Posts

Showing posts from April, 2024

ಮುಂಜಿವೆ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ.

Image
  ಮುಂಜಿವೆ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ.                ರಾಯಚೂರು,ಏ.30- ಲೋಕಸಭಾ ಚುನಾವಣೆ ಮತದಾನಕ್ಕೆ ದಿನ ಗಣನೆ ಪ್ರಾರಂಭವಾಗಿದ್ದು ಈ ಬಾರಿ ಮತದಾನ ಹೆಚ್ಚಳವಾಗಬೇಕೆಂದು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮ ಮಾಡುತ್ತಿದೆ ಇದರೊಟ್ಟಿಗೆ ವಿವಿಧ ಸಂಘ ಸಂಸ್ಥೆಗಳು, ಸಮಾಜ ಸೇವಕರು ಶೇ.100 ರಷ್ಟು ಮತದಾನವಾಗಬೇಕೆಂಬ ಉದ್ದೇಶದಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ ವಿವಿಧ ಶುಭ ಸಮಾರಂಭದಲ್ಲಿ ವಿವಿಷ್ಟ ಬಗೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಅದರಂತೆ ತಾಲೂಕಿನ ಕಾಡ್ಲೂರು ಗ್ರಾಮದಲ್ಲಿ ಕೃಷ್ಣಾ ನದಿ ತೀರದ ಶ್ರೀ ವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದಲ್ಲಿ ಕಾಡ್ಲೂರು ಸಂಸ್ಥಾನದ ರಂಗರಾವ್ ದೇಸಾಯಿ ಸುಪುತ್ರ ರಘುಮಾನ್ಯನ ಉಪನಯನ                              ( ಮುಂಜಿವೆ) ಕಾರ್ಯಕ್ರಮದಲ್ಲಿ   ಮತದಾನ ಜಾಗೃತಿಯನ್ನು ರಾಜೇಂದ್ರಶಿವಾಳೆ ಮಾಡಿದರು ಶೇ.100 ರಷ್ಟು ಮತದಾನ ಮಾಡಬೇಕು ಆ ಮೂಲಕ ನಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕೆಂದು ಕೋರಿದರು .

ಶ್ರೀ ಸುಶಮೀಂದ್ರ ತೀರ್ಥರ ಆರಾಧನೆ: ತಿರುಪತಿ ವೆಂಕಟೇಶ ದೇವರ ವಸ್ತ್ರ ಸಮರ್ಪಣೆ.

Image
  ಶ್ರೀ ಸುಶಮೀಂದ್ರ ತೀರ್ಥರ ಆರಾಧನೆ:                            ತಿರುಪತಿ ವೆಂಕಟೇಶ ದೇವರ ವಸ್ತ್ರ ಸಮರ್ಪಣೆ.                            ರಾಯಚೂರು,ಏ.26- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಶಮೀಂದ್ರತೀರ್ಥ ಶ್ರೀ ಪಾದಂಗಳವರ ಆರಾಧನೆ ನೆರವೇರಿತು.                               ಬೆಳಿಗ್ಗೆ ಟಿಟಿಡಿ ಅಧಿಕಾರಿಗಳು ತಿರುಪತಿ ವೆಂಕಟೇಶ ದೇವರ ವಸ್ತ್ರ ತೆಗೆದುಕೊಂಡು ಬಂದರು ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ವಸ್ತ್ರ ವನ್ನು ಶ್ರೀ ಸುಶಮೀಂದ್ರತೀರ್ಥರ ಮೂಲ ಬೃಂದಾವನಕ್ಕೆ ಸಮರ್ಪಿಸಿದರು ನಂತರ ರಥೋತ್ಸವ ನೆರವೇರಿತು ಶ್ರೀ ಸುಶಮೀಂದ್ರತೀರ್ಥರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿತು.      ಉಂಜಲ ಮಂಟಪದಲ್ಲಿ ಶ್ರೀ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪಂಡಿತರಿಂದ ಉಪನ್ಯಾಸ ನಡೆಯಿತು.

ಕಾಡ್ಲೂರಲ್ಲಿ ಜಿ.ಕುಮಾರ ನಾಯಕ ಪರ ಶಾಸಕ ದದ್ದಲ್ ಪ್ರಚಾರ

Image
  ಕಾಡ್ಲೂರಲ್ಲಿ ಜಿ.ಕುಮಾರ ನಾಯಕ ಪರ ಶಾಸಕ ದದ್ದಲ್ ಪ್ರಚಾರ                                                                      ರಾಯಚೂರು,ಏ.23-  ದೇವಸೂಗೂರು ಜಿಲ್ಲಾ ಪಂಚಾಯತ್ ವ್ಯಾಪ್ತಿ ರಂಗಾಪುರ,ಕರೆಕಲ್, ಕಾಡ್ಲೂರು, ಗುರ್ಜಾಪೂರ, ಅರಷಿಣಿಗಿ, ಗ್ರಾಮಗಳಲ್ಲಿ  ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ  ಬಸನಗೌಡ ದದ್ದಲ್ ರವರು  ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ್ ರವರ ಪರವಾಗಿ  ಮತಯಾಚನೆ ಮಾಡಿದರು.  ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ಹಂಚಿನಾಳ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಿಂದ ಲೋಕಸಭಾ ಚುನಾವಣೆ ಪ್ರಚಾರ

Image
ಹಂಚಿನಾಳ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಿಂದ ಲೋಕಸಭಾ ಚುನಾವಣೆ ಪ್ರಚಾರ                       ರಾಯಚೂರು , ಏ.20-ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಂಚಿನಾಳ ಗ್ರಾಮದಲ್ಲಿ  ಚುನಾವಣಾ ಪ್ರಚಾರ ನಡೆಸಲಾಯಿತು. ಮಹಿಳೆಯರಿಗೆ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಗ್ಯಾರಂಟಿ ಯೋಜನೆಗಳ ಕುರಿತು ಮಾಹಿತಿ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡುವಂತೆ ಕೋರಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ‌ ಕಾರ್ಯಾಧ್ಯಕ್ಷ ಎ.ವಸಂತಕುಮಾರ, ಶಾಸಕ ಬಸನಗೌಡ ದದ್ದಲ, ಮಾದ್ಯಮ ವಕ್ತಾರ ಡಾ.ರಝಾಕ ಉಸ್ತಾದ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಹಾಗೂ ಇತರರು ಉಪಸ್ಥಿತರಿದ್ದರು .

ಕರ್ನಾಟಕ ರಾಜ್ಯ ರಾಜಕೀಯ ಪ್ರಯೋಗ ಶಾಲೆ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲಿಸಿ- ಡೆವಿಡ್ ಸೆಮಿಯೋನ್.

Image
  ಕರ್ನಾಟಕ ರಾಜ್ಯ ರಾಜಕೀಯ ಪ್ರಯೋಗ ಶಾಲೆ:                                ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲಿಸಿ- ಡೆವಿಡ್ ಸೆಮಿಯೋನ್.                                    ರಾಯಚೂರು,ಏ.20- ಕರ್ನಾಟಕ ರಾಜ್ಯ  ರಾಜಕೀಯ ಪ್ರಯೋಗ ಶಾಲೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡೆವಿಡ್ ಸಿಮಿಯೋನ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಬಾರಿಯ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ ಎಂದ ಅವರು ಕರ್ನಾಟಕ ರಾಜ್ಯ ಪಾಲಿಟಿಕಲ್ ಲ್ಯಾಬೋರೇಟರಿಯಾಗಿದೆ ಇಲ್ಲಿ ಅನೇಕ ಅನೇಕ ಪಕ್ಷಗಳು ಉದಯಿಸಿವೆ ಜನತಾ ಪಕ್ಷ, ಜನತಾದಳ ಎಸ್ ,ಜನತಾದಳ ಯು ಮುಂತಾದ ಪಕ್ಷಗಳು ಪ್ರಾರಂಭವಾಗಿವೆ ಎಂದರು. ಕಾಂಗ್ರೆಸ್ ಪಕ್ಷ ಬಡವರ ಪರವಾದ ಪಕ್ಷವಾಗಿದೆ ಧ್ವನಿಯಿಲ್ಲದವರ ಬಗ್ಗೆ ಹೋರಾಡುತ್ತಿದೆ ಈ ಬಾರಿ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರು, ವೀರಶೈವ ಲಿಂಗಾಯಿತರು ,ಹಿಂದೂಯೇತರರು ಎಲ್ಲರು ಕಾಂಗ್ರೆಸ್ ಗೆ ಬೆಂಬಲಿಸಲಿದ್ದಾರೆ ಎಂದರು. ಸಂವಿಧಾನ ಬದಲಾಯಿಸುತ್ತೇನೆಂದು ಅನೇಕ ಬಿಜೆಪಿ ನಾಯಕರು ಹೇಳಿದ್ದಾರೆ ಆದರೆ ಪ್ರಧಾನಿ ಮೋದಿ ಸಂವಿದಾನ ಬದಲಾವಣೆ ಮಾಡುವುದಿಲ್ಲವೆಂದು ಹೇಳಿದ್ದಾರೆ ಎಂದರು.    ...

ನೇಹಾ ಕೊಲೆ ಪ್ರಕರಣ ಅತ್ಯಂತ ಖಂಡನೀಯ: ಪೊಲೀಸರ ಮಾಹಿತಿ ಆಧರಿಸಿ ಸಿಎಂ ಹೇಳಿಕೆ- ಸೆಮಿಯೋನ್.

Image
  ನೇಹಾ ಕೊಲೆ ಪ್ರಕರಣ ಅತ್ಯಂತ ಖಂಡನೀಯ:                          ಪೊಲೀಸರ ಮಾಹಿತಿ ಆಧರಿಸಿ  ಸಿಎಂ ಹೇಳಿಕೆ- ಸೆಮಿಯೋನ್.                                                                    ರಾಯಚೂರು,ಏ.20- ನೇಹಾ ಹಿರೇಮಠ ಕೊಲೆ ಪ್ರಕರಣ ಅತ್ಯಂತ ಖಂಡನೀಯವಾಗಿದ್ದು ಈ ಬಗ್ಗೆ ಪೊಲೀಸರ ಮಾಹಿತಿ ಆಧಾರಿಸಿ   ಸಿಎಂ  ಹೇಳಿಕೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡೆವಿಡ್ ಸೆಮಿಯೋನ್ ಹೇಳಿದರು. ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಸಿದ್ದರಾಮಯ್ಯ ಘಟನೆ ಕುರಿತು ಹೇಳಿಕೆ ನೀಡಿದ್ದು ಅದು ಪೊಲೀಸರು ಮಾಹಿತಿ ಅನುಸರಿಸಿ ಎಂದ ಅವರು ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲವೆಂದ ಅವರು                 ನೇಹಾ ಕೊಲೆ ಅತ್ಯಂತ ಖಂಡನೀಯವಾಗಿದೆ ಅಲ್ಲದೆ ಇಂತಹ ತಪ್ಪು ಯಾರೇ ಮಾಡಿದರು ಅವರು ಮೇಲೆ ಕಠಿಣ ಕಾನೂನು ಕ್ರಮವಾಗಬೇಕೆಂದರು.                      ...

ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮ ಪತ್ರ ಸಲ್ಲಿಕೆ ಭರಾಟೆ.

Image
ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮ ಪತ್ರ ಸಲ್ಲಿಕೆ ಭರಾಟೆ.                                          ರಾಯಚೂರು,ಏ.18- ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಪ್ರಮುಖ ಪಕ್ಷಗಳ ಚುನಾವಣಾ ಕಣದಲ್ಲಿರುವ ಹುರಿಯಾಳುಗಳು ಇಂದು ಭಾರಿ ಜನಸ್ತೋಮದೊಂದಿಗೆ ಆಗಮಿಸಿ  ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಬೆಳಿಗ್ಗೆ ಅತ್ತನೂರು ಸಭಾಂಗಣದಲ್ಲಿ ನಾಮಪತ್ರ ಸಲ್ಲಿಕೆ ಪೂರ್ವಭಾವಿ ಸಭೆ ಮಾಡಿದ ಬಿಜೆಪಿ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಂತರ ಪಕ್ಷದ ನಾಯಕರಾದ ಶಾಸಕ ಜನಾರ್ಧನರೆಡ್ಡಿ, ಎಂಎಲ್ಸಿ ಚೆಲುವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವರಾದ ಕೆ.ಶಿವನಗೌಡ ನಾಯಕ, ವೆಂಕಟರಾವ್ ನಾಡಗೌಡ, ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ತಿಪ್ಪರಾಜು ಹವಾಲ್ದಾರ್  ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಮುಂತಾದವರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು. ಅತ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ‌ ಐಎಎಸ್ ಅಧಿಕಾರಿ ಜಿ.ಕುಮಾರ ನಾಯಕ ನಗರದ ಕರ್ನಾಟಕ ಸಂಘದಿಂದ ತೆರೆದ  ವಾಹನದಲ್ಲಿ ಭಾರಿ ಜನಸ್ತೂಮದೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಸಚಿವರಾದ ಎನ್.ಎಸ್. ಬೋಸರಾಜು, ಶರಣ ...

ಬಿಸಿಲಿನ ತಾಪ ತಣಿಸಿಕೊಳ್ಳಲು ಈಜುಗೊಳದತ್ತ ಯುವಕರು, ಬಾಲಕರು.

Image
  ಬಿಸಿಲಿನ ತಾಪ ತಣಿಸಿಕೊಳ್ಳಲು ಈಜುಗೊಳದತ್ತ ಯುವಕರು, ಬಾಲಕರು.                                  ರಾಯಚೂರು,ಏ.18- ಬೇಸಿಗೆ ಮಧ್ಯೆ ಭಾಗದಲ್ಲಿ ಸೂರ್ಯನ ಪ್ರಕೋಪ ಮಿತಿಮೀರಿದೆ ತಾಪಮಾನ ಗರಿಷ್ಟ ಪ್ರಮಾಣದಲ್ಲಿದ್ದು ಬಿಸಿಲಿನ ತಾಪ ತಣಿಸಿಕೊಳ್ಳಲು ಯುವಕರು, ಬಾಲಕರು ಈಜುಗೂಳದತ್ತ ಮುಖಮಾಡುತ್ತಿದ್ದಾರೆ. ನಗರದ ಬಿಜನಗೇರಾ ರಸ್ತೆಯ ತಿರುಮಲ ಹಿಲ್ಸ್ ಬಳಿಯ ಬ್ಲೂವ್ ಹೆವನ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಯುವಕರು, ಬಾಲಕರು ಈಜಾಡುತ್ತ ಬಿಸಿಲಿನ ಬೇಗುದಿ ತಣಿಸಿಕೊಳ್ಳುತ್ತಿದ್ದಾರೆ.               ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೂ ಈಜುಕೊಳ ತೆರೆಯಲಿದ್ದು ಒಂದು ಗಂಟೆ ಈಜಾಡಲು ತಲಾ ಒಬ್ಬರಿಗೆ 100ರೂ ಪ್ರವೇಶ       ದರವಿದ್ದು  ಯುವಕರು ತಮ್ಮ ಗೆಳೆಯರೊಂದಿಗೆ ಕೆಲಹೊತ್ತು ಈಜುಕೊಳದಲ್ಲಿ ಮಿಂದೆಳುತ್ತಾ, ಮೇಲಿಂದ ಜಿಗಿಯುತ್ತಾ ಬಿಸಿಲಿನ ಬೇಗುದಿಯನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಯುವಕರು ಮಾತ್ರವಲ್ಲದೆ ಬಾಲಕ ಬಲಕೀಯರು ಸಹ ತಮ್ಮ ಪಾಲಕರೊಂದಿಗೆ ಆಗಮಿಸಿ ಈಜಾಡುವ ದೃಶ್ಯ ಕಾಣುತ್ತೇವೆ.                            ...

ಕಾಡ್ಲೂರಲ್ಲಿ ನಾಳೆ ಶ್ರೀರಾಮನವಮಿ ಉತ್ಸವ

Image
  ಕಾಡ್ಲೂರಲ್ಲಿ ನಾಳೆ   ಶ್ರೀರಾಮನವಮಿ ಉತ್ಸವ                                    ರಾಯಚೂರು,ಏ.16- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ನವವಾಸಿ ಶ್ರೀ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ಸನ್ನಿದಾನದಲ್ಲಿ  ಏ.17ರಂದು  ಶ್ರೀರಾಮನವಮಿ ಉತ್ಸವವನ್ನು  ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಸುಪ್ರಭಾತ,  ನಿರ್ಮಾಲ್ಯ ವಿಸರ್ಜನೆ, ಅಯೋಧ್ಯದಿಂದ ತಂದ ಶ್ರೀ ರಾಮದೇವರ ಧ್ವಜಾರೋಹಣ,  ಶ್ರೀ ರಾಮಾಷ್ಠಕ ಸ್ತೋತ್ರ, ವಾಯುಸ್ತುತಿ, ಅಷ್ಟೋತ್ತರ ಪಾರಾಯಣ. ಶ್ರೀರಾಮದೇವರಿಗೆ, ಶ್ರೀಪ್ರಾಣದೇವರಿಗೆ ಅಭಿಷೇಕ, ಅಲಂಕಾರ, ದೊಡ್ಡ ದೇವರ ಪ್ರತಿಮಾ ಪೂಜೆ, ಶ್ರೀ ರಾಮದೇವರ ತೊಟ್ಟಿಲು ಮಹೋತ್ಸವ, ದಾಮೋದರ್ ಆಚಾರ್ ಪುರೋಹಿತ ಇವರಿಂದ ಶ್ರೀರಾಮದೇವರ ಕಥೆ  ನಂತರ ನೈವೇದ್ಯ, ಮಹಾ ಮಂಗಳಾರತಿ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಕಾಡ್ಲೂರು ಸಂಸ್ಥಾನದ ರಂಗರಾವ್ ದೇಸಾಯಿ, ಜಯ ಕುಮಾರ್ ದೇಸಾಯಿ,ವಿಜಯ ಕುಮಾರ್ ದೇಸಾಯಿ ಹಾಗೂ ಗ್ರಾಮಸ್ಥರು ವಿನಂತಿಸಿಕೊಳ್ಳುತ್ತಾರೆ .

ಜೋಡು ವೀರಾಂಜನೇಯ ದೇವಸ್ಥಾನದ ಶ್ರೀ ರಾಮೋತ್ಸವದಲ್ಲಿ ಭಾಗಿಯಾದ ಸಂಸದ ರಾಜಾ ಅಮರೇಶ್ವರ ನಾಯಕ: ಉಡುಪಿ ಅದಮಾರು ಮತ್ತು ಪಲಿಮಾರು ಶ್ರೀಗಳಿಂದ ಆಶೀರ್ವಾದ

Image
  ಜೋಡು ವೀರಾಂಜಿನೇಯ  ದೇವಸ್ಥಾನದ ಶ್ರೀ ರಾಮೋತ್ಸವದಲ್ಲಿ ಭಾಗಿಯಾದ  ಸಂಸದ ರಾಜಾ ಅಮರೇಶ್ವರ ನಾಯಕ:                                ಉಡುಪಿ ಅದಮಾರು ಮತ್ತು ಪಲಿಮಾರು ಶ್ರೀಗಳಿಂದ ಆಶೀರ್ವಾದ   ರಾಯಚೂರು,ಏ.15- ರಾಯಚೂರು ನಗರದ ಸಾವಿತ್ರಿ ಕಾಲೋನಿಯಲ್ಲಿರುವ ಶ್ರೀ ಜೋಡು ಆಂಜನೇಯ್ಯ ದೇವಸ್ಥಾನದಲ್ಲಿ ಜರುಗುತ್ತಿರುವ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ್ ಅವರು ಭಾಗಿಯಾಗಿದರು. ಮೊದಲಿಗೆ ಶ್ರೀ ಜೋಡು ವೀರಾಂಜಿನೇಯ  ದೇವರ ದರ್ಶನ  ಆರ್ಶೀವಾದ ಪಡೆದುಕೊಂಡು ನಂತರ ಉಡುಪಿಯ ಶ್ರೀ ಪಲಿಮಾರು ಮಠದ ಶ್ರೀಗಳಾದ ಶ್ರೀ ವಿಧ್ಯಾಧೀಶ ಶ್ರೀಪಾದರು ಹಾಗೂ ಉಡುಪಿಯ ಅದಮಾರು ಮಠದ ಶ್ರೀಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಗೆ ಸನ್ಮಾನಿಸಿ ಆರ್ಶೀವಾದ ಪಡೆದುಕೊಂಡರು.  ಈ ಸಂದರ್ಭದಲ್ಲಿ ರಾಮೋತ್ಸವ ಸಮಿತಿ ಪದಾಧಿಕಾರಿಗಳು ,ಬಿಜೆಪಿ ಪಕ್ಷದ ಮುಖಂಡರು, ಬ್ರಾಹ್ಮಣ ಸಮುದಾಯದ ಮುಖಂಡರು, ಭಕ್ತರು ಉಪಸ್ಥಿತರಿದ್ದರು.

