Posts

Showing posts from March, 2024

ಬ್ರಾಹ್ಮಣ ಸಮಾಜದ ಮುಖಂಡರನ್ನು ಭೇಟಿ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಜಿ .ಕುಮಾರ್ ನಾಯಕ್ ಹಾಗೂ ಸಚಿವ ಎನ್ ಎಸ್ ಬೋಸರಾಜು

Image
  ಬ್ರಾಹ್ಮಣ ಸಮಾಜದ ಮುಖಂಡರನ್ನು ಭೇಟಿ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಜಿ .ಕುಮಾರ್ ನಾಯಕ್ ಹಾಗೂ ಸಚಿವ ಎನ್ ಎಸ್ ಬೋಸರಾಜು ರಾಯಚೂರು,ಮಾ.31-ನಗರದ ಆಜಾದ್ ನಗರ ಬಡಾವಣೆಯಲ್ಲಿರುವ ಬ್ರಾಹ್ಮಣ ಸಮಾಜದ ಮುಖಂಡರಾದ ನರಸಿಂಗರಾವ್ ದೇಶಪಾಂಡೆ ಅವರ ನಿವಾಸದಲ್ಲಿ ರಾಯಚೂರು ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ್ ಹಾಗೂ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಸಮಾಜದ ಮುಖಂಡರೊಂದಿಗೆ ಸೌಹಾರ್ದಯುತವಾಗಿ ಭೇಟಿಯಾದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ನರಸಿಂಗ ರಾವ್ ದೇಶಪಾಂಡೆ, ಡಾ.ಆನಂದತೀರ್ಥ ಫಡ್ನೀಸ್, ಸತ್ಯನಾರಾಯಣ ರಾವ್,ಡಾ.ಅಜೀತ ಕುಲಕರ್ಣಿ , ಆರ. ಎಸ್.ಬದರಿ,ವಿನಯ್ ಬಿದರಿ, ಕೆ.ಪ್ರಹಲ್ಲಾದರಾವ ವಕೀಲ  , ವೆಂಕಟೇಶ ಕೋಲಾರ್,ಎ. ಸುಧೀರ್, ಗುರುರಾಜ್ ರಾವ್ ಕುಲ್ಕರ್ಣಿ,ಹನುಮೇಶ ಸರಾಫ್, ಪ್ರಸನ್ನ  ಆಲಂಪಲ್ಲಿ,  ವೇಣುಗೋಪಾಲ್ ಇನಾಂದಾರ್ ,ಕಿಶನರಾವ, ಆನಂದ ಕುಲಕರ್ಣಿ, ಅನಿಲ ಗಾರಲದಿನ್ನಿ, ಪ್ರಹಲ್ಲಾದ, ರಂಗಾಚಾರ ಜೋಷಿ, ಜಯಕುಮಾರ ದೇಸಾಯಿ ಕಾಡ್ಲೂರು, ವಿಜಯಕುಮಾರ್ ದೇಸಾಯಿ  ಕಾಡ್ಲೂರು,  ರಾಘವೇಂದ್ರ ಎಂ, ವಿಠಲ್, ಸೇರಿದಂತೆ ಬ್ರಾಹ್ಮಣ ಸಮಾಜದ ಮುಖಂಡರು, ಯುವಕರು ಹಾಗೂ  ಕಾಂಗ್ರೆಸ್ ಪಕ್ಷದ ಮುಖಂಡರಾದ ಬಸವರಾಜ ರಡ್ಡಿ, ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ಶಿವಮೂರ್ತಿ, ರಮೇಶ ಬಿ, ಬಸವರಾಜ ಪಾಟೀಲ್ ಅತ್ತನೂರು ಸೇರಿದಂತೆ ಅನೇಕರಿದ್ದರು.

ನಾಮಪತ್ರ ಸಲ್ಲಿಕೆ ವೇಳೆ ಬಿ. ವೈ ವಿಜಯೇಂದ್ರ ಆಗಮನ- ರಾಜಾ ಅಮರೇಶ್ವರ ನಾಯಕ

Image
  ನಾಮಪತ್ರ ಸಲ್ಲಿಕೆ ವೇಳೆ ಬಿ. ವೈ ವಿಜಯೇಂದ್ರ ಆಗಮನ-ರಾಜಾ ಅಮರೇಶ್ವರ ನಾಯಕ ರಾಯಚೂರು, ಮಾ.31- ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ದಿನದಂದು ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ಆಗಮಿಸಲಿದ್ದಾರೆ ಎಂದು ಹಾಲಿ ಸಂಸದ ರಾಜಾ ಅಮರೇಶ ನಾಯಕ ಅವರು ಹೇಳಿದರು. ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ಭಾರೀ ಕುತೂಹಲ ಮೂಡಿಸಿತ್ತು. ಆದರೆ ರಾಜ್ಯಾಧ್ಯಕ್ಷ ಬಿ.ವೈ  ವಿಜಯೇಂದ್ರ ಅವರ ನಿರ್ದೇಶನ ಮೇರೆಗೆ ಹೈಕಮಾಂಡ್ ನನ್ನ ಮೇಲೆ ವಿಶ್ವಾಸದಿಂದ ಟಿಕೆಟ್ ನೀಡಿದೆ. ಲೋಕಸಭಾ ಚುನಾವಣೆ ಹಿನ್ನಲೆ ನಾಮಪತ್ರ ಸಲ್ಲಿಕೆ ಮಾಡುವ ದಿನದಂದು ಬಿ. ವೈ ವಿಜಯೇಂದ್ರ ನಾಯಕತ್ವದಲ್ಲಿ ಸಾವಿರ ಸಂಖ್ಯೆಯ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಲಾಗುವುದು ಎಂದರು. ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿ. ಈ ಹಿನ್ನಲೆ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರು ತಮ್ಮನ್ನು ಬಹುಮತದ ಅಂತರದಲ್ಲಿ ಗೆಲ್ಲುಸುವಂತೆ ಮನವಿ ಮಾಡಿಕೊಂಡರು. ಲೋಕಸಭಾ ಚುನಾವಣೆ ಅತ್ಯಂತ ಮಹತ್ವ ಮತ್ತು ದೇಶದ ಭವಿಷ್ಯ ನಿರ್ಧಾರ ಮಾಡುವ ಚುನಾವಣೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಕ್ಷೇತ್ರದಲ್ಲಿ ತಮ್ಮನ್ನು ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮೋದಿ ದೇಶಕ್ಕೆ ಅವಶ್ಯ. ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಲ್ಲ

ಏ.19 ರಂದು ದಾಸವರೇಣ್ಯ ಶ್ರೀ ವಿಜಯದಾಸರು ಚಿತ್ರ ತೆರೆಗೆ: ಭಕ್ತಿ ಪ್ರಧಾನ ಚಿತ್ರಗಳಿಗೆ ಉತ್ತಮ ಮನ್ನಣೆ- ಜೋಷಿ.

Image
  ಏ.19 ರಂದು ದಾಸವರೇಣ್ಯ ಶ್ರೀ ವಿಜಯದಾಸರು ಚಿತ್ರ ತೆರೆಗೆ:                                                                      ಭಕ್ತಿ ಪ್ರಧಾನ ಚಿತ್ರಗಳಿಗೆ ಉತ್ತಮ ಮನ್ನಣೆ- ಜೋಷಿ.                                                                                            ರಾಯಚೂರು,ಮಾ.30- ದಾಸವರೇಣ್ಯ ಶ್ರೀ ವಿಜಯದಾಸರು ಚಿತ್ರ ಪ್ರಪಂಚದಾದ್ಯಂತ ಏ.19 ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ಪಾತ್ರಧಾರಿ ತ್ರಿವಿಕ್ರಮ ಜೋಷಿ ಹೇಳಿದರು.                                         ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ನಮ್ಮ ತಂದೆ ತಾಯಿಯವರ ಆಶೀರ್ವಾದದೊಂದಿಗೆ ಈ ನಮ್ಮ ಸ್ವ ಬ್ಯಾನರ್ ಅಡಿ ಚಿತ್ರ ನಿರ್ಮಾಣ ಮಾಡಲಾಗಿದ್ದು ದಾಸರ ಶರಣರ ಬೀಡು ರಾಯಚೂರು ಎಂಬುದು ನಮಗೆ ಹೆಮ್ಮೆಯ ಸಂಗತಿ ಎಂದರು.                  ಮಸರಕಲ್, ಚೀಕಲಪರ್ವಿ,ಅಸ್ಕಿಹಾಳ, ಮಾನ್ವಿ ಮುಂತಾದೆಡೆ ದಾಸರು ಜನ್ಮಸ್ಥಳವಿದೆ ಎಂದರು. ಜಗತ್ತಿಗೆ ಭಕ್ತಿ ಪಂಥವನ್ನು ಸಾರಿದವರು ದಾಸವರೇಣ್ಯರು ಎಂದು ಅವರು ಈ ಹಿಂದೆ ಶ್ರೀ ಜಗನ್ನಾಥದಾಸರು, ಪ್ರಸನ್ನ ವೆಂಕಟದಾಸರು  ಚಿತ್ರ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಸಾಂಪ್ರದಾಯಿಕ ಉಡಪಿನೊಂದಿಗೆ ಭಜನೆ ಮಾಡುತ್ತ ಆಗಮಿಸಿದ್ದು ವಿಶೇಷವಾಗಿತ್ತು  ಎಂದರು.                       ನಗರದ ಖಾಜನಗೌಡರ ಪುರಾತನ ಮನೆ ಸೇರಿದಂತೆ ವಿವಿಧೆಡೆ

ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಗೆ ಕಾರ್ಯಕರ್ತರಿಂದ ಭವ್ಯ ಸ್ವಾಗತ: ಜಿಲ್ಲೆ ನನಗೆ ತವರು ಮನೆಯಿದ್ದಂತೆ- ಕುಮಾರ್ ನಾಯಕ.

Image
  ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಗೆ ಕಾರ್ಯಕರ್ತರಿಂದ ಭವ್ಯ ಸ್ವಾಗತ:                                                          ಜಿಲ್ಲೆ ನನಗೆ ತವರು ಮನೆಯಿದ್ದಂತೆ- ಕುಮಾರ್ ನಾಯಕ.                                                              ರಾಯಚೂರು,ಮಾ.30- ಜಿಲ್ಲೆ ನನಗೆ ತವರು ಮನೆಯಿದ್ದಂತೆ ಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕ ಹೇಳಿದರು.                                          ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ರಾಯಚೂರು ನಗರ ವಿಧಾನಸಭೆ ಕ್ಷೇತ್ರದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರ ನಾನು  1999 ರಿಂದ 2002 ರವರೆಗೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಮಾಡಿದ್ದೇನೆ ಇಲ್ಲಿನ ಸಮಸ್ಯೆಗಳು ಬಗ್ಗೆ ಅರಿವಿದೆ ದೋಆಬ್ ಪ್ರದೇಶದೊಂದಿಗೆ ಅವಿನಾಭಾವ ಸಂಬಂಧವಿದೆ ಎಂದರು. ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಬಳಿಕ ನನಗೆ ಜನರ ಮತ್ತು ಕ್ಷೇತ್ರದ ಅಭಿವೃದ್ಧಿ ಮಾಡುವ ಗುರಿಯೊಂದಿಗೆ ಚುನಾವಣೆಗೆ ಸ್ಪರ್ದಿಸಿದ್ದೇನೆಂದ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಇನ್ನಿತರ ಮುಖಂಡರು ನನಗೆ ಅವಕಾಶ ನೀಡಿದ್ದಾರೆ ಅದೆ ರೀತಿ ಜಿಲ್ಲೆಯ ಹಿರಿಯ ನಾಯಕರಾದ ಎನ್.ಎಸ್.ಬೋಸರಾಜು, ಎ.ವಸಂತಕುಮಾರ ಮತ್ತಿತರರು ನನಗೆ ಜಿಲ್ಲೆಯ ರಾಜಕೀಯ ಕುರಿತು ಮಾರ್ಗದರ್ಶನ ಮಾಡಿದ್ದು ಎಲ್ಲರೊಂದಿ

ಟ್ರಾನ್ಸ್ ಫಾರ್ಮ್ ರ್ ಗೆ ಬೆಂಕಿ ನಗರದಲ್ಲಿ ವಿದ್ಯುತ್ ಕಡಿತ.

Image
  ಟ್ರಾನ್ಸ್ ಫಾರ್ಮ್ ರ್ ಗೆ ಬೆಂಕಿ ನಗರದಲ್ಲಿ ವಿದ್ಯುತ್ ಕಡಿತ .        ರಾಯಚೂರು,ಮಾ.29- ನಗರದಲ್ಲಿ ವಿದ್ಯುತ್ ಪರಿವರ್ತಕ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದರಿಂದ  ವಿದ್ಯುತ್  ಕಡಿತವಾಗಿ ಜನರು ಪರಿತಪಿಸುವಂತಾಗಿದೆ.                    ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿರುವ ಜನರಿಗೆ ಗಾಯದ ಮೇಲೆ ಬರೆಯಳೆದಂತೆಯಾಗಿದೆ ರಾತ್ರಿಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡೋಣವೆಂದರೆ ವಿದ್ಯುತ್ ಕಡಿತದಿಂದ ಫ್ಯಾನ್ ಇಲ್ಲದೆ ಸೆಕೆಯಿಂದ ರಾತ್ರಿಯಲ್ಲಾ ಎದ್ದು ಕೂಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಆದಷ್ಟು ಬೇಗನೆ ವಿದ್ಯುತ್ ಪೂರೈಕೆ ಆಗಲಿ ಎಂಬುದು ನಿವಾಸಿಗಳ ಒತ್ತಾಯವಾಗಿದೆ.

ಲೋಕಸಭಾ ಅಭ್ಯರ್ಥಿ ಜಿ.ಕುಮಾರ ನಾಯಕ ನಾಳೆ ನಗರಕ್ಕೆ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮುಖಂಡರ ಸಭೆ: ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ - ಎನ್ಎಸ್ ಬೋಸರಾಜು

Image
  ಲೋಕಸಭಾ ಅಭ್ಯರ್ಥಿ ಜಿ.ಕುಮಾರ ನಾಯಕ ನಾಳೆ ನಗರಕ್ಕೆ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮುಖಂಡರ  ಸಭೆ: ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ - ಎನ್ಎಸ್ ಬೋಸರಾಜು ರಾಯಚೂರು,ಮಾ.29-ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳನ್ನು‌ ಜನರಿಗೆ ಮನವರಿಕೆ ಮಾಡುವ ಮೂಲಕ ರಾಯಚೂರು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ್ ಅವರನ್ನು ಗೆಲ್ಲಿಸುವ  ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಣ್ಣ ನೀರಾವರಿ‌ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದರು.  ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಗರ ವಿಧಾನಸಭೆ ಕ್ಷೇತ್ರದ ಪ್ರಮುಖ ಮುಖಂಡರ ಸಭೆಯಲ್ಲಿ ಮಾತನಾಡಿದರು. ರಾಯಚೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ ಕುಮಾರ ನಾಯಕ್ ಅವರು ಮೊದಲ ಬಾರಿಗೆ ರಾಯಚೂರು ನಗರಕ್ಕೆ ಆಗಮಿಸಲಿದ್ದು ಅವರನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳಬೇಕು ಎಂದರು.  ಶನಿವಾರ 11- 30 ಕ್ಕೆ ಪಕ್ಷದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆಯುವ ಪಕ್ಷ ಮುಖಂಡರ ಸಭೆಗೆ ಎಲ್ಲರು ಭಾಗವಹಿಸಬೇಕೆಂದು  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ರೆಡ್ಡಿ, ಕುರಬದೊಡ್ಡಿ ಆಂಜನೇಯ್ಯ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹ್ಮದ್ ಶಾಲಂ,  ಜಯಣ್ಣ, ಕೆ ಶಾಂತಪ್ಪ, ನರಸಿಂಹಲು ಮಾಡಗಿರಿ, ರಾಜಶೇಖರ್

ದಿ.ಜಯಾಚಾರ್ ಕೊಪ್ಪರ್ ಸ್ಮರಣಾರ್ಥ ದಾಸ ಸಾಹಿತ್ಯದತ್ತಿ ಉಪನ್ಯಾಸ :ಅಚ್ಚ ಕನ್ನಡದಲ್ಲಿ ಸಂಕೀರ್ತನೆಗಳನ್ನು ರಚಿಸಿದ ದಾಸ ಶ್ರೇಷ್ಠರು ಕನಕದಾಸರು- ವಿದ್ವಾನ್ ಸಿ ಜಿ ವಿಜಯ ಸಿಂಹಾಚಾರ್ಯ

Image
  ದಿ.ಜಯಾಚಾರ್ ಕೊಪ್ಪರ್ ಸ್ಮರಣಾರ್ಥ ದಾಸ ಸಾಹಿತ್ಯ ದತ್ತಿ ಉಪನ್ಯಾಸ: ಅಚ್ಚ ಕನ್ನಡದಲ್ಲಿ ಸಂಕೀರ್ತನೆಗಳನ್ನು ರಚಿಸಿದ ದಾಸ ಶ್ರೇಷ್ಠರು ಕನಕದಾಸರು - ವಿದ್ವಾನ್ ಸಿ ಜಿ ವಿಜಯ ಸಿಂಹಾಚಾರ್ಯ   ರಾಯಚೂರು,ಮಾ.29-  ಸಾವಿರಾರು ಸಂಸ್ಕೃತ  ಕ್ಲಿಷ್ಟ ಪದಗಳನ್ನು ಸರಳ ಕನ್ನಡಕ್ಕೆ ತುರ್ಜಿಮೆ ಮಾಡಿ, ಸಂಕೀರ್ತನೆಗಳನ್ನು ರಚಿಸಿದ ಕೀರ್ತಿ ದಾಸ ಶ್ರೇಷ್ಠ ಕನಕದಾಸರಿಗೆ ಸಲ್ಲುತ್ತದೆ  ಎಂದು ಖ್ಯಾತ ವಿದ್ವಾಂಸರಾದ ಬೆಂಗಳೂರಿನ ಸಿ.ಜಿ ವಿಜಯಸಿಂಹಾಚಾರ್ ಅವರು ಹೇಳಿದರು.  ಅವರು ಗುರುವಾರ  ಸಂಜೆ ನಗರದ  ಕರ್ನಾಟಕ ಸಂಘದಲ್ಲಿ ಜಿಲ್ಲಾ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ದಿ. ಜಯಚಾರ್ ಕೊಪ್ಪರ ಇವರ ಸ್ಮರಣಾರ್ಥ ಏರ್ಪಡಿಸಿದ ದತ್ತಿ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನಕದಾಸರ ಸಾಹಿತ್ಯದಲ್ಲಿ ಕಾವ್ಯ ಸೂಕ್ಷ್ಮಗಳು ಮತ್ತು ಪ್ರಮೇಯಗಳು ಎಂಬ ವಿಷಯದ ಮೇಲೆ ಉಪನ್ಯಾಸವನ್ನು ನೀಡಿ ಮಾತನಾಡಿದರು.      ಅವರು ಹರಿದಾಸರೆ ಇರಲಿ ವಚನಕಾರರೇ ಇರಲಿ ಅಜ್ಞಾನದ ವಿರುದ್ಧ ಬಂಡಾಯವನ್ನು ಹೂಡಿದವರೇ ಆಗಿದ್ದಾರೆ. ಬಂಡಾಯದ ಮನಸ್ಥಿತಿ ವೇದಗಳ ಕಾಲದಿಂದಲೂ ನೋಡುತ್ತೇವೆ. ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ಶ್ರೀ ಕನಕದಾಸರ ಕೀರ್ತನೆಗಳಲ್ಲಿಯೂ ಸಹ ಬಂಡಾಯವನ್ನು ಕಾಣುತ್ತೇವೆ. ವೇದ ಉಪನಿಷತ್ತುಗಳ ಸಾರವನ್ನು ಕನಕದಾಸರು ಅಚ್ಚ ಕನ್ನಡದಲ್ಲಿ ಕಾವ್ಯಗಳನ್ನು ರಚಿಸುವ ಮೂಲಕ ದಾಸ ಶ್ರೇಷ್ಠರಾಗಿದ್ದಾರೆ. ಕವಿಗಳ ಮಾತು ಮೂರ್ತವಾದರೆ ಕವಿತ್ವ ಅಮೂ

ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಎ.ವಸಂತಕುಮಾರ ರಿಂದ ಸಿಎಂ ಸಿದ್ದರಾಮಯ್ಯ ಭೇಟಿ

Image
  ಕೆಪಿಸಿಸಿ ನೂತನ  ಕಾರ್ಯಾಧ್ಯಕ್ಷ ಎ.ವಸಂತಕುಮಾರ ರಿಂದ ಸಿಎಂ ಸಿದ್ದರಾಮಯ್ಯ ಭೇಟಿ.                        ರಾಯಚೂರು,ಮಾ.29- ನೂತನವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕವಾದ ಎ.ವಸಂತಕುಮಾರ ಅವರು ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ  ಸಿದ್ದರಾಮಯ್ಯನವರನ್ನು ಭೇಟಿಯಾಗಿ   ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಂದನೂರು ಶಾಸಕರಾದ ಹಂಪನಗೌಡ ಬಾದರ್ಲಿ, ಡಾ.ರಝಾಕ ಉಸ್ತಾದ, ಅಸ್ಲಂ ಪಾಶಾ, ಎಂ.ಕೆ.ಬಾಬರ್, ಶ್ರೀನಿವಾಸ ಶಿಂದೆ ಇತರರು ಉಪಸ್ಥಿತರಿದ್ದರು.

ಪೇರಸೋಮುಲಾ ಶ್ರೀ ವಿಷ್ಣುಕಾಂತಿ ಕ್ಷೇತ್ರದ ಶ್ರೀ ರಾಮ್ ಮೋಹನ್ ಸ್ವಾಮೀಜಿ ಆಶೀರ್ವಾದ ಪಡೆದ ಸಚಿವ ಎನ್ಎಸ್ ಬೋಸರಾಜು

Image
  ಪೇರಸೋಮುಲಾ ಶ್ರೀ  ವಿಷ್ಣುಕಾಂತಿ ಕ್ಷೇತ್ರದ  ಶ್ರೀ ರಾಮ್ ಮೋಹನ್ ಸ್ವಾಮೀಜಿ ಆಶೀರ್ವಾದ ಪಡೆದ ಸಚಿವ ಎನ್ಎಸ್ ಬೋಸರಾಜು ರಾಯಚೂರು,ಮಾ.28-ನಗರದಲ್ಲಿ ಕರ್ನೂಲ್ ಜಿಲ್ಲೆಯ ನಂದ್ಯಾಳ್ ತಾಲೂಕಿನ ಪೇರಸೋಮುಲಾ ಶ್ರೀ  ವಿಷ್ಣು ಕಾಂತಿ ಕ್ಷೇತ್ರದ ನರಸಿಂಹಲು ಸ್ವಾಮಿ  ಶ್ರೀ ರಾಮ್ ಮೋಹನ್ ಸ್ವಾಮೀಜಿಗಳನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು  ಭೇಟಿ ಮಾಡಿ‌ ಸನ್ಮಾನಿಸಿ ಶ್ರೀಗಳ ಆಶೀರ್ವಾದ ಪಡೆದರು. ನಗರದ ಜಟ್ರಾಮ್ ಶ್ರೀನಿವಾಸ್ ಅವರ ನಿವಾಸದಲ್ಲಿ ತಂಗಿದ್ದ ಶ್ರೀಗಳನ್ನು ಭೇಟಿ ಮಾಡಿದರು. ಶ್ರೀಗಳು ಸಚಿವರಿಗೆ ಸನ್ಮಾನಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ಜಟ್ರಮ್ ಶ್ರೀನಿವಾಸ್ ಅಯ್ಯ, ಜಟ್ರಮ್ ಗೋವಿಂದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬೋಳಮಾನ್ ದೊಡ್ಡಿ ತಿಮ್ಮಪ್ಪ ದೇವಸ್ಥಾನಕ್ಕೆ ಸಚಿವರ ಭೇಟಿ: ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಸಚಿವ ಎನ್ ಎಸ್ ಬೋಸರಾಜು

Image
  ಬೋಳಮಾನ್ ದೊಡ್ಡಿ ತಿಮ್ಮಪ್ಪ ದೇವಸ್ಥಾನಕ್ಕೆ ಸಚಿವರ ಭೇಟಿ: ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಸಚಿವ ಎನ್ ಎಸ್ ಬೋಸರಾಜು ರಾಯಚೂರು,ಮಾ.28- ಬೋಳಮಾನ್ ದೊಡ್ಡಿಯಲ್ಲಿರುವ ಬೋಳಬಂಡಿ ತಿಮ್ಮಪ್ಪ ದೇವಸ್ಥಾನಕ್ಕೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ  ದೇವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಬೋಳ ಬಂಡೆ ತಿಮ್ಮಪ್ಪ ದೇವಸ್ಥಾನ ಸಮಿತಿ ವತಿಯಿಂದ ಸಚಿವರಿಗೆ ಸನ್ಮಾನಿಸಿ ಗೌರವಿಸಿದರು. ಕಾಂಗ್ರೆಸ್ ಮುಖಂಡರಾದ ಜಯಣ್ಣ, ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ಜಿ ಶಿವಮೂರ್ತಿ, ನರಸಿಂಹಲು ಮಾಡಗಿರಿ, ಕುರುಬ ದೊಡ್ಡಿ ಆಂಜನೇಯ, ತಿಮ್ಮಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನನ್ನ ಮೇಲೆ ಕಾಣದ ಕೈಗಳಿಂದ ದ್ವೇಷ ಸಾಧನೆ: ನೀರಿನ ಕರ ಪಾವತಿಸಿದರೂ ಶಿಕ್ಷಣ ಸಂಸ್ಥೆಗೆ ನೀರು ಬರುತ್ತಿಲ್ಲ-ಎಸ್.ಆರ್.ರೆಡ್ಡಿ.

Image
  ನನ್ನ ಮೇಲೆ ಕಾಣದ ಕೈಗಳಿಂದ ದ್ವೇಷ ಸಾಧನೆ:                                      ನೀರಿನ ಕರ ಪಾವತಿಸಿದರೂ  ಶಿಕ್ಷಣ ಸಂಸ್ಥೆಗೆ   ನೀರು ಬರುತ್ತಿಲ್ಲ-ಎಸ್.ಆರ್.ರೆಡ್ಡಿ.                                  ರಾಯಚೂರು,ಮಾ.27- ನನ್ನ ಮೇಲೆ ಕಾಣದ ಕೈಗಳಿಂದ ದ್ವೇಷ ಸಾಧಿಸಲಾಗುತ್ತಿದ್ದು ನಗರಸಭೆಗೆ ನೀರಿನ ಕರ ಪಾವತಿಸಿದರೂ ನೀರು ಬರುತ್ತಿಲ್ಲವೆಂದು ನವೋದಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹಾಗೂ ಮಾಜಿ ಶಾಸಕ ಎಸ್.ಆರ್.ರೆಡ್ಡಿ ಹೇಳಿದರು.                                                      ಅವರಿಂದು ನವೋದಯ ಮಹಾವಿದ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಮ್ಮ ಸಂಸ್ಥೆ ಕಳೆದ 32 ವರ್ಷದಿಂದ ಸಮಾಜ ಮುಖಿಯಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು ಕೆಲ ಕಾಣದ ಕೈಗಳು ದ್ವೇಷ ಸಾಧನೆಯಲ್ಲಿ ತೊಡಗಿವೆ ಎಂದರು.          ನಮ್ಮ ಸಂಸ್ಥೆಯ ಆಸ್ಪತ್ರೆ ಮತ್ತು ಕಾಲೇಜು ಹಾಗೂ ವಸತಿ ನಿಲಯಕ್ಕೆ ದಿನಾಲೂ ಹೆಚ್ಚಿನ ಪ್ರಮಾಣದ ನೀರಿನ ಅವಶ್ಯಕತೆಯಿದ್ದು ಅದಕ್ಕೆ ತಕ್ಕಂತೆ ನಗರಸಭೆಗೆ ನೀರಿನ ಕರ ಪಾವತಿ ಮಾಡಿದರು ನಮಗೆ ನೀರು ಸಿಗುತ್ತಿಲ್ಲ ಎಂದರು. ನಮ್ಮ ಶಿಕ್ಷಣ ಸಂಸ್ಥೆಗೆ ಮುಖ್ಯ ಪೈಪ್ ಮೂಲಕ ಲಕ್ಷಾಂತರ ರೂ. ಸ್ವಂತ ವೆಚ್ಚದಲ್ಲಿ ಪೈಪ್ ಲೈನ್ ಮಾಡಿದರು ಪ್ರಭಾವಿಗಳು ಅದಕ್ಕೆ ರಂದ್ರ ಕೊರೆದು ತಮ್ಮ ಮನೆಗಳಿಗೆ ನೀರು ಬಿಟ್ಟು ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ನಗರಸಭೆಗೆ ಆಸ್ತಿ ಕ

ಮಾ.28 ರಿಂದ 30ರವರೆಗೆ ನವೋದಯ ಮಹಾವಿದ್ಯಾಲಯದಲ್ಲಿ "ರಿಗೇಲ್-24" ಕಾರ್ಯಕ್ರಮ: ನವೋದಯ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಕ್ರೀಡಾ ಸಮುಚ್ಛಯ ನಿರ್ಮಾಣ ಗುರಿ-ಎಸ್.ಆರ್.ರೆಡ್ಡಿ.

Image
  ಮಾ.28 ರಿಂದ 30ರವರೆಗೆ ನವೋದಯ ಮಹಾವಿದ್ಯಾಲಯದಲ್ಲಿ "ರಿಗೇಲ್-24" ಕಾರ್ಯಕ್ರಮ:                ನವೋದಯ  ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಕ್ರೀಡಾ ಸಮುಚ್ಛಯ ನಿರ್ಮಾಣ ಗುರಿ-ಎಸ್.ಆರ್.ರೆಡ್ಡಿ.                                                              ರಾಯಚೂರು,ಮಾ.27- ನಗರದ ನವೋದಯ ಮಹಾವಿದ್ಯಾಲಯದಲ್ಲಿ ಮಾ.28 ರಿಂದ 30ರವರೆಗೆ ರಿಗೇಲ್- 2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನವೋದಯ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಎಸ್.ಆರ್.ರೆಡ್ಡಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ.28 ರಂದು ಸಂಜೆ 6.30ಕ್ಕೆ ರಿಗೇಲ್-24 ಉದ್ಘಾಟನೆಯನ್ನು ಕೃಷಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಉದ್ಘಾಟನೆ ಮಾಡಲಿದ್ದು  ಮಾ.29 ರಂದು ಬೆಳಿಗ್ಗೆ 10ಕ್ಕೆ ನವೋದಯ ಪ್ರೇಕ್ಷಾಗೃಹದಲ್ಲಿ ನರ್ಸಿಂಗ್, ಫಾರ್ಮಸಿ, ಪ್ಯಾರಾ ಮೆಡಿಕಲ್, ಫಿಸಿಯೋಥೆರಪಿ,ಮತ್ತು ಶಿಕ್ಷಣ ಪದವೀಧರರಿಗೆ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಡಾ.ಕೆ.ಎಸ್.ರವೀಂದ್ರನಾಥ ಪದವಿ ಪ್ರದಾನ ಮಾಡಲಿದ್ದಾರೆ ಎಂದರು. ಸಂಜೆ 6.30ಕ್ಕೆ ನವೋದಯ ಕ್ರೀಡಾಂಗಣದಲ್ಲಿ ವೈವಿಧ್ಯಮಯವಾದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು . ಮಾ.30 ರಂದು ಬೆಳಿಗ್ಗೆ 10.45ಕ್ಕೆ ಮೆಡಿಕಲ್ ಮತ್ತು ದಂತ ಪದವೀಧರರಿಗೆ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ.ಬಿ.ಎಲ್. ಸುಜಾತಾ  ರಾಥೋಡ್ ಪದವಿಧರರಿಗೆ ಪದವಿ ಪ್ರದಾನ ಮಾಡಲಿದ್

ನಾಳೆ ಮಾಜಿ ಸಂಸದ ಬಿ.ವಿ.ನಾಯಕ ಬೆಂಬಲಿಗರ ಸಭೆ: ಹಾಲಿ ಸಂಸದರು ಐದು ವರ್ಷ ಜನರಿಂದ ದೂರವಿದ್ದರು- ತಿಮ್ಮಾರೆಡ್ಡಿ ಭೋಗಾವತಿ

Image
  ನಾಳೆ ಮಾಜಿ ಸಂಸದ ಬಿ.ವಿ.ನಾಯಕ ಬೆಂಬಲಿಗರ ಸಭೆ:                                                                                  ಹಾಲಿ ಸಂಸದರು ಐದು ವರ್ಷ ಜನರಿಂದ ದೂರವಿದ್ದರು- ತಿಮ್ಮಾರೆಡ್ಡಿ ಭೋಗಾವತಿ                    ರಾಯಚೂರು,ಮಾ.26- ಬಿಜೆಪಿ ಪಕ್ಷದ ಟಿಕೆಟ್ ವಂಚಿತ ಬಿ.ವಿ.ನಾಯಕ ಬೆಂಬಲಿಗರ ಸಭೆಯನ್ನು ನಾಳೆ ನಗರದಲ್ಲಿ ಕರೆಯಲಾಗಿದೆ ಎಂದು ಮುಖಂಡರಾದ ತಿಮ್ಮಾರೆಡ್ಡಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ  ನಾಳೆ ಬೆಳಿಗ್ಗೆ 11 ಕ್ಕೆ ಸಂತೋಷಿ ಹಬ್ ನಲ್ಲಿ ಬೆಂಬಲಿಗರ ಸಭೆ ಕರೆಯಲಾಗಿದ್ದು ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನ ಸಭಾ ಕ್ಷೇತ್ರದ ಬೆಂಬಲಿಗರು ಸಭೆಯಲ್ಲಿ  ಭಾಗವಹಿಸಲಿದ್ದು ಬಿ.ವಿ.ನಾಯಕರಿಗೆ ಬಿಜೆಪಿ ವರಿಷ್ಟರು ಮತ್ತೊಮ್ಮೆ ಪರಿಶೀಲಿಸಿ ಟಿಕೆಟ್ ನೀಡುವಂತೆ ಒತ್ತಾಯಿಸಲಾಗುತ್ತದೆ ಎಂದರು. ಹಾಲಿ ಸಂಸದರು ಐದು ವರ್ಷ ಜನರಿಂದ ದೂರವಿದ್ದರು ಅವರ ಬಗ್ಗೆ  ಜನರ ಅಸಮಾಧಾನ ಹಿನ್ನೆಲೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಿ.ವಿ.ನಾಯಕರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು ಆದರೆ ಅವರು ಟಿಕೆಟ್ ನೀಡದೆ ವಂಚನೆ ಮಾಡಿದ್ದು ಪಕ್ಷವು ಪುನರ್ ಪರಿಶೀಲಿಸಿ ಬಿ.ವಿ.ನಾಯಕರಿಗೆ ಅವಕಾಶ ನೀಡಬೇಕೆಂದ ಅವರು ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಪಕ್ಷವನ್ನು ಗೆಲ್ಲಿಸಲು ನಾವು ಸಿದ್ಧವೆಂದ ಅವರು ಮೋದಿ ಅಲೆಯಲ್ಲಿ ಯಾರೆ ಅಭ್ಯರ್ಥಿಯಾದರು ಗೆಲುವು ಸಿದ್ಧ ಆದರೆ ನಮ್ಮ ಕ್ಷೇತ್ರದಲ್ಲಿ ಬದಲಾವಣೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತಕುಮಾರರವರಿಗೆ ಸತ್ಕಾರ

Image
  ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತಕುಮಾರರವರಿಗೆ ಸತ್ಕಾರ     ರಾಯಚೂರು ,ಮಾ.26-   ಕರ್ನಾಟಕ‌ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕವಾದ ಎ.ವಸಂತಕುಮಾರ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲಾಯಿತು. ಈ‌ ಸಂದರ್ಭದಲ್ಲಿ ರಜಾಕ್ ಉಸ್ತಾದ್ ,ಮೊಹಮ್ಮದ ಅಜೀಮ, ಮೊಹಮ್ಮದ ಉಸ್ಮಾನ, ವೆಂಕಟೇಶ ಯಾದವ, ರವಿಕುಮಾರ ಇತರರು ಉಪಸ್ಥಿತರಿದ್ದರು.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ: ಜಿಲ್ಲೆಯಲ್ಲಿ 30228 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

Image
  ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ: ಜಿಲ್ಲೆಯಲ್ಲಿ 30228  ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು ರಾಯಚೂರು,ಮಾ.೨೫- ಜಿಲ್ಲೆಯ ೯೩ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸುಸೂತ್ರವಾಗಿ ಜರುಗಿದ್ದು, ಜಿಲ್ಲೆಯಲ್ಲಿ ಮಾ.೨೫ರಂದು ಪ್ರಥಮ ಭಾಷೆ ಪತ್ರಿಕೆಯ ವಿಷಯಕ್ಕೆ ಪರೀಕ್ಷೆ ನಡೆದಿದ್ದು, ಈ ಪರೀಕ್ಷೆಗೆ ಒಟ್ಟು ೩೦೨೨೮ ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಉಳಿದಂತೆ ೮೭೧ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ೪೧೮೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೭೫ ವಿದ್ಯಾರ್ಥಿಗಳು ಗೂರಾಗಿದ್ದಾರೆ,  ಲಿಂಗಸುಗೂರು ತಾಲೂಕಿನಲ್ಲಿ ೬೨೪೧ ಹಾಜರು ೧೫೩ ವಿದ್ಯಾರ್ಥಿಗಳು ಗೈರಾಗಿದ್ದಾರೆ, ಮಾನವಿ ತಾಲೂಕಿನಲ್ಲಿ ೫೫೬೮ ವಿದ್ಯಾರ್ಥಿಗಳು ಹಾಜರು ಹಾಗೂ ೧೮೪ ವಿದ್ಯಾರ್ಥಿಗಳು ಗೈರಾಗಿದ್ದಾರೆ. ರಾಯಚೂರು ತಾಲೂಕಿನಲ್ಲಿ ೮೬೪೫ ಹಾಜರಾಗಿದ್ದರೆ ೩೦೦ ವಿದ್ಯಾರ್ಥಿಗಳು ಗೈರಾಗಿದ್ದಾರೆ ಹಾಗೂ ಸಿಂಧನೂರು ತಾಲೂಕಿನಲ್ಲಿ ೫೫೮೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಉಳಿದಂತೆ ೧೫೯ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಲೋಕಸಭೆ ಚುನಾವಣೆ: ಚೆಕ್ ಪೋಸ್ಟ್ ಗಳಿಗೆ ಡಿಸಿ, ಸಿಇಒ, ಎಸ್ಪಿ ಭೇಟಿ

Image
  ಲೋಕಸಭೆ ಚುನಾವಣೆ: ಚೆಕ್ ಪೋಸ್ಟ್ ಗಳಿಗೆ ಡಿಸಿ, ಸಿಇಒ, ಎಸ್ಪಿ ಭೇಟಿ ರಾಯಚೂರು,ಮಾ.೨೫- ಸಾರ್ವತ್ರಿಕ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಯಚೂರು ತಾಲೂಕಿನ ವಿವಿಧ ಗಡಿಭಾಗದ ಗ್ರಾಮಗಳಲ್ಲಿ ಸ್ಥಾಪಸಿರುವ ಚೆಕ್ ಪೋಸ್ಟ್ ಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕರಾಂ ಪಾಂಡ್ವೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ಭೇಟಿ ನೀಡಿ ಪರಿಶೀಲಿಸಿದರು.  ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಗರದ ಲಿಂಗಸೂಗೂರು ರಸ್ತೆ ಬೈಪಾಸ್ ಬಳಿ, ಶಕ್ತಿನಗರ, ಚಂದ್ರಬoಡಾ, ಸಿಂಗನೋಡಿ, ಯರಗೇರಾ, ಕೊತ್ತದೊಡ್ಡಿ ,ಗಿಲೇಸೂಗೂರು/ಯರಗೇರಾ ಗಡಿಭಾಗದಲ್ಲಿ ಸ್ಥಾಪಿಸಲಾದ ಸ್ಥಾಯೀ ಕಣ್ಗಾವಲು ತಂಡಗಳಚೆಕ್ ಪೋಸ್ಟಗಳಿಗೆ ಅನೀರಿಕ್ಷಿತ ಭೇಟಿ ನೀಡಿ ವಾಹನಗಳ ತಪಾಸಣಾ ಕಾರ್ಯಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.  ಇಂದಿನಿoದ ೨೦೨೪ ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು, ರಾಯಚೂರು ನಗರದ ವಿಜ್ಞಾನ ಶಾಲೆ, ಚಂದ್ರಬoಡಾ ಸರ್ಕಾರಿ ಪ್ರೌಢಶಾಲೆ ಮತ್ತು ಸಿಂಗನೋಡಿ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ನಕಲು / ಅಕ್ರಮ ತಡೆ ಬಗ್ಗೆ ಪರಿಶೀಲನೆ ನಡೆಸಲಾಯಿತು. ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಡೆಸಿ ಯಶಸ್ವಿಗೊಳಿಸುವಂತೆ ಪರೀಕ್ಷಾ  ಕೇಂದ್ರದ ಅಧಿಕಾ

ಮ್ಯಾಚ್ ಫಿಕ್ಸಿಂಗ್ ನಿಂದ ನನಗೆ ಟಿಕೆಟ್ ತಪ್ಪಿದೆ -ಬಿ.ವಿ.ನಾಯಕ

Image
  ಮ್ಯಾಚ್ ಫಿಕ್ಸಿಂಗ್ ನಿಂದ ನನಗೆ ಟಿಕೆಟ್ ತಪ್ಪಿದೆ -ಬಿ.ವಿ.ನಾಯಕ ರಾಯಚೂರು,ಮಾ.25- ಮಾಜಿ ಸಂಸದ ಬಿ.ವಿ ನಾಯಕ್ ತಮಗೆ  ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆಗಿದ್ದಕ್ಕೆ ತೀರ್ವ ಬೇಸರ ವ್ಯಕ್ತಪಡಿಸಿದ್ದಾರೆ.   ಸ್ವ ಪಕ್ಷದವರ ವಿರುದ್ಧವೇ ಆರೋಪ ಮಾಡಿರುವ ಅವರು ಕಾಣದ ಕೈಗಳು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.     ನನಗೆ ಪ್ರಾರಂಭದಿಂದಲು ಆತ್ಮ ವಿಶ್ವಾಸ ಮೂಡಿಸಿ ಟಿಕೆಟ್ ತಪ್ಪಿಸಿ ಬಲಿಪಶು ಮಾಡಿದ್ದಾರೆ ಎಂದು ಬಿ.ವಿ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನನಗೆ ಟಿಕೆಟ್ ಕೊಡುತ್ತೇನೆ ಎಂದು ಆಸೆ ತೋರಿಸಿದ್ದಾರೆ ಕ್ಷೇತ್ರದಾದ್ಯಂತ ಓಡಾಡಿ ಕಾರ್ಯ ಚಟುವಟಿಕೆ ಮಾಡು ಎಂದು ವರಿಷ್ಠರೇ ಹೇಳಿದ್ದರು ಎಂದರು.  ಹಿತಶತ್ರುಗಳ ಶಡ್ಯಂತ್ರದಿಂದ ನನಗೆ ಟಿಕೆಟ್ ಕೈತಪ್ಪಿದೆ ಎಂದು ದೂರಿದ ಅವರು ಮೊದಲೇ ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಆದ್ದರಿಂದ ನಾನು ಈಗಿನ ಚುನಾವಣೆಗೆ ತಟಸ್ಥನಾಗಿರುತ್ತೇನೆ ನನಗೆ ಟಿಕೆಟ್ ತಪ್ಪಿದ್ದಕ್ಕೆ ಲಕ್ಷಾಂತರ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮನದಾಳದ ಮಾತು ಹೇಳಿದ್ದಾರೆ .

ಹೋಳಿ ಹಬ್ಬದ ಕವನ

Image
  ಹೋಳಿ ಹಬ್ಬದ ಕವನ.                                                                                                           ಹೋ ಳಿ ಹೋಳಿ  ಹಬ್ಬ  ಬಂತಣ್ಣ  ಸಂತಸ  ತಂತಣ್ಣ  ಕಾಮ  ದಹನ  ಮಾಡಣ್ಣ   ಮನದ ಕಾಮಕ್ರೋಧ  ಬಿಡಬೇಕಣ್ಣ  ಏಳು  ಬಣ್ಣ  ವಿವಿಧ   ನೋಡಣ್ಣ   ಸಪ್ತ ಗಿರಿ  ವಾಸನನ್ನ   ನೆನೆಯಣ್ಣ   ಕಾಮ  ಗೆದ್ದವವನನ್ನ   ಪ್ರಲ್ಹಾದನನ್ನು  ಹೋಲಿಕಾಳಿಂದ  ಕಾಯ್ದವವನನ್ನ   ಬಣ್ಣ  ಬಣ್ಣದ   ಸೊಬಗು  ನೋಡಣ್ಣ   ತಣ್ಣೀರಿನ  ಪಿಚಕಾರಿ  ತಂಪು ತಂಪಣ್ಣ  ಕಾಮನೆಗಳ  ಸುಟ್ಟು  ಹಾಕಣ್ಣ  ಕಾಮ ದಹನ   ಮಾದರಿಯಣ್ಣ   ಜೀವನ  ಒಂದು ವೈವಿಧ್ಯಮಯವಣ್ಣ   ನಲಿಯುತ ಕಲಿಯುತ   ಸ್ವಾಗತಿಸೋಣಣ್ಣ ಮನೆ ಮನೆ  ತೆರಳಿ   ಬಣ್ಣ  ಹಚ್ಚುತ  ಮೈ  ಮರೆಯುತ ಸ್ನೇಹಿತ  ರೆಲ್ಲರೂ  ಒಂದಾಗೋಣ   ಹಬ್ಬದ  ನೆವದಲ್ಲಿ  ಭಾವೈಕ್ಯತೆಯ  ಬಿತ್ತೋಣಣ್ಣ  ಶಾಂತಿ  ಸಮಾಧಾನ  ಜೀವನದಲ್ಲಿ ಸಂತೋಷ   ಬಲು  ಮುಖ್ಯವಣ್ಣ   ಕಾಮದಹನದ  ಮೂಲಕ  ದ್ವೇಷ  ಅಸೂಯೆ  ಮಾಯಾ   ಮೋಹ  ಸುಟ್ಟ ಹಾಕೋಣ  ಬಣ್ಣ  ಹಚ್ಚಿ  ಕುಣಿ ಕುಣಿದಾಡೋಣ                                                  ಲೇಖಕರು: ಶ್ರೀಮತಿ  ಭಾರತಿ  ಕುಲಕರ್ಣಿ, ರಾಯಚೂರು.

ರಾಯಚೂರು ಲೋಕಸಭಾ ಕ್ಷೇತ್ರ: ರಾಜಾ ಅಮರೇಶ್ವರ ನಾಯಕಗೆ ಬಿಜೆಪಿ ಟಿಕೆಟ್ ಘೋಷಣೆ.

Image
  ರಾಯಚೂರು ಲೋಕಸಭಾ ಕ್ಷೇತ್ರ: ರಾಜಾ ಅಮರೇಶ್ವರ ನಾಯಕಗೆ ಬಿಜೆಪಿ ಟಿಕೆಟ್ ಘೋಷಣೆ.          ರಾಯಚೂರು,ಮಾ.24- ತೀವ್ರ ಕುತೂಹಲ ಕೆರಳಿಸಿದ್ದ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಯಶಸ್ವಿಯಾಗಿದ್ದಾರೆ.                                 ಮೊದಲ ಪಟ್ಟಿಯಲ್ಲಿ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಹೆಸರು ಘೋಷಿಸದ ಬಿಜೆಪಿ ಹೈಕಮಾಂಡ್ ಇದೀಗ ತನ್ನ 5ನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ರಾಜಾ ಅಮರೇಶ್ವರ ನಾಯಕ ಹೆಸರು ಅಂತಿಮಗೊಳಿಸಿದ್ದು ಮತ್ತೋರ್ವ ಆಕಾಂಕ್ಷಿ ಬಿ.ವಿ.ನಾಯಕ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದು ಅದೆ ರೀತಿ ಟಿಕೆಟ್ ಆಕಾಂಕ್ಷಿಗಳ ರೇಸ್ ನಲ್ಲಿದ್ದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರರಿಗೂ ಟಿಕೆಟ್ ಮಿಸ್ ಆಗಿದೆ.    ಎರಡನೆ ಬಾರಿಗೆ ಲೋಕಸಭಾ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಸೆಣಸಾಟ ನಡೆಸಲಿದ್ದಾರೆ. ಎರೆಡು ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದು ರಾಜ್ಯದಲ್ಲಿ ಬಿಜೆಪಿಗೆ ಜೆಡಿಎಸ್ ಸಪೋರ್ಟ್ ಮಾಡಿದ್ದು ಚುನಾವಣಾ ಕಣ ಇಂದು ಹೋಳಿ  ಹುಣ್ಣಿಮೆಯಿಂದಲೆ ರಂಗೇರಲಿದೆ.

ವಾರ್ಡ್ ನಂ 1 ರಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ: ರವಿ ಬೋಸರಾಜು ಅವರಿಂದ ಸ್ವಚ್ಛತಾ ಕಾರ್ಯ ಪರಿಶೀಲನೆ

Image
  ವಾರ್ಡ್ ನಂ 1 ರಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ: ರವಿ ಬೋಸರಾಜು ಅವರಿಂದ ಸ್ವಚ್ಛತಾ ಕಾರ್ಯ ಪರಿಶೀಲನೆ ರಾಯಚೂರು,ಮಾ.24- ಸ್ವಚ್ಛ ಮತ್ತು ಸುಂದರ ನಗರಕ್ಕಾಗಿ ನಗರಸಭೆ ಹಾಗೂ ಜಿಲ್ಲಾಡಳಿತ ವತಿಯಿಂದ ವಾರ್ಡ್ ನಂ 1 ರಲ್ಲಿ ನಡೆಯುತ್ತಿರುವ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಭಾಗವಹಿಸಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದರು. ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರೊಂದಿಗೆ ಮಾತನಾಡಿ ಸ್ವಚ್ಛತೆಯ ಜೊತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು. ನಗರಸಭೆ ವಿಶೇಷ ಪ್ರಯತ್ನದೊಂದಿಗೆ ಪ್ರತಿದಿನ ಸಂಜೆ 25 ತ್ಯಾಜ್ಯ ವಿಲೇವಾರಿ ವಾಹನಗಳು ಎಲ್ಲಾ ವ್ಯಾಪಾರಸ್ತರ ಮಾರಾಟ ಮಳಿಗೆ ಹಾಗೂ ಬಂಡಿ ವ್ಯಾಪಾರಸ್ತ ಫುಟ್ ಪಾತ್  ಸ್ಥಳಗಳಿಗೆ ಬರಲಿವೆ ವಾಹನಗಳಿಗೆ ಪ್ರತಿದಿನದ ತ್ಯಾಜ್ಯವನ್ನು ನೀಡಬೇಕು ಎಂದು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರುದ್ರಪ್ಪ, ಎನ್ ಶ್ರೀನಿವಾಸ ರೆಡ್ಡಿ, ನರಸಿಂಹಲು ಮಾಡಗಿರಿ, ಬಿ ರಮೇಶ್, ಮಹಾಲಿಂಗ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕೆಪಿಸಿಸಿ ಕಾರ್ಯಧ್ಯಕ್ಷರಾಗಿ ಎ.ವಸಂತಕುಮಾರ ನೇಮಕ.

Image
  ಕೆಪಿಸಿಸಿ ಕಾರ್ಯಧ್ಯಕ್ಷರಾಗಿ ಎ.ವಸಂತಕುಮಾರ ನೇಮಕ.           ರಾಯಚೂರು,ಮಾ.23- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಧ್ಯಕ್ಷರಾಗಿ ಎ.ವಸಂತಕುಮಾರ ನೇಮಕವಾಗಿದ್ದಾರೆ. ಎಐಸಿಸಿ ಅಧ್ಯಕ್ಷರ ಅಪ್ಪಣೆ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣಿಗೋಪಾಲ ಈ ಆದೇಶ ಹೊರಡಿಸಿದ್ದಾರೆ.  ಅಲ್ಲದೆ ಇವರನ್ನು ಕಲ್ಯಾಣ ಕರ್ನಾಟಕ ಜಿಲ್ಲೆಗಳ ಕೆಪಿಸಿಸಿ ಕಾರ್ಯಕ್ರಮ ಅನುಷ್ಠಾನ ಉಸ್ತುವಾರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೇಮಕ ಮಾಡಿದ್ದಾರೆ .                          ಎ.ವಸಂತಕುಮಾರ ಅವರ ಸಂಕ್ಷಿಪ್ತ ಮಾಹಿತಿ : ದಿ.19-05-1963 ರಂದು ರಾಯಚೂರಿನಲ್ಲಿ ಜನಿಸಿದ್ದು,  ಇವರ ತಂದೆ ಆರ್.ಆಂಜನೇಯಲು ರಾಯಚೂರು ನಗರಸಭೆ ಅಧ್ಯಕ್ಷರಾಗಿ, ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ  ಸೇವೆ ಸಲ್ಲಿಸಿರುತ್ತಾರೆ. ಅದರಂತೆ ಎ.ವಸಂತಕುಮಾರ ಅವರು 1986-90ರ ವರೆಗೆ ಎನ್.ಎಸ್.ಯು.ಐ. ಪ್ರಧಾನ ಕಾರ್ಯದರ್ಶಿಯಾಗಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ 1990-1996 ರ ವರೆಗೆ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿ 1996-2001ರ ವರೆಗೆ ಕಾರ್ಯನಿರ್ವಸಿದ್ದಾರೆ. 2001ರಿಂದ 2006ರ ವರೆಗೆ ರಾಯಚೂರು ಗ್ರಾಮೀಣ‌ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ,  2006-17ರ ವರೆಗೆ ರಾಯಚೂರು ಜಿಲ್ಲಾ‌ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2017-2024ರ ವರ

ನಗರದಲ್ಲಿ ಮಾ. 28ರಂದು ವಿದ್ವಾನ್ ಸಿ.ಜಿ.ವಿಜಯಸಿಂಹಾಚಾರ್ಯ ರಿಂದ ಉಪನ್ಯಾಸ

Image
 ನಗರದಲ್ಲಿ ಮಾ .28ರಂದು ವಿದ್ವಾನ್ ಸಿ.ಜಿ.ವಿಜಯಸಿಂಹಾಚಾರ್ಯ ರಿಂದ ಉಪನ್ಯಾಸ    ರಾಯಚೂರು ,ಮಾ.23- ಖ್ಯಾತವಾಗ್ಮಿಗಳು, ಅಧ್ಯಾತ್ಮಿಕ ಚಿಂತಕರು ವಿದ್ವಾನರಾದ ಶ್ರೀ ಸಿ.ಜಿ. ವಿಜಯ ಸಿಂಹಾಚಾರ್ಯ ಇವರಿಂದ ಇದೇ ಮಾ. 28ರಂದು ಗುರುವಾರ ಸಂಜೆ  5.30 ಕೆ ನಗರದ ಕರ್ನಾಟಕ ಸಂಘದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.     ಇವರು ಕನಕದಾಸರ ಸಾಹಿತ್ಯದಲ್ಲಿ ಕಾವ್ಯ ಸೂಕ್ಷ್ಮಗಳು ಮತ್ತು ಪ್ರಮೇಯಗಳು ಎಂಬ ವಿಷಯದ ಮೇಲೆ ಉಪನ್ಯಾಸವನ್ನು ನೀಡಲಿದ್ದಾರೆ.   ಜಿಲ್ಲಾ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ರಾಯಚೂರು ಅವರು ದಿ. ಜಯಚಾರ್ ಕೊಪ್ಪರ್  ನಿವೃತ್ತ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸ್ಮರಣಾರ್ಥ ಹಮ್ಮಿಕೊಂಡ ದಾಸ ಸಾಹಿತ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ.    ವಿದ್ವಾನ್ ಸಿ.ಜಿ. ವಿಜಯಸಿಂಹಾಚಾರ್ಯರು ಭಾಗವತ, ವೇದ,ಉಪನಿಷತ್, ಮುಂತಾದ ವಿಷಯಗಳಲ್ಲಿ ಪರಿಣಿತಿಯನ್ನು ಪಡೆದಿದ್ದು, ಇವರು ಉಡುಪಿಯ ಪ್ರಾಥಸ್ಮರಣೀಯರಾದ ಪೇಜಾವರ ಶ್ರೀಗಳವರಲ್ಲಿ ಮತ್ತು ವಿದ್ಯಾ ವಾಚಸ್ಪತಿಗಳಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ರಲ್ಲಿ ವಿದ್ಯಾಭ್ಯಾಸವನ್ನು  ಕೈಗೊಂಡಿದ್ದಾರೆ.      ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಹಲವಾರು ವಿಷಯಗಳ ಮೇಲೆ ಉಪನ್ಯಾಸವನ್ನು ನೀಡಿ ಗಮನ ಸೆಳೆದಿದ್ದಾರೆ.     ಉಪನ್ಯಾಸ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಬೇಕೆಂದು ದತ್ತಿ ದಾನಿಗಳಾದ ಶ್ರೀಮತಿ ಲಲಿತಾಬಾಯಿ ಕೊಪ್ಪರ್

ಜಿಲ್ಲಾಡಳಿತದಿಂದ ಸರಳ ರೀತಿಯಲ್ಲಿ ರೇಣುಕಾಚಾರ್ಯ ಜಯಂತಿ ಆಚರಣೆ

Image
  ಜಿಲ್ಲಾಡಳಿತದಿಂದ ಸರಳ ರೀತಿಯಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ ರಾಯಚೂರು,ಮಾ.23- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಇಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಗದ್ಗುರು ರೇಣುಕಾಚಾರ್ಯ ಅವರ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಸರಳ ರೀತಿಯಲ್ಲಿ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ, ತಹಶೀಲ್ದಾರ್ ಸುರೇಶ ವರ್ಮಾ,  ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ.ವೆಂ ನಾಯಕ, ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಮಠದ ಅಭಿನವ ವೀರ ರಾಚೋಟಿ ಶಿವಾಚಾರ್ಯ ಸ್ವಾಮೀಜಿ, ಮಂಗಳವಾರ ಪೇಟೆ ಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಮಾಜದ ಮುಖಂಡರಾದ ಶರಣಭೂಪಾಲ ನಾಡಗೌಡ, ರಾಚನಗೌಡ, ಪ್ರಭುರಾಜ, ವೀರಯ್ಯ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಗರದಲ್ಲಿ ಶ್ವಾನ ಕಳ್ಳರ ಹಾವಳಿ: ಹಗ್ಗ ಸಮೇತ ಮನೆಗಳಿಗೆ ದಾಳಿ ಮಾಡುವ ಖದೀಮರು

Image
  ನಗರದಲ್ಲಿ ಶ್ವಾನ ಕಳ್ಳರ ಹಾವಳಿ:                                                             ಹಗ್ಗ ಸಮೇತ ಮನೆಗಳಿಗೆ ದಾಳಿ ಮಾಡುವ ಖದೀಮರು                                                                                      ರಾಯಚೂರು,ಮಾ.22- ನಗರದಲ್ಲಿ ನಾಯಿ ಕಳ್ಳರ ಹಾವಳಿ ಹೆಚ್ಚಾಗಿದೆ  . ಓಣಿಗಳಲ್ಲಿ ಸುಳಿದಾಡುವ    ಖದೀಮರು ಮನೆಗಳ್ಳಲ್ಲಿ ಸಾಕಿರುವ ನಾಯಿ ಮರಿಗಳನ್ನು ಹೊತ್ತೊಯುತ್ತಾರೆ. ಉತ್ತಮ ತಳಿಗಳ ನಾಯಿ ಮರಿಗಳನ್ನು ಕಳುವು ಮಾಡಿ ದುಬಾರಿ ಬೆಲೆಗೆ ಮಾರಿಕೊಳ್ಳುವ ಧಂದೆ ಮಾಡುತ್ತಿದ್ದಾರೆ.      ಹಗ್ಗ ಹಿಡಿದುಕೊಂಡು ಬರುವ ಕಳ್ಳರು ಮನೆಯಲ್ಲಿ ಯಾರು ಇರದಿರುವುದನ್ನು ನೋಡಿ ಅವುಗಳ ಕಾಲು ಕಟ್ಟಿ ಹೊತ್ತೊಯುತ್ತಾರೆ ಇದರಿಂದ ಶ್ವಾನ ಮಾಲೀಕರಲ್ಲಿ ಆತಂಕ ಮನೆ ಮಾಡಿದ್ದು ಪೊಲೀಸರು ಈ ಬಗ್ಗೆ ಕ್ರಮ‌ ಕೈಗೊಳ್ಳಬೇಕು ಎನ್ನುವುದು ಶ್ವಾನ ಪ್ರಿಯರು ಒತ್ತಾಯವಾಗಿದೆ.          

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಜಿ.ಕುಮಾರ ನಾಯಕ ಘೋಷಣೆ

Image
  ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್  ಅಧಿಕೃತ  ಅಭ್ಯರ್ಥಿಯಾಗಿ ಜಿ.ಕುಮಾರ ನಾಯಕ  ಘೋಷಣೆ .                                                      ರಾಯಚೂರು,ಮಾ.21- ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಜಿ.ಕುಮಾರ ನಾಯಕ ರವರ ಹೆಸರು ಘೋಷಣೆಯಾಗಿದೆ.                     ರಾಜ್ಯದ ಒಟ್ಟು 17 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಎಐಸಿಸಿ  ಹೆಸರು ಘೋಷಿಸಿದೆ. ರವಿ ಪಾಟೀಲ್ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬಂದಿತ್ತಾದರು ಅಂತಿಮವಾಗಿ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ ನಾಯಕ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.