Posts

Showing posts from July, 2024
Image
ವಾಲ್ಮೀಕಿ ಅಭಿವೃದ್ಧಿ ಮಂಡಳಿ ಹಗರಣ: ಸಿಎಂ ರಾಜಿನಾಮೆ ಹಾಗೂ ದದ್ದಲ್ ಬಂಧನಕ್ಕೆ ಜೆಡಿಎಸ್ ಆಗ್ರಹ ರಾಯಚೂರು,ಜು.31- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಠೇವಣಿ ಮಾಡಲಾದ ಮಹರ್ಷಿ ವಾಲ್ಮೀಕಿ ಶೆಡ್ಯೂಲ್ ಟ್ರೈಬ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್‌ಗೆ ಸೇರಿದ ಸರ್ಕಾರಿ ಪತ್ತೆಗಳ ದುರುಪಯೋಗ ಮತ್ತು ದುರುಪಯೋಗ, ಎಂ.ಜಿ. ರಸ್ತೆ, ಬೆಂಗಳೂರು ಶ್ರೀ ನಾಗೇಂದ್ರ ಶಾಸಕರು ಮತ್ತು ಮಾಜಿ ಸಚಿವರು ಮತ್ತು ಶ್ರೀ. ಬಸನಗೌಡ ದಡ್ಡಲ್ ಶಾಸಕ ಹಾಗೂ ನಗರಸಭೆ ಅಧ್ಯಕ್ಷರು ಮತ್ತಿತರರು ಇದ್ದರು. ನಾವು ಜನತಾ ದಳ (ಜಾತ್ಯತೀತ) ಪಕ್ಷ ರಾಯಚೂರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಠೇವಣಿ ಇರಿಸಲಾಗಿರುವ ಮಹರ್ಷಿ ವಾಲ್ಮೀಕಿ ಶೆಡ್ಯೂಲ್ ಟ್ರೈಬ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ಗೆ ಸೇರಿದ ಸರ್ಕಾರಿ ನಿಧಿಯ ವ್ಯವಸ್ಥಿತ ದುರುಪಯೋಗ ಮತ್ತು ದುರುಪಯೋಗವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ರೋಡ್ ಬೆಂಗಳೂರು ಆಗಿನ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಶ್ರೀ ಅವರ ಸಕ್ರಿಯ ಸಹಕಾರದೊಂದಿಗೆ. ನಾಗೇಂದ್ರ ಮತ್ತು ಶ್ರೀ. ಬಸನಗೌಡ ದಡ್ಡಲ್ ಶಾಸಕರು ಹಾಗೂ ನಗರಸಭೆ ಅಧ್ಯಕ್ಷರು. ಮಹರ್ಷಿ ವಾಲ್ಮೀಕಿ ಶೆಡ್ಯೂಲ್ ಟ್ರೈಬ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಂ: 5201410001659653 ಹೊಂದಿರುವ ಉಳಿತಾಯ ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ, ಎಂ.ಜಿ. ರಸ್ತೆ ಬೆಂಗಳೂರು ಮತ್ತು ಠೇವಣಿ
Image
ಕಮಲಾಪುರದಲ್ಲಿ ಶ್ರೀ  ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳವರ 5ನೇ ಚಾತುರ್ಮಾಸ್ಯ ಮಹೋತ್ಸವ ಅನುಷ್ಟಾನ     ರಾಯಚೂರು,ಜು.31- ಕಣ್ವ ಮಠಾಧೀಶರಾದ ಶ್ರೀ ವಿದ್ಯಾಕಣ್ವ ವಿರಾಜ ತೀರ್ಥರ ಚಾತುರ್ಮಾಸ್ಯ ಅನುಷ್ಠಾನ ಸುಕ್ಷೇತ್ರ ಕಮಲಾಪುರ ಶ್ರೀ ವಿದ್ಯಾವಿರಾಜ ತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಜು.30 ದಶಮಿಯಂದು  ನೆರವೇರಿಸಲಾಯಿತು.                                      ತುಂಗಭದ್ರಾ ನದಿ ತೀರದಲ್ಲಿ ದಂಡೋದಕ ಸ್ನಾನ,ಮುದ್ರಾಧಾರಣೆ,ಪಾದಪೂಜೆ,ಮಹಾಸಂಸ್ಥಾನ ಪೂಜೆ,ತೀರ್ಥೋದಕ,ಯತಿಗಳಿಗೆ ಹಸ್ತೋದಕ,ಸಕಲ ಭಕ್ತಾದಿಗಳಿಗೆ ತೀರ್ಥ ಪ್ರಸಾದ,ಪಂಡಿತರಿಂದ ಪ್ರವಚನ,ಶ್ರೀ ಪಾದಂಗಳವರಿಂದ ಚಾತುರ್ಮಾಸ ದೀಕ್ಷಾ ಪ್ರಥಮ ಅನುಗ್ರಹ ಸಂದೇಶ,ಫಲಮಂತ್ರಾಕ್ಷತೆ ನೆರವೇರಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
Image
  ಸಿದ್ದರಾಮಯ್ಯ ಬ್ಲಾಕ್ ಮೇಲ್ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮುಂದೆ ನಡೆಯುತ್ತೆ ಬಿಜೆಪಿ ಮುಂದೆ ನಡೆಯಲ್ಲ:                            ಮೈಸೂರು ಪಾದಯಾತ್ರೆ ಕುರಿತು ಕುಮಾರಸ್ವಾಮಿ ಮುನಿಸು ತಾತ್ಕಾಲಿಕ -ಛಲುವಾದಿ ನಾರಾಯಣಸ್ವಾಮಿ.                                                              ರಾಯಚೂರು,ಜು.31- ಸಿದ್ಧರಾಮಯ್ಯ ಬ್ಲಾಕ್ ಮೇಲ್ ಸೋನಿಯಾಗಾಂಧಿ , ರಾಹುಲ್ ಗಾಂಧಿ ಮುಂದೆ ನಡೆಯುತ್ತೆ ಬಿಜೆಪಿ ಮುಂದೆ ನಡೆಯಲ್ಲ ವೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣ ಸ್ವಾಮಿ ಹೇಳಿದರು. ಅವರಿಂದು ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ಅಕ್ರಮಗಳ ಬಗ್ಗೆ ಧ್ವನಿಯತ್ತಿದರೆ ಬಿಜೆಪಿ ಸರ್ಕಾರದ ಅವಧಿಯಲ್ಲಾದ ಹಗರಣ ಬಿಚ್ಚಿಡುತ್ತೇನೆಂದು ಬ್ಲಾಕ್ ಮೇಲ್ ಮಾಡಿದರೆ ನಾವು ಹೆದರುವುದಿಲ್ಲ ನಿಮ್ಮ ಬ್ಲಾಕ್ ಮೇಲ್ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಮುಂದೆ ನಡೆಯುತ್ತೆ ಎಂದು ಹೇಳಿದರು. ಪಂಚ ಗ್ಯಾರಂಟಿ ಚುನಾವಣೆ ಆಮೀಷವೆಂದು ಆರೋಪಿಸಿದ ಅವರು ದಲಿತರ ಎಸ್ಸಿಪಿ  ಟಿಎಸ್ಪಿ ಹಣ ಗ್ಯಾರಂಟಿಗಳಿಗೆ ನೀಡುತ್ತಿದ್ದಾರೆ  ಈ ಹಿಂದೆ ಇದ್ದ ಕುಟೀರ ಜ್ಯೋತಿ, ಭಾಗ್ಯಜ್ಯೋತಿ   ವಿದ್ಯುತ್ ಯೋಜನೆ ಸ್ಥಗಿತಗೊಳಿಸಿ ಗೃಹಜ್ಯೋತಿ ತಂದಿದ್ದಾರೆ ಅದಕ್ಕೆ 200 ಯೂನಿಟ್ ಮಿತಿ ಹೇರಿದ್ದಾರೆ ಮತ್ತು  ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣವೆಂದು ಹೇಳಿದ್ದಾರೆ ಬಡ ದಲಿತ ಹೆಣ್ಣು ಮಕ್ಕಳು ದಿನ
Image
  ಸಫಾಯಿ ಕರ್ಮಚಾರಿಗಳಿಗೆ  ಸೂರು ಕಲ್ಪಿಸುವಂತೆ ಭಾಸ್ಕರ್ ಬಾಬು ಮನವಿ.                                ರಾಯಚೂರು,ಜು.30- ಸಫಾಯಿ ಕರ್ಮಚಾರಿಗಳಿಗೆ ನಿವೇಶನ ಮತ್ತು ಮನೆ ಮಂಜೂರು ಮಾಡುವಂತೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಿಗೆ ಕೆಪಿಸಿಸಿ ಕಾರ್ಮಿಕ ವಿಭಾಗ ಕಾರ್ಯದರ್ಶಿ ಭಾಸ್ಕರ್ ಬಾಬು ಮನವಿ ಮಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನೇಕ ಯೋಜನೆ ರೂಪಿಸಿದರು ಸಾಮಾಜಿಕ , ಶೈಕ್ಷಣಿಕ, ಆರ್ಥಿಕವಾಗಿ ಅಶಕ್ತರಾಗಿರುವ ಸಫಾಯಿ ಕರ್ಮಚಾರಿಗಳು ಇಂದಿಗೂ ಟಿನ್ ಶೆಡ್ ನಲ್ಲಿ ವಾಸಿಸುತ್ತಿದ್ದು ಅವರಿಗೆ ನಿವೇಶನ ಒದಗಿಸಿ ಮನೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.ಸರ್ಕಾರವೆ ಸಫಾಯಿ ಕರ್ಮಚಾರಿಗಳ ಹಣ ಪಾವತಿಸಿ ಆರ್ಥಿಕವಾಗಿ ದುರ್ಬಲರಾದ ಅವರಿಗೆ ಸೂರು ಕಲ್ಪಿಸಿಕೊಡಲು ಮನವಿ ಮಾಡಿದರು.
Image
  ಮಾಜಿ ದೇವದಾಸಿಯರಿಗೆ ಉಚಿತ ಮನೆ ನಿರ್ಮಾಣಕ್ಕೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಕೆ   ರಾಯಚೂರು,ಜು.30- ಮಾಜಿ ದೇವದಾಸಿಯರಿಗೆ ಮನೆ ನಿರ್ಮಿಸಿಬೇಕೆಂದು ಒತ್ತಾಯಿಸಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯರವರಿಗೆ  ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.  ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘಟನೆ ನೇತೃತ್ವದಲ್ಲಿ ಹಲವು ವರ್ಷಗಳ ಹೋರಾಟ ಪರಿಣಾಮವಾಗಿ ರಾಯಚೂರು ತಾಲೂಕಿನ ೨೦೬ ಮಾಜಿ  ದೇವದಾಸಿ ಮಹಿಳೆಯರಿಗೆ ಪುನರ್ ವಸತಿ ಕಲ್ಪಿಸಲು ರಾಯಚೂರು ನಗರದ  ಸರ್ವೆ ನಂಬರ : ೧೪೦೩ ರಲ್ಲಿ ವಿಸ್ತೀರ್ಣ : ೫ ಎಕರೆ ಭೂ ಮಂಜೂರು ಮಾಡಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದೆ. ೧ ಮನೆ ನಿರ್ಮಾಣ ವೆಚ್ಚವು ರೂ. ೬ ಲಕ್ಷ ೫೦ ಸಾವಿರ ರೂಪಾಯಿ ಸರ್ಕಾರ ನಿಗಧಿಪಡಿಸಲಾಗಿದ್ದು. ಅದರಲ್ಲಿ ಫಲಾನುವಿಯು  ರೂ. ೧ ಲಕ್ಷ  ಕಟ್ಟಬೇಕು ಎಂದು ಸರ್ಕಾರವು ಆದೇಶ ಮಾಡಿರುತ್ತದೆ. ಉಳಿದ ಹಣ ಸ್ಲಂ ಬೋರ್ಡ್ನಿಂದ  ಮತ್ತು ಸರ್ಕಾರದ ಕಡೆಯಿಂದ ನೀಡಲಾಗುತ್ತದೆ.  ಆದರೆ ಸಮಾಜದಲ್ಲಿ ಅತ್ಯಂತ ದೌರ್ಜನ್ಯಕ್ಕೆ ಮತ್ತು ಮೂಢ ನಂಬಿಕೆಗಳಿಗೆ  ಒಳಗಾಗಿರುವ ಧಮನಿತ ಜನರಾದ ಮಾಜಿ ದೇವದಾಸಿ ಮಹಿಳೆಯರೇ ಆಗಿದ್ದು, ಇವರಿಗೆ ಸರ್ಕಾರವು ಉಚಿತವಾಗಿ ಪುನರ್ ವಸತಿ ಕಲ್ಪಿಸಿ ಕೊಡುವ ಜವಾಬ್ದಾರಿ ಸರ್ಕಾರವೇ ವಹಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಅವರಿಗೆ  ಸರ್ಕಾರ ನೀಡುವ ಮಾಸಿಕ ಸಹಾಯ ಧನ ರೂ. ೨,೦೦೦/- ದಲ್ಲಿ ತಮ
Image
  ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆ: ಕೊಳಚೆ ಪ್ರದೇಶಗಳ ಘೋಷಣೆಗೆ ಶ್ರೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸಿ-ಪ್ರಸಾದ್ ಅಬ್ಬಯ್ಯ ರಾಯಚೂರು,ಜು.30- ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಕೊಳಚೆ ಪ್ರದೇಶಗಳ ಘೋಷಣೆಗಾಗಿ ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲೆಯ ವಿವಿಧ ತಹಶೀಲ್ದಾರ್ ಹಂತದ ಬಾಕಿ ಇರುವ ಪ್ರಸ್ತಾವನೆಯನ್ನು ಶ್ರೀಘ್ರದಲ್ಲೇ ಸಲ್ಲಿಸಬೇಕೆಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಹುಬ್ಬಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.   ಅವರಿಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಜಿಲ್ಲೆಯಲ್ಲಿ ಕೊಳಚೆ ಪ್ರದೇಶ ಘೋಷಣೆಗಾಗಿ ರಾಯಚೂರಿನಲ್ಲಿ 12, ದೇವದುರ್ಗದಲ್ಲಿ 08, ಮಾನವಿಯಲ್ಲಿ 04 ಒಟ್ಟು 24 ಪ್ರದೇಶಗಳು ಬಾಕಿಯಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಪ್ರಸ್ತಾವನೆಗೆ ಸಲ್ಲಿಸಬೇಕು. ಕೊಳಚೆ ಪ್ರದೇಶದ ಒಟ್ಟು 24,389 ಕುಟುಂಬಗಳು ಇದ್ದು, 98,545 ಜನರು ವಾಸವಾಗಿದ್ದಾರೆ ಎಂದರು.  ಕೊಳಚೆೆ ಪ್ರದೇಶದ ವಿವಿಧ 294 ಯೋಜನೆಗಳಿಗೆ ಒಟ್ಟು ಮೊತ್ತ 13,276 ಕೋಟಿ ರೂ.ಗಳಲ್ಲಿ ಕೇಂದ್ರದ ಪಾಲು 2703.80 ಕೋಟಿ ರೂ.ಗಳು ಹಾಗೂ ರಾಜ್ಯದ ಪಾಲು 2895.10 ಕೋಟಿ ರೂ.ಗಳು ಮತ್ತು ಉಳಿಕೆ ಮೊತ್ತ
Image
  ಬಿಜೆಪಿ ಸರ್ಕಾರವಿದ್ದಾಗ ಬಡವರಿಗೆ ಒಂದು ಮನೆಯೂ ನಿರ್ಮಿಸಲಿಲ್ಲ:                ದಲಿತರ ಹಣ ಗ್ಯಾರಂಟಿಗಳಿಗೆ ವಿನಿಯೋಗ ಬಿಜೆಪಿ ಕ್ಷುಲ್ಲಕ ರಾಜಕೀಯ- ಪ್ರಸಾದ ಅಬ್ಬಯ್ಯ.             ರಾಯಚೂರು,ಜು.30- ಎಸ್ಸಿ ಎಸ್ಟಿ ಸಮುದಾಯಗಳಿಗೆ ಮೀಸಲಿಟ್ಟ ಹಣ ಐದು ಗ್ಯಾರಂಟಿಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ಬಿಜೆಪಿ ಸುಳ್ಳು ಆರೋಪದ ಮೂಲಕ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಹೇಳಿದರು.                            ಅವರಿಂದು ನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದೀನ ದಲಿತರ, ಶೋಷಿತರ ಪರವಾದ ಪಾರದರ್ಶಕ  ಆಡಳಿತ ನೀಡುತ್ತಿದೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಕಾನೂನಿನಡಿ ಸಿಗಬೇಕಾದ ಅನುದಾನ ನೀಡುತ್ತಿದೆ ದೇಶದಲ್ಲೆ ಅತಿ ಹೆಚ್ಚು ಅನುದಾನ ದಲಿತರಿಗೆ ಮೀಸಲಿರಿಸಲಾಗಿದೆ ಅದಕ್ಕಾಗಿಯೆ ಶೇ.24 ರಷ್ಟು ಹಣ ಅವರಿಗೆ ವಿನಿಯೋಗಿಸಲಾಗುತ್ತಿದೆ ಎಂದರು. ಪಂಚ ಗ್ಯಾರಂಟಿಗಳಿಗೆ ಎಸ್ಸಿಪಿ ಟಿಎಸ್ಪಿ ಹಣ ಖರ್ಚು ಮಾಡಲಾಗುತ್ತಿದೆ ಎಂದು ಬಿಜೆಪಿ ಸುಳ್ಳು ಆರೋಪದ ಮಾಡುತ್ತಿದೆ ಎಂದು ದೂರಿದ ಅವರು ಬಿಜೆಪಿ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ ಎಂದರು. ಬಿಜೆಪಿ ಅವಧಿಯಲ್ಲಿ ಒಂದು ಮನೆ ನಿರ್ಮಾಣ ಮಾಡಲಿಲ್ಲ ನಮ್ಮ ಸರ್ಕಾರದಲ್ಲಿ  ವಸತಿ ಸಚಿವ ಜಮೀರ
Image
  ಪವನ್ ಪಾಟೀಲ್ ಅಧ್ಯಕ್ಷತೆಯಲ್ಲಿ  ಜು.31 ರಂದು ತಾಲೂಕಾ ಪಂಚ ಗ್ಯಾರಂಟಿ ಯೋಜನೆ ಸಭೆ.    ರಾಯಚೂರು,ಜು.29- ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಜು.31 ರಂದು ತಾಲೂಕಾ ಪಂಚ ಗ್ಯಾರಂಟಿ ಯೋಜನೆ ಸಭೆ ಹಮ್ಮಿಕೊಳ್ಳಲಾಗಿದೆ.                                  ಅಂದು ಬೆಳಿಗ್ಗೆ 10.30ಕ್ಕೆ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾ ಮಟ್ಟದ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಪವನ್ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ  ಪಂಚ ಗ್ಯಾರಂಟಿಗಳಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಜರಿರಲು ಸೂಚಿಸಲಾಗಿದೆ.
Image
ಭಾವನಾ ಲೋಕಕ್ಕೆ ಕರೆದ್ಯೊಯ್ದ  ಭಾವ ಶ್ರುತಿ ಸಂಗೀತ ಕಾರ್ಯಕ್ರಮ : ಶ್ರುತಿ ಸಾಹಿತ್ಯ ಮೇಳದ ಕಾರ್ಯ ಶ್ಲಾಘನೀಯವಾಗಿದೆ- ಕೆ. ಶಾಂತಪ್ಪ   ರಾಯಚೂರು,ಜು.29-  ಕಳೆದ 37 ವರ್ಷಗಳಿಂದ ರಾಯಚೂರು ನಗರದಲ್ಲಿ ಸಾಂಸ್ಕೃತಿಕವಾಗಿ,ಸಾಹಿತಿಕವಾಗಿ ಸೇವೆ ಸಲ್ಲಿಸುತ್ತಾ, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಿಸಿ ವೇದಿಕೆ ನಿರ್ಮಿಸಿ ಕೊಡುತ್ತಿರುವ ಶ್ರುತಿ ಸಾಹಿತ್ಯ ಮೇಳದ ಕಾರ್ಯ ಶ್ಲಾಘನೀಯವಾಗಿದೆ, ಎಂದು ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ಕೆ.ಶಾಂತಪ್ಪ ಅವರು ಹೇಳಿದರು.       ಅವರು ಆದಿವಾರ ಸಂಜೆ ಕರ್ನಾಟಕ ಸಂಘದಲ್ಲಿ ಶೃತಿ ಸಾಹಿತ್ಯ ಮೇಳ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಇವರು ಏರ್ಪಡಿಸಿದ ಭಾವಗೀತೆ ಭಕ್ತಿಗೀತೆಗಳು,ಜನಪದ ಗೀತೆಗಳ ಸಂಗಮದ ಭಾವ ಶ್ರುತಿ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.    ಸಂಗೀತ ಕಾರ್ಯಕ್ರಮಗಳು   ಮನಸ್ಸನ್ನು ಉಲ್ಲಾಸ ಗೊಳಿಸಿ ಒತ್ತಡವನ್ನು ದೂರ ಮಾಡುತ್ತೇವೆ. ನಗರದ ಜನರಿಗೆ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಂಸ್ಕೃತಿಕ ಪರಿಸರವನ್ನು ನಿರ್ಮಾಣ ಮಾಡುತ್ತಿರುವ ಶ್ರುತಿ ಸಾಹಿತ್ಯ ಮೇಳ ಸಂಘಟನೆಯ ಕಾರ್ಯ ಚಟುವಟಿಕೆ ಇತರ  ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.       ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗಡಿನಾಡು ಪ್ರಾಧಿಕಾರದ ಸದಸ್ಯರಾದ ಭಗತ್ ರಾಜ್ ನಿಜಾಮಕಾರಿ ಮಾತನಾಡಿ ಗಡಿನಾಡು ಪ್ರಾಧಿಕಾರದಿಂದ ರಾಜ್ಯದಲ್ಲಿ ನಾಲ್ಕು ಗಡಿನಾಡ ಪ್ರದೇಶಗಳಲ್ಲಿ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಗಿ
Image
  ದರ್ವೆಶ ಗ್ರೂಪ್ ಬಹುಕೋಟಿ ವಂಚನೆ ಪ್ರಕರಣ : ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಿಐಡಿ ತಂಡ.                                       ರಾಯಚೂರು,ಜು.29- ದರ್ವೇಶ ಗ್ರೂಪ್ ಬಹುಕೋಟಿ ವಂಚನೆ ಪ್ರಕರಣ  ಸಂಬಂಧ ಪಟ್ಟಂತೆ ಮೂವರು ಆರೋಪಿಗಳನ್ನು ಇಂದು ಸಿಐಡಿ ತಂಡ  ನ್ಯಾಯಾಲಯಕ್ಕೆ ಹಾಜರು ಪಡಿಸಿತು.   ಧರ್ವೆಶ ಗ್ರೂಪ್‌ನಲ್ಲಿ ಹಣ ಹೂಡಿದವರಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದ್ದು ಬಂಧಿತರನ್ನು ಇಂದು  ಎರಡನೇ ಹೆಚ್ಚುವರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಧರವೇಶ ಗ್ರೂಪ್‌ನ  ಸೈಯದ್‌ ವಸೀಂ, ಸೈಯದ್ ಮಸ್ಕಿನ್, ಬಬ್ಲೂ ಎಂಬುವವರು ಹೂಡಿಕೆದಾರರಿಗೆ  ಹಣ ನೀಡದೇ ವಂಚಿಸಿದ್ದಾರೆ ಎಂದು ವೆಂಕಟೇಶ ಎಂಬುವವರು ರಾಯಚೂರು ಅಪರಾಧ ವಿಭಾಗ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.  ಮೂರು ಜನರನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಮೂರು ಜನ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಗ್ರೂಪ್ ಮುಖ್ಯಸ್ಥ ಮಹ್ಮದ ಸೂಜಾ ಸೇರಿ ನಾಲ್ಕು ಜನರ ವಿರುದ್ದ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.
Image
ತಪ್ತ ಮುದ್ರಾ ಧಾರಣೆಯಿಂದ ಕ್ಲೇಶ ನಾಶ- ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು.                    ರಾಯಚೂರು,ಜು.28- ವಿಷ್ಣುವಿನ ಚಿಹ್ನೆಗಳಾದ  ಶಂಖ ಮತ್ತು ಚಕ್ರ ಮುದ್ರೆ ಧಾರಣೆಯಿಂದ ನಮ್ಮ ಸಕಲ ಕ್ಲೇಶಗಳು ನಾಶವಾಗುತ್ತವೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಹೇಳಿದರು. ಅವರಿಂದು ನಗರದ ಜವಾಹರ್ ನಗರ ರಾಯರ ಮಠದಲ್ಲಿ ಶಿಷ್ಯರಿಗೆ ಮತ್ತು ಭಕ್ತರಿಗೆ ಮುದ್ರಾ ಧಾರಣೆ ಮಾಡಿ ಆಶೀರ್ವಚನ ನೀಡಿದರು. ದೇವರ ಚಿಹ್ನೆಗಳನ್ನು ನಾವು ಧಾರಣೆ ಮಾಡಿದರೆ ನಮ್ಮ ಕಷ್ಟಗಳು ಪರಿಹಾರವಾಗುತ್ತವೆ ಭಕ್ತಿಯಿಂದ ದೇವರನ್ನು ನೆನೆಯಬೇಕೆಂದ ಅವರು ರಾಯರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದರು. ತಾವು ಎಲ್ಲಾ ಸ್ಥಳಗಳಿಗೆ ತೆರಳಿ ಅಲ್ಲಿರುವ ಶಿಷ್ಯರಿಗೆ ಮತ್ತು ಭಕ್ತರಿಗೆ ತಪ್ತ ಮುದ್ರಾ ಧಾರಣೆ ಮಾಡುತ್ತಿದ್ದು ಆಗಷ್ಟ 2 ರಂದು ಮಂತ್ರಾಲಯದಲ್ಲಿ ಚಾತುರ್ಮಾಸ್ಯ ದೀಕ್ಷೆ ಸಂಕಲ್ಪ ಕೈಗೊಳ್ಳಲಿದ್ದೇವೆಂದ ಅವರು ರಾಯರ ಆರಾಧನೆಗೆ ಎಲ್ಲರೂ ಆಗಮಿಸಲು ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಪಂಡಿತರು, ಶ್ರೀ ಮಠದ ವ್ಯವಸ್ಥಾಪಕರು, ಸಿಬ್ಬಂದಿಗಳು, ವಿದ್ಯಾಪೀಠದ ವಿದ್ಯಾರ್ಥಿಗಳು  ಅಪಾರ ಸಂಖ್ಯೆಯಲ್ಲಿ ಶಿಷ್ಯರು, ಭಕ್ತರು ನೆರೆದಿದ್ದರು.
Image
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಮಟ್ಪದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ:                    ಕಾರ್ಪೋರೇಟ್ ಕಂಪನಿಗಳ ಕಪಿ ಮುಷ್ಟಿಯಿಂದ ಮಾಧ್ಯಮ ಹೊರಬರಬೇಕು- ಡಾ.ಶರಣ ಪ್ರಕಾಶ್ ಪಾಟೀಲ್.                                  ರಾಯಚೂರು,ಜು.28- ದೇಶದಲ್ಲಿ ಕಾರ್ಪೋರೇಟ್ ಕಂಪೆನಿಗಳ ಕಪಿಮುಷ್ಠಿಯಲ್ಲಿರುವ ಮಾಧ್ಯಮ ಸಂಸ್ಥೆಗಳು ಹೊರಬಂದಾಗ ಮಾತ್ರ ನೈಜ ಪತ್ರಿಕೋದ್ಯಮ ಉಳಿಯಲು ಸಾಧ್ಯವೆಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು. ಅವರಿಂದು ನಗರದ ಡಾ.ಅಂಬೇಡ್ಕರ ಹಾಗೂ ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಕರ್ತರಿಗೆ ಪ್ರಶಸ್ತಿ  ವಿತರಿಸಿ ಮಾತನಾಡಿದರು. ಪತ್ರಿಕಾರಂಗ ಪ್ರಜಾ ಪ್ರಭುತ್ವದ ನಾಲ್ಕನೆ ಅಂಗ, ಪತ್ರಕರ್ತರು ನಿರ್ಭೀತ ರಾಗಿ ಕಾರ್ಯನಿರ್ವಹಿಸಬೇಕು ಈ ದಿನ ಸಮಾಜದಲ್ಲಿ ಬದಲಾವಣೆ ಕಾಣುತ್ತಿದ್ದರೆ ಅದರಲ್ಲಿ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮದ ಕೊಡುಗೆಯೂ ಇದೆ ಎಂದರು. ಸ್ವಾತಂತ್ರ್ಯ ಪೂರ್ವದಲ್ಲಿ ಆಂಗ್ಲರ ವಿರುದ್ಧ ಪತ್ರಿಕೆಗಳು ನಿಷ್ಟುರ ವರದಿ ಪ್ರಕಟಿಸಿ ಭಾರತಕ್ಕೆ ಸ್ವಾತಂತ್ರ್ಯ ದೊರಕಲು ಸ
Image
  ನಗರದಲ್ಲಿ ನಾಳೆ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರಿಂದ  ತಪ್ತ ಮುದ್ರಾ ಧಾರಣೆ                                  ರಾಯಚೂರು,ಜು.27- ನಗರದ ಜವಾಹರ್ ನಗರ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ನಾಳೆ ಜು.28, ಭಾನುವಾರದಂದು  ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ತಪ್ತ  ಮುದ್ರಾ ಧಾರಣೆ ನಡೆಯಲಿದೆ .                     ಚಾರ್ತುಮಾಸದ ಅಂಗವಾಗಿ ನಾಳೆ ಬೆಳಿಗ್ಗೆ 8:30ಕ್ಕೆ  ಶ್ರೀಪಾದಂಗಳವರಿಂದ ಶ್ರೀ ಮಠದ ಶಿಷ್ಯರಿಗೆ ಮತ್ತು ಭಕ್ತರಿಗೆ ತಪ್ತ ಮುದ್ರಾ ಧಾರಣೆ ನಡೆಯಲಿದೆ.ಕಾರಣ ಶ್ರೀ ಮಠದ ಶಿಷ್ಯರು ಮತ್ತು ಭಕ್ತರು ಭಾಗವಹಿಸಿ ಗುರುಗಳು ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.
Image
  ಜು. 29 ವರೆಗೆ ನಗರದಲ್ಲಿ ಕೃಷ್ಣಯ್ಯಚೆಟ್ಟಿ ಜ್ಯುವೆಲರ್ಸ್ ನಿಂದ ಆಭರಣ ಪ್ರದರ್ಶನ.                    ರಾಯಚೂರು,ಜು.26- ನಗರದ ರಂಜಿತಾ ಪ್ಯಾಲೇಸ್ ಹೋಟೆಲ್ ನಲ್ಲಿ ಇಂದಿನಿಂದ ಜು.29 ರವರೆಗೆ ನಡೆಯುವ ಕೃಷ್ಣಯ್ಯಚೆಟ್ಟಿ ಜ್ಯುವೆಲರ್ಸ್ ರವರ ಆಭರಣ ಪ್ರದರ್ಶನಕ್ಕೆ ಮುಖಂಡರಾದ ತ್ರಿವಿಕ್ರಮ ಜೋಷಿ ಚಾಲನೆ ನೀಡಿದರು.                 ವಿಶಿಷ್ಟ ಕೊಡುಗೆ ಮತ್ತು ಕರಕುಶಲ ವಿನ್ಯಾಸವಿರುವ ವಜ್ರ, ಚಿನ್ನ ಹಾಗೂ ಬೆಳ್ಳಿಯ ಆಭರಣಗಳ ಪ್ರದರ್ಶನ ಉಚಿತವಾಗಿ ನಡೆಯಲಿದ್ದು ಆಭರಣ ಪ್ರಿಯರು ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.                           ಈ ಸಂದರ್ಭದಲ್ಲಿ ಕೊಟ್ರೇಶಪ್ಪ ಕೋರಿ, ಹರವಿ ನಾಗನಗೌಡ, ಸೇರಿದಂತೆ ಜ್ಯುವೆಲರ್ಸ್ ಮಾಲಿಕರು, ಸಿಬ್ಬಂದಿಗಳಿದ್ದರು.
Image
  ಆ.25 ರಂದು ಭಾರತ ವಿಕಾಸ ಪರಿಷತ್ ವತಿಯಿಂದ ರಾಷ್ಟ್ರೀಯ ಸಮೂಹ ಗಾಯನ ಹಾಗೂ ಭಾರತ ಕೋ ಜಾನೋ ಲಿಖಿತ ಪರೀಕ್ಷೆ -ಡಾ.ಆನಂದತೀರ್ಥ ಫಡ್ನೀಸ್.    ರಾಯಚೂರು,ಜು.26- ಭಾರತ ವಿಕಾಸ ಪರಿಷತ್ ವತಿಯಿಂದ ಆ.25 ರಂದು ರಾಷ್ಟ್ರೀಯ ಸಮೂಹ ಗಾಯನ ಹಾಗೂ ಭಾರತ್ ಕೋ ಜಾನೋ  ಲಿಖಿತ ಪರೀಕ್ಷೆ ಆಯೋಜಿಸಲಾಗಿದೆ ಎಂದು ಡಾ.ಆನಂದ ತೀರ್ಥ ಫಡ್ನೀಸ್ ಹೇಳಿದರು.                 ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭಾರತ ವಿಕಾಸ ಪರಿಷತ್ ರಾಷ್ಟ್ರೀಯ ಭಾವನೆ ಮೂಡಿಸುವ ಉದ್ದೇಶದಿಂದ ಆರನೆ ತರಗತಿಯಿಂದ ಪಿಯುಸಿ ದ್ವಿತೀಯ  ವರ್ಷದ ವರೆಗಿನ ವಿದ್ಯಾರ್ಥಿಗಳಿಗೆ    ರಾಷ್ಟ್ರೀಯ ಸಮೂಹ ಗಾಯನ ಹಾಗೂ ಭಾರತ್ ಕೋ ಜಾನೋ  ಲಿಖಿತ ಪರೀಕ್ಷೆ ಆಯೋಜಿಸಲಾಗಿದೆ ಎಂದರು.  ಸ್ಪರ್ದೆಯಲ್ಲಿ ಭಾಗವಹಿಸಲು ಆ.20ರೊಳಗೆ ಹೆಸರು ನೊಂದಾಯಿಸಬೇಕು ಎಂದು ಅವರು  ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು. ಸ್ಪರ್ಧೆಯು ವಿದ್ಯಾಭಾರತಿ ಶಾಲೆಯಲ್ಲಿ ಆ.25 ರಂದು ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಜಾನಕಿ ಪುರೋಹಿತ, ಪುರುಷೋತ್ತಮ ಇನ್ನಾಣಿ, ತಿರುಪತಿ ಜೋಷಿ, ಸ್ವಾಮಿ ರಾವ್ ದೇಶಪಾಂಡೆ ಇದ್ದರು. 
Image
  ಜು.28 ರಂದು ಶ್ರುತಿ ಸಾಹಿತ್ಯ ಮೇಳದಿಂದ "ಭಾವ ಶ್ರುತಿ" ಸಂಗೀತ ಕಾರ್ಯಕ್ರಮ -ಮುರಳೀಧರ ಕುಲಕರ್ಣಿ ರಾಯಚೂರು, ಜು.26- ಶ್ರುತಿ ಸಾಹಿತ್ಯ ಮೇಳದಿಂದ ಜು.28 ರಂದು ಭಾವ ಶ್ರುತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳೀಧರ ಕುಲಕರ್ಣಿ ಹೇಳಿದರು.                          ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಸಂಜೆ 5.30 ಕ್ಕೆ ನಗರದ ಕರ್ನಾಟಕ ಸಂಘ ಸಭಾಂಗಣದಲ್ಲಿ   ಭಾವಗೀತೆ ಭಕ್ತಿಗೀತೆ ಜಾನಪದ ಗೀತೆಗಳ ಸಂಗಮದ ಸಂಗೀತ ಕಾರ್ಯಕ್ರಮದ ಭಾವ ಶ್ರುತಿಯಲ್ಲಿ ಎಲ್ಲರೂ ಭಾಗವಹಿಸಲು ಕೋರಿದರು.                                     ಕಾರ್ಯಕ್ರಮ ಉದ್ಘಾಟನೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ ಮಾಡಲಿದ್ದು, ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ  ಜಯಲಕ್ಷ್ಮಿ ಮಂಗಳ ಮೂರ್ತಿ  ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಗಡಿ ಪ್ರಾದಿಕಾರದ ಸದಸ್ಯ ಭಾಗತರಾಜ ನಿಜಾಮಕಾರಿ, ದತ್ತಪ್ಪ ಸಾಗನೂರು, ನಿರ್ಮಲಾ ಹೆಚ್. ಹೊಸೂರು,ಶರಣಪ್ಪ ಗೋನಾಳ, ವೆಂಕಟೇಶ ಬೇವಿನಬೆಂಚಿ,ಮೋಹನ್ ವಕೀಲರು ಆಗಮಿಸಲಿದ್ದಾರೆ ಎಂದರು.                          1987 ರಲ್ಲಿ ಸ್ಥಾಪನೆಯಾದ ಶ್ರುತಿ ಸಾಹಿತ್ಯ ಮೇಳ ಅನೇಕ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದು 199೦ ರ ದಶಕದಲ್ಲಿ ದ.ರಾ. ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ, ಕುವೆಂಪು, ಜಿ.ಎಸ್.
Image
  ಜು. 27 ರಂದು ರಾಮಕೃಷ್ಣ ಪರಮಹಂಸ ಭಕ್ತಿಮಾಲಾ ಧ್ವನಿಸುರಳಿ ಬಿಡುಗಡೆ ಸಮಾರಂಭ                                                                               ರಾಯಚೂರು,ಜು.26- ನಗರದ ಸ್ವರಸಂಗಮ ಸಂಗೀತ ವಿದ್ಯಾಸಂಸ್ಥೆ ಹಾಗೂ ಬೆಂಗಳೂರಿನ ಭಾರತ್ ಸಾಂಸ್ಕೃತಿಕ ಕಲಾಕೇಂದ್ರ(ರಿ)  ಇವುಗಳ ಜಂಟಿ ಆಶ್ರಯದಲ್ಲಿ  ಜು.27 ರಂದು ಶ್ರೀರಾಮಕೃಷ್ಣ ಪರಮಹಂಸ ಭಕ್ತಿಮಾಲಾ ಎಂಬ ಹೆಸರಿನ ಧ್ವನಿ ಸುರಳಿ ಬಿಡುಗಡೆ ಸಮಾರಂಭವುನ್ನು ಆಯೋಜಿಸಲಾಗಿದೆ ಎಂದು   ಭಾರತ್ ಸಾಂಸ್ಕೃತಿಕ ಕಲಾಕೇಂದ್ರ, ಬೆಂಗಳೂರಿನ  ಕಾರ್ಯದರ್ಶಿಗಳಾದ  ಕೆ .ಯೋಗ ರವೀಶ ಭಾರತ್  ಅವರು ಹೇಳಿದ್ದಾರೆ.  ಶ್ರೀ ರಾಮಕೃಷ್ಣ ಪರಮಹಂಸ, ಮಾತಾ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ಕುರಿತು ಹಿಂದುಸ್ಥಾನಿ  ಶೈಲಿಯಲ್ಲಿ ಖ್ಯಾತ ಅಂತಾರಾಷ್ಟ್ರೀಯ ಕ್ಲಾರಿಯೋನಿಟ್ ವಾದಕ ಪಂ.ನರಸಿಂಹಲು ವಡವಾಟಿ ಹಾಗೂ ಕರ್ನಾಟಕ  ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಸದಸ್ಯರೂ ಖ್ಯಾತ ಹಿಂದೂಸ್ಥಾನಿ ಗಾಯಕರೂ ಆದ   ವಡವಾಟಿ ಶಾರದಾ ಭರತ್ ಅವರು ಹಾಡಿದ  ಧ್ವನಿ ಸುರಳಿ ಇದಾಗಿರುತ್ತದೆ ಎಂದು ತಿಳಿಸಿದ್ದಾರೆ.  ಕಾರ್ಯಕ್ರಮದ ಸಾನಿಧ್ಯವನ್ನು  ಶ್ರೀ ನಿರ್ಭಯಾನಂದ ಸ್ವಾಮೀಜಿ ಅಧ್ಯಕ್ಷರು, ಶ್ರೀ  ರಾಮಕೃಷ್ಣ ವಿವೇಕಾನಂದ  ಆಶ್ರಮ, ಗದಗ ಹಾಗೂ ಬಿಜಾಪುರ ಇವರು ವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಪಂನರಸಿಂಹಲು ವಡವಾಟಿಯವರು ವಹಿಸಿದರೆ, ಮುಖ್ಯ ಅತಿಥಿಗಳಾಗಿ   ಬಸವರಾಜ ಸ್ವಾಮಿ, ಸಂಪಾದಕರು ಸುದ್ದಿಮೂಲ ಇ
Image
  ಜು.28 ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ:                                                                             ನಾಗತಿಹಳ್ಳಿ ನಾಗರಾಜ್ ಹಾಗೂ ನರಸಿಂಗರಾವ್ ಸರ್ಕಿಲ್ ಗೆ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ವಿಶೇಷ  ಪ್ರಶಸ್ತಿ- ಆರ್ .ಗುರುನಾಥ.                                                                              ರಾಯಚೂರು,ಜು.25- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಜು. 28 ರಂದು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಗುರುನಾಥ ಹೇಳಿದರು.                                            ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 11 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನ( ರಂಗ ಮಂದಿರ ಹಿಂದುಗಡೆ) ದಲ್ಲಿ ನಡೆಯುವ ಕಾರ್ಯಕ್ರಮ ಉದ್ಘಾಟನೆಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ನೆರವೇರಿಸಲಿದ್ದು ಪ್ರಶಸ್ತಿ ಪ್ರದಾನವನ್ನು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ   ಡಾ.ಶರಣಪ್
Image
  ಕಾರ್ಗಿಲ್ 25 ನೇ ವರ್ಷದ ವಿಜಯೋತ್ಸವ ಸಂಭ್ರಮಾಚರಣೆ: ಯೋಧರಿಗೆ ಪ್ರತಿಯೊಬ್ಬರು ಗೌರವ ನೀಡಬೇಕು- ಚಕ್ರವರ್ತಿ ಸೂಲಿಬೆಲೆ .                                                          ರಾಯಚೂರು,ಜು.24- ದೇಶದಲ್ಲಿರುವ ಪ್ರತಿಯೊಬ್ಬ ನಾಗರೀಕನು ಯೋಧರಿಗೆ ಗೌರವ ನೀಡಬೇಕೆಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಯುವಾ ಬ್ರಿಗೇಡ್ ವತಿಯಿಂದ ಆಯೋಜಿಸಲಾದ ಕಾರ್ಗಿಲ್ 25ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.                                            ಭಾರತದ ಅವಿಭಾಜ್ಯ ಅಂಗವಾದ ಜಮ್ಮು ಕಾಶ್ಮೀರವನ್ನು ಯಾರಿಂದಲು ಬೇರ್ಪಡಿಸಲು ಸಾಧ್ಯವಿಲ್ಲವೆಂದ ಅವರು ಪಾಕಿಸ್ತಾನವು ಕಾರ್ಗಿಲ್ ಬೆಟ್ಟವನ್ನು ವಶಪಡಿಸಿಕೊಳ್ಳಲು ಹೋದ ಸಂದರ್ಭದಲ್ಲಿ ನಮ್ಮ ದೇಶದ ಯೋಧರು ತಮ್ಮ ಪ್ರಾಣಾರ್ಪಣೆ ಮಾಡಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ ಘಟನಾವಳಿಗಳನ್ನು ಸಚಿತ್ರವಾಗಿ ರೋಮಾಂಚನವಾಗಿ ಯುದ್ಧದ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಪಾಕಿಸ್ತಾನ ದೇಶ ಹುಟ್ಟಿದ ತದನಂತರ ಭಾರತದ ಮೇಲೆ ಯುದ್ಧ ಸಾರಿದ ಘಟನಾವಳಿ ಆಲಿಸಿದ ಅನೇಕರು ಕಣ್ಣಾಲೆಗಳು ಜಿನುಗಿದವು ದೇಶಪ್ರೇಮ ಪುಟಿದೆದ್ದಿತು . ಕಾರ್ಗಿಲ್ ಬೆಟ್ಟವನ್ನು ವಶಪಡಿಸಿಕೊಳ್ಳಲು ಹವಣಿಸಿದ ಪಾಕಿಸ್ತಾನದ ಹುಟ್ಟಿಡಗಿಸಿದ ನಮ್ಮ ಯೋಧರು ತಮ್ಮ ನೆಲದ ರಕ್ಷಣೆಗೆ ರಕ್ತ ಚೆಲ್ಲಿದ್ದನ್ನು ವಿವರಿಸಿದ
Image
  ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಬಾಬುರಾವ್ ನೇಮಕ ರಾಯಚೂರು, ಜು.24- ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಡಾ.ಬಾಬುರಾವ ಅವರನ್ನು ನಿಯುಕ್ತಿಗೊಳಿಸಿ ಅದೇಶಿಸಲಾಗಿದೆ. ನಿನ್ನೆ ಬೆಂಗಳೂರಿನಲ್ಲಿ ಜಿಲ್ಲಾಧ್ಯಕ್ಷ ಮತ್ತು ಶಾಸಕ  ಡಾ. ಶಿವರಾಜ ಪಾಟೀಲ್ ಅವರು ಡಾ.ಬಾಬುರಾವ ಅವರನ್ನು ನೇಮಕ ಮಾಡಿ ಅದೇಶಿಸಿದ್ದಾರೆ.                         ತಕ್ಷಣವೇ ಜವಾಬ್ದಾರಿ ವಹಿಸಿಕೊಂಡು ಪಕ್ಷ ಸಂಘಟನೆ ಮೂಲಕ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕೆಂದು ಸೂಚಿಸಲಾಗಿದೆ.
Image
ದರವೇಶ ಕಂಪನಿ ವಿರುದ್ಧ ವಂಚನೆ ಪ್ರಕರಣ ದಾಖಲು .              ರಾಯಚೂರು,ಜು.23- ದರವೇಶ ಕಂಪನಿ ವಿರುದ್ಧ ನಗರದ ಮಾರ್ಕೇಟ್ ಯಾರ್ಡ್ ಠಾಣೆಯಲ್ಲಿ ಹೂಡಿಕೆದಾರರ ದೂರಿನನ್ವಯ ವಂಚನೆ ಪ್ರಕರಣ ದಾಖಲಾಗಿದೆ.
Image
  ಜು.24 ಕ್ಕೆ ಕಾರ್ಗಿಲ್ ವಿಜಯದ 25 ನೇ ವರ್ಷದ ಸಂಭ್ರಮಾಚರಣೆ:         ಚಕ್ರವರ್ತಿ ಸೂಲಿಬೆಲೆಯವರಿಂದ ದಿಕ್ಸೂಚಿ ಭಾಷಣ  ರಾಯಚೂರು ಜು.23- ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಯುವಾ ಬ್ರಿಗೇಡ್ ಸಂಘಟನೆಯ ವತಿಯಿಂದ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಜು.24 ಕ್ಕೆ  'ಕಾರ್ಗಿಲ್ ಗೆಲುವಿಗೆ 25' ಎಂಬ ಸಂಭ್ರಮಾಚರಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಕೆ.ಬಸವರಾಜ ಬೊಮ್ಮನಾಳ ಹೇಳಿದರು. ಅವರಿಂದು  ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಯುವಾ ಬ್ರಿಗೇಡ್ ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಯವರಿಂದ ಕಾರ್ಗಿಲ್ ವಿಜಯದ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ ಎಂದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಲ್ಲೂರಿನ ದತ್ತಾತ್ರೇಯ ಮಠದ ಶ್ರೀ ಶಿವರಾಮ ಭಾರತೀ ಸ್ವಾಮೀಜಿ ವಹಿಸಲಿದ್ದಾರೆ ಎಂದು ಅವರು  ಸೂಲಿಬೆಲೆ ಅವರು  ಕಾರ್ಗಿಲ್ ವಿಜಯದಲ್ಲಿ ಬಲಿದಾನ ಮಾಡಿದ ವೀರ ಯೋಧರ ಕಥೆಗಳು, ಮತ್ತು ಬದುಕುಳಿದ ಯೋಧರ ಅನುಭವಗಳ ಸರಮಾಲೆಯ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು. ದೇಶಕ್ಕಾಗಿ ಪ್ರಾಣಕೊಟ್ಟ ವೀರ ಯೋಧರನ್ನು ಮರೆತ ದೇಶಕ್ಕೆ ಭವಿಷ್ಯವಿಲ್ಲ. ತಮ್ಮ ಪ್ರಾಣದ ಹಂಗನ್ನು ತೊರೆದು ದೇಶವನ್ನು ರಕ್ಷಿಸಿದ ಹುತಾತ್ಮರಿಗೆ ನಮಿಸುವ ಕಾರ್ಯಕ್ರಮ ಇದಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ವೀರ ಯೋಧರ ಸಾಹಸಗಾಥೆಗಳನ್ನು ಕೇಳೋಣ, ಯುವಕರಲ್ಲಿ ದ