Posts

Showing posts from March, 2025
Image
ಜಿಡ್ಗಾ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಶ್ರೀಮಠದ ಸನ್ನಿದಾನದಲ್ಲಿ ಶ್ರೀ ಶೈಲದಿಂದ ಮರಳುವ ಯಾತ್ರಾರ್ಥಿಗಳಿಗೆ ದಾಸೋಹ ವೈದ್ಯೋಪಚಾರ                                  ಜಯಧ್ವಜ ನ್ಯೂಸ್ ರಾಯಚೂರು, ಮಾ.31- ನಗರದ ಹೊರ ವಲಯದ ಜಗದ್ಗುರು ರೇಣುಕಾಚಾರ್ಯ ವೃತ್ತದ ಹತ್ತಿರವಿರುವ ಜಿಡ್ಗಾ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಶ್ರೀಮಠದ ಸನ್ನಿದಾನದ ಆವರಣದಲ್ಲಿ ನಗರದ ಡ್ಯಾಡಿ ಕಾಲೋನಿಯ ಈಶ್ವರ ದೇವಸ್ಥಾನದ ಸಮಿತಿ ಹಾಗೂ ರಾಯಚೂರ ನಗರದ ಸದ್ಭಕ್ತರ ಸಹಾಯ ಸಹಕಾರದಿಂದ ಸುಮಾರ 45  ಸಾವಿರಕ್ಕೂ ಹೆಚ್ಚು ಶ್ರೀಶೈಲದಿಂದ ವಾಪಸ ಮರಳುವ ಭಕ್ತರಿಗೆ ಮಹಾ ಪ್ರಸಾದ ಮತ್ತು ಉಚಿತ ಚಿಕಿತ್ಸೆ ಮತ್ತು ಔಷಧ ವಿತರಿಸಲಾಯಿತು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರು, ನಗರದ ಈಶ್ವರ ದೇವಸ್ಥಾನದ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಮಿರ್ಜಾಪೂರ ಹೇಳಿದರು. ಸರ್ವ ಸದ್ಭಕ್ತರು ಮಹಾ ಪ್ರಸಾದವನ್ನು ಸ್ವೀಕರಿಸಿದ್ದು ಸಾಕ್ಷಾತ್ ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಅರ್ಪಿಸಿದ ತೃಪ್ತಿ ನಮಗಾಗಿದೆ ಎಂದು ಹೇಳಿದರು. ನಂತರ ರಿಮ್ಸ್ ಆಸ್ಪತ್ರೆಯ ಡಾ. ಬಸನಗೌಡ ಪಾಟೀಲ ಮಾತನಾಡಿ ಶ್ರೀಶೈಲಕ್ಕೆ ತೆರಳಿ ವಾಪಸ್ ಬಂದಂತ ಭಕ್ತರಿಗೆ ನಮ್ಮ ಪ್ರತಿಯೊಬ್ಬ ವೈಧ್ಯರೂ ಭಕ್ತರನ್ನು ಸ್ವಂತ ಮಕ್ಕಳಂತೆ ಕಂಡು ಅವರಿಗೆ ಚಿಕಿತ್ಸೆ ನೀಡಿ ಅವರು ಅರಾಮವಾದ ನಂತರ ಮಹಾ ಪ...
Image
  ನಗರದಲ್ಲಿ ಸಂಭ್ರಮದಿಂದ ರಂಜಾನ್‌ ಆಚರಣೆ ರಾಯಚೂರು ಮಾ.31  ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ಹಬ್ಬ ರಂಜಾನ್‌ ಸಡಗರ, ಸಂಭ್ರಮದಿಂದ ಇಂದು ಆಚರಿಸಿದರು. ರಂಜಾನ್‌ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಉಪವಾಸ ವೃತ ಮಾಡಿದ್ದ ಮುಸ್ಲಿಂ ಬಾಂಧವರು ಬೆಳಗ್ಗೆ ಹೊಸ ಬಟ್ಟೆ ಧರಿಸಿ, ನಗರದ ವಿವಿಧ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ನಗರದ ಹೊಸ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಜಿಲ್ಲಾಡಳಿತ,  ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು. ತಮ್ಮ ಮಕ್ಕಳೊಂದಿಗೆ ಈದ್ಗಾ ಮೈದಾನಕ್ಕೆ ಆಗಮಿಸಿದ್ದ ಮುಸ್ಲಿಂ ಬಾಂಧವರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಜಿಲ್ಲಾಧಿಕಾರಿಗಳಿಂದ ಶುಭಾಶಯ: ನಗರದ ಹೊಸ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯ ಬಳಿಕ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯವನ್ನು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಕೋರಿದರು.  ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಾದ ಜುಬೀನ್ ಮೊಹಾಪಾತ್ರ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಾದ ಸಂಗಮೇಶ, ಮುಖಂಡರಾದ ರವಿ ಭೋಸರಾಜ್, ರವಿ ಪಾಟೀಲ್ ಸೇರಿದಂತೆ ಪಾಲಿಕೆ ವಿವಿಧ ಸದ...
Image
  ಸಮಾಜ ಹಾಗೂ ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತಿಮುಖ್ಯ - ಎನ್ ಎಸ್ ಬೋಸರಾಜು . ಜಯಧ್ವಜ ನ್ಯೂಸ್, ರಾಯಚೂರು,ಮಾ.31- ಪ್ರತಿಯೊಂದು ಕುಟುಂಬ ಕುಟುಂಬದ ಅಭಿವೃದ್ಧಿ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆ ತಮ್ಮದೇ ಅದ ಪಾತ್ರವನ್ನು ವಹಿಸುತ್ತಾಳೆ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ ಉದಾಹರಣೆಗಳನ್ನು ನೋಡುತ್ತೇವೆ  ಹಾಗಾಗಿ ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆ ತನ್ನದೇ ಪಾತ್ರವನ್ನು ವಹಿಸಿದ್ದಾಳೆ ಎಂದು  ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ   ಎನ್ ಎಸ್ ಬೋಸರಾಜು ಹೇಳಿದರು   ಅವರು ನಿನ್ನೆ ಶ್ರೀಗಿರಿ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ ಮಾರುತಿ ನಗರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ 40 ನೇ ಶಿವಾನುಭವ ಚಿಂತನಾಗೋಷ್ಠಿಯ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ರಾಯಚೂರಿನಲ್ಲಿ ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್, ಕೃಷಿ , ಕಲಾ, ವಾಣಿಜ್ಯ, ಸಂಗೀತ ಎಲ್ಲಾ ವಿವಿಧ ಕ್ಷೇತ್ರಕ್ಕೇ ಸಂಬಂದಿಸಿದ ಕಾಲೇಜುಗಳಿದ್ದು ಹಾಗೆ ರಾಯಚೂರ್ ವಿಶ್ವವಿದ್ಯಾಲಯ ಇದ್ದು ಎಲ್ಲರೂ ತಮ್ಮ ಮಕ್ಕಳ ಉನ್ನತ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣವನ್ನು ನೀಡಬೇಕೆಂದು ತಿಳಿಸಿದರು. ರಾಯಚೂರು ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದು ಕೆರೆ ರಸ್ತೆ ಉದ್ಯಾನವನ ಅಭಿವೃದ್ಧಿಗೆ ಅಗತ್ಯ ನೀಡುತ್ತೇವೆ ರಾಯಚೂರು ನಗರ ಮಹಾನಗರ ಪಾಲಿಕೆ ಆಗಿ ಮೇಲ್ದರ್ಜೆಗೆ...
Image
  ಬೇಸಿಗೆ ಬೆಳೆ ರಕ್ಷಿಸಲು ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ-  ಬೋಸರಾಜು.              ಜಯಧ್ವಜ ನ್ಯೂಸ್, ರಾಯಚೂರು, ಮಾ.31- ಜಿಲ್ಲೆಯಲ್ಲಿ ನಾರಾಯಣಪೂರು ಬಲದಂಡೆ ನಾಲೆ ಅವಲಂಬಿತ ರೈತರು ಬೆಳೆದಿರುವ ಬೆಳೆ ರಕ್ಷಣೆಗೆ ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಹೇಳಿದರು.                        ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಎನ್ ಆರ್ ಬಿ ಸಿ ಅವಲಂಬಿತ ರೈತರು ಬೇಸಿಗೆ ಭತ್ತ  ಬೆಳೆ ಬೆಳೆದಿದ್ದು ನೀರಿನ ಅಭಾವದಿಂದ ಅವು ಒಣಗುತ್ತಿವೆ ಆದ್ದರಿಂದ ಬೆಳೆ ರಕ್ಷಣೆಗಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ರಾಜ್ಯಕ್ಕೆ ನೀರು ಹರಿಸುವಂತೆ ಕೋರಲಾಗಿದೆ ಎಂದರು. ಇತ್ತೀಚೆಗೆ ನಡೆದ ಐಸಿಸಿ ಸಭೆಯಲ್ಲಿ ವಾರಬಂದಿಯಂತೆ ನಿಗದಿತ ದಿನಾಂಕದವರೆಗೆ  ನೀರು ಬಿಡುಲು ಸಭೆ ನಿರ್ಧರಿಸಿತ್ತು ಆದರೆ ರೈತರ ಒತ್ತಾಯದ ಮೇರೆಗೆ  ನಿರಂತರ ನೀರು ಹರಿಸಿದ ಪರಿಣಾಮ  ನಾರಾಯಣಪೂರು ಜಲಾಶಯ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಕುಡಿಯುವ ನೀರಿಗೆ ಮಾತ್ರ ನೀರಿನ ಸಂಗ್ರಹವಿದ್ದು ಆದ್ದರಿಂದ ಬೆಳೆಗಳ ರಕ್ಷಣೆಗೆ ನೀರು ಬಿಡುವಂತೆ ಮಹಾರಾಷ್ಟ್ರಕ್ಕೆ ಕೋರಲಾಗಿದೆ ಎಂದು ಅವರು ...
Image
  ನನ್ನ ಎಕ್ಸ್ (ಟ್ವಿಟರ್ ) ಖಾತೆಯಲ್ಲಿರುವ ಪೋಸ್ಟ್ ಅಳಿಸಲಾಗಿದ್ದಕ್ಕೆ ದೂರು ದಾಖಲಿಸುತ್ತೇನೆ- ಕುಮಾರ್ ನಾಯಕ .                                                          ಜಯಧ್ವಜ ನ್ಯೂಸ್ , ರಾಯಚೂರು, ಮಾ.31-   ಲೋಕಸಭೆಯಲ್ಲಿ ರಾಯಚೂರಿಗೆ  ಏಮ್ಸ್ ಮಂಜೂರು ಮಾಡಬೇಕೆಂಬ  ಬಗ್ಗೆ  ಸಂಸದ ಸದಸ್ಯ ಡಾ.ಸಿ.ಎನ್.ಮಂಜುನಾಥ್ ರವರು ಮಾತನಾಡಿರುವ ಬಗ್ಗೆ ಅದನ್ನು  ಪ್ರಶಂಸೆ ಮಾಡಿ ನಾನು (ಎಕ್ಸ್) ಟ್ವಿಟರ್ ನಲ್ಲಿ  ಹಾಕಲಾಗಿದ್ದ ಪೋಸ್ಟ್ ನ್ನು ನನ್ನ ಗಮನಕ್ಕೆ ತರದೆ ಅಳಿಸಲಾಗಿದ್ದು ಈ ಬಗ್ಗೆ ಟ್ವಿಟರ್ ಗೆ ದೂರು ನೀಡುವುದಾಗಿ ಸಂಸದರಾದ ಜಿ.ಕುಮಾರ್ ನಾಯಕ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನನ್ನ ಟ್ವಿಟರ್ ಖಾತೆ ಯನ್ನು ನನ್ನ ಗಮನಕ್ಕೆ ತರದೆ ನಾನು ಹಾಕಿದ ಪೋಸ್ಟ್ ಹೇಗೆ ಅಳಿಸಿತು ಎಂಬುದು ಯಕ್ಷಪ್ರಶ್ನೆಯಾಗಿದೆ ಈ ಬಗ್ಗೆ ಟ್ವಿಟರ್ ಸಂಸ್ಥೆಗೆ ದೂರು ನೀಡುತ್ತೇನೆ ಎಂದರು .
Image
ಸಂಸತ್ ನಲ್ಲಿ ಒಮ್ಮುಖ ನಿರ್ಧಾರ :                        ವಿರೋಧ ಪಕ್ಷಗಳ ಸದಸ್ಯರಿಗೆ ಮಾತನಾಡಲು ಸ್ಪೀಕರ್ ಬಿಡುತ್ತಿಲ್ಲ- ಕುಮಾರ್ ನಾಯಕ್.                                                                                                        ಜಯಧ್ವಜ ನ್ಯೂಸ್ ರಾಯಚೂರು ,ಮಾ.31- ಸಂಸತ್ ನಲ್ಲಿ ಕಲಾಪ ವೇಳೆ ವಿರೋಧ ಪಕ್ಷಗಳ ಸದಸ್ಯರಿಗೆ ಮುಕ್ತವಾಗಿ ಮಾತನಾಡಲು ಲೋಕಸಭಾಧ್ಯಕ್ಷರು ಅವಕಾಶ ನೀಡುತ್ತಿಲ್ಲವೆಂದು ಯಾದಗಿರಿ ಮತ್ತು ರಾಯಚೂರು ಲೋಕಸಭಾ ಸದಸ್ಯರಾದ ಜಿ.ಕುಮಾರ್ ನಾಯಕ್ ಆರೋಪಿಸಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಸದೀಯ ಕಾರ್ಯಕಲಾಪಗಳಿಗೆ ಸುಗಮವಾಗಿ ನಡೆಯದೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಕಾರ್ಯಚಟುವಟಿಕೆಗಳು ಸಂಸತ್ ನಲ್ಲಿ ನಡೆಯುತ್ತಿವೆ ಎಂದರು. ಲೋಕಸಭಾ ಸ್ಪೀಕರ್ ರವರು ವಿರೋಧ ಪಕ್ಷಗಳ ಸದಸ್ಯರಿಗೆ ಮಾತನಾಡುವುದಕ್ಕೆ ಅನುಮತಿ ನಿರಾಕರಣೆ ಮಾಡುತ್ತಿದ್...
Image
ಮಂತ್ರಾಲಯ: ಯುಗಾದಿ  ಅಂಗವಾಗಿ ವಿಶೇಷ ಪೂಜೆ.     ಜಯಧ್ವಜ ನ್ಯೂಸ್, ರಾಯಚೂರು,ಮಾ.30-      ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯುಗಾದಿ ಹಬ್ಬ  ವಿಶ್ವವಸುನಾಮ ಸಂವತ್ಸರ   ಅಂಗವಾಗಿ ವಿಶೇಷ ಪೂಜೆ ನೆರವೇರಿತು.       ಬೆಳಿಗ್ಗೆ ಶ್ರೀ ಮನ್ಮೂಲರಾಮದೇವರಿಗೆ ಹಾಗೂ ರಾಯರ ಬೃಂದಾವನಕ್ಕೆ ಹಾಗೂ ಎಲ್ಲಾ ಪೀಠಾಧಿಪತಿಗಳ ಬೃಂದಾವನಕ್ಕೆ  ತೈಲಅಭ್ಯಂಜನ ಮತ್ತು ಮಹಾಮಂಗಳಾರತಿ ನೆರವೇರಿತು ನಂತರ ತುಲಸಿ ಪೂಜೆ , ಗೋಪೂಜೆ ನಡೆಯಿತು. ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ತೈಲ ಅಭ್ಯಂಜನ, ನಾರೀಕೃತ ನೀರಾಜನ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
Image
  ನಗರ ಕೇಂದ್ರ ಗ್ರಂಥಾಲಯಕ್ಕೆ ಜಿಲ್ಲಾಧಿಕಾರಿಗಳು ದಿಢೀರ್ ಭೇಟಿ :                ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಕ್ಕೆ ಸೂಚನೆ   ಜಯಧ್ವಜ ನ್ಯೂಸ್ ,ರಾಯಚೂರು, ಮಾ.29- ನಗರದ ಹೃದಯ ಭಾಗದಲ್ಲಿರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಪುಸ್ತಕಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಅನುಕೂಲವಾಗುವಂತಹ ಪುಸ್ತಕಗಳನ್ನು ಗ್ರಂಥಾಲಯದಲ್ಲಿಡಬೇಕು. ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ಇತರೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂದು ಗ್ರಂಥಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸದ್ಯ ಗ್ರಂಥಾಲಯದ ಒಳಗಡೆ ಮತ್ತು ಹೊರಗಡೆ ಅತ್ಯುತ್ತಮ ವಾತಾವರಣವಿದೆ. ಇದು ಹೀಗೆಯೇ ಮುಂದುವರೆಯಬೇಕು. ವಿದ್ಯಾರ್ಥಿಗಳಿಗೆ ತಕ್ಷಣ ಪುಸ್ತಕಗಳು ಲಭ್ಯವಾಗುವಂತೆ ವಿಷಯವಾರು ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು, ಗ್ರಂಥಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು. ಗ್ರಂಥಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಓದಲು ಬರುತ್ತಾರೆ. ಹೀಗಾಗಿ ಗ್ರಂಥಾಲಯದ ಮೇಲಗಡೆ ಇನ್ನಷ್ಟು ಹೊಸದಾದ ...
