ಜೂ.4 ರಂದು ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ: 161 ಸುತ್ತುಗಳಲ್ಲಿ ಮತ ಎಣಿಕೆ- ಜಿಲ್ಲಾ ಚುನಾವಣಾಧಿಕಾರಿ.
ಜೂ.4 ರಂದು ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ: 161 ಸುತ್ತುಗಳಲ್ಲಿ ಮತ ಎಣಿಕೆ - ಜಿಲ್ಲಾ ಚುನಾವಣಾಧಿಕಾರಿ. ರಾಯಚೂರು,ಮೇ.31- ರಾಯಚೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಯನ್ನು ಜೂ.4 ರಂದು ನಡೆಸಲಾಗುತ್ತಿದ್ದು ಎಂಟು ವಿಧಾನಸಭಾ ಕ್ಷೇತ್ರಗಳ ಒಟ್ಟು 161 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಲ್.ಚಂದ್ರ ಶೇಖರ ನಾಯಕ ಹೇಳಿದರು. ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ನಗರದ ಎಸ್ಆರ್ ಪಿಎಸ್ ಪಿಯು ಕಾಲೇಜಿನಲ್ಲಿ ಬೆಳಿಗ್ಗೆ 7ಕ್ಕೆ ಮತಯಂತ್ರಗಳ ಭದ್ರತಾ ಕೊಠಡಿ ತೆರೆಯಲಾಗುತ್ತದೆ ನಂತರ 8 ಗಂಟೆಯಿಂದ ಮತಯಂತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು. ಸುರಪುರ, ಶಹಾಪುರ,ಯಾದಗಿರಿ ಮತ್ತು ...