Posts

Showing posts from October, 2022

ದೇವದುರ್ಗದಲ್ಲಿ ಕೆ.ಶಿವನಗೌಡ ನಾಯಕರ ನಿರಂಕುಶ ಆಡಳಿತ ವಿರುದ್ದ ನ.೪ ರಂದು ಪ್ರತಿಭಟನೆ-ವಿರುಪಾಕ್ಷಿ

Image
  ದೇವದುರ್ಗದಲ್ಲಿ ಕೆ.ಶಿವನಗೌಡ ನಾಯಕರ ನಿರಂಕುಶ ಆಡಳಿತ ವಿರುದ್ದ ನ.೪ ರಂದು ಪ್ರತಿಭಟನೆ-ವಿರುಪಾಕ್ಷಿ ರಾಯಚೂರು,ಅ.೩೧-ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ನಿರಂಕುಶ ಆಡಳಿತವಿದೆಯೇ ಎಂಬ ಅನುಮಾನ ಮೂಡುತ್ತಿದ್ದು ಅಲ್ಲಿಯ ಶಾಸಕರಾದ ಕೆ.ಶಿವನಗೌಡ ನಾಯಕರು ತಮ್ಮ ಹಿಂಬಾಲಕರ ಮೂಲಕ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರ ಮೇಲೆ ನಿರಂತರ ದಬ್ಬಾಳಿಕೆ ಮಾಡುತ್ತಿದ್ದಾರೆ ಇದೆಲ್ಲದರ ವಿರುದ್ದ ನ.೪ ರಂದು ದೇವದುರ್ಗದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆOದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಇತ್ತೀಚೆಗೆ ನಮ್ಮ ಪಕ್ಷದ ದೇವದುರ್ಗ ವಿಧಾನ ಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಕರೆಮ್ಮ ನಾಯಕರ ಮೇಲೆ ಶಾಸಕ ಶಿವನಗೌಡರ ಚಿತಾವಣೆ ಮೇರೆಗೆ ಕೆಲವರು ಹಲ್ಲೆ ಮಾಡಲು ಮುಂದಾಗಿದ್ದು ಅವರ ಮಗಳ ಮೇಲೆಯೂ ಹಲ್ಲೆ ಯತ್ನ ಮಾಡಲಾಗಿ ಮೊಬೈಲ್ ಕಸಿದುಕೊಳ್ಳುವ ಪ್ರಯತ್ನ ಮಾಡಲಾಗಿದ್ದು ಇದುವರೆಗೂ ಆರೋಪಿಗಳ ಬಂಧನ ವಾಗಿಲ್ಲವೆಂದರು. ಶಿವನಗೌಡರ ಕೃಪಾ ಕಟಾಕ್ಷದಿಂದ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆದಿದ್ದು ಕಾನೂನು ಬಾಹಿರ ಚಟುವಟಿಕೆ ಸಹ ನಡೆಯುತ್ತಿದ್ದು ತಾಲೂಕಾಡಳಿತ, ಪೊಲೀಸ್ ಇಲಾಖೆ ಮೂಕ ಪ್ರೇಕ್ಷಕರಾಗಿದ್ದಾರೆಂದು ದೂರಿದರು. ಸಿಎಂ ಬೊಮ್ಮಾಯಿಯವರು ವೇರಾವೇಷದಲ್ಲಿ ಜನ ಸಂಕಲ್ಪ ಯಾತ್ರೆ ತಡೆಯಲು ಯಾರಿಗೆ ದಮ್ಮು, ತಾಕತ್ತು ಇದೆ ಎಂದು ಪ್ರಶ್ನಿಸುತ್ತಾರೆ ನಾವು ಅದಕ್ಕೆ ಪ್ರತಿಯಾಗಿ ಕೇಳ...

ನಗರದಲ್ಲಿ ಜರುಗಿದ ಭಾರತ ಜೋಡೊ ಯಾತ್ರೆ ಅಭೂತ ಪೂರ್ವ ಯಶಸ್ಸಿಗೆ ಆಭಾರಿ- ರವಿ ಬೋಸರಾಜು

Image
  ನಗರದಲ್ಲಿ ಜರುಗಿದ ಭಾರತ ಜೋಡೊ ಯಾತ್ರೆ ಅಭೂತ ಪೂರ್ವ ಯಶಸ್ಸಿಗೆ ಆಭಾರಿ-ರವಿ ಬೋಸರಾಜು ರಾಯಚೂರು,ಅ.೩೧-ನಗರದಲ್ಲಿ ಜರುಗಿದ ಭಾರತ ಜೋಡೊ ಯಾತ್ರೆ ಅಭೂತ ಪೂರ್ವ ಯಶಸ್ಸಿಗೆ ಸಹಕರಿಸಿದ ಪಕ್ಷದ ಹಿರಿಯ ಕಿರಿಯ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಆಭಾರಿಯಾಗಿದ್ದೇನೆಂದು ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಭಾರತ ಜೋಡೊ ಯಾತ್ರೆ ಅಂಗವಾಗಿ ರಾಹುಲ ಗಾಂಧಿ ಯ ವರು  ತಾಲೂಕಿನ ಗಿಲ್ಲೆಸುಗೂರಿನ ತುಂಗಭದ್ರಾ  ನದಿ   ಸೇತುವೆಯಿಂದ ಪ್ರಾರಂಭವಾಗಿ ಕೃಷ್ಣಾ ನದಿ ಸೇತುವೆ ವರೆಗಿನ ಪಾದಯಾತ್ರೆ ಸುಗಮವಾಗಿ ನಡೆದಿದ್ದು ರೈತರೊಂದಿಗೆ ಸಂವಾದ ಸಹ ನಡೆಯಿತು ಅತ್ಯಂತ ಕಡಿಮೆ ಅವಧಿಯಲ್ಲಿ ನಗರದ ವಾಲ್ಕಟ್ ಮೈದಾನದಲ್ಲಿ ಸೆಮಿಕಾರ್ನರ್ ಮೀಟಿಂಗನಲ್ಲಿ ರಾಹುಲ ಗಾಂಧಿ ಭಾಷಣ ಆಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಹರ್ಷ ತಂದಿದೆ ಎಂದ ಅವರು ನಗರದಲ್ಲಿ ರಾಹುಲ್ ಗಾಂಧಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದು ಅ.೧೭ ರಂದು ಪಕ್ಷದ ವರಿಷ್ಟರು ನಿರ್ಧರಿಸಿದರು ಅತ್ಯಂತ ಕಡಿಮೆ ಸಮಯದಲ್ಲಿ ಸ್ಥಳದ ವ್ಯವಸ್ಥೆ ಹಾಗೂ ಇನ್ನಿತರ ವ್ಯವಸ್ಥೆ ಮಾಡಲಾಯಿತು ಇದಕ್ಕೆ ತಂಡಗಳನ್ನು ರಚಿಸಿಲಾಯಿತು ಎಲ್ಲರ ಸಹಕಾರ ಸ್ಮರಿಸುತ್ತೇವೆಂದರು. ಸುಮಾರು ೫೫ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಆಗಮಿಸಿದ್ದರು ಏಮ್ಸ್ ಹೋರಾಟಕ್ಕೆ ವಿಧ್ಯಾರ್ಥಿಗಳು ಬೆಂಬ...

ಬಿಜೆಪಿಯಿಂದ ಮಾತ್ರ ಶೋಷಿತರಿಗೆ ಮೀಸಲಾತಿ ನೀಡಲು ಸಾಧ್ಯ: ಐದು ವರ್ಷಕ್ಕೊಮ್ಮೆ ಸಿದ್ದರಾಮಯ್ಯಗೆ ಅಹಿಂದ ನೆನಪಾಗುತ್ತದೆ-ಶ್ರೀರಾಮುಲು

Image
  ಬಿಜೆಪಿಯಿಂದ ಮಾತ್ರ ಶೋಷಿತರಿಗೆ ಮೀಸಲಾತಿ ನೀಡಲು ಸಾಧ್ಯ:  ಐದು ವರ್ಷಕ್ಕೊಮ್ಮೆ ಸಿದ್ದರಾಮಯ್ಯಗೆ ಅಹಿಂದ ನೆನಪಾಗುತ್ತದೆ-ಶ್ರೀರಾಮುಲು ರಾಯಚೂರು,ಅ.೩೧-ಮಾಜಿ ಸಿಎಂ ಸಿದ್ದರಾಮಯ್ಯರವರಿಗೆ ಪಂಚವಾರ್ಷಿಕ ಯೋಜನೆಯಂತೆ ಐದು ವರ್ಷಕ್ಕೊಮ್ಮೆ ಮಾತ್ರ ಅಹಿಂದಾ ನೆನಪಿಗೆ ಬರುತ್ತದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು. ಅವರಿಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾದ ಎಸ್ಟಿ ಸಮಾವೇಶ ಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮಾಜಿ ಸಿಎಂ ಸಿದ್ದರಾಮಯ್ಯರವರಿಗೆ ಐದು ವರ್ಷಕ್ಕೊಮ್ಮೆ ಮಾತ್ರ ಬಡವರು ಅಲ್ಪಸಂಖ್ಯಾತರು ಹಿಂದುಳಿದವರು ದಲಿತರು  ನೆನಪಿಗೆ ಬರುತ್ತಾರೆ ಎಂದು ಲೇವಡಿ ಮಾಡಿದರು. ಬಿಜೆಪಿ ಸರ್ಕಾರದಲ್ಲಿ ಸಿಎಂ ಬೊಮ್ಮಾಯಿಯವರು ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚು ಮಾಡಿದ್ದು ಐತಿಹಾಸಿಕ ತೀರ್ಮಾನವಾಗಿದ್ದು ಅದನ್ನು ಸಹಿಸದೆ ಕಾಂಗ್ರೆಸ್ ಪಕ್ಷದ ನಾಯಕರು ಇಲ್ಲ ಸಲ್ಲದ ಹೇಳಿಕೆ ನೀಡಿ ಇದೊಂದು ಚುನಾವಣೆ ತಂತ್ರವೆ0ದು ಅರೋಪಿಸುತ್ತಿರುವುದು ಅವರಿಗೆ ಹತಾಶೆ ಮನೋಭಾವ ಕಾಡುತ್ತಿದೆ ಎಂದರು. ೨೦೧೬ ರಲ್ಲಿ ರಾಜ್ಯ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ಕೆಳ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು  ಶಿಫಾರಸ್ಸು ಮಾಡಿದ್ದರು ಅಂದು ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದರು ಅವರೇಕೆ ಆಗ ಆಯೋಗ ರಚಿಸಿ ಮೀಸಲಾತಿ ಹೆಚ್ಚಳ ಮಾಡಲಿಲ್ಲವೆಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಕೇವಲ ಸುಳ್ಳು ಹೇಳ...

ಜಿಲ್ಲೆಯ ಇಬ್ಬರು ಸಾಧಕರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ.

Image
ಜಿಲ್ಲೆಯ ಇಬ್ಬರು ಸಾಧಕರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ.                                ರಾಯಚೂರು,ಅ.30- ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು 67ನೇ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ  ಒಟ್ಟು 67 ಸಾಧಕರಿಗೆ ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ .                            ರಾಯಚೂರು ಜಿಲ್ಲೆಯ ಇಬ್ಬರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.             ವಿಜ್ಞಾನ- ತಂತ್ರಜ್ಞಾನ  ಕ್ಷೇತ್ರದಲ್ಲಿ ಸಾಧನೆಗೈದ ಡಾ.ಡಿ.ಆರ್.ಬಳ್ಳೂರಗಿ ಹಾಗೂ ಜಾನಪದ ಕ್ಷೇತ್ರದಲ್ಲಿ ಕಮಲಮ್ಮ ರವರಿಗೆ ಪ್ರಶಸ್ತಿ ಒಲಿದು ಬಂದಿದ್ದು ಈರ್ವರಿಗೆ ಜಿಲ್ಲೆಯ ಜನರು ಅಭಿನಂದಿಸಿ ಸಂತಸ ವ್ಯಕ್ತ ಪಡಿಸಿದ್ದು ಜಯಧ್ವಜ ಪತ್ರಿಕೆ ಸಹ ಅಭಿನಂದನೆ ಸಲ್ಲಿಸುತ್ತದೆ .

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಶ್ರದ್ಧಾಂಜಲಿ ಸಭೆ: ಸುಧೀಂದ್ರ ಕಸ್ಬೆ ಬ್ರಾಹ್ಮಣ ಸಮಾಜದ ರಾಜಕೀಯ ಶಕ್ತಿಯಾಗಿದ್ದರು-ಡಿ.ಕೆ.ಮುರಳೀಧರ್

Image
  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ  ಶ್ರದ್ಧಾಂಜಲಿ ಸಭೆ: ಸುಧೀಂದ್ರ ಕಸ್ಬೆ ಬ್ರಾಹ್ಮಣ ಸಮಾಜದ ರಾಜಕೀಯ ಶಕ್ತಿಯಾಗಿದ್ದರು-ಡಿ.ಕೆ.ಮುರಳೀಧರ್ ರಾಯಚೂರು,ಅ.೩೦-ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಸುಧೀಂದ್ರ ಕಸ್ಬೆಯವ ರು ಬ್ರಾಹ್ಮಣ ಸಮಾಜದ ರಾಜಕೀಯ ಶಕ್ತಿಯಾಗಿದ್ದರು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಸಂಚಾಲಕ ಡಿ.ಕೆ.ಮುರಳಿಧರ್ ಅಭಿಪ್ರಾಯ ಪಟ್ಟರು. ಅವರಿಂದು ನಗರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸುಧೀಂದ್ರ ಕಸ್ಬೆ ಯವರು ಕಲ್ಮಲಾ ಕ್ಷೇತ್ರದಿಂದ ಆಯ್ಕೆಯಾಗಿ ಗುಂಡುರಾವ್ ಸರ್ಕಾರದಲ್ಲಿ ಮುಜರಾಯಿ ಮತ್ತು ಮಾರುಕಟ್ಟೆ ಸಚಿವರಾಗಿ ಅನೇಕ ಜನ ಪರ ಕಾರ್ಯ ಮಾಡಿದ್ದರು ಬ್ರಾಹ್ಮಣ ಸಮಾಜದ ಅನೇಕರಿಗೆ ಸಹಾಯ ಸಹಕಾರ ನೀಡಿದ್ದರು ಅಲ್ಲದೆ ನಾನು ನನ್ನ ಸಹೋದರ ಒಡಗೂಡಿ ಪತ್ರಿಕೆ ಮಾಡಿದಾಗ ಅದಕ್ಕೆ ಸಹಾಯ ಸಹಕಾರ ನೀಡಿದ್ದರು ಎಂದು ಅವರ ಒಡನಾಟ ಹಂಚಿಕೊAಡರು. ಹಿರಿಯರಾದ ನರಸಿಂಗರಾವ್ ದೇಶಪಾಂಡೆ ಮಾತನಾಡಿ ನನ್ನ ಅತ್ಯುತ್ತಮ ಸ್ನೇಹಿತರಲ್ಲಿ ಅವರೊಬ್ಬರು ಆಗಿದ್ದರು ಜಿಲ್ಲೆಗೆ ಹತ್ತಿ ಮಾರುಕಟ್ಟೆ ಸ್ಥಾಪಿಸುವಲ್ಲಿ ಅವರ ಕೊಡುಗೆ ಇದೆ ವಿಶ್ವದಲ್ಲಿ ಎರಡನೆ ದೊಡ್ಡ ಹತ್ತಿ ಮಾರುಕಟ್ಟೆ ಎಂಬ ಹೆಗ್ಗಳಿಕೆ ಜಿಲ್ಲೆಗೆ ಬರಲು ಅವರು ಕಾರಣಕರ್ತರು ಅವರು ಸಮಾಜದ ಅನೇಕ ಅರ್ಹರಿಗೆ ನೌಕರಿ ಕೊಡಿಸಿ ಅನೇಕ ಕುಟುಂಬಗಳಿಗ...

