
ಸೇವಾ ಸಿರಿ ಚಾರಿಟೇಬಲ್ ಟ್ರಸ್ಟ್ ನಿಂದ ಬಿಡಾಡಿ ದಿನಗಳಿಗೆ ರಿಫ್ಲೆಕ್ಟರ್ ಬೆಲ್ಟ್ ಅಳವಡಿಕೆ- ಡಾ. ನಾಗವೇಣಿ ಪಾಟೀಲ್. ಜಯ ಧ್ವಜ ನ್ಯೂಸ್, ರಾಯಚೂರು, ಜು.31 - ಸೇವಾ ಸಿರಿ ಚಾರಿಟೇಬಲ್ ಟ್ರಸ್ಟ್ ನಿಂದ ಬಿಡಾಡಿ ದಿನಗಳಿಗೆ ರಿಫ್ಲೆಕ್ಟರ್ ಬೆಲ್ಟ್ ಅಳವಡಿಸಲಾಗುತ್ತದೆ ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನಾಗವೇಣಿ ಪಾಟೀಲ್ ಹೇಳಿದರು . ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಂಧನೂರಿನ ಸೇವಾ ಸಿರಿ ಟ್ರಸ್ಟ್ ಜಿಲ್ಲೆಯಾದ್ಯಂತ ಬಿಡಾಡಿ ದನಗಳ ಸಂರಕ್ಷಣೆಗೆ ಮುಂದಾಗಿದ್ದು ಹಸು ಹಾಗೂ ಬಿಡಾಡಿ ದನಗಳ ಕೊರಳಲ್ಲಿ ರಿಫ್ಲೆಕ್ಟರ್ ಬೆಲ್ಟ್ (ಹೊಳೆಯುವ ಪಟ್ಟಿ) ಅಳವಡಿಕೆ ಮಾಡಲಾಗುತ್ತಿದ್ದು ಇದರಿಂದ ರಾತ್ರಿ ವೇಳೆ ಬಿಡಾಡಿ ದಿನಗಳಿಗೆ ವಾಹನ ಅಪಘಾತ ತಡೆಯಲು ಸಹಕಾರಿಯಾಗುತ್ತದೆ ಎಂದರು. ಈಗಾಗಲೆ ಸಿಂಧನೂರಲ್ಲಿ 150 ಬೆಲ್ಟ್ ಉಚಿತವಾಗಿ ನೀಡಲಾಗಿದ್ದು ಜಿಲ್ಲೆಯ ಪ್ರತಿ ತಾಲುಕಿಗೂ ಬೆಲ್ಟ್ ನೀಡುವ ಗುರಿ ಹೊಂದಲಾಗಿದೆ ಅಲ್ಲದೆ ಬಿಡಾಡಿ ದನಗಳ ಆಹಾರಕ್ಕೆ 500 ರೂ.ಸಹ ನೀಡಲಾಗುತ್ತದೆ ಎಂದರು. ಗೋ ಸೇವಾ ಸಂಘ ಇದೇ ಮಾದರಿಯಲ್ಲಿ ಬೆಲ್ಟ್ ಅಳವಡಿಕೆ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ...