ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಜಿ.ಬಸವರಾಜ ರೆಡ್ಡಿ ರಾಜೀನಾಮೆ. ರಾಯಚೂರು,ಸೆ.30- ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಜಿ.ಬಸವರಾಜ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. ನನ್ನ ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿದ್ದು ಕಳೆದ 22 ವರ್ಷದಿಂದ ನನ್ನ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ ತೃಪ್ತಿ ನನಗಿದ್ದು ನನಗೆ ಸಹಕರಿಸಿದ ಪಕ್ಷದ ನಗರ ವಿಧಾನ ಸಭಾ ಕ್ಷೇತ್ರದ ಎಲ್ಲ ಹಿರಿಯ ಮುಖಂಡರಿಗೂ, ನಗರಸಭೆ ಸದಸ್ಯರಿಗೆ, ಮಾಜಿ ನಗರಸಭೆ ಸದಸ್ಯರಿಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
Posts
Showing posts from September, 2024
- Get link
- X
- Other Apps
ಅ.3 ರಿಂದ ಮುನ್ನೂರು ಕಾಪು ಸಮಾಜದಿಂದ ನವರಾತ್ರಿ ಉತ್ಸವ ಆರಂಭ: ಜಿಲ್ಲಾ ಮಟ್ಟದ ಪ್ರೌಢಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಂದ ನೃತ್ಯ, ಸಮೂಹ ಗಾಯನ ಸ್ಫರ್ಧೆ- ಎ.ಪಾಪಾರೆಡ್ಡಿ ರಾಯಚೂರು,ಸೆ.30- ಮುನ್ನೂರು ಕಾಪು ಸಮಾಜದ ವತಿಯಿಂದ ಶ್ರೀ ಮಾತಾ ಮಹಾಲಕ್ಷ್ಮಿ ಹಾಗೂ ಶ್ರೀಮಾತಾ ಕಾಳಿಕಾದೇವಿಯ ನವರಾತ್ರಿ ಉತ್ಸವ ಅ. 3 ರಿಂದ 11 ರವರೆಗೆ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಮುನ್ನೂರು ಕಾಪು ಸಮಾಜ ಮುಖಂಡ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಉತ್ಸವದಲ್ಲಿ ಹೆಸರಾಂತ ಸಂಗೀತ ನೃತ್ಯಕಲಾ ತಂಡಗಳು ಭಾಗವಹಿಸಲಿವೆ ಎಂದ ಅವರು ಜಿಲ್ಲಾ ಮಟ್ಟದ ಪ್ರೌಢಶಾಲಾ ಹಾಗೂ ಕಾಲೇಜುಗಳ ಕಲಾತಂಡಗಳನ್ನು ಆಹ್ವಾನಿಸಲಾಗುತ್ತದೆ ಎಂದರು. ಆಯ್ಕೆಯಾದ ತಂಡಗಳಿಗೆ ಸೂಕ್ತ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು. ಈ ನವರಾತ್ರಿ ದಸರಾ ಉತ್ಸವದಲ್ಲಿ ಜಿಲ್ಲಾ ಮಟ್ಟದ ಪ್ರೌಢ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ಫರ್ಧೆ ಆಯೋಜಿಸಲಾಗಿದ್ದು ಜಾನಪದ, ನವದುರ್ಗೆ ನೃತ್ಯ, ಭರತ ನಾಟ್ಯ, ಸಮೂಹ ಗೀತೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಭಾಗವಹಿಸುವ ನೃತ್ಯ ತಂಡದಲ್ಲಿ 12ರಿಂದ 15ವಿದ್ಯಾರ್ಥಿಗಳು ಭಾಗವಹಿಸಬಹುದು. ಸಮೂಹ ಗೀತೆಗಳಲ್ಲಿ ವಾದ್ಯ ಮೇಳ ಸಮೇತ 8ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಪ್ರೌಢಶಾಲಾ ಮುಖ್ಯಾಧ್ಯಾಪಕ ಹಾಗೂ ಕಾಲೇಜು ಪ್ರ...
- Get link
- X
- Other Apps
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ೧೦ನೇ ರಾಯಚೂರು ಜಿಲ್ಲಾ ಸಮ್ಮೇಳನದಲ್ಲಿ ಹಲವು ನಿರ್ಣಯ ಅಂಗಿಕಾರ ರಾಯಚೂರು,ಸೆ.30- ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ್ ಕಂ. ಡಾಟಾ ಆಪರೇಟರ್‌ಗಳು, ನೀರಗಂಟಿಗಳು, ಜವಾನ್ ಹಾಗೂ ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರಕಾರಿ ನೌಕರರೆಂದು ಘೋಷಿಸಲುಒತ್ತಾಯಿಸಿ ಮತ್ತು ಕನಿಷ್ಠವೇತನ ₹. ೩೧,೦೦೦/- ಜಾರಿಗೆ ಆಗ್ರಹಿಸಿ ಅಕ್ಟೋಬರ್-೧, ೨೦೨೪ ರಂದು ಗ್ರಾಮೀಣಾಧಿಕಾರಿಗಳ ಮನೆಗೆ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ೧೦ನೇ ರಾಯಚೂರು ಜಿಲ್ಲಾ ಸಮ್ಮೇಳನವು ಸೆ.27ರಂದು ಮಾನವಿಯಲ್ಲಿ ನಡೆದಿದ್ದು, ಈ ಸಮ್ಮೇಳನದಲ್ಲಿ ಈ ಕೆಳಕಂಡ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ್ ಕಂ. ಡಾಟಾ ಆಪರೇಟರ್‌ಗಳು, ನೀರಗಂಟಿಗಳು, ಜವಾನ್ ಹಾಗೂ ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರಕಾರಿ ನೌಕರರೆಂದು ಘೋಷಿಸಲು ದಿನನಿತ್ಯದ ಬೆಲೆ ಏರಿಕೆ ಅನುಗಣವಾಗಿ ಕನಿಷ್ಠವೇತನ ₹. ೩೧,೦೦೦/- ಜಾರಿಗೆ ಆಗ್ರಹ. ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನಿವೃತ್ತ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ ತಿಂಗಳು ಕನಿಷ್ಟ ₹. ೬೦೦೦/- ಗಳ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಗ್ರಾಮ ಪಂಚ...
- Get link
- X
- Other Apps
ದರ್ವೇಶ್ ಕಂಪನಿ ಹಗರಣ ಸಿಬಿಐ ಮತ್ತು ಇಡಿಗೆ ಹಸ್ತಾಂತರಿಸಬೇಕು- ಅಂಬಾಜಿ ರಾವ್. ರಾಯಚೂರು,ಸೆ.30- ದರ್ವೇಶ್ ಕಂಪನಿ ಬಹು ಕೋಟಿ ವಂಚನೆ ಪ್ರಕರಣವನ್ನು ಸಿಬಿಐ ಮತ್ತು ಇಡಿಗೆ ಹಸ್ತಾಂತರ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಅಂಬಾಜಿರಾವ್ ಮೈದರಕರ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದರ್ವೇಶ್ ಕಂಪನಿಯಲ್ಲಿ ಹಣ ಹೂಡಿದವರಿಗೆ ಇದುವರೆಗೂ ಹಣ ಹಿಂದಿರುಗಿಸಿಲ್ಲ ಸಿಐಡಿ ತನಿಖೆ ನಡೆಯುತ್ತಿದ್ದರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿಲ್ಲವೆಂದರೆ ಸಿಐಡಿ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ತಿಳಿಯುತ್ತದೆ ಆದ್ದರಿಂದ ಪ್ರಕರಣವನ್ನು ಸಿಬಿಐ ,ಇಡಿ ತನಿಖೆಗೆ ರಾಜ್ಯ ಸರ್ಕಾರ ಹಸ್ತಾಂತರ ಮಾಡಬೇಕೆಂದರು. ಇತ್ತೀಚೆಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಬಂಧಿತ ಆರೋಪಿಗಳಿಗೆ ಮತ್ತು ತಲೆಮರಿಸಿಕೊಂಡ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ತಿರಸ್ಕರಿಸಲಾಗಿದೆ ಆದ್ದರಿಂದ ಉಚ್ಚ ನ್ಯಾಯಾಲಯದಲ್ಲಿ ಜಾಮಿನು ಅರ್ಜಿ ಸಲ್ಲಿಸಲಾಗಿದ್ದರೂ ಅಲ್ಲಿ ಅರ್ಜಿ ಸ್ವೀಕೃತಗೊಂಡಿಲ್ಲವೆಂಬ ಮಾಹಿತಿಯಿದ್ದು ನಕಲಿ ಬಾಂಡ್ ಮೂಲಕ ಹಣ ಹೂಡಿಕೆದಾರರಿಗೆ ಹಣ ಹಿಂತಿರುಗಿಸುವತ್ತೇವೆಂದು ನ್ಯಾಯಾಲ...
- Get link
- X
- Other Apps
ಛಲವಾದಿ ಸಮುದಾಯ ಒಳಮೀಸಲಾತಿ ವಿರುದ್ಧವಿಲ್ಲ- ಶಿವರಾಜ್ ಜಾನೇಕಲ್. ರಾಯಚೂರು,ಸೆ.29- ಛಲವಾದಿ ಸಮುದಾಯ ಒಳಮೀಸಲಾತಿ ವಿರುದ್ಧವಿಲ್ಲವೆಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಶಿವರಾಜ್ ಜಾನೇಕಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಳೆ ಮೈಸೂರು ಭಾಗ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಹೊಲೆಯ ಮತ್ತು ಮಾದಿಗ ಈ ಎರೆಡು ಸಮುದಾಯವನ್ನು ಆದಿ ಕರ್ನಾಟಕವೆಂದು ಕರೆಯುತ್ತಾರೆ ಇದು ಗೊಂದಲಕ್ಕೆ ಕಾರಣವಾಗಿದೆ ಎಂದರು. ಮಧ್ಯ ಕರ್ನಾಟಕ, ಶಿವಮೊಗ್ಗ ಬಳ್ಳಾರಿ , ಚಿತ್ರದುರ್ಗ ಮುಂತಾದೆಡೆ ಹೊಲೆಯ ಸಮುದಾಯವನ್ನು ಆದಿ ದ್ರಾವಿಡ ವೆಂದು ಕರೆಯುತ್ತಾರೆ ಮತ್ತು ಮಾದಿಗ ಸಮುದಾಯವನ್ನು ಆದಿ ದ್ರಾವಿಡ ವೆಂಬ ವ್ಯಾಪಕವಾದ ನಂಬಿಕೆಯಿದೆ ಅದು ತಪ್ಪು ಎಂದರು. ಒಳಮೀಸಲಾತಿ ವರ್ಗೀಕರಣ ಮಾಡಿರುವ ನ್ಯಾ.ಸದಾಶಿವ ಆಯೋಗ ವರದಿ ಅನ್ವಯ ಕೇವಲ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ವರದಿ ನೀಡಿದೆ ಸರ್ಕಾರಿ ಉಪಜಾತಿವಾರು ವೈಜ್ಞಾನಿಕವಾಗಿ ಅಂಕಿ ಅಂಶ ಲಭ್ಯವಿಲ್ಲದ ಕಾರಣ ಒಳ ಮೀಸಲಾತಿ ಶೇಕಡಾವಾರು ಮೀಸಲಾತಿ ನಿರ್ಧಾರ ಹೇಗೆ ಸಾಧ್ಯವೆಂದರು.ಆದ ಕಾರಣ ಸರ್ಕಾರ ಕೆಲ ನ್ಯೂನ್ಯತೆ ನಿವಾರಿಸಿಕೊಂಡು ಮೀಸಲಾತಿ ಜಾರಿ ಮಾಡಿದರೆ ನ್ಯಾಯ ದೊರಕುತ್ತದೆ ಅಲ್ಲದೆ ನಾವು ಒಳಮ...
- Get link
- X
- Other Apps
ಗೋವಿಂದ ಗಾನ ಕಾರ್ಯಕ್ರಮದ ಯಶಸ್ಸಿಗೆ ಭಜನಾ ಮಂಡಳಿಗಳು ಹಾಗೂ ಆಸ್ತಿಕ ಭಕ್ತರು ಕಾರಣರಾಗಿದ್ದಾರೆ- ಡಾ. ರಾಯಚೂರು ಶೇಷಗಿರಿದಾಸ್ ರಾಯಚೂರು,ಸೆ.28- ಕಳೆದ ವಾರ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜರುಗಿದ ಶ್ರೀ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವದ ಅಂಗವಾಗಿ ನಡೆದ ಗೋವಿಂದ ಗಾನ ಕಾರ್ಯಕ್ರಮ ಅಭೂತಪೂರ್ವ ಯಶಸ್ಸನ್ನು ಕಂಡು ಸಂಪನ್ನಗೊಂಡಿದೆ. ಇದಕ್ಕೆ ರಾಯಚೂರಿನ ಸಮಸ್ತ ಭಜನಾ ಮಂಡಳಿಗಳು ಹಾಗೂ ಆಸ್ತಿಕ ಭಕ್ತ ವೃಂದದವರೆಲ್ಲಕಾರಣರಾಗಿದ್ದಾರೆಂದು ಖ್ಯಾತ ಗಾಯಕ ಡಾ .ರಾಯಚೂರು ಶೇಷಗಿರಿ ದಾಸ ಅವರು ಹೇಳಿದರು. ಅವರು ನಿನ್ನೆ ಸಂಜೆ ನಗರದ ವಾಸವಿ ನಗರದಲ್ಲಿರುವ ಶ್ರೀ ಬನ್ನಿ ಕಾಳಿಕಾಂಬ ದೇವಸ್ಥಾನದಲ್ಲಿ ಗೋವಿಂದ ಗಾನ ಕಾರ್ಯಕ್ರಮ ದಲ್ಲಿ ವೇದಿಕೆಯ ಮೇಲೆ ಭಜನೆ ಕಾರ್ಯಕ್ರಮ ನೀಡಿದ ಭಜನಾ ಮಂಡಳಿಗಳ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವೈಭವದಿಂದ ನಡೆದ ಗೋವಿಂದ ಗಾನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿದ ಭಕ್ತ ಸಾಗರ ಸೇರಿತ್ತು, ಪರಮಪೂಜ್ಯ ಮಂತ್ರಾಲಯ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯ ಜೊತೆಗೆ ಅವರ ಆಶೀರ್ವಚನ, ತಿರುಪತಿಯಿಂದ ಆಗಮಿಸಿದ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟಿನ ವಿಶೇಷ ಅಧಿಕಾರಿಗಳಾದ ಶ್ರೀ ಆನಂದ ತೀರ್ಥಾಚಾರ...
- Get link
- X
- Other Apps
ಹಿಂದೂ ಮಹಾಗಣಪತಿ ಅದ್ದೂರಿ ವಿಸರ್ಜನಾ ಶೋಭಾಯಾತ್ರೆ. ರಾಯಚೂರು,ಸೆ.27- ವಿಶ್ವ ಹಿಂದೂ ಪರಿಷತ್ ,ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಶೋಭಾಯಾತ್ರೆ ಅದ್ದೂರಿಯಾಗಿ ನೆರವೇರಿತು. ಗಂಜ್ ಬಳಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ಸಂಜೆ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳಾದ ಚಂದ್ರ ಮೌಳೇಶ್ವರ ವೃತ್ತ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಶೆಟ್ಟಿ ಭಾವಿ ವೃತ್ತ, ಸರಾಫ್ ಬಜಾರ್, ಕಲ್ಲಾನೆ, ಸೂಪರ್ ಮಾರ್ಕೇಟ್, ಪೇಟ್ಲಾಬುರ್ಜ್, ಗಂಗಾ ನಿವಾಸ ಮಾರ್ಗವಾಗಿ ಖಾಸ್ ಬಾವಿಯಲ್ಲಿ ವಿಸರ್ಜನೆಗೊಂಡಿತು. ಕಿವಿಗಡಚಿಕ್ಕುವ , ಪ್ರಖರ ಬಹು ವರ್ಣದ ಲೈಟ್ ಗಳ ಮಧ್ಯೆ ಯುವಕರು ಜೋಷ್ ನಿಂದ ಕುಣಿದು ಕುಪ್ಪಳಿಸಿದರು. ಶೋಭಾಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ ನೆರೆದು ಶೋಭಾಯಾತ್ರೆ ಕಣ್ತುಂಬಿಕೊಂಡರು. ಗಣೇಶ ಮೂರ್ತಿ ಮುಂಭಾಗದಲ್ಲಿ ಭವ್ಯ ಶ್ರೀ ರಾಮನ ಮೂರ್ತಿ ಶೋಭಾಯಾತ್ರೆಗೆ ಮೆರಗು ನೀಡಿತು. ಅರೆ ಸೇನಾ ಪಡೆ, ಸಶಸ್ತ್ರ ಮೀಸಲು ಪಡೆ, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟ ಮಾದಯ್ಯ ಸ್ಥಳದಲ್ಲಿ ಉಪಸ್ಥಿತರಿದ್ದರು. ಎಎಸ್ಪಿ,ಡಿಎಸ್ಪಿ , ಸಿಪಿಐ , ಪಿಎಸ್ಐ ಹಾಗೂ ಪೊಲೀಸ್ ಸಿ...