ಉಪ್ಪಾರವಾಡಿಯಲ್ಲಿ ಪುನೀತ್ ನಮನ

Image
  ಉಪ್ಪಾರವಾಡಿಯಲ್ಲಿ ಪುನೀತ್ ನಮನ   ರಾಯಚೂರು,ಅ.29- ನಗರದ  ಉಪ್ಪಾರವಾಡಿಯಲ್ಲಿ ಕನ್ನಡದ ಕಣ್ಮಣಿ ಡಾ. ಪುನಿತ್ ರಾಜಕುಮಾರ್ ಅವರ 1ನೇ ವರ್ಷದ ಪುಣ್ಯ ಸ್ಮರಣೆ ದಿನ ಅಂಗವಾಗಿ ಉಪ್ಪಾರ ಸಮಾಜದ ಯುವಕರು 15 ಅಡಿ ಎತ್ತರದ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೇಣದ ಬತ್ತಿ ದೀಪವನ್ನು ಹಚ್ಚುವ ಮೂಲಕ  ನಮನ ಸಲ್ಲಿಸಿದರು.                                                ಈ ಸಂದರ್ಭದಲ್ಲಿ  ಸರ್ವೇಶ್, ಜಯ ಕುಮಾರ್ ,ಹಾಲ್ವಿ ರಾಮಾಂಜನೇಯಲು , ವಿಕಾಸ್ ಭೀಮೇಶ್, ರಮೇಶ್, ಪವನ್ ಕುಮಾರ್, ಗಿರೀಶ್, ಶಾಂತಕುಮಾರ್, ರಾಜೇಶ್, ಶಿವು, ಕೃಷ್ಣ, ರಮೇಶ್, ಮಣಿಕಂಠ, ಶ್ರೀನಿವಾಸ್ , ಸುರೇಶ್ ,ರಂಗನಾಥ್ ಸೇರಿದಂತೆ ಬಡವಾಣೆ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀ ಕನಕದಾಸರ ಪುತ್ಥಳಿ ಅನಾವರಣ: ಆಮ್ ಆದ್ಮಿ ಪಕ್ಷದ ಡಾ.ಸುಭಾಷ್‌ಚಂದ್ರರಿಂದ ಮಾಲಾರ್ಪಣೆ

Image
  ಶ್ರೀ ಕನಕದಾಸರ ಪುತ್ಥಳಿ ಅನಾವರಣ:  ಡಾ.ಸುಭಾಷ್‌ಚಂದ್ರರಿಂದ ಮಾಲಾರ್ಪಣೆ ರಾಯಚೂರು,ಆ.೨೯- ರಾಯಚೂರು ನಗರದ  ನೂತನ  ಶ್ರೀಕನಕ ವೃತ್ತದಲ್ಲಿ  ದಾಸ ಶ್ರೇಷ್ಠ ಶ್ರೀ ಕನಕದಾಸರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಆಮ್ ಆದ್ಮಿ ಪಕ್ಷದ ರಾಯಚೂರು ಗ್ರಾಮೀಣ ಮತ ಕ್ಷೇತ್ರದ ಆಕಾಂಕ್ಷಿ ಡಾ. ಸುಭಾಷ್‌ಚಂದ್ರ ಸಂಭಾಜಿ ಅವರು  ಶ್ರೀ ಕನಕದಾಸರ ಪುತ್ಥಳಿಗೆ ಬೃಹತ್ ಮಾಲಾರ್ಪಣೆ ಮಾಡಿದರು. ಆರಂಭದಲ್ಲಿ ಅವರು  ಗ್ರಾಮೀಣ ಮತ ಕ್ಷೇತ್ರದ ತಮ್ಮ ಆಮ್ಆದ್ಮಿ ಪಕ್ಷದ ಕಛೇರಿಯಿಂದ ನೂರಾರು ಕಾರ್ಯಕರ್ತರ  ಬೈಕ್‌ರಾಲಿ ಮೂಲಕ ಶ್ರೀ ಕನಕದಾಸರ ಪುತ್ಥಳಿ ಅನಾವರಣ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ  ಆಮ್ ಆದ್ಮಿ ಪಕ್ಷದ ಮುಖಂಡರಾದ ಡಿ.ವೀರೇಶ್, ಕೆ.ಭೀಮಣ್ಣ ಸಂಗವಾರ, ಸಾಬಣ್ಣ ಗಟ್ಟುಬಿಚ್ಚಾಲಿ,ರತ್ನಾಕರ,ಕೃಷ್ಣ ಸೇರಿದಂತೆ ಇನ್ನಿತರರು ಇದ್ದರು.

ನಗರದಲ್ಲಿ ಭಕ್ತ ಕನಕದಾಸರ ಪುತ್ಥಳಿ ಅನಾವರಣ: ಕನಕ ಭವನಕ್ಕೆ ಹೆಚ್ಚುವರಿ ಜಮೀನು ಮಂಜೂರಿಗೆ ಕ್ರಮ- ಸಚಿವ ಬಿ.ಎ.ಬಸವರಾಜ

Image
  ನಗರದಲ್ಲಿ ಭಕ್ತ ಕನಕದಾಸರ ಪುತ್ಥಳಿ ಅನಾವರಣ: ಕನಕ ಭವನಕ್ಕೆ ಹೆಚ್ಚುವರಿ ಜಮೀನು ಮಂಜೂರಿಗೆ ಕ್ರಮ- ಸಚಿವ ಬಿ.ಎ.ಬಸವರಾಜ ರಾಯಚೂರು ಅ.೨೯:- ನಗರದ  ಹೊರ  ವಲಯದಲ್ಲಿ ನಿರ್ಮಾಣವಾಗುತ್ತಿರುವ ಕನಕದಾಸರ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ೨೫ಲಕ್ಷ ನೀಡುವುದರ ಜೊತೆಗೆ ಒಂದು ಎಕರೆ ಹೆಚ್ಚುವರಿ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ ಅವರು ಹೇಳಿದರು.     ಅವರು ಅ.೨೯ರ ಶನಿವಾರ ದಂದು ನಗರದ ಗಂಜ್ ಸರ್ಕಲ್ ಹತ್ತಿರವಿರುವ ನೂತನ ಕನಕದಾಸರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ರಾಜ್ಯದಲ್ಲಿ ಕನಕ ಭವನಗಳ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿದ್ದು, ಕನಕ ಭವನ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ. ಕನಕ ಭವನವು ಸಮಾಜದ ಜನರಿಗೆ ಹಾಗೂ ಇತರೆ ಸಮುದಾಯಗಳಿಗೆ ಉಪಯೋಗವಾಗಲಿ, ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡಲು ಪ್ರಸ್ತಾವನೆ ಬಂದಿದೆ ಅದನ್ನು ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಿ ಶೀಘ್ರವೇ ಕ್ರಮ ಕೈಗೊಳ್ಳಲಾಗುತ್ತದೆ.  ಕನಕದಾಸರ ವಿಚಾರಧಾರೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಕನಕ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ೨೫ ಲಕ್ಷ ನೀಡಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.    ಈ ವೇಳೆ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾ...

ಕನ್ನಡ ನಾಡು ಭಾಷೆ ಉಳುವಿಗಾಗಿ ಪ್ರತಿಜ್ಞೆ- ಬಿ.ಆರ್.ಅಂದಾನಿ

Image
  ಕನ್ನಡ ನಾಡು ಭಾಷೆ ಉಳುವಿಗಾಗಿ ಪ್ರತಿಜ್ಞೆ- ಬಿ.ಆರ್.ಅಂದಾನಿ  ರಾಯಚೂರು,ಅ.28- ಪ್ರಸ್ತುತ ದಿನಮಾನಗಳಲ್ಲಿ ತಂತ್ರಜ್ಞಾನ ಮುಂದುವರೆದಿದ್ದು ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ನಮ್ಮತನ ಉಳುವಿಗಾಗಿ ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆ ನಾಡಿಗೊಸ್ಕರ ನಾವೆಲ್ಲರೂ ಪ್ರತಿಜ್ಞೆ ಮಾಡಬೇಕಾಗಿದೆ ಎಂದು ರಾಯಚೂರು ಜಿಲ್ಲಾ ಕಾರಾಗೃಹ ಅಧಿಕ್ಷಕರಾದ ಬಿ.ಆರ್.ಅಂದಾನಿ ಕರೆ ನೀಡಿದರು. ಅವರು ರಾಯಚೂರು ಜಿಲ್ಲಾ ಕಾರಾಗೃಹ ಹಾಗೂ ಸುಧಾರಣಾ ಸೇವೆ ಕೇಂದ್ರದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದರು. ನಮ್ಮ ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗರಾದ ನಾವು ಮಾಡಬೇಕು. ಈ ನಿಟ್ಟಿನಲ್ಲಿ ಇಂದು ಕನ್ನಡ ಭಾಷೆಗಾಗಿ ಕನ್ನಡ ನಾಡು ನುಡಿಗಾಗಿ ನಾವೆಲ್ಲರೂ ಶ್ರಮಪಡೋಣ ಎಂದರು. ನಂತರ ಕಾರಾಗೃಹದ ಬೋದಕರಾದ  ತಾಯರಾಜ್ ಮರ್ಚೆಟ್ಹಾಳ್  ಮಾತನಾಡಿ ದೇಶದಲ್ಲಿ  ಅಳಿವಿನ ಅಂಚಿನಲ್ಲಿ ಹಲವು ಬಾಷೆಗಳಿವೆ. ಕನ್ನಡ ಭಾಷೆಯು ಪುರತಾನವಾದುದು ಮತ್ತು ಇತಿಹಾಸ ಹೊಂದಿದ ಬಾಷೆ. ಕನ್ನಡ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡವನ್ನು ಕಲಿಯುತ್ತಾ ಕನ್ನಡೇತರರಿಗೆ ಕನ್ನಡವನ್ನು ಕಲಿಸುತ್ತ ಕನ್ನಡ ಭಾಷೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಜೈಲರ್ ಗಳಾದ ಬಸವರಾಜ ಪಾಟೀಲ, ರಾಜಕುಮಾರ ದೊಡ್ಡಮನಿ, ಸಹಾಯಕ ಜೈಲರ್ ಗಳಾದ ಶ್ಯಾಮ ಬಿದರಿ, ಸಾವಿತ್ರಿಬ...

ಜಿಲ್ಲಾ ಕ್ರೀಡಾಂಗಣದಲ್ಲಿ ಕೋಟಿ ಕಂಠ ಗಾಯನಕ್ಕೆ ಗಣ್ಯರಿಂದ ಚಾಲನೆ : ಭಾಷೆ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ- ಸಂಸದ ರಾಜಾ ಅಮರೇಶ್ವರ ನಾಯಕ

Image
  ಜಿಲ್ಲಾ ಕ್ರೀಡಾಂಗಣದಲ್ಲಿ ಕೋಟಿ ಕಂಠ ಗಾಯನಕ್ಕೆ  ಗಣ್ಯರಿಂದ ಚಾಲನೆ  ಭಾಷೆ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ: ಸಂಸದ ರಾಜಾ ಅಮರೇಶ್ವರ ನಾಯಕ ರಾಯಚೂರು ಅ.28:- ಕೋಟಿ ಕಂಠ ಗಾಯನ ನಾಡಿನಾದ್ಯಂತ ಏಕಕಾಲದಲ್ಲಿ ಹಾಡಿದ್ದು, ಕನ್ನಡ ನಾಡು, ನುಡಿ ಕಟ್ಟಿ ಬೆಳೆಸಿದ ಪ್ರತಿಯೊಬ್ಬರನ್ನು ನೆನೆಯಬೇಕಾಗಿದೆ. ಅಲ್ಲದೆ ನಮ್ಮ ಭಾಷೆ ನಮ್ಮತನವನ್ನು ಉಳಿಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಹೇಳಿದರು.       ಅವರು  ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನನ್ನ ನಾಡು ನನ್ನ ಹಾಡು ಕೋಟಿ ಕಂಠ ಗಾಯನಕ್ಕೆ ಚಾಲನೆ ನೀಡಿ, ಮಾತನಾಡಿದರು.    ಮಾತೃಭೂಮಿ ಎಂಬುವುದು ತಾಯಿಗಿಂತ ಮಿಗಿಲಾದದ್ದು, ಅಂತಹ ಕನ್ನಡ ನಾಡಿನ ಸೊಬಗನ್ನು ಹಾಗೂ ನಾಡಿನ ಹಿರಿಮೆಯನ್ನು ಎತ್ತಿ ಹಿಡಿಯುವ ಗೀತೆಗಳನ್ನು ನಾಡಿನಾದ್ಯಂತ ಕೋಟಿ ಕಂಠಗಳಲ್ಲಿ ಹಾಡುವ ಮೂಲಕ ಶಾಲೆಯ ಮಕ್ಕಳು, ಅಧಿಕಾರಿಗಳು, ಸಾರ್ವಜನಿಕರು ಹಾಡಿ ಯಶಸ್ವಿಗೊಳಿಸಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದರು. ಹೆಮ್ಮೆಯ ಕನ್ನಡ ನಾಡಿನಲ್ಲಿ ಜನಿಸಿರುವುದು ಎಲ್ಲರ ಪುಣ್ಯವಾಗಿದ್ದು, ಮಾತೃ ದೇಶವೆಂಬುವುದು ಹೆತ್ತ ತಾಯಿಗಿಂತಲೂ ಮಿಗಿಲಾದದ್ದು, ನಾಡಿನಾದ್ಯಂತ ನಡೆಯುತ್ತಿರುವ ಕೋಟಿ ಕಂಠ ಗ...

ಅ.29 ರಂದು ಭಕ್ತ ಕನಕದಾಸರ ಪುತ್ಥಳಿ ಅನಾವರಣ-ಬಸವಂತಪ್ಪ

Image
  ಅ.29 ರಂದು ಭಕ್ತ ಕನಕದಾಸರ ಪುತ್ಥಳಿ ಅನಾವರಣ-ಬಸವಂತಪ್ಪ ರಾಯಚೂರು,ಅ.೨೭-ನಗರದ ಗಂಜ್ ವೃತ್ತದ ಬಳಿ ನಿರ್ಮಿಸಲಾಗಿರುವ ಭಕ್ತ ಕನಕ ದಾಸರ ನೂತನ ಪುತ್ಥಳಿ ಅನಾವರಣ ಸಮಾರಂಭವನ್ನು ಅ.29 ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಬಸವಂತಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪುತ್ಥಳಿ ಅನಾವರಣ ಕಾರ್ಯಕ್ರಮ ಅಂದು ಬೆಳಿಗ್ಗೆ ೧೦.೩೦ ಕ್ಕೆ ನೆರವೇರಲಿದ್ದು ಉದ್ಘಾಟನೆಯನ್ನು ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೆರವೇರಿಸಲಿದ್ದು , ಘನ ಉಪಸ್ಥಿತಿ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ, ತೋಟಗಾರಿಕೆ ಸಚಿವ ಮುನಿರತ್ನ, ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ  ವಹಿಸಲಿದ್ದು , ಅಧ್ಯಕ್ಷತೆಯನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ ವಹಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾಡಾ ಅಧ್ಯಕ್ಷರು, ಹಟ್ಟಿ ಚಿನ್ನದ ಗಣಿ ಅಧ್ಯಕ್ಷರು, ಎಪಿಎಂಸಿ ಅಧ್ಯಕ್ಷರು, ಆರ್ ಡಿ ಎ ಅಧ್ಯಕ್ಷರು, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ,ಸದಸ್ಯರು ಇನ್ನಿತರ ಗಣ್ಯರು ಆಗಮಿಸಲಿದ್ದು ವಿಶೇಷ ಅಹ್ವಾನಿತರಾಗಿ  ರಾಜ್ಯ ಸರ್ಕಾರದ ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಜಿ.ಕುಮಾರ್ ನಾಯಕ, ಜಿಲ್ಲಾಧಿಕಾರಿ ಚಂದ್ರ ಶೇಖರನಾಯಕ, ಜಿಲ್ಲಾ ಎಸ್ಪಿ ನಿಖಿಲ್.ಬಿ, ಜಿ.ಪಂ ಸಿಇಓ ಶಶಿಧರ ಕುರೇರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವ...

ನವದೆಹಲಿಯಲ್ಲಿ ನಡೆದ ಎಐಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಅಭಿನಂದಿಸಿದ ಎನ್.ಎಸ್ ಬೋಸರಾಜು

Image
 ನವದೆಹಲಿಯಲ್ಲಿ ನಡೆದ ಎಐಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ  ಮಲ್ಲಿಕಾರ್ಜುನ್   ಖರ್ಗೆ ಅವರನ್ನು ಅಭಿನಂದಿಸಿದ ಎನ್.ಎಸ್ ಬೋಸರಾಜು.   ರಾಯಚೂರು,ಅ.27-  ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಅದ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ  ನೂತನವಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಕಾರ್ಯದರ್ಶಿ ಗಳಾದ ಎನ್ಎಸ್ ಬೋಸರಾಜು ಅವರು ಅಭಿನಂದನೆ ತಿಳಿಸಿದರು.  ನವದೆಹಲಿಯ ಎಐಸಿಸಿ  ಕಾರ‍್ಯಾಲಯದಲ್ಲಿ ನಡೆದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ನೂತನ ಅಧ್ಯಕ್ಷರಾಗಿ ಅಯ್ಕೆಯಾದ  ಖರ್ಗೆ ಅವರಿಗೆ ಅಭಿನಂದಿಸಿದರು. ಅಕ್ಟೋಬರ ೧೭ ರಂದು ನಡೆದ ಎಐಸಿಸಿ  ಅಧ್ಯಕ್ಷರ ಚುನಾವಣೆಯಲ್ಲಿ ೭ ಸಾವಿರಕ್ಕೂ ಅಧಿಕ ಮತಗಳಿಂದ  ಖರ್ಗೆಯವರು ಜಯಶಾಲಿಯಾಗಿದ್ದರು.

ರಾಜ್ಯೋತ್ಸವ ಅಂಗವಾಗಿ ಮನೆ ಮನೆಗೆ ನಾಡ ಧ್ವಜ ಕಾರ್ಯಕ್ರಮ-ಶಿವಶಂಕರ

Image
 ರಾಜ್ಯೋತ್ಸವ ಅಂಗವಾಗಿ ಮನೆ ಮನೆಗೆ ನಾಡ ಧ್ವಜ ಕಾರ್ಯಕ್ರಮ-ಶಿವಶಂಕರ ರಾಯಚೂರು,ಅ.೨೭-ಕನ್ನಡ ರಾಜ್ಯೋತ್ಸವ ಅಂಗವಾಗಿ ಜೆಡಿಎಸ್ ಪಕ್ಷದಿಂದ ಮನೆ ಮನೆಗೆ ಕನ್ನಡ ನಾಡ ಧ್ವಜ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ಎನ್.ಶಿವಶಂಕರ ವಕೀಲರು ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜೆಡಿಎಸ್ ಪಕ್ಷದ ವರಿಷ್ಟರ ಸೂಚನೆಯಂತೆ ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲೆಯಾದ್ಯಂತ ಮನೆ ಮನೆಗೆ ಕನ್ನಡ ನಾಡ ಧ್ವಜ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಉತ್ತಮವಾಗಿ ಕನ್ನಡ ನಾಡ ಧ್ವಜಾರೋಹಣ ನೆರವೇರಿಸುವವರಿಗೆ ಪ್ರಥಮ ಬಹುಮಾನವಾಗಿ ೨೫೦೦ ರೂ, ದ್ವಿತೀಯ ಬಹುಮಾನವಾಗಿ ೧೫೦೦ ಹಾಗೂ ತೃತೀಯ ಬಹುಮಾನವಾಗಿ ೧೦೦೦ ರೂ ನೀಡಲಾಗುತ್ತದೆ ಎಂದರು. ಅ.೩೧ ರಂದು ನಗರದ ನಗರಸಭೆ ಮುಂಬಾಗದಲ್ಲಿ ಜೆಡಿಎಸ್ ಪಕ್ಷದಿಂದ ಸಾರ್ವಜನಿಕರಿಗೆ ಉಚಿತವಾಗಿ ಕನ್ನಡ ಬಾವುಟವನ್ನು ನೀಡಲಾಗುತ್ತದೆ ಎಂದರು. ಜೆಡಿಎಸ್ ಶಾಸಕರಿರುವ ಕ್ಷೇತ್ರದಲ್ಲಿ ಹೆಚ್ಚಿನ ಬಾವುಟಗಳನ್ನು ವಿತರಿಸುವ ಕಾರ್ಯ ಮಾಡಲಾಗುತ್ತದೆ ಎಂದ ಅವರು ಜೆಡಿಎಸ್ ಪಕ್ಷ ಮಾತೃಭಾಷೆಗೆ ಪ್ರಧಾನ್ಯತೆ ನೀಡುವ ಪಕ್ಷವಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗಲಿದ್ದು ನಾಡು ನುಡಿ ಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ  ನಿಜಾಮುದ್ದೀನ್,ತಿಮ್ಮಾರೆಡ್ಡಿ, ದಾನಪ್ಪ ಯಾದವ್ ಇದ್ದರು.

ಮಹಾರಾಷ್ಟ್ರದ ಜಲ್ನಾದಿಂದ ತಿರುಪತಿಗೆ ವಿಶೇಷ ರೈಲು

Image
ಮಹಾರಾಷ್ಟ್ರದ ಜಲ್ನಾದಿಂದ ತಿರುಪತಿಗೆ ವಿಶೇಷ ರೈಲು .  ರಾಯಚೂರು,ಅ.27-  ಹಬ್ಬದ ಒತ್ತಡದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಭಾರತೀಯ ರೈಲ್ವೆಯು ಮಹಾರಾಷ್ಟ್ರದ ಜಲ್ನಾದಿಂದ ತಿರುಪತಿಗೆ ವಿಶೇಷ ರೈಲು ಬಿಡಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ತಿಳಿಸಿದ್ದಾರೆ.                                                  ಈ ವಿಶೇಷ ರೈಲುಗಳು ಅಕ್ಟೋ ಬರ್ 30, ನವಂಬರ 6, 13 ,20 ಮತ್ತು 27 ರಂದು ಮತ್ತು ಡಿಸೆಂಬರ್ 4 ರಂದು ಪ್ರಯಾಣಿಕರ ಸೇವೆಗೆ ಲಭ್ಯವಿರುತ್ತವೆ. ಈ ರೈಲುಗಳ ನಂಬರ್  07413  ಆಗಿದೆ.                                        ತಿರುಪತಿಯಿಂದ ಮಹಾರಾಷ್ಟ್ರದ ಜಾಲ್ನಾಕ್ಕೆ  ಹೋಗುವ ( 07414 ) ರೈಲು ನವಂಬರ್‌ ತಿಂಗಳ 1, 8, 15, 22, ಮತ್ತು 29 ರಂದು ಹೊರಡುತ್ತದೆ. ಈ ರೈಲು ಬೀದರ,ಗುಲ್ಬರ್ಗಾ, ಯಾದಗಿರ, ರಾಯಚೂರ, ಮಂತ್ರಾಲಯ ಮತ್ತು ಗುಂತಕಲ್ ಮೂಲಕ ತಿರುಪತಿಗೆ ತೆರಳುತ್ತದೆ.ಇದು ತಿರುಪತಿ ಸಂಜೆ 6.35 ಕ್ಕೆ ಬಿಟ್ಟು ರಾಯಚೂರಗೆ 1.58 ಕ್ಕೆ ಬರುತ್ತದೆ. ಪ್ರಯಾ...

ಸೂರ್ಯ ಗ್ರಹಣ : ದೇವಸ್ಥಾನ, ಮಠಗಳಲ್ಲಿ ಗ್ರಹಣ ಶಾಂತಿ ಹೋಮ.

Image
  ಸೂರ್ಯ ಗ್ರಹಣ : ದೇವಸ್ಥಾನ, ಮಠಗಳಲ್ಲಿ ಗ್ರಹಣ ಶಾಂತಿ ಹೋಮ.  ರಾಯಚೂರು,ಅ.25- ಸೂರ್ಯ ಗ್ರಹಣ ಅಂಗವಾಗಿ ವಿವಿಧ ದೇವಸ್ಥಾನಗಳಲ್ಲಿ ಗ್ರಹಣ ಶಾಂತಿ ಹೋಮ ನಡೆಯಿತು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ರಾಯರ ಬೃಂದಾವನಕ್ಕೆ ಮಂಗಳಾರತಿ ನೆರವೇರಿಸಿದರು.                                     ಗ್ರಹಣ ಶಾಂತಿ ಮತ್ತು ನವಗ್ರಹ ಶಾಂತಿ ಹೋಮ ನೆರವೇರಿಸಲಾಯಿತು .                       ತಾಲೂಕಿನ   ಕಾಡ್ಲೂರು  ಕೃಷ್ಣಾ ನದಿ ತೀರದ  ಶ್ರೀ ವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದಲ್ಲಿ ಸ್ತೋತ್ರಗಳ ಪಠಣ, ಮಂಗಳಾರತಿ ನೆರವೇರಿತು ಗ್ರಾಮದ ವಿಪ್ರ ಬಾಂಧವರು ಭಾಗವಹಿಸಿದ್ದರು. ನಗರದ ಜವಾಹರ ನಗರ ರಾಯರ ಮಠದಲ್ಲಿ , ಗಾಜಗಾರಪೇಟೆ ಉತ್ತರಾಧಿ ಮಠದಲ್ಲಿ ಹೋಮ ನೆರವೇರಿತು ಮಾರುತಿ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.                         ಎನ್ ಜಿ ಓ ಕಾಲೋನಿ ವೆಂಕಟರಮಣ ದೇವಸ್ಥಾನ, ಜೋಡು ವೀರಾಂಜಿನೇಯ ದೇವಸ್ಥಾನ, ಮಾಧವ ತೀ...

ಮಂತ್ರಾಲಯ: ದೀಪಾವಳಿ ಅಂಗವಾಗಿ ವಿಶೇಷ ಪೂಜೆ

Image
 ಮಂತ್ರಾಲಯ: ದೀಪಾವಳಿ ಅಂಗವಾಗಿ  ವಿಶೇಷ ಪೂಜೆ.              ರಾಯಚೂರು,ಅ.24- ದೀಪಾವಳಿ ನರಕ ಚತುರ್ದಶಿ   ಅಂಗವಾಗಿ ಶ್ರೀಮಠದಲ್ಲಿ ವಿಶೇಷ ಪೂಜೆಗಳು ನಡೆದವು.                                  ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಶ್ರೀ ಮೂಲರಾಮದೇವರಿಗೆ, ಶ್ರೀ ರಾಯರಿಗೆ ಮತ್ತು ಇತರ ಬೃಂದವನಗಳಿಗೆ ತೈಲ ಅಭ್ಯಂಜನ ಮತ್ತು ಕಾರ್ತಿಕ ಮಂಗಳಾರತಿಯನ್ನು ಮಾಡಿದರು.                                           ನಂತರ ತುಳಸಿಪೂಜೆ ಮತ್ತು ಗೋ ಪೂಜೆಯನ್ನು ನೆರವೇರಿಸಿದರು.                        ನಂತರ ಉಂಜಲ ಮಂಟಪದಲ್ಲಿ ಶ್ರೀ ಶ್ರೀಪಾದಂಗಳವರಿಗೆ ತೈಲ ಅಭ್ಯಂಜನ ಮತ್ತು ನಾರೀಕೃತ ನಿರಾಜನವನ್ನು ಮಾಡಲಾಯಿತು.  ಶ್ರೀ ಶ್ರೀಪಾದಂಗಳವರು  ಅನುಗ್ರಹ ಸಂದೇಶ ಹಾಗೂ ಮಂತ್ರಾಕ್ಷತೆ ಗಳೊಂದಿಗೆ ಭಕ್ತರನ್ನು ಆಶೀರ್ವದಿಸಿದರು .

ನಗರದ ವಾಲ್ಕಟ್ ಮೈದಾನದಲ್ಲಿ ಭಾರತ ಜೋಡೊ ಯಾತ್ರೆ ಬೃಹತ್ ಸಮಾವೇಶ: ಬಿಜೆಪಿ ಸರ್ಕಾರ ಕೇವಲ ಹಗರಣಗಳ ಸರ್ಕಾರವಾಗಿದೆ - ರಾಹುಲ್ ಗಾಂಧಿ

Image
  ನಗರದ ವಾಲ್ಕಟ್ ಮೈದಾನದಲ್ಲಿ ಭಾರತ ಜೋಡೊ ಯಾತ್ರೆ ಬೃಹತ್ ಸಮಾವೇಶ: ಬಿಜೆಪಿ ಸರ್ಕಾರ ಕೇವಲ ಹಗರಣಗಳ ಸರ್ಕಾರವಾಗಿದೆ-ರಾಹುಲ್ ಗಾಂಧಿ ರಾಯಚೂರು,ಅ.೨೨-ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಹಗರಣಗಳ (ಸ್ಕ್ಯಾಮ್) ಸರ್ಕಾರವಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ರಾಹುಲ್  ಗಾಂಧಿ  ಆರೋಪಿಸಿದರು.  ಅವರಿಂದು ಭಾರತ ಜೋಡೊ ಯಾತ್ರೆ ಅಂಗವಾಗಿ ನಗರದ ವಾಲ್ಕಟ್ ಮೈದಾನದಲ್ಲಿ ಆಯೋಜಿಸಲಾದ ಸೆಮಿ ಕಾರ್ನರ್ ಮೀಟಿಂಗ್ ಸಮಾವೇಶದಲ್ಲಿ ಮಾತನಾಡಿದರು. ಭಾರತ ಜೋಡೊ ಯಾತ್ರೆ ಅಂಗವಾಗಿ ದಿನನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೆ ನಮ್ಮ ನಡಿಗೆ ವೇಳೆ ಸಹಸ್ರಾರು ಜನರು ನಮ್ಮೊಂದಿಗೆ ಹೆಜ್ಜೆ ಹಾಕುತ್ತಾರೆ ಅವರು ನಮ್ಮೊಂದಿಗೆ ತಮ್ಮ ಕಷ್ಟ ಸುಖಗಳ ಬಗ್ಗೆ ಮನದಾಳದ ಮಾತನಾಡುತ್ತಾರೆ ದಿನ ನಿತ್ಯ ನಾವು ಅವರ ಕಷ್ಟ ಆಲಿಸಿ ಅವರಿಗೆ ನೈತಿಕ ಬಲ ನೀಡಲು ಕೆಲವೆ ನಿಮಿಷಗಳ ಕಾಲ ಅವರಿಗೆ ನಮ್ಮ ಭಾಷಣದಲ್ಲಿ ನಮ್ಮ ವಿಚಾರ ವ್ಯಕ್ತ ಪಡಿಸುತ್ತೇವೆಂದ ಅವರು ದೇಶದ ಬೆನ್ನೆಲುಬಾದ ರೈತನಿಗೆ ಜಿಎಸ್ಟಿ ಕರ ಭರಿಸುವ ಶಿಕ್ಷೆ ನೀಡಲಾಗುತ್ತಿದೆ ರಸಗೊಬ್ಬರ, ಬೀಜ, ಕೀಟ ನಾಶಕ, ಟ್ರಾö್ಯಕ್ಟರ್ ಮುಂತಾದವುಗಳ ಮೇಲೆಯೂ ಕರ ವಿಧಿಸಲಾಗುತ್ತದೆ ಅವರಿಗೆ ಸರಿಯಾದ ಬೆಂಬಲ ಬೆಲೆ ಅವರ ಬೆಳೆಗೆ ಸಿಗುತ್ತಿಲ್ಲವೆಂದರು. ರಾಜ್ಯದ ಉದ್ದಗಲಕ್ಕೂ ಒಬ್ಬ ರೈತನು ಸಹ ತಾನು ಸಂತುಷ್ಟನಾಗಿದ್ದೇನೆ0ದು ಹೇಳಿಲ್ಲವೆಂದ ಅವರು ಯುವಕರ ಸ್ಥಿತಿಯೂ ಚಿಂತಾಜನಕವಾಗಿದೆ ಅವರಿಗೆ ಉದ್ಯೋಗ ಲಭಿಸುತ್ತಿಲ್...

ಭಾರತ ಜೋಡೊ ಯಾತ್ರೆ: ಗಿಲ್ಲೇಸುಗೂರು ತುಂಗಭದ್ರಾ ನದಿ ಸೇತುವೆ ಮೂಲಕ ಜಿಲ್ಲೆಗೆ ಪ್ರವೇಶ.

Image
  ಭಾರತ ಜೋಡೊ ಯಾತ್ರೆ: ಗಿಲ್ಲೇಸುಗೂರು ತುಂಗಭದ್ರಾ ನದಿ ಸೇತುವೆ ಮೂಲಕ ಜಿಲ್ಲೆಗೆ ಪ್ರವೇಶ. ರಾಯಚೂರು,ಅ.21- ಭಾರತ ಜೋಡೊ ಯಾತ್ರೆ ತಾಲೂಕಿನ ಗಿಲ್ಲೇಸುಗೂರು ತುಂಗಭದ್ರ ನದಿ ಸೇತುವೆ ಮೂಲಕ ಜಿಲ್ಲೆಗೆ  ಪ್ರವೇಶಿಸಿದೆ.  ಸೇತುವೆ ಬಳಿ ಕಾಂಗ್ರೆಸ್ ಮುಖಂಡರು ಅಪಾರ ಸಂಖ್ಯೆಯ ಕಾರ್ಯಕರ್ತರು ಅದ್ದೂರಿಯಾಗಿ ಪಾದಯಾತ್ರೆ ಬರಮಾಡಿಕೊಂಡರು.         ಡೊಳ್ಳು, ಬ್ಯಾಂಡ್ ಸದ್ದು ಮೊಳಗಿತು ಕಲಾ ತಂಡಗಳು ಯಾತ್ರೆಯ ಮೆರಗು ಹೆಚ್ಚಿಸಿದವು. ಕಳೆದ ರಾತ್ರಿ ಮಂತ್ರಾಲಕ್ಕಾಗಮಿಸಿದ ರಾಹುಲ್ ಗಾಂಧಿ ರಾಯರ ಮೂಲ ಬೃಂದಾವನ ದರ್ಶನವಪಡೆದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರಿಂದ ಆಶೀರ್ವಾದ ಪಡೆದುಕೊಂಡರು.                                   ಬೆಳಿಗ್ಗೆ ಮಂತ್ರಾಲಯದಿಂದ ಭಾರತ ಜೋಡೊ ಪಾದಯಾತ್ರೆ ಪ್ರಾರಂಭಗೊಂಡಿತು. ಮಾಧವಾರಂ ಮೂಲಕ ಸಾಗಿದ ಪಾದಯಾತ್ರೆ ಗಿಲ್ಲೇಸುಗೂರು ಮುಖಾಂತರ ಜಿಲ್ಲೆ ಪ್ರವೇಶಿಸಿತು ಕೆರೆ ಬುದೂರು ನಲ್ಲಿ ಭೋಜನ ವಿರಾಮ ನಂತರ ಸಂಜೆ ಯರಗೇರಿಯಲ್ಲಿ ಇಂದಿನ ಪಾದಯಾತ್ರೆ ಅಂತ್ಯಗೊಳ್ಳಲಿದ್ದು ರಂಗನಾಥ ಸ್ವಾಮಿ ದೇವಸ್ಥಾನ ಬಳಿ ರಾಹುಲ್ ಗಾಂಧಿ ತಂಗಲಿದ್ದಾರೆ.       ಇಂದಿನ ಪಾದಯಾತ್ರೆಯಲ್ಲಿ  ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ,...

