
ಹಿರಿಯ ರಂಗಭೂಮಿ ಕಲಾವಿದೆ ಮಾಲತಿ ಸುಧೀರ್, ಖ್ಯಾತ ನಟಿ ಸೊನಾಲ್ ರನ್ನು ಭೇಟಿಯಾದ ಕರ್ನಾಟಕ ದಿನಪತ್ರಿಕೆಗಳ ಸಂಘದ ಪದಾಧಿಕಾರಿಗಳು ಜಯ ಧ್ವಜ ನ್ಯೂಸ್, ರಾಯಚೂರು,ಜೂ.29- ಕರ್ನಾಟಕ ದಿನಪತ್ರಿಕೆಗಳ ಸಂಘದ ರಾಜ್ಯ ಸಮಿತಿ ಪದಾಧಿಕಾರಿಗಳು ಇಂದು ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದ ಮಾಲತಿ ಸುಧೀರ್ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಸನ್ಮಾನಿಸಿ ಗೌರವಿಸಿದರು . ಕರ್ನಾಟಕ ದಿನಪತ್ರಿಕೆಗಳ ಸಂಘದ ರಾಜ್ಯಾಧ್ಯಕ್ಷರಾದ ಜಿ.ವೈ.ಪದ್ಮ ನಾಗರಾಜ್, ಉಪಾಧ್ಯಕ್ಷರಾದ ಅನೂಪ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾದ ಚನ್ನಬಸವ, ಖಜಾಂಚಿ ಖಾನ್ ಸಾಬ್ ಮೋಮಿನ್ ಹಾಗೂ ಬೆಂಗಳೂರು ವಿವಿ ಪ್ರೊಫೆಸರ್ ಸಮತಾ ದೇಶ ಮಾನೆ ಅವರೊಂದಿಗೆ ಮಾಲತಿ ಸುಧೀರ್ ಅವರು ತಮ್ಮ ವೃತ್ತಿ ರಂಗಭೂಮಿ ಕುರಿತು ನೆನಪುಗಳನ್ನು ಹಂಚಿಕೊಂಡರು. ನಾಟಕ ಕಂಪನಿ ಕಟ್ಟಿ ನಡೆಸಿಕೊಂಡು ಬಂದಿರುವ ಪರಿಯನ್ನು ಹಾಗೂ ಕಲಾವಿದರಾಗಿ ಎದುರಿಸಿರುವ ಅನುಭವಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮಾಲತಿ ಸುಧೀರ್, ಖ್ಯಾತ ಚಲನಚಿತ್ರ ನಟಿ ಸೊನಾಲ್ ಅವರು ಕೂಡ ಕರ್ನಾಟಕ ದಿನಪತ್ರಿಕೆಗಳ ಸಂಘದ ಪದಾಧಿಕಾರಿಗಳೊಂದಿಗೆ ಮಾತನಾಡಿ ಮಾದೇವ ಚಲನಚಿತ್ರ ಯಶಸ್ವಿಯಾಗಿ ಪ್ರದರ್ಶನ ಗೊಳ್ಳುತ್ತಿರುವ ಕುರಿತು ಸಂತಸ ಹಂಚಿಕೊಂಡರು.