- Get link
- X
- Other Apps
ವಿಧಾನ ಮಂಡಲ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹಂಪನಗೌಡ ಬಾದರ್ಲಿ ಹಾಗೂ ಎ.ವಸಂತಕುಮಾರ ನೇಮಕ ರಾಯಚೂರು, ಸೆ.27- ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ 2024-25 ನೇ ಸಾಲಿನ ವಿಧಾನ ಮಂಡಲದ ವಿವಿಧ ಸ್ಥಾಯಿ ಸಮಿತಿಗಳನ್ನು ರಚಿಸಿ ಆದೇಶಿಸಿದೆ. ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಹಿರಿಯ ನಾಯಕರು ಹಾಲಿ ಶಾಸಕರಾದ ಹಂಪನಗೌಡ ಬಾದರ್ಲಿ ಇವರನ್ನು ಅಂದಾಜುಗಳ ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ. ಕೆಪಿಸಿಸಿ ಕಾರ್ಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ ಅವರನ್ನು ವಿಧಾನ ಮಂಡಲದ ಜಂಟಿ ಸ್ಥಾಯಿ ಸಮಿತಿ ಯ ಅಧೀನ ಶಾಸನ ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.
- Get link
- X
- Other Apps
ರಾಯಚೂರು,ಸೆ.27-ಮನೆಯ ಮಾಲೀಕಳನ್ನೇ ಹತ್ಯೆಗೈದ ಬಾಡಿಗೆದಾರ ಪೊಲೀಸರ ಅತಿಥಿಯಾಗಿದ್ದಾನೆ. ನಗರದ ಉದಯನಗರದಲ್ಲಿ ಘಟನೆ ನಡೆದಿದೆ ಆರೋಪಿ ಶಿವು ಬಂಡಯ್ಯಸ್ವಾಮಿಯಿಂದ ಮನೆಯೊಡತಿ ಹತ್ಯೆ ಆರೋಪಿ ತಾನೆ ಕೊಲೆ ಮಾಡಿ ನಂತರ ಮಾಡಿ ತಾನೇ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ ಎಂದು ತಿಳಿದುಬಂದಿದೆ. ಮನೆ ಮಾಲೀಕರು ಬಾಡಿಗೆ ನೀಡಿದ್ದ ಮನೆ ಖಾಲಿ ಮಾಡು ಎಂದಿದ್ದಕ್ಕೆ ಬಾಡಿಗೆದಾರನಿಂದಲೇ ಮನೆ ಮಾಲಕಿಯ ಕೊಲೆ ರಾಯಚೂರು ಬೆಂಗಳೂರಲ್ಲಿ ವಾಸವಿದ್ದ ಶೋಭಾ ಪಾಟೀಲ್ ( 63 ) ರನ್ನ ಉಸಿರುಗಟ್ಟಿಸಿ ಕೊಲೆ ಬಾಡಿಗೆ ಠೇವಣಿ ವಿಚಾರಕ್ಕೆ ಬಂದಿದ್ದ ತಕರಾರು ಮನೆ ಮಾಲಕಿ ಒಬ್ಬರೇ ಇದ್ದಾಗ ಮನೆಗೆ ನುಗ್ಗಿ ಉಸಿರುಗಟ್ಟಿಸಿ ಕೊಲೆ ಹೃದಯ ಸಂಬಂಧಿ ಖಾಯಿಲೆ ಇದ್ರಿಂದ ಅನಾರೋಗ್ಯದಿಂದ ಮೃತಪಟ್ಟಿರಬಹುದು ಎಂದುಕೊಂಡಿದ್ದ ಕುಟುಂಬಸ್ಥರು ಮೂಲತಃ ರಾಯಚೂರಿನ ಇವರು ಬೆಂಗಳೂರಲ್ಲೇ ವಾಸ ಇಲ್ಲಿಯ ಮನೆಯನ್ನ ಪರಿಚಯಸ್ಥನೆ ಆಗಿದ್ದ ಶಿವು ಬಂಡಯ್ಯಸ್ವಾಮಿಗೆ ಬಾಡಿಗೆ ನೀಡಿದ್ದ ಮೃತ ಶೋಭಾ ಸದ್ಯ ಹಂತಕ ಶಿವು ಪೊಲೀಸರ ವಶಕ್ಕೆ ಆರೋಪಿ ಶಿವು ನ ಕೊಲೆಗಾರ ಅಂತಾ ಕಂಡುಹಿಡಿದಿದ್ದೇ ರೋಚಕ ಪಶ್ಚಿಮ ಠಾಣಾ ಪೊಲೀಸರ ಕಾರ್ಯಕ್ಷಮತೆಯಿಂದ ಸಿಕ್ಕಿಬಿದ್ದ ಹಂತಕ
- Get link
- X
- Other Apps
ರುಸ್ಮಾ ಒಕ್ಕೂಟದಿಂದ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ: ಕೆಕೆಆರ್ ಡಿಬಿ ಅನುದಾನದಲ್ಲಿ 1250 ಕೋಟಿ ರೂ. ಶಿಕ್ಷಣ ಕ್ಷೇತ್ರಕ್ಕೆ ಮೀಸಲು- ಸಚಿವ ಬೋಸರಾಜು ರಾಯಚೂರು,ಸೆ.27- ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 1250 ಕೋಟಿ.ರೂ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿರಿಸಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು. ಅವರಿಂದು ರಾಯಚೂರು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟ(ರುಸ್ಮಾ) ದಿಂದ ಆಯೋಜಿಸಿದ ಶಿಕ್ಷಕ ರತ್ನ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಸುಧಾರಣೆ ಬರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಶಿಕ್ಷಕರು ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ನೀಡಿದರೆ ಸ್ವಸ್ಥ ಸಮಾಜ ಸಾಧ್ಯವೆಂದರು. ಈ ನಿಟ್ಟಿನಲ್ಲಿ ಸರ್ಕಾರದಿಂದ ಯಾವುದೆ ಅನುದಾನ ಪಡೆಯದೆ ಸ್ವಂತ ಬಲದ ಮೇಲೆ ರುಸ್ಮಾ ಒಕ್ಕೂಟ ಶಾಲೆಗಳು ಈ ಭಾಗದಲ್ಲಿ ಅತ್ಯುತ್ತಮ ಶಿಕ್ಷಣ ಕ್ರಾಂತಿ ಮಾಡುತ್ತಿವೆ ಎಂದರೆ ತಪ್ಪಾಗಲಾರದು ಎಂದರು. ರಾಷ್ಟ್ರ ...