ಜಿ .ಕುಮಾರ ನಾಯಕ್ ಪರ ಬಿರುಸಿನ ಪ್ರಚಾರ ಕೈಗೊಂಡ ಶಾಸಕ ಬಸನಗೌಡ ದದ್ದಲ್

Image
 ಜಿ .ಕುಮಾರ ನಾಯಕ್ ಪರ ಬಿರುಸಿನ ಪ್ರಚಾರ ಕೈಗೊಂಡ ಶಾಸಕ ಬಸನಗೌಡ ದದ್ದಲ್ ರಾಯಚೂರು ಏ.15- ರಾಯಚೂರು ಗ್ರಾಮೀಣ  ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಂಕೇಶ್ವರ ಮತ್ತು ಸಾದಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಪ್ರವಾಸ ಕೈಗೊಂಡು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಐಎಎಸ್ ಅಧಿಕಾರಿ ಜಿ. ಕುಮಾರ್ ನಾಯಕ್ ರವರ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡು, ಗ್ಯಾರೆಂಟಿ ಕಾರ್ಡ್ ಗಳನ್ನು ವಿತರಿಸಿ ಮಾತನಾಡಿದ  ಬಸನಗೌಡ ದದ್ದಲ್ ಶಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ರವರು    ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಹಿಂದೆ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯನ್ನು   ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಮೂಲಕ  ಜನರ ವಿಶ್ವಾಸವನ್ನು ಗಳಿಸಿದೆ,  ರಾಜ್ಯದ ಮುಖ್ಯಮಂತ್ರಿಗಳಾದ  ಶ್ರೀ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್  ಮತ್ತು ಸಚಿವ ಸಂಪುಟ   ನುಡಿದಂತೆ ನಡೆದಿದೆ ಕೊಟ್ಟ ಮಾತಿನಂತೆ  5 ಗ್ಯಾರೆಂಟಿಗಳಾದ ಗೃಹ ಲಕ್ಷ್ಮಿ , ಶಕ್ತಿ, ಗೃಹ ಜ್ಯೋತಿ  , ಯುವನಿಧಿ, ಅನ್ನಭಾಗ್ಯ ಯೋಜನೆಯಡಿ 5 ಕೆ ಜಿ ಅಕ್ಕಿ ಮತ್ತು ‌ಉಳಿದ 5 ಕೆ.ಜಿ ಅಕ್ಕಿಯ ಬದಲಾಗಿ ಹಣ ನೇರವಾಗಿ ಅವರಖಾತೆಗೆ ಹಣ‌ ಜಮಾ...

ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ ಸಾಂಕೇತಿಕ ನಾಮಪತ್ರ ಸಲ್ಲಿಕೆ : ಏಪ್ರಿಲ್‌ 18 ಕ್ಕೆ ಬೃಹತ್ ರ್ಯಾಲಿಯೊಂದಿಗೆ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಕೆ

Image
  ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ ಸಾಂಕೇತಿಕ ನಾಮಪತ್ರ ಸಲ್ಲಿಕೆ : ಏಪ್ರಿಲ್‌ 18 ಕ್ಕೆ ಬೃಹತ್ ರ್ಯಾಲಿಯೊಂದಿಗೆ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಕೆ ರಾಯಚೂರು,ಏ.15- ರಾಯಚೂರು - ಯಾದಗಿರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಜಾ ಅಮರೇಶ್ವರ ನಾಯಕರವರು ಇಂದು ಚುನಾವಣಾ ಅಧಿಕಾರಿಗಳಿಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.  ಅವರಿಂದು ಜಿಲ್ಲಾಧಿಕಾರಿ ಕಛೇರಿಯಲ್ಲಿಂದು ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಚಂದ್ರಶೇಖರ ನಾಯಕ್ ಅವರಿಗೆ ನಾಮಪತ್ರ ಸಲ್ಲಿಸಿದರು.  ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದವರು ನಮ್ಮ ಮನೆದೇವರದಾದ ಗುರುಗುಂಟಾ ಶ್ರೀ ಅಮರೇಶ್ವರ ದೇವರ ದಿನವಾದ ಇಂದು ಸಾಂಕೇತಿಕವಾಗಿ ನಾಮಪತ್ರ‌ ಸಲ್ಲಿಸುತ್ತಿದ್ದು , ಏಪ್ರಿಲ್ 18 ರಂದು ಎರಡನೇ ಬಾರಿಗೆ ಬಿಜೆಪಿ - ಜೆಡಿಎಸ್ ಪಕ್ಷಗಳ  ರಾಜ್ಯದ ಮುಖಂಡರೊಂದಿಗೆ ಹಾಗೂ ಸಮಸ್ತ ಕಾರ್ಯಕರ್ತರೊಂದಿಗೆ , ಜನತೆಯೊಂದಿಗೆ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ಉಮೇದುವಾರಿಕೆ ಸಲ್ಲಿಸುವುದಾಗಿ ತಿಳಿಸಿದರು. ಅಂದು ಕೇಂದ್ರ ಸಚಿವರಾದ ನಾರಾಯಣಸ್ವಾಮಿ,  ಪಕ್ಷದ  ನಾಯಕರಾದ ಜನಾರ್ಧನರೆಡ್ಡಿ ಸೇರಿದಂತೆ ರಾಯಚೂರು - ಯಾದಗಿರಿ ಲೋಕಸಭಾ ಕ್ಷೇತ್ರದ ಪ್ರಮುಖ ಮುಖಂಡರು , ಕಾರ್ಯಕರ್ತರೊಂದಿಗೆ ಏಪ್ರಿಲ್ 18 ಕ್ಕೆ   ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ರಾಜಾನವುಷನಾಯಕ್ ,  ರಾಘವೇ...

ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ : ದೇಶದ ಭದ್ರತೆ ಹಾಗೂ ವಿಕಾಸಕ್ಕೆ ಆದ್ಯತೆ-ರಾಜಾ ಅಮರೇಶ್ವರ ನಾಯಕ

Image
  ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ :                                                         ದೇಶದ ಭದ್ರತೆ ಹಾಗೂ ವಿಕಾಸಕ್ಕೆ ಆದ್ಯತೆ-ರಾಜಾ ಅಮರೇಶ್ವರ ನಾಯಕ                                                               ರಾಯಚೂರು,ಏ.15- ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ  ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿಂದು ಭಾರತದ ಪ್ರಧಾನಮಂತ್ರಿಗಳಾದ   ನರೇಂದ್ರ ಮೋದಿಯವರು  ನೀಡಿರುವ ಸಂಕಲ್ಪ ಪತ್ರದ ಕುರಿತಂತೆ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಸಂಸದರು ಹಾಗೂ ರಾಯಚೂರು ಲೋಕಸಭಾ ಚುನಾವಣೆ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮಾತನಾಡಿದರು. ಬಿಜೆಪಿ ಪಕ್ಷ ದೇಶದ ಐಕ್ಯತೆ ಮತ್ತು ಸುರಕ್ಷತೆ ಹಾಗೂ ವಿಕಾಸಕ್ಕೆ ಆದ್ಯತೆ ನೀಡುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಹಾಗೂ ನಗರ ಶಾಸಕರಾದ  ಡಾ.ಶಿವರಾಜ್‌ಪಾಟೀಲ್ , ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಶಂಕರೆಡ್ಡಿ, ನಗರಾಧ್ಯಕ್ಷರಾದ ಉಟ್ಕೂರು ರಾಘವೇ...

ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಯುವ ಗೋಷ್ಟಿ ಆಯೋಜನೆ: ಯುವಕರು ಕೀಳರಿಮೆ ತೊರೆದು ಪ್ರತಿಭೆ ಮೂಲಕ ಹೊರಹೊಮ್ಮಬೇಕು- ಪಲಿಮಾರು ಶ್ರೀ.

Image
ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಯುವ ಗೋಷ್ಟಿ ಆಯೋಜನೆ: ಯುವಕರು ಕೀಳರಿಮೆ ತೊರೆದು ಪ್ರತಿಭೆ ಮೂಲಕ ಹೊರಹೊಮ್ಮಬೇಕು- ಪಲಿಮಾರು ಶ್ರೀ.                                            ರಾಯಚೂರು,ಏ.14- ಯುವಕರು ಕೀಳರಿಮೆ ತೊರೆದು  ತಮ್ಮ ಪ್ರತಿಭೆ ಮೂಲಕ ಸಮಾಜದಲ್ಲಿ ಹೊರಹೊಮ್ಮಬೇಕು ಎಂದು ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ಹೇಳಿದರು. ಅವರಿಂದು ನಗರದ ಸಾವಿತ್ರಿ ಕಾಲೋನಿಯ ಶ್ರೀ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಯುವ ಗೋಷ್ಟಿಯಲ್ಲಿ  ಆಶೀರ್ವಚನ ನೀಡಿದರು.                            ಧರ್ಮ ಎಂದರೆ ನಮಗೆ ವಿಹಿತವಾದ ಕರ್ಮ ಮಾಡುವುದು ಎಂದ ಅವರು ಯೋಧ ದೇಶವನ್ನು ಕಾಯುವುದು, ಅಧ್ಯಾಪಕ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಅವರವರ ಕಾರ್ಯವನ್ನು ಅವರು ಮಾಡಬೇಕೆಂದರು. ನಾವು ಮೊದಲು ನಮ್ಮ ಮನೆಯ ನಂದಾ ದೀಪ ಹಚ್ಚಬೇಕು ನಂತರ ಅನ್ಯರಿಗೆ ದಾರಿದೀಪ ಆಗಬೇಕೆಂದರು. ಸಮಾಜದಲ್ಲಿ ನಾವೆಲ್ಲ ಉತ್ತಮ ರೀತಿಯಲ್ಲಿ ಜೀವನ ನಡೆಸಬೇಕು ಎಂದರು. ದೇಶವನ್ನು ರಕ್ಷಿಸುವ ಪಣ ತೊಡಬೇಕು ಅಧರ್ಮಿಗಳ ತಪ್ಪು ಕೆಲಸವನ್ನು ಖಂಡಿಸಬೇಕೆಂದರು...

ದೇಶಕ್ಕೆ ಭವಿಷ್ಯವನ್ನು ಸಂವಿಧಾನದ ಮೂಲಕ ರೂಪಿಸಿದ ಮಹಾನ್ ಮೇಧಾವಿ ಡಾ. ಬಿ.ಆರ್ ಅಂಬೇಡ್ಕರ್

Image
  ದೇಶಕ್ಕೆ ಭವಿಷ್ಯವನ್ನು  ಸಂವಿಧಾನದ ಮೂಲಕ ರೂಪಿಸಿದ  ಮಹಾನ್ ಮೇಧಾವಿ ಡಾ. ಬಿ.ಆರ್ ಅಂಬೇಡ್ಕರ್                          ರಾಯಚೂರು,ಏ.14- ದೇಶಕ್ಕೆ ಭವಿಷ್ಯವನ್ನು  ಸಂವಿಧಾನದ ಮೂಲಕ ರೂಪಿಸಿದ  ಮಹಾನ್ ಮೇಧಾವಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಆಗಿದ್ದಾರೆ ಎಂದು ರಾಯಚೂರು ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ್ ಬೇವಿನ ಬೇವಿನಬೆಂಚಿ ಹೇಳಿದರು. ಅವರು ನಗರದ ಕನ್ನಡ ಭವನದಲ್ಲಿ ಜರುಗಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಬೇಡ್ಕರ್ ಅವರು  ಸ್ವಾತಂತ್ರ, ಸಮಾನತೆ, ಭಾತೃತ್ವದ, ನೆಲೆಯಲ್ಲಿ ದೇಶವನ್ನು ಕಟ್ಟಬೇಕು ಮತ್ತು ಜಾತಿರಹಿತ ಉತ್ತಮ ಸಮಾಜವನ್ನು ನಿರ್ಮಿಸಬೇಕು ಎಂದು ತಿಳಿದು ಅದರಂತೆ ಶ್ರಮಿಸಿ ಸರ್ವಜನರ ಹಿತಕ್ಕಾಗಿ ದುಡಿದ ಜ್ಞಾನಿ. ಅವರ ಶ್ರಮದ ಫಲ ಇವತ್ತು ಎಲ್ಲಾ ಸಮುದಾಯಗಳು ಹಂಚಿಕೊಂಡು ತಿನ್ನುತ್ತಿದ್ದೇವೆ ಎಂದು ತಿಳಿಸಿದರು.                                   ದೇಶದ ಅರ್ಥ ವ್ಯವಸ್ಥೆಯಿಂದ ಹಿಡಿದು ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಯ ಬದಲಾವಣೆಗೆ ಅವರು ಹಾಕಿಕೊಟ್ಟ ದಾರಿ ತುಂಬಾ ಶ್ರೇ...

ಲೋಕಸಭಾ ಚುನಾವಣೆ: ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ: ವೆಚ್ಚ ವೀಕ್ಷಕ ಗುಂಜನಕುಮಾರ ವರ್ಮಾ

Image
  ಲೋಕಸಭಾ ಚುನಾವಣೆ : ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ- ವೆಚ್ಚ ವೀಕ್ಷಕ ಗುಂಜನಕುಮಾರ ವರ್ಮಾ   ರಾಯಚೂರು,ಏ.14- ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಪ್ರತಿಯೊಂದು ಚುನಾವಣಾ ಘಟನೆಗಳ ಮೇಲೆ ನಿಗಾ ವಹಿಸಿ, ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕೆಂದು ಚುನಾವಣಾ ವೆಚ್ಚ ವೀಕ್ಷಕರಾದ ಗುಂಜನಕುಮಾರ ಅವರು ಹೇಳಿದರು. ಅವರಿಂದು ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾ ಕಾರ್ಯಕ್ಕೆ ನೇಮಕಗೊಂಡ ನೋಡಲ್‌ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿ, ಲೋಕಸಭಾ ಸಾರ್ವತ್ರಿಕ ಚುನಾ ವಣೆ ಸಂಬಂಧವಾಗಿ ಪ್ರತಿಯೊಂದು ಕಾರ್ಯಗಳನ್ನು ಪಾರದರ್ಶಕವಾಗಿ ನಿರ್ವಹಿಸಲಾಗುತ್ತದೆ. ಚುನಾವಣೆಗೆ ಸಂಬಂಧಿಸಿದ ಪ್ರತಿಯೊಂದು ಅಂಶ ಗಳನ್ನು ಸೂಕ್ಷ್ಮವಾಗಿ ವೀಕ್ಷಣೆ ಮಾಡ ಲಾಗುವುದು. ಹೀಗಾಗಿ ಅಭ್ಯರ್ಥಿಗಳು ವ್ಯಯಿಸುವ ಚುನಾವಣೆ ಖರ್ಚು- ವೆಚ್ಚಗಳ ಮೇಲೂ ನಿಗಾ ವಹಿಸಬೇಕು ಎಂದರು. ಚುನಾವಣೆ ಪಾರದರ್ಶಕವಾಗಿ ನಡೆಯಲು ಸಹಾಯಕ ವೆಚ್ಚ ವೀಕ್ಷಕ ಅಧಿಕಾರಿಗಳು, ಎಫ್‌ಎಸ್‌ಟಿ, ಎಸ್ ಎಸ್‌ಟಿ ಮತ್ತು ವಿವಿಟಿ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಚೆಕ್‌ ಪೋಸ್ಟ್‌ಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಸೌಜನ್ಯಯುತವಾಗಿ ವರ್ತಿಸಿ, ಸಮರ್ಪಕ ತಪಾಸಣೆ ನಡೆಸಬೇಕು. ದಾ...

ಜಿಲ್ಲಾಡಳಿತದಿಂದ ಸರಳ ರೀತಿಯಲ್ಲಿ ಡಾ.ಬಿ.ಆರ್‌ ಅಂಬೇಡ್ಕರ್‌ ಜಯಂತಿ ಆಚರಣೆ: ಡಾ.ಬಿ.ಆರ್‌ ಅಂಬೇಡ್ಕರ್‌ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು-ಡಿ.ಸಿ ಎಲ್.ಚಂದ್ರಶೇಖರ ನಾಯಕ

Image
  ಜಿಲ್ಲಾಡಳಿತದಿಂದ ಸರಳ ರೀತಿಯಲ್ಲಿ ಡಾ.ಬಿ.ಆರ್‌ ಅಂಬೇಡ್ಕರ್‌ ಜಯಂತಿ ಆಚರಣೆ: ಡಾ.ಬಿ.ಆರ್‌ ಅಂಬೇಡ್ಕರ್‌ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ  ಉತ್ತಮ ಜೀವನ ರೂಪಿಸಿಕೊಳ್ಳಬಹುದು-ಡಿ.ಸಿ ಎಲ್.ಚಂದ್ರಶೇಖರ ನಾಯಕ ರಾಯಚೂರು,ಏ.14 -ಸಂವಿಧಾನ ರಚನೆಯಲ್ಲಿ ಡಾ.ಬಿಆರ್‌ ಅಂಬೇಡ್ಕರ್‌ ಅವರ ಕೊಡುಗೆ ಹಾಗು ಶ್ರಮ ಅಪಾರವಾಗಿದ್ದು, ಅವರು ಹಾಕಿಕೊಟ್ಟ ಮಾಗದಲ್ಲಿ ನಡೆದಾಗ ಮಾತ್ರ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ ನಾಯಕ ಅವರು ಹೇಳಿದರು.  ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್‌ ಅಂಬೇಡ್ಕರ್‌ ಅವರ 133ನೇ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.  ಡಾ.ಬಿ.ಆರ್‌ ಅಂಬೇಡ್ಕರ್‌ ಅವರು ದೇಶದಲ್ಲಿ ಸಮಾನತೆಯನ್ನು ಸಾರಿ, ಸಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಜೊತೆಗೆ ಸಂವಿಧಾನವನ್ನು ರಚನೆ ಮಾಡುವಲ್ಲಿ ಅವರ ಪಾತ್ರ ಅಪಾರವಾಗಿದ್ದು, ಅಂತಹ ಮಹಾನ್‌ ವ್ಯಕ್ತಿಗಳ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.  ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್‌ ತುಕಾರಾಮ ಪಾಂಡ್ವೆ, ಜಿಲ್ಲ...

ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಇಂದು ಯುವ ಗೋಷ್ಟಿ: ಸನಾತನ ಧರ್ಮ ಕುರಿತು ಎ.ನಾಗರಾಜರಿಂದ ವಿಷಯ‌ ಮಂಡನೆ

Image
  ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಇಂದು ಯುವ ಗೋಷ್ಟಿ:            ಸನಾತನ ಧರ್ಮ ಕುರಿತು ಎ.ನಾಗರಾಜರಿಂದ ವಿಷಯ‌ ಮಂಡನೆ ರಾಯಚೂರು, ಏ.14- ನಗರದ ಸಾವಿತ್ರಿ ಕಾಲೋನಿಯ ಶ್ರೀ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಇಂದು ಯುವ ಗೋಷ್ಟಿ ನಡೆಯಲಿದ್ದು ಸನಾತನ ಧರ್ಮ ಮತ್ತು ಯುವಕರು ಕುರಿತು ಎ.ನಾಗರಾಜರಿಂದ ವಿಷಯ‌ಮಂಡನೆ ನಡೆಯಲಿದೆ.             ದೇವಸ್ಥಾನದ ಸಭಾ ಭವನದಲ್ಲಿ ಸಂಜೆ 4 ಗಂಟೆಗೆ ಪೂಜ್ಯ ಪಲಿಮಾರು ಮಠದ ಉಭಯ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಈ ವಿಶೇಷ ಗೋಷ್ಠಿ  ಆಯೋಜಿಸಲಾಗಿದ್ದು ಎಲ್ಲ ಯುವಕ, ಯುವತಿಯರು, ಹಿರಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಲು ಶ್ರೀ ರಾಮೋತ್ಸವ ಸಮಿತಿ  ಕೋರಿದೆ.

ಅಂಬೇಡ್ಕರ್ ಜಯಂತಿ: ಶಾಸಕ ದದ್ದಲ್ ರಿಂದ ಮಾಲಾರ್ಪಣೆ

Image
  ಅಂಬೇಡ್ಕರ್ ಜಯಂತಿ:  ಶಾಸಕ ದದ್ದಲ್ ರಿಂದ ಮಾಲಾರ್ಪಣೆ        ರಾಯಚೂರು,ಏ.14- ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್   ರವರ ಜನ್ಮದಿನದಂದು ರಾಯಚೂರು ಗ್ರಾಮೀಣ ಕ್ಷೇತ್ರದ  ಶಾಸಕರಾದ  ಬಸನಗೌಡ ದದ್ದಲ್, ಜಿಲ್ಲಾ ಕಾಂಗ್ರೆಸ್  ಅಧ್ಯಕ್ಷರಾದ  ಬಸವರಾಜ ಪಾಟೀಲ ಇಟಗಿ, ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ  ರವರು ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಗೌಡ, ತಾಯಣ್ಣನಾಯಕ, ಬಸವರಾಜ ವಕೀಲ್, ಬಷೀರ್, ವೆಂಕಟೇಶ ಮನ್ಸಲಾಪೂರ ಶಿವಪ್ಪ ನಾಯಕ, ಕೆ. ಈರಣ್ಣ, ಕರಿಯಪ್ಪ ನಾಯಕ ,ಆಂಜನೇಯ ಕೊಂಬಿನ್ ,ವಿರೇಶ ಗಾಣಧಾಳ ,ವಿರೇಶ ಮಟಮಾರಿ, ಸಾಧೀಕ್ , ಸುರೇಶ್, ಆನಂದ ಗುಂಜಳ್ಳಿ, ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ಏ.29 ರಂದು ನಗರಕ್ಕೆ ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ

Image
  ಏ.29 ರಂದು ನಗರಕ್ಕೆ ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ .                                                              ರಾಯಚೂರು,ಏ.29- ಲೋಕಸಭಾ ಚುನಾವಣೆ  ಪ್ರಚಾರಕ್ಕೆ ಏ.29 ರಂದು ನಗರಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ‌.ಕೆ.ಶಿವಕುಮಾರ ಆಗಮಿಸಲಿದ್ದಾರೆ.                                     ಅಂದು ಸಂಜೆ 6 ಗಂಟೆಗೆ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸಾರ್ವಜನಿಕ  ಪ್ರಚಾರ ಸಭೆಯಲ್ಲಿ    ಪಾಲ್ಗೊಳ್ಳಲಿರುವ ಅವರು ಅಂದು ರಾತ್ರಿ ನಗರದಲ್ಲಿ ವಾಸ್ತವ್ಯ ಹೂಡಿ ಬೆಳಿಗ್ಗೆ ಯಾದಗಿರಿಗೆ ಪ್ರಯಾಣ ಬೆಳೆಸಲಿದ್ದಾರೆ.

ಜಿಲ್ಲಾಡಳಿತದಿಂದ ಸರಳ ರೀತಿಯಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ :ದೇವರ ದಾಸಿಮಯ್ಯ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಿ- ತಹಶೀಲ್ದಾರ ಸುರೇಶ ವರ್ಮಾ

Image
  ಜಿಲ್ಲಾಡಳಿತದಿಂದ ಸರಳ ರೀತಿಯಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ: ದೇವರ ದಾಸಿಮಯ್ಯ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಿ-  ಸುರೇಶ ವರ್ಮಾ ರಾಯಚೂರು,ಏ.13- ದೇವರ ದಾಸಿಮಯ್ಯ ಅವರು ತಮ್ಮ ವಚನಗಳ ಮೂಲಕ ಲೋಕದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲಿ ಉತ್ತಮ ನಾಗರಿಕರಾಗಬೇಕು ಎಂದು ರಾಯಚೂರು ತಹಶೀಲ್ದಾರ ಸುರೇಶ ವರ್ಮಾ ಅವರು ಹೇಳಿದರು. ಅವರು ಏ.13 ರಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ನಗರಸಭೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಸರಳ ಆಚರಣೆ ಕಾರ್ಯಕ್ರಮದಲ್ಲಿ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿs ಮಾತನಾಡಿದರು. ದೇವರ ದಾಸಿಮಯ್ಯ  ತಮ್ಮ ಕಾಯಕದ ಜೊತೆಗೆ ತಮ್ಮ ಶ್ರೇಷ್ಠ ವಚನಗಳ ಮೂಲಕ ಸಮ  ನಿರ್ಮಾಣ ಮಾಡುವಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ವಚನಕಾರರಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ನಡೆದಾಗ ಮಾತ್ರ ಅವರ ಜಯಂತಿ ಆಚರಣೆಗೆ ಸಾರ್ಥಕತೆ ಸಿಗುತ್ತದೆ ಎಂದರು.  ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಇಸ್ಮಾಯಿಲ್‌, ಕನ್ನಡ ಸಾಹಿತ್ಯ ಪರಿಷತ್‌ ಸಹ ಜಿಲ್ಲಾ ಕಾರ್ಯದರ್ಶಿ ದಂಡಪ್ಪ ಬಿರಾದಾರ,...

ಲೋಕಸಭಾ ಚುನಾವಣೆ: ಒಂದು ನಾಮಪತ್ರ ಸಲ್ಲಿಕೆ

Image
  ಲೋಕಸಭಾ ಚುನಾವಣೆ: ಒಂದು ನಾಮಪತ್ರ ಸಲ್ಲಿಕೆ ರಾಯಚೂರು,ಏ.13- ಲೋಕಸಭೆ ಚುನಾವಣೆ-2024ರ ಹಿನ್ನಲೆಯಲ್ಲಿ ಇಂದು ಒಂದು ನಾಮಪತ್ರ ಸಲ್ಲಿಕೆಯಾಗಿದದೆ.                                  ಭಾರತೀಯ ಜನ ಸಾಮ್ರಾಟ್ ಪಾರ್ಟಿಯ ಶಾಮರಾವ್ ಮೇದಾರ್ ತಂದೆ ಬಾಬುರಾವ್ ಮೇದಾರ್ ಅವರು ನಾಮಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಅಶೋಕ ದುಡಗುಂಟಿ, ಉಮೇದುದಾರರ ಸೂಚಕರು ಉಪಸ್ಥಿತರಿದ್ದರು.

371 (ಜೆ) ತಡೆಗೆ ಪತ್ರ ಸಚಿವ ಎಚ್ ಕೆ ಪಾಟೀಲ್ ಹೇಳಿಕೆಗೆ ಬಾಬುರಾವ ತೀವ್ರ ಖಂಡನೆ

Image
  371 (ಜೆ) ತಡೆಗೆ ಪತ್ರ ಸಚಿವ ಎಚ್ ಕೆ ಪಾಟೀಲ್ ಹೇಳಿಕೆಗೆ ಬಾಬುರಾವ ತೀವ್ರ ಖಂಡನೆ  ರಾಯಚೂರು, ಏ.10- ಕಲ್ಯಾಣ ಕರ್ನಾಟಕದ ಜನರ ಅಭಿವೃದ್ಧಿಗೆ ಜಾರಿಗೆ ಬಂದಿರುವ 371ಜೆ ಮೀಸಲಾತಿಯನ್ನು ತಡೆಹಿಡಿಯುವಂತೆ ಪತ್ರ ಬರೆದ  ಸಚಿವ ಹೆಚ್ ಕೆ ಪಾಟೀಲ್ ಹೇಳಿಕೆಯನ್ನು ಸಮಾಜ ಸೇವೆಕ ಡಾ. ಬಾಬುರಾವ ಅವರು ತೀವ್ರವಾಗಿ ಖಂಡಿಸಿದ್ದಾರೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಆರ್ಥಿಕವಾಗಿ ತೀವ್ರ ಹಿಂದುಳಿದಿದ್ದು ಈ ಬೆನ್ನಲೇ ಸಚಿವರು ಈ ರೀತಿಯ ಹೇಳಿಕೆ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಆರ್ಥಿಕ ಮತ್ತು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ 371ಜೆ ಮೀಸಲಾತಿ ಅನುಷ್ಠಾನ ಮಾಡಲಾಗಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದ 24 ಜಿಲ್ಲೆಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಅನ್ಯಾಯವಾಗುತ್ತಿರುವ ಹಿನ್ನೆಲೆ 371ಜೆ ಕಲಂ ಅಡಿ ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿ ಪ್ರಕ್ರಿಯೆಯನ್ನು ತಡೆಯಬೇಕೆಂದಿರುವುದು ಹೇಳಿಕೆ ಖಂಡನೀಯ ಎಂದರು.ಕಲ್ಯಾಣ ಕರ್ನಾಟಕೇತರ ಆಭ್ಯರ್ಥಿಗಳ ಹಿತದೃಷ್ಟಿಯಿಂದ ಕರ್ನಾ ಟಕ ಲೋಕಸೇವಾ ಆಯೋಗ, ಕನಾ ೯ಟಕ ಪರೀಕ್ಷಾ ಪ್ರಾಧಿಕಾರ, ಕೇಂದ್ರಿ ಕೃತ ದಾಖಲಾತಿ ಘಟಕ ಸಂಸ್ಥೆಗಳ ನೇಮಕಾತಿಯಲ್ಲಿ ಸಂವಿಧಾನದ ಕಲಂ 371(ಜೆ) ದಡಿ ಮೀಸಲಾತಿ ಮುಂದುವರೆಸದಂತೆ ಸಚಿವ ಎಚ್.ಕೆ ಪಾಟೀಲ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ...

ದ್ಪಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: ಜಿಲ್ಲೆಯಾದ್ಯಂತ ಶೇ.67.99ರಷ್ಟು ವಿದ್ಯಾರ್ಥಿಗಳು ತೇರ್ಗಡೆ

Image
ದ್ವಿತೀಯ ಪಿಯುಸಿ  ಪರೀಕ್ಷೆ ಫಲಿತಾಂಶ:                  ಜಿಲ್ಲೆಯಾದ್ಯಂತ ಶೇ.67.99ರಷ್ಟು ವಿದ್ಯಾರ್ಥಿಗಳು ತೇರ್ಗಡೆ ರಾಯಚೂರು,ಏ.10- ದ್ವಿತೀಯ ಪಿಯುಸಿ ಅಂತಿಮ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 21,219 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಒಟ್ಟು 14,427 ಅಭ್ಯರ್ಥಿಗಳು ಉತ್ತೀರ್ಣಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಶೇ.67.99ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 13,273 ಹೊಸದಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 323 ಖಾಸಗಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಮತ್ತು 831 ಪುನರಾವರ್ತಿತ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಿಂದ ಒಟ್ಟು 12,251 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಒಟ್ಟು 7,230 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಶೇ.59.02ರಷ್ಟು ವಿದ್ಯಾರ್ಥಿಗಳು ಕಲಾ ವಿಭಾದಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಿಂದ ಒಟ್ಟು 4,149 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಒಟ್ಟು 2,917 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಶೇ.70.31 ರಷ್ಟು ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಿಂದ ಒಟ್ಟ...

ಕಾನೂನು ಮತ್ತು ಸಂಸದೀಯ, ವ್ಯವಹಾರ ಸಚಿವ ಹೆಚ್. ಕೆ. ಪಾಟೀಲ್ 371 ಜೆ ಕಲಂ ಕುರಿತಾಗಿರುವ ಪತ್ರಕ್ಕೆ ಕರವೇ ಖಂಡನೆ

Image
ಕಾನೂನು ಮತ್ತು ಸಂಸದೀಯ, ವ್ಯವಹಾರ  ಸಚಿವ ಹೆಚ್. ಕೆ. ಪಾಟೀಲ್ 371 ಜೆ ಕಲಂ ಕುರಿತಾಗಿರುವ ಪತ್ರಕ್ಕೆ ಕರವೇ ಖಂಡನೆ ರಾಯಚೂರು,ಏ.10- ಹಿಂದುಳಿದ ಹೈದರಾಬಾದ್ ಕರ್ನಾಟಕಕ್ಕೆ (ಕಲ್ಯಾಣ ಕರ್ನಾಟಕ) ದಶಕಗಳ 371 ಜೆ ಕಲಂ ಹೋರಾಟ ಯಶಸ್ವಿಯಾಗಿ ದೊರಕಿದ ಪ್ರತಿಫಲವೇ 371 ಜೆ ತಿದ್ದುಪಡಿ ಜಾರಿಯಾಗಿರುವದು.  371 ಜೆ ತಿದ್ದುಪಡಿ ಜಾರಿಯಾಗಿ ಇತ್ತೀಚೆಗೆ 10 ವರ್ಷಗಳಾಗುತ್ತಿದೆ. ಈ ತಿದ್ದುಪಡಿ ಜಾರಿಯಾದ ನಂತರ ಕಲ್ಯಾಣ ಕರ್ನಾಟಕಕ್ಕೆ ಎಷ್ಟು ಲಾಭ ಆಗಿದೆ ? ಎನ್ನುವುದು ಎಚ್ ಕೆ ಪಾಟೀಲರಿಗೆ ಏನಾದರೂ ಅಂಕಿ ಅಂಶ ಗೊತ್ತಿದೆಯೇ?. ಅವರೆ ಪತ್ರದಲ್ಲಿ ತಿಳಿಸಿದ ಪ್ರಕಾರ 24 ಜಿಲ್ಲೆಗಳಿಗೆ ಅನ್ಯಾಯ ಆಗುತ್ತಿರುವುದು, ತಮ್ಮ ಪತ್ರದಲ್ಲಿ ಬರೆದು ಮುಖ್ಯ ಮಂತ್ರಿಗಳಿಗೆ ಗಮನಕ್ಕೆ ತಂದಿದ್ದಿರಲ್ಲ!!!  ಏನು ಅಂಕಿ ಅಂಶಗಳು ನಿಮ್ಮಲ್ಲಿದೆ ??. 371 ಜೆ ಕಲಂ ವೃಂದಗಳಲ್ಲಿ 24 ಜಿಲ್ಲೆಗೆ ಅನ್ಯಾಯವಾಗಿರುವುದನ್ನು ಪತ್ರ ಬರೆಯುತ್ತಿದ್ದೀರಲ್ಲ. ಇದಕ್ಕೆ ಹೈದರಾಬಾದ್ ಕರ್ನಾಟಕದಲ್ಲಿರುವ ಆಡಳಿದಲ್ಲಿರುವ, ಮಂತ್ರಿಗಳು ಮೌನ ಏಕೆ??. ಸಚಿವ ಬೋಸರಾಜ್ ರವರ ಅಷ್ಟೇ, ಇದರ ಬಗ್ಗೆ ನನ್ನ ಗಮನಕ್ಕೆ ಇಲ್ಲ, ನಾನು ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾತನಾಡುತ್ತೇನೆಂದು ತಿಳಿಸಿರುತ್ತಾರೆ. ಉಳಿದ ಕಲ್ಯಾಣ ಕರ್ನಾಟಕದ ಮಂತ್ರಿಗಳು, ಶಾಸಕರು ಪಕ್ಷಭೇದ ಮರೆತು ಇದರ ಕುರಿತು ಯಾಕೆ ಖಂಡಿಸುತ್ತಿಲ್ಲ??. ರಾಷ್ಟ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಕೇಂದ್ರದಲ್ಲಿ ಮಂತ್ರಿಗ...

ಯುಗಾದಿ ಕವನ

Image
  ಯುಗಾದಿ ಕವನ                                         ಬೇವಿನ   ಹೂವಿನಲ್ಲಿರುವಂತೆ  ಒಗರು ಒಗುರಾದ  ಸ್ವಲ್ಪ ವೇ  ಕಹಿ   ಜೇನಿನಂತಹ ಬೆಲ್ಲದ  ಸಿಹಿ  ಬೇವು  ಬೆಲ್ಲದ  ಮಿಶ್ರಣ  ನಿವೇದನೆಯೊಂದಿಗೆ ಪಂಚಾಂಗ  ಶ್ರವಣ   ಬಾಳಲಿ  ನೂತನ  ವರುಷದ  ಆಗಮನ   ಹರುಷವ  ಸೂಸುತ  ಮಧುರ  ಕೋಕಿಲ  ಮಂಜುಳ ಗಾನದಂತೆ  ಸುಸ್ವರ   ಸಂಗಮದ ಗಾನದಂತೆ   ನಮ್ಮಿ ಈ  ಜೀವನದಲಿ  ಸಂತಸದ ನಗು ತುಂಬಿರಲಿ  ಬಾಳಲಿ   ನಿತ್ಯ  ನೂತನ   ಮಾವಿನ  ತೋರಣದಂತೆ  ಹಚ್ಚ   ಹಸಿರಿನಿಂದ  ಕೂಡಿ   ಬೀಸಲಿ  ಬೇವಿನ  ಎಸಳಿನ  ತಂಪಾದ  ಗಾಳಿ  ನಳ ನಳಿಸಲಿ   ಹಕ್ಕಿಗಳ ಇಂಚರ   ಮೋಡದಲಿ ರತ್ನ ಪಕ್ಷಿಯ  ನೋಡುತ   ಹೊಸ  ವರುಷವ   ಸ್ವಾಗತಿಸೋಣ ಸಿಹಿ  ಹೂರಣ  ಸೇವಿಸುತ  ನವನವೀನ  ವಸ್ತ್ರವ ಧರಿಸಿ  ದೇವರ  ಪೂಜಿಸುತ  ಬೇವು...