Image
  ಹೆಬ್ಬುಲಿ ಕಟ್ ಸಿನಿಮಾದ ಹಾಡುಗಳ  ಬಿಡುಗಡೆ ಸಮಾರಂಭ ಜಯಧ್ವಜ ನ್ಯೂಸ್  ರಾಯಚೂರು,ಮಾ.28- ಸಿನಿಮಾ ಕಲಿತು, ಸುಮಾರು ವರ್ಷಗಳಿಂದ ಶ್ರದ್ಧೆಯಿಂದ ಸಿನಿಮಾದಲ್ಲಿ ದುಡಿದು ದೂರದ ದೊಡ್ಡ ದೊಡ್ಡ ನಗರಗಳಿಗೆ ಹೋಗಿ ತರಬೇತಿ ಪಡೆದ ಸ್ವ ಪ್ರಯತ್ನದಿಂದ ಹೊಸ ಸಿನಿಮಾವೊಂದನ್ನು ನಿರ್ಮಿಸಿ ನಿರ್ದೇಶಿಸಿ ಈಗ ಮೇ ಕೊನೆವಾರದಲ್ಲಿ ತೆರೆಗೆ ತರುವುದಕ್ಕೆ ಮುಂದಾಗಿರುವ ಸ್ಥಳೀಯ ಪ್ರತಿಭೆಗಳನ್ನು ರಾಯಚೂರು ಜನತೆ ಆದರದಿಂದ ಬೆಳೆಸಿ ಬೆನ್ನುತಟ್ಟಬೇಕೆಂದು  ಸಾಯಿಮಂದಿರ ಸಂಸ್ಥಾಪಕರಾದ ಸಾಯಿ ಕಿರಣ ಆದೋನಿ ಹಾಗೂ    ಪತ್ರಕರ್ತ ಗೌಡಪ್ಪ ಗೌಡ ಶುಭಾಶಯ ಕೋರಿದರು. ನಗರದ ಓಂ ಸಾಯಿ ಧ್ಯಾನ ಮಂದಿರದಲ್ಲಿ ಸ್ಥಳೀಯ ರಾಯಚೂರು ಪ್ರತಿಭೆ ಪಿ. ಭೀಮರಾವ್ ಅವರು ನಿರ್ಮಿಸಿ ನಿರ್ದೇಶಿಸಿರುವ ಹೆಬ್ಬುಲಿ ಕಟ್ ಸಿನಿಮಾದ ಲವ್  ಸಾಂಗ್ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರ್ಥಿಕವಾಗಿ ಅಷ್ಟು ಸಬಲರಲ್ಲದ ವ್ಯಕ್ತಿಯೊಬ್ಬರು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಸದಭಿರುಚಿಯ ಚಿತ್ರವನ್ನು ಅತ್ಯಂತ ನಾಜೂಕಾಗಿ ಗ್ರಾಮೀಣ ಸೊಗಡನ್ನೊಳಗೊಂಡು, ಸ್ಥಳೀಯ ಪ್ರತಿಭೆಗಳನ್ನೇ ಹಾಕಿಕೊಂಡು ಸ್ಥಳೀಯವಾಗಿರುವ ವಿಶೇಷ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರ ಇದಾಗಿರುವುದರಿಂದ ನಮ್ಮತನವನ್ನು ರಾಜ್ಯದೆತ್ತರಕ್ಕೆ ಹೋಯ್ದಿರುವ ಪ್ರಯತ್ನಕ್ಕೆ ಬೆಂಬಲಿಸೋಣ ಎಂದು ಆಶಿಸಿದರು. ಆರಂಭದಲ್ಲಿ ಹಿಂದೂ ಜಾಗರಣಾ ವೇದಿಕೆ ಸುವರ್ಣ ಅವರು ಯುಗಾದಿ ಹ...
Image
  ಮಹಾನಗರ ಪಾಲಿಕೆ ಅಯ ವ್ಯಯ ಸಭೆ:                 28.58 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ.                                      ಜಯ ಧ್ವಜ ನ್ಯೂಸ್, ರಾಯಚೂರು,ಮಾ.28- ಮಹಾನಗರ ಪಾಲಿಕೆ ಅಯ ವ್ಯಯ ಮಂಡನೆ ಇಂದು ನೆರವೇರಿತು. ಬೆಳಿಗ್ಗೆ ನಗರದ ಜಿ‌ಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ ಹಾಗೂ ಉಪ ಮಹಾಪೌರರಾದ ಸಾಜಿದ್ ಸಮೀರ್ ರವರು  2025-26 ನೇ ಸಾಲಿನ 28.58 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು. ನಿಗದಿತ ಅವಧಿಗಿಂತ ಇಪ್ಪತ್ತು ನಿಮಿಷ ತಡವಾಗಿ ಬಜೆಟ್ ಸಭೆ ಆರಂಭವಾಯಿತು ಪ್ರಾರಂಭದಲ್ಲಿ ಬೆರಳೆಣಿಕೆ ಸದಸ್ಯರು ಹಾಜರಿದ್ದರು ಆಡಳಿತ ಪಕ್ಷಕ್ಕಿಂತ ವಿರೋಧ ಪಕ್ಷದ ಸದಸ್ಯರೆ ಮೊದಲಿಗೆ  ಆಗಮಿಸಿದ್ದರು. ತದನಂತರ ಬಜೆಟ್ ಆರಂಭಿಸಿದ ಮೇಲೆ ಒಬ್ಬೊಬ್ಬರಾಗಿ ಸದಸ್ಯರು ಬಂದರು. ಮಹಾಪೌರರು ಬಜೆಟ್ ಸಭೆ ಆರಂಭಿಸಿದರು. ಉಪಮಹಾಪೌರ ಸಾಜಿದ್ ಸಮೀರ್ ಯುಗಾದಿ ಮತ್ತು ರಂಜಾನ್ ಹಬ್ಬದ ಶುಭಾಶಯ ಕೋರಿ ಬಜೆಟ್ ಅಂಕಿ ಅಂಶ ಸಭೆಯಲ್ಲಿ ಮಂಡಿಸಿದರು. ಸದಸ್ಯರಾದ ಜಯಣ್ಣ ಮಾತನಾಡಿ ಬಜೆಟ್ ಮಾಹಿತಿಯನ್ನು ಸಭೆಗೆ ಲೆಕ್ಕ ವಿಭಾಗದ ಅಧಿಕಾರಿಗಳು ಮಂಡಿಸಿದ ನಂತರ ಅದರ ಮೇಲೆ ಏನಾದರು ಪ್ರಶ್ನೆಯಿದ್ದರೆ ಚರ್ಚಿಸುವುದು ...
Image
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷೀಯ ಚುನಾವಣೆ:                                            ಅಪಾರ ಬೆಂಬಲಿಗರೊಂದಿಗೆ ಎಸ್. ರಘುನಾಥ್ ನಾಮಪತ್ರ ಸಲ್ಲಿಕೆ                                                            ಜಯಧ್ವಜ ನ್ಯೂಸ್ ರಾಯಚೂರು ಮಾ.27- ಇಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಎಸ್. ರಘುನಾಥ್ ಇವರು ಅಪಾರ ಸಂಖ್ಯೆಯ ಬೆಂಬಲಿಗರರೊಂದಿಗೆ ಬೆಂಗಳೂರಿನ  ದೊಡ್ಡ ಗಣಪತಿ ದೇವಸ್ಥಾನ ದಿಂದ ಮೆರವಣಿಗೆ ಮೂಲಕ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಛೇರಿಗೆ ಆಗಮಿಸಿ ಬೆಳಗ್ಗೆ 11:30ಕ್ಕೆ ನಾಮಪತ್ರ ಸಲ್ಲಿಸಿದರು .                                                         ಈ ಸಂದರ್ಭದಲ್ಲಿ ಹಿರಿಯರಾದ ಲಕ್ಷ್ಮಿಕಾಂತ್ ,ಜಗನ್ನಾಥ್ ಕುಲಕರ್ಣಿ,  ಪ್ರಸನ್ನ ಆ...
Image
  ಸಿಂಧನೂರು ತಾಲೂಕಿನ 1064 ಎಕರೆ ಹೆಚ್ಚುವರಿ ಭೂಪ್ರಕರಣ:                   45 ವರ್ಷ ಕಳೆದರೂ ವಿಚಾರಣೆಗೆ ತೆಗೆದುಕೊಳ್ಳದ ನ್ಯಾಯಾಧೀಕರಣ ಧೋರಣೆ ಖಂಡಿಸಿ ಮುಖ್ಯಮಂತ್ರಿಗಳ ಭೇಟಿಗೆ ನಿಯೋಗ- ಆರ್. ಮಾನಸಯ್ಯ ಜಯ ಧ್ವಜ ನ್ಯೂಸ್, ರಾಯಚೂರು, ಮಾ.27- ಸಿಂಧನೂರು ತಾಲೂಕಿನ 1064 ಎಕರೆ ಹೆಚ್ಚುವರಿ ಭೂ ಪ್ರಕರಣದಲ್ಲಿ 45 ವರ್ಷ ಕಳೆದರು ವಿಚಾರಣೆಗೆ ತೆಗೆದುಕೊಳ್ಳದ ನ್ಯಾಯಾಧೀಕರಣ ಧೋರಣೆ ಖಂಡಿಸಿ ಮುಖ್ಯ ಮಂತ್ರಿ ಭೇಟಿಗೆ ನಿಯೋಗ ತೆರಳಲು ನಿರ್ಧರಿಸಲಾಗಿದೆ ಎಂದು ಸಿಪಿಐ (ಎಂ) ಪಾಲಿಟ್  ಬ್ಯೂರೋ ಸದಸ್ಯ ಆರ್. ಮಾನಸಯ್ಯ ಹೇಳಿದರು. ಅವರಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಭೂ ಸುಧಾರಣೆ ಕಾಯ್ದೆ ಸಮರ್ಪಕ ಜಾರಿಗೆ ಆಗ್ರಹಿಸಿ ಏಪ್ರಿಲ್ ತಿಂಗಳಿನಿಂದ ಹೋರಾಟ ಮತ್ತೊಮ್ಮೆ  ನಡೆಸಲು ನಡೆಸಲು ಚಿಂತಿಸಲಾಗಿದೆ ಎಂದರು.  ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಪದೇ ಪದೇ ಹೆಮ್ಮೆಯಿಂದ ಹೇಳಿಕೊಳ್ಳುವ ಏಕೈಕ ಸಾಧನೆ ಎಂದರೆ ದೇವರಾಜು ಅರಸು ಸರಕಾರ ಜಾರಿಗೆ ತಂದ ಭೂಸುಧಾರಣೆ. ಆದರೆ, ಈ ಭೂಸುಧಾರಣೆಯಿಂದ ಭೂರಹಿತ ದಲಿತರಿಗೆ,ಸಾಗುವಳಿದಾರರಿಗೆ ಭೂಮಿ ಸಿಗಲಿಲ್ಲ. ಭೂನ್ಯಾಯಾಧಿಕರಣ ಹೈಕೋರ್ಟ್ ಹಾಗೂ ಮತ್ತೆ ಭೂನ್ಯಾಯಾಧಿಕರಣವಿಚಾರಣೆ ಹೆಸರಲ್ಲಿರಾಜ್ಯದಲ್ಲಿಬಹುತೇಕ ಹೆಚ್ಚುವರಿ ಭೂಮಿ ದೊಡ್ಡದೊಡ್ಡಭೂಮಾಲೀಕರ ಕೈಯಲ್ಲಿಯೆ ಉಳಿದಿವೆ ಎಂದು ದೂರಿದರು. ಇದಕ್ಕೆ ಜ್ವಲಂತ ಸಾಕ್ಷಿಯಾಗಿ ಸ...
Image
ಏ.5 ರಂದು  ಕರ್ನಾಟಕ ಸಂಘದಲ್ಲಿ ಯುಗಾದಿ ನಿಮಿತ್ಯ ವಸಂತ ಕಾವ್ಯ ವಾಚನ: ನೋಂದಣಿಗೆ ಕೋರಿಕೆ ಜಯ ಧ್ವಜ ನ್ಯೂಸ್ , ರಾಯಚೂರು, ಮಾ.27-ಕರ್ನಾಟಕ ಸಂಘ ರಾಯಚೂರು ಕಲೆ, ಸಾಹಿತ್ಯ, ಸಂಸ್ಕೃತಿಯ ಸಂವೇದನಾಶೀಲ ತಾಣ. ಈ ತಾಣದಲ್ಲಿ ನೂರಾರು ಕಾವ್ಯಗಳು, ಕಥೆಗಳು, ಸಾಹಿತ್ಯದ ಪರಿಕರಗಳು ಜನ್ಮ ತಾಳಿ ಇತಿಹಾಸದ ಕಾಲ ಗರ್ಭದಲ್ಲಿ ಸೇರಿಕೊಂಡು ರಾಯಚೂರಿನ ಸಾಹಿತ್ಯ  ಸಂಸ್ಕೃತಿ ಪರಂಪರೆಯ ರಾಯಭಾರಿಗಳಾಗಿವೆ.   ಈ ಸ್ಥಳದಲ್ಲಿ  ಸ್ವತಂತ್ರ ಪೂರ್ವದಲ್ಲಿ ಹುಟ್ಟಿದ ಕಾವ್ಯಗಳು ಸ್ವಾತಂತ್ರದ ಧ್ವನಿಗಳಾಗಿದ್ದು. ಸ್ವತಂತ್ರ ನಂತರ ಹುಟ್ಟಿದ ಕಾವ್ಯ ಮತ್ತು ಸಾಹಿತ್ಯಗಳು ಕರ್ನಾಟಕ ಏಕೀಕರಣದ ಸಮಷ್ಟಿಗಳಾ ಗಿದ್ದವು. ಇಂಥ ಪವಿತ್ರ ಸ್ಥಳದಲ್ಲಿ ಕಾವ್ಯವನ್ನು ಓದುವುದು ರೋಮಾಂಚಕಾರಿಯ ಅನುಭವ. ಇಲ್ಲಿ ವಾಚಿಸಿದ ನಮ್ಮ  ಕಾವ್ಯ ಗಂಗೆ ಸಾಹಿತ್ಯದ ಸಮುದ್ರವನ್ನು ಸೇರುತ್ತದೆ. ಕವಿಗಳೆಲ್ಲ ಬನ್ನಿ ದಿನಾಂಕ 5-4-25. ಸಂಜೆ  5.30 ಕ್ಕೆ ಕರ್ನಾಟಕ ಸಂಘ ಸಭಾಂಗಣ**ರಾಯಚೂರು*ದಲ್ಲಿ ಕಾವ್ಯ ವಾಚೀಸೋಣ. ಅಲ್ಲಿ ಉದಯಿಸಿದ ನೂರಾರು ಮಹನೀಯರ ಕಾವ್ಯಗಳಲ್ಲಿ ನಮ್ಮ ಕವನ ಲೀನವಾಗಲಿ ಎಂದು ಹರಿಸೋಣ.ಯುಗಾದಿ ಹಬ್ಬದ ನಿಮಿತ್ಯ ವಸಂತ ಕಾವ್ಯ ಕವಿಗೋಷ್ಠಿ ಯನ್ನು ಕರ್ನಾಟಕ ಸಂಘ ರಾಯಚೂರು ಹೊಸ ಮನೆ ಪ್ರಕಾಶನ ರಾಯ ಚೂರು ಆಯೋಜಿಸಿರುವ *ವಸಂತ ಕಾವ್ಯ* ನವ ಚೇತನದ ಕಾರ್ಯಕ್ರಮಕ್ಕೆ ಸಾಕ್ಷಿಯಾಗೋಣ. ಕವಿಗಳೆಲ್ಲ ಇವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಬಶೀರ್ ಅಹ್ಮ...
Image
  ಒಳಮೀಸಲಾತಿ ಮಧ್ಯಂತರ ವರದಿ ಖಂಡಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ- ರವೀಂದ್ರನಾಥ್ ಪಟ್ಟಿ ಜಯಧ್ವಜ ನ್ಯೂಸ್, ರಾಯಚೂರು, ಮಾ.27- ಒಳಮೀಸಲಾತಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನ ದಾಸ್ ಅವರ ಏಕಸದಸ್ಯ ಆಯೋಗ ಇಂದು ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.ಒಳಮೀಸಲಾತಿ ಕಲ್ಪಿಸುವ ಸಂಬಂಧ ಸೂಕ್ತ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಲು ನವಂಬರನಲ್ಲಿ ರಾಜ್ಯ ಸರ್ಕಾರವು ನಿವೃತ ನ್ಯಾಯಮೂರ್ತಿ ಎಚ್. ಎಸ್. ನಾಗಮೋಹನ ದಾಸ್ ಅದ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆ.ಈ ಆಯೋಗ ಇಂದು ಮಧ್ಯಂತರ ವರದಿಯನ್ನು ಇಂದು ಸಲ್ಲಿಸಿದೆ.ಪರಿಶಿಷ್ಟ ಜಾತಿಗಳ ಒಳಮೀಸಲಾತಿ ನೀಡುವ ಬಗ್ಗೆ ರಾಜ್ಯದಲ್ಲಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿ ಆಧಾರದಲ್ಲಿ ವರದಿಯನ್ನು ಆಯೋಗ ನೀಡಿದೆ.ಇದನ್ನು ಛಲವಾದಿ ಮಹಾಸಭಾ ಖಂಡಿಸಿ ಹೊಸ ನೂತನ ಜನಗಣತಿಯನ್ನು ಪ್ರಾರಂಭಿಸುವುದರ ಮೂಲಕ  ದತ್ತಾಂಶವನ್ನು ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಈ ಒಳಮೀಸಲಾತಿಯನ್ನು ವಿರೋಧಿಸಿ ಸುಪ್ರೀಂ ಕೋರ್ಟಿಗೆ ಆಪಿಲ್ ಸಲ್ಲಿಸಲಾಗುವುದೆಂದು   ಛಲವಾದಿ ಮಹಾಸಭಾ ಹಿರಿಯ ಮುಖಂಡರಾದ  ರವೀಂದ್ರನಾಥ್ ಪಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Image
  ನಗರದಲ್ಲಿ ಹಗಲು ವೇಳೆ ಭಾರಿ ವಾಹನ ಸಂಚಾರ ನಿಷೇಧ ಹಾಗೂ ಗೋ ಕಳ್ಳಸಾಗಾಣಿಕೆ ತಡೆಗೆ ಮನವಿ.                                                ಜಯ ಧ್ವಜ ನ್ಯೂಸ್, ರಾಯಚೂರು, ಮಾ.27- ನಗರದಲ್ಲಿ ಹಗಲು ವೇಳೆ ಭಾರಿ ವಾಹನ ಸಂಚಾರ ನಿಷೇಧ ಹಾಗೂ ಗೋವುಗಳ ಕಳ್ಳ ಸಾಗಾಣಿಕೆ ತಡೆಯಬೇಕೆಂದು  ರಾಷ್ಟ್ರೀಯ ಗೋರಕ್ಷಾ ವಾಹಿನಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಠಾಕೂರು ವಿನಯಸಿಂಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು. ಹಗಲು ವೇಳೆ ನಗರದಲ್ಲಿ ಭಾರಿ ವಾಹನ ಸಂಚಾರದಿಂದ ದಿನ ನಿತ್ಯ ಅಪಘಾತದಿಂದ ಸಾವು ನೋವುಗಳಾಗುತ್ತಿವೆ ರಾತ್ರಿ ವೇಳೆಯಲ್ಲಿ ಮಾತ್ರ ಭಾರಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಲಾಯಿತು. ನಗರದಲ್ಲಿ ಕಳ್ಳ ಸಾಗಾಣಿಕೆ ಮೂಲಕ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ನಕಲಿ ರಶೀದಿ ತೋರಿಸಿ ಗೋ ಮಾತೆಯನ್ನು ಕಸಾಯಿಖಾನೆಗೆ ಸಾಗಿಸಿ ಹತ್ಯೆ ಮಾಡಲಾಗುತ್ತಿದೆ ಅದನ್ನು ತಡೆಯಬೇಕು ಗೋವುಗಳನ್ನು ಗೋಶಾಲೆಗೆ ಬಿಡಬೇಕೆಂದು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಗೋ ಸಂರಕ್ಷಕ ಸಮಿತಿ ಸದಸ್ಯರು ಇದ್ದರು.
Image
ಶಾಂತಿ ಸೌಹಾರ್ದತೆಯಿಂದ ಯುಗಾದಿ ಮತ್ತು ರಂಜಾನ ಆಚರಿಸಿ- ಎಎಸ್ಪಿ ಹರೀಶ್                                                                            ಜಯಧ್ವಜ ನ್ಯೂಸ್ ರಾಯಚೂರು , ಮಾ.26- ನಗರದ ಸದರ ಬಜಾರ ಪೋಲೀಸ್ ಠಾಣೆಯಲ್ಲಿ ಹೆಚ್ಚುವರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಜಿ. ಹರೀಶರವರ ಅಧ್ಯಕ್ಷತೆಯಲ್ಲಿ ಮುಂಬರುವ ಯುಗಾದಿ, ಮತ್ತು ರಂಜಾನ ಹಬ್ಬಗಳ ಪ್ರಯುಕ್ತ ಸರ್ವ ಧರ್ಮಿಯರ ಶಾಂತಿ ಸಭೆಯನ್ನು ಕರೆಯಲಾಗಿತ್ತು. ಸಭೆಯ ಪ್ರಾರಂಭದಲ್ಲಿ ಹಿರಿಯ ಮುಖಂಡರಾದ ಶ್ರೀನಿವಾಸ ಪತಂಗೆ, ಅಶೋಕ ಜೈನ್, ನಜೀರ ಪಂಜಾಬಿ, ರಸೂಲ ಸಾಬ್ ಮಾತನಾಡಿ ಯುಗಾದಿ ಮತ್ತು ರಂಜಾನ ಹಬ್ಬಗಳು   ಅನಾದಿ ಕಾಲದಿಂದಲೂ ಜರುಗುತ್ತಾ ಬಂದಿರುವ ಬಹು ದೊಡ್ಡ ಹಬ್ಬಗಳಾಗಿವೆ, ಈ ಹಬ್ಬಗಳಲ್ಲಿ ಸರ್ವರು ಸಹೋದರತ್ವ ಸೌಹಾರ್ಧತೆಯಿಂದ ರಾಯಚೂರು ಜಿಲ್ಲೆಯಲ್ಲಿಯೇ ಮೊದಲಿನಿಂದಲೂ ಆಚರಣೆ ಮಾಡಿಕೊಂಡು ಬಂದಂಥ ಉದಾಹರಣೆಗಳಿವೆ, ಆದರೆ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವುದೇನೆಂದರೆ ಹಬ್ಬಗಳಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್ ಸರಬರಾಜುಗಳನ್ನು ಸ್ವಲ್ಪ ಗಮನದಲ್ಲಿಟ್ಟುಕೊಂಡು ಯಾರಿಗೂ ತೊಂದರೆಯಾಗದಂತೆ ಕ್ರಮ ವಹಿಸಬ...
Image
  ಅತ್ತನೂರು : ಪ್ರವಚನ ಕಾರ್ಯಕ್ರಮ ಉಧ್ಘಾಟನೆ       ಜಯಧ್ವಜ ನ್ಯೂಸ್ ರಾಯಚೂರು,ಮಾ.26-   ಅತ್ತನೂರಿನ ಸೋಮವಾರಪೇಟೆ ಹಿರೇಮಠದಲ್ಲಿ ಶ್ರೀಮಠದ ಹಿರಿಯ ಪೂಜ್ಯಶ್ರೀ ಲಿಂ. ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳವರ 21ನೇ ವರ್ಷದ ಪುಣ್ಯಸ್ಮರಣೆಯ ನಿಮಿತ್ಯವಾಗಿ ಅತ್ತನೂರು ಗ್ರಾಮದ ಸೋಮವಾರಪೇಟೆ ಹಿರೇಮಠದಲ್ಲಿ ನೀಲಗಲ್ ಪೂಜ್ಯಶ್ರೀ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ಲಿಂ. ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳವರ ಜೀವನ ಚರಿತ್ರೆಯ ಪುರಾಣ ಪ್ರಚನವನ್ನು ದಿ. ಏ. 2 ರವರೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಉಭಯ ಶ್ರೀಗಳು, ಜೆ.ಡಿ.ಎಸ್. ರಾಜ್ಯ ಉಪಾಧ್ಯಕ್ಷರಾದ ಮಹಾಂತೇಶ ಪಾಟೀಲ ಅತ್ತನೂರು, ಅ.ಭಾ.ವೀ.ಲಿಂ.ಮಹಾಸಭಾ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಪಾಟೀಲ ಮಿರ್ಜಾಪೂರ, ಪರಮೇಶ್ವರ ಸಾಲಿಮಠ ಹಾಗೂ ಇನ್ನಿತರ ಗಣ್ಯರು ಸೇರಿ ಲಿಂ.ಶ್ರೀಗಳ ಕಂಚಿನ ಮೂರ್ತಿಗೆ ಮಾಲಾರ್ಪಣೆ ಸಲ್ಲಿಸಿ ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅತ್ತನೂರು ಮಹಾಂತೇಶ ಪಾಟೀಲರು ನಮ್ಮ ಶ್ರೀಮಠದ ಹಿರಿಯ ಶ್ರೀಗಳ ಗುಣ ಹೇಗಿತ್ತು ಎಂದರೆ ನಾಲ್ಕು ಜನರಿಗೆ ದಾನ ಮಾಡಿ ಅದರಲ್ಲಿ ನಾವೂ ಒಬ್ಬರಾಗಿ ಪ್ರಸಾದ ಸೇವಿಸುವುದರಲ್ಲಿ ಇರುವ ನೆಮ್ಮಧಿ ಎಲ್ಲೂ ಸಿಗಲಾರದು ಎಂಬ ಅರ್ಥ...
Image
  ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಅನುರಾಧ ಮೇಟಿಗೌಡ, ಉಪಾಧ್ಯಕ್ಷರಾಗಿ ಗಿರಿಜಮ್ಮ ಆಯ್ಕೆ ಜಯಧ್ವಜ ನ್ಯೂಸ್ , ರಾಯಚೂರು, ಮಾ 26- ಮಾನ್ವಿ ತಾಲೂಕಿನ ಅಮರಾವತಿ ಗ್ರಾಮದ ಕೆಎಂಎಫ್ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಅನುರಾಧ ಮೇಟಿಗೌಡ ಮತ್ತು ಉಪಾಧ್ಯಕ್ಷರಾಗಿ ಗಿರಿಜಾ ಮಾಲಿ ಪಾಟೀಲ್ ಆಯ್ಕೆಯಾದರು.                                                   ಉಮೇಶ್ ಮಾತನಾಡಿ ಹಾಲು  ಉತ್ಪಾದಕರ ಮಹಿಳಾ ಸಹಕಾರ ಸಂಘವು ಮಹಿಳಾ ಸಬಲೀಕರಣ ಮತ್ತು ಹಾಲು ಉತ್ಪಾದಕರ ಆರ್ಥಿಕ ಸುಧಾರಣೆಗೆ ಪ್ರಮುಖ ಪಾತ್ರ ವಹಿಸುತ್ತದೆ  ಸಂಘದ ನೂತನ ಆಡಳಿತ ಮಂಡಳಿಯು ಕೃಷಿಕರಿಗೆ, ಹಾಲು ಉತ್ಪನ್ನ ಮಾಡುವವರಿಗೆ ಸೌಲಭ್ಯ ಒದಗಿಸುವ ಪ್ರಯತ್ನದಲ್ಲಿ ತೊಡಗಬೇಕು ಎಂದರು. ಈ ಸಭೆಯಲ್ಲಿ ಅಮರಾವತಿ ಗ್ರಾಮದ ಶಾಲಾ ಮುಖ್ಯ ಗುರುಗಳಾದ ಕುಮಾರ್ ಹಾಗೂ ಶಿವಕುಮಾರ್, ಎನ್‌ಆರ್‌ಎಲ್‌ಎಂ ಸಿಬ್ಬಂದಿಗಳಾದ ಉಮೇಶ್, ಕಾಸಿಂ, ಕೆಎಂಎಫ್ ಪ್ರತಿನಿಧಿ ರಘು ಹಾಗೂ ಸಂಘದ ಪ್ರಮುಖ ಸದಸ್ಯರು ಶಶಿಕಲಾ, ಶರಣಮ್ಮ, ಸಿದ್ದಲಿಂಗಮ್ಮ ಮತ್ತು ಗಂಗಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. .
Image
  ಏ.4 ರಿಂದ 6ರವರೆಗೆ ರಾಯಚೂರು ಸಾಂಸ್ಕೃತಿಕ ಜನೋತ್ಸವ -ಚನ್ನಬಸವ ಜಾನೇಕಲ್.                              ಜಯಧ್ವಜ ನ್ಯೂಸ್, ರಾಯಚೂರು, ಮಾ.26- ಎಐಡಿಎಸ್ಓ, ಎಐಡಿವೈಓ ಹಾಗೂ ಎಐಎಂಎಸ್ಎಸ್ ಮತ್ತು ಪಂಡಿತ ತಾರಾನಾಥ ಸಾಂಸ್ಕೃತಿಕ ವೇದಿಕೆಗಳಿಂದ ಏ.4 ರಿಂದ 6ರವರೆಗೆ ಮೂರು ದಿನಗಳ ರಾಯಚೂರು ಸಾಂಸ್ಕೃತಿಕ ಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಎಐಡಿವೈಓ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಹೇಳಿದರು. ಅವರಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಏ.4 ರಂದು ಕರ್ನಾಟಕ ಸಂಘದಲ್ಲಿ ಸಂಜೆ 6.30ಕ್ಕೆ ಕಾರ್ಯಕ್ರಮ ಉದ್ಘಾಟನೆಯನ್ನು ಎಸ್ ಯು ಸಿ ಐ ರಾಜ್ಯ ಕಾರ್ಯದರ್ಶಿ ಕೆ.ಉಮಾ ನೆರವೇರಿಸಲಿದ್ದು , ಅಧ್ಯಕ್ಷತೆಯನ್ನು ಎಐಡಿವೈಓ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ್ ವಹಿಸಲಿದ್ದಾರೆಂದರು. ಏ.5 ರಂದು ಸಂಜೆ 5.30 ಕ್ಕೆ ಎಸ್ ಕೆ ಇ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಬಿ ಎಂ. ಗಿರಿರಾಜ್ ನಾರ್ದೇಶನದ ಅಚ್ಯುತ್ ಕುಮಾರ್ ನಟನೆಯ ಅಮರಾವತಿ ಸಿನೆಮಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು ಅತಿಥಿಗಳಾಗಿ ಪ್ರಜಾವಾಣಿ ಹಿರಿಯ ವರದಾಗಾರರಾದ ಮನೋಜ್ ಕುಮಾರ್ ಗುದ್ದಿ ಆಗಮಿಸಲಿದ್ದಾರೆ ಎಂದರು. ಏ.6 ರಂದು ಬೆಳಗ್ಗೆ 10.30ಕ್ಕೆ  ಸರ್ಕಾರಿ ನೌಕರರ ಭವನದಲ್ಲಿ ಯುವ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ಕವಿ ಗೋಷ್ಠಿಯನ್ನು ಹಿರಿಯ ಉಪನ್ಯಾಸಕರಾದ ಗೋಪಾಲ್ ನಾಯಕ ಉದ್ಘ...
Image
  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ : ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ರಮೇಶ್ ಕುಲಕರ್ಣಿ ನಾಮಪತ್ರ ಸಲ್ಲಿಕೆ                                                           ಜಯ ಧ್ವಜ ನ್ಯೂಸ್ ರಾಯಚೂರು ,ಮಾ.25-  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಅಧ್ಯಕ್ಷರ ಹಾಗೂ ಜಿಲ್ಲಾ ಪ್ರತಿನಿಧಿಗಳ ಸ್ಥಾನಕ್ಕೆ ಏಪ್ರಿಲ್ 13 ರಂದು ನಡೆಯುವ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ರಾಯಚೂರು ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ  ರಮೇಶ ಕುಲಕರ್ಣಿ ರವರು ಡಾ. ಭಾನುಪ್ರಕಾಶ ಶರ್ಮ ರವರ ಬೆಂಬಲಿತ ಒಮ್ಮತದ ಅಭ್ಯರ್ಥಿಯಾಗಿ, ಬೆಂಗಳೂರಿನ ಬ್ರಾಹ್ಮಣ ಮಹಾಸಭಾದ ಕೇಂದ್ರ ಕಛೇರಿ ಗಾಯಿತ್ರಿ ಭವನದಲ್ಲಿ ಸಮಸ್ತ ಬ್ರಾಹ್ಮಣ ಸಮಾಜದ ಬಾಂಧವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಜಿಲ್ಲಾ ಸಂಚಾಲಕರಾದ  ಡಿ.ಕೆ.ಮುರಳೀಧರ್, ಹಿರಿಯರಾದ   ಪ್ರಾಣೇಶ ಮುತಾಲಿಕ್,  ವೇಣುಗೋಪಾಲ್ ಇನಾಂದಾರ್,  ವೆಂಕಟೇಶ ದೇಸಾಯಿ, ಡಾ. ರವೀಂದ್ರ ಮಜುಮ್‌ದಾರ್, ಡಾ. ಕೆ. ನಾಗರಾಜ್,  ರಾಮರಾವ್ ಗಣೇಕಲ್,  ತುರುವಿಹಾಳ ರಮೇಶ್,  ಸುಧೀಂದ್ರ ಜಾಹಗೀರದಾರ್,   ವಿನೋದ ಕಕ್ಕೇರಿ,...
Image
ಅತ್ತನೂರು:  ಪುಣ್ಯಸ್ಮರಣೆ ಕಾರ್ಯಕ್ರಮ                                 ಜಯಧ್ವಜ ನ್ಯೂಸ್ , ರಾಯಚೂರು, ಮಾ.25-ತಾಲೂಕಿನ ಅತ್ತನೂರಿನ ಸೋಮವಾರಪೇಟೆ ಹಿರೇಮಠದಲ್ಲಿ ಶ್ರೀಮಠದ ಹಿರಿಯ ಪೂಜ್ಯಶ್ರೀ ಲಿಂ. ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳವರ 21ನೇ ವರ್ಷದ ಪುಣ್ಯಸ್ಮರಣೆಯ ನಿಮಿತ್ಯವಾಗಿ ಮಂಗಳವಾರ ಬೆಳಿಗ್ಗೆ ಗ್ರಾಮದ ದಿಡ್ಡಿ ಬಸವೇಶ್ವರ ದೇವಸ್ಥಾನದಿಂದ ಗ್ರಾಮದ ಸದ್ಭಕ್ತರಿಂದ ಭಕ್ತಿ ಸೇವೆ ಸಲ್ಲಿಸಿದ ಪೂಜ್ಯಶ್ರೀ ಲಿಂ. ರಾಚೋಟಿ ವೀರ ಶಿವಾಚಾರ್ಯರ ಕಂಚಿನ ಮೂರ್ತಿಯನ್ನು ದೇವಸ್ಥಾನ ಗರ್ಭ ಗುಡಿಯಲ್ಲಿ ಪೂಜಿಸಿ ನಂತರ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆಯೊಂದಿಗೆ ಗ್ರಾಮದ  ಮಹಿಳೆಯರ ಕಳಸಗನ್ನಡಿ, ಬಾಜಾ ಬಜಂತ್ರಿ, ಛತ್ರಿ ಚಾಮರಗಳ ಸಂಭ್ರಮದಲ್ಲಿ ಹಿರೇಮಠವನ್ನು ತಲುಪಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೋಮವಾರಪೇಟೆ ಹಿರೇಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯರು ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಸೋಮವಾರಪೇಟೆ ಹಿರೇಮಠದ ಸಕಲ ಸದ್ಭಕ್ತರು, ಗುರು ಹಿರಿಯರು,  ಮಹಿಳೆಯರು, ಯುವಕ ಯುವತಿಯರು ಮಕ್ಕಳು ಉಪಸ್ಥಿತರಿದ್ದರು.
Image
 ಕಾರ್ಮಿಕರ ಬಾಕಿ ವೇತನ ಪಾವತಿಗಾಗಿ ಆಗ್ರಹಿಸಿ  ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕ ಸಂಘದಿಂದ ಹೆದ್ದಾರಿ ತಡೆ  ಜಯಧ್ವಜ ನ್ಯೂಸ್, ರಾಯಚೂರು, ಮಾ.25-   ಕಾರ್ಮಿಕರ ಬಾಕಿ ವೇತನ ಪಾವತಿಗಾಗಿ ಆಗ್ರಹಿಸಿ  ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕ ಸಂಘದಿಂದ ಇಂದು  ಹೆದ್ದಾರಿ ತಡೆ ನಡೆಸಲಾಯಿತು. ಸಾಥ್ ಮೇಲೆ ಕ್ರಾಸ್ ನಲ್ಲಿ  ಹೆದ್ದಾರಿ ತಡೆ ಚಳುವಳಿ ನಡೆಸಲು ಕರ್ನಾಟಕ ನೀರಾವರಿ ನಿಗಮದ ಸಿರವಾರ ಸಿಂಧನೂರ ಮತ್ತು ಯರಮರಸ ವಿಭಾಗದ  ಕಾರ್ಯಪಾಲಕ ಅಭಿಯಂತರರು ಕಾರಣರಾಗಿದ್ದಾರೆ ಹಾಗೆ ರಾಯಚೂರು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವು ಇದಕ್ಕೆ ಹೊಣೆಯಾಗಿದೆ ಎಂದು ದೂರಲಾಯಿತು.    ಏಕೆಂದರೆ, ನಮ್ಮ ಇಂದಿನ ಹೋರಾಟವು  ಸರ್ಕಾರಿ ಸೌಲಭ್ಯ ಕೇಳುವುದಕ್ಕಾಗಿ ಅಲ್ಲ. ದಾನ ಧರ್ಮಕ್ಕಾಗಿ ಕೈ ಒಡ್ಡುವುದಕ್ಕೂ ಅಲ್ಲ ಜಿಲ್ಲೆಯ ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಯರಮರಸ್ ಸಿಂಧನೂರ ಸಿರವಾರ ವಿಭಾಗಗಳ  ಒಟ್ಟು 748 ನೀರು ಸರಬರಾಜು/ ಗ್ಯಾಂಗ್ ಮ್ಯಾನ್ ಕಾರ್ಮಿಕರ ಕಳೆದ ಐದು ತಿಂಗಳ ಸಂಬಳವನ್ನು ಕಾನೂನು ಬಹಿರವಾಗಿ ಪಾವತಿ ಮಾಡದೆ ಕಾರ್ಮಿಕ ವಿರೋಧಿ ಕಾನೂನು ವಿರೋಧಿ ಸರಕಾರದ ನಡೆಯಿಂದಾಗಿ.  ಜೊತೆಗೆ, ದುಡಿದ ಕೂಲಿ ಕೇಳಿದರೆ ದರ್ಪದ ಮಾತಾಡಿ, ತುಂಗಭದ್ರ ಕಾರ್ಮಿಕರನ್ನು ಮತ್ತು ಅವರ ಸಂಕಷ್ಟಕರವಾದ ಜೀವನವನ್ನು ಅಪಹಾಸ್ಯ ಮಾಡಿದ ಸಿರವಾರ ಇ ಇ ಶ್ರೀಮತಿ ವಿಜಯಲಕ್ಷ್ಮಿ ಅವರ...
Image
  ಶಾಸಕರ ಅಮಾನತ್ತು ಸಭಾಧ್ಯಕ್ಷರ ಕ್ರಮ ಸ್ವಾಗತಾರ್ಹ -ಡಾ.ರಝಾಕ್ ಉಸ್ತಾದ್  ಜಯಧ್ವಜ ನ್ಯೂಸ್ , ರಾಯಚೂರು, ಮಾ.25-      ಬಿಜೆಪಿ ಶಾಸಕರು ಇತ್ತೀಚಿಗೆ ಮುಕ್ತಾಯವಾದ ವಿಧಾನ ಮಂಡಳದ ಅಧಿವೇಶನದಲ್ಲಿ ಅನಗತ್ಯ ಗೊಂದಲ ಸೃಷ್ಠಿಸಿ ಪ್ರತಿಭಟನೆ ನಡೆಸಿದರಲ್ಲದೇ, ಸ್ಪೀಕರ್ ಪೀಠದ ಮೇಲೆ ಹತ್ತಿ ಆ ಸ್ಥಾನಕ್ಕೆ ಅಗೌರವ ತೋರಿಸಿದ್ದಾರೆ, ಇದು ರಾಜ್ಯದ ಜನತೆ ನೋಡಿದ್ದಾರೆ, ರಾಜ್ಯದ ಜನರ ಸಮಸ್ಯೆಗಳನ್ನು ಚರ್ಚಿಸಬೇಕಾದ ವಿರೋಧ ಪಕ್ಷದ ಶಾಸಕರು  ಪುಡಾರಿಗಳ ರೀತಿ ಸಧನದಲ್ಲಿ ವರ್ತಿಸಿರುವದು ಅಕ್ಷಮ್ಯ ಅಪರಾಧ, ಅಂತಹ ಶಾಸಕರನ್ನು ಸಭಾಧ್ಯಕ್ಷರಾದ ಯು.ಟಿ.ಖಾದರ ಅವರು ಆರು ತಿಂಗಳ ಅವಧಿಗೆ ಅಮಾನತ್ತು ಮಾಡಿರುವದು ಸರಿಯಾದ ಕ್ರಮವಾಗಿದೆ, ಮೇಲ್ಮನೆಯಲ್ಲಿ  ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸದಸ್ಯರ ವರ್ತನೆಗೆ ಬೇಸತ್ತು ರಾಜೀನಾಮೆ ನೀಡಲು ಮುಂದಾಗಿದ್ದಾರೆ, ಇದು ರಾಜ್ಯದ ಜನರಿಗೆ ಬಿಜೆಪಿ ಮಾಡುತ್ತಿರುವ ಅವಮಾನವಲ್ಲವೇ? ಶಾಸಕರನ್ನು ಅಮಾನತ್ತು ಮಾಡಿರುವದನ್ನು ವಿರೋಧಿಸಿ, ಸಭಾಧ್ಯಕ್ಷರ ಕ್ರಮ ಸಂವಿಧಾನ ಭಾಹಿರ ಎಂದುಹೋರಾಟ ಮಾಡುತ್ತಿರುವದು ಹಾಸ್ಯಾಸ್ಪದ, ಇವರು ಏನೇ ಮಾಡಿದರೂ ಸಹಿಸಿಕೊಳ್ಳಬೇಕು ಎನ್ನುವ ಮನಸ್ಥಿತಿ ಅತ್ಯಂತ ಹಾನಿಕಾರಕ, ಸಧನದಿಂದ ಸದಸ್ಯರನ್ನು ಅಮಾನತ್ತು ಮಾಡುವದು ದೇಶದ ಎಲ್ಲಾ ರಾಜ್ಯಗಳಲ್ಲಿ ಆಯಾ ಸಂಧರ್ಭದ ಪರಸ್ಥಿತಿ ನೋಡಿಕೊಂಡು ಅಮಾನತ್ತು ಮಾಡಿರುವದು ಇತಿಹಾಸ. ಇತ್ತೀಚಿಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ...
Image
  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ:                ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ರಮೇಶ್ ಕುಲಕರ್ಣಿ ನಾಮಪತ್ರ ಸಲ್ಲಿಕೆ.                                                                                                    ಜಯ ಧ್ವಜ ನ್ಯೂಸ್, ರಾಯಚೂರು,ಮಾ.24-        ಮುಂದಿನ ತಿಂಗಳು ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ವೇದಮೂರ್ತಿ ಡಾ.ಭಾನುಪ್ರಕಾಶ ಶರ್ಮಾ ಬಣದ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯಾಗಿ ರಮೇಶ್ ಕುಲಕರ್ಣಿ ಇಂದು ಬೆಂಗಳೂರಿನ ಎಕೆಬಿಎಂಎಸ್ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು.                                   ಈ ಸಂದರ್ಭದಲ್ಲಿ ಜಿಲ್ಲೆಯ ಬ್ರಾಹ್ಮಣ ಸಮಾಜದ ಮುಖಂಡರು, ಯುವಕರು ಉಪಸ್ಥಿತರಿದ್ದರು.
Image
  ಶ್ರೀ ಮನ್ಯಾಯಸುಧಾ ಮಂಗಳ ಮಹೋತ್ಸವ ಸಮಾರೋಪ:                      ವಿವಿಧ ಮಠಾಧೀಶರು ಭಾಗಿ .                                                                                                                            ಜಯ ಧ್ವಜ ನ್ಯೂಸ್, ರಾಯಚೂರು,ಮಾ.24-  ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಎರೆಡು ದಿನಗಳು ಕಾಲ ನಡೆದ ಶ್ರೀ ಮನ್ಯಾಯಸುಧಾ ಮಂಗಳ ಮಹೋತ್ಸವ ಕಾರ್ಯಕ್ರಮ ಸಮಾರೋಪ ಇಂದು ಅದ್ದೂರಿಯಾಗಿ ನೆರವೇರಿತು. ಪ್ರಾರಂಭದಲ್ಲಿ ವೇದಿಕೆ ಮೇಲೆ ವಿದ್ಯಾರ್ಥಿಗಳು ಶ್ರೀ ಮನ್ಯಾಯಸುಧಾ ಅನುವಾದ ನೆರವೇರಿಸಿದರು. ದಿವ್ಯ ಸಾನಿಧ್ಯವನ್ನು ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾ ಶ್ರೀಶ ತೀರ್ಥರು, ಶ್ರೀ ಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥರು, ಶ್ರೀ  ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು, ಶ್ರೀ ಪಲಿಮಾರು ಮಠದ ಶ್ರೀ ವ...
Image
  ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ - ರಜಾಕ್ ಉಸ್ತಾದ್ ಜಯ ಧ್ವಜ ನ್ಯೂಸ್ ರಾಯಚೂರು,ಮಾ.24- ಕಲ್ಯಾಣ ಕರ್ನಾಟಕ ನೈಸರ್ಗಿಕವಾಗಿ , ಸಾಂಸ್ಕೃತಿಕವಾಗಿ ಸಂಪದ್ಭರಿತವಾದ ಭಾಗವಾಗಿದ್ದರೂ   ಹಿಂದುಳಿದ‌ ಭಾಗ ಎಂಬ ಹಣೆಪಟ್ಟಿ ಹೊತ್ತುಕೊಳ್ಳಲು ಪ್ರಮುಖ ಕಾರಣ  ರಾಜಕಾರಣಿಗಳ  ಇಚ್ಚಾಶಕ್ತಿ  ಕೊರತೆ ಕಾರಣವೇ ಹೊರತು ಮತ್ಯಾವುದು ಅಲ್ಲವೆಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ  ಉಪಾಧ್ಯಕ್ಷರಾದ ಡಾ.ರಜಾಕ್ ಉಸ್ತಾದ್ ರವರು ಅಭಿಪ್ರಾಯ ಪಟ್ಟರು. ಅವರಿಂದು ನಗರದ ತಾರಾನಾಥ ಶಿಕ್ಷಣ ಸಂಸ್ಥೆಯ ಸೋಮ ಸುಭದ್ರಮ್ಮ ರಾಮನಗೌಡ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಎಲ್.ವಿ.ಡಿ ಹಳೆಯ ವಿದ್ಯಾರ್ಥಿ ಸಂಘದಿಂದ ಹಮ್ಮಿಕೊಂಡಿದ್ದ ಪ್ರಾದೇಶಿಕ ಅಸಮಾತೋಲನಕ್ಕೆ ಪರಿಹಾರ -ಸಾಧ್ಯತೆಗಳು ಹಾಗೂ ಸವಾಲುಗಳು ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು ಕಲ್ಯಾಣ ಕರ್ನಾಟಕವು ಕರ್ನಾಟಕ ರಾಜ್ಯದ ಆಡಳಿತಕ್ಕೆ ಒಳಪಟ್ಟು 77 ವರ್ಷಗಳಾಗುತ್ತ ಬಂದರೂ ಇಂದಿಗೂ ಅಭಿವೃದ್ದಿ ಮರೀಚಿಕೆಯಾಗಿದೆ. ಈ ಭಾಗವು ವಿಶೇಷವಾಗಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ, ಸಾರ್ವಜನಿಕ ಸೇವೆಗಳು, ಮಾನವ ಅಭಿವೃದ್ಧಿ ಪೂರಕ ವಾತಾವರಣದಿಂದ ಹಿನ್ನಡೆ ಅನುಭವಿಸಿದೆ. ಇದಕ್ಕೆ ಮುಖ್ಯ ಕಾರಣವೂ ಜನಗಳು ಹಾಗೂ ನಾವುವಳು ಆಯ್ಕೆಮಾಡುವಂತಹ ಪ್ರತ...
Image
  ಸವಿತಾ‌ ಸಮಾಜ: ಮಹಿಳಾ ದಿನಾಚರಣೆ ಅಂಗವಾಗಿ ಶಷ್ಠಿಪೂರ್ತಿ ಕಾರ್ಯಕ್ರಮ                                                                           ಜಯಧ್ವಜ ನ್ಯೂಸ್, ರಾಯಚೂರು,ಮಾ 24   ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಸವಿತಾ ಸಮಾಜ ಮಹಿಳಾ ಘಟಕದಿಂದ ರಾಯಚೂರು ನಗರದ ಮಡ್ಡಿಪೇಟೆಯಲ್ಲಿರುವ ಶ್ರೀ ಶಂಕು ಚಕ್ರ ಮಾರುತಿ ದೇವಸ್ಥಾನದಲ್ಲಿ ಇಂದು  ಶಷ್ಠಿಪೂರ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.                               ಕಾರ್ಯಕ್ರಮದಲ್ಲಿ 30 ಕ್ಕೂ ಹೆಚ್ಚು ಹಿರಿಯ ಜೋಡಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಜಿಂದಪ್ಪ ನಗರಾಧ್ಯಕ್ಷ  ಯಲ್ಲಮ್ಮ ಇಂದಿರಮ್ಮ, ತುಳಸಿ ,ರೇಖಾ, ಸಿ ಎ ಜ್ಯೋತಿ, ಗೀತಾ, ಸಮಾಜದ  ಹಿರಿಯರಾದ ಶ್ರೀನಿವಾಸ್ ನಾಗಲದಿನ್ನಿ ನಾಮ ನಿರ್ದೇಶಿತ ಮಹಾನಗರ ಪಾಲಿಕೆ ಸದಸ್ಯ ವೆಂಕಟೇಶ ವಲ್ಲೂರು, ಜಿಲ್ಲಾಧ್ಯಕ್ಷ ವಿಜಯ ಭಾಸ್ಕರ್ ಇಟಗಿ  ಮತ್ತಿತರರು ಉಪಸ್ಥಿತರಿದ್ದರ...