Posts

Showing posts from April, 2023

ನಾಳೆ ನಗರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮನ-ವಿರುಪಾಕ್ಷಿ

Image
 ನಾಳೆ ನಗರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮನ-ವಿರುಪಾಕ್ಷಿ ರಾಯಚೂರು,ಏ.೩೦-ವಿಧಾನ ಸಭೆ ಚುನಾವಣೆ ಅಂಗವಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಲಿದ್ದಾರೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ವಿಧಾನ ಸಭೆ ಚುನಾವಣೆಗೆ ಸ್ಪರ್ದಿಸಿರುವ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರ ಕಾರ್ಯ ಕೈಗೊಳ್ಳಲಿರುವ ಕುಮಾರಸ್ವಾಮಿಯವರು ಮೇ.೧ ರಂದು ಸಂಜೆ ೫ಕ್ಕೆ ದೇವದುರ್ಗಕ್ಕೆ ಆಗಮಿಸಿ ಕರೆಮ್ಮ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ನಂತರ ೬ ಗಂಟೆಗೆ ನಗರದ ವಾಲ್ಕಟ್ ಮೈದಾನದಲ್ಲಿ ಜೆಡಿಎಸ್ ಪಕ್ಷದ ನಗರ ಮತ್ತು ಗ್ರಾಮೀಣ ಕ್ಷೇತ್ರಗಳ ಅಭ್ಯರ್ಥಿಗಳಾದ ಈ.ವಿನಯಕುಮಾರ್ ಮತ್ತು ಸಣ್ಣ ನರಸಿಂಹನಾಯಕ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದು ನಗರದಲ್ಲಿ ವಸ್ತವ್ಯ ಮಾಡಿ ನಂತರ ಮೇ.೨ ರಂದು ಮಾನ್ವಿ , ಲಿಂಗಸ್ಗೂರು ಮತ್ತು ಸಿಂಧನೂರಿನಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆಂದರು. ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರು ಆಗಮಿಸುತ್ತಿದ್ದು ಏನು ಪರಿಣಾಮ ಬೀರುವುದಿಲ್ಲವೆಂದ ಅವರು ಉತ್ತರ ಪ್ರದೇಶದಲ್ಲಿ ಬಡತನ, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಅತ್ಯಧಿಕಾವಗಿ ದಾಖಲಾಗುತ್ತವೆ ಅಂತಹ ರಾಜ್ಯದ ಸಿಎಂ ಇಲ್ಲಿಗೆ ಬಂದು ಪ್ರಚಾರ ಮಾಡಿದರೆ ಮತದಾರರು ಒಪ್ಪಲು ಸಾಧ್ಯವೆ ಎಂದರು. ನಗರ ಶಾಸಕರು ಅಭಿವ...

ಉತ್ತರ ಪ್ರದೇಶ ಸಿಎಂ ರಿಂದ ಡಾ.ಶಿವರಾಜ ಪಾಟೀಲ ಪರ ಪ್ರಚಾರ ಸಭೆ: ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದವರಿಗೆ ಈಗ ಅಸ್ತಿತ್ವವೆ ಇಲ್ಲದಂತಾಗಿದೆ - ಯೋಗಿ ಆದಿತ್ಯನಾಥ

Image
  ಉತ್ತರ ಪ್ರದೇಶ ಸಿಎಂ ರಿಂದ ಡಾ.ಶಿವರಾಜ ಪಾಟೀಲ ಪರ ಪ್ರಚಾರ ಸಭೆ: ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದವರಿಗೆ ಈಗ ಅಸ್ತಿತ್ವವೆ ಇಲ್ಲದಂತಾಗಿದೆ - ಯೋಗಿ ಆದಿತ್ಯನಾಥ ರಾಯಚೂರು,ಏ.೩೦-ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದವರಿಗೆ ಇಂದು ದೇಶದಲ್ಲಿ ಅಸ್ತಿತ್ವವೆ ಇಲ್ಲದಂತಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದರು. ಅವರಿಂದು ನಗರದ ಕೃಷಿ ವಿವಿ ಮೈದಾನದಲ್ಲಿ ಬಿಜೆಪಿ ಪಕ್ಷದ ನಗರ ಕ್ಷೇತ್ರದ ಅಭ್ಯರ್ಥಿ ಡಾ.ಶಿವರಾಜ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಶ್ರೀ ರಾಮನ ಇರುವಿಕೆ ಬಗ್ಗೆ ಕುಹಕವಾಡಿದ್ದವರು ಇಂದು ತಮ್ಮ ಅಸ್ತಿತ್ವಕ್ಕೆ ಪರಿತಪಿಸುತ್ತಿದ್ದಾರೆ ಎಂದ ಅವರು ಈ ದೇಶದ ಪ್ರತಿಯೊಬ್ಬರ ಕಣ ಕಣದಲ್ಲಿಯೂ ಶ್ರೀರಾಮನು ನಲೆಸಿದ್ದಾನೆ ಎಂದರು.  ಉತ್ತರ ಪ್ರದೇಶದ ರಾಮನ ಜನ್ಮ ಭೂಮಿ ಅಯೋಧ್ಯೆಗೂ ಕರ್ನಾಟಕದ ಕಿಷ್ಕಿಂದೆಗೂ ಅನ್ಯೋನ್ಯ ನಂಟಿದೆ ರಾಮನ ಜನ್ಮ ಭೂಮಿ ಉತ್ತರ ಪ್ರದೇಶವಾದರೆ ಹನುಮನ ಪುಣ್ಯ ಪಾವನ ಭೂಮಿ ಕರ್ನಾಟಕವಾಗಿದೆ ಎಂದರು. ರಾಯಚೂರು ಹರಿದಾಸರ ನಾಡು, ಕೃಷ್ಣೆ- ತುಂಗೆಯ ಬೀಡು ಇಲ್ಲಿಯ ಜನರಿಗೆ ಕೋಟಿ ಕೋಟಿ ನಮನಗಳು ಎಂದು ಕನ್ನಡದಲ್ಲಿ ಮಾತು ಪ್ರಾರಂಭಿಸಿದ ಅವರು ಇಲ್ಲಿ ನೆಲೆಸಿದ್ದ ವಿಜಯ ದಾಸರ, ಗೋಪಾಲ ದಾಸರ ಮತ್ತು ಜಗನ್ನಾಥ ದಾಸರ ಬಗ್ಗೆ ಉಲ್ಲೇಖಿಸಿದ ಅವರು ಬ್ರಿಟೀಷರ ವಿರುದ್ಧ ಹೋರಾಡಿದ ದೊರೆ   ರಾಜಾ ವೆಂಕಟಪ್ಪ ನಾಯಕರ ಬಗ್ಗೆ ಗುಣಗಾನ ಮಾಡಿದರು. ಈ ಪ್ರದೇಶವು ನಿಜಾಮರ ಆಡಳಿತದಲ್...

ಅಲೆಮಾರಿ ಮತ್ತು ಬುಡುಕಟ್ಟು ಸಮುದಾಯಗಳಿಗೆ ಮತದಾನ ಜಾಗೃತಿಗಾಗಿ ಕಲ್ಯಾಣ ಕರ್ನಾಟಕ ಸಂಚಾರ - ಸಿ.ಎಸ್. ದ್ವಾರಕಾನಾಥ್

Image
ಅಲೆಮಾರಿ ಮತ್ತು ಬುಡುಕಟ್ಟು ಸಮುದಾಯಗಳಿಗೆ ಮತದಾನ ಜಾಗೃತಿಗಾಗಿ ಕಲ್ಯಾಣ ಕರ್ನಾಟಕ ಸಂಚಾರ - ಸಿ.ಎಸ್. ದ್ವಾರಕಾನಾಥ್    ರಾಯಚೂರು, ಏ.೨೮- ಕಲ್ಯಾಣ ಕರ್ನಾಟಕದಲ್ಲಿ  ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳಿಗೆ ರಾಜಕೀಯ ಪ್ರಜ್ಞೆ ಇಲ್ಲ. ಅವರಿಗೆ  ಪ್ರಾಥಮಿಕ ಸೌಲಭ್ಯಗಳು ದೊರಕುತ್ತಿಲ್ಲ. ಅವರಿಗೆ  ಮತದಾನ ಜಾಗೃತಿ ಮಾಡುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಚಾರ ಮಾಡಲಾಗುತ್ತಿದೆ ಎಂದು ಸಾಮಾಜಿಕ ನ್ಯಾಯ ಸಮತಿ ಅಧ್ಯಕ್ಷರು ಕಾಗೂ ಕೆಪಿಸಿಸಿ ಮುಖ್ಯ ವಕ್ತಾರ ಸಿಎಸ್ ದ್ವಾರಕಾನಾಥ್ ಅವರು ತಿಳಿಸಿದರು.                            ಅವರಿಂದು ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಗಣತಿ ವರದಿ ಬಾರದೇ ಇರುವುದರಿಂದ ನಿಖರವಾಗಿ ಮಾಹಿತಿ ಇಲ್ಲ. ರಾಯಚೂರು ಜಿಲ್ಲೆಯಲ್ಲಿ ಸುಮಾರು ೭೦ ಸಾವಿರ ಜನಸಂಖ್ಯೆ ಇದ್ದಾರೆ. ರಾಜ್ಯದಲ್ಲಿ ೫ ರಿಂದ ೬ ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಾರೆ ಎಂದರು. ಸಾಮಾಜಿಕವಾಗಿ ,ಶೈಕ್ಷಣಿಕವಾಗಿ ವಂಚಿತರಾಗಿ ಹಾಗೂ ರಾಜಕೀಯ ಪರಿಕಲ್ಪನೆ ಇಲ್ಲದ ಅಲೆಮಾರಿ ಹಾಗೂ ಬುಡಕಟ್ಟು ಸಮುದಾಯಗಳಿಗೆ ಬಿಜೆಪಿ ಸರ್ಕಾರ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಲೆಮಾರಿ ಕೋಶ ಸ್ಥಾಪಿಸಿ ರೂ. ೩೦೦ ಕೋಟಿ ಅನುದಾನ ನೀಡಲಾಗಿತ್ತು.      ...

ಎಎಪಿ ಅಭ್ಯರ್ಥಿ ಡಾ .ಸುಭಾಷ್ ಚಂದ್ರ ಅವರಿಗೆ ತುಂಟಾಪೂರು ಗ್ರಾಮದಲ್ಲಿ ಭರ್ಜರಿ ಸ್ವಾಗತ.

Image
  ಎಎಪಿ ಅಭ್ಯರ್ಥಿ ಡಾ.ಸುಭಾಷ್ ಚಂದ್ರ ಅವರಿಗೆ ತುಂಟಾಪೂರು ಗ್ರಾಮದಲ್ಲಿ  ಭರ್ಜರಿ ಸ್ವಾಗತ    ರಾಯಚೂರು,ಏ.28-  ವಿಧಾನ ಸಭೆ ಚುನಾವಣೆ ಅಂಗವಾಗಿ ಎ.ಎ.ಪಿ.ಅಭ್ಯರ್ಥಿ ಡಾ.ಸುಭಾಷ್ ಚಂದ್ರ ಸಂಬಾಜಿ ಅವರು ತುಂಟಾಪೂರು ಮತ್ತು ಮಾಸದೊಡ್ಡಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಕೊಂಡು ಬೆಂಬಲ ಸೂಚಿಸಿದರು.  ಈ ಸಂದರ್ಭದಲ್ಲಿ  ಸುರೇಶ್ ಸಂಬಾಜಿ, ಕೆ.ಬಸವಂತಪ್ಪ , ಶರಣಬಸವ,ನಾಗರಾಜ್ ಮಾಜಿ ಸದಸ್ಯ,ರತ್ನಾಕರ್, ಜೈಪಾಲ್ , ಕೆ.ಎನ್.ಧರ್ಮನಾಯುಡು ಲೂಕಪ್ಪ ,ಯಲ್ಲಪ್ಪ ಬಜಾರ್ ,ಹುಸೇನ್ ನಾಯಕ ,ರಾಮ ಪ್ಪ ,ರಾಜಪ್ಪ ಸುಧಾಕರ, ಅನೀಲ್ ಕುಮಾರ್, ರವಿ ಕುಮಾರ್ ,ಪ್ರವೀಣ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ಮೋದಿಯವರು ಪ್ರವಾಹ ಸಂದರ್ಭದಲ್ಲಿ ಏಕೆ ಕರ್ನಾಟಕಕ್ಕೆ ಬರಲಿಲ್ಲ- ಸಿದ್ದರಾಮಯ್ಯ

Image
  ಮೋದಿಯವರು ಪ್ರವಾಹ ಸಂದರ್ಭದಲ್ಲಿ ಏಕೆ ಕರ್ನಾಟಕಕ್ಕೆ ಬರಲಿಲ್ಲ- ಸಿದ್ದರಾಮಯ್ಯ ರಾಯಚೂರು,ಏ.೨೮-ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಹ ಬಂದಾಗ ಕರ್ನಾಟಕಕ್ಕೆ ಏಕೆ ಬರಲಿಲ್ಲ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜ್ಯದ ಜನರು ಅವರಿಗೆ ನೆನಪಿಗೆ ಬರುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಅವರಿಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮೋದಿಯವರು ಮೇಲಿಂದ ಮೇಲೆ ರಾಜ್ಯಕ್ಕೆ ಬರುತ್ತಿದ್ದಾರೆ ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರು ತತ್ತರಿಸಿದಾಗ ಅವರಿಗೆ ಸಾಂತ್ವಾನ ಹೇಳಲು ಏಕೆ ಬರಲಿಲ್ಲವೆಂದು ಪ್ರಶ್ನಿಸಿದ ಅವರು  ಸಾಮಾನ್ಯ ಜನರು , ರೈತರು ಸಂಕಷ್ಟಕ್ಕೆ ಸಿಲುಕಿದಾಗ ಬಾರದೆ ಈಗ ಚುನಾವಣೆ ಕಾರಣದಿಂದ ಬರುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಗ್ಯಾರಂಟಿ ನೀಡಿರುವ ಗೃಹ ಲಕ್ಷಿö್ಮÃ, ಉಚಿತ ವಿದ್ಯುತ್, ನಿರುದ್ಯೋಗ ಭತ್ಯೆ ಮುಂತಾದ ಭರವಸೆಗಳನ್ನು ಲೇವಡಿ ಮಾಡಿದ ಪ್ರಧಾನಿಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಇಲ್ಲಿನ ಜನರ ಮೇಲೆ ಸಾಲದ ಭಾರ ಹೊರಿಸಿದ್ದಾರೆ ಎಂದರು. ಬಿಜೆಪಿ ಪಕ್ಷದವರು ಕೇವಲ ಭರವಸೆಗಳನ್ನು ನೀಡುತ್ತಾರೆ ಅವುಗಳನ್ನು ಈಡೇರಿಸುವುದಿಲ್ಲ ನಾನು ಸಿಎಂ ಆಗಿದ್ದಾಗೆ ನೀಡಿದ ಎಲ್ಲ ಭರವಸೆಗಖನ್ನು ಆದ್ಯತೆ ಮೇರೆಗೆ ಈಡೇರಿಸಿದ್ದೇನೆ ಎಂದ ಅವರು ಬೊಮ್ಮಾಯಿಯವರು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದರು. ಮೀಸಲಾತಿ ಹೆಚ್ಚಳ ಕೇವಲ ಕಣ್ಣೊರೆಸುವ ತಂತ್ರ ಅದಕ್ಕೆ...

ನಗರದಲ್ಲಿ ಮುಂಗಾರು ಪೂರ್ವ ಗುಡುಗು , ಸಿಡಿಲಿನೊಂದಿಗೆ ಭಾರಿ ಮಳೆ.

Image
ನಗರದಲ್ಲಿ ಮುಂಗಾರು ಪೂರ್ವ ಗುಡುಗು , ಸಿಡಿಲಿನೊಂದಿಗೆ ಭಾರಿ ಮಳೆ.                                  ರಾಯಚೂರು,ಏ.28-ನಗರದಲ್ಲಿ ಮುಂಗಾರು ಪೂರ್ವ ಗುಡುಗು, ಸಿಡಿಲಿನೊಂದಿಗೆ ಭಾರಿ ಮಳೆ ಸುರಿಯಿತು.                                           ಬಿಸಿಲಿನ ಬೇಗೆಯಿಂದ ಕಂಗೆಟ್ಟ ಇಳೆಗೆ ತಂಪೆರೆಯಾತು‌.  ಮಿಂಚು, ಸಿಡಿಲಿನ ಆರ್ಭಟ ಜೋರಾಗಿತ್ತು ಬಿರುಗಾಳಿಯಿಂದ ಮರ ಗಿಡಗಳು ಧರೆಗೆ ಉರಳುತ್ತವೆಯೋ ಎನ್ನುವ ಆತಂಕ ಮೂಡಿತ್ತು.                                              ಅಲ್ಲಲ್ಲಿ ಮಳೆ ನೀರು ನಿಂತು ರಸ್ತೆಗಳು ಜಲಾವೃತವಾದವು. ವಾಹನ ಸವಾರರು ಪರದಾಡಿದರು. ಚುನಾವಣೆ ಪ್ರಚಾರ ಕಾರ್ಯಕ್ಕೂ ಮಳೆ ಅಡಚಣೆ ಉಂಟು ಮಾಡಿತು. ಬಿಸಿಲಿನ ತಾಪಕ್ಕೆ ಕಾದು ಕಬ್ಬಿಣದಂತಾದ ಭೂಮಿಗೆ ಮಳೆ ನೀರು ತಂಪಾಗಿಸಿತು.

ರಾಯಚೂರು ಗ್ರಾಮೀಣ ಕ್ಷೇತ್ರದದಲ್ಲಿ ಬಸನಗೌಡ ದದ್ದಲ್ ರವರನ್ನು ಗೆಲ್ಲಿಸಿ - ಸಿದ್ಧರಾಮಯ್ಯ

Image
  ರಾಯಚೂರು ಗ್ರಾಮೀಣ ಕ್ಷೇತ್ರದದಲ್ಲಿ ಬಸನಗೌಡ ದದ್ದಲ್ ರವರನ್ನು ಗೆಲ್ಲಿಸಿ - ಸಿದ್ಧರಾಮಯ್ಯ ರಾಯಚೂರು,ಏ.28- ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಬರುವ ಹುಣಸಿಹಾಳ ಹುಡಾ ಗ್ರಾಮದಲ್ಲಿ   ಆಯೋಜಿಸಲಾಗಿದ್ದ  ರಾಯಚೂರು ಗ್ರಾಮೀಣ ಮತಕ್ಷೇತ್ರದ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಉದ್ದೇಶಿಸಿ  ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ   ಸಿದ್ದರಾಮಯ್ಯ ರುವರು ಮಾತನಾಡಿ  ರಾಯಚೂರು ಗ್ರಾಮೀಣ ಕ್ಷೇತ್ರದದಲ್ಲಿ  ಬಸನಗೌಡ ದದ್ದಲ್ ರವರು ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಕೂಡ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು *ಕ್ರಮ ಸಂಖ್ಯೆ 3 ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಸನಗೌಡ ದದ್ದಲ್* ರವರಿಗೆ ನೀಡಿ. ಬಸನಗೌಡ ಗದ್ದಲ್ ಅವರಿಗೆ ಹಾಕೋ ಪ್ರತಿ ಮತವು ನನಗೆ ಹಾಕಿದಂತೆ ಎಂದರು. ರಾಜ್ಯದಲ್ಲಿ ಜನವಿರೋಧಿ ಬಿಜೆಪಿ ಸರ್ಕಾರ ಜನಪರ ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಬಿಜೆಪಿ ಪಕ್ಷ ಸರ್ಕಾರ ಜನ ಆಶೀರ್ವಾದ ಪಡೆದ ಸರ್ಕಾರವಲ್ಲ ಹಿಂಬಾಗಿಲಿನಿಂದ ಬಂದು ಅಧಿಕಾರಕ್ಕೆ ಬಂದಿದ್ದಾರೆ. ಸನ್ಮಾನ್ಯ ಪ್ರಧಾನಿ ಮೋದಿ ಜಿ ಅವರು ಹೇಳುತ್ತಾರೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತ ಆದರೆ ಅವರ ಬಿಜೆಪಿಯವರು ಎಷ್ಟು ಜನ ಮುಸ್ಲಿಮರಿಗೆ ಮತ್ತು ಕೃಷಿಯನರಿಗೆ ಒಂದಾದರೂ...

ಶೃತಿ ಸಾಹಿತ್ಯ ಮೇಳದಿಂದ ಏ.29 ರಂದು ವರಕವಿ ಶ್ರೀ ಶಾಮ ಸುಂದರ ದಾಸರ ಆರಾಧನಾ ಮಹೋತ್ಸವ- ಮುರಳಿಧರ ಕುಲಕರ್ಣಿ

Image
ಶೃತಿ ಸಾಹಿತ್ಯ ಮೇಳದಿಂದ 29ರಂದು ವರಕವಿ ಶ್ರೀ ಶಾಮ ಸುಂದರ ದಾಸರ ಆರಾಧನಾ ಮಹೋತ್ಸವ -ಮುರಳಿಧರ ಕುಲಕರ್ಣಿ ರಾಯಚೂರು,ಏ.28- ನಗರದ ಸಾಂಸ್ಕೃತಿಕ, ಸಾಹಿತಿಕ ,ಸಂಘಟನೆಯಾದ ಶ್ರುತಿ ಸಾಹಿತ್ಯ ಮೇಳ ರಾಯಚೂರು ವತಿಯಿಂದ ಏ. 29 ರಂದು ಸಂಜೆ 6 ಗಂಟೆಗೆ ಕರ್ನಾಟಕ ಸಂಘದಲ್ಲಿ ವರ ಕವಿಗಳು ದಾಸ ಶ್ರೇಷ್ಠರಾದ ಶ್ರೀ ಶಾಮಸುಂದರ ದಾಸರ ಆರಾಧನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಯವರು ತಿಳಿಸಿದ್ದಾರೆ.  ಈ ಕಾರ್ಯಕ್ರಮದಲ್ಲಿ ರಾಯಚೂರಿನ ದಾಸ ಸಾಹಿತ್ಯ ವಿದ್ವಾಂಸರು ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾಕ್ಟರ್ ಜಯಲಕ್ಷ್ಮಿ ಮಂಗಳಮೂರ್ತಿಯವರು ರಚಿಸಿದ ಎರಡು ದಾಸ ಸಾಹಿತ್ಯ ಪುಸ್ತಕಗಳಾದ ಶ್ರೀ ಹರಿನಾಮಗಳ ಚಿಂತನೆ ಮತ್ತು ನಾರಾಯಣ ವರ್ಮ ಈ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.    ಈ ಕೃತಿಗಳ ಲೋಕಾರ್ಪಣೆಯನ್ನು ವೇದಮೂರ್ತಿ ಪಂಡಿತ್ ಶ್ರೀ ಶೇಷಾಚಾರ್ಯ ಗುಡೆಬಲ್ಲೂರು, ಪ್ರಸನ್ನ ಭೂ ವರಹ ವಿಠಲಾಂಕಿತರು, ಉಪನ್ಯಾಸಕರಾಗಿ ನಿವೃತ್ತ  ಪ್ರಾಧ್ಯಾಪಕರು ಕಲಬುರ್ಗಿ, ದಾಸ ಸಾಹಿತ್ಯ ವಿದ್ವಾಂಸರಾದ ಶ್ರೀ ವ್ಯಾಸರಾಜ ಸಂತೆಕೆಲ್ಲೂರು, ಮುಖ್ಯ ಅತಿಥಿಗಳಾಗಿ ಶ್ರೀ ಹನುಮಂತರಾವ್ ಕಲ್ಲೂರ್ಕರ್, ಅಧ್ಯಕ್ಷರು ಸಮೀರ ಸಂಸ್ಕೃತಿಕ ಸೇವಾ ಮಂಡಳಿ,ಇವರು ಗಳು ಆಗಮಿಸಲಿದ್ದಾರೆ.     ಸಂದರ್ಭದಲ್ಲಿ ದಾಸ ಸಾಹಿತ್ಯದಲ್ಲಿ ಅಗಾಧ ಸೇವೆ ಸಲ್ಲಿಸಿದ ಸಾಧ...

ವಿವಿಧ ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿ ಮುಜೀಬುದ್ದೀನ್ ಮತಯಾಚನೆ

Image
  ಪಕ್ಷೇತರ ಅಭ್ಯರ್ಥಿ ಮುಜೀಬುದ್ದೀನ್ ಮತಯಾಚನೆ                          ರಾಯಚೂರು,ಏ.28- ವಾರ್ಡ್ ನಂಬರ್ 24 ಮತ್ತು 25ರಲ್ಲಿ ಪಕ್ಷೇತರ ಅಭ್ಯರ್ಥಿ ‌ಮುಜೀಬುದ್ದೀನ್ ಅವರು ಮತಯಾಚನೆ ಮಾಡಿದರು.                             ಇಂದು ನಗರದ ವಾರ್ಡ್ 24ರ ‌ಮಹಾಲಕ್ಷ್ಮಿ ದೇವಸ್ಥಾನದಲ್ಲಿ ರವೀಂದ್ರ ರೆಡ್ಡಿ‌ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ನಂತರ ಪ್ರಚಾರ ಆರಂಭಿಸಿದರು.                    ಡೊಳ್ಳಿನ‌ ಮೆರವಣಿಗೆ ಮೂಲಕ ಮನೆ ಮನೆಗೆ ಭೇಟಿ ನೀಡಿದ ಮುಜೀಬುದ್ದಿನ್ ಅವರು ಗ್ಯಾಸ್ ಸಿಲೆಂಡರ್ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು.                                             ನೂರಾರು ನಿವಾಸಿಗಳು ಮುಜೀಬುದ್ದಿನ್ ರ ಪಕ್ಷೇತರ ಚಿಹ್ನೆಗೆ ಬೆಂಬಲಿಸುವುದಾಗಿ ಭರವಸೆ ನೀಡಿದರು. ನಂತರ ವಾರ್ಡ್ 25ರಲ್ಲಿ ಪ್ರಚಾರ ಮಾಡುವ ಪೂರ್ವದಲ್ಲಿ ಸಿಟಿ ಟಾಕೀಸ್ ವೃತ್ತದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.  ...

ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಶಾಲಂ ಪರ ಪ್ರಚಾರ ಸಭೆ : ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯಕ್ಕೆ ಮನ್ನಣೆ- ಸಿದ್ದರಾಮಯ್ಯ

Image
 ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಶಾಲಂ ಪರ ಪ್ರಚಾರ ಸಭೆ : ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯಕ್ಕೆ ಮನ್ನಣೆ- ಸಿದ್ದರಾಮಯ್ಯ ರಾಯಚೂರು,ಏ.೨೭-ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯಕ್ಕೆ ಮನ್ನಣೆಯಿದ್ದು ಎಲ್ಲ ಸಮುದಾಯಕ್ಕೂ ಚುನಾವಣೆಯಲ್ಲಿ ಸ್ಪರ್ದಿಸಲು ಟಿಕೆಟ್ ನೀಡಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.  ಅವರಿಂದು ನಗರದ ವಾಲಕಟ್ ಮೈದಾನದಲ್ಲಿ ನಗರ ಕ್ಷೇತ್ರದ  ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ ಶಾಲಂ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಸ್ವಾತಂತ್ರö್ಯ ಪೂರ್ವದಿಂದಲು ಇರುವ ಪಕ್ಷ ದೇಶಕ್ಕೆ ಸ್ವಾತಂತ್ರö್ಯ ತಂದು ಕೊಡುವಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆಯಿದ್ದು ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಹಿರಿಯ ಮುಖಂಡರು ಇದ್ದಾರೆ ಕಾಂಗ್ರೆಸ್ ಈ ದೇಶವನ್ನು ಒಗ್ಗೂಡಿಸುವ ಕಾರ್ಯ ಮಾಡಿದೆ ಎಂದ ಅವರು ಅರ್‌ಎಸ್‌ಎಸ್ ೧೯೨೫ರಲ್ಲಿ ಸ್ಥಾಪನೆಯಾಯಿತು ೧೯೫೧ ರಲ್ಲಿ ಜನಸಂಘ ಸ್ಥಾಪನೆಯಾಯಿತು ೧೯೮೦ ರಲ್ಲಿ ಜನತಾ ಪಕ್ಷದಿಂದ ಹೊರಬಂದು ಬಿಜೆಪಿಯಾಯಿತು ಎಂದರು. ಸ0ಘ ಪರಿವಾರ ಸಮಾಜವನ್ನು ಒಡಿಯುತ್ತಿದೆ ಒಂದು ಕೋಮು ಮತೊಂದು ಕೋಮಿನ ನಡುವೆ ಸಂಘರ್ಷ ಏರ್ಪಡಿಸುತ್ತಿದೆ ಎಂದು ದೂರಿದ ಅವರು ಬಿಜೆಪಿಗೆ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ನಂಬಿಕೆಯಿಲ್ಲ ಅರ್‌ಎಸ್‌ಎಸ್ ಎರಡನೆ ಸರ ಸಂಘ ಚಾಲಕ ಗೋಲ್ವಾಲಕರ್ ತಮ್ಮ ಪುಸ್ತಕ ಚಿಂತನ ಗಂಗಾದಲ್ಲಿ ಉಲ್ಲೇಖಿಸಿದ್ದಾರೆ ಅರ್‌ಎಸ್‌ಎಸ್ ಮುಖವಾಣಿ ಆರ್ಗನೈಜರ್‌ನ...

ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮ : ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ಮತದಾನ ಮಾಡುವುದು ಅತ್ಯಗತ್ಯ- ಸಿಇಒ ಶಶಿಧರ ಕುರೇರ

Image
  ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮ ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ಮತದಾನ ಮಾಡುವುದು ಅತ್ಯಗತ್ಯ- ಸಿಇಒ ಶಶಿಧರ ಕುರೇರ ರಾಯಚೂರು,ಏ.೨೭- ಮತದಾನವೆಂಬುವುದು ಪ್ರತಿಯೊಬ್ಬರು ಹಕ್ಕು ಹಾಗೂ ಜವಬ್ದಾರಿಯಾಗಿದ್ದು, ಮುಖ್ಯವಾಗಿ ಕಾರ್ಮಿಕರು ಮತ್ತು ರೈತರು ಈ ದೇಶದ ಅತಿ ದೊಡ್ಡ ಶಕ್ತಿಯಾಗಿದ್ದಾರೆ ಅವರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸದೃಢ ರಾಷ್ಟçವನ್ನು ನಿರ್ಮಾಣ ಮಾಡಬೇಕೆಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಹಾಗೂ  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೂ ಆದ ಶಶಿಧರ ಕುರೇರ ಅವರು ಹೇಳಿದರು.  ಅವರು  ಗುರುವಾರ ನಗರದ ಹೊರ ವಲಯದ ಶಿಲ್ಪಾ ಮೆಡಿಕೇರ್ ಹಾಗೂ ರಾಯ್‌ಕೇಮ್ ಮೆಡಿಕೇರ್ ಕಂಪನಿಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರತಿಯೊಬ್ಬರು ಸಂವಿಧಾನದ ಆಶಯಗಳನ್ನು ಹಾಗೂ ಅಂಶಗಳನ್ನು ಅರಿತುಕೊಂಡು, ಉತ್ತಮ ಸರ್ಕಾರವನ್ನು ರಚನೆ ಮಾಡಲು ದೇಶದ ಪ್ರತಿಯೊಬ್ಬರ ಪ್ರಜೆಗೂ ನೀಡಲಾದ ಅಧಿಕಾರವನ್ನು ಹಾಗೂ ಜವಾಬ್ದಾರಿಯನ್ನು ನಿಭಾಯಿಸಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.  ಇದೇ ವೇಳೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಲ್.ಚಂದ್ರಶೇಖರ ನಾಯಕ ಅವರು ಮತದಾರರ ಪ್ರತಿಜ್ಞಾ ವಿಧಿಯನ್ನು ಭೋಧಿಸಿ ಮ...

ಹೋರಾಟಗಾರರಿಗೆ ಬೊಗಳು ಎಂದವರಿಗೆ ಚುನಾವಣೆಯಲ್ಲಿ ತಕ್ಕ ಪಾಠ: ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದಲ್ಲಿ ಜಿಲ್ಲೆಗೆ ಏಮ್ಸ್ ತರುತ್ತೇನೆ-ಕಳಸ

Image
  ಹೋರಾಟಗಾರರಿಗೆ ಬೊಗಳು ಎಂದವರಿಗೆ ಚುನಾವಣೆಯಲ್ಲಿ ತಕ್ಕ ಪಾಠ: ನನ್ನನ್ನು   ಶಾಸಕನಾಗಿ ಆಯ್ಕೆ ಮಾಡಿದಲ್ಲಿ ಜಿಲ್ಲೆಗೆ ಏಮ್ಸ್ ತರುತ್ತೇನೆ-ಕಳಸ ರಾಯಚೂರು,ಏ.೨೭- ನನ್ನನ್ನು ನಗರದ ಮತದಾರರು ಶಾಸಕನಾಗಿ ಆಯ್ಕೆ ಮಾಡಿದಲ್ಲಿ ನಾನು ಜಿಲ್ಲೆಗೆ ಏಮ್ಸ್ ತರುವುದಾಗಿ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕರು ಮತ್ತು ಪಕ್ಷೇತರ ಅಭ್ಯರ್ಥಿಯಾಗಿರುವ ಬಸವರಾಜ ಕಳಸ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಪಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ ಸತತ ಒಂದು ವರ್ಷದಿಂದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಲ್ಲೆಗೆ ಮಂಜೂರಿ ಮಾಡಬೇಕೆಂದು ಹೋರಾಟ ನಡೆಸಿದ್ದು ಇದಕ್ಕೆ ಜಿಲ್ಲೆಯ ಶಾಸಕರು , ಸಂಸದರು ಸ್ಪಂದಿಸದೆ ಸರ್ಕಾರದ ಮೇಲೆ ಒತ್ತಡ ತರದೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ ಮಾಡುವಲ್ಲಿ ವಿಫಲವಾಗಿದ್ದರಿಂದ ಹೋರಾಟಗಾರರ ಎಲ್ಲರ ಅಪೇಕ್ಷೆಯಂತೆ ತಾವು ನಗರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಚುನಾವಣೆ ಆಯೋಗ ತಮಗೆ "ಕುಕ್ಕರ್" ಗುರುತು ನೀಡಿದ್ದು ಮತದಾರರು ತಮಗೆ ಬೆಂಬಲಿಸಬೇಕೆAದು ಕೋರಿದರು. ಏಮ್ಸ್ ಹೋರಾಟಗಾಗರನ್ನು ಸ್ಥಳಿಯ ಶಾಸಕ ಡಾ.ಶಿವರಾಜ ಪಾಟೀಲ ತುಚ್ಚವಾಗಿ ಕಂಡಿದ್ದು ನಮಗೆ ಕೀಳು ಮಟ್ಟದ ಭಾಷೆಯಲ್ಲಿ ಬೊಗಳು ಎಂದು ಸಂಬೋಧಿಸಿದ್ದಾರೆ ಅವರಿಗೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆಂದ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಎಲ್ಲರು ತಲೆ ತಗ್ಗಿಸಬೇಕಾದ ಸಂಗತ...

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿ-ಮೇಟಿ

Image
  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿ-ಮೇಟಿ ರಾಯಚೂರು,ಏ.೨೭-ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸದ್ಯ ಖಾಲಿ ಇದ್ದು ಪಕ್ಷಕ್ಕಾಗಿ ದಶಕಗಳಿಂದ ಕಾರ್ಯಕರ್ತನಾಗಿ ದುಡಿಯುತ್ತಿರುವ ನನಗೆ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಒಂದು ಬಾರಿ ಅವಕಾಶ ನೀಡಬೇಕೆಂದು ಲಿಂಗಸ್ಗೂರಿನ ಕಾಂಗ್ರೆಸ್ ಹಿರಿಯ ಮುಖಂಡರಾದ ಶರಣಪ್ಪ ಮೇಟಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕಳೆದ ಅನೇಕ ದಶಕಗಳಿಂದ ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ ವಿವಿಧ ಜವಾಬ್ದಾರಿಗಳನ್ನು ಪ್ರಮಾಣಿಕವಾಗಿ ನಿಭಾಯಿಸಿದ್ದೇನೆ ಕಳೆದ ಆರು ವರ್ಷಗಳಿಂದ ಅಧ್ಯಕ್ಷ ಸ್ಥಾನಕ್ಕೆ ಅಕಾಂಕ್ಷಿಯಾಗಿದ್ದೇನೆ ಈ ಹಿಂದೆ ಎಐಸಿಸಿ ಮಟ್ಟದಲ್ಲಿ ಅನುಮೋದನಗೊಂಡರು ಜಿಲ್ಲೆಯ ಕೆಲ ಮುಖಂಡರು ಅದಕ್ಕೆ ತಡೆ ಹಾಕಿಸಿದರು ಎಂದು ದೂರಿದ ಅವರು ಬೋಸರಾಜು ಮತ್ತು ಬಿ.ವಿ ನಾಯಕರು ತಮಗೆ ಅಧ್ಯಕ್ಷ ಸ್ಥಾನ ಸಿಗದಂತೆ ಮಾಡಿದರು ಎಂದು ಆರೋಪಿಸಿದರು. ನನಗೆ ಪಕ್ಷದಿಂದ ಎಷ್ಟೆ ನೋವಾದರು ನಾವು ಪಕ್ಷದ ವಿರುದ್ದ ಮಾತಾಡಿಲ್ಲ ಕೆಲವರು ನನಗೆ ಪ್ರಚೋದನೆ ಮಾಡಿದರು ನನ್ನನ್ನು ಪಕ್ಷ ಬಿಡುವಂತೆ ಮಾಡಿದರು ನಾನು ಪಕ್ಷದಲ್ಲೆ ಉಳಿದಿದ್ದೇನೆ ಆದ್ದರಿಂದ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನೆ ಖರ್ಗೆಯವರಿಗೆ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ ರವರಿಗೆ ಹಾಗೂ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯರಿಗೆ ಮನವಿ ಮಾಡುತ್ತೇನೆ ನನನ್...

ಶಾಸಕ ದದ್ದಲ್ ಸಮ್ಮುಖದಲ್ಲಿ ಡಾ. ಶಾರದಾ ಹುಲಿ ನಾಯಕ ಕಾಂಗ್ರೆಸ್ ಸೇರ್ಪಡೆ

Image
ಶಾಸಕ ದದ್ದಲ್ ಸಮ್ಮುಖದಲ್ಲಿ ಡಾ. ಶಾರದಾ ಹುಲಿ ನಾಯಕ   ಕಾಂಗ್ರೆಸ್ ಸೇರ್ಪಡೆ ರಾಯಚೂರು,ಏ.26- ಗ್ರಾಮೀಣ ವಿಧಾನಸಭಾ ಕ್ಷೇತ್ರದ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ  ಬಸನಗೌಡ ದದ್ದಲ್  ರವರ ಸಮ್ಮುಖದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಯಚೂರು ಡಾ. ಶಾರದ ಹುಲಿ ನಾಯಕ ರವರು  ಕಾಂಗ್ರೆಸ್  ಪಕ್ಷದ ತತ್ವ ಸಿದ್ಧಾಂತಗಳನ್ನು ಹಾಗೂ ಶಾಸಕರ  ಸರಳತೆ, ಮತ್ತು ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇಂದು ಅಧಿಕೃತವಾಗಿ  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.  ಈ ಮೂಲಕ ಗ್ರಾಮೀಣ ಕ್ಷೇತ್ರದಲ್ಲಿ ಕೈ ಬಲಪಡಿಸಿದಂತಾಗಿದೆ. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ವಕೀಲ, ರಂಗನಾಥ ತಿಮ್ಮಪ್ಪ, ಉದಯ ಕುಮಾರ  ಆಲ್ಕೂರ, ನರಸಿಂಹ, ಭೀವೇಶ,ವಿರೇಶ,ರೋಸಯ್ಯ, ಪಕ್ಷದ ಹಿರಿಯ ಮುಖಂಡರುಗಳು, ಸುತ್ತಮುತ್ತಲಿನ ಹಿರಿಯ ಮುಖಂಡರುಗಳು  ಕಾರ್ಯಕರ್ತರು  ಪಕ್ಷ ಸೇರ್ಪಡೆಯಾದರು.

ಎಪ್ಪತ್ತು ವರ್ಷದಲ್ಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು: ಬುಡಕಟ್ಟು ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಅವಿರತ ಪ್ರಯತ್ನ-ಅರ್ಜುನ್ ಮುಂಡಾ

Image
  ಎಪ್ಪತ್ತು ವರ್ಷದಲ್ಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು: ಬುಡಕಟ್ಟು ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಅವಿರತ ಪ್ರಯತ್ನ- ಅರ್ಜುನ್ ಮುಂಡಾ ರಾಯಚೂರು,ಏ.೨೫-ದೇಶದಲ್ಲಿರುವ ಬುಡುಕಟ್ಟು ಜನಾಂಗವನ್ನು ಮುಖ್ಯ ವಾಹಿನಿಗೆ ತರಲು ಪ್ರಧಾನಿ ನರೇಂದ್ರ ಮೋದಿಯವರು ಅವಿರತ ಪ್ರಯತ್ನ ಮಾಡುತ್ತಿದ್ದಾರೆಂದು ಕೇಂದ್ರ ಬುಡಕಟ್ಟು ಖಾತೆ ಸಚಿವ ಹಾಗೂ ಜಾರ್ಖಂಡ್ ಮಾಜಿ ಸಿಎಂ ಅರ್ಜುನ್ ಮುಂಡಾ ಹೇಳಿದರು. ಅವರಿಂದು ಬಿಜೆಪಿ ಕಾರ್ಯಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ  ಮೋದಿಯವರ ನೇತೃತ್ವದಲ್ಲಿ ದೇಶವು ಪ್ರಗತಿ ಸಾಧಿಸುತ್ತಿದೆ ದಲಿತ, ಬುಡಕಟ್ಟು ಸಮುದಾಯದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದ ಅವರು ಕಳೆದ ೧೦ ವರ್ಷದಲ್ಲಿ ಮೋದಿಯವರ ನೇತೃತ್ವದಲ್ಲಿ ಸರ್ಕಾರ ಅನೇಕ ಅಭಿವೃದ್ದಿ ಮಾಡಿದೆ ಎಪ್ಪತ್ತು ವರ್ಷ ದೇಶ ಆಳಿದ ಕಾಂಗ್ರೆಸ್ ಸರ್ಕಾರ ದೇಶಕ್ಕೆ ನೀಡಿದ ಕೊಡುಗೆ ಏನು ಅವರ ದುರಾಡಳಿತದಿಂದ ದೇಶವು ದುಸ್ಥಿಗೆ ಇಳಿದಿತ್ತು ಮೋದಿಯವರು ದೇಶವನ್ನು ವಿಶ್ವಗುರು  ಮಾಡಲು ಹೊರಟಿದ್ದಾರೆ ಎಂದರು. ನಿರ್ಲಕ್ಷಿತ ಸಮುದಾಯಗಳ ವ್ಯಕ್ತಿಗಳನ್ನು ಇಂದು ರಾಷ್ಟçಪತಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ದೇಶದ ಎಲ್ಲ ವರ್ಗದ ಜನರಿಗೆ ಸೌಲಭ್ಯ ನೀಡಲಾಗುತ್ತಿದೆ ದೇಶದ ಸುಮಾರು ೨೫ ಕೋಟಿಗೂ ಅಧಿಕ ಸಂಖ್ಯೆಯ ಜನರು ಪ್ರಧಾನಿಯ ಮನ ಕಿ ಬಾತ್ ಕೇಳುತ್ತಿದ್ದಾರೆ ಮನ ಕಿ ಬಾತ್ ೧೦೦ ಕಂತುಗಳು ಸಮೀಪಿಸುತ್ತಿವೆ ಎಂದ ಅವರು  ಮೋದಿಯವರು ಸಮಾನ್ಯರೊಂದಿಗೆ...

ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಶಾಲಂ ಜಯ ಖಚಿತ: ಪಕ್ಷದ ಅಧಿಕೃತ ಅಭ್ಯರ್ಥಿ ಗೆಲುವಿಗೆ ಸಕಲ ಪ್ರಯತ್ನ- ರವಿ ಬೋಸರಾಜು

Image
  ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಶಾಲಂ ಜಯ ಖಚಿತ: ಪಕ್ಷದ ಅಧಿಕೃತ ಅಭ್ಯರ್ಥಿ ಗೆಲುವಿಗೆ ಸಕಲ ಪ್ರಯತ್ನ- ರವಿ ಬೋಸರಾಜು ರಾಯಚೂರು,ಏ.೨೪-ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಮೊಹಮ್ಮದ್ ಶಾಲಂ ಖಚಿತವಾಗಿ ಗೆಲ್ಲಲಿದ್ದು ತಾವು ಚುನಾವಣೆ ಕಣದಿಂದ ಹಿಂದಕ್ಕೆ ಸರಿದಿದ್ದು ನಾಮ ಪತ್ರ ವಾಪಸ್ ಪಡೆದಿದ್ದೇನೆಂದು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಹೇಳಿದರು. ಅವರಿಂದು ನಗರದ ಸಹಾಯಕ ಆಯುಕ್ತರು ಮತ್ತು ಚುನಾವಣಾಧಿಕಾರಿ ರಜನಿಕಾಂತರವರ ಕಚೇರಿಯಲ್ಲಿ ನಾಮಪತ್ರ ಹಿಂಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಗರಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿ ಮೊಹಮ್ಮದ ಶಾಲಂ ರವರಿಗೆ ಪಕ್ಷದ ವರಿಷ್ಟರು ಟಿಕೆಟ್ ನೀಡಿದ್ದು ಅದಕ್ಕೆ ತಾವೆಲ್ಲರೂ ಬದ್ಧರಾಗಿದ್ದು ಒಗ್ಗಟ್ಟಿನಿಂದ ಶ್ರಮಿಸಿ ಪಕ್ಷ ಸೂಚಿ ಸಿ ದ ಅಭ್ಯರ್ಥಿಯ ಗೆಲುವಿಗೆ ಸಕಲ ರೀತಿಯಲ್ಲಿ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು. ಈ ಬಾರಿ ನಗರದ ಮತದಾರರು ಬದಲಾವಣೆ ಬಯಸಿದ್ದು ಕಾಂಗ್ರೆಸ್ ಅಭ್ಯರ್ಥಿ ಹೋದ ಕಡೆಗಳೆಲ್ಲ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಬೆಂಬಲ ವ್ಯಕ್ತಪಡಿಸುತ್ತಿದ್ದು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ನಿಶ್ಚಿತವೆಂದ ಅವರು ಕಾಂಗ್ರೆಸ್ ಪಕ್ಷದಿಂದ ತಮಗೆ ಟಿಕೆಟ್ ದೊರೆಯಲಿಲ್ಲವೆಂದು ಕೆಲವರು ಅಸಮಾಧಾನಗೊಂಡು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು ಅವರನ್ನು ಮನವೊಲಿಸಿ ನಾಮಪತ್ರ ಹಿಂಪಡೆಯಲು ಕೋರಾ...

ನಗರ ಕ್ಷೇತ್ರ ತಿರಸ್ಕೃತ ನಾಮಪತ್ರಗಳ ಸ್ವೀಕೃತಿ : ಚುನಾವಣಾಧಿಕಾರಿ ರಜನಿಕಾಂತ್ ವಿರುದ್ಧ ದೂರು - ವಿರುಪಾಕ್ಷಿ

Image
 ನಗರ ಕ್ಷೇತ್ರ ತಿರಸ್ಕೃತ ನಾಮಪತ್ರಗಳ  ಸ್ವೀಕೃತಿ :   ಚುನಾವಣಾಧಿಕಾರಿ ರಜನಿಕಾಂತ್ ವಿರುದ್ಧ ದೂರು - ವಿರುಪಾಕ್ಷಿ ರಾಯಚೂರು,ಏ.೨೪-ತಿರಸ್ಕೃತಗೊಂಡ ನಾಮಪತ್ರಗಳನ್ನು ಏಕಾಏಕಿ ಸ್ವೀಕೃತಿ ಮಾಡಿರುವ ಸಹಾಯಕ ಆಯುಕ್ತ ಮತ್ತು ಚುನಾವಣಾಧಿಕಾರಿ ರಜನಿಕಾಂತ್ ಚೌಹಾಣ ವಿರುದ್ಧ ಕೇಂದ್ರ ಮತ್ತು ರಾಜ್ಯ ಚುನಾವಣಾ ಅಯೋಗಕ್ಕೆ ದೂರು ನೀಡಲಾಗುತ್ತದೆ ಮತ್ತು ಹೈಕೋರ್ಟ್ನಲ್ಲಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ವಿಧಾನಸಭೆ ಚುನಾವಣೆ ಅಂಗವಾಗಿ ನಗರಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ನಂತರ ನಾಮಪತ್ರ ಪರಿಶೀಲನೆ ಸಭೆಯಲ್ಲಿ ತಿರಸ್ಕೃತಗೊಂಡ ರಾಮನಗೌಡ ಸೇರಿದಂತೆ ಮೂರು ನಾಮಪತ್ರಗಳನ್ನು  ಮರು ಸ್ವೀಕೃತಿ ಮಾಡಿಕೊಳ್ಳಲಾಗಿದೆ ಇದೆ ವೇಳೆ ಸೈಯದ ಯಾಸೀನ್, ಬಷೀರುದ್ದೀನ್ ಮತ್ತಿತರರ ನಾಮಪತ್ರಗಳನ್ನು ಅಪೂರ್ಣ ಮಾಹಿತಿ ಮತ್ತು ದಾಖಲೆಗಳ ಕೊರತೆ ಕಾರಣ ನೀಡಿ ತಿರಸ್ಕಾರ ಮಾಡಲಾಗಿದ್ದು ಚುನಾವಣಾಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದು ಇದರಲ್ಲಿ ಆಕ್ರಮ ನಡೆದಿದೆ ಎಂದು ದೂರಿದರು. ರಜನಿಕಾಂತ್ ರವರು ಸಹಾಯಕ ಆಯುಕ್ತರಾಗಿ ಈ ಹಿಂದೆ ಅನೇಕ ಅರ್ ಅರ್ ಟಿ ಪ್ರಕರಣಗಳಲ್ಲಿ ವಿಚಾರಣೆ ನಡೆಸದೆ ಏಕಪಕ್ಷೀಯವಾಗಿ ಪ್ರಕರಣ ಇತ್ಯರ್ಥ ಮಾಡಿದ್ದಾರೆಂದು ವಕೀಲರ ಸಂಘದಿAದ ಜಿಲ್ಲಾಧಿಕಾರಿಗÀಳಿಗೆ ದೂರು ನೀಡಲಾಗಿತ್ತು ಅದರಂತೆ ಇಲ್ಲಿಯೂ ಅವ...

ಬಿಜೆಪಿ ಮಾಜಿ ನಗರಸಭೆ ಸದಸ್ಯ ಆಂಜನೇಯ ಯಕ್ಲಾಸಪೂರ, ರಾಮು ಗಿಲೇರಿ ಕಾಂಗ್ರೆಸ್ ಸರ‍್ಪಡೆ: ಕಾಂಗ್ರೆಸ್ ಪಕ್ಷ ಸಂಪರ‍್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ -ಎನ್.ಎಸ್.ಬೋಸರಾಜು

Image
ಬಿಜೆಪಿ ಮಾಜಿ ನಗರಸಭೆ ಸದಸ್ಯ ಆಂಜನೇಯ ಯಕ್ಲಾಸಪೂರ, ರಾಮು ಗಿಲೇರಿ ಕಾಂಗ್ರೆಸ್ ಸರ‍್ಪಡೆ: ಕಾಂಗ್ರೆಸ್ ಪಕ್ಷ ಸಂಪರ‍್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ -ಎನ್.ಎಸ್.ಬೋಸರಾಜು  ರಾಯಚೂರು, ಏ.೨೩-ಸುಮಾರು ೧೦ ರ‍್ಷಗಳಿಂದ ನಗರದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ಆಗಿಲ್ಲ, ಜನ ಸಾಮಾನ್ಯರು ಸಾಕಷ್ಟು ಸಮಸ್ಯೆಗಳನ್ನು ನಮ್ಮ ಬಳಿ ಹೇಳಿಕೊಳ್ಳುತ್ತಿದ್ದಾರೆ, ಈ ಬಾರಿ ೪೦% ಭ್ರಷ್ಟಾಚಾರದ ರ‍್ಕಾರವನ್ನು ಕಿತ್ತೊಗೆಯಲು ನಾವೆಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ರಾಯಚೂರಿನ ಅಭಿವೃದ್ದಿ ರ‍್ವ ಪ್ರಾರಂಭವಾಗಲಿದೆ ಎಂದು ಎಐಸಿಸಿ ಕರ‍್ಯರ‍್ಶಿ ಎನ್.ಎಸ್.ಬೋಸರಾಜು ಹೇಳಿದರು. ನಗರದ ನಿಜಲಿಂಗಪ್ಪ ಕಾಲೋನಿ ಬಡಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸರ‍್ಪಡೆ ಕರ‍್ಯಕ್ರಮದಲ್ಲಿ ನೂರಾರು ಕರ‍್ಯರ‍್ತರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದರು.  ಕಾಂಗ್ರೆಸ್ ಸಿದ್ಧಾಂತ ಹಾಗೂ ಎಐಸಿಸಿ ಕರ‍್ಯರ‍್ಶಿ ಎನ್.ಎಸ್.ಬೋಸರಾಜು ಅವರ ನಾಯಕತ್ವ ಹಾಗೂ ಕಾಂಗ್ರೆಸ್ ಅಭ್ರ‍್ಥಿಯಾದ ಮೊಹಮ್ಮದ್ ಶಾಲಂ ಅವರ ಸರಳತೆ ಮೆಚ್ಚಿ ವರ‍್ಡ್ ನಂ. ೧೪, ೩೪ರ ಬಿಜೆಪಿಯ ಮಾಜಿ ನಗರಸಭೆ ಸದಸ್ಯರುಗಳಾದ ರಾಮು ಗಿಲೇರಿ ಹಾಗೂ ಯಕ್ಲಾಸಪೂರ ಆಂಜನೇಯ ಅವರು ನೂರಾರು ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸರ‍್ಪಡೆಯಾದರು. ನಂತರ ಸರ‍್ಪಡೆಯಾದ ಬಿಜೆಪಿ ಮಾಜಿ ನಗರಸಭೆ ಸದಸ್ಯ ಆಂಜನೇಯ ಮಾತನಾಡಿ, ರಾಯ...

ಅಕ್ಷಯ ತೃತಿಯ: ಕಾಡ್ಲೂರು ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಶ್ರೀ ಪ್ರಾಣದೇವರಿಗೆ ಗಂಧ ಲೇಪನ

Image
 ಅಕ್ಷಯ ತೃತಿಯ: ಕಾಡ್ಲೂರು ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಶ್ರೀ ಪ್ರಾಣದೇವರಿಗೆ ಗಂಧ ಲೇಪನ ರಾಯಚೂರು,ಏ.೨೩- ಅಕ್ಷಯ ತೃತಿಯ ಅಂಗವಾಗಿ ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ಶ್ರೀ ವನವಾಸಿ ರಾಮದೇವರಿಗೆ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಶ್ರೀ ಪ್ರಾಣದೇವರಿಗೆ ಗಂಧ ಲೇಪನ ಮಾಡಲಾಯಿತು.   ಅಕ್ಷಯ ತೃತಿ ಯ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವು ಗಂಧ ಲೇಪನ ಮತ್ತು ವಿಶೇಷ ಪೂಜೆ  ನೆರವೇರಿಸಲಾಯಿತು. ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

ಜಿಲ್ಲಾಡಳಿತದಿಂದ ಸರಳ ಹಾಗೂ ಅರ್ಥಪೂರ್ಣವಾಗಿ ಶ್ರೀ ಬಸವೇಶ್ವರ ಜಯಂತಿ ಆಚರಣೆ

Image
  ಜಿಲ್ಲಾಡಳಿತದಿಂದ   ಸರಳ ಹಾಗೂ ಅರ್ಥಪೂರ್ಣವಾಗಿ    ಶ್ರೀ ಬಸವೇಶ್ವರ ಜಯಂತಿ ಆಚರಣೆ ರಾಯಚೂರು,ಏ.೨೩- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.  ಏ.೨೩ ಭಾನುವಾರ ನಗರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿಗೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.  ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣವರ, ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಐಕ ನಿರ್ದೇಶಕಿ ಮಂಗಳಾ ನಾಯಕ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

ವಿಶ್ವದತ್ತಾ ಇನ್ಸ್ಟಿಟ್ಯೂ ಟ್ ಅಫ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳ ಸಾಧನೆ

Image
  ವಿಶ್ವದತ್ತಾ  ಇನ್ಸ್ಟಿಟ್ಯೂ ಟ್ ಅಫ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳ ಸಾಧನೆ ರಾಯಚೂರು,ಏ.೨೨- ದ್ವಿತಿಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ನಗರದ ವಿಶ್ವದತ್ತಾ ಇನ್ಸಿ÷್ಟಟ್ಯೂಟ್ ಅಪ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.                                        ಪ್ರತಿಷ್ಟಿತ ಕಾನ್ವೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಾದ ಮೇಘನಾ ಕೌಶಿಕ್ ೫೭೮ ಅಂಕಗಳು, ಜಯಶ್ರೀ ೫೭೨ ಅಂಕ, ಕೆ.ಅನುಷಾ ೫೬೪ ಅಂಕ, ಶಕುಂತಲಾ ೫೫೯ ಅಂಕ,ಕೆ.ವರ್ಷಿತಾ ೫೫೫ ಅಂಕ, ಸಹನಾ ೫೪೯, ಕೆ.ಶಾರದಾ ೫೩೮ ಅಂಕ, ತಾರೇಶ ೫೩೦ ಅಂಕ, ಖೂಷಿ ಕುಮಾರಿ ೫೨೮ ಅಂಕ,ಜಿಮಾಮಾ ಜುಲಿಯಾ ೫೨೨ ಅಂಕ, ಸಲೀನಾ ಎನ್ಜೆಲ್ ೫೧೭ ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ. ವಿಶ್ವದತ್ತಾ ಇನ್ಸಿ÷್ಟಟ್ಯೂಟ್ ಅಪ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮುಖ್ಯಸ್ಥರಾದ ವಿಶ್ವನಾಥ ಭಟ್  ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಂತ್ರಾಲಯ: ಪವಿತ್ರ ರಂಜಾನ ಹಬ್ಬದಂಗವಾಗಿ ಶ್ರೀಗಳ ಆಶೀರ್ವಾದ ಪಡೆದ ಮುಸ್ಲಿಂ ಬಾಂಧವರು

Image
  ಮಂತ್ರಾಲಯ: ಪವಿತ್ರ ರಂಜಾ ನ್   ಹಬ್ಬದಂಗವಾಗಿ ಶ್ರೀಗಳ ಆಶೀರ್ವಾದ ಪಡೆದ ಮುಸ್ಲಿಂ ಬಾಂಧವರು ರಾಯಚೂರು,ಏ.೨೨-ಪವಿತ್ರ ರಂಜಾನ್ ಹಬ್ಬದಂಗವಾಗಿ ಮುಸ್ಲಿಂ ಬಾಂಧವರು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರಿ0ದ ಪರಿಮಳ ಪ್ರಸಾದ ಮತ್ತು ಆಶೀರ್ವಾದ ಪಡೆದರು. ನಂತರ ಅನುಗ್ರಹ ಸಂದೇಶ ನೀಡಿದ ಪೀಠಾಧಿಪತಿಗಳು ರಂಜಾನ್ ಹಬ್ಬದ ಶುಭಾಷಯ ಕೋರಿ ರಾಯರು ನಿಮಗೆಲ್ಲ ಆನುಗ್ರಹಿಸಿಲಿ ಎಂದರು. ನಿಮ್ಮ ಧರ್ಮ ಪಾಲನೆ ಮಾಡಿ ಎಲ್ಲರೊಂದಿಗೆ ಸೌಹಾರ್ದಯುತವಾಗಿ ಜೀವನ ನಡೆಸಿ ಸಹ ಬಾಳ್ವೆಯಿಂದ ಒಳಿತು ಸಾಧ್ಯವೆಂದರು.

ಎಸ್ ಆರ್ ಪಿ ಎಸ್ ಪಿಯು ಕಾಲೇಜಿಗೆ ಶೇ.೮೩ ರಷ್ಟು ಫಲಿತಾಂಶ

 ನಗರದ  ಪತ್ರತಿಷ್ಠತ ತಾರಾನಾಥ ಶಿಕ್ಷಣ ಸಂಸ್ಥೆಯ  ಎಸ್ ಆರ್ ಪಿ ಎಸ್ ಪಿಯು ಕಾಲೇಜಿಗೆ ಶೇ.೮೩ ರಷ್ಟು ಫಲಿತಾಂಶ ಲಭಸಿದೆ. ಕಾಲೇಜಿನ ೨೩ ವಿದ್ಯಾರ್ಥಿಗಳು ಅತ್ಯತನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ ೧೦೯, ದ್ವಿತೀಯ ದರ್ಜೆಯಲ್ಲಿ ೬೩ ತೃತೀಯ ಶ್ರೇಣಿಯಲ್ಲಿ ೪೨ ವಿದ್ಯಾಥಿಗಳು ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಕಾಲೇಜು ಆಡಳಿತ ಮಂಡಳಿಯವರು, ಪ್ರಾಚಾರ್ಯರು ಸಿಬ್ಬಂದಿ ಅಭಿನಂದಿಸಿದ್ದಾರೆ.

ಸಂಭ್ರಮ ಸಡಗರದಿಂದ ರಂಜಾನ್ ಹಬ್ಬ ಆಚರಣೆ

Image
  ಸಂಭ್ರಮ ಸಡಗರದಿಂದ ರಂಜಾನ್ ಹಬ್ಬ ಆಚರಣೆ ರಾಯಚೂರು,ಏ.೨೨-ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.  ಬೆಳಿಗ್ಗೆ ನಗರದ ಜಿಲ್ಲಾ ನ್ಯಾಯಾಲಯ ಬಳಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾ ರ್ಥ ನೆ  ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಿ ಪರಸ್ಪರ ಆಲಂಗಿಸಿ ಶುಭಾಷಯ ವಿನಿಮಯ ಮಾಡಿ ಹಬ್ಬವನ್ನು ಆಚರಿಸಿದರು. ಸಾಲಾಗಿ ಕುಳಿತು ಪ್ರಾರ್ಥನೆ ಮಾಡಿ ಹಬ್ಬವನ್ನು ಆಚರಿಸಿದರು. ಒಂದು ತಿಂಗಳ ಪರ್ಯಂತರ ರಂಜಾನ್ ಹಬ್ಬದಂಗವಾಗಿ ರೋಜಾ ಯಿರುವ ಮುಸ್ಲಿಂ ಬಾಂಧವರು ಇಂದು ಹೊಸ  ಬ ಟ್ಟೆ ಧರಿಸಿ ಗುರುಹಿರಿಯರಿಗೆ ನಮಿಸಿ ಹಬ್ಬವನ್ನು ಆಚರಿಸಿದರು. ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ, ಮಾಜಿ ಶಾಸಕ ಸೈಯದ್ ಯಾಸೀನ್, ಯುವ ಮುಖಂಡರಾದ ರವಿ ಬೋಸರಾಜು, ನಗರಸಭೆ ಮಾಜಿ ಅಧ್ಯಕ್ಷ ಈ.ವಿನಯ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಮುಖಂಡರಾದ ದೇವಣ್ಣ ನಾಯಕ, ಕೆ.ಶಾಂತಪ್ಪ, ವೈ.ಗೋಪಾಲ ರೆಡ್ಡಿ, ಎನ್.ಶಿವಶಂಕರ,  ಡಿ.ವಿರೇಶ, ಶ್ರೀನಿವಾಸ್ ರೆಡ್ಡಿ ಸೇರಿದಂತೆ ಅನೇಕರಿದ್ದು ಶುಭಾಷಯ ಕೋರಿದರು.