
ದೇವರ ನೂರಾರು ಕೀರ್ತನೆಗಳನ್ನು ರಚಿಸಿದ ಶ್ರೀ ರಾಮದಾಸರು ಶ್ರೇಷ್ಠ ಹರಿದಾಸರು - ಮುರಳೀಧರ ಕುಲಕರ್ಣಿ ಜಯಧ್ವಜ ನ್ಯೂಸ್ , ರಾಯಚೂರು ,ಡಿ.26- ಬಡೇ ಸಾಹೇಬರು ಶ್ರೀರಾಮದಾಸರಾಗಿ ಮದ್ವ ಮತಕ್ಕೆ ಅನುಗುಣವಾಗಿ ಶ್ರೀರಾಮ ಅಂಕಿತದಿಂದ 800ಕ್ಕೂ ಅಧಿಕ ಸಂಕೀರ್ತನೆಗಳನ್ನು ರಚಿಸಿದ ಶ್ರೇಷ್ಠ ಹರಿ ದಾಸ ರಾಗಿದ್ದಾರೆ .ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಯವರು ಹೇಳಿದರು. ಅವರು ನಿನ್ನೆ ಬುಧವಾರ ಸಂಜೆ ರಾಯಚೂರಿನ ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ ಜರುಗಿದ 83ನೇ ಶ್ರೀ ರಾಮದಾಸರ ಆರಾಧನೆಯ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಯಚೂರು ಜಿಲ್ಲೆಯ ಜೋಳ ದಡಗಿ ಇವರ ಜನ್ಮಸ್ಥಳ ಗೋನವಾರ ಇವರು ಓಡಾಡಿದ ತಾಣ ಲಿಂಗದಹಳ್ಳಿಯಲ್ಲಿ ಇವರ ಬೃಂದಾವನವಿದೆ. ವೈರಾಗ್ಯ ಭಾವನೆ ಯನ್ನು ತಾಳಿದ ಇವರು ಶ್ರೀರಾಮದೂತ ರಿಂದ ಅಂಕಿತ ಪಡೆದು ಅತ್ಯುತ್ತಮ ಶೈಲಿಯ ಸಂಕೀರ್ತನೆಗಳನ್ನು, ಊಗಾ-ಬೋಗಗಳನ್ನು, ಶತಾಷ್ಟಕಗಳನ್ನು, ಕೋಲಾಟ, ಹಾಗು ಗೀಗಿ ಪದಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ ಇವರ ಕೃತಿಗಳನ್ನು ಮೈಸೂರು ವಿಶ್ವವಿದ್ಯಾ...