ಹೊಸಪೇಟೆ ಗ್ರಾಮದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿನೆ: ಹೊಸಪೇಟೆ ಕೆಂಪಿನ ಮಠದ ಗತವೈಭವ ಮರುಕಳಿಸಿದೆ- ಕಿಲ್ಲೆ ಬೃಹನ್ಮಠ ಶ್ರೀಗಳು ರಾಯಚೂರು,ನ.30- ಹೊಸಪೇಟೆಯ ಕೆಂಪಿನ ಮಠದಲ್ಲಿ ಗತವೈಭವ ಮರುಕಳಿಸಿದೆ ವ್ಯಕ್ತಿಗೆ ಸಾವಿದೆ ಮಠ ಮಾನ್ಯಗಳಿಗಿಲ್ಲ ಭಕ್ತರು ಈ ಮಠವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀ ಗಳು ಕರೆ ನೀಡಿದರು. ತಾಲೂಕಿನ ಹೊಸಪೇಟೆ ಗ್ರಾಮದ ಕೆಂಪಿನ ಮಠದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಅನೇಕ ವರ್ಷಗಳ ಇತಿಹಾಸ ಈ ಮಠಕ್ಕಿದೆ. ನಾವು ಯಾರು ಮಾಡದ ಕಾರ್ಯವನ್ನು ಹಿಂದಿನವರು ಮಾಡಿ ಹೋಗಿದ್ದಾರೆ. ಅಂದಿನ ಕಾಲದಲ್ಲಿ ಇಷ್ಟು ಗಟ್ಟಿಮುಟ್ಟಾದ ಮಠ ಕಟ್ಟಿರುವುದು ಸಣ್ಣ ವಿಚಾರವಲ್ಲ. ಇಂದು ಆರ್‌ಸಿಸಿ ಕಟ್ಟಡ ಕಟ್ಟಬೇಕಾದರೆ ನಾನಾ ಪಡಿಪಾಡಲು ಪಡಬೇಕಿದೆ. ಆದರೆ, ಹಿಂದಿನ ಕಾಲದವರು ಕಲ್ಲಿನಲ್ಲಿಯೇ ಇಷ್ಟೊಂದು ಸದೃಢ ಮಠಗಳನ್ನು ಕಟ್ಟಿ ಹೋಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು. ಕಾಲಗರ್ಭದಲ್ಲಿ ಎಷ್ಟೊ ಘಟನೆಗಳು ನಡೆಯುತ್ತಿರುತ್ತವೆ. ಶಕುನಿಯಿಂದ ಮಹಾಭಾರತಕ್ಕೆ ಮಹತ್ವ ಸಿಕ್ಕರೆ, ರಾಮಾಯಣದಲ್ಲಿ ರಾವಣ ಪ್ರವೇಶದಿಂದ ಪ್ರಾಮುಖ್ಯತೆ ಬಂತು. ಕೊಂಡಿ ಮಂಚಣ್ಣ ಬಸವಣ್ಣನ ವಚನಗಳ ಮಂಥನವಾದಾಗಲೇ ಅದಕ್ಕೆ ನಿಜವಾದ ಅರ್ಥ ಸಿಕ್ಕಿತು. ಹಾಗೆಯೇ ಕೆಟ್ಟದ್ದಾಗಿದ...
Posts
Showing posts from November, 2024
- Get link
- X
- Other Apps
ಮಹಾಮಹಿಮರು ದಾಸ ಶ್ರೇಷ್ಠ ಮಹಿಪತಿ ದಾಸರು ಮಹಾ ಮಹಿಮರಾದ ಮಹಿಪತಿ ದಾಸರ ಜೀವನ ಚರಿತ್ರೆಯೇ ವಿಸ್ಮಯದಿಂದ ಕೂಡಿದೆ. ಅವರು ನವಾಬನ ಆಸ್ಥಾನದಲ್ಲಿ ಖಜಾಂಚಿಗಳಾಗಿ ಒಳ್ಳೆಯ ಜವಾಬ್ದಾರಿಯಲ್ಲಿ ಹುದ್ದೆ ನಿರ್ವಹಿಸಿ, ಶ್ರೀಮಂತಿಕೆಯ ಸೌಕರ್ಯಗಳಿದ್ದರೂ ಜೀವನದಲ್ಲಿ ನಡೆದ ವಿಚಿತ್ರ ಘಟನೆಯಿಂದ ವೈರಾಗ್ಯದ ಹಾದಿ ತುಳಿದು ಹಾರಿದಾಸರಾಗಿರುವ ಇವರ ಜೀವನವೇ ಅತಿ ಸೋಜಿಗದಿಂದ ಕೂಡಿದೆ. ಹರಿದಾಸರ ಪರಂಪರೆಯಲ್ಲಿ ಪ್ರಸಿದ್ಧ ಹರಿದಾಸರ ಜೀವನವನ್ನು ನೋಡಿದಾಗ ಅವರ ಬದುಕಿನಲ್ಲಿ ಕೆಲವು ವಿಸ್ಮಯದ ಘಟನೆಗಳಿಂದ ತಿರುವು ಪಡೆದು ವೈರಾಗ್ಯ ಭಾವದಿಂದ ಇಡೀ ಜೀವನವನ್ನೇ ಭಕ್ತಿ ಮಾರ್ಗದ ಪುನರುತ್ಥಾನಕ್ಕಾಗಿ ಕಾಲಲ್ಲಿ ಗೆಜ್ಜೆ ಕಟ್ಟಿ, ಕೈಯಲ್ಲಿ ತಾಳ ಹಿಡಿದು ತಂಬೂರಿಯನ್ನು ಮೀಟುತ್ತಾ ಸಂಕೀರ್ತನೆಗಳನ್ನು ಹಾಡುತ್ತಾ ಭಗವಂತನೆಂಬ ಬೆಳಕಿನ ಕಡೆಗೆ ಭಕ್ತಿಯ ಸೇತುವೆ ನಿರ್ಮಿಸಿ, ತಮ್ಮನ್ನು ತಾವು ಹರಿಗೆ ಅರ್ಪಿಸಿಕೊಂಡು ವೈಕುಂಠ ಬಾಗಿಲು ತಟ್ಟಿದ ಹಲವಾರು ಮಹನೀಯರ ಸಾಲಿನಲ್ಲಿ ಮಹಿಪತಿ ದಾಸರು ಸಹ ಸೇರುತ್ತಾರೆ. ದಾಸರ ಪರಂಪರೆಯಲ್ಲಿ ಬರುವ ಮಹಿಪತಿ ದಾಸರು ಮೂಲತಃ ಬಾಗಲಕೋಟೆಯವರು. ಇವರ ಮನೆತನದ ಹೆಸರು ಕಾಥೇ ವಾಡೆ. ಇವರು ಕ್ರಿಸ್ತಶಕ 1611 ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಜನಿಸಿದರು. ಇವರ ಮನೆತನದವರು ಸಂಚಾರ ಮಾಡುತ್ತಾ ಬಿಜಾಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಿಕೆ ಗ್ರಾಮದಲ್ಲಿ ನೆಲೆಸಿದರು. ಇವರ ತಂದೆ ಹೆಸರು ಕೊನೇರಾಯ...
