
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭ : ಬ್ರಾಹ್ಮಣ ಸಮಾಜ ಸರ್ವರ ಒಳಿತು ಬಯಸುತ್ತದೆ- ಎ.ನಾಗರಾಜ. ಜಯ ಧ್ವಜ ನ್ಯೂಸ್ ರಾಯಚೂರು ,ಮೇ.31- ಬ್ರಾಹ್ಮಣ ಸಮಾಜ ಸರ್ವರ ಒಳಿತು ಬಯಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಸೇವಾ ಪ್ರಮುಖರಾದ ಎ.ನಾಗರಾಜ್ ಹೇಳಿದರು. ಅವರು ಶುಕ್ರವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡ...