Posts

Showing posts from December, 2022

ಜಿಲ್ಲೆಯಲ್ಲಿ ಪೊಲೀಸರಿಂದ ಮಿಂಚಿನ ಕಾರ್ಯಚರಣೆಯಿಂದ 154 ಪ್ರಕರಣಗಳ ಪತ್ತೆ: ಜಪ್ತಿಯಾದ 4.17 ಕೋಟಿ. ರೂ ಮೊತ್ತದ ಸ್ವತ್ತು ವಾರಸುದಾರರಿಗೆ - ಎಸ್ಪಿ ನಿಖಿಲ್

Image
  ಜಿಲ್ಲೆಯಲ್ಲಿ ಪೊಲೀಸರಿಂದ ಮಿಂಚಿನ ಕಾರ್ಯಚರಣೆಯಿಂದ 154  ಪ್ರಕರಣಗಳ ಪತ್ತೆ: ಜಪ್ತಿಯಾದ 4.17 ಕೋಟಿ. ರೂ ಮೊತ್ತದ ಸ್ವತ್ತು ವಾರಸುದಾರರಿಗೆ - ಎಸ್ಪಿ ನಿಖಿಲ್ ರಾಯಚೂರು,ಡಿ.೩೧- ಜಿಲ್ಲೆಯಾದ್ಯಂತ ಪೊಲೀಸರ ಮಿಂಚಿನ ಕಾರ್ಯಚರಣೆ ಪರಿಣಾಮ 154   ಪ್ರಕರಣಗಳ ಪತ್ತೆ ಮಾಡಿ ಕಳ್ಳತನ ಮಾಡಿದ ಸುಮಾರು 4.17 ಕೋಟಿ ರೂ. ಮೊತ್ತದ ಸ್ವತ್ತುಗಳನ್ನು ವಾರಸುದಾರರಿಗೆ ಹಂತಿರುಗಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಹೇಳಿದರು. ಅವರಿಂದು ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಜಪ್ತಿ ಮಾಡಲಾದ ಸ್ವತ್ತನ್ನು ಹಿಂತಿರುಗಿಸುವ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜಿಲ್ಲೆಯಾದ್ಯಂತ ಕಳ್ಳತನವಾದ ಒಟ್ಟು ೩೮೩ ಸ್ವತ್ತಿನ ಪ್ರಕರಣಗಳಲ್ಲಿ ಕಳುವಾದ ಒಟ್ಟು ಸುಮಾರು ೬.೩೩ ಕೋಟಿ ರೂ ಗಳ ಮೌಲ್ಯದ ಪೈಕಿ ೧೫೪ ಪ್ರಕರಣಗಳನ್ನು ಪತ್ತೆ ಮಾಡಿ ಸುಮಾರು ೪.೧೭ ಕೋಟಿ ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. ಈ ಎಲ್ಲ ಪ್ರಕರಣದಲ್ಲಿ ಭಾಗಿಯಾದ 148  ಆರೋಪಿಗಳನ್ನು ಬಂಧಿಸಿ ಅವರಿಂದ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಕಳ್ಳತನವಾದ ಸ್ವತ್ತನ್ನು ವಾರಸುದಾರರಿಗೆ ಹಿಂತಿರುಗಿಸಲಾಯಿತೆ0ದ ಅವರು ಸಿಂಧನೂರು ವಿಭಾಗದಲ್ಲಿ ೨ ಕೋಟಿ .ರೂ ಮೌಲ್ಯದ ಸ್ವತ್ತು, ಲಿಂಗಸ್ಗೂರು ವಿಭಾಗದಲ್ಲಿ ೧.೧೭ ಕೋಟಿ .ರೂ ಮೌಲ್ಯದ ಸ್ವತ್ತು, ರಾಯಚೂರು ವಿಭಾಗದಲ್ಲಿ ೧ ಕೋಟಿ .ರೂ ಮೌಲ್ಯದ ಸ್ವತ್ತು ಜಪ...

ರಾಷ್ಟ್ರೀಯ ಹೆದ್ದಾರಿ 167 ಕೃಷ್ಣ ಬ್ರಿಡ್ಜ್ ಕಾಮಗಾರಿಯನ್ನು ಪರಿಶೀಲಿಸಿದ ಅಮರೇಶ್ವರ ನಾಯಕ

Image
  ರಾಷ್ಟ್ರೀಯ ಹೆದ್ದಾರಿ 167  ಕೃಷ್ಣ ಬ್ರಿಡ್ಜ್ ಕಾಮಗಾರಿಯನ್ನು ಪರಿಶೀಲಿಸಿದ ಅಮರೇಶ್ವರ ನಾಯಕ ರಾಯಚೂರು,ಡಿ.30- ಇಂದು  ಬೆಳಿಗ್ಗೆ ಲೋಕಸಭಾ ಸದಸ್ಯರಾದ  ರಾಜಾ ಅಮರೇಶ್ವರ ನಾಯಕ್ ಇವರು ರಾಷ್ಟ್ರೀಯ ಹೆದ್ದಾರಿ -167 ವಲಯ ವ್ಯಾಪ್ತಿಯ  ಕೃಷ್ಣ ನದಿಗೆ ಅಡ್ಡಲಾಗಿ ನಡೆಯುತ್ತಿರುವ ಕೃಷ್ಣ ಬ್ರಿಡ್ಜ್ ಹೊಸ ಕಾಮಗಾರಿ ಸ್ಥಳ ಪರಿಶೀಲಿಸಿದರು.                ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ ಸಂಬಂಧಿತ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಾದ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಮಾನ್ಯ ಲೋಕಸಭಾ ಸದಸ್ಯರಿಗೆ ಕಾಮಗಾರಿಯ ಬಗ್ಗೆ ವಿವರಣೆ ನೀಡಿದರು. ಕಾಮಗಾರಿಯು ಮಂದಗತಿಯಲ್ಲಿ ಪ್ರಗತಿಯಲ್ಲಿರುವ ಬಗ್ಗೆ ಸಂಸದರು ಪರಿಶೀಲಿಸಿದಾಗ ಕಾಮಗಾರಿಯ ಗುತ್ತಿಗೆದಾರರ ಪ್ರತಿನಿಧಿಯವರು ಈಗಾಗಲೇ ಬೆಡ್ ಬ್ಲಾಕ್ ವರೆಗೆ ಪೂರ್ಣಗೊಂಡಿರುವ ಎರಡು ಬದಿಯ ಅಪೆಟ್ ಮೆ0ಟ್ ಗಳ ಮೇಲೆ ಫ್ರೀ ಕಾಸ್ಟ್ ಮಾಡಿದ ಪಿ ಎಸ್ ಸಿ ಗಿರ್ಡರುಗಳನ್ನು ಅಳವಡಿಸಿ ನದಿಯ ಕೊಳವೆಯಲ್ಲಿ ಎಲ್ಲಾ 9 ಪಿಯರ್ ಗಳನ್ನು ಪಿಯರ್ ಕ್ಯಾಪ್ ಲೆವೆಲ್ ವರೆಗೆ ಮಾರ್ಚ್ 2023 ಮಾಸ ಅಂತ್ಯದಲ್ಲಿ ಪೂರ್ಣಗೊಳಿಸಲು ಎಲ್ಲ ಸಿದ್ಧತೆಗಳನ್ನು ಮಾಡಿ ಕೊಂಡಿರುವುದಾಗಿ ತಿಳಿಸಿದರು. ಅದರಂತೆ ಮಾನ್ಯ ಸಂಸದರು ಸಂಬಂಧಿಸಿದ ಅಧಿಕಾರಿಗಳಿಗೆ ವಾರಕ್ಕೊಮ್ಮೆ ಪ್ರಗತಿಪರಶೀಲನೆ ಸಭೆ ಜರುಗಿಸಿ ಕಾಮಗಾರಿಯನ್ನು ತ್ವರ...

ಹೀರಾಬೆನ್ ಮೋದಿ ಯವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ - ತಿಪ್ಪರಾಜು

Image
ಹೀರಾಬೆನ್ ಮೋದಿ ಯವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ - ತಿಪ್ಪರಾಜು ರಾಯಚೂರು,ಡಿ.30-  ಇಂದು ಬೆಳಗಿನ ಜಾವ 3 ಗಂಟೆಗೆ ಇಹಲೋಕ ತ್ಯಜಿಸಿದ ಈ ದೇಶದ ಹೆಮ್ಮೆಯ ಪ್ರಧಾನಿಗಳಾದ  ನರೇಂದ್ರ ಮೋದಿಯವರ ತಾಯಿಯವರಾದ  ಹೀರಾಬೇನ್ ಮೋದಿಯವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ, ಅವರ ಅಗಲಿಕೆಯ ದುಃಖವನ್ನು  ಭರಿಸುವ ಶಕ್ತಿಯನ್ನು ಆ ಭಗವಂತ ಮಾನ್ಯ ಪ್ರಧಾನಿಗಳಿಗೆ ಮತ್ತು ಕುಟುಂಬಕ್ಕೆ ನೀಡಲಿ ಎಂದು ರಾಯಚೂರು ಗ್ರಾಮೀಣದ ಮಾಜಿ ಶಾಸಕರು ಹಾಗೂ ಕರ್ನಾಟಕ ಬಿಜೆಪಿ ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್   ಸಂತಾಪ ಸೂಚಿಸಿದ್ದಾರೆ.           ಈ ಭವ್ಯ ಭಾರತಕ್ಕೆ ಯುಗಪುರುಷನಂತಹ ಮಗನನ್ನು ನೀಡಿ,  ಶತಾಯುಷಿಯಾಗಿ ಅರ್ಥಪೂರ್ಣ ಬದುಕನ್ನ ಬದುಕಿ, ನಮ್ಮಂತಹ ಕೋಟ್ಯಾಂತರ ಜನರಿಗೆ ಸ್ಪೂರ್ತಿಯನ್ನ ತುಂಬಿದ ಈ ದೇಶದ ರಾಜನ ತಾಯಿ ನಿಜವಾಗಿಯೂ ರಾಜಮಾತೆಯೇ ಆಗಿದ್ದ ಹೀರಾಬೇನ್ ಅವರ ಅಗಲಿಕೆ ದೇಶದ ಎಲ್ಲ ಕುಟುಂಬಗಳಿಗೂ ತುಂಬಲಾಗದ ನಷ್ಟ. ಈ ದೇಶದ ಪ್ರಧಾನಿಯ ತಾಯಿಯಾಗಿಯೂ, ಅತ್ಯಂತ ಸರಳ ಬದುಕನ್ನು ಬದುಕಿ, ಕೇವಲ ಮಗನಿಗೆ ಮಾತ್ರವಲ್ಲದೇ, ಇಡಿ ದೇಶಕ್ಕೇ ತಾಯಿಯಾಗಿದ್ದ ಹೀರಾಬೆನ್ ಅವರ ಅಂತಿಮ ಪ್ರಯಾಣಕ್ಕೆ ನಮ್ಮೆಲ್ಲರ ಅಶ್ರುತರ್ಪಣ ಹಾಗೂ ಶತ ಶತ ನಮನಗಳು ಎಂದು  ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ವಿಯೋಗಕ್ಕೆ ಶ್ರೀಸುಬುಧೇಂದ್ರತೀರ್ಥರ ಸಂತಾಪ.

Image
ಪ್ರಧಾನಿ  ನರೇಂದ್ರ ಮೋದಿಯವರ ತಾಯಿ ವಿಯೋಗಕ್ಕೆ  ಶ್ರೀಸುಬುಧೇಂದ್ರತೀರ್ಥರ ಸಂತಾಪ. ರಾಯಚೂರು,ಡಿ.30-  ದೇಶದ ಜನಮೆಚ್ಚಿದ ಪ್ರಧಾನ ಮಂತ್ರಿಗಳಾದ ಶ್ರೀಮಾನ್ ನರೇಂದ್ರಮೋದಿಜೀ ಅವರ ಶತಾಯುಷಿಗಳಾದ ಮಾತೃಶ್ರೀ ಅವರ ವಿಯೋಗವು ಆಗಿದೆ, ಎಂದು ಮಾಧ್ಯಮಗಳ ಮೂಲಕ ತಿಳಿದು ತುಂಬಾ ಬೇಸರವಾಯಿತು.   ಮೋದಿಜಿಯವರು ದೇಶದ ಮಹೋನ್ನತ ಪ್ರಧಾನಿ ಹುದ್ದೆಯಲ್ಲಿದ್ದರೂ ತಾಯಿಗೆ ಮಾತ್ರ ಚಿಕ್ಕ ಮಗುವಾಗಿ ಮಾತೃವಾತ್ಸಲ್ಯವನ್ನು ಪಡೆಯುವುದನ್ನು ನಾವು ಮಾಧ್ಯಮಗಳ ಮೂಲಕ ಕಂಡಿದ್ದೇವೆ.  ತುತ್ತು ಮಾಡಿ ತಾಯಿ ಬಾಯಲ್ಲಿ ಉಣಬಡಿಸಿದ್ದು, ತನ್ನ ವಸ್ತ್ರದಿಂದಲೇ ಮಗನ ಮುಖವನ್ನು ಒರೆಸಿದ್ದು ಹಾಗೂ ಕಿರು ಕಾಣಿಕೆಯಾಗಿ ಒಂದು ನೂರು ರೂಪಾಯಿಗಳನ್ನು ಕೊಟ್ಟದ್ದು ಇವೆಲ್ಲವೂ ಪ್ರಧಾನಿಯವರು  ಪಡೆದ ಮಾತೃವಾತ್ಸಲ್ಯ. ಹಾಗೂ ಅವರ ಸೌಭಾಗ್ಯವೇ ಸರಿ.  ಅದೇ ರೀತಿ  ಮೋದೀಜಿ ಅವರೂ ತಾಯಿಯ ಸೇವೆಯನ್ನು ವಿಶೇಷವಾಗಿ ಮಾಡಿದ್ದು ,ವೀಲ್ ಚೇರನ್ನು ತಾವೇ ತಳ್ಳಿಕೊಂಡು ಹೋದದ್ದು, ಇವೆಲ್ಲವೂ ತಾಯಿಯ ಸೇವೆಯ ಪರಮ ಗುರಿಯನ್ನು ಸೂಚಿಸುತ್ತದೆ. ಇಂತಹ ವಿಚಾರವನ್ನು ವೈದಿಕ ವಾಂಙ್ಮಯವೂ "ಮಾತೃದೇವೋಭವ" ಎಂಬ ವಾಕ್ಯದಿಂದ ತಿಳಿಸುತ್ತದೆ . ಇಂತಹ ತಾಯಿಯನ್ನು  ಕಳೆದುಕೊಂಡ ಅವರಿಗೆ ಆ ದುಃಖವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲೆಂದು ಹಾಗೂ ಆ ಮಾತೃಮೂರ್ತಿಗೆ ಉತ್ತಮ ಗತಿಯಾಗಲೆಂದು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಅಂತರ್ಯಾಮಿಯಾದ ಭಗವಂತನಲ್ಲ...

ಕರವೇಯಿಂದ ವಿಶ್ವಮಾನವ ಕುವೆಂಪು ರವರ ೧೧೮ ನೇಯ ಜಯoತ್ಯೋತ್ಸವ ಆಚರಣೆ

Image
  ಕರವೇಯಿಂದ ವಿಶ್ವಮಾನವ ಕುವೆಂಪು ರವರ ೧೧೮ ನೇಯ ಜಯoತ್ಯೋತ್ಸವ ಆಚರಣೆ     ರಾಯಚೂರು,ಡಿ.29-ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಜಿಲ್ಲಾ ಘಟಕದಿಂದ ರಾಯಚೂರು ಜಿಲ್ಲಾ ಏಮ್ಸ್ ಹೋರಾಟದ ವೇದಿಕೆಯಲ್ಲಿ ಜಗದ ಕವಿ, ಯುಗದ ಕವಿ, ವಿಶ್ವಮಾನವ ಕುವೆಂಪು ರವರ ೧೧೮ ನೇಯ ಜಯoತ್ಯೋತ್ಸವವನ್ನು ಸರಳ ಪೂಜೆಯೊಂದಿಗೆ ವಿಜೃಂಭಣೆಯಿ0ದ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾದ ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ಡಾ. ಬಸವರಾಜ ಕಳಸ ಅವರು ಕಾರ್ಯಕ್ರಮವನ್ನು ಪೂಜೆಯೊಂದಿಗೆ ಉದ್ಘಾಟಿಸಿ ಕುವೆಂಪು ರವರ ಬರೆದ ಕಾದಂಬರಿಯ ಕುರಿತು ಹಾಗೂ ಕನ್ನಡ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತ ಮೊದಲನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ರವರು ಸೂರ್ಯ ಚಂದಿರ ವಿರುವವರೆಗೂ ಬರುವ ಯುವ ಪೀಳಿಗೆಗೆ ತಮ್ಮ ಸಾಹಿತ್ಯದಿಂದ ಕನ್ನಡ ವನ್ನು ಸಾರಿದ ಮಹಾನ್ ಕವಿಗಳೆಂದು ಉದ್ಘಾಟನಾ ಬಾಷಣದಲ್ಲಿ ಮಾತನಾಡಿದರು. ಸಾಹಿತಿಗಳಾದ ಅಂಜಿನಯ್ಯ ಜಾಲಿಬೆಂಚಿ, ಮುಖ್ಯ ಅತಿಥಿಗಳಾಗಿದ್ದರು.          ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಸಿ.ಕೆ.ಜೈನ್ ವಹಿಸಿದ್ದರು. ಉಳಿದ ಅತಿಥಿಗಳಾದ ಬಷೀರಅಹ್ಮದ ಹೊಸಮನಿ, ಎಂ.ಆರ್.ಬೇರಿ, ರಮೇಶ ಕಲ್ಲೂರಕರ್, ದಸ್ತಗಿರಿ ಕಾಕರಗಲ್, ಪರಶುರಾಮ, ಕೆ.ಗುರುರಾಜ ಹಾಗೂ ಕ.ರ.ವೇ ಮುಖಂಡರುಗಳಾದ ಸಂಗಮೇಶ ಮಂಗಾನವರ್, ಮಲ್ಲಿಕಾರ್ಜುನ, ಆಸಿಫ್, ಅಜೀಜ್, ನಾಗರಾಜ, ವಿನಯಚಿತ್ರಗಾರ, ವ...

ನೀರಿನ ಪ್ರಮಾಣ ಕಾಯ್ದುಕೊಳ್ಳುವಂತೆ ಆಗ್ರಹಿಸಿ ಸಿರವಾರದಲ್ಲಿ ರೈತರೊಂದಿಗೆ ಡಿ.30 ರಂದು ಹೋರಾಟ- ಎನ್.ಎಸ್ ಬೋಸರಾಜು

Image
  ನೀರಿನ ಪ್ರಮಾಣ ಕಾಯ್ದುಕೊಳ್ಳುವಂತೆ ಆಗ್ರಹಿಸಿ ಸಿರವಾರದಲ್ಲಿ ರೈತರೊಂದಿಗೆ ಡಿ.30 ರಂದು ಹೋರಾಟ- ಎನ್.ಎಸ್ ಬೋಸರಾಜು ರಾಯಚೂರು,ಡಿ.29- ತುಂಗಭದ್ರ ಎಡದಂಡೆ ಕಾಲುವೆಯ ಮೈಲ್ 69 ರಿಂದ  ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ  ಮಾನ್ವಿ, ಸಿರವಾರ ಹಾಗೂ ರಾಯಚೂರು ತಾಲ್ಲೂಕಿನ ಕೆಳಭಾಗದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ, ಸರಿಯಾದ ಪ್ರಮಾಣದಲ್ಲಿ ನೀರು ಬಿಡದಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಸಮರ್ಪಕ ನೀರು ಸರಬರಾಜುಗಾಗಿ  ದಿ.30 ಶುಕ್ರವಾರದಂದು ಸಿರವಾರ ಪಟ್ಟಣದಲ್ಲಿ ರೈತರೊಂದಿಗೆ ಹೋರಾಟ ಮಾಡಲಾಗುವುದೆಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜು, ಮಾಜಿ ಶಾಸಕ ಹಂಪಯ್ಯ ನಾಯಕ ಹಾಗೂ ಬಸನಗೌಡ ಬ್ಯಾಗವಾಟ್ ಸೇರಿದಂತೆ ಮುಖಂಡರ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ತಿಳಿಸಿದರು. ಮುಖಂಡರ ನಿಯೋಗ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಅವರೊಂದಿಗೆ ಮಾತನಾಡಿ, ಮೈಲ್ 47ರ ಕೆಳಭಾಗ 69 ರಲ್ಲಿ ನೀರು ಸರಬರಾಜು ಆದಾಗ ಮಾತ್ರ ಬೆಳೆಗಳಿಗೆ ಪೂರ್ಣ ಪ್ರಮಾಣದ ನೀರು ಸಿಗಲಿದೆ. ಮೇಲ್ಬಾಗದಲ್ಲಿ ನೀರಿನ ಪ್ರಮಾಣ ಕಾಯ್ದಿರಿಸದಿರುವುದರಿಂದ ಕೆಳಭಾಗದ ರೈತರಿಗೆ ನೀರು ಬರುತ್ತಿಲ್ಲ ಎಂದು ತಿಳಿಸಿದರು. ಈ ಕುರಿತು ಎರಡುಬಾರಿ ರೈತರು ಪ್ರತಿಭಟನೆ ಮಾಡಿದರು ಅಧಿಕಾರಿಗಳು ಯಾವುದೇ ರೀತಿ ಸ್ಪಂದಿಸಿಲ್ಲ. ಅಲ್ಲದೆ 144 ನಿಷೇದಾಜ್ಞೆ ಜಾರಿ ಮಾಡಿದರು ಪ್ರಯೋಜನವಾಗಿಲ್ಲ. ಸರ್ಕಾರ ದೇಶದ ಬೆನ್ನೆಲುಬಾದ ರೈತರನ್ನು ಸಂಪೂರ್ಣ ಕಡೆಗಣಿಸಿರ...

ಏಮ್ಸ್ ಗಾಗಿ ಸಾವಿರಾರು ವಿದ್ಯಾರ್ಥಿಗಳಿಂದ ಮಾನವ ಸರಪಳಿ: ಏಮ್ಸ್ ಭಿಕ್ಷೆಯಲ್ಲ ನಮ್ಮ ಹಕ್ಕು -ಪಾರಸ್ಮಲ್ ಸುಖಾಣಿ

Image
  ಏಮ್ಸ್ ಗಾಗಿ  ಸಾವಿರಾರು ವಿದ್ಯಾರ್ಥಿಗಳಿಂದ ಮಾನವ ಸರಪಳಿ:                                          ಏಮ್ಸ್ ಭಿಕ್ಷೆಯಲ್ಲ ನಮ್ಮ ಹಕ್ಕು- ಪಾರಸ್ಮಲ್ ಸುಖಾಣಿ .  ರಾಯಚೂರು,ಡಿ.29-  ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 231 ನೇ ದಿನಕ್ಕೆ ಮುಂದುವರೆದಿದೆ.               ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಲೇಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಇ೦ದಿನ ಧರಣಿ  ಸತ್ಯಾಗ್ರಹಕ್ಕೆ ರಾಯಚೂರು  ನಗರದ ವಿವಿಧ ಶಿಕ್ಷಣ ಸಂಸ್ಥೆಗಳು ಸಾವಿರಾರು ವಿದ್ಯಾರ್ಥಿಗಳು ಉಪನ್ಯಾಸಕರು ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಹೋರಾಟದಲ್ಲಿ ಭಾಗವಹಿಸಿ ಬೆಂಬಲ ನೀಡಿದರು.                                       ಸಾವಿರಾರು ವಿದ್ಯಾರ್ಥಿಗಳ ಬೃಹತ್  ಮೆರವಣಿಗೆ  ಬಿ .ಆರ್. ಅಂಬೇಡ್ಕರ್ ವೃತ್ತ ದಲ್ಲಿ ಮಾನವ ಸರಪಳಿಯನ್ನು ಮಾಡಿ ಏಮ್ಸ್ ಗಾಗಿ ಸರ್ಕಾರಕ್ಕೆ ಒತ್ತಾಯಿಸಿದರು. ನಂತರ ಪ್ರತಿಭಟನಾ  ಮೆರವಣಿಗೆ...

ಎಕೆಬಿಎಂಎಸ್ ಜಿಲ್ಲಾ ಯುವ ಸಮಾವೇಶ ಅಂಗವಾಗಿ ಪೂರ್ವಭಾವಿ ಸಭೆ: ಸಂಘಟಿತರಾಗಿ ಮುಂದೆ ಸಾಗೋಣ- ಡಿ.ಕೆ.ಮುರಳೀಧರ.

Image
ಎಕೆಬಿಎಂಎಸ್ ಜಿಲ್ಲಾ ಯುವ ಸಮಾವೇಶ ಅಂಗವಾಗಿ ಪೂರ್ವಭಾವಿ ಸಭೆ:    ಸಂಘಟಿತರಾಗಿ ಮುಂದೆ ಸಾಗೋಣ- ಡಿ.ಕೆ.ಮುರಳೀಧರ.        ರಾಯಚೂರು,ಡಿ.29- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಯವ ಘಟಕದ ವತಿಯಿಂದ ಮುಂದಿನ ತಿಂಗಳು ನಡೆಯುವ ಜಿಲ್ಲಾ ಯುವ ಘಟಕದ ಪದಗ್ರಹಣ ಹಾಗೂ ಜಿಲ್ಲಾ ಸಮಾವೇಶ ಕಾರ್ಯಕ್ರಮದ ಹಿನ್ನಲೆಯಲ್ಲಿ, ಅದರ ಪೂರ್ವಭಾವಿ ಸಭೆ ಬುಧವಾರ ಮಾನವಿ ಪಟ್ಟಣದಲ್ಲಿ ನಡೆಯಿತು, ರಾಜ್ಯ ಘಟಕದ ಪದಾಧಿಕಾರಿಗಳು, ರಾಜ್ಯ ಯುವ ಘಟಕದ ಪದಾಧಿಕಾರಿಗಳು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳ  ನೇತೃತ್ವದ ತಂಡ ಪ್ರವಾಸ ಕೈಗೊಂಡು ಸಿದ್ದತೆ ಕುರಿತಂತೆ ಚರ್ಚಿಸಿಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಾಣೇಶ ಮುತಾಲಿಕ, ಬ್ರಾಹ್ಮಣ ಸಂಘಟನೆ ಅತ್ಯಂತ ಅವಶ್ಯಕವಾಗಿದ್ದು, ವಿನಾಕಾರಣ ನಮ್ಮ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಶಕ್ತಿ ಪ್ರದರ್ಶನ ಮಾಡಬೇಕಿದೆ, ಹೋರಾಟ ಮನೋಭಾವನೆ ಇಲ್ಲದ ಸಮಾಜ ಎಂದಿಗೂ ಉದ್ದಾರವಾದ ನಿದರ್ಶನಗಳಿಲ್ಲ, ಇವತ್ತು ಮೀಸಲಾತಿ ಬಗ್ಗೆ ಸಾಕಷ್ಟು ಹೋರಾಟಗಳು ನಡೆಯುತ್ತಿವೆ, ಈಗಾಗಲೇ ಇಡ್ಬೂಎಸ ಬಗ್ಗೆ ರಾಜ್ಯದ ಅಧ್ಯಕ್ಷರಾದ ಅಶೋಕ ಹಾರ್ನಳ್ಳಿಯವರ ನೇತೃತ್ವದಲ್ಲಿ ಯೋಜನೆಯನ್ನು ರಾಜ್ಯಸರ್ಕಾರ ಚಾಲನೆ ಮಾಡಬೇಕು ಎಂದು ಹೋರಾಟ ನಡೆದಿದೆ, ಹಾಗಾಗಿ ಸಂಘಟಿತರಾಗಿ ಹೋರಾಡೋಣ ಹಾಗೂ ಬ್ರಾಹ್ಮಣ ಸಮಾಜವನ್ನು ಶಕ್ತಿಯುತ...

ಮಕ್ಕಳಿಗೆ ನಮ್ಮ ದೇಶದ ಆಚಾರ ವಿಚಾರ ತಿಳಿಸಬೇಕು-ಶ್ರೀ ಸುಬುಧೇಂದ್ರತೀರ್ಥರು.

Image
  ಮಕ್ಕಳಿಗೆ ನಮ್ಮ ದೇಶದ ಆಚಾರ ವಿಚಾರ ತಿಳಿಸಬೇಕು-ಶ್ರೀ ಸುಬುಧೇಂದ್ರತೀರ್ಥರು.          ರಾಯಚೂರು,ಡಿ.26- ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಅವರು ನಮ್ಮ ದೇಶದ ಆಚಾರ ವಿಚಾರ ತಿಳಿದುಕೊಳ್ಳಬೇಕೆಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು. ಅವರಿಂದು ನಗರದಲ್ಲಿ ಕಾಡ್ಲೂರು ದೇಸಾಯಿಯವರ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿ ಮನೆಯ ಆವರಣದಲ್ಲಿರುವ ಮಹಾನ ಪುರುಷರ, ದಾರ್ಶನಿಕರ, ಸ್ವಾತಂತ್ರ ಹೋರಾಟಗಾರ, ವಿಜ್ಞಾನಿಗಳು ಇನ್ನಿತರರ ಪುಸ್ತಕ ಭಂಡಾರವಿರುವ ಕಿರು ಗ್ರಂಥಾಲಯ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿ ಇಲ್ಲಿರುವ ನೂರಾರು ಪುಸ್ತಕಗಳು ಮಕ್ಕಳಿಗೆ ಸಾತ್ವಿಕ ಪ್ರಜ್ಞೆ ಮತ್ತು ನಮ್ಮ ದೇಶದ ಸಂಸ್ಕೃತಿ ಆಚಾರ ವಿಚಾರ ತಿಳಿಸುತ್ತವೆ ಇದರ ಸದುಪಯೋಗಕ್ಕೆ ಸಲಹೆ ನೀಡಿದರು ಅಲ್ಲದೆ ಇಂತಹ ಕಾರ್ಯಕ್ಕೆ ಮುಂದಾಗಿರುವ "ಕಾಡ್ಲೂರು ಸಂಸ್ಥಾನ" ಮತ್ತು "ರಂಗದೇ" ಯನ್ನು ಕೊಂಡಾಡಿದರು.                                               ಈ ಸಂದರ್ಭದಲ್ಲಿ ರಂಗರಾವ ದೇಸಾಯಿ , ಜಯಕುಮಾರ ದೇಸಾಯಿ, ವಿಜಯಕುಮಾರ ದೇಸಾಯಿ, ನಾರಾಯಣರಾವ ಕುಲಕರ್ಣಿ, ಕೆ.ಪ್ರಹಲ್ಲಾದರಾವ, ರಾಜಾ ದೇಸಾಯಿ, ಸುವರ್ಣಬಾಯಿ ದೇಸಾಯಿ, ಭೀಮೇಶ್ವ...

ನಗರದಲ್ಲಿ ಭಗವದ್ಗೀತಾ ಸಮರ್ಪಣೆ ಕಾರ್ಯಕ್ರಮ ಸಂಪನ್ನ: ಭಗವದ್ಗೀತೆಯಿ0ದ ಜಗತ್ತಿಗೆ ಜ್ಞಾನದ ಬೆಳಕು-ಅಭೀನವ ರಾಚೋಟಿ ಶ್ರೀಗಳು

Image
  ನಗರದಲ್ಲಿ ಭಗವದ್ಗೀತಾ ಸಮರ್ಪಣೆ ಕಾರ್ಯಕ್ರಮ ಸಂಪನ್ನ: ಭಗವದ್ಗೀತೆಯಿ0ದ ಜಗತ್ತಿಗೆ ಜ್ಞಾನದ ಬೆಳಕು-ಅಭೀನವ ರಾಚೋಟಿ ಶ್ರೀಗಳು ರಾಯಚೂರು,ಡಿ.೨೬-ನಗರದಲ್ಲಿ ಶ್ರೀ ಭಗವದ್ಗೀತ ಸಮರ್ಪಣ ಅಭಿಯನ ಯಶಸ್ವಿಯಾಗಿ ನೆರವೇರಿತು. ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟನೆಯನ್ನು ಸೋಮವಾರಪೇಟೆ ಹೀರೆ ಮಠದ ಅಭೀನವ ರಾಚೋಟಿವೀರ ಶಿವಾಚಾರ್ಯ ಶ್ರೀಗಳು ನೆರವೇರಿಸಿ ಶ್ರೀಭಗವದ್ಗೀತೆ ಜಗತ್ತಿಗೆ ಕೃಷ್ಣ ನೀಡಿದ ಮಾಹಾನ ಕೊಡುಗೆಯಾಗಿದ್ದು ಪ್ರತಿಯೊಬ್ಬರು ತಮ್ಮ ಕರ್ಮಗಳನ್ನು ಮಾಡಿ ಫಲವನ್ನು ಭಗವಂತನಿಗೆ ಬಿಡಬೇಕೆಂದ ಅವರು ಭಗವದ್ಗೀತೆ ಜಗತ್ತಿಗೆ ಜ್ಞಾನದ ಬೆಳಕು ನೀಡುತ್ತದೆ ಎಂದು ಆಶೀವರ್ಚನ ನೀಡಿದರು. ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇ0ದ್ರ ಸರಸ್ವತಿ ಶ್ರೀಗಳು  ದೃಶ್ಯ ಸಂದೇಶ ನೀಡಿ ರಾಯಚೂರಿನ ಭಗವದ್ಗೀತೆಯ ಭಕ್ತರು ಗೀತೆಯ ಸಮರ್ಪಣೆ ಮಾಡಿದ್ದು ಸಂತೋಷದ ಸಂಗತಿ ನಾವು ಈ ಕಾರ್ಯಕ್ರಮದಲ್ಲಿ ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳುಲು ಆಗದಿರುವ ಕಾರಣ ಈ ದೃಶ್ಯ ಸಂದೇಶ ನೀಡುತ್ತಿದ್ದು ಗೀತೆಯ ಪ್ರತಿಯೊಂದು ಸಂದೇಶ ಮನುಕುಲಕ್ಕೆ ದಾರಿದೀಪವಾಗಿದೆ ಗೀತೆಯ ಎಲ್ಲ ಶ್ಲೋಕಗಳು ಜಗತ್ತಿಗೆ ಜ್ಞಾನದ ಬೆಳಕು ನೀಡುತ್ತದೆ ಎಂದ ಅವರು ಭಗವದಗೀತೆ ಜ್ಞಾನದ ಜ್ಯೋತಿಯಾಗಿದೆ ಕರ್ಮದ ಮೂಲಕ ಸನ್ಯಾಸಿಗಳು ತಮ್ಮ ಕಾರ್ಯ ನೆರವೇರಿಸಬೇಕು ರಾಗ ಮತ್ತು ದ್ವೇಷದ ಬಗ್ಗೆ ನಮ್ಮಲ್ಲಿ ಸುಳಿಯದಿದ್ದಾಗೆ ನಮ್ಮಲ್ಲಿ ಸನ್ಯಾಸ ದೀಕ್ಷೆ ನೆಲೆಗೊಂಡAತೆ ಎಂದರು.  ...

ಕರೋನಾ ಉಪದ್ರವ ಕಾಡದಿರಲು ಸುದರ್ಶನ ಹೋಮ.

Image
ಕರೋನಾ ಉಪದ್ರವ ಕಾಡದಿರಲು ಸುದರ್ಶನ ಹೋಮ .                                   ರಾಯಚೂರು,ಡಿ.25- ಕರೋನಾ ರೂಪಾಂತರ ತಳಿ ಭಾರತಕ್ಕೆ ಕಾಲಿಟ್ಟಿದೆ ಎಂಬ  ಆತಂಕ ಜನರಲ್ಲಿ ಮನೆ ಮಾಡತ್ತಿದ್ದು  ಕರೋನಾ ಹಾವಳಿ ಬಾಧಿಸದಿರುವಂತೆ ಮತ್ತು ಜನರ ಸ್ವಾಸ್ಥ್ಯಕ್ಕಾಗಿ ಸುದರ್ಶನ ಹೋಮ ನೆರವೇರಿಸಲಾಯಿತು.                                ನಗರದ ಕಾಡ್ಲೂರು ದೇಸಾಯಿಯವರ ನಿವಾಸದಲ್ಲಿ ಕಾಡ್ಲೂರು ಸಂಸ್ಥಾನದಿಂದ ನಡೆದ ಶ್ರೀ ಸುದರ್ಶನ ಹೋಮವನ್ನು ವಿಜಯಾಚಾರ್ ಮಠಾಧಿಕಾರಿಗಳು ನೆರವೇರಿಸಿದರು.                      ಪೂರ್ಣಾಹುತಿಯನ್ನು ರಂಗರಾವ ದೇಸಾಯಿ ಕಾಡ್ಲೂರು ನೆರವೇರಿಸಿದರು.                             ಇದೆ ಸಂದರ್ಭದಲ್ಲಿ ಗೋತಗಿ ಗುರುರಾಜ ಆಚಾರ್ ಪ್ರತಿಮಾ ಪೂಜೆ ನೆರವೇರಿಸಿದರು.                      ಈ ಸಂದರ್ಭದಲ್ಲಿ ಜಯಕುಮಾರ ದೇಸಾಯಿ, ವಿಜಯಕುಮಾರ ದೇಸಾಯಿ, ಶ್ರೀನಿವಾಸ ಮೂರ...

ಕ್ರಿಸ್-ಮಸ್ ಅಂಗವಾಗಿ ವಿವಿಧ ಚರ್ಚ್ ಗಳಿಗೆ ಭೇಟಿ: ಸಿಹಿ ಹಂಚಿ ಶುಭ ಕೋರಿದ ಎನ್.ಎಸ್‌ ಬೋಸರಾಜು

Image
  ಕ್ರಿಸ್-ಮಸ್ ಅಂಗವಾಗಿ ವಿವಿಧ ಚರ್ಚ್ ಗಳಿಗೆ ಭೇಟಿ: ಸಿಹಿ ಹಂಚಿ ಶುಭ ಕೋರಿದ ಎನ್.ಎಸ್‌ ಬೋಸರಾಜು ರಾಯಚೂರು,ಡಿ.24- ಜಗತ್ತಿನಲ್ಲಿ ಸುಖ, ಶಾಂತಿ, ಪ್ರೀತಿ,  ತ್ಯಾಗ, ಸಹೋದರತ್ವ ಸಾರಿದ ಯೇಸು ಕ್ರಿಸ್ತನ ಜನ್ಮದಿನದ ನಿಮತ್ಯ ಎಐಸಿಸಿ ಕಾರ್ಯದರ್ಶಿಗಳಾದ ಎನ್.ಎಸ್ ಬೋಸರಾಜು ಅವರು ನಗರದ ವಿವಿಧ ಚರ್ಚ್ ಗಳಿಗೆ ಭೇಟಿ‌ ನೀಡಿ ಧರ್ಮಗುರುಗಳಿಗೆ ಸಿಹಿ ಹಂಚುವ ಮೂಲಕ ಕ್ರಿಸ್-ಮಸ್ ಹಬ್ಬ ಹಾಗೂ ಹೊಸ ವರ್ಷದ ಶುಭಾಷಯಗಳು ತಿಳಿಸಿದರು.             ನಗರದ ಮೆಥೋಡಿಸ್ಟ್ ಚರ್ಚ್, ಇನ್ಫೆಂಟ್ ಜೀಸಸ್, ಕ್ಯಾಥೋಲಿಕ್ ಚರ್ಚ್ ಸೇರಿದಂತೆ ವಿವಿಧ ಚರ್ಚ್ ಗಳಿಗೆ ಭೇಟಿ ನೀಡಿ, ಮೆಥೋಡಿಸ್ಟ್ ಚರ್ಚ್ ರೆವೆರಂಡ್ ಸೀಮೋನ್,  ಇನ್ಫೆಂಟ್ ಜೀಸಸ್ ನ ಪೌಲ್ ರಾಜ್ ಫಾದರ್, ಅಗಾಪೆ ಚರ್ಚ್ ನ ಫಾಸ್ಟರ್ ವರಪ್ರಸಾದ್ ಹಾಗೂ ಫಾದರ್ ರಾಜು ಸೇರಿದಂತೆ ವಿವಿಧ ಚರ್ಚ್ ನ ಧರ್ಮಗುರುಗಳಿಗೆ ಸಿಹಿ ಹಂಚಿ ಸನ್ಮಾನಿಸಿ ಗೌರವದಿಂದ ಶುಭಾಷಯಗಳು ತಿಳಿಸಿದರು.                                                   ಈ ಸಂದರ್ಭದಲ್ಲಿ ಕಾಂಗ್ರೆಸ್ ನ ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ, ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು, ಬಿ ರಮೇಶ್, ಮಹ್ಮದ್ ಶಾಲಂ ಸೇರಿದಂ...

ನಾಳೆ ಶ್ರೀ ಭಗವದ್ಗೀತಾ ಸಮರ್ಪಣಾ ಕಾರ್ಯಕ್ರಮ

Image
  ನಾಳೆ ಶ್ರೀ ಭಗವದ್ಗೀತಾ ಸಮರ್ಪಣಾ ಕಾರ್ಯಕ್ರಮ.                        ರಾಯಚೂರು,ಡಿ.24- ನಗರದಲ್ಲಿ ಶ್ರೀ ಭಗವದ್ಗೀತಾ ಸಮರ್ಪಣಾ ಕಾರ್ಯಕ್ರಮ ಡಿ.25 ರಂದು ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಗಾಜಗಾರಪೇಟೆಯ ಶ್ರೀ ಶೃಂಗೇರಿ ಶಂಕರಮಠದ ಸಭಾಂಗಣದಲ್ಲಿ ನೂರಾರು ವಿದ್ಯಾರ್ಥಿಗಳಿಂದ ಶ್ರೀ ಭಗವದ್ಗೀತಾ ಸಮರ್ಪಣ ಕಾರ್ಯಕ್ರಮ ನಡೆಯಲಿದೆ.                                     ಕಾರ್ಯಕ್ರಮ ಸಾನಿಧ್ಯವನ್ನು ಸೋಂದಾ ಸ್ವರ್ಣವಲ್ಲಿ ಶ್ರೀಗಳು, ಸೋಮವಾರಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿ ಶಿವಾಚಾರ್ಯ ಶ್ರೀಗಳು ವಹಿಸಲಿದ್ದಾರೆ.                   ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ಗಣ್ಯರು, ಪಾಲ್ಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಪಾಲ್ಗೊಳ್ಳುವಂತೆ ಕಾರ್ಯಕ್ರಮ ಆಯೋಜಕರಾದ ಡಾ.ಆನಂದತೀರ್ಥ ಫಡ್ನೀಸ್ ಹಾಗೂ ಶ್ರೀ ಭಗವದ್ಗೀತಾ ಸಮರ್ಪಣ ಅಭಿಯಾನ ಜಿಲ್ಲಾ ಸಮಿತಿ ಪದಾಧಿಕಾರಿಗಳು ಕೋರಿದ್ದಾರೆ.

