Posts

Showing posts from August, 2022

ಮಂತ್ರಾಲಯ: ಡಾ.ವ್ಯಾಸನಕೇರಿ ಪ್ರಭಂಜನಾಚಾರ್ಯರಿಂದ ಪ್ರೋಷ್ಟಪದಿ ಶ್ರೀಮದ್ಭಾಗವತ ಪ್ರವಚನ.

Image
ಮಂತ್ರಾಲಯ:  ಡಾ.ವ್ಯಾಸನಕೇರಿ ಪ್ರಭಂಜನಾಚಾರ್ಯರಿಂದ ಪ್ರೋಷ್ಟಪದಿ ಶ್ರೀಮದ್ಭಾಗವತ ಪ್ರವಚನ.            ರಾಯಚೂರು,ಆ.30-  ಪರಮಪೂಜ್ಯ ಶ್ರೀ ಸುಬಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳವರ  ಮಠದಲ್ಲಿ ಇಂದಿನಿಂದ  ಆ.30 ರಿಂದ ಸೆ.5 ರ ವರೆಗೆ ಸಂಜೆ 5:30 ರಿಂದ 7:00 ಗಂಟೆ ವರೆಗೆ ಬೆಂಗಳೂರಿನ ಡಾ.ವ್ಯಾಸನಕೇರಿ ಪ್ರಭಂಜನಾಚಾರ್ಯರಿಂದ ಪ್ರೋಷ್ಟಪದಿ ಶ್ರೀಮದ್ಭಾಗವತ ಪ್ರವಚನ ಕಾರ್ಯಕ್ರಮವು ಶ್ರೀಮಠದ ಪ್ರವಚನ ಮಂದಿರದಲ್ಲಿ ನಡೆಯುತ್ತದೆ. ಈ ಕಾರ್ಯಕ್ರಮವನ್ನು ಶ್ರೀ ಶ್ರೀಪಾದಂಗಳವರು ದೀಪ ಪ್ರಜ್ವಲನ ಮಾಡುವ ಮುಖಾಂತರ  ಇಂದು ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮವು 7 ದಿನಗಳ ಕಾಲ ನಡೆಯಲಿದೆ.

ಮಕ್ಕಳ ಕೈಯಲ್ಲಿ ಅರಳಿದ ವಿವಿಧ ಭಂಗಿಯ ಮಣ್ಣಿನ ಗಣೇಶ * ಮಕ್ಕಳಲ್ಲಿ ಪರಿಸರ ಕಾಳಜಿ ಹೆಚ್ಚಿಸುವ ಕಾರ್ಯ ಶ್ಲಾಘನೀಯ - ಶಾಸಕ ಡಾ. ಶಿವರಾಜ್ ಪಾಟೀಲ್

Image
  ಮಕ್ಕಳ ಕೈಯಲ್ಲಿ ಅರಳಿದ ವಿವಿಧ ಭಂಗಿಯ ಮಣ್ಣಿನ ಗಣೇಶ: ಮಕ್ಕಳಲ್ಲಿ ಪರಿಸರ ಕಾಳಜಿ ಹೆಚ್ಚಿಸುವ ಕಾರ್ಯ ಶ್ಲಾಘನೀಯ - ಶಾಸಕ  ಶಿವರಾಜ್ ಪಾಟೀಲ್ ರಾಯಚೂರು,ಆ.30: ಆದುನಿಕತೆ ಭರಾಟೆಯಲ್ಲಿ ಪರಿಸರದ ಬಗ್ಗೆ  ನಿರ್ಲಕ್ಷ್ಯದ ಪರಿಣಾಮ ನಾವು ಎದುರಿಸುವಂತಾಗಿದ್ದು,  ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿ ಹಬ್ಬವನ್ನಾಗಿಸಲು  ಮಕ್ಕಳಲ್ಲಿ ಪರಿಸರ ಕಾಳಜಿ ಹೆಚ್ಚಿಸುವ ಕಾರ್ಯ ಶ್ಲಾಘನೀಯ  ಎಂದು ಶಾಸಕ   ಡಾ ಶಿವರಾಜ್ ಪಾಟೀಲ್ ಹೇಳಿದರು. ನಗರದ  ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಗ್ರೀನ್ ರಾಯಚೂರು,ಶಿಲ್ಪಾ ಫೌಂಡೇಶನ್,ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರ್ಯಾವರಣ ಸಂರಕ್ಷಣ ಗತಿವಿಧಿ, ರಾಯಚೂರು, ನಗರಸಭೆ,  ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರುಗಳ ಸಂಯುಕ್ತಾಶ್ರಯದಲ್ಲಿ   ಆಯೋಜಿಸಲಾಗಿದ್ದ ಪರಿಸರ ಸ್ನೇಹಿ ಬೀಜವುಳ್ಳ ಮಣ್ಣಿನ ಗಣಪ ತಯಾರಿಕಾ ಕಾರ್ಯಾಗಾರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಪರಿಸರ ನಿರ್ಲಕ್ಷ್ಯದ ಪರಿಣಾಮ ಇಂದು ನಾವು ಎದುರಿಸುತ್ತಿದ್ದೆವೆ, ನಗರ ಗ್ರಾಮೀಣ ಪ್ರದೇಶಗಳಲ್ಲಿ ಹಸಿರು ಮಾಯವಾಗಿದ್ದು, ಜಲಮೂಲಗಳು ಅವನತಿಯಾಗುತ್ತಿದ್ದು,ವಾಯು ಮಾಲಿನ್ಯ ಹೆಚ್ಚಾಗಿದ್ದು, ಇಂತಹ ಸಂದರ್ಭದಲ್ಲಿ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಮಕ್ಕಳನ್ನೂ ತೊಡಗಿಸಿಕೊಂಡು ಅವರಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯ ಶ್ಲಾಘನೀಯ. ಬೆಳಯುವ ಸ...

ಆರ್ಯವೈಶ್ಯ ಗೀತಾಮಂದಿರದಲ್ಲಿ 35 ನೇ ವರ್ಷದ ಗಣೇಶೋತ್ಸವ: ದಿನ ನಿತ್ಯ ಗಣೇಶನಿಗೆ ವೈವಿಧ್ಯಮಯ ಅಲಂಕಾರಗಳು- ಸಾವಿತ್ರಿ ಶ್ರೀ ಹರ್ಷ

Image
ಆರ್ಯವೈಶ್ಯ ಗೀತಾಮಂದಿರದಲ್ಲಿ 35 ನೇ ವರ್ಷದ ಗಣೇಶೋತ್ಸವ:   ದಿನ ನಿತ್ಯ ಗಣೇಶನಿಗೆ ವೈವಿಧ್ಯಮಯ  ಅಲಂಕಾರಗಳು- ಸಾವಿತ್ರಿ ಶ್ರೀ ಹರ್ಷ   ರಾಯಚೂರು,ಆ.29- ನಗರದ ಆರ್ಯವೈಶ್ಯ ಸಮುದಾಯದ ಸಂಕೇತವಾಗಿ ಕಳೆದ 34 ವರ್ಷಗಳಿಂದ ಗೀತಾಮಂದಿರ ದಲ್ಲಿ ಗಣೇಶ ಉತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ. ಮೂರುವರೆ ದಶಕಗಳಿಂದ ಆರ್ಯವೈಶ್ಯ ಗೀತಾಮಂದಿರ ಗಣೇಶ ಉತ್ಸವ ಜನರಿಗೆ ಸುಂದರ ಅಲಂಕಾರಗಳ ವೈಭವದಿಂದ ಅತ್ಯಂತ ಜನಪ್ರಿಯತೆ ಪಡೆದು ಕೊಂಡಿದೆ. ಈ ವರ್ಷ 35 ನೇ ವರ್ಷಕ್ಕೆ ಹೆಜ್ಜೆ ಹಾಕುತ್ತಿದ್ದೇವೆ ಹೀಗಾಗಿ ಈ ಸಾರಿ ಮೂರುವರೆ ದಶಕಗಳ ಗಣೇಶ ಉತ್ಸವ ವಿಶೇಷ ಅಲಂಕಾರಗಳೊಂದಿಗೆ 9 ದಿನಗಳ ಗಜಾನನ ಉತ್ಸವ ಮಾಡುತ್ತಿದ್ದೇವೆ ಎಂದು ಆರ್ಯವೈಶ್ಯ ಗೀತಾಮಂದಿರ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಸಾವಿತ್ರಿ ಶ್ರೀ ಹರ್ಷ ಹೇಳಿದರು.  ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಈ ಬಾರಿ ಆರ್ಯವೈಶ್ಯ ಗೀತಾಮಂದಿರ ಗಣೇಶೋತ್ಸವ 35 ನೇ ವರ್ಷ ಆದ್ದರಿಂದ ಈ ಸಾರಿ ಗೀತಾಮಂದಿರ ಮಂದಿರ ಆವರಣದಲ್ಲಿನ ಅಲಂಕಾರ ಪ್ರತಿ 3 ದಿನಗಳಿಗೊಮ್ಮೆ ಬದಲಾವಣೆ ಮಾಡುತ್ತೇವೆ. ದೇವಸ್ಥಾನಗಳ ಪ್ರತಿ ರೂಪದ ಚಿತ್ರಣ ನಿರ್ಮಿಸುತ್ತಿದ್ದೇವೆ ಅಲ್ಲದೆ ಅಲ್ಲಿ ಮೊಬೈಲ್ ಸೆಲ್ಫಿಯ ಅವಕಾಶ ಸಾರ್ವಜನಿಕರಿಗೆ ನೀಡುತ್ತೇವೆ. ಪ್ರತಿ ಅಲಂಕಾರವೂ ವಿಶೇಷವಾಗಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಮೊದಲ ದಿನ ಗೀತಾಮಂದಿರದಿಂದ ಕಂಚಿ ಮೇಳದೊಂದಿಗೆ ಬೆಳಿಗ್ಗೆ  ತಂಡ ಶ್ರೀ ನಗರೇಶ್ವರ ದೇವ...

ಸತ್ಯದ ಶೋಧನೆ ಸಂಶೋಧನೆಯ ಗುರಿಯಾಗಬೇಕು-ಶ್ರೀಸುಬುಧೇಂದ್ರತೀರ್ಥರು.

Image
  ಸತ್ಯದ ಶೋಧನೆ ಸಂಶೋಧನೆಯ ಗುರಿಯಾಗಬೇಕು-ಶ್ರೀಸುಬುಧೇಂದ್ರತೀರ್ಥರು . ರಾಯಚೂರು,ಆ.28- ಸತ್ಯ ಶೋಧನೆ ಸಂಶೋಧನೆ ಗುರಿಯಾಗಬೇಕು ರಾಯರು ಒಂದು ಕ್ರಮವನ್ನು ಹಾಕಿಕೊಟ್ಟಿದ್ದಾರೆ ನಾವು ವಾದವನ್ನು ವಿರೋಧಿಸಬೇಕೇ ವಿನಾ ವ್ಯಕ್ತಿಯನ್ನಲ್ಲ. ವಾದ ,ವಿಮರ್ಶೆ,ಸಂಶೋಧನೆ ಆಳವಾಗಿ ಪರಿಣಾಮಕಾರಿಯಾಗಿ ನಡೆಯಬೇಕೆಂದು  ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನುಡಿದರು. ಅವರಿಂದು ಶ್ರೀಮಠದಲ್ಲಿ ಇತಿಹಾಸ ಸಂಶೋಧನಾ ಸಮಾವೇಶ ವನ್ನು ಉದ್ಘಾಟಿಸಿ ಅನುಗ್ರಹ ಸಂದೇಶವನ್ನು ನೀಡಿದರು. ನಮ್ಮ ಅಭಿಪ್ರಾಯವನ್ನು ವಿಷಯಾಧಾರಿತವಾಗಿ ರೂಪಿಸಿಕೊಳ್ಳಬೇಕು ಶ್ರೀ ರಾಘವೇಂದ್ರಸ್ವಾಮಿಗಳಮಠ ಸಂಶೋಧನೆ,ವಿಮರ್ಶೆಗೆ ಸದಾ ಸಿದ್ಧವಿದೆ.ಮುಕ್ತವಾದ , ಚರ್ಚೆ ಸಂವಾದಗಳು ನಡೆಯಲು ಮಂತ್ರಾಲಯ ಮಠ ವೇದಿಕೆಯಾಗಲಿದೆ. ಸಂಶೋಧನೆಯ ಸಮಾವೇಶದ ಉದ್ದೇಶ  ಸತ್ಯಾನ್ವೇಷಣೆಗೆ ಪೂರಕವಾದ ವಾತಾವರಣ ನಿರ್ಮಿಸುವುದು. ಸಂಶೋಧನೆಯ ದಾರಿಯನ್ನು ಸುಗಮಗೊಳಿಸಲು ನಾವೆಲ್ಲರೂ ಪ್ರಯತ್ನಿಸಬೇಕು.ಕರ್ನಾಟಕದ ಎಲ್ಲ ವಿದ್ವಾಂಸರು ಇವತ್ತು ಇಲ್ಲಿ ಸೇರಿರುವುದು ಸಂಶೋಧನಾ ಕ್ಷೇತ್ರಕ್ಕೆ ಹೊಸ ಜೀವ ಬಂದಿದೆ. ಮಂತ್ರಾಲಯ ಮಠ ಬಹಳ ಹಿಂದಿನಿಂದಲೂ ಸಂಶೋಧನ,ಸಂಗ್ರಹ,ಪ್ರಕಟಣೆಯ ಕಾರ್ಯ ಕೈಗೊಂಡಿದೆ.ಇನ್ಮುಂದೆ ಈ ಕಾರ್ಯ ಇನ್ನಷ್ಟು ಬೃಹತ್ ಪ್ರಮಾಣದಲ್ಲಿ ನಡೆಯಲಿದೆ"  .ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಹಾಗೂ ಗುರುಸಾರ್ವಭೌಮ ಸಂಸ್ಕ್ರ...

ಕಲ್ಯಾಣ ಕರ್ನಾಟಕ ಸಿರಿಧಾನ್ಯಗಳ ಪ್ರದೇಶವಾಗಿ ಅಭಿವೃದ್ಧಿಯಾಗಬೇಕು: ರಾಯಚೂರು ಸಿರಿಧಾನ್ಯ ಜಿಲ್ಲೆಯಾಗಿ ಘೋಷಣೆ- ನಿರ್ಮಲಾ ಸೀತಾರಾಮನ್

Image
  ಕಲ್ಯಾಣ ಕರ್ನಾಟಕ ಸಿರಿಧಾನ್ಯಗಳ ಪ್ರದೇಶವಾಗಿ ಅಭಿವೃದ್ಧಿಯಾಗಬೇಕು: ರಾಯಚೂರು ಸಿರಿಧಾನ್ಯ ಜಿಲ್ಲೆಯಾಗಿ ಘೋಷಣೆ- ನಿರ್ಮಲಾ ಸೀತಾರಾಮನ್ ರಾಯಚೂರು ಆ. 27-ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲೂ ಸಿರಿಧಾನ್ಯ ಬೆಳೆಗಳು ರಾರಾಜಿಸಬೇಕು.  ಈ ದಿಸೆಯಲ್ಲಿ ರಾಯಚೂರು ಜಿಲ್ಲೆಯನ್ನು ಸಿರಿಧಾನ್ಯ ಜಿಲ್ಲೆಯಾಗಿ ಘೋಷಿಸಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಸಂಶೋಧನೆಗಳು ನಡೆಸಲು ರಾಯಚೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ನಬಾರ್ಡ್ ಮೂಲಕ 25 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿದರು.       ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಇವರ ಸಹಯೋಗದಲ್ಲಿ ವಿವಿ ಆವರಣದ ಪ್ರೇಕ್ಷಾಗೃಹದಲ್ಲಿ ಶನಿವಾರ ಏರ್ಪಡಿಸಲಾದ ಸಿರಿಧಾನ್ಯ ಸಮಾವೇಶ-2022 ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.       ಭಾರತ ದೇಶವು ಸಿರಿಧಾನ್ಯಗಳ ಮೂಲಕ ಇಡೀ ವಿಶ್ವದ ಗಮನ ಸೆಳೆಯುವ ಕಾರ್ಯ ಮಾಡಲು ಆರಂಭಿಸಿದೆ.  ದೇಶದಲ್ಲಿ ಕರ್ನಾಟಕ ರಾಜ್ಯವು ಅತಿ ಹೆಚ್ಚು ಸಿರಿಧಾನ್ಯ ಬೆಳೆಯುವಲ್ಲಿ ಮುಂಚೂಣಿಯಲ್ಲಿದೆ.  ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ಸಹಾಯಧನ ಹಾಗೂ ಸಿರಿಧಾನ ಸಂಸ್ಕರಣೆ ಘಟಕಗಳಿಗೆ ಗರಿಷ್ಟ 10 ಲಕ್ಷ ರ...

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Image
  ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಯಚೂರು ಆ. 27- ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ  ಸಂಸ್ಕರಣಾ ಘಟಕಗಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.    ಅವರು ಇಂದು  ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ಆಯೋಜಿಸಿದ್ದ ಸಿರಿಧಾನ್ಯ ಮೇಳ 20 22 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಸಿರಿಧಾನ್ಯ  ಬ್ರಾಂಡ್ ಗಳನ್ನು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಮಾಡಬಹುದು. ಕೆಪೆಕ್ ಮೂಲಕ ರಫ್ತು ಮಾಡುವವರಿಗೆ ಪ್ರೋತ್ಸಾಹ ಕಗಳನ್ನು ನೀಡುವ ಉದ್ದೇಶದಿಂದ 50 ಕೋಟಿ ರೂ.ಗಳನ್ನು ಒದಗಿಸಿದೆ. ಅದರ ಉಪಯೋಗ ಪಡೆದು ರಫ್ತು ಮಾಡಲು ಕೆಪೆಕ್ ಮೂಲಕ ಎಲ್ಲಾ ಸಹಾಯ ಮತ್ತು ಸಹಕಾರವನ್ನು ಸರ್ಕಾರ ಮಾಡಲಿದೆ ಎಂದರು.  ಕಾಲ ಬದಲಾಗಿದೆ. ಅಕ್ಕಿ ಬೆಳೆಯುತ್ತಿದ್ದೇವೆ. ಅದೇ ನಮಗೆ ಆಹಾರವಾಗಿದೆ. ಆದರೆ ಆರೋಗ್ಯ ಗಮನಿಸಿದಾಗ ಕನಿಷ್ಠ ವಾಗಿಯಾದರೂ ಸಿರಿಧಾನ್ಯಗಳನ್ನು ಆಹಾರವಾಗಿ ಸೇವಿಸಬೇಕು. ರೈತರು ಸಿರಿಧಾನ್ಯಗಳನ್ನು ಮುಖ್ಯ ಆಹಾರವಾಗಿ ಬಳಸುತ್ತಿದ್ದರು.ಈಗ  ಸರ್ಕಾರ ಕಾರ್ಯಕ್ರಮವನ್ನು ಮಾಡಿ ಬೆಳೆಸಲು ಉತ್ತೇಜನ ನೀಡುವ ಸ್ಥಿತಿಗೆ ನಾವು ಬಂದಿದ್ದೇವೆ.  ಮಿಲೆಟ್ ಗಳ ಬಗ್ಗೆ ಅತಿ ದೊಡ್ಡ ರಾಯಭಾರಿಗಳು ನಾವು. ಕಳೆದ 30 ವರ್ಷಗಳಿಂದ ಸಿರಿಧಾನ್ಯಗಳನ್ನು ಬಳಕೆ ಮಾಡುತ್ತಿದ...

ಮಂತ್ರಾಲದಲ್ಲಿ ನಾಳೆ ಇತಿಹಾಸ ಸಂಶೋಧನ ಸಮಾವೇಶ

ಮಂತ್ರಾಲದಲ್ಲಿ ನಾಳೆ ಇತಿಹಾಸ ಸಂಶೋಧನ ಸಮಾವೇಶ     ರಾಯಚೂರು,ಆ.27- ಮಂತ್ರಾಲಯದಲ್ಲಿ ಆ. 28 ಭಾನುವಾರದಂದು ಇತಿಹಾಸ ಸಂಶೋಧನಾ ಸಮಾವೇಶವು ನಡೆಯಲಿದೆ. ಶ್ರೀಮನ್ಮಧ್ವಾಚಾರ್ಯ  ಮೂಲಮಹಾಸಂಸ್ಥಾನ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಜನ್ಮ ಸುವರ್ಣ ಮಹೋತ್ಸವ ಹಾಗೂ ಹತ್ತನೇ ಚಾತುರ್ಮಾಸ್ಯದ ಅಂಗವಾಗಿ  ಲಿಪಿ ಶಾಸನ ಹಸ್ತಪ್ರತಿ ಗ್ರಂಥಸಂಪಾದನೆ ಇತಿಹಾಸ ಹಾಗೂ ಪ್ರತಿಮಾ ಲಕ್ಷಣ ತಜ್ಞರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.   ಶಾಸನಗಳ ಅಧ್ಯಯನದ ಸವಾಲುಗಳು, ಅಪ್ರಕಟಿತ ಕೀರ್ತನೆಗಳ ಹಸ್ತಪ್ರತಿ ಮತ್ತು ಲಿಪಿ, ಕೆಲವು ಕೀರ್ತನೆಗಳ ವಿಶ್ವಾಸಾರ್ಹತೆಯ ಪ್ರಶ್ನೆಗಳು,  ಕಾಲನಿರ್ಣಯ ಮತ್ತು ಇತಿಹಾಸ, ಶಿಲ್ಪಗಳು ಮತ್ತು ಇತಿಹಾಸ ಎಂಬ ಐದು ಪತ್ರಿಕೆಗಳನ್ನು  ವಿದ್ವಾಂಸರು ಮಂಡಿಸಲಿದ್ದಾರೆ.                              ಪರಮಪೂಜ್ಯ ಶ್ರೀಶ್ರೀಸುಬುಧೇಂದ್ರ ತೀರ್ಥಶ್ರೀಪಾದಂಗಳವರು ಈ ವಿಚಾರ ಸಂಕಿರಣವನ್ನು ಉದ್ಘಾಟಿಸುತ್ತಾರೆ. ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಮಹಾಮಹೋಪಾಧ್ಯಾಯ  ವಿದ್ವಾನ್ ಡಾ.ಗಿರಿಯಾಚಾರ್ಯರು ಸಮಾರೋಪ ಭಾಷಣ ಮಾಡಲಿದ್ದಾರೆ. ಕರ್ನಾಟಕ ಇತಿಹಾಸ ಅಕಾಡಮಿಯ ಅಧ್ಯಕ್ಷರಾದ ಡಾ ದೇವರ ಕೊಂಡಾರೆಡ...

ಒಂದಿಂಚು ಜಾಗ ತೆಲಂಗಾಣಕ್ಕೆ ಬಿಟ್ಟುಕೊಡುವುದಿಲ್ಲ-ಸಿಎಂ.

Image
  ಒಂದಿಂಚು ಜಾಗ ತೆಲಂಗಾಣಕ್ಕೆ ಬಿಟ್ಟುಕೊಡುವುದಿಲ್ಲ-ಸಿಎಂ.                    ರಾಯಚೂರು,ಆ.27-ಒಂದಿಂಚು ಜಾಗವನ್ನು ತೆಲಂಗಾಣಕ್ಕೆ ಬಿಟ್ಟುಕೊಡುವುದಿಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.                                           ಅವರಿಂದು ಕೃಷಿ ವಿವಿಯಲ್ಲಿ ಸಿರಿಧಾನ್ಯ ಸಮಾವೇಶ ಉದ್ಘಾಟನೆಗೂ ಪೂರ್ವ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ ತೆಲಂಗಾಣ ಸಿಎಂ ಕೆಸಿಆರ್ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕೆಂದು ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು ತೆಲಂಗಾಣ ಅತ್ಯಂತ ಹಿಂದುಳಿದ ರಾಜ್ಯವೆಂದು ಆಂಧ್ರ ವಿಭಜನೆಯಾಗಿ ತೆಲಂಗಾಣ ರಾಜ್ಯ ಉದಯಿಸಿದೆ ಮೊದಲು ಆ ರಾಜ್ಯ ಅಭಿವೃದ್ದಿ ಮಾಡುವುದು ಹೇಗೆಂದ ಕೆಸಿಆರ್ ಆಲೋಚಿಸಲಿ ರಾಯಚೂರಿನಲ್ಲಿ ಈಗಾಗಲೆ ವಿದ್ಯುತ್ ಉತ್ಪಾದನಾ ಘಟಕ, ಐಐಐಟಿ ಇತ್ಯಾದಿಗಳು ಇವೆ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ಮುಂತಾದ ಸೌಕರ್ಯ ದೊರಯಲಿವೆ ಒಂದಿಂಚೂ ಜಾಗ ತೆಲಂಗಾಣಕ್ಕೆ ಹೋಗುವುದಿಲ್ಲವೆಂದು ಸ್ಪಷ್ಟನೆ ನೀಡಿದರು.                                    ...

ಎಸ್ಎಫ್ಐ ನಿಂದ ಸಿಎಂಗೆ ಮನವಿ ಪತ್ರ ಸಲ್ಲಿಕೆ

Image
  ರಾಯಚೂರು ವಿವಿ ಗೆ ಅನುದಾನ ನೀಡಲು ಹಾಗೂ ವಿವಿಧ ಶೈಕ್ಷಣಿಕ ಬೇಡಿಕೆ ಈಡೇರಿಸಲು ಎಸ್ಎಫ್ಐ ಮನವಿ.  ರಾಯಚೂರು,ಆ.27- ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್ಎಫ್ಐ ) ರಾಯಚೂರು ಜಿಲ್ಲಾ ಸಮಿತಿ ಸದಸ್ಯರ ವತಿಯಿಂದ ವಿವಿಧ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದ  ಹೆಲಿಪ್ಯಾಡ್ ಹತ್ತಿರ ಮನವಿ ಸಲ್ಲಿಸಿದರು. ರಾಜ್ಯದ ಶೈಕ್ಷಣಿಕ ಕ್ಷೇತ್ರ ಅನೇಕ ಸಮಸ್ಯೆಗಳಿಂದ ಕೂಡಿದೆ. ಶಿಕ್ಷಕ, ಉಪನ್ಯಾಸಕರ, ಕೊಠಡಿಗಳ ಕೊರತೆ, ಮೂಲಭೂತ ಸೌಕರ್ಯಗಳು, ವಿದ್ಯಾರ್ಥಿ, ವೇತನ, ಪ್ರೋತ್ಸಾಹ ಧನ ಸಮರ್ಪಕವಾಗಿ ಬರದೆ ಇರುವುದು ಸೇರಿದಂತೆ ಮುಂತಾದವು ಇವೆ. ಈಗ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಮಾದರಿ ಶಾಲೆಯ ಹೆಸರಿನ ವಿಲೀನದ ನೆಪದಲ್ಲಿ 13800 ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿದೆ ಇದು ಅತ್ಯಂತ ಖಂಡನೀಯ.  ಸರ್ಕಾರ ಕೂಡಲೇ ಈ ಪ್ರಕ್ರಿಯೆಯನ್ನು ನಿಲ್ಲಿಸಿ ಸರ್ಕಾರಿ ಶಾಲಾ ಕಾಲೇಜು, ಹಾಸ್ಟೆಲ್, ವಿಶ್ವವಿದ್ಯಾಲಯಗಳಿಗೆ ಆಗತ್ಯ ಹಣಕಾಸಿನ ನೆರವು ಮತ್ತು ಸೌಲಭ್ಯಗಳನ್ನು ಒದಗಿಸಬೇಕು, ಕಳೆದ ಮೂರು ವರ್ಷಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೈಸಿಕಲ್ ಒದಗಿಸಿಲ್ಲ ಕೂಡಲೇ ಒದಗಿಸಬೇಕು, ರಾಯಚೂರು ಜಿಲ್ಲೆಯಲ್ಲೆ ಏಮ್ಸ್ ಸ್ಥಾಪಿಸಬೇಕು, ರಾಯಚೂರು ವಿವಿಗೆ ಕೂಡಲೆ 500 ಕೋಟಿ ಅನುದಾನ ನೀಡಿ ಇತರೆ ಆಗತ್ಯ ನೆರವು ಮತ್ತು ಸೌಲಭ್ಯಗಳನ್ನು ಒದಗಿಸಬೇಕು, ರಾಜ್ಯ...

ನಗರಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿಳಿದ ಸಿಎಂ.

Image
ನಗರಕ್ಕೆ  ಹೆಲಿಕಾಪ್ಟರ್ ಮೂಲಕ ಬಂದಿಳಿದ ಸಿಎಂ.                 ರಾಯಚೂರು,ಆ.27-ನಗರದಲ್ಲಿ ನಡೆಯುತ್ತಿರುವ ಸಿರಿಧಾನ್ಯ ಮೇಳ ಉದ್ಘಾಟಿಸಲು ಸಿಎಂ ಬಸವರಾಜ ಬೊಮ್ಮಾಯಿ ನಗರಕ್ಕೆ  ಹೆಲಿಕಾಪ್ಟರ್ ನಲ್ಲಿ ಬಂದಿಳಿದರು.                        ನಂತರ ಸ್ಥಳದಲ್ಲಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಬದ್ಧವಿರುವುದಾಗಿ ಹೇಳಿದರು.         ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕರಾದ ಕೆ.ಶಿವನಗೌಡ ನಾಯಕ,ಡಾ.ಶಿವರಾಜ ಪಾಟೀಲ, ರಾಜುಗೌಡ ,ಮಾಜಿ ಶಾಸಕರಾದ ತಿಪ್ಪರಾಜು ಹವಾಲ್ದಾರ್, ಮಾನಪ್ಪ ವಜ್ಜಲ್  ಸೇರಿದಂತೆ ಅನೇಕರಿದ್ದರು.                                ವಿವಿಧ ಸಂಘ ಸಂಸ್ಥೆಗಳ ಮುಖಂಡರು , ಹೋರಾಟಗಾರರು ಮನವಿ ಪತ್ರ ಸಲ್ಲಿಸಿದರು.       ಭಾರಿ ಪೋಲಿಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಶೃಂಗೇರಿ ಶ್ರೀ ಶಂಕರ ಮಠ: ರುದ್ರಾಭಿಷೇಕ ಮತ್ತು ಬುತ್ತಿ ಪೂಜೆ.

Image
  ಶೃಂಗೇರಿ   ಶ್ರೀ ಶಂಕರ ಮಠ:  ರುದ್ರಾಭಿಷೇಕ ಮತ್ತು ಬುತ್ತಿ ಪೂಜೆ.       ರಾಯಚೂರು,ಆ.27- ನಗರದ ಶೃಂಗೇರಿ   ಶ್ರೀ ಶಂಕರ ಮಠದಲ್ಲಿ, ಶ್ರೀ ಆದಿ ಶಂಕರ ಸೇವಾ ಸಂಘದವತಿಯಿಂದ ಶ್ರಾವಣ ಮಾಸ ನಿಮಿತ್ಯ ರುದ್ರಾಭಿಷೇಕ ಮತ್ತು ಬುತ್ತಿ ಪೂಜೆಯನ್ನು ಹಮ್ಮಿ ಕೊಳ್ಳಲಾಗಿತ್ತು. ಇದರ ಜೊತೆಗೆ ಸಂಘದವತಿಯಿಂದ ರಾಯಚೂರಿನ ಅಖಿಲ ಕರ್ನಾಟಕ ಭ್ರಾಹ್ಮಣ ಮಹಾಸಭಾವತಿಯಿಂದ ಗೌರವ ವಿಪ್ರ ಶ್ರೀ ಪ್ರಶಸ್ತಿಯನ್ನು ನಮ್ಮ ಸಂಘದ ಹಿರಿಯ ಶಿಕ್ಷಕರಾದ  ವೆಂಕಟೇಶ್ ರಾವ್ ಇವರಿಗೆ ನೀಡಲಾಗಿದ್ದು ಮತ್ತು ಕುಮಾರಿ ಸ್ನೇಹ ದೇಶಪಾಂಡೆ ಇವರಿಗೆ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಾರಣ, ಇವರಿಬ್ಬರನ್ನು ಶ್ರೀ ಆದಿ ಶಂಕರ ಸೇವಾ ಸಂಘದವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಿ. ಹನುಮಂತ ರಾವ್ ಅವರು ವಹಿಸಿ ಸ್ವಾಗತವನ್ನು ಕೋರಿದರು. ಸನ್ಮಾನ ಸ್ವೀಕರಿಸಿದ ಶ್ರೀ ವೆಂಕಟೇಶ್ ರಾವ್ ಅವರು ಮಾತನಾಡುತ್ತ ಸಮಾಜದ ಉನ್ನತಿಗಾಗಿ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು. ಈ ಕಾರ್ಯಕ್ರಮಕ್ಕೆ ಶ್ರೀ ಆದಿ ಶಂಕರ ಸೇವಾ ಸಂಘದ ಉಪದಕ್ಷ್ಯರಾದ  ಸಿ. ಎಸ್. ಶಿವಪ್ರಸಾದ್ ಹಾಗೂ ಸಹ ಕಾರ್ಯದರ್ಶಿಗಳಾದ ಹರೀಶ್ ಭಟ್, ಶ್ರೀಪಾದ್ ರಾವ್ ದೇಸಾಯಿ, ಗೋಪಾಲ ಜೋಶಿ, ಗುರುರಾಜ್ ಕುಲಕರ್ಣಿ, ನಂದೀಶ್ ಅಗ್ನಿಹೋತ್ರಿ ಶ್ರೀಧರ್ ಪೂತ್ದಾರ್ ಮುಂತಾದವರು ಈ ಕಾರ್...

ಮಂತ್ರಾಲಯ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ.

Image
  ಮಂತ್ರಾಲಯ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ.                ರಾಯಚೂರು,ಆ.27- ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಬೃಂದಾವನ ದರ್ಶನ ಪಡೆದರು. ಶ್ರೀಮಠದಿಂದ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ಮಂಚಾಲಮ್ಮ ದೇವಿ ದರ್ಶನ ಪಡೆದ ಅವರು ರಾಯರ ಬೃಂದಾವನ ದರ್ಶನ ಪಡೆದುಕೊಂಡು ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರಿಂದ ಆಶೀರ್ವಾದ ಪಡೆದುಕೊಂಡರು.                                        ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಶಿರಾಜ ಮಸ್ಕಿ, ಗಿರೀಶ ಕನಕವೀಡು, ನರಸಪ್ಪ ಯಕ್ಲಾಸಪೂರು, ಶಿವಕುಮಾರ ಪೊಲೀಸ್ ಪಾಟೀಲ ಇತರರು ಇದ್ದರು.

ಕಾಡ್ಲೂರು: ಶ್ರಾವಣ ಮಾಸದ ಅಮವಾಸ್ಯ ಅಂಗವಾಗಿ ಭಕ್ತರಿಂದ ಪಾದಯಾತ್ರೆ ಮತ್ತು ಪಲ್ಲಕ್ಕಿ ಸೇವೆ.

Image
  ಕಾಡ್ಲೂರು: ಶ್ರಾವಣ ಮಾಸದ ಅಮವಾಸ್ಯ ಅಂಗವಾಗಿ ಭಕ್ತರಿಂದ ಪಾದಯಾತ್ರೆ ಮತ್ತು ಪಲ್ಲಕ್ಕಿ ಸೇವೆ .          ರಾಯಚೂರು,ಆ.27-  ಪ್ರತಿ  ವರ್ಷದಂತೆ ಈ ವರ್ಷವು ಶ್ರಾವಣ ಮಾಸದ ಅಮವಾಸ್ಯ ಅಂಗವಾಗಿ ಭಕ್ತರಿಂದ ಪಾದಯಾತ್ರೆ ಮತ್ತು ಪಲ್ಲಕ್ಕಿ ಸೇವೆ ನಡೆಯಿತು. ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾನದಿ ತೀರದ ಶ್ರೀವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದಲ್ಲಿ ಹುಣಸಿಹಾಳ ಹುಡಾ ಹಾಗೂ ಹೊಸಪೇಟೆ ಗ್ರಾಮಸ್ಥರಿಂದ ಪಲ್ಲಕ್ಕಿ ಸೇವೆ ನೇರವೇರಿತು.  ತಮ್ಮ ಗ್ರಾಮಗಳಿಂದ ಪಾದಯಾತ್ರೆ ಮೂಲಕ ಇಷ್ಟದೇವರನ್ನು ಪಲ್ಲಕ್ಕೀಯಲ್ಲಿ ಕುಳ್ಳಿರಿಸಿ ಹತ್ತಾರು ಕಿ.ಮಿ ಕ್ರಮಿಸಿ ರಾತ್ರಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿ ಇಂದು ಬೆಳಿಗ್ಗೆ ನಸುಕಿನಲ್ಲಿ ಪೂಜೆ ನೆರವೇರಿಸಿ ನದಿಯ ನೀರನ್ನು ಕಳಸದಲ್ಲಿ ತೆಗೆದುಕೊಂಡು ಪ್ರಸಾದ ಸ್ವೀಕರಸಿ ಸ್ವಗ್ರಾಮಕ್ಕೆ ತೆರಳಿದರು. ಕಾಡ್ಲೂರು ಸಂಸ್ಥಾನದಿಂದ ಭಕ್ತರಿಗೆ ತಂಗಲು ವ್ಯವಸ್ಥೆ ಸೇರಿದಂತೆ ಇತರ ನೆರವು ಕಲ್ಪಿಸಲಾಗಿತ್ತು. ನೂರಾರು ಸಂಖೆಯಲ್ಲಿ ಭಕ್ತರು ಆಗಮಿಸಿದ್ದರು.               

ಸಿರಿಧಾನ್ಯ ಮೇಳ ಸಮಾವೇಶ: ವಿವಿಧ ಗಣ್ಯರಿಂದ ಗೋ ಪೂಜೆ

Image
  ಸಿರಿಧಾನ್ಯ ಮೇಳ ಸಮಾವೇಶ: ವಿವಿಧ ಗಣ್ಯರಿಂದ ಗೋ ಪೂಜೆ ರಾಯಚೂರು ಆ.26,- ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಹಾಗೂ ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಬಾರ್ಡ್ ಇವರುಗಳ ಸಂಯುಕ್ತಾಶ್ರಯದಲ್ಲಿ ಸಿರಿಧಾನ್ಯ ಸಮಾವೇಶ-2022, ಅಂತರಾಷ್ಟಿçÃಯ ಸಿರಿಧಾನ್ಯಗಳ ವರ್ಷ-2023ರ ಅಭಿಯಾನದ ಅಂಗವಾಗಿ ಇಂದು ಕೃಷಿ ವಿಶ್ವವಿದ್ಯಾಲಯದಲ್ಲಿ ವಿವಿಧ ಗಣ್ಯರಿಂದ ಗೋಪೂಜೆ ಮಾಡಲಾಯಿತು.       ಪೂಜಾ ಕಾರ್ಯಕ್ರಮದಲ್ಲಿ ನಬಾರ್ಡ್ ಉಪ ಪ್ರಧಾನ ನಿರ್ದೇಶಕರಾದ ಪಿ.ವಿ.ಎಸ್ ಸೂರ್ಯಕುಮಾರ್, ನಬಾರ್ಡ್ ಪ್ರಧಾನ ವ್ಯವಸ್ಥಾಪಕರಾದ ಸಿ.ಎಸ್.ಆರ್ ಮೂರ್ತಿ, ಟಿ.ರಮೇಶ್, ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಕುಲಪತಿ ಕೆ.ಎನ್.ಕಟ್ಟಿಮನಿ, ವಿವಿಯ ವ್ಯವಸ್ಥಾಪನಾ ಸದಸ್ಯರಾದ ಕೊಟ್ರೇಶಪ್ಪ ಬಿ. ಕೋರಿ, ತ್ರಿವಿಕ್ರಮ್ ಜೋಶಿ, ಮಾಂತೇಶ್ ಗೌಡ ಬಿ. ಪಾಟೀಲ್, ಜಿ.ಶ್ರೀಧರ್ ಕೆಸರಟ್ಟಿ, ಸುನಿಲ್ ಕುಮಾರ್ ವರ್ಮ ಹಾಗೂ ಸಂಶೋಧನಾ ನಿರ್ದೇಶಕರು ಹಾಗೂ ಸಂಘಟನಾ ಕಾರ್ಯದರ್ಶಿಗಳಾದ ಡಾ. ಬಿ.ಕೆ. ದೇಸಾಯಿ , ಪ್ರಮೋ ದ ಕಟ್ಟಿ ಸೇರಿದಂತೆ ವಿವಿಧ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು .

ಪತ್ರಕರ್ತರಿಂದ ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠರವರಿಗೆ ಶ್ರದ್ಧಾಂಜಲಿ

Image
 ಪತ್ರಕರ್ತರಿಂದ ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠರವರಿಗೆ ಶ್ರದ್ಧಾಂಜಲಿ ರಾಯಚೂರು,ಆ.೨೬-ಇತ್ತೀಚೆಗೆ ನಿಧನರಾದ ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠರವರಿಗೆ ಪತ್ರಿಕಾ ಭವನದಲ್ಲಿ ಪತ್ರಕರ್ತರು ಶ್ರದ್ದಾಂಜಲಿ ಸಲ್ಲಿಸಿದರು. ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಅಗಲಿಕೆ ನೋವು ಭರಿಸುವ ಶಕ್ತಿ ದೇವರು ಅವರ  ಕುಟುಂಬಕ್ಕೆ ನೀಡಲಿ ಎಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರ್.ಗುರುನಾಥ ಮಾತನಾಡಿ ಜಿಲ್ಲೆಯಿಂದಲೆ ಅವರ ಪತ್ರಕರ್ತ ವೃತ್ತಿ ಆರಂಬಗೊ0ಡಿದ್ದು ಸುದ್ದಿಮೂಲ ಸಂಸ್ಥೆಯಿ0ದ ಅವರ ವೃತ್ತಿ ಪಯಣ ಸಾಗಿತು ಎಂದರು. ಹಿರಿಯ ಪತ್ರಕರ್ತ ಬಿ.ವೆಂಕಟ್‌ಸಿ0ಗ್ ಮಾತನಾಡಿ ಸದಾ ಹಸನ್ಮುಖಿಯಾಗಿರುತ್ತಿದ್ದ ಅವರು ಸುದ್ದಿಮೂಲದಿಂದಲೆ ವೃತ್ತಿ ಬದಕು ಪ್ರಾರಂಭಿಸಿದರು ಸಿಎಂ ಮಾಧ್ಯಮ ಸಂಯೋಜಕ ಹುದ್ದೆವರೆಗೆ ಸಾಗಿದ ಅವರು ಪತ್ರಕರ್ತರ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರಲು ಎಲ್ಲ ರೀತಿ ಸಹಕಾರ ನೀಡುತ್ತಿದ್ದು ಸುದ್ದಿಮೂಲ ಸಂಸ್ಥೆ ಮೇಲೆ ಮತ್ತು ಜಿಲ್ಲೆಯ  ಮೇಲೆ ಅಪಾರ ಅಭಿಮಾನ ಹೊಂದಿದ್ದರು ಎಂದರು. ಕೆಯುಡ್ಬೂ÷್ಲಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ ಮಾತನಾಡಿ ಅತ್ಯಂತ ಕ್ರೀಯಾಶೀಲರಾಗಿದ್ದ ಅವರು ಸ್ನೇಹಮಯಿ ಸ್ವಭಾವದವರಾಗಿದ್ದರು ಎಂದರು. ರಿಪರ‍್ಟರ‍್ಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಮಾತನಾಡಿ ನಮ್ಮೊಂದಿಗೆ ಉತ್ತಮ ಒಡನಾಟ ಹೊ...

ತುಮಕೂರು ಬಳಿ ಭೀಕರ ಅಪಘಾತ: ಜಿಲ್ಲೆಯ ಒಂಬತ್ತು ಜನರ ಸಾವು

Image
ತುಮಕೂರು ಬಳಿ ಭೀಕರ ಅಪಘಾತ: ಜಿಲ್ಲೆಯ ಒಂಬತ್ತು ಜನರ ಸಾವು ರಾಯಚೂರು,ಆ.25- ಕ್ರೂಷರ್ ವಾಹನ ಲಾರಿಗೆ ಡಿಕ್ಕಿಯಾಗಿ ಒಂಬತ್ತು ಜನ ಸಾವನ್ನಪ್ಪಿದ ಘಟನೆ   ಶಿರಾ ತಾಲೂಕಿನ ಕಳ್ಳಂಬೆಳ್ಳ  ಹತ್ತಿರದ  ರಾಷ್ಟ್ರೀಯ ಹೆದ್ದಾರಿಯಲ್ಲಿ   ನಡೆದಿದೆ. ಇಂದು ಬೆಳಗಿನ ಜಾವ 4 ಗಂಟೆ ಸುಮಾರು ಕಳ್ಳಂಬೆಳ್ಳ ಸಮೀಪ ಚಿಕ್ಕನಹಳ್ಳಿ ಸಮೀಪ ಬಾಳೇನಹಳ್ಳಿ ಬಳಿ ಈ ಅವಘಡ ನಡೆದಿದ್ದು, ಮೃತರು ಎಲ್ಲರೂ ಜಿಲ್ಲೆಯ ಸಿರವಾರ, ಮಾನ್ವಿ ತಾಲೂಕಿನವರೆಂದು ತಿಳಿದು ಬಂದಿದೆ‌. ಕ್ರೂಷರ್ ನಲ್ಲಿ 24 ಜನ  ಕೂಲಿಕಾರ್ಮಿಕರು, ಮಾನ್ವಿ ಯಿಂದ  ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು  ಗಾಯಾಳುಗಳನ್ನ ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದ್ದು ಕಳ್ಳಂಬೆಳ್ಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಮಂತ್ರಾಲಯದಲ್ಲಿ ೫ ನೇ ಶ್ರೀಮನ್ನಾಯಸುಧಾ ಮಂಗಳ ಮಹೋತ್ಸವ ಉದ್ಘಾಟನೆ: ಶ್ರೀಮನ್ನಾಯಸುಧಾ ಶ್ರೀ ಜಯತೀರ್ಥರ ಒಂದು ಉತ್ಕೃಷ್ಟ ವ್ಯಾಖ್ಯಾನ - ಶ್ರೀ ಸುಬುಧೇಂದ್ರತೀರ್ಥರು

Image
  ಮಂತ್ರಾಲಯದಲ್ಲಿ ೫ ನೇ ಶ್ರೀಮನ್ನಾಯಸುಧಾ ಮಂಗಳ ಮಹೋತ್ಸವ ಉದ್ಘಾಟನೆ: ಶ್ರೀಮನ್ನಾಯಸುಧಾ  ಶ್ರೀ ಜಯತೀರ್ಥರ ಒಂದು ಉತ್ಕೃಷ್ಟ ವ್ಯಾಖ್ಯಾನ- ಶ್ರೀ ಸುಬುಧೇಂದ್ರತೀರ್ಥರು ರಾಯಚೂರು,ಆ.೨೪-ಶ್ರೀಮನ್ನಾಯಸುಧಾ ಗ್ರಂಥವು ಶ್ರೀ ಜಯತೀರ್ಥರ ಉತ್ಕೃಷ್ಟ ವ್ಯಾಖ್ಯಾನ ಒಳಗೊಂಡ ಗ್ರಂಥವಾಗಿದೆ, ಶ್ರೀ ಮಧ್ವಾಚಾರ್ಯರ ಭಾಷ್ಯಕ್ಕೆ ಶ್ರೀಮನ್ನಾಯಸುಧಾ ಉತ್ತಮವಾದ ಮತ್ತು ವಿಸ್ತೃತ ವ್ಯಾಖ್ಯಾನ ಬರೆಯಲಾಗಿದೆ ಎಂದು ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು. ಅವರಿಂದು ಶ್ರೀಮಠದಲ್ಲಿ ಎರೆಡು ದಿನಗಳ ಕಾಲ ಹಮ್ಮಿಕೊಳ್ಳಲಾದ ಶ್ರೀಮನ್ನಾಯಸುಧಾ  ಮಂಗಳ ಮಹೋತ್ಸವ ಹಾಗೂ ಶ್ರೀಮತ್ಸಮೀರಸಮಯ ಸಂವರ್ಧೀನಿ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಶ್ರೀಮನ್ನಾಯಸುಧಾ  ಪರಾಂಗತರಾದ ವಿದ್ಯಾರ್ಥಿಗಳಿಗೆ ಸತ್ಕರಿಸಿ ಆಶೀರ್ವಚನ ನೀಡಿದರು. ಕರೋನಾ ಹಿನ್ನಲೆಯಲ್ಲಿ ಶ್ರೀಮನ್ನಾಯಸುಧಾ ಕಾರ್ಯಕ್ರಮ ಮುಂದೂಡಲಾಗಿತ್ತು ಇದೀಗ ನಮ್ಮ ೧೦ನೇ ಚಾತುರ್ಮಾಸ್ಯ ಸಂದರ್ಭದಲ್ಲಿ ೫ನೇ ಶ್ರೀಮನ್ನಾಯಸುಧಾ  ಮಂಗಳಮಹೋತ್ಸವ ನಡೆಯುತ್ತಿದ್ದು ಕಳೆದ ಮೂರು ವರ್ಷದ ಹಿಂದೆ ರಾಯಚೂರಲ್ಲಿ ನಡೆದ ಶ್ರೀಮನ್ನಾಯಸುಧಾ  ಮಂಗಳಮಹೋತ್ಸವದಲ್ಲಿ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ್ವರತೀರ್ಥರು ಪಾಲ್ಗೊಂಡಿದ್ದರು ನಂತರ ಕೆಲ ದಿನಗಳಲ್ಲೆ ಅವರು ಹರಿಪಾದ ಸೇರಿದರು ಎಂದು ಸ್ಮರಿಸಿಕೊಂಡರು. ಶ್ರೀಮನ್ನಾಯಸುಧಾ ಮಂಗಳ ಮಹೋತ್ಸವದಲ್...

ಕರ್ನಾಟಕ ಸಂಘ: ಮನಸೆಳೆದ ವಿದ್ವಾನ್ ಗಣೇಶ ಹಾಗೂ ಜಿ .ಎಸ್. ಮಂಜುನಾಥ ಇವರ ಗಮಕ ಕಾರ್ಯಕ್ರಮ

Image
  ಕರ್ನಾಟಕ ಸಂಘ:  ಮನಸೆಳೆದ ವಿದ್ವಾನ್ ಗಣೇಶ ಹಾಗೂ ಜಿ .ಎಸ್. ಮಂಜುನಾಥ ಇವರ ಗಮಕ ಕಾರ್ಯಕ್ರಮ ರಾಯಚೂರು,ಆ.24- ಕರ್ನಾಟಕ ಸಂಘದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ಧಿ ಮೈಸೂರಿನ ಪರಂಪರೆ ಸಂಸ್ಥೆ, ರಾಯಚೂರಿನ ಕರ್ನಾಟಕ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಆಶ್ರಯದಲ್ಲಿ ನಡೆಯುತ್ತಿರುವ ಮಹಾಕವಿ ರಾಘವಾಂಕನ ಹರಿಶ್ಚಂದ್ರ ಕಾವ್ಯದ ಗಮಕ ಕಾರ್ಯಕ್ರಮದಲ್ಲಿ ವಿದ್ವಾನರಾದ ಶ್ರೀ ಗಣೇಶ ಉಡುಪ, ಹಾಗೂ ಜಿ. ಎಸ್. ಮಂಜುನಾಥ್ ಇವರು ಕರ್ನಾಟಕ ಸಂಘದಲ್ಲಿ ಪ್ರಸ್ತುತಪಡಿಸಿದ ಗಮಕ ಕಾರ್ಯಕ್ರಮ ಸುಂದರವಾಗಿ ಮೂಡಿಬಂದಿತು.  ಈ ಗಮಕದಲ್ಲಿ ರಾಘವಾಂಕನ  ಹರಿಶ್ಚಂದ್ರನ ಕಾವ್ಯದಲ್ಲಿ ಬರುವ ಹರಿಶ್ಚಂದ್ರನ ರಾಜ್ಯ ಸಮರ್ಪಣೆ, ಪುತ್ರ, ಆತ್ಮ ವಿತ್ರಯ ರೋಹಿತಾಶ್ವ ಮರಣ, ಚಂದ್ರಮತಿಯ ದುಃಖ ಮುಂತಾದ ವಿಷಯಗಳನ್ನು ವಾಚನಕಾರರಾದ ವಿದ್ವಾನ ಗಣೇಶ್ ಉಡುಪಾವರು ಸುಶ್ರಾವ್ಯವಾಗಿ ವಾಚನ ಮಾಡಿದರು, ವಿದ್ವಾನರಾದ ಸಿ. ಎಸ್. ಮಂಜುನಾಥ್ ಅವರು ಆಕರ್ಷಣೀಯವಾಗಿ ವ್ಯಾಖ್ಯಾನವನ್ನು ಮಾಡಿದರು.                                    ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಕಾರ್ಯದರ್ಶಿ  ಮುರಳಿಧರ ಕುಲಕರ್ಣಿ  ಎಲ್ಲರನ್ನೂ ಸ್ವಾಗತಿಸಿ ಗಮಕಿಗಳನ್ನು ಪರಿಚಯಿಸಿದರು. ಈ ಕಾರ್ಯಕ್ರಮದಲ್ಲಿ ಪರಂಪರೆ ಸಂಸ್ಥೆಯ ಮೈಸೂ...

ಮಂತ್ರಾಲಯಕ್ಕೆ ಸಿ.ಟಿ.ರವಿ ಭೇಟಿ.

Image
  ಮಂತ್ರಾಲಯಕ್ಕೆ ಸಿ.ಟಿ.ರವಿ ಭೇಟಿ.        ರಾಯಚೂರು,ಆ.24- ಮಂತ್ರಾಲಯಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭೇಟಿ ನೀಡಿದರು.                                         ಬೆಳಿಗ್ಗೆ ಕುಟುಂಬ ಸಹಿತರಾಗಿ ಆಗಮಿಸಿದ ಅವರಿಗೆ ಶ್ರೀಮಠದಿಂದ ಸ್ವಾಗತ ಕೋರಲಾಯಿತು ನಂತರ  ಮಂಚಾಲಮ್ಮ ದೇವಿ ದರ್ಶನ ಪಡೆದ ಅವರು ರಾಯರ ಬೃಂದಾವನ ದರ್ಶನ ಪಡೆದುಕೊಂಡು ತದನಂತರ ಪೀಠಾಧೀಪತಿಗಳಾದ ಶ್ರೀಸುಬುಧೇಂದ್ರತೀರ್ಥರಿಂದ ಆಶೀರ್ವಾದ ಪಡೆದುಕೊಂಡರು.                                            ಈ ಸಂದರ್ಭದಲ್ಲಿ ಮಾಜಿ ಶಾಸಕ ತಿಪ್ಪರಾಜು, ಎಪಿಎಂಸಿ ಅಧ್ಯಕ್ಷರಾದ ಅಚ್ಯುತ್ ರೆಡ್ಡಿ, ಬಿಜೆಪಿ ಮುಖಂಡರಾದ ಗಿರೀಶ ಕನಕವೇಡಿ, ಬಂಡೇಶ ವಲ್ಕಂದಿನ್ನಿ , ಸತೀಶ್, ಸೇರಿದಂತೆ  ಇತರರು ಇದ್ದರು .

ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಜಿ.ವೀರಾರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ ಬಿ.ಸ್ವಾಮಿ ಆಯ್ಕೆ.

Image
  ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಜಿ.ವೀರಾರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ ಬಿ.ಸ್ವಾಮಿ ಆಯ್ಕೆ . ರಾಯಚೂರು,ಆ.24- ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ಜನಕೂಗು ಪತ್ರಿಕೆ ಸಂಪಾದಕ ಜಿ.ವೀರಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿಮೂಲ ಪತ್ರಿಕೆ ವ್ಯವಸ್ಥಾಪಕ ಸಂಪಾದಕ ವಿಶ್ವನಾಥ ಬಿ.ಸ್ವಾಮಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಸಂಘದ ರಾಜ್ಯ ಕೋಶಾಧ್ಯಕ್ಷ  ನಾಗರಾಜ ನಾಗತೀಹಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಉಪಾಧ್ಯಕ್ಷರಾಗಿ ಸಿಂಧೂರಬಿಂಬ ಪತ್ರಿಕೆ ಸಂಪಾದಕ ವೀರಭದ್ರಪ್ಪ ಜವಳಗೇರಾ, ಕಾರ್ಯದರ್ಶಿಯಾಗಿ ಪ್ರಜಾ ಸಾಕ್ಷಿ ಪತ್ರಿಕೆ ಸಂಪಾದಕ ರಮೇಶ ಗೋರೆಬಾಳ, ಖಜಾಂಚಿಯಾಗಿ ರಾಯಚೂರು ವಾರ್ತೆ ಸಂಪಾದಕ ಗಿರಿಧರ ಕುಲ್ಕರ್ಣಿ ಹಾಗೂ ಐದು ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ಹಾಗೂ ರಾಯಚೂರವಾಣಿ ವ್ಯವಸ್ಥಾಪಕ ಸಂಪಾದಕ ಅರವಿಂದ‌ ಕುಲಕರ್ಣಿ, ರಾಯಚೂರು ಪ್ರಭ ಸಂಪಾದಕ ಸುಶೀಲೆಂದ್ರ ಸೊದೆಗಾರ, ಬೆಂಕಿ ಬೆಳಕು ಪತ್ರಿಕೆ ಸಂಪಾದಕ ಆರ್.ಗುರುನಾಥ, ಸಮರ್ಥವಾಣಿ ಸ್ಥಾನಿಕ ಸಂಪಾದಕ ಆನಂದ ವಿ.ಕೆ,ಸೇರಿದಂತೆ ಅನೇಕರು ಉಪ...

ಲಾಯನ್ಸ ಕ್ಲಬ್ ವತಿಯಿಂದ‌ ಹಿರಿಯ ನಾಗರಿಕರ ದಿನಾಚರಣೆ

Image
                                                                                       ಲಾಯನ್ಸ ಕ್ಲಬ್ ವತಿಯಿಂದ‌ ಹಿರಿಯ ನಾಗರಿಕರ ದಿನಾಚರಣೆ ರಾಯಚೂರು, ಆ.24: ನಗರದ ಲಾಯನ್ಸ ಕ್ಲಬ್ ಜಿಲ್ಲಾ ಘಟಕದ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಲಲಿತಾ ಹಿರಿಯ ನಾಗರಿಕರ ಮನೆಯಲ್ಲಿ ಹಣ್ಣುಹಂಪಲುಗಳನ್ನು ವಿತರಿಸಲಾಯಿತು. ಲಾಯನ್ಸ ಕ್ಲಬ್ ಹಿರಿಯ ಸದಸ್ಯೆ ಲಾಯನ್ ಅಮೃತಾ ಹನುಮಂತರಾವ್ ಅವರು ತಮ್ಮ ಜನ್ಮದಿನ ಅಂಗವಾಗಿ ಹಣ್ಣುಗಳನ್ನು ದಾನವಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಲಾಯನ್ಸ ಕ್ಲಬ್ ಅಧ್ಯಕ್ಷ ಲಯನ್ ಮಲ್ಲಿಕಾರ್ಜುನ ಬಾಳಿ ಮಾತನಾಡಿ, ಲಲಿತಾ ಹಿರಿಯ ನಾಗರಿಕರ ಮನೆಗೆ ಅಗತ್ಯ ಸಹಾಯ-ಸಹಕಾರ ನೀಡಲು ರಾಯಚೂರು ಲಾಯನ್ಸ ಕ್ಲಬ್ ಸಿದ್ಧವಿದೆ. ಏನೇ ಕುಂದುಕೊರತೆಗಳಿದ್ದರೂ ನಮ್ಮ ಗಮನಕ್ಕೆ ತನ್ನಿ, ನಮ್ಮಿಂದಾಗುವ ಎಲ್ಲಾ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಹಿರಿಯ ಸದಸ್ಯರಾದ ಕೆ.ಎಸ್.ನಾಯರ್, ಲಯನ್ ಹೆಮಣ್ಣ ಉಣ್ಣಿ, ಕಾರ್ಯದರ್ಶಿ ಲಯನ್ ರಾಜೇಂದ್ರ ಕುಮಾರ್.ಎಸ್.ಶಿವಾಳೆ ಸೇರಿದಂತೆ ಹನುಮಂತರಾವ್ ದಂಪತಿಗಳು ಹಾಗೂ ಕುಟುಂಬದವರು ಕಾರ್ಯಕ್ರಮದಲ್ಲಿ...

ರೈಲ್ವೆ ನಿಲ್ದಾಣ: ಡಿಲಕ್ಸ್ ಶೌಚಾಲಯ ಉದ್ಘಾಟನೆ

Image
  ರೈಲ್ವೆ  ನಿಲ್ದಾಣ: ಡಿಲಕ್ಸ್ ಶೌಚಾಲಯ ಉದ್ಘಾಟನೆ                           ರಾಯಚೂರು,ಆ.23- ರೈಲ್ವೆ ನಿಲ್ದಾಣದಲ್ಲಿ ಡಿಲಕ್ಸ್ ಶೌಚಾಲಯವನ್ನು ಇಂದು ರಿಬ್ಬನ್ ಕತ್ತರಿಸುವುದರ ಮೂಲಕ ಸೌತ್ ಸೆಂಟ್ರಲ್ ರೈಲ್ವೆ ಸದಸ್ಯರಾದ ಬಾಬುರಾವ್ ಹಾಗೂ ರಾಯಚೂರು ಸ್ಟೇಷನ್ ಮಾಸ್ಟರ್ ಎಸ್ ಕೆ ಸರ್ಕಾರ್ ಜಂಟಿಯಾಗಿ ಉದ್ಘಾಟಿಸಿ  ಲೋಕಾರ್ಪಣೆ ಮಾಡಿದರು.   ಶೌಚಾಲಯದ ನಿರ್ವಹಣೆಯನ್ನು ಸುಲಭ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಆಂಧ್ರ ಪ್ರದೇಶ್ ನಿರ್ವಹಿಸಲಿದ್ದಾರೆ ಸೌತ್ ಸೆಂಟ್ರಲ್ ರೈಲ್ವೆ ಗುಂತ್ಕಲ್ ಇವರ ಸಹಯೋಗದಲ್ಲಿ ಶೌಚಾಲಯ ನಿರ್ಮಾಣಗೊಂಡಿದೆ ಎಂದು ಸ್ಟೇಷನ್ ಮಾಸ್ಟರ್ ಎಸ್ ಕೆ ಸರ್ಕಾರ್ ಹೇಳಿದರು .ಈ ಸಂದರ್ಭದಲ್ಲಿ  ಎಸ್ ಜಿ ಚೌಹಾನ್ ಸಿಸಿಐ ಹಾಗೂ ರೈಲ್ವೆ ಇಲಾಖೆ ವೈದ್ಯಾಧಿಕಾರಿಯಾದ ವಿ ಅಮರನಾಥ ಉಪಸ್ಥಿತರಿದ್ದರು.