ಭಾರತ ಜೋಡೊ ಯಾತ್ರೆ: ಮಂತ್ರಾಲಯಕ್ಕೆ ರಾಹುಲ್ ಗಾಂಧಿ ಭೇಟಿ: ರಾಯರ ಬೃಂದಾವನ ದರ್ಶನ ಪಡೆದ ರಾಹುಲ್ ಗಾಂಧಿ

Image
  ಭಾರತ ಜೋಡೊ ಯಾತ್ರೆ: ಮಂತ್ರಾಲಯಕ್ಕೆ ರಾಹುಲ್ ಗಾಂಧಿ ಭೇಟಿ: ರಾಯರ ಬೃಂದಾವನ ದರ್ಶನ ಪಡೆದ ರಾಹುಲ್ ಗಾಂಧಿ ರಾಯಚೂರು,ಅ.೨೦- ಭಾರತ ಜೋಡೊ ಯಾತ್ರೆ ಅಂಗವಾಗಿ ಪಾದಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ರಾಯರ ಬೃಂದಾವನ ದರ್ಶನ ಪಡೆದರು.  ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರಿ0ದ ಆಶೀರ್ವಾದ ಪಡೆದರು. ರಾಹುಲ್ ಗಾಂಧಿಯವರಿಗೆ ಪೀಠಾಧಿಪತಿಗಳು ಸ್ಮರಣಿಕೆ ಮತ್ತು ಫಲ ಮಂತ್ರಾಕ್ಷತೆ ಹಾಗೂ ಶೇಷ ವಸ್ತç   ನೀಡಿ ಅನುಗ್ರಹಿಸಿದರು. ಪ್ರಾರಂಭದಲ್ಲಿ ಶ್ರೀ ಮಠಕ್ಕಾಗಮಿಸಿದ ಅವರು ಶ್ರೀ ಮಂಚಾಲಮ್ಮ ದೇವಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ ,ಶಾಸಕ ದದ್ದಲ ಬಸನಗೌಡ ಸೇರಿದಂತೆ ಕಾಂಗ್ರೆಸ್ ಮುಖಂಡರಿದ್ದರು. ಶ್ರೀಸುಬುಧೇ0ದ್ರತೀರ್ಥರಿ0ದ ಪೂಜ್ಯಾಯಾ ರಾಘವೇಂದ್ರಾಯ.. ಮಂತ್ರ ಬೋಧನೆ: ರಾಯರ ಮೂಲ ಬೃಂದಾವನದ  ದರ್ಶನ ಪಡೆದ ನಂತರ ರಾಹುಲ್ ಗಾಂಧಿಯವರಿಗೆ ರಾಯರ ಮಂತ್ರವಾದ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ..ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೆ ಎಂಬ ಮಂತ್ರವನ್ನು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಬೋಧಿಸಿದರು. ಡಿ.ಕೆ.ಶಿವಕುಮಾರ ಸಹ ಮಂತ್ರೋಚ್ಛಾರಣೆ ಮಾಡಿದರು.

ಅ. 20 ರಿಂದ ನ. 3 ರವರೆಗೆ ಖಾದಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ: ಗ್ರಾಮೀಣ ಕಸಬುದಾರರಿಗೆ ಜೀವನ ಮಟ್ಟ ಸುಧಾರಣೆಗೆ ಖಾದಿಯಿಂದ ಕ್ರಮ- ಕೆ.ವಿ.ನಾಗರಾಜು

Image
  ಅ. 20 ರಿಂದ ನ. 3 ರವರೆಗೆ  ಖಾದಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ: ಗ್ರಾಮೀಣ ಕಸಬುದಾರರಿಗೆ ಜೀವನ ಮಟ್ಟ ಸುಧಾರಣೆಗೆ ಖಾದಿಯಿಂದ ಕ್ರಮ- ಕೆ.ವಿ.ನಾಗರಾಜು ರಾಯಚೂರು ಅ.೧೯- ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಮತ್ತು ಸ್ವಾವಲಂಬನೆ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಕಸಬುದಾರರಿಗೆ ಜೀವನ ಆಧಾರ ಕಲ್ಪಿಸಿ ಅವರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸ್ಥಾಪನೆಯಾಗಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜು ಅವರು ಹೇಳಿದರು.     ಅವರು  ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಮಾತನಾಡಿದರು. ಖಾದಿ ವಲಯದಲ್ಲಿ ಕರ್ನಾಟಕ ರಾಜ್ಯದಲ್ಲಿ ೧೬೪ ಖಾದಿ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ೨೫೫ ಅಧಿಕೃತ ಖಾದಿ ಭಂಡಾರಗಳು ಕಾರ್ಯನಿರ್ವಹಿಸುತ್ತಿದೆ. ೨೦೨೧-೨೨ನೇ ಸಾಲಿನಲ್ಲಿ ಸುಮಾರು ೨೮೫.೧೯ ಕೋಟಿ ಖಾದಿ ಉತ್ಪಾದನೆ ಮಾಡಿದ್ದು, ಸುಮಾರು ೧೬,೦೦೦ ಉದ್ಯೋಗವಕಾಶ ಕಲ್ಪಿಸಲಾಗಿರುತ್ತದೆ. ಅಲ್ಲದೇ ಖಾದಿ ಸಂಘ-ಸAಸ್ಥೆಗಳು ಉತ್ಪಾದಿಸುವ ಖಾದಿ ಉತ್ಪಾದನೆ ಮೇಲೆ ಕರ್ನಾಟಕ ಸರ್ಕಾರದಿಂದ ಶೇ.೧೫% ರಷ್ಟು ಎಂ.ಡಿ.ಎ, ಹಾಗೂ ಕೇಂದ್ರ ಸರ್ಕಾರದಿಂದ (ಕೆ.ವಿ.ಐ.ಸಿ) ಶೇ.೩೦ ಎಂ....

ಭಾರತ ಜೋಡೊ ಪಾದಯಾತ್ರೆ ಭದ್ರತೆಗೆ ೨ ಸಾವಿರ ಪೊಲೀಸರ ನಿಯೋಜನೆ : ರಾಹುಲ್ ಗಾಂಧಿ ಪಾದಯಾತ್ರೆ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ- ನಿಖಿಲ್.ಬಿ

Image
 ಭಾರತ ಜೋಡೊ ಪಾದಯಾತ್ರೆ ಭದ್ರತೆಗೆ ೨ ಸಾವಿರ ಪೊಲೀಸರ ನಿಯೋಜನೆ: ರಾಹುಲ್ ಗಾಂಧಿ ಪಾದಯಾತ್ರೆ ಮಾರ್ಗದಲ್ಲಿ ವಾಹನಗಳ  ಸಂಚಾರಕ್ಕೆ ನಿಷೇಧ-ನಿಖಿಲ್.ಬಿ ರಾಯಚೂರು,ಅ.೧೯-ಜಿಲ್ಲೆಯಲ್ಲಿ ಮೂರು ದಿನಗಳ ವರೆಗೆ ನಡೆಯುವ ಭಾರತ ಜೋಡೊ ಪಾದ ಯಾತ್ರೆ ಹಿನ್ನಲೆ ಭದ್ರತೆಗಾಗಿ ಸುಮಾರು ಎರೆಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದ್ದು ಪಾದಯಾತ್ರೆ ಸಂಚರಿಸುವ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದ್ದು ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ .ಬಿ ಹೇಳಿದರು. ಅವರಿಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಭಾರತ ಜೋಡೊ ಪಾದಯಾತ್ರೆ ಜಿಲ್ಲೆಯಲ್ಲಿ ಸಂಚರಿಸುವ ಹಿನ್ನಲೆ ಭದ್ರತಾ ದೃಷ್ಟಿಯಿಂದ ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ ಅವರು ಪಾದಯಾತ್ರೆ ಸಾಗುವ ಮಾರ್ಗದಲ್ಲಿ ನಿಗದಿತ ಸಮಯದಲ್ಲಿ ಸಾರ್ವಜನಿಕರ ಮತ್ತು ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು ಅದಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಿಲಾಗಿದ್ದು ವಾಹನ ಸವಾರರು ಆ ಮಾರ್ಗದಲ್ಲಿ ಸಂಚರಿಸಬೇಕೆ0ದರು. ನಗರದಲ್ಲಿ ಪೊಲೀಸ್ ಇಲಾಖೆಯಿಂದ ಬ್ಯಾನರ್ ಅಳವಡಿಸುವ ಮೂಲಕ ಜನರಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದ್ದು ಸಾರ್ವಜನಿಕರು, ವ್ಯಾಪಾರಸ್ಥರು, ಶಾಲಾ ,ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದ0ತೆ ಕ್ರಮ ವಹಿಸಲಾಗಿದೆ ಎಂದ ಅವರು ...

