ಕಲಬುರ್ಗಿ ಗುಂತಕಲ್ ರೈಲು ಹಾಗೂ ಹೈದ್ರಾಬಾದ್ ಕೊಲ್ಹಾಪೂರು ರೈಲು ಪ್ರಾರಂಭಕ್ಕೆ ಮನವಿ
ಕಲಬುರ್ಗಿ ಗುಂತಕಲ್ ರೈಲು ಹಾಗೂ ಹೈದ್ರಾಬಾದ್ ಕೊಲ್ಹಾಪೂರು ರೈಲು ಪ್ರಾರಂಭಕ್ಕೆ ಮನವಿ ರಾಯಚೂರು,ಜು.೩೧-ಕಲಬುರ್ಗಿ ಗುಂತಕಲ್ ಹಾಗೂ ಹೈದ್ರಾಬಾದ್ ಕೊಲ್ಹಾಪೂರು ನಡುವೆ ರೈಲು ಓಡಾಟ ಪುನರ್ ಪ್ರಾರಂಭಕ್ಕೆ ಸಂಸದ ಅಮರೇಶ ನಾಯಕ ರವರು ಸಿಕಂದ್ರಾಬಾದ್ ರೈಲ್ವೆ ಮ್ಯಾನೇಜರ್ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ರೈಲ್ವೇ ಬೋರ್ಡ್ ಸದಸ್ಯ ಬಾಬುರಾವ್ ತಿಳಿಸಿದ್ದಾರೆ. ಕರೋನಾ ಸಕ್ರಿಯ ಪ್ರಕರಣಗಳು ಕಡಿಮೆಯಾಗಿದ್ದು ಎಕ್ಸ್ಪ್ರೆಸ್ ರೈಲು ಓಡಾಟ ಪ್ರಾರಂಭಗೊ0ಡಿದ್ದು ದಿನ ನಿತ್ಯ ಅನೇಕ ಜನರು ಪ್ರಯಾಣಿಸುತ್ತಿದ್ದುಶ್ರಾವಣ ಮಾಸದ ಅಂಗವಾಗಿ ವಿವಿಧ ಪುಣ್ಯ ಕ್ಷೇತ್ರಗಳಿಗೆ ತೆರಳುತ್ತಾರೆ ಅಲ್ಲದೆ ದಿನನಿತ್ಯ ಕೂಲಿ ಮಾಡುವ ಜನರು ಈ ರೈಲು ಓಡಾಟದಿಂದ ಪ್ರಯೋಜನ ಪಡೆಯಲಿದ್ದು ಕೂಡಲೆ ಪ್ರಯಾಣಿಕರ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ.