ಹುಣಸಿಹೊಳೆ : ಆಷಾಡ ಶುದ್ಧ ಏಕಾದಶಿ ಪ್ರಯುಕ್ತ ಮುದ್ರಾಧಾರಣೆ
ಹುಣಸಿಹೊಳೆ : ಆಷಾಡ ಶುದ್ಧ ಏಕಾದಶಿ ಪ್ರಯುಕ್ತ ಮುದ್ರಾಧಾರಣೆ ರಾಯಚೂರು,ಜೂ.29- ಶ್ರೀಮದ್ ಕಣ್ವ ಮಠ ಮೂಲ ಮಹಾ ಸಂಸ್ಥಾನ ಶ್ರೀಕ್ಷೇತ್ರ ಹುಣಸಿಹೊಳೆ ಯಲ್ಲಿ ಶ್ರೀ ಸುದರ್ಶನ ಹೋಮ ಆಯೋಜಿಸಲಾಗಿತ್ತು. ಕಣ್ವಮಠಾಧೀಶರಾದ ಶ್ರೀ ಶ್ರೀ೧೦೦೮ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥ ಶ್ರೀ ಪಾದಂಗಳವರು ಸಂಸ್ಥಾನ ಮುದ್ರೆ ಗಳಿಗೆ ಪೂಜೆ ಮತ್ತು ಮಂಗಳಾರತಿ ನೆರವೇರಿಸಿ ಆಷಾಡ ಪ್ರಥಮ ಏಕಾದಶಿ ಮುದ್ರಾಧಾರಣೆ ಮಾಡಿ ತದನಂತರ ನೆರೆದ ಸಕಲ ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನೆರವೇರಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.