ಭಾರತ್ ಜೋಡೋ ಅಲ್ಲ, ಮೊದಲು ಕಾಂಗ್ರೆಸ್ ಜೋಡೋ ಮಾಡಿ- ಸಿಎಂ ಇಬ್ರಾಹೀಂ
ಭಾರತ್ ಜೋಡೋ ಅಲ್ಲ, ಮೊದಲು ಕಾಂಗ್ರೆಸ್ ಜೋಡೋ ಮಾಡಿ- ಸಿಎಂ ಇಬ್ರಾಹೀಂ. ರಾಯಚೂರು,ಸೆ.30-ಕಾಂಗ್ರೆಸ್ ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿದ್ದು ನಾವು ಅವರಿಗಿಂತ ವಿಭಿನ್ನವಾಗಿ ಹೋಗ್ತೇವೆ, ಪಂಚ ರತ್ನ ಜಾರಿಗೆ ತರುತ್ತೇವೆ ಆ ಯೋಜನೆ ಈಗ ರಾಜ್ಯದ ಜನರ ಮುಂದೆ ಇಟ್ಟಿದ್ದೇವೆ. ಭಯ, ಹಸಿವು ಮುಕ್ತ ಕರ್ನಾಟಕ ಮಾಡುವ ಸಂಕಲ್ಪ ಮಾಡಿದ್ದು,ನಾವು ಕೆಲಸ ಮಾಡದೇ ಇದ್ರೆ ಪಕ್ಷ ವಿಸರ್ಜನೆ ಮಾಡ್ತೇವೆ ಎಂದು ಜೆಡಿಎಸ್ ರಾಜಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯಾವುದೇ ರಾಜಕೀಯ ಪಕ್ಷ ಇದುವರೆಗೂ ಈ ರೀತಿಯ ವಾಗ್ದಾನ ಮಾಡಿಲ್ಲ. ನಾವು ಎಲ್ಲಾ ನೀರಾವರಿ ಯೋಜನೆ ಮುಕ್ತಾಯಗೊಳಿಸ್ತೇವೆ ಎಂದರು. ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಅವರು ಬರ್ತಿದ್ದಾರೆ. ನಮ್ಮ ಕಾರ್ಯಕ್ರಮ ಇಟ್ಕೊಂಡು ನಾವು ಹೋಗ್ತಿದ್ದೇವೆ .ಕೆಲವರು ಜೈಲ್ ನಲ್ಲಿದ್ದಾರೆ, ಇನ್ನೂ ಕೆಲವರು ಬೇಲ್ ಮೇಲಿದ್ದಾರೆ ಎಂದು ಕಟುಕಿದರು. ನಮಗೆ ಯಾವುದೇ ಹೈಕಮಾಂಡ್ ಇಲ್ಲ, ತಮಾಷೆ ತೋರಿಸೋದು ನಮ್ಮಲ್ಲಿ ಇಲ್ಲ ಭಾರತ್ ಜೋಡೋ ಅಲ್ಲ, ಮೊದಲು ಕಾಂಗ್ರೆಸ್ ಜೋಡೋ ಮಾಡಿ ಎಂದರು. ಮೊದಲು ಕಾಂಗ್ರೆಸ್ ಗೆ ಅಧ್ಯಕ್ಷರನ್ನ ಮಾಡೋದಕ್ಕೆ ಆಗ್ತಿಲ್ಲ ಎಂದು ಕಿಚಾಯಿಸಿದರು. ನಮ್ದು ಬಿ ಟೀಂ ಅಂತಿದ್ರು, ಇವಾಗ ಅವ್ರೇ ಬಿ ಟೀಂ ಆಗಿದ್ದಾರೆ .ಇವ್ರೇ...