- Get link
- X
- Other Apps
ಮೆಹೆಬೂಬಿ ಅವರಿಗೆ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ. ರಾಯಚೂರು,ಸೆ.27- ಕಂದಾಯ ಇಲಾಖೆಯಿಂದ ಕೊಡಮಾಡುವ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಯನ್ನು ಮೆಹೆಬೂಬಿಯವರಿಗೆ ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಪ್ರದಾನ ಮಾಡಿ ಗೌರವಿಸಿದರು. ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಅತ್ಯುತ್ತಮ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೆಹೆಬೂಬಿಯವರು ಜಿಲ್ಲೆಯ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾಗಿ ನಿರ್ಗಮಿಸಿ ಪ್ರಸ್ತುತ ಬೆಂಗಳೂರಲ್ಲಿ ಕೆಶಿಪ್ ಕಛೇರಿಯಲ್ಲಿ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .
- Get link
- X
- Other Apps
ಸೆ.29 ರಂದು ವಿಜಯ್ ಪಾಲಿ ಕ್ಲಿನಿಕ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ: ಆರೋಗ್ಯಪೂರ್ಣ ಜೀವನ ಶೈಲಿಯಿಂದ ಹೃದ್ರೋಗ ತಡೆ ಸಾಧ್ಯ - ಅಜಿತ್ .ವಿ.ಕುಲಕರ್ಣಿ . ರಾಯಚೂರು,ಸೆ.27- ನಗರದ ಆಜಾದ್ ನಗರದಲ್ಲಿರುವ ವಿಜಯ್ ಪಾಲಿ ಕ್ಲಿನಿಕ್ ನಲ್ಲಿ ಸೆ.29 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಹೃದ್ರೋಗ ತಜ್ಞ ಡಾ.ಅಜಿತ್ ವಿ.ಕುಲಕರ್ಣಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಶ್ವ ಹೃದಯ ದಿನ ಅಂಗವಾಗಿ ಆಸ್ಪತ್ರೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ನಡೆಯಲಿರುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಚಿತವಾಗಿ ಇಸಿಜಿ ,ಎಕೋ ಮುಂತಾದ ಹೃದಯ ತಪಾಸಣೆ ನಡೆಸಲಾಗುತ್ತದೆ ಎಂದರು. ಇಂದಿನ ದಿನಗಳಲ್ಲಿ ಹೃದಯಾಘಾತ ಯಾವುದೆ ವಯೋಮಿತಿಯಿಲ್ಲದೆ ಸಣ್ಣ ವಯಸ್ಸಿನವರಿಗೂ ಆವರಿಸಿಕೊಳ್ಳುತ್ತಿದೆ ಇದಕ್ಕೆ ನಿರ್ದಿಷ್ಟ ಕಾರಣ ಆರೋಗ್ಯ ವಿಜ್ಞಾನಿಗಳು ಕಂಡು ಹಿಡಿಯಲು ಆಗುತ್ತಿಲ್ಲ ಶೇ.25 ರಷ್ಟು ಕಾರಣ ನಿಗೂಢವಾಗಿದೆ ಎಂದರು. ಹೃದ್ರೋಗ ತಡೆಗಟ್ಟಲು ಆರೋಗ್ಯ ಪೂರ್ಣ ಜೀವನ ಶೈಲಿ, ಸತ್ವಯುತ ಆಹಾರ ಸೇವನೆ, ದಿನನಿತ್ಯ ನಡಿಗೆ, ವ್ಯಾಯಾಮ ಅವಶ್ಯಕತೆಯಿದೆ ಎಂದರು. ಮಧ್ಯಪಾನ, ಧೂಮಪಾನ ಹ...
- Get link
- X
- Other Apps
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಸಮಿತಿಯಿಂದ ಪ್ರಗತಿ ಪರಿಶೀಲನಾ ಸಭೆ: ಎಸ್ಸಿ, ಎಸ್ಟಿ ಜನಾಂಗ ವಾಸಿಸುವ ಪ್ರದೇಶಗಳಲ್ಲಿ ಸಂಪನ್ಮೂಲಗಳನ್ನು ಹೆಚ್ಚಿಸಿ-ಪಿ.ಎಂ.ನರೇಂದ್ರಸ್ವಾಮಿ ರಾಯಚೂರು,ಸೆ.26- ಜಿಲ್ಲೆಯಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಜನಾಂಗದವರು ವಾಸಿಸುವ ಪ್ರದೇಶಗಳಲ್ಲಿ ಜೆ.ಜೆ.ಎಂ ಅಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಂಡು ಸಮರ್ಪಕ ನೀರು ಪೂರೈಸಬೇಕು. ಅವರು ವಾಸಿಸುವ ಪ್ರದೇಶಗಳಲ್ಲಿ ಸಂಪನ್ಮೂಲಗಳನ್ನು ಹೆಚ್ಚಿಸಬೇಕೆಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಪಿ.ಎಂ.ನರೇAದ್ರಸ್ವಾಮಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರಿಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರ ಅಭಿವೃದ್ಧಿ, ಕಲ್ಯಾಣ, ಏಳಿಗೆಗೆ ವಿವಿಧ ಇಲಾಖೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆಗೆ ಜಾಗೃತಿ ಕಾರ್ಯಕ್ರಮಗಳು ತೀವ್ರಗೊಳಿಸಬೇಕು. ವಸತಿ ರಹಿತರಿಗೆ ವಸತಿ ಯೋಜನೆಯಡಿ ಮನೆ ನೀಡಬೇಕು. ದೇವದಾಸಿಯರಿಗೆ ನಿವೇಶನ ನೀಡಬೇಕು. ಮಾಜಿ ದೇವದಾಸಿಯರ ಕುರಿತು ಸಮಾಜ ಬೇರೆ ದೃಷ್ಟಿಯಿಂದಲೇ ನೋಡುತ್ತದೆ. ಹೀಗಾಗಿ ಇವರ ನೆರವಿಗೆ ಅಧಿಕಾರಿಗಳು ಬಂದು ಸ...
- Get link
- X
- Other Apps
ಸೆ.28 ಮತ್ತು 29 ರಂದು ಪುಟ್ಟರಾಜ ಕವಿ ಗವಾಯಿಗಳ ಪುಣ್ಯ ಸ್ಮರಣೆ- ಚಿನ್ನಯ್ಯ ಸ್ವಾಮಿ. ರಾಯಚೂರು,ಸೆ.26- ಲಿಂಗೈಕ್ಯ ಪಂಡಿತ ಡಾ.ಪುಟ್ಟರಾಜ ಕವಿ ಗವಾಯಿಗಳವರ 14 ನೇ ಪುಣ್ಯಸ್ಮರಣೆ ಅಂಗವಾಗಿ ಸೆ.28 ಮತ್ತು 29 ರಂದು ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪಿ.ಚಿನ್ನಯ್ಯ ಸ್ವಾಮಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 9ಕ್ಕೆ ನಗರದ ಸೋಮವಾರ ಪೇಟೆ ಹಿರೇಮಠದಲ್ಲಿ ನಡೆಯುವ ಕಾರ್ಯಕ್ರಮ ಸಾನಿಧ್ಯವನ್ನು ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಶ್ರೀ ಗಳು ವಹಿಸಲಿದ್ದು , ಉದ್ಘಾಟನೆಯನ್ನು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಶ್ರೀಗಳು, ಮಂಗಳವಾರ ಪೇಟೆ ಹಿರೇಮಠ ವೀರಸಂಗಮೇಶ್ವರ ಮಹಾಸ್ವಾಮಿ ನೆರವೇರಿಸಿಲಿದ್ದು ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು , ಶಾಸಕ ಡಾ.ಶಿವರಾಜ ಪಾಟೀಲ್, ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ ಆಗಮಿಸಲಿದ್ದಾರೆಂದರು. ಅತಿಥಿಗಳಾಗಿ ಎನ್.ಗಿರಜಾಶಂಕರ, ಸೇರಿದಂತೆ ಅನೇಕರು ಆಗಮಿಸಲಿದ್ದಾರೆಂದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ...
- Get link
- X
- Other Apps
ನಗರಸಭೆ ಪೌರಾಯುಕ್ತರನ್ನು ವರ್ಗಾವಣೆ ಮಾಡಿ- ಮಹಾವೀರ. ರಾಯಚೂರು,ಸೆ.26- ಸರಿಯಾಗಿ ಕಾರ್ಯನಿರ್ವಹಿಸದ ಪೌರಾಯುಕ್ತ ಗುರು ಸಿದ್ದಯ್ಯ ಹಿರೇಮಠರವರನ್ನು ವರ್ಗಾವಣೆ ಮಾಡುವಂತೆ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧ್ಯಕ್ಷ ಎನ್.ಮಹಾವೀರ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪೌರಾಯುಕ್ತರು ಸರಿಯಾದ ಸಮಯಕ್ಕೆ ಕಛೇರಿಗೆ ಬರುವುದಿಲ್ಲ ಮತ್ತು ನಗರಸಭೆ ಆದಾಯಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಅವರಿಗೆ ಬೆಂಬಲವಾಗಿ ಸಚಿವ ಬೋಸರಾಜು ಮತ್ತು ರವಿ ಬೋಸರಾಜು ಇದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್ ಆಶೀರ್ವಾದ ಲೇಔಟ್ ಬಡವಾಣೆಯನ್ನು ನಿರ್ಮಿಸಲು ಸರ್ಕಾರಿ ಜಮೀನು ಕಬಳಿಸಿದ್ದಾರೆಂದು ದೂರಿದ ಅವರು ಈ ಬಗ್ಗೆ ಬೆಂಗಳೂರು ವಿಶೇಷ ಭೂ ನ್ಯಾಯಾಲಯದಲ್ಲಿ ದಾವೆ ಹೂಡುತ್ತೇವೆಂದರು. 2014 ಎಪಿಎಂಸಿ ಯಿಂದ ನಿವೇಶನ ಹಂಚಿಕೆ ಕಾನೂನು ಬಾಹಿರವಾಗಿದೆ ಈ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಮುಂದು ವರೆಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪ್ರಭು ನಾಯಕ, ಬಸವರಾಜ್,ಉದಯ ಕುಮಾರ್,ರಿಜ್ವಾನ್,ಈರೇಶ್ ಇದ್ದರು.
- Get link
- X
- Other Apps
ತ್ವರಿತ ಕಾಮಗಾರಿ ನಿರ್ವಹಿಸಲು ಬಾಬು ರಾವ್ ಒತ್ತಾಯ ರಾಯಚೂರು,ಸೆ.26- ಇದು ರಾಯಚೂರಿನ ಸರಾಫ್ ಬಜಾರ್ ಎಂದೇ ಖ್ಯಾತವಾಗಿರುವ ರಸ್ತೆಯ ದುಸ್ಥಿತಿ ಕಳೆದ ಮೂರು ತಿಂಗಳನಿಂದಲೂ ಆಮೆ ಗತಿಯಲ್ಲಿ ಸಾಗಿದ್ದ ಚರಂಡಿ ಕಾಮಗಾರಿಯೇ ಈಗಿನ ದುಸ್ಥಿತಿಗೆ ಪ್ರಮುಖ ಕಾರಣವೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬೆರಳೆಣಿಕೆ ದಿನಗಳ ದೊಡ್ಡ ದೊಡ್ಡ ಹಬ್ಬಗಳ ಸಾಲುಗಟ್ಟಿ ಬರುತ್ತಿರುವುದರಿಂದ ಈ ರಸ್ತೆಯಲ್ಲಿ ಜನದಟ್ಟಣೆಗೆ ಕಾರಣವಾಗುತ್ತಿದೆ. ಆದರೆ ಈಗಿರುವ ಸ್ಥಿತಿಯಲ್ಲಿ ಜನ ತಿರುಗಾಡುವುದಕ್ಕೂ ಹಲವಾರು ಸಲ ಆಲೋಚಿಸಬೇಕಾದ ಪ್ರಸಂಗ ಎದುರಾಗಿದೆ. ಚರಂಡಿಯ ಗಲೀಜು ಹಾಗೂ ಗಬ್ಬೆದ್ದು ನಾರುವ ತ್ಯಾಜ್ಯವು ರಸ್ತೆಯಲ್ಲಿ ಮಲಿತು ನಿಂತಿದ್ದರೂ ಇದನ್ನು ಸರಿಪಡಿಸಬೇಕಾದವರ ಕಣ್ಣಿಗೆ ಕಾಣದಿರುವುದು ಅಚ್ಚರಿಯನ್ನು ಮೂಡಿಸುತ್ತದೆ. ಆ ಸ್ಥಳಕ್ಕೆ ಭೇಟಿ ಕೊಟ್ಟವರಿಗೆ ವಾಕರಿಕೆ ತರಿಸುತ್ತದೆ. ಇನ್ನು ಅಲ್ಲಿಯೇ ಸನಿಹದಲ್ಲಿರುವ ನಿವಾಸಿಗಳ ಗೋಳು ಕೇಳುವವರೇ ಇಲ್ಲದಂತಾಗಿ ಬಿಟ್ಟಿದೆ. ಇಡೀ ರಾಜ್ಯ ಆವರಿಸುತ್ತಿರುವ ಡೆಂಗ್ಯೂ ನಂತಹ ಮಾರಕ ಕಾಯಿಲೆಗಳ ಉಗಮ ಸ್ಥಾನವಾಗಿ ಮಾರ್ಪಟ್ಟಿದೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿ ನಗರಸಭೆ ಕಾರ್ಯ ವೈಖರಿಗೆ ಹಿಡಿ ಶಾಪ ಹಾಕುತ್ತಲೇ ಇದ್ದಾರೆ. ನಗರಸಭೆಯವರು ಇತ್ತ ಕಡೆ ಗಮನಹರಿಸಿ ಚರಂಡಿ ನೀರನ್ನು ಚರಂಡಿಗೆ ಸೇರಿಸುವ ಒಂದು ಸಣ್ಣ ಕೆಲಸವನ್ನು ಮಾಡದಿರುವುದು ಅಲ್ಲಿನ ನಿವಾಸಿಗಳಿಗೆ ಹಾಗೂ ಆ ರಸ್ತೆ...
- Get link
- X
- Other Apps
ಫೀಟ್ ವೇದಾ ಮಸಾಜ್ ನಿಂದ ಬಹು ಆರೋಗ್ಯ ಲಾಭ- ಸತ್ಯವತಿ ದೇಶಪಾಂಡೆ. ರಾಯಚೂರು,ಸೆ.24- ಫೀಟ್ ವೇದಾ ಮಸಾಜ್ ನಿಂದ ಬಹು ಆರೋಗ್ಯ ಲಾಭಗಳಿವೆ ಎಂದು ಸತ್ಯವತಿ ದೇಶಪಾಂಡೆ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೀಟ್ ವೇದಾ ಯಂತ್ರದ ಅಧಿಕೃತ ಮಾರಾಟ ಏಜೆನ್ಸಿ ನಾವು ಹೊಂದಿದ್ದು ಹತ್ತು ನಿಮಿಷ ಮಸಾಜ್ ಗೆ 100 ರೂ. ಬಾಡಿಗೆ ದರ ನಿಗದಿಪಡಿಸಲಾಗಿದ್ದು ಹನ್ನೊಂದು ದಿನ, ಇಪ್ಪತ್ತೊಂದು ದಿನ ಹೀಗೆ ಫೀಟ್ ವೇದಾ ಮಸಾಜ್ ಲಾಭ ಪಡೆಯಬಹುದೆಂದರು. 10 ವರ್ಷ ಮೆಲ್ಪಟ್ಟವರು ಈ ಮಸಾಜ್ ಮಾಡಿಕೊಳ್ಳಬಹುದಾಗಿದ್ದು ಹೃದಯ ಸ್ಟಂಟ್ ಶಸ್ತ್ರಿ ಚಿಕಿತ್ಸೆ, ಎಲುಬು ಮುರಿತದಿಂದ ರಾಡ್ ಜೋಡಣೆ ಮುಂತಾದ ಆರೋಗ್ಯ ಸಮಸ್ಯೆಯಿದ್ದವರು ಈ ಮಸಾಜ್ ಮಾಡಿಸಿಕೊಳ್ಳಲು ಬರುವುದಿಲ್ಲವೆಂದರು. ಆಸಕ್ತರು ತಮ್ಮನ್ನು ವಾಸವಿ ನಗರ ಚಿದಂಬರೇಶ್ವರ ದೇವಸ್ಥಾನ ಬಳಿಯಿರುವ ಮನೆ.ನಂ.7-6-277 ಸದ್ಗುರು ಸದನದಲ್ಲಿ ಅಥವಾ ಮೊ.ನಂ.9449974425/9886287917ಗೆ ಸಂಪರ್ಕಿಸಬಹುದೆಂದು ಕೋರಿದರು .
- Get link
- X
- Other Apps
ತುಂಗಭದ್ರಾ ಮತ್ತು ನಾರಾಯಣಪೂರು ನಾಲೆಗಳ ಜ್ವಲಂತ ಸಮಸ್ಯೆ ಬಗ್ಗೆ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರಿಂದ ಉಡಾಫೆ ಹೇಳಿಕೆ ಖಂಡನೀಯ- ಚಾಮರಸ ಮಾಲಿ ಪಾಟೀಲ್. ರಾಯಚೂರು,ಸೆ.24- ತುಂಗಭದ್ರಾ ಹಾಗೂ ನಾರಾಯಣಪೂರು ಕಾಲುವೆಗಳ ಜ್ವಲಂತ ಸಮಸ್ಯೆಗಳ ಬಗ್ಗೆ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅಸಡ್ಡೆ ತೋರಿ ಉಡಾಫೆ ಹೇಳಿಕೆ ನೀಡಿದ್ದು ಖಂಡನೀಯ ವೆಂದು ರಾಜ್ಯ ರೈತ ಸಂಘ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರಿಂದ ಸಿಎಂ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಕೊನೆ ಭಾಗದ ನೀರಿನ ಸಮಸ್ಯೆ ಬಗ್ಗೆ ಸಿದ್ದರಾಮಯ್ಯರವರಿಗೆ ಮನವರಿಕೆ ಮಾಡಿದ ವೇಳೆ ಅವರು ಈ ಭಾಗದ ಸಚಿವರನ್ನು ಕರೆದು ರೈತರು ನೀರು ದೊರಕದಿರುವುದಕ್ಕೆ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದರೂ ನಿವೇಕೆ ಕೊನೆ ಭಾಗಕ್ಕೆ ನೀರು ಸಿಗುವಂತೆ ಕ್ರಮವಹಿಸಿಲ್ಲವೆಂದು ಪ್ರಶ್ನಿಸಿದರು ಎಂದರು. ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ರನ್ನು ಭೇಟಿ ಮಾಡಿದಾಗ ರೈತರು ರಸ್ತೆಗಿಳಿದು ಪ್ರತಿಭಟನೆ ಮಾಡಲಿ ಎಂಬ ಉಡಾಫೆ ಉತ್ತರ ನೀಡಿ ನೀರಾವರಿ ಸಮಸ್ಯೆಗಳ ಬಗ್ಗೆ ಅಸಡ್ಡೆ ತೋರಿದರು ಅವರ ಈ ವರ್ತನೆ ಖಂಡನೀಯವಾಗಿದೆ ಎಂದು ಹೇಳಿದ ಅವರು ಕೊನೆ ಭಾಗಕ್ಕೆ ನಿಗದಿತ ಪ್ರಮಾಣದಲ್ಲಿ ನೀ...
- Get link
- X
- Other Apps
ಸೆ.27 ರಂದು ಹಿಂದೂ ಮಹಾ ಗಣಪತಿ ವಿಸರ್ಜನೆ ಬೃಹತ್ ಶೋಭಾಯಾತ್ರೆ- ರವಿ ಕುಮಾರ್ ರಾಯಚೂರು,ಸೆ.24- ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ರಾಯಚೂರು ಜಿಲ್ಲೆ ವತಿಯಿಂದ ಪ್ರತಿಷ್ಟಾಪಿಸಿದ ಹಿಂದೂ ಮಹಾಗಣಪತಿ ವಿಸರ್ಜನಾ ಬೃಹತ್ ಶೋಭಾಯಾತ್ರೆ ಸೆ.27 ರಂದು ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ರವಿ ಕುಮಾರ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಹೆಚ್ ಪಿ , ಬಜರಂಗದಳ ಸಹಯೋಗದೊಂದಿಗೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಆರ್ ಜೆ ಎಸ್ ಕಲ್ಯಾಣ ಮಂಟಪದಲ್ಲಿ ಗಣೇಶ ಚತುರ್ಥಿ ಯಂದು ಗಣೇಶನನ್ನು ಪ್ರತಿಷ್ಠಾಪಿಸಿದ್ದು ಸೆ.27 ರಂದು ಬೃಹತ್ ವಿಸರ್ಜನಾ ಶೋಭಾಯಾತ್ರೆ ಮಧ್ಯಾಹ್ನ 11.45ಕ್ಕೆ ಪ್ರಾರಂಭವಾಗಲಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಖಾಸ್ ಬಾವಿಯಲ್ಲಿ ವಿಸರ್ಜನೆಯಾಗಲಿದ್ದು ವಿವಿಧ ಕಲಾ ತಂಡಗಳು ಭಾಗವಹಿಸಲಿದ್ದು ಸಮಸ್ತ ಹಿಂದೂ ಬಾಂಧವರು ಪಾಲ್ಗೊಳ್ಳಬೇಕೆಂದು ಕೋರಿದರು. ಪ್ರತಿ ದಿನ ಗಣೇಶನಿಗೆ ವಿಶೇಷ ಪೂಜೆ, ಮಂಗಳಾರತಿ ನೆರವೇರಿಸಲಾಗುತ್ತಿದೆ ಅಲ್ಲದೆ ಹೋಮ ಹವನ ಸಹ ಕೈಗೊಳ್ಳಲಾಗಿತ್ತು ಎಂದರು. ಈ ಸಂದರ್ಭದಲ್...