- Get link
- X
- Other Apps
ಪೊಲೀಸ್ ಅಧಿಕಾರಿಗಳ- ಪತ್ರಕರ್ತ ತಂಡಗಳ ಮಧ್ಯ ಕ್ರಿಕೆಟ್ ಪಂದ್ಯಾವಳಿಗೆ ಎಸ್ಪಿ ಚಾಲನೆ: ಲೇಖನಿ ವಿರುದ್ಧ ಜಯ ಸಾಧಿಸಿದ ಲಾಠಿ ಜಯ ಧ್ವಜ ನ್ಯೂಸ್, ರಾಯಚೂರು, ನ.30- ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಪೊಲೀಸ್ ಅಧಿಕಾರಿಗಳ ತಂಡ ಮತ್ತು ಪತ್ರಕರ್ತರ ತಂಡದ ನಡುವೆ ಕ್ರಿಕೆಟ್ ಪಂದ್ಯಾವಳಿ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಶನಿವಾರ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅವರು ಬ್ಯಾಟ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪೊಲೀಸ್ ಅಧಿಕಾರಿಗಳ ಮತ್ತು ಪತ್ರಕರ್ತರು ಅತ್ಯುತ್ತಮ ಪ್ರದರ್ಶನ ಮಾಡುವುದರ ಮೂಲಕ ಗೆಲುವು ಸಾಧಿಸಿ ಎಂದು ಶುಭ ಹಾರೈಸಿದರು. ಲೇಖನಿ ವಿರುದ್ಧ ಜಯ ಸಾಧಿಸಿದ ಲಾಠಿ: ಪತ್ರಕರ್ತರ (ಎ) ತಂಡ ಟಾಸ್ ಗೆಲ್ಲುವ ಮೂಲಕ ಫೀಲ್ಡಿಂಗ ಆಯ್ಕೆ ಮಾಡಿಕೊಂಡಿತು. ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಪೊಲೀಸ ತಂಡ 8 ಓವರ್ ಗಳಲ್ಲಿ 4 ವಿಕೇಟುಗಳನ್ನು ಕಳೆದುಕೊಂಡ 66 ರನ್ ಗಳನ್ನು ಗಳಿಸಿತು. ನಂತರ ಪತ್ರಕರ್ತರ ತಂಡ ಬ್ಯಾಟಿಂಗ ಆರಂಭಿಸಿ 51 ರನ್ ಗಳಿಸಿ 15 ರನ್ ಗಳ ಅಂತರದಲ್ಲಿ ಸೋಲು ಅನುಭವಿಸಿತು. 2ನೇ ಪಂದ್ಯಾವಳಿಯಲ್ಲಿ ಪೊಲೀಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 8 ಓವರ್ ಗಳಲ್ಲಿ 87 ರನ್ ಗಳು ಗಳಿಸಿತು ನಂತರ ಬ್ಯಾಟಿಂಗ ಮಾಡಿದ ಪತ್ರಕರ್ತರ (ಬಿ)ತಂಡ...
- Get link
- X
- Other Apps
ಗಾಯಿತ್ರಿ ಭವನ ಕಟ್ಟಡ ಶೀಘ್ರ ಪೂರ್ಣಗೊಳ್ಳಲಿ-ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಜಯಧ್ವಜ ನ್ಯೂಸ್, ರಾಯಚೂರು,ನ.29- ನಗರದ ನವೋದಯ ವೈದ್ಯಕೀಯ ಕಾಲೇಜು ಬಳಿ ನಿರ್ಮಾಣ ಹಂತದಲ್ಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಭಾ ಜಿಲ್ಲಾ ಘಟಕ ಅಧೀನದ ಗಾಯಿತ್ರಿ ಭವನ ಕಟ್ಟಡಕ್ಕೆ ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಗುರುವಾರ ಸಾಯಿಂಕಾಲ ಭೇಟಿ ನೀಡಿ ಕಟ್ಟಡ ಶೀಘ್ರ ಪೂರ್ಣಗೊಳ್ಳಲಿ ಎಂದು ಅನುಗ್ರಹ ಸಂದೇಶ ನೀಡಿದರು. ಕಟ್ಟಡ ವಿನ್ಯಾಸ ಮತ್ತು ಕಟ್ಟಡದ ಬಗ್ಗೆ ತಿಳಿದುಕೊಂಡ ಶ್ರೀಪಾದಂಗಳವರು, ಯಾವುದೆ ಗೊಂದಲಗಳಿಗೆ ಆಸ್ಪದ ನೀಡದೆ ಎಲ್ಲ ವಿಪ್ರರು ಒಗಟ್ಟಿನಿಂದ ಕಟ್ಟಡ ಪೂರ್ಣಗೊಳ್ಳಲು ಸಹಕಾರ ನೀಡಬೇಕೆಂದು ಹೇಳಿದ ಅವರು ಬ್ರಾಹ್ಮಣ ಸಮಾಜಕ್ಕೆ ಈ ಕಟ್ಟಡ ಸದುಪಯೋಗವಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಹಿರಿಯರಾದ ನರಸಿಂಗರಾವ ದೇಶಪಾಂಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಭಾ ಜಿಲ್ಲಾ ಘಟಕ ಅಧ್ಯಕ್ಷ ಡಿ.ಕೆ.ಮುರಳೀಧರ್, ಅರವಿಂದ ಕುಲಕರ್ಣಿ, ರಾಘವೇಂದ್ರ ಚೂಡಾಮಣೀ ವಕೀಲ, ಪ್ರಹ್ಲಾದರಾವ ಕಲ್ಮಲಾ, ರಾಮರಾವ ಗಣೇಕಲ್, ವೆಂಕಟರಾವ್ ಕುಲಕರ್ಣೀ, ಹನುಮೇಶ ಸರಾಫ,ವೆಂಕಟೇಶ ಕೋಲಾರ, ಕೃಷ್ಣ ಮೂರ್ತಿ ಹೆಬಸೂರು, ನರಸಿಂಗರಾವ್ , ರಾಘವೇಂದ್ರರಾವ್ ಗುಂಜಳ್ಳಿ, ಪ್ರಹ್ಲಾದ, ಜಯಕುಮಾರ್ ದೇಸಾಯಿ ಕಾಡ್ಲೂರು, ಗುರುರಾಜ ರಾವ್,ರಾಘವೇಂದ್ರ ದೇಶಪಾಂಡೆ, ರಂಗಾಚಾರ್ ಇನ್ನಿತರರು ಇದ್ದರು .
- Get link
- X
- Other Apps
ಫೋಟೋ ಜರ್ನಲಿಸ್ಟ್ ಸಂತೋಷ ಸಾಗರ್ ನಿಧನಕ್ಕೆ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ರಾಯಚೂರು,ನ.28- ಫೋಟೋ ಜರ್ನಲಿಸ್ಟ್ ಸಂತೋಷ ಸಾಗರ ಅವರು ಬುಧವಾರದಂದು ನಿಧನರಾದ ಹಿನ್ನಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಂತೋಷ ಸಾಗರ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಮಾತನಾಡಿ, ಒತ್ತಡದ ಮದ್ಯೆ ಕೆಲಸ ಮಾಡುವ ಪತ್ರಕರ್ತರು ಆರೋಗ್ಯದ ಕಡೆ ಗಮನ ಹರಿಸಬೇಕಿದೆ ಎಂದರು. ಸಂತೋಷ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದ್ದು, ಸಂಘದ ಮನವಿ ಮೇರೆಗೆ ಜಿಲ್ಲೆಯ ಪತ್ರಕರ್ತರು ಸಹಾಯಕ್ಕೆ ಮುಂದಾಗಿರುವುದನ್ನು ಶ್ಲಾಘಿಸಿದರು. ಸದರ್ ಬಜಾರ್ ಪೋಲಿಸ್ ಠಾಣೆಯ ಸಿಪಿಐ ಉಮೇಶ ಕಾಂಬ್ಳೆ ಮಾತನಾಡಿ, ಸಂತೋಷ ಸಾಗರ್ ಅತ್ಯಂತ ಸರಳ ವ್ಯಕ್ತಿತ್ವ ಉಳ್ಳವರಾಗಿದ್ದು, ಎಲ್ಲರೊಂದಿಗೆ ಸಂತೋಷದಿಂದ ಇದ್ದು, ಅವರ ನಿಧನ ಅರಗಿಸಿಕೊಳ್ಳಲಾಗುತ್ತಿಲ್ಲ, ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಆರೋಗ್ಯ ಕಡೆಗೆ ಕಾಳಜಿ ವಹಿಸುವುದು ಕಡೆಯಾಗಿದೆ, ತಮ್ಮ ಆರೋಗ್ಯ ಜೊತೆಗೆ ತಮ್ಮ ಕುಟುಂಬದ ಆರೋಗ್ಯದ ಕಡೆಗೆ ಹೆಚ್ಚಾಗಿ ಕಾಳಜಿ ವಹಿಸಬೇಕು ಎಂದರು. ಸಂತೋಷ ಸಾಗರ್ ಅವರ ಕುಟುಂಬ ಆರ್ಥಿಕ ಸ್ಥಿತಿಯಲ್ಲಿದ್ದು ಕುಟುಂಬ ನಿರ್ವಹಣೆಗೆ ಎಲ್ಲಾ ಪತ್ರಕರ್ತರು ಆರ್ಥಿಕ ಸಹಾಯ ಮಾಡಿದ್ದು, ಪೋಲಿಸ್ ಇ...
- Get link
- X
- Other Apps
ಉತ್ತರಾಧಿ ಮಠಾಧೀಶರಿಂದ ವಿಶ್ವಮಿತ್ರ ಟ್ರಸ್ಟ್ ಉದ್ಘಾಟನೆ : ಪರೋಪಕಾರದಿಂದ ಭಗವಂತನ ಅನುಗ್ರಹ ಪ್ರಾಪ್ತಿ- ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ರಾಯಚೂರು,ಜಯ ಧ್ವಜ ನ್ಯೂಸ್, ನ.27- ನಾವೆಲ್ಲರೂ ಸಮಾಜಕ್ಕೆ ನಮ್ಮ ಶಕ್ತ್ಯಾ ನುಸಾರ ಕೊಡುಗೆ ನೀಡಬೇಕು ನಾವು ಮಾಡುವ ಪರೋಪಕಾರದಿಂದ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ನುಡಿದರು. ಅವರು ಇತ್ತೀಚೆಗೆ ನಗರದ ಕರ್ನಾ ಟಕ ಸಂಘದಲ್ಲಿ ವಿಶ್ವಮಧ್ವ ಮಹಾಪರಿಷತ್ ಹಾಗೂ ಉತ್ತರಾಧಿ ಮಠದ ವತಿಯಿಂದ ಆಯೋಜಿಸಿದ ಜ್ಞಾನಸತ್ರ ಕಾರ್ಯ ಕ್ರಮದಲ್ಲಿ ವಿಶ್ವಮಿತ್ರ ಟ್ರಸ್ಟ್ ಕಾರ್ಯ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅನುಗ್ರಹ ಸಂದೇಶ ನೀಡಿ ಬ್ರಾಹ್ಮಣ ಸಮಾಜದಲ್ಲಿ ಅನೇಕರು ಆರ್ಥಿಕವಾಗಿ ಅಶಕ್ತರಿದ್ದು ಅವರ ವಿದ್ಯಾಭ್ಯಾಸಕ್ಕೆ ಮತ್ತು ಆರೋಗ್ಯ ಸೌಲಭ್ಯ ಕಲ್ಪಿಸಲು ಉಳ್ಳವರು ಧನ ಸಹಾಯ ಮಾಡಬೇಕೆಂದರು. ಒಳಿತನ್ನು ಚಿಂತಿಸು ಎಂಬ ಧೇಯದೊಂದಿಗೆ ಈ ವಿಶ್ವಮಿತ್ರ ಟ್ರಸ್ಟ ತನ್ನ ಕಾರ್ಯ ಮಾಡುತ್ತಿದ್ದು ಇದರಲ್ಲಿ ಗಣ್ಯ ಉದ್ಯಮಿಗಳು, ವೈದ್ಯರು, ನ್ಯಾಯವಾದಿಗಳು ಸೇರಿದಂತೆ ಅನೇಕರು ಇದ್ದಾರೆ ಎಂದರು. ಸ್ಪರ್ದಾತ್ಮಕ ಪರೀಕ್ಷೆ ತರಬೇತಿ, ಉದ್ಯೋಗ ಸೃಷ್ಟಿ ಮುಂತಾದ ಕಾರ್ಯ ಹಮ್ಮಿಕೊಳ್ಳುತ್ತಿದ್ದು ಎಲ್ಲ ವಿಪ್ರರು ಇದಕ್ಕೆ ಕೈ ಜೋಡಿಸಲು ಕರೆ ನೀಡಿದರು. ಈ ಸಂದರ್ಭದಲ್ಲಿ ವಿಶ್ವಮಿತ್ರ ಟ್ರಸ್ಟ್ ಅಧ್ಯಕ್ಷ ಡಿ.ಕೆ.ಮುರಳಿಧರ,ಟ...
- Get link
- X
- Other Apps
ಕ್ರೀಡಾ ಚಟುವಟಿಕೆಗಳಿಂದ ಪತ್ರಕರ್ತರ ಒತ್ತಡ ನಿವಾರಣೆ ಸಾಧ್ಯ- ಜಿಲ್ಲಾಧಿಕಾರಿ ನಿತೀಶ್ ಕೆ: ಸಂವಿಧಾನದ ಪೀಠಿಕೆ ಓದುವ ಮೂಲಕ ಪತ್ರಕರ್ತರ ಕ್ರೀಡಾಕೂಟಕ್ಕೆ ಚಾಲನೆ ರಾಯಚೂರು,26- ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಸಂವಿಧಾನದ ದಿನಾಚರಣೆ ಅಂಗವಾಗಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನಿಂದ ಆಯೋಜಿಸಿದ್ದ ಎರಡು ದಿನಗಳ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ. ಚಾಲನೆ ನೀಡಿದರು. ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸಂವಿಧಾನ ಪೀಠಿಕೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂವಿಧಾನ ದಿನಾಚರಣೆ ಬಳಿಕ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಸಾಂಕೇತಿಕವಾಗಿ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ಕಂದಾಯ ಇಲಾಖೆ ,ಪೊಲೀಸ್ ಇಲಾಖೆ, ಪತ್ರಕರ್ತರ ತಂಡದ ನಡುವೆ ಪಂದ್ಯಾವಳಿ ಏರ್ಪಡಿಸಲಾಗಿದೆ. ನಂತರ ಮಾತನಾಡಿದ ಜಿಲ್ಲಾಧಿಕಾರಿ, ಪ್ರತಿ ದಿನ ಜಿಲ್ಲೆಯಲ್ಲಿ ನಾನಾ ಸಮಸ್ಯೆಗಳ ಮೇಲೆ ಪತ್ರಕರ್ತರು ತಮ್ಮ ವರದಿ ಮೂಲಕ ಬೆಳಕು ಚೆಲ್ಲುತ್ತಿದ್ದೀರಿ.ಒತ್ತಡ ನಿವಾರಣೆಗೆ ಇಂತಹ ಕ್ರೀಡಾಕೂಟ ಅನುಕೂಲವಾಗಲಿದೆ ಎಂದರು. ಇಂತಹ ಕ್ರೀಡಾಕೂಟ ಮಾನಸಿಕ, ದೈಹಿಕ ಸದೃಢತೆಗೆ ಅನುಕೂಲ ಆಗಲಿದೆ. ಸರ್ಕಾರ ಮತ್ತು ನಾಗರೀಕರು ಸದಾ ಜಾಗೃತೆಯಾಗಿರಲು ಪ್ರಜೆಗಳಿಗೆ ವರದಿಗಾರರ ಪಾತ್ರ ದೊಡ್ಡದು. ಸ್ಪೂರ್ತಿದಾಯಕ ಕೆಲಸ ಮುಂದುವರಿಸಿ, ರಾಯಚೂರಿನ ...
- Get link
- X
- Other Apps
ವಕ್ಫ್ ಮಂಡಳಿ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ. ರಾಯಚೂರು, ಜಯಧ್ವಜ, ನ್ಯೂಸ್, ನ.22- ರಾಜ್ಯದಲ್ಲಿ ರೈತರ ಜಮೀನುಗಳನ್ನು ಸರ್ಕಾರ ವಕ್ಫ್ ಮೂಲಕ ಕಬಳಿಕೆ ಮಾಡುತ್ತಿದೆ ಎಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಘೋಷಣೆ ಕೂಗಿ ರೈತರ ಹೆಸರಲ್ಲಿರುವ ಪಹಣಿಗಳಲ್ಲಿ ಏಕಾಏಕಿ ವಕ್ಫ್ ಹೆಸರು ನಮೂದಿಸಲಾಗುತ್ತಿದ್ದು ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾಗಿರಿವುದರಿಂದ ರಾಜ್ಯ ಸರ್ಕಾರ ವಕ್ಫ್ ಮಂಡಳಿ ಮೂಲಕ ರೈತರು ಜಮೀನು ಕಬಳಿಸುವ ಹುನ್ನಾರ ಮಾಡಿದೆ ಎಂದು ದೂರಿದ ಪ್ರತಿಭಟನಾ ನಿರತರು ರಾಜ್ಯ ಸರ್ಕಾರ ಯಥಾಸ್ಥಿತಿಯಲ್ಲಿ ರೈತರ ಹೆಸರು ಮರು ಸೇರ್ಪಡೆ ಮಾಡಬೇಕು ಅಲ್ಲದೆ ಇಲ್ಲ ಸಲ್ಲದ ಕ್ರಮ ಅನುಸರಿಸಿದರೆ ಬಿಜೆಪಿ ಪಕ್ಷ ರೈತರೊಂದಿಗೆ ಬೀದಿಗಿಳಿದು ಹೋರಾಡಲು ಸಾಧ್ಯವೆಂದರು. ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮುಖಂಡರಾದ ಶಿವಬಸಪ್ಪ ಮಾಲಿಪಾಟೀಲ್, ರ...
- Get link
- X
- Other Apps
ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ರಾಯಚೂರು ದಿಗ್ವಿಜಯ ಕಾರ್ಯಕ್ರಮ ಉಧ್ಘಾಟನೆ: ಭಗವಂತನನ್ನು ಸ್ಮರಿಸಿದರೆ ಕಷ್ಟಗಳು ನಿವಾರಣೆ- ಶ್ರೀಗಳು . ರಾಯಚೂರು, ಜಯಧ್ವಜ ನ್ಯೂಸ್ , ನ.21- ಭಗವಂತನನ್ನು ನಿಷ್ಕಲ್ಮಷವಾಗಿ ಸ್ಮರಿಸಿದರೆ ನಮ್ಮ ಕಷ್ಟಗಳು ನಿವಾರಣೆಯಾಗುತ್ತವೆ ಎಂದು ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ನುಡಿದರು. ಅವರಿಂದು ನಗರದ ಕರ್ನಾಟಕ ಸಂಘ ಅವರಣದಲ್ಲಿ ಶ್ರೀ ಸತ್ಯಾತ್ಮತೀರ್ಥರ ರಾಯಚೂರು ದಿಗ್ವಿಜಯ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಭಗವಂತನ ಶಕ್ತಿ ಅಗಾಧವಾಗಿದೆ ನಮ್ಮೆಲ್ಲರಿಗೂ ಆತನೆ ಚಲನಾಶಕ್ತಿಯಾಗಿದ್ದಾನೆ ದೇವರ ಸಂಕಲ್ಪವಿಲ್ಲದಿದ್ದರೆ ಯಾವುದೆ ಕಾರ್ಯವಾಗುವುದಿಲ್ಲವೆಂಬ ಅಚಲ ವಿಶ್ವಾಸ ನಮ್ಮದಾಗಬೇಕು ನಮ್ಮ ಸತ್ಕರ್ಮ ಮತ್ತು ಧರ್ಮಾಚರಣೆ ನಮಗೆ ಸನ್ಮಾರ್ಗದಲ್ಲಿ ನಡೆಸುತ್ತಿದೆ ನಾವು ಹಾದಿ ತಪ್ಪದಂತೆ ದೇವರ ಗುರು ಹಿರಿಯರ ಆಶೀರ್ವಾದ ಪಡೆದುಕೊಳ್ಳಬೇಕು ಎಂದರು. ರಾಯಚೂರು ಜನರು ಭಗವಧ್ಭಕ್ತರು ಮೇಲಿಂದ ಮೇಲೆ ಸಾಧು ಸಂತರು, ಸನ್ಯಾಸಿಗಳು, ಸತ್ಪುರುಷರ ಕಾರ್ಯಕ್ರಮ ಆಯೋಜಿಸುತ್ತಿರುತ್ತೀರಿ ಇಲ್ಲಿ ಅನೇಕ ದಾಸರು, ಯತಿವರೇಣ್ಯರು ನಡೆದಾಡಿದ ಪಾವನ ಭೂಮಿಯಾಗಿದೆ ಎಂದರು. ಒಂದು ವಾರಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಕೃತಾರ್ಥರ್ಗಬೇಕೆಂದರು....
- Get link
- X
- Other Apps
ಬಸವ ಕೇಂದ್ರ ಮತ್ತು ಲೋಹಿಯಾ ಪ್ರತಿಷ್ಠಾನದಿಂದ ನ.23 ರಂದು ಪುಸ್ತಕ ಬಿಡುಗಡೆ ಮತ್ತು ನಾಟಕ ಪ್ರದರ್ಶನ- ಅಮೀನಗಡ . ರಾಯಚೂರು, ಜಯಧ್ವಜ ನ್ಯೂಸ್ , ನ.21- ಬಸವ ಕೇಂದ್ರ ಮತ್ತು ಲೋಹಿಯಾ ಪ್ರತಿಷ್ಠಾನದಿಂದ ನ.23 ರಂದು ಪುಸ್ತಕ ಬಿಡುಗಡೆ ಮತ್ತು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶಕರಾದ ಗಣೇಶ ಅಮೀನಗಡ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಸಂಜೆ 6ಕ್ಕೆ ನಗರದ ಐಎಂಎ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಂಬಳಿ ನಾಗಿದೇವ ಮತ್ತು ಬೆಳಗು ಕೃತಿಗಳ ಲೋಕಾರ್ಪಣೆಯನ್ನು ಹಿರಿಯ ಸಾಹಿತಿ ಪ್ರೋ.ಎಸ್.ಜಿ.ಸಿದ್ದರಾಮಯ್ಯ ಮಾಡಲಿದ್ದಾರೆ ಎಂದರು. ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಣಾಧಿಕಾರಿ ಡಿ.ಜಿ.ಕರ್ಕಿಹಳ್ಳಿ ವಹಿಸಲಿದ್ದು, ಅತಿಥಿಗಳಾಗಿ ಸಾಹಿತಿಗಳಾದ ಅಯಪ್ಪಯ್ಯ ಹುಡಾ, ಆಂಜಿನೇಯ ಜಾಲಿಬೆಂಚಿ,ಗಣೇಶ ಅಮೀನಗಡ ಆಗಮಿಸಲಿದ್ದಾರೆ ಎಂದರು. ಪುಸ್ತಕ ಪರಿಚಯವನ್ನು ಡಾ.ಸರ್ವಮಂಗಳ ಸಕ್ರಿ ಮಾಡಲಿದ್ದು ಕಾರ್ಯಕ್ರಮದಲ್ಲಿ ಲೇಖಕರಾದ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು, ರಾಚನಗೌಡ, ಎಂ.ರಂಗಪ್ಪ, ಕೆ.ಗಿರಿಜಾ ರಾಜಶೇಖರ ಭಾಗವಹಿಸಲಿದ್ದಾರೆ ಎಂದರು. ...
- Get link
- X
- Other Apps
ಪಿಡಿಓ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿ - ರಝಾಕ್ ಉಸ್ತಾದ್. ರಾಯಚೂರು, ಜಯಧ್ವಜ ನ್ಯೂಸ್, ನ.21- ಸಿಂಧನೂರಿನಲ್ಲಿ ನಡೆದಿರುವ ಪಿಡಿಓ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ರಝಾಕ್ ಉಸ್ತಾದ್ ಆಗ್ರಹಿಸಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಿಡಿಓ ಹುದ್ದೆಗೆ ನಡೆದ ಪರೀಕ್ಷೆ ವೇಳೆ ಪರೀಕ್ಷಾ ಮೇಲ್ವಿಚಾರಣೆ ಲೋಪ ಕಾರಣದಿಂದ ಹರಿದ ಲಕೋಟೆಯಿಂದ ಪ್ರಶ್ನೆ ಪತ್ರಿಕೆ ನೀಡಿದ್ದನ್ನು ಕೆಲ ವಿದ್ಯಾರ್ಥಿಗಳು ಪ್ರಶ್ನಿಸಿ ದಾಂಧಲೆ ಮಾಡಿದ್ದಾರೆ ಕೇವಲ ವಿದ್ಯಾರ್ಥಿಗಳ ಮೇಲೆ ಮಾತ್ರ ಪ್ರಕರಣ ದಾಖಲಿಸಿದ್ದಾರೆ ಪ್ರಮುಖವಾಗಿ ಇದರಲ್ಲಿ ತಪ್ಪಿತಸ್ಥ ರಾದವರ ಮೇಲೆ ಯಾವುದೆ ಕ್ರಮವಾಗಿಲ್ಲವೆಂದು ದೂರಿದ ಅವರು ಇದೆಲ್ಲದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಸತ್ಯಾಂಶ ಬಯಲಿಗೆ ಬರಬೇಕೆಂದರೆ ಸರ್ಕಾರ ಇಡಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದರು. ಅಕ್ರಮದ ಬಗ್ಗೆ ಧ್ವನಿಯೆತ್ತಿದವರ ಮೇಲೆಯೇ ಪ್ರಕರಣ ದಾಖಲಿಸಿರುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಉಸ್ಮಾನ್ ಇದ್ದರು.
- Get link
- X
- Other Apps
ನ.24 ರಂದು ಮಹಾಂತಶ್ರೀ ಪ್ರಶಸ್ತಿ ಸುಮಾರಂಭ ಹಾಗೂ ಜಾನಪದ ಸಂಭ್ರಮ: ಮಾಜಿ ಸಚಿವೆ ಡಾ.ಲೀಲಾ ದೇವಿ ಆರ್.ಪ್ರಸಾದರವರಿಗೆ ವಿಜಯ ಮಹಾಂತ ಅನುಗ್ರಹ ಪ್ರಶಸ್ತಿ- ಶರಣಪ್ಪ ಗೋನಾಳ್ . ರಾಯಚೂರು,ಜಯಧ್ವಜ ನ್ಯೂಸ್, ನ.21- ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ ಹದಿನೈದನೇಯ ವಾರ್ಷಿಕೋತ್ಸವ ಅಂಗವಾಗಿ ಮಹಾಂತಶ್ರೀ ಪ್ರಶಸ್ತಿ ಸುಮಾರಂಭ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಾ ಸುಗಮ ಸಂಗೀತ ಸಂಸ್ಥೆ ಅಧ್ಯಕ್ಷರಾದ ಡಾ. ಶರಣಪ್ಪ ಗೋನಾಳ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 10.30ಕ್ಕೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಚಿತ್ತರಗಿ ಸಂಸ್ಥಾನ ಮಠ ಇಲಕಲ್ ನ ಶ್ರೀ ಗುರು ಮಹಾಂತ ಸ್ವಾಮಿಗಳು, ಚೌಕಿ ಮಠದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಲಿದ್ದು ಉದ್ಘಾಟನೆಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ನೆರವೇರಿಸಲಿದ್ದಾರೆ ಎಂದರು. ಅಧ್ಯಕ್ಷತೆಯನ್ನು ನಗರ ಶಾಸಕರಾದ ಡಾ.ಶಿವರಾಜ ಪಾಟೀಲ್ ವಹಿಸಲಿದ್ದು, ಅತಿಥಿಗಳಾಗಿ ನಗರಸಭೆ ಅಧ್ಯಕ್ಷ...
- Get link
- X
- Other Apps
ಗಧಾರ : ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ರಾಯಚೂರು,ನ.21- ತಾಲೂಕಿನ ಗಧಾರ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆಯಡಿಯ ಶ್ರೀ ನಿಜಾನಂದ ಯೋಗಾಶ್ರಮ ಮಲದಕಲ್ ಪೀಠಾಧಿಪತಿ ಶ್ರೀ ಗುರುಬಸವ ರಾಜಗುರುಗಳ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಹನುಮಂತಪ್ಪ ಮಾತನಾಡಿ, ಸರ್ಕಾರಿ ಶಾಲೆಗೆ ಬರುವ ಮಕ್ಕಳು ಹೆಚ್ಚಾಗಿ ಬಡತನದ ಹಿನ್ನೆಲೆ ಹೊಂದಿರುತ್ತಾರೆ. ಅಂಥ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಇದರಿಂದ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಾಗುತ್ತದೆ ಎಂದರು ಮುಖ್ಯ ಅತಿಥಿಗಳಾಗಿ ಪತ್ರಿಕಾ ಛಾಯಾಗ್ರಾಹಕ ಸಂತೋಷ ಸಾಗರ್ ಆಗಮಿಸಿದ್ದರು. ಪ್ರೌಢಶಾಲೆಯ ಸಹಶಿಕ್ಷಕರಾದ ಸುಮಾ, ಸುಜಾತಾ, ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ತೌಸಿಫ್, ಗ್ರಾಮದ ಬಿಲ್ ಕಲೆಕ್ಟರ್, ಕುಮಾರ ನಾಯಕ, ಅಡುಗೆ ಸಿಬ್ಬಂದಿ, ಅತಿಥಿ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
- Get link
- X
- Other Apps
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗೊ.ರು ಚೆನ್ನಬಸಪ್ಪ : ಶ್ರುತಿ ಸಾಹಿತ್ಯ ಮೇಳ ಸಂತಸ ರಾಯಚೂರು,ನ.21- ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕ್ಕೆ ಸರ್ವಾಧ್ಯಕ್ಷರನ್ನಾಗಿ 94 ವರ್ಷದ ನಾಡಿನ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಗೋ. ರು. ಚನ್ನಬಸಪ್ಪ ಅವರ ಆಯ್ಕೆ ಮಾಡಿದ್ದಕ್ಕಾಗಿ ರಾಯಚೂರು ನಗರದ ಸಾಹಿತಿಕ, ಸಾಂಸ್ಕೃತಿಕ ಸಂಘಟನೆಯಾದ ಶೃತಿ ಸಾಹಿತ್ಯ ಮೇಳ ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದೆ. 1997- 98 ರಲ್ಲಿ ಶ್ರುತಿ ಸಾಹಿತ್ಯ ಮೇಳ ದಿಂದ ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಗೋ. ರು. ಚ. ಭಾಗವಹಿಸಿ ಜಾನಪದ ಪ್ರಸ್ತುತ ಬಗ್ಗೆ ಸುದೀರ್ಘವಾಗಿ ಉಪನ್ಯಾಸವನ್ನು ನೀಡಿ ಸಭಿಕರಿಂದ ಮೆಚ್ಚುಗೆ ಪಡೆದಿದ್ದರು. ಅಂದು ಶ್ರುತಿ ಸಾಹಿತ್ಯ ಮೇಳದಿಂದ *ಸಾಹಿತ್ಯ ಭೀಷ್ಮ* ಎಂಬ ಬಿರುದನ್ನು ನೀಡಿ ಅಭಿನಂದಿಸಿ ಗೌರವಿಸಲಾಗಿತ್ತು. ಗೊ.ರು.ಚ.ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಒಬ್ಬ ಕನ್ನಡಿಗ ಒಂದು ರೂಪಾಯಿ ಯೋಜನೆಗೆ ಶ್ರುತಿ ಸಾಹಿತ್ಯ ಮೇಳ ಭಾಗವಹಿಸಿ ಯೋಜನೆಯ ಯಶಸ್ವಿಗೆ ಶ್ರಮಿಸಲಾಗಿತ್ತು. ಕನ್ನಡ ಸಾಹಿತ್ಯಕ್ಕೆ ಮತ್ತು ಜಾನಪದ ಕ್ಷೇತ್ರಕ್ಕ ಅದ್ವೀತೀಯ ...
- Get link
- X
- Other Apps
ಸಂತೋಷ್ ನಗರ ಶಿವ ಮತ್ತು ಗಣೇಶ ಮಂದಿರ ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ಬಿಜೆಪಿ ತೀರ್ವ ಪ್ರತಿಭಟನೆ: ಶಾಸಕ ಡಾ.ಶಿವರಾಜ ಪಾಟೀಲ್ ಸೇರಿದಂತೆ ಕಾರ್ಯಕರ್ತರ ಬಂಧನ ಬಿಡುಗಡೆ. ರಾಯಚೂರು,ನ.20- ನಗರದ ಚಂದ್ರಬಂಡ ರಸ್ತೆಯ ಸಂತೋಷ ನಗರದಲ್ಲಿದ್ದ ಶಿವ ಮತ್ತು ಗಣೇಶ ದೇವಸ್ಥಾನ ತೆರವುಗೊಳಿಸಿದ್ದನ್ನು ವಿರೋಧಿಸಿ ಬಿಜೆಪಿ ಇಂದು ತೀರ್ವ ಪ್ರತಿಭಟನೆ ನಡೆಸಿತು. ಬೆಳಿಗ್ಗೆ ನಗರದ ಡಿಸಿ ಕಚೇರಿ ಬಳಿ ರಸ್ತೆಯಲ್ಲಿ ಕುಳಿತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಜಿಲ್ಲಾಡಳಿತ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದ ಕಾರ್ಯಕರ್ತರು ಮಂದಿರವನ್ನು ಪುನರ್ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ತೀರ್ವತೆ ಪಡೆಯುತ್ತಿದ್ದಂತೆ ಪೊಲೀಸರು ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು. ನಗರ ಶಾಸಕ ಡಾ.ಶಿವರಾಜ ಪಾಟೀಲರನ್ನು ಪೊಲೀಸರು ವಶಕ್ಕೆ ಪಡೆದರು. ನೂರಾರು ಕಾರ್ಯಕರ್ತರು ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗುತ್ತ ರಸ್ತೆಯಲ್ಲಿ ಕುಳಿತಿದ್ದರಿಂದ ಕೆಲ ಕಾಲ ಗೊಂದಲ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ರವೀಂದ್ರ ಜಲ್ದಾರ, ಶಂಕರ ರೆಡ್ಡಿ,ಪಿ.ಯಲ್ಲಪ್ಪ, ಸಿದ...
- Get link
- X
- Other Apps
ಮಣಿಪುರ ಹಿಂಸಾಚಾರ: ರಾಷ್ಟ್ರಪತಿಗಳ ಮಧ್ಯೆ ಪ್ರವೇಶಕ್ಕೆ ಮಲ್ಲಿಕಾರ್ಜುನ ಖರ್ಗೆ ಮನವಿ . ರಾಯಚೂರು,ನ.19- ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಎಲ್ಲೆ ಮೀರಿದ್ದು ಸಂವಿಧಾನದ ಮತ್ತು ಭಾರತೀಯ ನಾಗರೀಕರ ರಕ್ಷಕರಾಗಿರುವ ಘನತೆವೆತ್ತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ರವರು ಮಧ್ಯ ಪ್ರವೇಶಿಸಲು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆರವರು ಮನವಿ ಮಾಡಿದ್ದಾರೆ. ಕಳೆದ 18 ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು ಕೇಂದ್ರ ಸರ್ಕಾರ ಅದನ್ನು ಹತ್ತಿಕ್ಕಲು ಆಗುತ್ತಿಲ್ಲ ಅಲ್ಲಿಯ ಜನರು ಅಸುರಕ್ಷಿತವಾಗಿದ್ದಾರೆ ನಮ್ಮ ನೆಲದಲ್ಲೆ ನಮಗೆ ಭಯದ ವಾತಾವಾರಣದಲ್ಲಿ ಜೀವಿಸುವ ಸನ್ನಿವೇಶ ದುರದೃಷ್ಟಕರವೆಂದು ತಿಳಿಸಿರುವ ಅವರು ಕೂಡಲೆ ಮಣಿಪುರದಲ್ಲಿ ಶಾಂತಿ ನೆಲೆಸಲು ತಾವು ಮತ್ತು ರಾಷ್ಟ್ರಪತಿಗಳ ಕಛೇರಿ ಮಧ್ಯೆ ಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ.
- Get link
- X
- Other Apps
ಮಾವಿನ ಕೆರೆ ಅಭಿವೃದ್ಧಿ ಮತ್ತು ಸೌಂದರ್ಯಿಕರಣ ವೇಳೆ ಕಿಲ್ಲೆ ಬೃಹನ್ಮಠದ ಮಠದ ಆಸ್ತಿ ಉಪಯೋಗಿಸದಂತೆ ಮಠದ ಭಕ್ತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ರಾಯಚೂರು,ನ.19- ನಗರದ ಸರ್ವೆ ನಂ. 1212/*/1A (ವಿಸ್ತೀರ್ಣ: 14 ಎಕರೆ 17 ಗುಂಟೆ) ಜಮೀನಿನಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಮತ್ತು ಮಾವಿನ ಕೆರೆಯ ಸೌಂದರ್ಯಕರಣ ಕಾರ್ಯದಲ್ಲಿ ಕಿಲ್ಲೆ ಮಠದ ಸ್ವಾಧಿನದ ಜಮೀನನ್ನು ಯಾವುದೇ ರೀತಿಯಲ್ಲಿ ಉಪಯೋಗಿಸದಂತೆ ಕ್ರಮ ಕೈಗೊಳ್ಳಬೇಕೆಂದು ಮಠದ ಭಕ್ತರು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು. ನಮ್ಮ ಈ ಮನವಿಯನ್ನು ಸಹಾನುಭೂತಿಪೂರ್ವಕವಾಗಿ ಪರಿಗಣಿಸಬೇಕಾಗಿ ವಿನಂತಿಸಿದರು. ರಾಯಚೂರು ನಗರದ ಸರ್ವೆ ನಂ. 1212/*/1A ವಿಸ್ತೀರ್ಣ 14 ಎಕರೆ 17 ಗುಂಟೆ ಜಮೀನು ಶ್ರೀ 108 ಸಾವಿರ ದೇವರು ಷ|| ಬ್ರ|| ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ಶ್ರೀ 108 ಸಾವಿರ ದೇವರ ಸಂಸ್ಥಾನ ಕಿಲ್ಲೇಬೃಹನ್ಮಠ, ಬೇರೂನ್‌ಕಿಲ್ಲೇ, ರಾಯಚೂರು ಇವರಿಗೆ ಸೇರಿದ ಪಟ್ಟ ಜಮೀನಾಗಿದೆ. ಈ ಜಮೀನು ಶ್ರೀಗಳ ಮಠದ ಸ್ವಾಧೀನದಲ್ಲಿದ್ದು, ಮಠದ ಪರಂಪರೆ ಮತ್ತು ಶ್ರದ್ಧಾಲಯದ ಭಾಗವಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ಈ ಜಮೀನಿನಲ್ಲಿ ಅನಧಿಕೃತವಾಗಿ ಕೆಲ ಸಮಾಜ ಘಾತುಕ ವ್ಯಕ್ತಿಗಳು ಯಾವುದೇ ಪ್ರಾಧಿಕಾರ ಅಥವಾ ಮಠದ ಅನುಮತಿ ಪಡೆಯದೇ ಕಟ್ಟಡಗಳನ್ನು ನಿರ್ಮಿಸುತ್ತಿದ್ದು ಇದೆ . ಈ ರೀತಿಯ ಅನಧಿಕೃತ ನಿರ್ಮಾಣಗಳು ಮಠದ ಸ್ವತ್ತಿಗೆ ಹಾನಿ ಉಂಟು...
- Get link
- X
- Other Apps
ನಾನು ಜೀವಂತವಿದ್ದರೂ ನನ್ನ ನಕಲಿ ಮರಣ ಪ್ರಮಾಣ ಪತ್ರ ಲಗತ್ತಿಸಿ ಜಮೀನು ಲಪಟಾಯಿಸಿದ್ದಾರೆ- ಬಸಪ್ಪ . ರಾಯಚೂರು,ನ.19- ನಾನು ಜೀವಂತವಿದ್ದರೂ ನನ್ನ ನಕಲಿ ಮರಣ ಪ್ರಮಾಣ ಪತ್ರ ನೀಡಿ ನನ್ನ ಜಮೀನು ಲಪಟಾಯಿಸಿದ್ದಾರೆ ಎಂದು ಜಮೀನು ಮಾಲೀಕ ಬಸ್ಸಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿರವಾರ ತಾಲೂಕಿನ ಕಲಂಗೇರಾ ನಿವಾಸಿಯಾದ ನಾನು ನನ್ನ ನಕಲಿ ಮರಣ ಪ್ರಮಾಣ ಪತ್ರವನ್ನು ಲಗತ್ತಿಸಿ ಪಹಣಿಯಲ್ಲಿ ನನ್ನ ಹೆಸರಿಗಿದ್ದ ಜಮೀನು ಮುಟೇಶನ್ ಮಾಡಿಸಿಕೊಳ್ಳಲಾಗಿದ್ದು ಜೀವಂತವಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ ನೀಡಿರುವ ಗ್ರಾಮ ಲೆಕ್ಕಾಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ ಆದರೆ ಕಂದಾಯ ನಿರೀಕ್ಷಕ ಮತ್ತು ತಪ್ಪಿತಸ್ಥ ಇತರೆ ಅಧಿಕಾರಿಗಳ ಮತ್ತು ಜಮೀನು ಲಪಟಾಯಿಸಿದವರ ಮೇಲೆಯೂ ಕ್ರಮವಾಗಿ ಬೇಕೆಂದು ಆಗ್ರಹಿಸಿದ ಅವರು ನನ್ನ ಹೆಸರು ಮರಳಿ ಪಹಣಿಯಲ್ಲಿ ನಮೂದಿಸಬೇಕು ಮತ್ತು ಇದರಲ್ಲಿ ಭಾಗಿಯಾದವರ ಎಲ್ಲರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಹನುಮಂತ ,ಹನುಮೇಶ ಇದ್ದರು.
- Get link
- X
- Other Apps
ವಕ್ಫ್ ಮಂಡಳಿ ಚುನಾವಣೆ ಬೆದರಿಕೆ ಆರೋಪ ಶೋಕಾಸ್ ನೋಟೀಸ್ ಜಾರಿ ರಾಯಚೂರು,ನ.18- ಕರ್ನಾಟಕ ರಾಜ್ಯ ವಕ್ಫ ಮಂಡಳಿಗೆ ಮುತವಲ್ಲಿಗಳ ಕೋಟಾದಡಿಯಲ್ಲಿ ಚುನಾವಣೆ ನಡೆಯುತ್ತಿದ್ದು, ರಾಯಚೂರು ಜಿಲ್ಲೆಯಲ್ಲಿ ಒಟ್ಟು 16 ಮತದಾರರಿದ್ದು, ರಾಯಚೂರು ಜಿಲ್ಲೆಯ ವಕ್ಫ ಸಲಹಾ ಸಮಿತಿ ಅಧ್ಯಕ್ಷ ಮೌಲಾನಾ ಫರೀದ ಖಾನ ಅವರು ಮುತವಲ್ಲಿಗಳಿಗೆ ದೂರವಾಣಿ ಕರೆ ಮಾಡಿ ಅನ್ವರ ಭಾಷಾ ಮತ್ತು ಸರವರ್ ಬೇಗ್ ಅವರಿಗೆ ಮತದಾನ ಮಾಡಬೇಕೆಂದು ಹೆದರಿಸುತ್ತಿದ್ದಾರೆ, ಇದರಿಂದ ಪಾರದರ್ಶಕ ಚುನವಾಣಾ ಉದ್ದೇಶಕ್ಕೆ ದಕ್ಕೆಯಾಗುತ್ತಿದೆ ಎಂದು ಮಾಜಿ ಸಂಸದ ದಿ.ಅಬ್ದುಲ್ ಸಮದ್ ಸಿದ್ದೀಖಿ ಇವರ ಪುತ್ರ ಹ್ಯಾರಿಸ್ ಸಿದ್ದೀಖಿ ಇವರು ಚುನಾವಣಾಧಿಕಾರಿ ಆದಿತ್ಯ ಆಮ್ಲಾನ ಬಿಸ್ವಾಸ ರವರಿಗೆ ದೂರು ನೀಡಿದ್ದರು. ಈಗ ಚುನಾವಣಾಧಿಕಾರಿಗಳು ಇಬ್ಬರು ಅಭ್ಯರ್ಥಿಗಳಿಗೆ ಶೋಕಾಸ್ ನೋಟಿಸ್ ನೀಡಿ 24 ಗಂಟೆಗಳಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ, ಇಲ್ಲದಿದ್ದಲ್ಲಿ ನಿಯಮದಂತೆ ಕ್ರಮ ಜರುಗಿಸುವದಾಗಿ ಸೂಚಿಸಿದ್ದಾರೆ.
- Get link
- X
- Other Apps
ಭಕ್ತ ಶ್ರೀ ಕನಕದಾಸರ ಜಯಂತ್ಯೋತ್ಸವ- ಮ್ಯಾರಥಾನ್ ಓಟಕ್ಕೆ ಚಾಲನೆ: ಕೀರ್ತನೆಗಳ ಮೂಲಕ ಶಾಂತಿ ಸೌಹಾರ್ದತೆ ಸಾರಿದ ಮಹಾನ್ ಸಂತ ಕನಕದಾಸರು -ರವಿ ಬೋಸರಾಜು ರಾಯಚೂರು,ನ.18- ಜಾತಿ, ಮತ, ಪಂಥವೆಂದು ಬಡಿದಾಡದಿರಿ ಇರುದೊಂದೆ ಮಾನವಕುಲ ಎಂದು ತಮ್ಮ ಕೀರ್ತನೆಗಳ ಮೂಲಕ ನಾಡಿನಲ್ಲಿ ಶಾಂತಿ, ಸೌಹಾರ್ಧತೆ, ಸಮಾನತೆಯ ಸಂದೇಶ ಸಾರಿದ ಮಹಾನ್ ಶ್ರೇಷ್ಟ ಸಂತ ಭಕ್ತ ಕನಕದಾಸರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ತಿಳಿಸಿದರು. ನಗರದ ರೈಲ್ವೆ ನಿಲ್ದಾಣ ವೃತ್ತದಲ್ಲಿ ಹಾಲುಮತ ಸಮಾಜದ ಯುವಕರು ಭಕ್ತ ಶ್ರೀ ಕನಕದಾಸರ ಜಯಂತ್ಯೋತ್ಸವ ನಿಮಿತ್ಯ ಆಯೋಜಿಸಿದ್ದ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಹಸಿರು ನಿಶಾನೆ ತೋರಿಸಿ ಸ್ಪರ್ಧಾರ್ಥಿಗಳೊಂದಿಗೆ ಹೆಜ್ಜೆಹಾಕಿ ಚಾಲನೆ ನೀಡಿ ನಂತರ ವಿಜೇತರಿಗೆ ಪ್ರಶಸ್ತಿ ನೀಡಿ ಮಾತನಾಡಿದರು. ಮಾನವೀಯ ಮೌಲ್ಯ ಸಾರಿ ಜೀವನದುದ್ದಕ್ಕೂ ಹೋರಾಡಿದ ಸಂತ ಕನಕದಾಸರು. 15 ನೇ ಶತಮಾನದಲ್ಲಿಯೇ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ಜಾತಿ ಧರ್ಮದಿಂದ ಆಚೆಗೆ ನಾವೆಲ್ಲರೂ ಮಾನವೀಯ ಮೌಲ್ಯಗಳು ಅಳವಡಿಸಿಕೊಂಡು ಸಹೋದರರಂತೆ ಬಾಳಬೇಕೆಂದು ಸಂದೇಶ ನೀಡಿದ್ದಾರೆ. ಕನಕದಾಸರು ಯಾವುದೇ ಜಾತಿಗೆ ಸೀಮಿತವಾದವರಲ್ಲ ಅವರು ನಮ್ಮೆಲ್ಲರ ದೊಡ್ಡ ಆಸ್ತಿಯಾಗಿದ್ದಾರೆ ಎಂದರು. ಇಂತಹ ಮಹಾನ್ ನಾಯಕರ ಜಯಂತೋತ್ಸವ ದಿನದಂದು ಕ್ರೀಡೆಗೆ ಮಹತ್ವ ನೀಡಿರುವುದು ಶ್ಲಾಘನೀಯ. ಆರೋಗ್ಯಕರ ಜೀವನಕ್ಕೆ ಕ್ರೀಡೆ...