ಆ ರ್ ಟಿ ಪಿ ಎಸ್: ಸೂಗಪ್ಪರವರಿಗೆ ಬೀಳ್ಕೊಡುಗೆ ಸಮಾರಂಭ
ರಾಯಚೂರು,ಮೇ.31- ಸುದೀರ್ಘ 37 ವರ್ಷಗಳ ಕಾಲ ಆ ರ್ ಟಿ ಪಿ ಎಸ್ ನಲ್ಲಿ ಚಾಲಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ ಸೂಗಪ್ಪ ತಂದೆ ಸೂಗಣ್ಣ ದೇವಸೂಗೂರು. 1984 ರಲ್ಲಿ ಸೇವೆಗೆ ಸೇರಿ RTPS ನ ಸಿಬ್ಬಂದಿಗೆ ಮೆಚ್ಚಿನ ಸಹೋದ್ಯೋಗಿಯಾಗಿ ಕಾರ್ಯನಿರ್ವಹಿಸಿದ್ದಾರೆ, ಇಂದು ಸಂಜೆ ಕಚೇರಿಯಲ್ಲಿ ಸಿಬ್ಬಂದಿ ವರ್ಗ ಸೇರಿ ನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿ ಬೀಳ್ಕೊಟ್ಟರು. ಸೂಗಪ್ಪ ಪತ್ನಿ ಮಹಾದೇವಮ್ಮ, ಮಗಳಾದ ಶ್ರೀಮತಿ ಶ್ರೀ ಸುರೇಖಾ ವಿಶ್ವನಾಥ್ ಸಾಹುಕಾರ್, ಕುಮಾರಿ ಶ್ವೇತಾ, ಮೊಮ್ಮಕ್ಕಳಾದ ವಿವಾನ, ಆಕಾಶ ಸಾಹುಕಾರ,ವಿಹಾರಿಕಾ ಸುರಭಿ ಸಾಹುಕಾರ, ಹಾಗೂ ಕುಟುಂಬವರ್ಗ, ಅಪಾರ ಬಂದು ಮಿತ್ರರು ಶುಭಕೋರಿದರು.