ಅ.೨೧ ರಿಂದ ೨೩ ರವರೆಗೆ ಜಿಲ್ಲೆಯಲ್ಲಿ ರಾಹುಲ್ ಗಾಂಧಿಯಿoದ ಭಾರತ ಜೋಡೊ ಪಾದಯಾತ್ರೆ : ಅ.೨೨ ರಂದು ನಗರದ ವಾಲ್‌ಕಟ್ ಮೈದಾನದಲ್ಲಿ ಸೆಮಿ ಕಾರ್ನರ್ ಮೀಟಿಂಗ್-ಬೋಸರಾಜು

Image
  ಅ.೨೧ ರಿಂದ ೨೩ ರವರೆಗೆ ಜಿಲ್ಲೆಯಲ್ಲಿ ರಾಹುಲ್ ಗಾಂಧಿಯಿ0ದ ಭಾರತ ಜೋಡೊ ಪಾದಯಾತ್ರೆ: ಅ.೨೨ ರಂದು  ನಗರದ ವಾಲ್‌ಕಟ್ ಮೈದಾನದಲ್ಲಿ ಸೆಮಿ ಕಾರ್ನರ್ ಮೀಟಿಂಗ್-ಬೋಸರಾಜು ರಾಯಚೂರು,ಅ.೧೯- ಭಾರತ ಜೋಡೊ ಯಾತ್ರೆ ಅಂಗವಾಗಿ ಕಾಂಗ್ರೆಸ್ ರಾಷ್ಟಿçÃಯ ಯುವ ನಾಯಕರಾದ ರಾಹುಲ್ ಗಾಂಧಿಯವರು ಅ.೨೧ ರಿಂದ ೨೩ರವರಗೆ ಜಿಲ್ಲೆಯಲ್ಲಿ  ಪಾದಯಾತ್ರೆ ಮಾಡಲಿದ್ದು ಅ.೨೨ ರಂದು ನಗರದ ವಾಲ್ ಕಟ್ ಮೈದಾನದಲ್ಲಿ ಸೆಮಿ ಕಾರ್ನರ್ ಮೀಟಿಂಗ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತಾಡಲಿದ್ದಾರೆಂದು ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು. ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅ.೨೦ ರಂದು ಮಂತ್ರಾಲಯಕ್ಕೆ ಆಗಮಿಸುವ ಅವರು ರಾಯರ ಬೃಂದಾವನ ದರ್ಶನ ಪಡೆಯಲಿದ್ದು ಮರು ದಿನ ಅ.೨೧ ರಂದು ಬೆಳಿಗ್ಗೆ   ಗಿಲ್ಲೆಸುಗೂರಿನ ತುಂಗಭದ್ರಾ ನದಿ ಸೇತುವೆಯಿಂದ ಪಾದಯಾತ್ರೆ ನಡೆಸಲಿದ್ದಾರೆಂದರು. ಯರಗೇರದಲ್ಲಿ ಅಂದು ವಾಸ್ತವ್ಯ ಮಾಡಲಿರುವ ಅವರು ಮರುದಿನ ಬೆಳಿಗ್ಗೆ ಅ.೨೨ ರಂದು  ಯರಗೇರದಿಂದ ಪಾದಯಾತ್ರೆ ಪುನಾರಂಭಿಸಿ  ನಗರದ ಮಲಿಯಬಾದ್ ಕ್ರಾಸ್ ಬಳಿ ಬೃಂದಾವನ ಹೋಟೆಲ್‌ನಲ್ಲಿ ಊಟೋಪಚಾರ ಮಾಡಲಿದ್ದು ರೈತರೊಂದಿಗೆ ಸಂವಾದ ಸಹ ನಡೆಸಲಿದ್ದಾರೆ ಎಂದರು.   ನಂತರ ನಗರದ ಅರ್‌ಟಿಓ ವೃತ್ತ, ಸ್ಟೇಶನ್ ರಸ್ತೆ ಮೂಲಕ ಬಸವೇಶ್ವರ ವೃತ್ತದ ಬಳ...

ಭಾರತ ಜೋಡೊ ಯಾತ್ರೆ ಅಂಗವಾಗಿ ಅ.೨೧ ರಂದು ಜಿಲ್ಲೆಗೆ ರಾಹುಲ್ ಗಾಂಧಿ: ಭಾರತ ಜೋಡೊ ಯಾತ್ರೆಯಿಂದ ಬಿಜೆಪಿ ಪಕ್ಷಕ್ಕೆ ಭಯ ಪ್ರಾರಂಭವಾಗಿದೆ- ದದ್ದಲ್

Image
  ಭಾರತ ಜೋಡೊ ಯಾತ್ರೆ ಅಂಗವಾಗಿ ಅ.೨೧ ರಂದು ಜಿಲ್ಲೆಗೆ ರಾಹುಲ್ ಗಾಂ ಧಿ : ಭಾರತ ಜೋಡೊ ಯಾತ್ರೆಯಿಂದ ಬಿಜೆಪಿ ಪಕ್ಷಕ್ಕೆ ಭಯ ಪ್ರಾರಂಭವಾಗಿದೆ- ದದ್ದಲ್ ರಾಯಚೂರು,ಅ.೧೮- ಭಾರತ ಜೋಡೊ ಯಾತ್ರೆ ಅಂಗವಾಗಿ ಕಾಂಗ್ರೆಸ್  ರಾಷ್ಟಿçÃಯ ಯುವ ನಾಯಕರಾದ ರಾಹುಲ್ ಗಾಂಧಿಯವರು ಅ.೨೧ ರಂದು ಜಿಲ್ಲೆಗೆ ಆಗಮಿಸಲಿದ್ದಾರೆಂದು ಗ್ರಾಮೀಣ ಶಾಸಕರಾದ ದದ್ದಲ ಬಸನಗೌಡ ಹೇಳಿದರು.  ಅವರಿಂದು ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ  ಮಾತನಾಡಿ ರಾಹುಲ್ ಗಾಂಧಿಯವರು ಅ.20 ರಂದು ರಾತ್ರಿ ಮಂತ್ರಾಲಯಕ್ಕಾಗಮಿಸಿ ತಂಗಲಿದ್ದು ಅ.21 ರಂದು ಬೆಳಿಗ್ಗೆ ರಾಯರ ಬೃಂದಾವನ ದರ್ಶನ ಪಡೆದ ನಂತರ ಗಿಲ್ಲೆಸುಗೂರು ತುಂಗಭದ್ರ ನದಿ ಸೇತುವೆಯಿಂದ ತಮ್ಮ ಪಾದಯಾತ್ರೆ ನಡೆಸಲಿದ್ದು ಪಾದಯಾತ್ರೆ ವೇಳೆ ನರೇಗಾ ಕಾರ್ಮಿಕರು ಸೇರಿದಂತೆ ಇನ್ನಿತರ ಶ್ರಮ ಜೀವಿಗಳೊಂದಿಗೆ ಸಂವಾದ ನಡೆಸಲಿದ್ದು ಕೆರೆ ಬೂದೂರು ಬಳಿ ಊಟೋಪಚಾರ ನಡೆಯಲಿದ್ದು ನಂತರ ಯರಗೇರಿ ವಾಲ್ಮೀಕಿ ವೃತ್ತದಲ್ಲಿ ಕಾರ್ನರ್ ಮೀಟಿಂಗ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾರೆ ಎಂದರು. ಅ.೨೧ ರಂದು ರಾತ್ರಿ ಯರಗೇರಿ ರಂಗನಾಥ ಸ್ವಾಮಿ ದೇವಸ್ಥಾನ ಬಳಿ ವಾಸ್ತವ್ಯ ಹೂಡಲಿದ್ದು ಅ.22 ರಂದು ಬೆಳಿಗ್ಗೆ ಪುನ: ತಮ್ಮ ಪಾದಯಾತ್ರೆ ಪಾರಂಬಿಸಲಿದ್ದು ನಂತರ ನಗರದ ಹೊರವಲಯದ ಬೃಂದಾವನ ಹೋಟೆಲ್ ನಲ್ಲಿ ಊಟೋಪಚಾರ ನಡೆಯಲಿದ್ದು ಸಂಜೆ ನಗರದ ಬಸವೇಶ್ವರ ವೃತ್ತದ ವಾಲ್ ಕಟ್ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸ...