Posts

Showing posts from November, 2023

ಡಿ.1 ರಂದು ಪೂರ್ವಭಾವಿ ಸಭೆ

Image
  ಡಿ.1 ರಂದು ಪೂರ್ವಭಾವಿ ಸಭೆ   ರಾಯಚೂರು,ನ.30- ಶುಕ್ರವಾರ ಡಿ.1ರಂದು ಸಾಯಂಕಾಲ 5.00 ಗಂಟೆಗೆ ನಗರದ  ಸತ್ಯನಾಥ ಕಾಲೋನಿಯ ಪ್ರಾಣದೇವರ ದೇವಸ್ಥಾನದಲ್ಲಿ ಆಯೋಧ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಮ ಮಂದಿರದಲ್ಲಿ ಜನವರಿ 22ರಂದು ರಾಮದೇವರ ಪ್ರತಿಷ್ಠಾಪನೆ ಯಾಗಲಿದ್ದು ಅದರ ಅಂಗವಾಗಿ ಅಂದು ರಾಯಚೂರಿನ ದೇವಸ್ಥಾನಗಳಲ್ಲಿ ರಾಮ ತಾರಕ ಜಪ, ಹೋಮ, ದೀಪಾಲಂಕಾರ ಮತ್ತು ಇತರ  ಕಾರ್ಯಕ್ರಮವನ್ನು ಹಮ್ಮಿ ಕೊಳ್ಳುವುದರ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ ದಯವಿಟ್ಟು ಎಲ್ಲಾ ರಾಮ ಭಕ್ತರು ಹಾಗೂ ಹಿಂದೂ ಸಮಾಜ ಎಲ್ಲಾ ಬಾಂಧವರು ಈ ಸಭೆಗೆ ಬಂದು ತಮ್ಮ ಸಲಹೆ ಸೂಚನೆ ನೀಡಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಡಿ.ಕೆ.ಮುರಳೀಧರ್  ವಿನಂತಿಸಿಕೊಂಡಿದ್ದಾರೆ.

ಕಾಟೇ ದರ್ವಾಜಾ ಬಳಿ ಕಮಾನು ನಿರ್ಮಾಣ: ಸ್ಥಳದಲ್ಲಿ ಬಿಗುವಿನ ವಾತಾವರಣ.

Image
  ಕಾಟೇ ದರ್ವಾಜಾ ಬಳಿ ಕಮಾನು ನಿರ್ಮಾಣ: ಸ್ಥಳದಲ್ಲಿ ಬಿಗುವಿನ ವಾತಾವರಣ.                        ರಾಯಚೂರು,ನ.30- ನಗರದ ಸೂಪರ್ ಮಾರ್ಕೆಟ್ ಬಳಿಯ ಕಾಟೇ ದರ್ವಾಜಾ ಬಳಿ ಸ್ವಾಗತ ಕಮಾನು ನಿರ್ಮಾಣ ಸ್ಥಳದಲ್ಲಿ ಬೆಳಿಗ್ಗೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರ ಮತ್ತು ಅನ್ಯ ಕೋಮಿನ ಕೆಲ ಯುವಕರ  ಮಧ್ಯೆ ವಾಗ್ವಾದ ನಡೆಯಿತು.            ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ಪಾಪಾರೆಡ್ಡಿ, ಇನ್ನಿತರರು ಉಭಯ ಪ್ರತಿಭಟನಾ ಕರಾರನ್ನು ಸಮಾಧಾನಪಡಿಸಿದರು.               ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದ ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದಿದ್ದಾರೆ ಎನ್ನಲಾಗಿದೆ.

ಭಕ್ತಿಯಿದ್ದಲ್ಲಿ ಭಗವಂತ ನೆಲೆಸುತ್ತಾನೆ- ಶ್ರೀ ವಿಶ್ವವಲ್ಲಭ ತೀರ್ಥರು.

Image
  ಭಕ್ತಿಯಿದ್ದಲ್ಲಿ ಭಗವಂತ ನೆಲೆಸುತ್ತಾನೆ- ಶ್ರೀ ವಿಶ್ವವಲ್ಲಭ ತೀರ್ಥರು.                      ರಾಯಚೂರು,ನ.30- ಭಕ್ತಿಯಿದ್ದಲ್ಲಿ ಭಗವಂತ ನೆಲೆಸಿರುತ್ತಾನೆಂದು ಸೋದೆ ಶ್ರೀ ವಾದಿರಾಜತೀರ್ಥ ಮಠದ ಶ್ರೀ ವಿಶ್ವವಲ್ಲಭ ತೀರ್ಥ  ಶ್ರೀಪಾದಂಗಳವರು  ನುಡಿದರು.           ಅವರಿಂದು ನಗರದ ಕಾಡ್ಲೂರು ದೇಸಾಯಿಯವರ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿದರು.                                          ದೇವರ ಮೇಲೆ ಸದಾ ನಿಷ್ಕಲ್ಮಷ ಭಕ್ತಿಯಿರಬೇಕು ಆಗ ಮಾತ್ರ ಇಷ್ಟಾರ್ಥಗಳು ಸಿದ್ಧವಾಗುತ್ತವೆ ಎಂದರು. ದೇವರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದ ಅವರು ಧರ್ಮ ರಕ್ಷಣೆ ನಮ್ಮೆಲ್ಲರ ಹೊಣೆಯಂದರು.                                            ಈ ಸಂದರ್ಭದಲ್ಲಿ  ಜಯಕುಮಾರ ದೇಸಾಯಿ, ವಿಜಯ್ ಕುಮಾರ್,ಪ್ರಹಲ್ಲಾದ, ರಂಗಾಚಾರ್ ಜೋಷಿ, ಸುವರ್ಣ ಬಾಯಿ ದೇಸಾಯಿ, ಬಿಂದು, ಪಲ್ಲವಿ ಇನ್ನಿತರರು ಇದ್ದರು.

ವಡ್ಲೂರು: ಛಲವಾದಿ ಸಮುದಾಯಕ್ಕೆ ಸಮುದಾಯ ಭವನಕ್ಕೆ ಒತ್ತಾಯ.

Image
ವಡ್ಲೂರು: ಛಲವಾದಿ ಸಮುದಾಯಕ್ಕೆ ಸಮುದಾಯ ಭವನಕ್ಕೆ ಒತ್ತಾಯ.        ರಾಯಚೂರು,ನ.30-ವಡ್ಲೂರು ಗ್ರಾಮದಲ್ಲಿ ಛಲವಾದಿ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ  ಜೈ ಭೀಮ್ ನವ ಚೈತನ್ಯ ಸಂಘ ಒತ್ತಾಯ ಮಾಡಿತು.                                   ಜಿ.ಪಂ ಸಿಇಓ ಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು ಯದ್ಲಾಪೂರು ಗ್ರಾ.ಪಂ ವ್ಯಾಪ್ತಿಯ ವಡ್ಲೂರು ಗ್ರಾಮದಲ್ಲಿ ಸುಮಾರು 60-70 ಕುಟುಂಬಗಳು ವಾಸವಾಗಿದ್ದು  ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಮಾಡಿಕೊಳ್ಳುವಷ್ಟು ಹಣದ ಅನೂಕೂಲವಿಲ್ಲದ ಜನರಿಗೆ ಸಮುದಾಯ ಭವನ ಅತ್ಯವಶ್ಯಕವಾಗಿದ್ದು ಗ್ರಾಮಸ್ಥರ  ಮಂಗಳ ಕಾರ್ಯಕ್ರಮಕ್ಕೆ ಸಮುದಾಯ ನಿರ್ಮಿಸಬೇಕೆಂದು ಒತ್ತಾಯಿಸಿದರು.                                             ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಜು, ಮಾರುತಿ, ಭೀಮರಾಯ, ಸಂಗಮೇಶ ಇನ್ನಿತರರು ಇದ್ದರು.

ಮಟಮಾರಿ ಶ್ರೀ ಮಹಾಂತೇಶ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ

Image
ಮಟಮಾರಿ ಶ್ರೀ ಮಹಾಂತೇಶ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ ರಾಯಚೂರು,ನ.30- ಆದರ್ಶ ವಿದ್ಯಾಲಯ ನೀರಮಾನವಿ ಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2023-24 ನೇ ಸಾಲಿನಲ್ಲಿ ಶ್ರೀ ಮಹಾಂತೇಶ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆ (ಪ್ರೌಢ ವಿಭಾಗ) ಮಟಮಾರಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿಯಾದ ಸಂಗೀತಾ ತಂದೆ ವಿರುಪಾಕ್ಷ  ಜನಪದ ಗೀತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಶಾಲೆಯ ಮುಖ್ಯಗುರುಗಳು ಸಲೀಮ್ ಪಾಶಾ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಶಾಲೆಗೆ ಕೀರ್ತಿ ತಂದಿದ್ದಕ್ಕಾಗಿ ವಿದ್ಯಾರ್ಥಿನಿಗೆ ಶುಭ ಹಾರೈಸಿದ್ದಾರೆ.

ಭಕ್ತಿ ಪಂಥದ ಮುಖ್ಯ ಹರಿದಾಸರು ಶ್ರೀ ಕನಕದಾಸರು.

Image
  ಭಕ್ತಿ ಪಂಥದ ಮುಖ್ಯ ಹರಿದಾಸರು ಶ್ರೀ ಕನಕದಾಸರು.                                                         ಕ ನ್ನಡ ನಾಡು ಅನೇಕ ದಾಸರು ಶರಣರು  ನೆಲೆಸಿದ ನೆಲವಾಗಿದೆ ಈ ಪುಣ್ಯ ನೆಲದಲ್ಲಿ 15 ಮತ್ತು 16 ನೇ ಶತಮಾನದಲ್ಲಿ ಭಕ್ತಿ ಪರಂಪರೆಯ ಮುಖ್ಯವಾದ ಜನಪ್ರಿಯ ದಾಸರಲ್ಲಿ ಒಬ್ಬರು ಶ್ರೀ ಕನಕದಾಸರು.                                      ಪುರಂದರ ದಾಸರ ಸಮಕಾಲೀನ ಶ್ರೇಷ್ಠ ಕೀರ್ತನಕಾರರು  ಸಹ ಆಗಿದ್ದರು ಕನಕದಾಸರು. ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದವರು, ಅವರು 1509ರಲ್ಲಿ ಬೀರಪ್ಪ ದಂಪತಿಗಳ ಮಗನಾಗಿ ಜನಸಿದರು .                                           ಅಂದಿನ ಕಾಲದಲ್ಲಿ ಜಾತಿ ತಾರತಮ್ಯದ ಬಗ್ಗೆ ವೈಚಾರಿಕ ಸಮರ ಸಾರಿದರು ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟ ಬಂಕಾಪುರ ಪ್ರಾಂತದಲ್ಲಿ   ಸೇನಾ  ದಂಡನಾಯಕರಾಗಿ...

ಮಂತ್ರಾಲಯ: ಧಾತ್ರಿ ಹೋಮ ಮತ್ತು ಕೋಟಿ ಪುಷ್ಪಾರ್ಚನೆ.

Image
  ಮಂತ್ರಾಲಯ: ಧಾತ್ರಿ ಹೋಮ ಮತ್ತು ಕೋಟಿ ಪುಷ್ಪಾರ್ಚನೆ.                ರಾಯಚೂರು,ನ.29- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಾರ್ತಿಕ ಮಾಸ ಅಂಗವಾಗಿ ಧಾತ್ರಿ ಹೋಮ‌ ಹಾಗು ಕೋಟಿ ಪುಷ್ಪಾರ್ಚನೆ ಕಾರ್ಯಕ್ರಮ ನೆರವೇರಿತು. ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ರಾಯರ ಬೃಂದಾವನಕ್ಕೆ ಕೋಟಿ ಪುಷ್ಪಾರ್ಚನೆ ಹಾಗೂ ಧಾತ್ರಿ ಹೋಮ ನೆರವೇರಿಸಿದರು.ಧಾರವಾಡದ ಅಖಿಲ ಭಾರತ       ಶ್ರೀ  ವಿಜಯ ದಾಸರ ಕ್ಷೇತ್ರ ಆರಾಧನಾ ಸಮಿತಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ: ಸಮೃಧ್ ಗೆ ದ್ವಿತೀಯ ಸ್ಥಾನ

Image
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ: ಸಮೃಧ್ ದ್ವಿತೀಯ ಸ್ಥಾನ                      ರಾಯಚೂರು,ನ.29- ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಸಮೃಧ್ ಇವರಿಗೆ ದ್ವಿತೀಯ ಸ್ಥಾನ ಲಭಿಸಿದೆ.                 ನಿನ್ನೆ ಮಾನವಿ ತಾಲೂಕಿನ ನೀರಮಾನ್ವಿ ಆದರ್ಶ ವಿದ್ಯಾಲಯದಲ್ಲಿ  ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ  ಹೆಚ್ ಕೆ ಇ ಎಸ್  ನ್ಯಾಷನಲ್  ಇಂಗ್ಲಿಷ್  ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಸಮೃಧ್ ತಂದೆ ಪ್ರಕಾಶ್ ರವರಿಗೆ ಮಿಮಿಕ್ರಿ ವಿಭಾಗದಲ್ಲಿ ಉತ್ತಮ‌ ಪ್ರದರ್ಶನ ತೋರಿದ್ದಕ್ಕಾಗಿ ದ್ವಿತೀಯ ಸ್ಥಾನ ಲಭಿಸಿದೆ. ಕಾರ್ಯಕ್ರಮದಲ್ಲಿ ಶಾಸಕರಾದ ಹಂಪಯ್ಯ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು, ಶಿಕ್ಷಕರು ಭಾಗವಹಿಸಿದ್ದರು.

ಡಿ.4 ರಂದು ಉಚಿತ 'ಐಎಎಸ್ ಓರಿಯೆಂಟೆಷನ್' ಕಾರ್ಯಕ್ರಮ

Image
  ಡಿ.4 ರಂದು ಉಚಿತ 'ಐಎಎಸ್ ಓರಿಯೆಂಟೆಷನ್' ಕಾರ್ಯಕ್ರಮ ರಾಯಚೂರು,ನ.29- ಐಎಎಸ್,ಐಪಿಎಸ್, ಕೆಎಎಸ್ ಸೇರಿದಂತೆ ಯುಪಿಎಸ್ಸಿ ಸಂಬಂಧಿತ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಉಚಿತ ಓರಿಯೆಂಟೆಷನ್ ಕಾರ್ಯಕ್ರಮ ಡಿ.4, ಸೋಮವಾರ ನಗರದ ಶ್ರೀ ವೆ೦ಕಟೇಶ್ವರ ಕಾಲೇಜಿನಲ್ಲಿ ನಡೆಯಲಿದೆ. ಸಮುತ್ಕರ್ಷ ಐಎಎಸ್ ಅಕಾಡೆಮಿ ಹುಬ್ಬಳ್ಳಿ & ಶ್ರೀ ವೆ೦ಕಟೇಶ್ವರ ಕಾಲೇಜು,ಮ೦ತ್ರಾಲಯ ರಸ್ತೆ, ರಾಯಚೂರು ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಯುಪಿಎಸ್ಸಿ ಸಂಬಂಧಿತ ಪರೀಕ್ಷಾ ತಯಾರಿ ನಡೆಸುತ್ತಿರುವವರಿಗಾಗಿ ಅಂದು ಬೆಳಿಗ್ಗೆ 11 ರಿಂದ 1 ಗ೦ಟೆಯವರೆಗೆ ಎರಡು ಗಂಟೆಗಳ ಕಾಲ 'ಐಎಎಸ್ ಪರೀಕ್ಷೆಯನ್ನು ಎದುರಿಸಿ, ಉತ್ತೀರ್ಣರಾಗುವುದು ಹೇಗೆ ?' ಎಂಬ ವಿಷಯದ ಮೇಲೆ ಉಚಿತ ಓರಿಯೆಂಟೆಷನ್ ಕಾರ್ಯಕ್ರಮ ನಡೆಯಲಿದೆ. ಪದವಿ ಮುಗಿಸಿರುವ ಅಥವಾ ಅಂತಿಮ ವರ್ಷದಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಆಗಮಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 9663400284 ಸಂಪರ್ಕಿಸಬಹುದಾಗಿದೆ ಎಂದು ಅಶೋಕ್ ಪಾಟೀಲ್ ಅತ್ತನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂ ಧರ್ಮ ಉಳಿದರೆ ಮಾತ್ರ ಬ್ರಾಹ್ಮಣತ್ವ ಉಳಿಯುತ್ತದೆ- ಸೋದೆ ಶ್ರೀ ವಿಶ್ವ ವಲ್ಲಭ ತೀರ್ಥರು.

Image
  ಹಿಂದೂ ಧರ್ಮ ಉಳಿದರೆ ಮಾತ್ರ ಬ್ರಾಹ್ಮಣತ್ವ ಉಳಿಯುತ್ತದೆ- ಸೋದೆ ಶ್ರೀ ವಿಶ್ವ ವಲ್ಲಭ ತೀರ್ಥರು.                ರಾಯಚೂರು,ನ.28- ಹಿಂದೂ ಧರ್ಮ ಉಳಿದರೆ ಮಾತ್ರ ಬ್ರಾಹ್ಮಣತ್ವ ಉಳಿಯುತ್ತದೆ ಎಂದು ಸೋದೆ ಶ್ರೀ ವಾದಿರಾಜ ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವವಲ್ಲಭ ತೀರ್ಥರು ನುಡಿದರು. ಅವರಿಂದು ನಗರದಲ್ಲಿ ಆಶೀರ್ವಚನ ನೀಡಿ ಹಿಂದೂ ಧರ್ಮ ಬಹು ಪುರಾತನ ಧರ್ಮ ಇಲ್ಲಿ ಅನೇಕ ಧಾರ್ಮಿಕ ಸಾಂಸ್ಕೃತಿಕ ಆಚಾರ ವಿಚಾರಗಳಿವೆ ಭಗವಂತನ ಭಕ್ತಿಯ ಬಗ್ಗೆ ಮಹತ್ವವಿದೆ ಭಕ್ತಿಗೆ ನಿದರ್ಶನ ಹನುಮಂತ ದೇವರು ಎಂದ ಅವರು ಶ್ರೀ ವಾದಿರಾಜ ಶ್ರೀಗಳು ಭಕ್ತಿಯ ಬಗ್ಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ ಎಂದರು. ನಗರದಲ್ಲಿ ಯುವಕರು ಭವ್ಯವಾಗಿ ನಮಗೆ ಸ್ವಾಗತ ಕೋರಿದ್ದಾರೆ ಎಂದು ಅವರು ನಗರದ ಪ್ರಮುಖ ರಸ್ತೆಗಳಲ್ಲಿ ಬಜರಂಗಿಯ ಭಾವಚಿತ್ರ ಧ್ವಜಗಳು ರಾರಾಜಿಸಿದವು ಎಂದ ಅವರು ಯುವಕರು ಧರ್ಮ ರಕ್ಷಣೆಗೆ ಮಹತ್ವ ನೀಡಬೇಕೆಂದರು. ಪ್ರಾರಂಭದಲ್ಲಿ ಕೃಷಿ ವಿವಿಯಿಂದ ನೂರಾರು ದ್ವಿಚಕ್ರ ವಾಹನಗಳ ಮೂಲಕ ಜವಾಹರ್ ನಗರ ರಾಯರ ಮಠಕ್ಕೆ ಶ್ರೀಪಾದಂಗಳವರನ್ನು ಸ್ವಾಗತಿಸಲಾಯಿತು.                                  ನಂತರ ಕೋಟೆಯ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಆಶೀರ್ವಚನ ,ತೊಟ್ಟಿಲು ಪೂಜೆ ಹಾಗೂ ಭೂತರಾಜರ ಬಲಿ ನಡೆ...

ಅಲೆಮಾರಿಯ, ಅರೆ ಅಲೆಮಾರಿ ಜನಾಂಗವನ್ನು ಮುಖ್ಯವಾಹಿನಿಗೆ ತರಬೇಕು: ಕಾಂತರಾಜು ವರದಿ ಪಾರದರ್ಶಕವಾಗಿ ಮಂಡನೆಯಾಗಲಿ- ರವೀಂದ್ರಶೆಟ್ಟಿ.

Image
  ಅಲೆಮಾರಿಯ, ಅರೆ ಅಲೆಮಾರಿ ಜನಾಂಗವನ್ನು ಮುಖ್ಯವಾಹಿನಿಗೆ ತರಬೇಕು:                        ಕಾಂತರಾಜು ವರದಿ ಪಾರದರ್ಶಕವಾಗಿ ಮಂಡನೆಯಾಗಲಿ- ರವೀಂದ್ರಶೆಟ್ಟಿ .    ರಾಯಚೂರು,ನ.28- ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಸರ್ಕಾರ ಮೂಲಭೂತ ಸೌಕರ್ಯ ಕಲ್ಪಿಸಿ ಮುಖ್ಯವಾಹಿನಿಗೆ ತರಬೇಕೆಂದು ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರಶೆಟ್ಟಿ ಹೇಳಿದರು .                ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ನಾನು ಯಡಿಯೂರಪ್ಪ ಸಿಎಂ  ಆಗಿದ್ದಾಗ ಸುಮಾರು 18 ತಿಂಗಳು ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದೆ ಆಗ ವಂಚಿತ ಜನಾಂಗಕ್ಕೆ ಅವರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯ ಒದಗಿಸುವ ಪ್ರಾಮಾಣಿಕತೆ ಮೆರೆದಿದ್ದೆ ಇದೀಗ ಮಾಜಿ ಅಧ್ಯಕ್ಷನಾಗಿ ಅವರ ಸೌಲಭ್ಯಕ್ಕಾಗಿ ಶ್ರಮಿಸುತ್ತಿದ್ದೆನೆಂದ ಅವರು ಈ ಜನಾಂಗದವರು ಡೇರೆ , ಟೆಂಟ್ ಹಾಕಿಕೊಂಡು ಜೀವನ ಮಾಡುತ್ತಾರೆ ಅವರಿಗೆ ಸೂರು ಮತ್ತು ಸ್ಮಶಾನ ಭೂಮಿ ಸೇರಿದಂತೆ ಇನ್ನಿತರ ನಾಗರೀಕ ಸೌಲಭ್ಯ ಸರ್ಕಾರ ವದಗಿಸಬೇಕೆಂದರು.             ಕಾಂತರಾಜು ನೀಡಿರುವ ಸಾಮಾಜಿಕ , ಆರ್ಥಿಕ ಜನಗಣತಿ ವರದಿಯನ್ನು ಸರ್ಕಾರ ಪಾರದರ್ಶಕವಾಗಿ ಮಂಡಿಸಬೇಕೆಂದರು....

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಡಿ.3 ರಂದು ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಗ್ರಂಥ ಬಿಡುಗಡೆ - ಮಿರ್ಜಾಪೂರು.

Image
  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಡಿ.3 ರಂದು  ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಗ್ರಂಥ ಬಿಡುಗಡೆ - ಮಿರ್ಜಾಪೂರು.                    ರಾಯಚೂರು,ನ.28- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಡಿ.3 ರಂದು ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಗ್ರಂಥ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಚಂದ್ರಶೇಖರ ಮಿರ್ಜಾಪೂರು ಹೇಳಿದರು.                  ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ  ಅಂದು ಬೆಳಿಗ್ಗೆ 10.30ಕ್ಕೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಿಚ್ಚಾಲಿ ಮಟಮಾರಿ ಗಬ್ಬೂರು ಸಾವಿರ ದೇವರ ಸಂಸ್ಥಾನ ಮಠ ವೀರಭದ್ರ ಶಿವಾಚಾರ್ಯ ಶ್ರೀ ಗಳು, ಸೇರಿದಂತೆ ಅನೇಕ ಮಠಾಧೀಶರು ವಹಿಸಲಿದ್ದು ,ಉದ್ಘಾಟನೆಯನ್ನು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ನೆರವೇರಿಸಲಿದ್ದು , ಬಯಲು ಸಿರಿ ಬೆಳಕು  ಪ್ರಶಸ್ತಿಯನ್ನು ಬಿ.ಎಸ್ ಪರಮಶಿವಯ್ಯ ರವರಿಗೆ  ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಪ್ರದಾನ ಮಾಡಲಿದ್ದು, ಅಧ್...

ಮಂತ್ರಾಲಯದಲ್ಲಿ ವೈಭವದಿಂದ ತುಂಗಾರತಿ ಕಾರ್ಯಕ್ರಮ: ದೀಪ ಪ್ರಜ್ವಾಲನೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿ- ಶ್ರೀ ಸುಬುಧೇಂದ್ರತೀರ್ಥರು.

Image
  ಮಂತ್ರಾಲಯದಲ್ಲಿ ವೈಭವದಿಂದ ತುಂಗಾರತಿ ಕಾರ್ಯಕ್ರಮ:                  ದೀಪ ಪ್ರಜ್ವಾಲನೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿ- ಶ್ರೀ ಸುಬುಧೇಂದ್ರತೀರ್ಥರು.        ರಾಯಚೂರು,ನ.27- ದೀಪ ಪ್ರಜ್ವಾಲನೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಹೇಳಿದರು.                                        ಅವರಿಂದು ಮಂತ್ರಾಲಯದಲ್ಲಿ ತುಂಗಭದ್ರಾ ನದಿಯಲ್ಲಿ ತುಂಗಾರತಿ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.                                          ಕಾರ್ತಿಕ ಮಾಸದಲ್ಲಿ ದೀಪವನ್ನು ಬೆಳಗುವುದರಿಂದ ಬೆಳಕಿನತ್ತ ಸಾಗುತ್ತೇವೆ ದೀಪ ಹಚ್ಚುವುದರಿಂದ ಪಾಪ ತೊಲಗುತ್ತವೆ ನಮಗೆ ಉತ್ತಮ ಬುದ್ಧಿ ಲಭಿಸುತ್ತದೆ ಎಂದರು. ಮೊದಲಿಗೆ ಶ್ರೀ  ಪ್ರಹಲ್ಲಾದರಾಜರ ಮೂರ್ತಿಯ ಮೆರವಣಿಗೆ ನದಿ ತೀರದವರೆಗೂ ನೆರವೇರಿತು . ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ದಾಸವಾಣಿ ನಡೆಯಿ...

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ: ಮುದ್ರಣ ಮಾಧ್ಯಮ ವಿಶ್ವಾಸಾರ್ಹತೆಗೆ ಪಾತ್ರವಾಗಿದೆ - ರವೀಂದ್ರ ಭಟ್.

Image
ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ:    ಮುದ್ರಣ ಮಾಧ್ಯಮ ವಿಶ್ವಾಸಾರ್ಹತೆಗೆ ಪಾತ್ರವಾಗಿದೆ- ರವೀಂದ್ರ ಭಟ್               ರಾಯಚೂರು,ನ.26- ದೃಶ್ಯ ಮಾಧ್ಯಮ ಭರಾಟೆಯಲ್ಲಿಯೂ ಮುದ್ರಣ ಮಾಧ್ಯಮ ಓದುಗರ  ವಿಶ್ವಾಸಾರ್ಹತೆಗೆ ಪಾತ್ರವಾಗಿದೆ ಎಂದು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಹೇಳಿದರು. ಅವರಿಂದು ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ 1966 ರಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಥಾಪನೆ ದಿನವನ್ನು ರಾಷ್ಟ್ರೀಯ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ ಇಂದು ಪತ್ರಿಕಾ ಕ್ಷೇತ್ರ ಸಂಕೀರ್ಣ ಕಾಲಘಟ್ಟದಲ್ಲಿದೆ ಎಂದ ಅವರು ನಾವು ಸಣ್ಣವರಿದ್ದಾಗ  ಹಠ ಮಾಡಿದಾಗ ತಂದೆ ತಾಯಿಗಳು ಓದಲು ಪೇಪರ್ ನೀಡುತ್ತಿದ್ದರು ಈಗಿನ ಹುಡುಗರು ಹಠ ಮಾಡಿದಾಗ ತಂದೆ ತಾಯಿಗಳು ಮೋಬೈಲ್ ನೀಡುತ್ತಾರೆ ಈಗ ಮೋಬೈಲ್ ಇದ್ದವರು ಎಲ್ಲರು ಪತ್ರಕರ್ತರೆ ಎಂದು ಮಾರ್ಮಿಕವಾಗಿ ನುಡಿದರು. ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತೀಯ ಮಾಧ್ಯಮ ಕಳವಳಕಾರಿ ಹಂತದಲ್ಲಿದೆ ಅದನ್ನು ನಾವೆಲ್ಲರು ಮೇಲಕ್ಕೆತ್ತಬೇಕು ಎಂದರು. ವಿದ್ವಾಂಸರು ಎಲ್ಲರು ಪತ್ರಕರ್ತರೆ ಆದರೆ ಪತ್ರಕರ್ತರು ಎಲ್ಲರು ವಿದ್ವಾಂಸರು ಎಂಬ ಭ್ರಮೆ ಬೇಡವೆಂದರು. ಉತ್ತಮ ಪತ್ರಕರ್ತನಿಗೆ ಯಾರ ಬಳಿ ಏನು ಕೇಳಿದರೆ ನಿಖರ ಮಾಹಿತಿ ದೊ...

ಕನ್ನಡ ಭಾಷೆ ಮನೆ ಮನೆಗಳಲ್ಲಿ ಮೊಳಗಲಿ: ನ.28 ರಂದು ಕನ್ನಡ ಸಂಘ ಉದ್ಘಾಟನೆ- ನಾಗರಾಜ.

Image
ಕನ್ನಡ ಭಾಷೆ ಮನೆ ಮನೆಗಳಲ್ಲಿ ಮೊಳಗಲಿ:  ನ.28 ರಂದು ಕನ್ನಡ ಸಂಘ ಉದ್ಘಾಟನೆ- ನಾಗರಾಜ .                                                   ರಾಯಚೂರು,ನ.25- ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕನ್ನಡ ಸಂಘದ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ನ.28 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಂಘದ  ಅಧ್ಯಕ್ಷ ಪಲುಗುಲ ನಾಗರಾಜ್ ಹೇಳಿದರು. ಅವರಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ನ.28 ರಂದು ನಗರದ ಬೊಳಮಾನದೊಡ್ಡಿ ರಸ್ತೆಯ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಷಿ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಕನ್ನಡ ಸಂಘದ ಅಧ್ಯಕ್ಷ ಪಲಗುಲ ನಾಗರಾಜ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಯಚೂರು ವಿವಿ ಕುಲಪತಿ ಪ್ರೊ.ಡಾ.ಹರೀಶ ರಾಮಸ್ವಾಮಿ, ಮಾಜಿ ಶಾಸಕ ಎಂ.ಪಾಪಾರೆಡ್ಡಿ,ಜಿಲ್ಲಾ ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ, ಹಿರಿಯ ಸಾಹಿತಿ ಡಾ.ಜಯಲಕ್ಷ್ಮೀ ಮಂಗಳಮೂರ್ತಿ,ಮಾಲತಿ ಮಹೇಶ್ ಜೋಷಿ,ದಾಸೋತ್ಸವ ಸಮಿತಿ ಅಧ್ಯಕ್ಷ ವೆಂಕಟರಾವ್ ಕುಲಕರ್ಣಿ, ಕನ್ನಡ ಸಂಘ ಕಾರ್ಯದರ್ಶಿ ಪ್ರಸನ್ನ ಆಲಂಪಲ್ಲಿ ಮು...

ನಾಳೆ ನಗರದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ: ಬಿ.ವೆಂಕಟ್ ಸಿಂಗ್ ರವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ -ಗುರುನಾಥ.

Image
 ನಾಳೆ ನಗರದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ:                ಬಿ.ವೆಂಕಟ್ ಸಿಂಗ್ ರವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ -ಗುರುನಾಥ.                                        ರಾಯಚೂರು,ನ.25- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟ್ರಸ್ ಗಿಲ್ಡ್ ಸಂಯುಕ್ತಾಶ್ರಯದಲ್ಲಿ ನ.26 ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಆರ್.ಗುರುನಾಥ ಹಾಗೂ ರಾಯಚೂರು ರಿಪೋರ್ಟ್ರಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ನಾಳೆ ಬೆಳಿಗ್ಗೆ 11ಕ್ಕೆ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು ಉದ್ಘಾಟನೆಯನ್ನು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ನೆರವೇರಿಸಲಿದ್ದು ಪ್ರಾಸ್ತಾವಿಕವಾಗಿ  ರಾಯಚೂರು ರಿಪೋರ್ಟ್ರಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಮಾತನಾಡಲಿದ್ದು , ಅಧ್ಯಕ್ಷತೆಯನ್ನು  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ ವಹಿಸಲಿದ್ದ...

ರಾಯಚೂರು ವಿವಿ ಗೆ ಭೂಮಿ ನೀಡಿದವರಿಗೆ ಭೂ ಪರಿಹಾರ ಹಾಗೂ ಉದ್ಯೋಗಕ್ಕೆ ಮನವಿ.

Image
  ರಾಯಚೂರು ವಿವಿ ಗೆ ಭೂಮಿ ನೀಡಿದವರಿಗೆ ಭೂ ಪರಿಹಾರ ಹಾಗೂ ಉದ್ಯೋಗಕ್ಕೆ ಮನವಿ.                ರಾಯಚೂರು,ನ.23-ರಾಯಚೂರು ವಿವಿ ಮಂಜೂರು ನಂತರ ಕಟ್ಟಡ ನಿರ್ಮಾಣಕ್ಕೆ ಭೂಮಿ ನೀಡಿದವರಿಗೆ ಭೂ ಪರಿಹಾರ ಮತ್ತು  ಉದ್ಯೋಗ ನೀಡುವಂತೆ ಮನವಿ ಮಾಡಲಾಯಿತು. ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ನಿಜಾಮುದ್ದೀನ್ ನೇತೃತ್ವದಲ್ಲಿ ವಿವಿ ಕುಲಪತಿ ಡಾ.ಹರೀಶ ರಾಮಸ್ವಾಮಿಗೆ ಮನವಿ ಸಲ್ಲಿಸಿದ ಭೂಮಿ ನೀಡಿದವರು ತಮ ಕುಟುಂಬದವರಿಗೆ ಉದ್ಯೋಗಕ್ಕೆ ಮನವಿ ಮಾಡಿದರು.                   ಈ ಸಂದರ್ಭದಲ್ಲಿ ಭೂಮಿ ನೀಡಿದ ರೈತರಿದ್ದರು.

ಡಾ. ಪ್ರಮೋದ ಕಟ್ಟಿ ಇವರಿಗೆ ಅಂತರರಾಷ್ಟ್ರೀಯ ಫೆಲೋಶಿಪ್

Image
  ಡಾ. ಪ್ರಮೋದ ಕಟ್ಟಿ ಇವರಿಗೆ ಅಂತರರಾಷ್ಟ್ರೀಯ ಫೆಲೋಶಿಪ್    ರಾಯಚೂರು,ನ.23- ಭಾರತೀಯ ವಿಶ್ವವಿದ್ಯಾಲಯಗಳ ಫೆಡರೇಶನ್, ಅಂತರರಾಷ್ಟ್ರೀಯ ವಿಜಾ ್ಞನ ಮತು ್ತ ಸಂಶೋಧನೆ ಅಕಾಡಮಿ ಕೋಲ್ಕತ್ತಾ ಮತ್ತು ಕೃಷಿ  ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇವರ  ಸಂಯುಕ್ತ  ಆಶ್ರಯದಲ್ಲಿ  ಕೃಷಿ ವಿಜ್ಞಾನಗಳ  ವಿಶ್ವವಿದ್ಯಾಲಯ ಬೆಂಳೂರಿನಲ್ಲಿ ನಡೆಯುತ್ತಿರುವ ೨ನೇ ಅಂತರರಾಷ್ಟಿçÃಯ ಕಾರ್ಯಗಾರದಲಿ ್ಲ  ಡಾ. ಪ್ರಮೋದಕಟಿ ್ಟ, ಪ್ರಾಧ್ಯಾಪಕರು ಮತ್ತು ಹಣಕಾಸು ನಿಯಂತ್ರಣಾಧಿಕಾರಿಗಳು, ಕೃಷಿ ವಿಜಾ ್ಞನಗಳ  ವಿಶ್ವವಿದ್ಯಾಲಯ, ರಾಯಚೂರಿನಲಿ ್ಲ ಕಳೆದ ೨೭ ವರ್ಷದಿಂದ ಶಿಕ್ಷಣ, ಸಂಶೋಧನೆ, ವಿಸ್ತರಣೆ,  ಆಡಳಿತ ಮತ್ತು ಪ್ರಕಟಣೆ ವಿಭಾಗದಲಿ ್ಲ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರತಿಷ್ಠಿತ  ಅಂತರರಾಷ್ಟಿçÃಯ ವಿಜ್ಞಾನ ಮತ್ತು ಸಂಶೋಧನೆ ಅಕಾಡಮಿ ಕೋಲ್ಕತ್ತಾ ಇವರು ಶ್ರೀಯುತರಿಗೆ  ಅಕಾಡಮಿ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಿದೆ.   ಈ ಅಂತರಾಷ್ಟ್ರೀಯ  ಕಾರ್ಯಗಾರ ದಲ್ಲಿ  ವಿಶ ್ವವಿದ್ಯಾಲಯಗಳ ಫೆಡರೇಷನ್  ಕಾರ್ಯದರ್ಶಿ ಡಾ. ತನ್ಮಯ ರುದ್ರ,ಐಎಎಸ್ ಆರ್ ಅಧ್ಯಕ್ಷ ಡಾ. ಸುಧೀಪ ಭರತ, ಕೃಷಿ ವಿಜ್ಞಾನಗಳ  ವಿಶ್ವವಿದ್ಯಾಲಯ, ರಾಯಚೂರಿನ ಕುಲಪತಿಗಳಾದ ಡಾ. ಎಮ್. ಹನುಮಂತಪ್ಪ ಮತ್ತು ಕೃಷಿ  ವಿಜ್ಞಾನಗಳ ವಿಶ ್ವವಿದ್ಯಾಲಯ, ಬೆಂಗಳೂರಿನ ಕುಲಪತಿಗಳಾದ...

"ಸಮಾಜ-ಮಾಧ್ಯಮ-ಹೋರಾಟ" ಒಂದು ಅವಲೋಕನ ಕಾರ್ಯಕ್ರಮ ಉದ್ಘಾಟನೆ: ಮಾಧ್ಯಮ ಕ್ಷೇತ್ರದಲ್ಲಿ ಸಮಷ್ಟಿ ಭಾವ ಕ್ಷೀಣಿಸುತ್ತಿದೆ- ಕಪಗಲ್.

Image
"ಸಮಾಜ-ಮಾಧ್ಯಮ-ಹೋರಾಟ" ಒಂದು ಅವಲೋಕನ ಕಾರ್ಯಕ್ರಮ ಉದ್ಘಾಟನೆ:                                  ಮಾಧ್ಯಮ ಕ್ಷೇತ್ರದಲ್ಲಿ ಸಮಷ್ಟಿ ಭಾವ ಕ್ಷೀಣಿಸುತ್ತಿದೆ- ಕಪಗಲ್.                            ರಾಯಚೂರು,ನ.23- ಮಾಧ್ಯಮ ಕ್ಷೇತ್ರದಲ್ಲಿ ಸಮುಷ್ಠಿ ಭಾವ ಕ್ಷೀಣಿಸುತ್ತಿದೆ ಎಂದು ಹಿರಿಯ ಪತ್ರಕರ್ತರಾದ ಮೃತ್ಯುಂಜಯ ಕಪಗಲ್ ಅಭಿಪ್ರಾಯ ವ್ಯಕ್ತಪಡಿಸಿದರು.              ಅವರಿಂದು ನಗರದ ಪತ್ರಿಕಾ ಭವನದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟ್ರಸ್ ಗಿಲ್ಡ್ ವತಿಯಿಂದ ಹಮ್ಮಿಕೊಂಡಿದ್ದ "ಸಮಾಜ-ಮಾಧ್ಯಮ-ಹೋರಾಟ" ಒಂದು ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಮಾಧ್ಯಮ ಕ್ಷೇತ್ರ ಅನೇಕ ಬದಲಾವಣೆ ಕಂಡಿದೆ ಈ ಹಿಂದೆ ಸಮಾಜ ನಂತರ ಕುಟುಂಬ ತದನಂತರ ವ್ಯಕ್ತಿ ಎಂಬ ಸಮುಷ್ಠಿ ಭಾವ ಇತ್ತು ಈಗ ಅದು ವ್ಯತಿರಿಕ್ತವಾಗಿದ್ದು ನಾನು, ನನ್ನ ಕುಟುಂಬ ನಂತರ ಸಮಾಜ ಎಂಬ ಸ್ವಾರ್ಥ ಮನೆ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪತ್ರಿಕಾ ರಂಗ ಉದ್ಯಮವಾಗಿದೆ ಅದು ತಪ್ಪಲ್ಲ ಏಕೆಂದರೆ ಪತ್ರಿಕಾ ಸಿಬ್ಬಂದಿಗೆ ಸಂಬಳ, ಪತ್ರಿಕಾ ಮುದ್ರಣ...

ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಅಭಿಷೇಕ್ ಕುಮಾರ ದುರ್ವರ್ತನೆ ಖಂಡಿಸಿ ಮತ್ತು ಅವರ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪತ್ರಕರ್ತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Image
    ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಅಭಿಷೇಕ್ ಕುಮಾರ  ದುರ್ವರ್ತನೆ ಖಂಡಿಸಿ ಮತ್ತು ಅವರ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪತ್ರಕರ್ತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ರಾಯಚೂರು,ನ.23- ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಅಭಿಷೇಕ್ ಕುಮಾರ  ದುರ್ವರ್ತನೆ ಖಂಡಿಸಿ ಮತ್ತು ಅವರ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರಾಯಚೂರು ರಿಪೋಟರ‍್ಸ್ ಗಿಲ್ಡ್ ವತಿಯಿಂದ  ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸುದ್ದಿ ಮಾಡಲು ಹೋಗಿದ್ದ  ಸುವರ್ಣ ವಾಹಿನಿಯ ಜಿಲ್ಲಾ ವರದಿಗರರಾದ ಜಗನ್ನಾಥ ಪೂಜಾರ್ ಮತ್ತು ಅವರ ಕ್ಯಾಮರಾಮನ್ ಶ್ರೀನಿವಾಸ ಇವರ ಮೇಲೆ ರೈಲ್ವೆ ಪಿಎಸ್‌ಐ ಅಭಿಷೇಕ್ ಕುಮಾರ ಇವರು ಗೂಂಡಾ ವರ್ತನೆ ತೋರಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದನ್ನು ಉಭಯ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತದೆ.   ರಾಯಚೂರು ಸಮೀಪದ ಯರಮರಸ್ ರೈಲ್ವೆ ನಿಲ್ದಾಣದಲ್ಲಿ ಕಲ್ಲಿದ್ದಲು ಕಳ್ಳತನದ ವರದಿ ಕುರಿತಂತೆ ಕೆಪಿಸಿ ಅಧಿಕಾರಿಗಳ ತಂಡ ಪರಿಶೀಲನೆಗಾಗಿ ಆಗಮಿಸಿತ್ತು. ಇದರ ವರದಿಗಾಗಿ ನಾಲ್ಕಾರು ವರದಿಗಾರರು ಹೋಗಿದ್ದರು, ಅವರ ಜೊತೆ ಸುವರ್ಣ ವಾಹಿನಿ ವರದಿ ಜಗನ್ನಾಥ ಪೂಜಾರ ಮತ್ತು ಅವರ ಕ್ಯಾಮರಾಮನ್ ಶ್ರೀನಿವಾಸ ಸುದ್ದಿ ಮಾಡುತ್ತಿರುವಾಗ ಪಿಎಸ್‌ಐ ಅಭಿಷೇಕ ಕುಮಾರ  ಯಾರ ಅನುಮತಿ ಮೇಲೆ ರೈಲ್ವೆ ಫ್ಲಾಟ್‌ಫಾರಂ ಮೇಲೆ ಬಂದಿದ್ದೀರಿ ಎಂದು ಪ್ರಶ್ನಿಸಿ ತಮ್ಮ ಇತರ ...

ಭಗವದ್ಭಕ್ತಿ ಯನ್ನು ಜನಸಾಮಾನ್ಯರಲ್ಲಿ ಬಿತ್ತಿದ ಹರಿದಾಸ ಶ್ರೇಷ್ಠರು ಶ್ರೀ ವಿಜಯದಾಸರು -ಮುರಳಿಧರ ಕುಲಕರ್ಣಿ

Image
  ಭಗವದ್ಭಕ್ತಿ ಯನ್ನು ಜನಸಾಮಾನ್ಯರಲ್ಲಿ ಬಿತ್ತಿದ ಹರಿದಾಸ ಶ್ರೇಷ್ಠರು ಶ್ರೀ ವಿಜಯದಾಸರು -ಮುರಳಿಧರ ಕುಲಕರ್ಣಿ   ರಾಯಚೂರು,ನ.22- ದಾಸ ಶ್ರೇಷ್ಠರಾದ ಶ್ರೀ ವಿಜಯದಾಸರು ‌ ದೇಶ ಸುತ್ತಿದರು, ಸಮಾಜಮುಖಿಯಾಗಿ ಸರ್ವಕಾಲಿಕ ಮೌಲ್ಯದ ಸಾಮಾಜಿಕ ಚಿಂತನೆಯನ್ನು ಜನಸಾಮಾನ್ಯರಲ್ಲಿ ಬಿತ್ತುವುದರ ಜೊತೆಗೆ ಭಗವದ್ ಭಕ್ತಿ ಎನ್ನುವ ಶಿಖರದತ್ತ ಜನಸಾಮಾನ್ಯರನ್ನು ಕರೆದುಕೊಂಡು ಹೋದ ಮಹಾನ್ ಹರಿದಾಸ ಶ್ರೇಷ್ಠರು ಶ್ರೀ ವಿಜಯದಾಸರು ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು . ಅವರಿಂದು ಸಂಜೆ    ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಹರಿದಾಸ ಬೌದ್ಧಿಕ ಮಂಟಪ ಏರ್ಪಡಿಸಿದ  263ನೇ ಶ್ರೀ ವಿಜಯ ದಾಸರ ಆರಾಧನೆಯಲ್ಲಿ  ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.   ಶ್ರೀ ವಿಜಯದಾಸರನ್ನು ಸುಳಾದಿ ದಾಸರೆಂದು ಕರೆಯುತ್ತಾರೆ . ಅವರು ಹಲವಾರು ಸಂಕೀರ್ತನೆಗಳನ್ನು, ಉಗಾ-ಭೋಗಗಳನ್ನು, ಗೀಗಿ ಪದಗಳನ್ನು, ಕೋಲಾಟ, ಜೋಗುಳ, ಲಾಲಿ, ಸುವ್ವಾಲಿ, ಶಾಸ್ತ್ರ,ದಂಡಕ ಗದ್ಯ,ಪದಗಳನ್ನು  ರಚಿಸಿ ದಾಸ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ. ಶ್ರೀ ಪುರಂದರ ದಾಸರು, ಶ್ರೀ ಕನಕದಾಸರು ಪ್ರಾರಂಭಿಸಿದ ಹರಿದಾಸಸಾಹಿತ್ಯವನ್ನು  ಮುಂದುವರಿಸಿಕೊಂಡು ಬಂದು, ಶ್ರೀ ಗೋಪಾಲ ದಾಸರು ಶ್ರೀ ಜಗನ್ನಾಥಸರ ಮಹನೀಯರನ್ನು ಒಳಗೊಂಡಂತೆ 60ಕ್ಕೂ ಹೆಚ್ಚು ಹರಿದಾಸರಿಗೆ ದೀಕ್ಷೆ ನೀಡಿ , ದಾಸ ಸಾಹಿತ್ಯದ ಪರಂಪರೆಯನ್...