ಜಿಲ್ಲಾ ಸವಿತಾ ಸಮಾಜದಿಂದ ಪ್ರತಿಭಾ ಪುರಸ್ಕಾರ: ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ- ಶಾಸಕ ಡಾ ಶಿವರಾಜ ಪಾಟೀಲ್

Image
ಜಿಲ್ಲಾ ಸವಿತಾ ಸಮಾಜದಿಂದ ಪ್ರತಿಭಾ ಪುರಸ್ಕಾರ:            ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ- ಶಾಸಕ ಡಾ ಶಿವರಾಜ ಪಾಟೀಲ್ ರಾಯಚೂರು,ಡಿ.24- ಮಕ್ಕಳನ್ನು ಶಿಕ್ಷಣವಂತರನ್ನಾಗಿಸ ಬೇಕು, ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿ ಸಮಾಜಕ್ಕೆ ಕೀರ್ತಿ ಹಾಗೂ ಪಾಲಕರಿಗೆ ಹೆಸರು ತರಬೇಕು ಎಂದು ಶಾಸಕ ಡಾ. ಶಿವರಾಜ ಪಾಟೀಲ ಸಲಹೆ ನೀಡಿದರು. ನಗರದ ಬಾಬು ಜಗಜೀವನರಾಂ ಕಲ್ಯಾಣ ಮಂಟಪದ ದಿ. ಅಶೋಕ ಗಸ್ತಿ ವೇದಿಕೆಯಲ್ಲಿ ಜಿಲ್ಲಾ ಸವಿತಾ ಸಮಾಜ ನೌಕರರ ಸಂಘದ ವತಿಯಿಂದ ಶನಿವಾರ  ಆಯೋಜಿಸಿದ್ದ ಸಮಾಜದ ವಿದ್ಯಾರ್ಥಿಗಳಿಗ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ವಿದ್ಯಾವಂತರಾಗಿ ಮಾಡುವುದು ಪಾಲಕರ ಕರ್ತವ್ಯ. ಸಮಾಜದ ಅಶೋತ್ತರ ಈಡೇರಿಕೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳು  ಸಮಾಜಕ್ಕೆ ಕೊಡುಗೆ ನೀಡಿ ಸಮಾಜದ ಋಣ ತೀರಿಸಬೇಕು. ಸನ್ಮಾನ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಇಷ್ಟಕ್ಕೆ ನಿಲ್ಲದೇ ಡಾಕ್ಟರ್, ಎಂಜಿನಿಯರ್ ಆಗುವ ಮೂಲಕ ಅನೇಕರಿಗೆ ಮಾದರಿಯಾಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅಭಿವೃದ್ಧಿಯಾಗಲು ಸಾಕಷ್ಟು ಅವಕಾಶವಿದೆ. ಬಡತನ, ಕಷ್ಟವನ್ನು ಅನುಭವಿಸಿದವರೇ ಸಾಧಕರಗಲು ಸಾಧ್ಯ. ವಿದ್ಯಾರ್ಥಿಗಳು ತಮಗೆ ಎದುರಾಗುವ ಸವಾಲುಗಳನ್ನು ಸ್ವೀಕರಿಸಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಎಐಸಿಸಿ ಕಾರ್ಯದರ್ಶಿ ಎನ್.ಎ...

ವಿಶ್ವ ಗುರು ಪೇಜಾವರ ಶ್ರೀ ವಿಶ್ವೇಶ ತೀರ್ಥರ ಆರಾಧನೆ

Image
ನಗರದಲ್ಲಿ ವಿಶ್ವ ಗುರು ಪೇಜಾವರ ಶ್ರೀ ವಿಶ್ವೇಶತೀರ್ಥರ  ಆರಾಧನೆ .            ರಾಯಚೂರು,ಡಿ.24- ನಗರದಲ್ಲಿ ಪೇಜಾವರ ಮಠ ದಿಂದ ನಡೆಸಲ್ಪಡುವ ಮದ್ವ ಮಂಡಲ ಹಾಸ್ಟೆಲ್ ನಲ್ಲಿ ವಿಶ್ವ ಮದ್ವ ಮಹಾ ಮಂಡಲ ಪದಾಧಿಕಾರಿಗಳು, ಸದಸ್ಯರು ಮತ್ತು ಶ್ರೀ ಗಳ ಭಕ್ತರು ಸೇರಿ ಶ್ರೀ ವಿಶ್ವೇಶ ತೀರ್ಥರ ಆರಾಧನೆ ಯನ್ನು ಭಕ್ತಿಯಿಂದ ಆಚರಿಸಲಾಯಿತು.                ಶ್ರೀ ಗುರು ಸರ್ವ ಭೌಮ ಸಂಸ್ಕೃತ ವಿದ್ಯಾ ಪೀಠ ದ ಪ್ರಧ್ಯಪಕರು ಮತ್ತು ಶ್ರೀ ಗಳ ಆಪ್ತ ಶಿಷ್ಯ ರಾದ ಪಂಡಿತ್ ಶ್ರೀ ಪವಮಾನ ಆಚಾರ್ಯ ಕುರ್ಡಿ ಶ್ರೀ ಗಳ ನಡೆದು ಬಂದ ದಾರಿ ಭಕ್ತ ರ ಶಿಷ್ಯರ ಪಾಠ ಶಾಲೆ ವಿದ್ಯಾರ್ಥಿ ಗಳ ಮೇಲೆ ಅವರ ಕಾರುಣ್ಯ ದ ಭಗ್ಗೆ ವಿವರ ವಾಗಿ ಪ್ರವಚನ ಮೂಲಕ ತಿಳಿಸಿ ಕೊಟ್ಟರು.                                          ಹಿರಿಯರು, ಶ್ರೀ ಗಳ ಸಂಪೂರ್ಣ ಕಾರುಣ್ಯಕ್ಕೆ ಪಾತ್ರರಾದ  ನರಸಿಂಗರಾವ್ ದೇಶ ಪಾಂಡೆ,  ಕೆ.ಆರ್. ಇನಾಮ್ ದಾರ,ಅನಂತ್ ರಾವ್ ಸರಾಫ್, ಪ್ರಾಣೇಶ್ ಮುತಾಲಿಕ್,ಅರವಿಂದ್ ಕುಲಕರ್ಣಿ, ಹನುಮೇಶ್ ಸರಾಫ್, ವೇಣುಗೋಪಾಲ ಇನಾಂದಾರ್, ವಿಷ್ಣು ತೀರ್ಥ,, ವಸುದೇಂದ್ರ ಸಿರವಾರ ಸೇರಿದಂತೆ ಇನ್ನುಳಿದ ಭಕ್ತ ರು ಪಾಲ್ಗೊಂಡು ಗು...

