಾರತಕ್...