ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭ : ಮಾಧ್ಯಮ ಕೈಗೊಂಬೆಯಾಗಿರುವುದು ಕಳವಳಕಾರಿ- ಬೋಸರಾಜು ಜಯ ಧ್ವಜ ನ್ಯೂಸ್, ರಾಯಚೂರು, ಡಿ.28- ದೇಶದ ಕೆಲವೇ ಉದ್ಯಮಿಗಳ ಕೈಯಲ್ಲಿ ಮಾಧ್ಯಮ ಕೈಗೊಂಬೆಯಾಗಿದೆ. ಇದರಿಂದ ಇಂದು ಮಾಧ್ಯಮ ಕ್ಷೇತ್ರ ಕವಲುದಾರಿ ಹಿಡಿಯುವಂತಾಗಿದೆ ಎಂದು ರಾಜ್ಯ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಅವರು ಕಳವಳ ವ್ಯಕ್ತಪಡಿಸಿದರು . ಅವರಿಂದು ನಗರದ ರಾಯಚೂರು ರಿಪೋರ್ಟರ್ ಗಿಲ್ಡ್ ಸಭಾಂಗಣದಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್,ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಲಾಭಕ್ಕಾಗಿ ಪತ್ರಿಕೋದ್ಯಮವನ್ನು ನಿರ್ವಹಿಸುವುದು ಅತ್ಯಂತ ಅಪಾಯಕಾರಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಕೆಲವೇ ವ್ಯಕ್ತಿಗಳು ಇದನ್ನು ನಿಯಂತ್ರಿಸಿದರೆ, ಮುಕ್ತ ಚರ್ಚೆ ಮತ್ತು ಮಾಹಿತಿಯಿಂದ ಜನ ವಂಚಿತಗೊಳ್ಳುತ್ತಾರೆ ಎಂ...