ಶ್ರೀ ಶ್ರೀ 1008 ಶ್ರೀವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ದಂಡೋದಕ ಸ್ನಾನ, ಸೀಮೋಲ್ಲoಘನ
ಶ್ರೀ ಶ್ರೀ 1008 ಶ್ರೀವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ದಂಡೋದಕ ಸ್ನಾನ, ಸೀಮೋಲ್ಲoಘನ ರಾಯಚೂರು,ಸೆ.30- ಚಾತುರ್ಮಾಸದ ಪರ್ಯಂತ ಶ್ರೀಮಠದಲ್ಲಿ ಹೋಮ, ಹವನ ಮತ್ತು ಶ್ರೀಭಾಗವತ ಪುರಾಣ ವಿಶೇಷವಾದ ಶಕ್ತಿ ನಿರ್ಮಾಣವಾಗಿದೆ, ಭಕ್ತರು ಶ್ರೀ ಮಠದ ಅಭಿವೃದ್ಧಿ ಮತ್ತು ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಸಹಕರಿಸಬೇಕೆಂದು ಶ್ರೀಮತ್ ಕಣ್ವ ಮಠ ಹುಣಸಿಹೊಳೆಯ, ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರ ತಮ್ಮ ಚತುರ್ಥ ಚಾತುರ್ಮಾಸ್ಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಈ ಬಾರಿಯ ಚಾತುರ್ಮಾಸ್ಯದಲ್ಲಿ ಭಕ್ತರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಶ್ರೀವಿಠ್ಠಲಕೃಷ್ಣನ ದರ್ಶನ ಪಡೆದು ಚಾತುರ್ಮಾಸ್ಯವನ್ನು ವಿಜೃಂಭಣೆಯಿಂದ ಸಂಪನ್ನಗೊಳಿಸಿದರು, ವಿಶೇಷವಾಗಿ ಮಹಿಳೆಯರು ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು ಗಣನೀಯ ಸೇವೆ ಸಲ್ಲಿಸಿದ್ದಾರೆ ಚಾತುರ್ಮಾಸ್ಯದ ಫಲ ಸಕಲ ಭಕ್ತರಿಗೂ ತಲುಪಲಿದೆ ಎಂದರು._ ಬೆಳಿಗ್ಗೆ ಶ್ರೀಮನ್ ಮಾಧವತೀರ್ಥರ ತಪೋಭೂಮಿ, ವೀರಘಟ್ಟದ ಕೃಷ್ಣಾ ನದಿ ತಟದಲ್ಲಿ ನೂರಾರು ಭಕ್ತರೊಂದಿಗೆ ದಂಡೋದಕ ಸ್ನಾನ, ಸಕಲ ವಿಧಿ ವಿಧಾನಗಳೊಂದಿಗೆ ತಮ್ಮ ಚಾತುರ್ಮಾಸ ಸಂಕಲ್ಪವನ್ನು ಸಂಪೂರ್ಣಗೊಳಿಸಿದರು, ನಂತರ ಶ್ರೀಮನ್ ಮಾಧವತೀರ್ಥರ ತಪೋಭೂಮಿ ವೀರಘಟ್ಟದಲ್ಲಿ ಮಂಗಳಾರತಿ ಮಾಡಿ ದರ್ಶನ ಪಡೆದು, ವೀರಘಟ್ಟದಿಂದ ಸಕಲ ವಾದ್ಯ, ತಾಳ ಮೇಳಗಳೊಂದಿಗೆ ಶುಭಯಾತ್ರೆ ಮೂಲಕ ಹುಣಸಿಹೊ...