ಕಾಡ್ಲೂರಲ್ಲಿ ಭಕ್ತಿಯಿಂದ ಶ್ರೀರಾಮೋತ್ಸವ ಆಚರಣೆ
ಕಾಡ್ಲೂರಲ್ಲಿ ಭಕ್ತಿಯಿಂದ ಶ್ರೀರಾಮೋತ್ಸವ ಆಚರಣೆ ರಾಯಚೂರು,ಮಾ.31- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ವನವಾಸಿ ಶ್ರೀ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ಸನ್ನಿದಾನದಲ್ಲಿ ಶ್ರೀರಾಮನವಮಿಯನ್ನು ಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಧ್ವಜಾರೋಹಣ, ಶ್ರೀ ರಾಮಾಷ್ಠಕ ಸ್ತೋತ್ರ, ವಾಯುಸ್ತುತಿ, ಅಷ್ಟೋತ್ತರ ಪಾರಾಯಣ. ಶ್ರೀರಾಮದೇವರಿಗೆ, ಶ್ರೀಪ್ರಾಣದೇವರಿಗೆ ಅಭಿಷೇಕ, ಅಲಂಕಾರ, ಶ್ರೀ ರಾಮದೇವರ ತೊಟ್ಟಿಲು ಮಹೋತ್ಸವ, ದಾಮೋದರ್ ಆಚಾರ್ ಪುರೋಹಿತ ಇವರಿಂದ ಶ್ರೀರಾಮದೇವರ ಕಥೆ ನಂತರ ನೈವೇದ್ಯ, ಮಹಾ ಮಂಗಳಾರತಿ, ಪಾನಕ, ಹಣ್ಣು ವಿತರಣೆ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭದಲ್ಲಿ ಕಾಡ್ಲೂರು ಸಂಸ್ಥಾನದ ರಂಗರಾವ್ ದೇಸಾಯಿ, ಜಯಕುಮಾರ ದೇಸಾಯಿ, ವಿಜಯಕುಮಾರ ದೇಸಾಯಿ , ಕೃಷ್ಣ ಸಂಗಮ, ವಿಜಯಕುಮಾರ ಜೋಷಿ, ಕೃಷ್ಣಮೂರ್ತಿ ಹೆಬಸೂರು, ವಿಪ್ರಶ್ರೀ ವೆಂಕಟೇಶ ರಾವ್, ಚಂದ್ರಕಾಂತ ವೈದ್ಯ, ಆನಂದ ಆಲೂರು, ರಾಘವೇಂದ್ರ, ಸತ್ಯನಾರಯಣ , ಸುವರ್ಣ ಬಾಯಿ ದೇಸಾಯಿ, ಅಶ್ವಿನಿ ದೇಸಾಯಿ ,ಲಕ್ಷ್ಮಿ ಇತರರು ಇದ್ದರು.