ರುದ್ರಾಂಶ ಸಂಭೂತರಾದ ಶ್ರೀ ಜಿತಾಮಿತ್ರ ತೀರ್ಥರ ಮಧ್ಯಾರಾಧನೆ: ಶ್ರೀ ಸುಬುಧೇಂದ್ರತೀರ್ಥರಿಂದ ವಿಶೇಷ ಪೂಜೆ

Image
  ರುದ್ರಾಂಶ ಸಂಭೂತರಾದ ಶ್ರೀ ಜಿತಾಮಿತ್ರ ತೀರ್ಥರ ಮಧ್ಯಾರಾಧನೆ: ಶ್ರೀ ಸುಬುಧೇಂದ್ರತೀರ್ಥರಿಂದ ವಿಶೇಷ ಪೂಜೆ .                                    ರಾಯಚೂರು,ಡಿ.23- ರುದ್ರಾಂಶ ಸಂಭೂತರಾದ ಶ್ರೀ ಜಿತಾಮಿತ್ರ ತೀರ್ಥರ ಸನ್ನಿದಾನದಲ್ಲಿ ಮಧ್ಯಾರಾಧನೆ ಭಕ್ತಿಯಿಂದ ನೆರವೇರಿತು.             ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಶ್ರೀಮನ್ಮೂಲ ರಾಮದೇವರ ಸಂಸ್ಥಾನ ಪೂಜೆ ಹಾಗೂ ಜಿತಾಮಿತ್ರತೀರ್ಥರಿಗೆ ಮಹಾಮಂಗಳಾರತಿ ನೆರವೇರಿಸಿದರು.                                            ನೆರಯ ಜಿಲ್ಲೆ ಮತ್ತು ರಾಜ್ಯಗಳಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.     ಸಕಲ ಭಕ್ತರಿಗೆ ತೀರ್ಥ ಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ನೆರವೇರಿತು.

ಎಕೆಬಿಎಂಎಸ್ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ: ಬ್ರಾಹ್ಮಣರು ಸತ್ಯಮೇವ ಜಯತೆ ವಾಕ್ಯದಡಿ ನಂಬಿಕೆಯುಳ್ಳವರು-ಶ್ರೀ ವಿದ್ಯಾ ಕಣ್ವವಿರಾಜ ತೀರ್ಥರು

Image
 ಎಕೆಬಿಎಂಎಸ್ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ: ಬ್ರಾಹ್ಮಣರು ಸತ್ಯಮೇವ ಜಯತೆ ವಾಕ್ಯದಡಿ ನಂಬಿಕೆಯುಳ್ಳವರು- ಶ್ರೀ ವಿದ್ಯಾ ಕಣ್ವವಿರಾಜ ತೀರ್ಥರು ರಾಯಚೂರು,ಡಿ.22-ಬ್ರಾಹ್ಮಣರು ಸತ್ಯಮೇವ ಜಯತೆ ಎಂಬ ವಾಕ್ಯದಡಿ ನಂಬಿಕೆಯುಳ್ಳವರಾಗಿದ್ದು ಸತ್ಯವಾದದನ್ನೆ ನುಡಿಯುವದರಿಂದ ನಮ್ಮ ಶ್ರೇಯಸು ಎಂದು ಕಣ್ವ ಮಠಾಧೀಶರಾದ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥರು ನುಡಿದರು. ಅವರಿಂದು ನಗರದ ಬೋಳಮಾನದೊಡ್ಡಿ ರಸ್ತೆಯ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ಹೊರತರಲಾದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಬ್ರಾಹ್ಮಣರು ಎಲ್ಲ ರಂಗದಲ್ಲಿ ಮುಂದಿದ್ದಾರೆ ಬ್ರಾಹ್ಮಣರಿಗೆ ವಿದ್ಯೇಯೇ ಭೂಷಣ ಬ್ರಾಹ್ಮಣರು ನಮ್ಮ ಆಚಾರ ವಿಚಾರ ಬಿಡದಂತೆ ಸಮಾಜಕ್ಕೆ ಪರೋಪಕಾರ ಮಾಡುತ್ತ ಸಾಗಬೇಕೆಂದ ಅವರು  ಸತ್ಯವೆ ನುಡಿಯಬೇಕು ಸತ್ಯಮೇವ ಜಯತೆ ಎಂಬ ವಾಕ್ಯದಂತೆ ನಾವೆಲ್ಲರು ನಮ್ ನಡೆ ನುಡಿ ಸತ್ಯದಿಂದ ಕೂಡಿರಬೇಕೆಂದರು. ವಿವಿಧ ರಂಗದಲ್ಲಿ ಅನೇಕ ಬ್ರಾಹ್ಮಣರು ಸಾಧನೆಗೈದಿದ್ದಾರೆ ವಿದ್ಯಾ ದದಾತಿ ವಿನಯಂ ಎಂಬ0ತೆ ನಾವು ಸದಾ ವಿನಯ ಶೀಲರಾಗಿರಬೇಕು ಅನ್ಯ ಸಮಾಜಗಳಿಗೆ ಮಾದರಿಯಾಗಿರಬೇಕು ನಮ್ಮ ತಂದೆ ತಾ ಯಿ ಯನ್ನು ವೃದ್ಯಾಪ್ಯದಲ್ಲಿ ವುದ್ಧಾಶ್ರಮಕ್ಕೆ ಸೇರಿಸದೆ ಅವರ ಪಾಲನೆ ಪೋಷಣೆ ಹೊಣೆ ಹೊತ್ತುಕೊಂಡು ವೃದ್ದ್ ತಂದೆ ತಾಯಿ ಬಗ್ಗೆ ತಾತ್ಸಾರ ಮನೋಭಾವ ಸಲ್ಲದು ಎಂದ ಅವರು ವಿಶಿಷ್ಟ ಸಾಧನೆಗೈದ ಬ್ರಾ...

ಅಯ್ಯಪ್ಪಸ್ವಾಮಿ ಭಕ್ತರಿಗಾಗಿ ನಾಂದೇಡನಿಂದ ಕೋಲಮ್ ನಡುವೆ ವಿಶೇ಼ಷ ರೈಲು

Image
  ಅಯ್ಯಪ್ಪಸ್ವಾಮಿ ಭಕ್ತರಿಗಾಗಿ ನಾಂದೇಡನಿಂದ ಕೋಲಮ್ ನಡುವೆ ವಿಶೇ಼ಷ ರೈಲು- ಬಾಬು ರಾವ್                   ರಾಯಚೂರು,ಡಿ.20- ನಾಂದೇಡನಿಂದ ಕೋಲಮ್ ನಡುವೆ ವಿಶೇ಼ಷ ರೈಲನ್ನು ದಿ. 22 ರಂದು ಓಡಿಸಲಾಗುತ್ತಿದೆ.ಇದರ ನಂಬರ್ 07135 ಆಗಿರುತ್ತದೆ.ಇದು ಅಂದು ರಾತ್ರಿ  11.45 ಕ್ಕೆ ಬಿಟ್ಟು ಬೆಳಿಗ್ಗೆ 11.20 ಕ್ಕೆ ರಾಯಚೂರಿಗೆ ಬರುತ್ತದೆ.          ಇದರ ಮಾರ್ಗ ಯಾದಗಿರಿ,ರಾಯಚೂರು ,ಸೇಲಂ ಆಗಿದೆ.  ಕೊಲ್ಲಮ್ ನಿಂದ ರಾಯಚೂರ ರೈಲು ದಿ. 24 ಮತ್ತು ಜನವರಿ 7 ರಂದು ಓಡಲಿದೆ. ಇದರ ನಂಬರ್ 07136  ಆಗಿದೆ.ಇದು ಮಧ್ಯಾಹ್ನ 3 ಗಂಟೆಗೆ ಹೊರಡುತ್ತದೆ.ರಾಯಚೂರು ನಿಲ್ದಾಣಕ್ಕೆ  ಬೆಳಿಗ್ಗೆ 4.55 ಕ್ಕೆ ಬತುತ್ತದೆ.ಈ ಟ್ರೇನ್ ಅಯ್ಯಪ್ಪಸ್ವಾಮಿ ಭಕ್ತರಿಗೆ ಅನುಕೂಲಕರವಾಗಿದೆ.ಪ್ರಯಾಣಿಕರು ಇದರ ಪ್ರಯೋಜನ ಪಡೆಯಲು  ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ಕೋರಿದ್ದಾರೆ.

ಶ್ರೀ ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳವರ ಸಾನಿಧ್ಯ , ವಿವಿಧ ಸಾಧಕರಿಗೆ ಸನ್ಮಾನ: ಡಿ.೨೧ ರಂದು ಎಕೆಬಿಎಂಎಸ್ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ

ಡಿ.21 ರಂದು ಎಕೆಬಿಎಂಎಸ್ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ರಾಯಚೂರು,ಡಿ.20-ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ಡಿ.೨೧ ರಂದು ೨೦೨೩ ರ  ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ೫.೩೦ಕ್ಕೆ ನಗರದ ಬೋಳಮಾನದೊಡ್ಡಿ ರಸ್ತೆಯ ಶಾರಧಾ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದ ಸಾನಿಧ್ಯ ವಹಿಸುವ ಕಣ್ವ ಮಠಾಧೀಶರಾದ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಡಾ.ರವಿರಾಜನ್, ಡಾ.ಸಿ.ಎನ್.ಕುಲಕರ್ಣಿ, ವರದರಾಜ ಕುಲಕರ್ಣಿ ವಂದಲಿ, ಶೋಭಾ ಪ್ರಮೋದ ಕಟ್ಟಿ,ಕೆ.ಪಿ.ವಾಸುದೇವ ರವರನ್ನು ಸನ್ಮಾನಿಸಲಾಗುತ್ತಿದ್ದು ಕಾರ್ಯಕ್ರಮದಲ್ಲಿ ಸೇತುಮಾಧವ ಕೇರೂರು ಮತ್ತು ಸಂಗಡಿಗರಿAದ ದಾಸವಾಣಿ ನಡೆಯಲಿದ್ದು ವಿಪ್ರ ಬಾಂಧವರು ಹೆಚ್ಚಿನ ಸಂಖೆಯಲ್ಲಿ ಪಾಲ್ಗೊಳ್ಳುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಡಿ.ಕೆ.ಮುರಳಿಧರ್ ವಿನಂತಿಸಿಕೊಳ್ಳುತ್ತಾರೆ.

ಮುಂದಿನ ಬಾರಿಯೂ ನಮ್ಮದೆ ಸರ್ಕಾರ... ನಾನೇ ಎಂಎಲ್‌ಎ- ಡಾ.ಶಿವರಾಜ ಪಾಟೀಲ.

Image
  ನಗರದಲ್ಲಿ ಡಿ.೨೫ ರಂದು ಮೆಣಸಿನಕಾಯಿ ಮಾರಕಟ್ಟೆ ಸ್ಥಾಪನೆ, ಶೀಘ್ರದಲ್ಲೆ ವಿಮಾನ ನಿಲ್ದಾಣಕ್ಕೆ ಭೂಮಿ ಪೂಜೆ: ಮುಂದಿನ ಬಾರಿಯೂ ನಮ್ಮದೆ ಸರ್ಕಾರ... ನಾನೇ ಎಂಎಲ್‌ಎ-ಡಾ.ಶಿವರಾಜ ಪಾಟೀಲ. ರಾಯಚೂರು,ಡಿ.೧೮-ಮುಂದಿನ ಬಾರಿಯೂ ನಮ್ಮದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬರಲಿದ್ದು ನಾನೇ ಮತ್ತೊಮ್ಮೆ ಎಂಎಲ್‌ಎ ಆಗಿರುತ್ತೇನೆ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.  ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕೇಂದ್ರ ದಲ್ಲಿ ಮೋದಿರವರ ಆಡಳಿತ ಮತ್ತು ರಾಜ್ಯದಲ್ಲಿ ಬೊಮ್ಮಾಯಿಯವರ ಕೊಡುಗೆಯಿಂದ ರಾಜ್ಯದಲ್ಲಿ ಮತ್ತೊಮೆ ಬಿಜೆಪಿ ಪಕ್ಷವೆ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದ ಅವರು ನಾನೆ ಶಾಸಕನಾಗಿರುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಹೊಸ ಹತ್ತಿ ಮಾರುಕಟ್ಟೆಯಲ್ಲಿ ಡಿ.೨೫ ರಿಂದ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಯಾಗಲಿದ್ದು ಮೆಣಸಿನಕಾಯಿ ಆವಕ ನೋಡಿಕೊಂಡು ಮಾರುಕಟ್ಟೆ ಕಾರ್ಯನಿರ್ವಹಣೆ ಮಾಡುತ್ತದೆ ಎಂದ ಅವರು ಹುಬ್ಬಳ್ಳಿ, ಧಾರವಾಡ ಮತ್ತು ಹಾವೇರಿ ಭಾಗದಲ್ಲಿ ಮೆಣಸಿನಕಾಯಿ ಹೆಚ್ಚು ಬೆಳೆಯಲಾಗುತ್ತದೆ ಅದರೆ ನಮ್ಮ ಜಿಲ್ಲೆಯ ರಾಯಚೂರು, ದೇವದುರ್ಗ,  ಮಾನ್ವಿ ಸುತ್ತಮುತ್ತಲಿನ ನೀರಾವರಿ ಪ್ರದೇಶದಲ್ಲಿಯೂ ಸುಮಾರು ೪೦೦ ಹೆಕ್ಟೇರ  ಪ್ರದೇಶದಲ್ಲಿ  ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮೆಣಸಿಕಾಯಿ...

ಕಾಂಗ್ರೆಸ್ ಭಾರತ ಜೋಡೊ ಯಾತ್ರೆ ಸಾಗಿದ ನಗರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪೈಪೋಟಿ ಶುರು : ಟಿಕೆಟ್ ಪಡೆಯಲು ಬಣ ರಾಜಕೀಯ ಮುನ್ನೆಲೆಗೆ : ಹೈ ಕಮಾಂಡ್ ಚಿತ್ತ ಯಾರತ್ತ?

Image
  ಕಾಂಗ್ರೆಸ್ ಭಾರತ ಜೋಡೊ ಯಾತ್ರೆ ಸಾಗಿದ ನಗರ ಮತ್ತು  ಗ್ರಾಮೀಣ ಕ್ಷೇತ್ರದಲ್ಲಿ  ಟಿಕೆಟ್‌ಗಾಗಿ ಪೈಪೋಟಿ ಶುರು : ಟಿಕೆಟ್ ಪಡೆಯಲು ಬಣ ರಾಜಕೀಯ ಮುನ್ನೆಲೆಗೆ : ಹೈ ಕಮಾಂಡ್ ಚಿತ್ತ ಯಾರತ್ತ? -ಜಯಕುಮಾರ್ ದೇಸಾಯಿ ಕಾಡ್ಲೂರು. ರಾಯಚೂರು,ಡಿ.೧೫-ಜಿಲ್ಲೆಯು ಏಳು ವಿಧಾನ ಸಭಾ ಕ್ಷೇತ್ರಗಳನ್ನೊಳಗೊಂಡ ದೊಡ್ಡ ಜಿಲ್ಲೆಯಾಗಿದ್ದು ಕಲ್ಯಾಣ ಕರ್ನಾಟದ ಪ್ರಮುಖ ಜಿಲ್ಲೆಯಾಗಿರುವ ರಾಯಚೂರು ಜಿಲ್ಲೆಯ ರಾಜಕೀಯ ಇತಿಹಾಸ ಮೆಲಕು ಹಾಕಿದರೆ ಇಲ್ಲಿಯ ಮತದಾರ ಪ್ರಭುಗಳು ಪ್ರಬುದ್ಧರಾಗಿದ್ದು ಸುಲಭದಲ್ಲಿ ಯಾವುದೆ ಪಕ್ಷ ಜನರನ್ನು ಯಾಮಾರಿಸಲು  ಸಾಧ್ಯವಿಲ್ಲವೆಂಬದು ಈಗಾಗಲೆ ನಡೆದಿರುವ ಅನೇಕ ಚುನಾವಣೆಗಳಲ್ಲಿ ಸಾಬೀತಾಗಿದೆ.  ಈ ಬಾರಿಯ ಚುನಾವಣೆ ಕಾವು ಬೇಸಿಗೆ ಮುನ್ನದ ಬಿಸಿಲು ಏರುವ ರೀತಿಯಲ್ಲಿ ಕೊಂಚ ಹೆಚ್ಚುತ್ತಿದ್ದು ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೆ ಟಿಕೆಟ್ ಗಾಗಿ ಅಕಾಂಕ್ಷಿಗಳು ಮುನ್ನೆಲೆಗೆ ಬರುತ್ತಿದ್ದು ಸದ್ಯ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವ ಹವಣಿಕೆಯಲ್ಲಿದ್ದು ಜಿಲ್ಲೆಯ ಮಟ್ಟಿಗೆ ಅದರಲ್ಲೂ ನಗರ ಮತ್ತು ಗ್ರಾಮೀಣ ಕ್ಷೇತ್ರದ ಮಟ್ಟಿಗೆ ನೋಡುವುದಾದರೆ ನಗರ ಕ್ಷೇತ್ರಕ್ಕೆ ಅನೇಕರು ಕಾಂಗ್ರೆಸ್ ಪಕ್ಷದ ಟಿಕೆಟ್ ಬಯಿಸಿ ಅರ್ಜಿ ಹಾಕಿದ್ದು ತಮ್ಮ ಗಾಡ್ ಫಾದರ ಮೂಲಕ ಹೈ ಕಮಾಂಡ ಮಟ್ಟದಲ್ಲಿ ಟಿಕೆಟ್ ಪಡೆಯುವ ಕಸರತ್ತು ಪ್ರಾರಂಭಿಸಿದ್ದು ಒಂದಡೆಯಾದರೆ ಇನ್ನೊಂದೆ...